Thursday, April 3, 2014ಕುಡಿಯುವ ನೀರಿಗಾಗಿ ಸಾಲ್ಕಟ್ಟೆ ಗ್ರಾಮಸ್ಥರಿಂದ ಮುದ್ದೇನಹಳ್ಳಿ ಗ್ರಾ.ಪಂ.ಕಛೇರಿ ಮುಂದೆ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಏ.03 : ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿಯ ಮುಂದೆ ಧರಣಿ ಹಾಗೂ ಪ್ರತಿಭಟಿನೆ ನಡೆಸಿದರು.
ಮುದ್ದೇನಹಳ್ಳಿ  ಗ್ರಾಮ ಪಂಚಾಯಿತಿಗೆ ಪಿಡಿಓರವರನ್ನು ತರಾಟೆಗೆ ತೆಗೆದುಕೊಂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀರಂಗಯ್ಯ,  ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿ ಅನೇಕ ಬಾರಿ ಗ್ರಾ.ಪಂ.ಅಧ್ಯಕ್ಷರಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೂ ಮನವಿ ಮಾಡಿದರೂ, ಏನು ಪ್ರಯೋಜನವಾಗಿಲ್ಲ, ಇದಕ್ಕೆ ಅಧಿಕಾರಿಗಳು ಸಾಲ್ಕಟ್ಟೆ ಕಾಲೋನಿಗೆ ಭೇಟಿ ನೀಡಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಇಂದು ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳು ಸೇರಿದ್ದು, ಬಹುತೇಕ ಎಲ್ಲಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲು ಆಗ್ರಹಿಸಿದರು. 
ಸಾಲ್ಕಟ್ಟೆ ಶ್ರೀನಿವಾಸ್ ಮಾತನಾಡಿ ಕಳದ  ಎರಡು ತಿಂಗಳಿನಿಂದಲೂ ಸಾಲ್ಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಜನರು ತೋಟಗಳಿಗೆ ಹೋಗಿ ನೀರು ತರಬೇಕಾಗಿದೆ, ಅಧ್ಯಕ್ಷರ ಗಮನಕ್ಕೆ ತಂದರೂ ಅವರು ಗ್ರಾಮಸ್ಥರ ಅಳಿಲಿಗೆ ಸ್ಪಂದಿಸುತ್ತಿಲ್ಲ ಎಂದರಲ್ಲದೆ,  ಇದು ಮೂರನೇ ಬಾರಿ ಪ್ರತಿಭಟನೆ ಮಾಡುತ್ತಿದ್ದೇವೆ, ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಮುದ್ದೇನಹಳ್ಳಿ ಗ್ರಾ.ಪಂ.ಸದಸ್ಯ ಸ್ವಾಮಿ ಮಾತನಾಡಿ, ಮುದ್ದೇನಹಳ್ಳಿ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಗಮನಕ್ಕೆ ಹಲವು ಬಾರಿ ತಂದರೂ ಯಾವ ಪ್ರಯೋಜನವೂ ಆಗಿಲ್ಲದಿರುವುದರಿಂದ ಜನರು ಗ್ರಾ.ಪಂ.ಗೆ ಮುತ್ತಿಗೆ ಹಾಕಿದ್ದಾರೆ, ಪಿಡಿಓರವರು ನೀರಿನ ಸಮಸ್ಯೆಯನ್ನು ಸಂಜೆಯೊಳಗೆ ಬಗೆಹರಿಸುವುದಾಗಿ ತಿಳಿಸಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಸಾಲ್ಕಟ್ಟೆ ವಾಸಿಗಳಾದ ನರಸಿಂಹಮೂತರ್ಿ, ಬಸವರಾಜ್, ಕೃಷ್ಣಯ್ಯ, ಈಶ್ವರಯ್ಯ, ನಟರಾಜು ರಾಮಯ್ಯ, ರಮೇಶ್ ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಹಾಜರಿದ್ದರು.

