Wednesday, December 30, 2015


2015ನೇ ವರ್ಷದಲ್ಲಿನ ಚಿಕ್ಕನಾಯಕನಹಳ್ಳಿಯ ಹೈಲೈಟ್ಸ್
ಚಿಕ್ಕನಾಯಕನಹಳ್ಳಿ,ಡಿ.30 : 2015ನೇ ವರ್ಷ ತಾಲ್ಲೂಕಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿತ್ತು, ಈ ವರ್ಷದಲ್ಲಿ ಸಂಘ ಸಂಸ್ಥೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಮನರಂಜನೆ ನೀಡಿದವು, ತಾಲ್ಲೂಕಿಗೆ ರಾಜ್ಯ ಮಟ್ಟದ ನಾಯಕರು ಆಗಮಿಸಿದ್ದರು, ಕಳ್ಳತನ, ಕೊಲೆ ಅಪರಾಧಗಳು, ಜಾತಿ ವೈಷಮ್ಯದಿಂದಾದ ಗಲಭೆ ಪ್ರಕರಣಗಳು ನಡೆದವು, ಕುರಿಗಳಿಗೆ ಉಂಟಾದ ನೀಲಿನಾಲಿಗೆ ರೋಗ, ಇಪ್ಪತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ ರಾಗಿ ಬೆಳೆ ನಾಶವಾಗಿ ರೈತರಿಗೆ ಆಥರ್ಿಕ ಸಮಸ್ಯೆ ಎದುರಾಯಿತು. 
ಜನವರಿ-2015 : ಜನವರಿಯಲ್ಲಿ ಅಂತರ್ಜಿಲ್ಲಾ ಹೊನಲು ಬೆಳಕಿನ ಚಿಕ್ಕನಾಯಕ ಕಪ್ ಕಬಡ್ಡಿ ಲೀಗ್ ನಡೆದು ಅತ್ಯುತ್ತಮವಾಗಿ ನಡೆದು ಬೆಂಗಳೂರಿನ ಹೆಚ್.ಎ.ಎಲ್. ತಂಡ ಪ್ರಶಸ್ತಿ ಗಳಿಸಿತು, ರೈತರ ಬೇಡಿಕೆ ಈಡೇರಿಸುವಂತೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ, ಸಾಹಿತಿಗಳು, ಪ್ರಗತಿಪರ ಹೋರಾಟಗಾರರ ಬೆಂಬಲ, ಸಚಿವ ಜಯಚಂದ್ರರ ಭರವಸೆ ನಂತರ ಹಿಂಪಡೆದ ಧರಣಿ,  ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಯಶಸ್ವಿ, ಗಣರಾಜ್ಯೋತ್ಸವದಲ್ಲಿ ಪ್ರತಿಭಾವಂತರಿಗೆ ಸನ್ಮಾನ, 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಗಂಗಾಧರಯ್ಯ ಆಯ್ಕೆ, ಯಶಸ್ವಿಯಾದ ಸಮ್ಮೇಳನ.
ಫೆಬ್ರವರಿ-2015 : ತಾಲ್ಲೂಕಿನ ರೈತರ ಮನೆಗಳಿಗೆ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಭೇಟಿ, ಬೆಳೆಯ ಪರಿಶೀಲನೆ, ಪಟ್ಟಣದ ಕಂಬಳಿ ಸೊಸೈಟಿಯ ಬಳಿಯಲ್ಲಿರುವ ತಂಗುದಾಣದಲ್ಲಿ ವ್ಯಕ್ತಿಯ ನಿಗೂಡ ಕೊಲೆ, ಬ್ರಾಹ್ಮಣರ ಬೀದಿಯ ವೃದ್ದೆಯ ಮೇಲಿದ್ದ ವಡವೆಗಳ ಕಳ್ಳತನ, ತಾಲ್ಲೂಕು ಪಂಚಾಯ್ತಿಯಲ್ಲಿ ತಾ.ಪಂ.ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆ ನಡೆಯದೇ ಹೋಳಿಗೆ ಊಟ ಮಾಡಿ ವಾಪಾಸದ ತಾ.ಪಂ.ಸದಸ್ಯರು, ಜಾತಿ ಧರ್ಮಗಳ ಆಚೆಗಿನ ವಿಚಾರ ಎಂಬ ಕಾರ್ಯಕ್ರಮ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮದಲ್ಲಿ ಭಾಗಿ, 
ಮಾಚರ್್-2015 : ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ವ್ಯಕ್ತಿ ಕೊಲೆ, ಹುಂಡಿ ಹಣ ಕಳ್ಳತನ, ಸಹಕಾರಿ ಸಂಘಗಳ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ, ಪಂಡಿತ್ ಪುಟ್ಟರಾಜಗವಾಯಿಗಳವರ ಜನ್ಮಶತಮಾನೋತ್ಸವ ಕಾರ್ಯಕ್ರಮ, ಸಿ.ಡಿ.ರವಿ ಹತ್ಯೆ ಖಂಡಿಸಿ ಹಲವು ಸಂಘ ಸಂಸ್ಥೆಗಳ ಪ್ರತಿಭಟನೆ. ಹಂದನಕೆರೆಯಲ್ಲಿ ಅಕ್ರಮ ಮರಳು ಸಾಗಾಣಿಕೆ.