ಹರಿಜನ ಕಾಲೋನಿಯ ಮಹಿಳೆಯರಿಂದು ಖಾಲಿ ಕೊಡ ಹಿಡಿದು ತಾ.ಪಂ.ಕಛೇರಿಗೆ ಮುತ್ತಿಗೆ
ಚಿಕ್ಕನಾಯಕನಹಳ್ಳಿ,ಏ.03 : ತಾಲ್ಲೂಕಿನ ಕಂದಿಕೆರೆಯ ಹರಿಜನ ಕಾಲೋನಿಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕು ಪಂಚಾಯ್ತಿಗೆ ಮುತ್ತಿಗೆ ಹಾಕಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
20ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಬಗ್ಗೆ ಅಧ್ಯಕ್ಷರು, ಕಾರ್ಯದಶರ್ಿ, ಪಿಡಿಓರವರಿಗೆ ತಿಳಿಸಿದರೂ ಯಾರೂ ಕೂಡ ಸ್ಪಂದಿಸುತ್ತಿಲ್ಲ  ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಬೇರೆ ಬೇರೆಯವರ ತೋಟಗಳಿಗೆ ತೆರಳಿ ನೀರಿಗಾಗಿ ಮಾಲೀಕರಲ್ಲಿ ಬೇಡುತ್ತಿದ್ದಾರೆ, ಅಧ್ಯಕ್ಷರು ಶೀಘ್ರ ಸಮಸ್ಯೆ ನಿವಾರಿಸಬೇಕು ಎಂದರಲ್ಲದೆ  ಪಿಡಿಓರವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮಸ್ಥ ಕೃಷ್ಣಮೂತರ್ಿ ಮಾತನಾಡಿ ಕಳೆದ ಕೆಲ ತಿಂಗಳ ಹಿಂದ ಆಗಮಿಸಿದ್ದ ಸಚಿವ ಟಿ.ಬಿ.ಜಯಚಂದ್ರರವರಲ್ಲಿ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರಿಂದ ಎರಡು ದಿನ ಮಾತ್ರ ಗ್ರಾಮಕ್ಕೆ ನೀರನ್ನು ಕೊಡಲಾಯಿತು, ಆದರೆ ಈಗ ಮತ್ತೆ ಅದೇ ರೀತಿ ನೀರಿನ ಸಮಸ್ಯೆ ಎದುರಾಗಿದೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯೆ ಸುಜಾತ, ಗ್ರಾಮಸ್ಥರಾದ ಹನುಮಂತಯ್ಯ, ಶಾಂತಕುಮಾರಿ, ಲಲಿತಮ್ಮ, ಲಕ್ಷ್ಮಿದೇವಮ್ಮ, ಸಾವಿತ್ರಮ್ಮ, ದೊಡ್ಡಮ್ಮ, ಗೌರಮ್ಮ, ರಂಗಲಕ್ಷ್ಮಮ್ಮ, ನೇತ್ರಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉರುಳಿಗೆ ಬಿದ್ದ ಚಿರತೆ: ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸಿದ್ದತೆ

ಚಿಕ್ಕನಾಯಕನಹಳ್ಳಿ,ಏ.03 : ತಾಲೂಕಿನ ಹೊನ್ನೇಬಾಗಿ ಗೊಲ್ಲರಹಳ್ಳಿಯ ಬಳಿ ಹಂದಿ ಹಿಡಿಯಲೆಂದು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ಈ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿದರು. ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಪಿ.ಎಸ್.ಐ ಮಹಾಲಕ್ಷ್ಮಮ್ಮ , ಹಸುಗೆ ಹಾಕುವ ಉರುಳಿಗೆ ಚಿರತೆ ಸಿಲುಕಿದೆ, ಸ್ಥಳೀಯ ಜನರಿಗೆ ಗಾಬರಿಯಾಗಬಾರದೆಂದು ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಗಿದೆ ನಂತರ ಚಿರತೆಯನ್ನು ವನ್ಯ ಜೀವಿ ಸುರಕ್ಷತಾ ಧಾಮಕ್ಕೆ  ಕಳುಹಿಸಲಾಗುವುದು ಎಂದು ತಿಳಿಸಿದರು.
ಚಿ.ನಾ.ಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ಮಾತನಾಡಿ,  ಚಿರತೆಯನ್ನು ಬೋನಿಗೆ ಹಾಕಲು ಬೆಂಗಳೂರಿನ ಬೆನ್ನೇರುಘಟ್ಟದ ವನ್ಯ ಪ್ರಾಣಿ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ, ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಅದನ್ನು ಕೊಳ್ಳೇಗಾಲದ ವನ್ಯ ಜೀವಿ ಅರಣ್ಯಕ್ಕೆ ಕಳುಹಿಸಲಿದ್ದೇವೆ. ಚಿರತೆ ರೇಡಿಯಲ್ ಕಾಲರ್ ಹಾಕಿ ನಂತರ ಅಲ್ಲಿರುವ ಪಾಕರ್್ಗಿ ಬಿಡಲಾಗುವುದು ಎಂದರು.
ರೈತ ಸಂಘದ ಮುಖಂಡ ಜಗದೀಶ್ ಮಾತನಾಡಿ ಮೊನ್ನೆ ರಾತ್ರಿ ದೊಡ್ಡರಾಂಪುರದ ಬಳಿ ಹಸುಗಳನ್ನು ಚಿರತೆ ತಿಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯ ರೈತರು ಮಾಹಿತಿ ನೀಡಿದ್ದರು, ಕಾಡಿನಲ್ಲಿ ಆಹಾರವಿಲ್ಲದೆ ನಾಡಿಗೆ ಚಿರತೆ ಬಂದಿದೆ. ಅರಣ್ಯ ಇಲಾಖೆಯವರು ಚಿರತೆಯನ್ನು ಸುರಕ್ಷಿತವಾಗಿ ಕಾಪಾಡಲು ಸಲಹೆ ನೀಡಿದರು.