ಏಪ್ರಿಲ್-2015 : ಕುರುಬರಹಳ್ಳಿಯಲ್ಲಿ ವಿದ್ಯುತ್ ಶಾಕ್ನಿಂದ ಲೈನ್ಮೆನ್ ಸಾವು, ನಾನು ಅವನಲ್ಲ ಅವಳು ಖ್ಯಾತಿಯ ನಟ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜಯ್ ಮತ್ತು ಬಿ.ಎಸ್.ಲಿಂಗದೇವರಿಗೆ ನವೋದಯ ಕಾಲೇಜ್ನಲ್ಲಿ ಸನ್ಮಾನ, ಹೇಮಾವತಿ ನೀರಿಗಾಗಿ ದಬ್ಬೆಘಟ್ಟ ಬಸವರಾಜುರವರಿಂದ ಅರೆಬೆತ್ತಲೆ ಪ್ರತಿಭಟನೆ, ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ, ಕನ್ನಡ ಸಂಘದ ವೇದಿಕೆಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅನುದಾನದಲ್ಲಿ ಮೇಲ್ಚಾವಣಿ ನಿಮರ್ಾಣ.
ಮೇ-2015 : ತಿಮ್ಮನಹಳ್ಳಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಸ್.ಪಿ.ಕಾತರ್ಿಕ್ರೆಡ್ಡಿ ಭೇಟಿ, ಸೋಮನಹಳ್ಳಿಗೆ ಆನಂದಗುರೂಜಿ ಭೇಟಿ, ವೃದ್ದೆ ಮೇಲೆ ಕರಡಿ ದಾಳಿ, ತಾಲ್ಲೂಕಿನ ರೋಟರಿ ಶಾಲೆಯ ಹಾಗೊ ಮೊರಾಜರ್ಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ಕೇಂದ್ರ ವಲಯ ಐಜಿಪಿ ಅರುಣ್ಚಕ್ರವತರ್ಿ ತಾಲ್ಲೂಕಿನ ಪೋಲಿಸ್ ಠಾಣೆಗಳಿಗೆ ಭೇಟಿ, ಪರಿಶೀಲನೆ, ಪಟ್ಟಣದ ದೇವಾಲಯಗಳಲ್ಲ ಸರಣಿ ಕಳ್ಳತನ.
ಜೂನ್-2015 : ಗ್ರಾಮ ಪಂಚಾಯಿತಿ ಚುನಾವಣೆ, ಕಂದಿಕೆರೆಯಲ್ಲಿ ಸಮರ್ಪಕ ವಿದ್ಯುತ್ಗಾಗಿ ಪ್ರತಿಭಟನೆ, ಜಿಲ್ಲಾ ಡಿಸಿಸಿ ಬ್ಯಾಂಕ್ಗೆ ಅವಿರೋಧವಾಗಿ ಸಿಂಗದಹಳ್ಳಿರಾಜ್ಕುಮಾರ್ ಪುನರಾಯ್ಕೆ, ಸಾಲ್ಕಟ್ಟೆಯಲ್ಲಿ ಮೀನುಗಳ ಮಾರಣ ಹೋಮ, ತಿಮ್ಮನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆ ಯುವತಿಯನ್ನು ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಚಿಕಿತ್ಸೆಗೆ , ಹಂದನಕೆರೆಯಲ್ಲಿ ಕುರಿಆಡು ಸಾಕಾಣಿಕೆ ಸವಾಲುಗಳ ಕಾರ್ಯಕ್ರಮ, ಪಟ್ಟಣದ ಕುರುಬರಹಳ್ಳಿಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಕುರಿಗಳ ಮಾರಣ ಹೋಮ, ಚಿಕ್ಕನಾಯಕ ಪ್ರೀಮಿಯರ್ ಲೀಗ್ ಗೆದ್ದ ಯದುಯಾಕರ್್ಸರ್್ ಕ್ರಿಕೆಟ್ ಟೀಮ್, ಸಮಾಜ ಸೇವಕ ಕಣ್ಣಯ್ಯ ನಿಧನ, ಗಣ್ಯರ ಸಂತಾಫ, ಹಳೆಕುರುಬರಶ್ರೇಣಿ ಶಾಲೆ ಬೀದಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರಸ್ತೆ ನಾಮಕರಣ. 
ಜುಲೈ-2015 : ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ, ಮಳೆಗಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಕೆಂಕೆರೆ ಪುರದ ಮಠದಲ್ಲಿ ಡಾ.ಯತೀಶ್ವರಶಿವಾಚಾರ್ಯಸ್ವಾಮಿಗಳ ವಿಶೇಷ ಪೂಜೆ, ಬಿಜೆಪಿ ಕಾರ್ಯಕರ್ತರ ಸಭೆಗೆ ಯಡಿಯೂರಪ್ಪ ಭೇಟಿ, ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ, ಸಂಘ-ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ. 
ಆಗಸ್ಟ್-2015 : ಎ.ಪಿ.ಜೆ ಅಬ್ದುಲ್ ಕಲಾಂ ನಿಧನಕ್ಕೆ ಸಂಘ, ಸಂಸ್ಥೆಗಳ ಸಂತಾಪ, ಪಟ್ಟಣದ ಶಿಕ್ಷಕ ಶಿವಣ್ಣರವರ ಮನೆ ಕಳ್ಳತನ, ಜೆ.ಸಿ.ಪುರದಲ್ಲಿ ಪೈಲ್ಲೈನ್ ರಂದ್ರಕ್ಕೆ ಪಟ್ಟಣದ ಪುರಸಭೆಯಲ್ಲಿ ಗದ್ದಲ, ಸ್ವಾಮೀಜಿಗಳ ನೇತೃತ್ವದಲ್ಲಿ ಹೇಮಾವತಿ ನಾಲಾ ಕಾಮಗಾರಿ ಪ್ರಾರಂಭಿಸಲು ಚಿ.ನಾ.ಹಳ್ಳಿಯಿಂದ ಕೆ.ಬಿ.ಕ್ರಾಸ್ವರೆಗೆ ಪಾದಯಾತ್ರೆ, ಬೈಪಾಸ್ ರಸ್ತೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಾರ್ವಜನಿಕರ ಸಭೆ, ಎಂ.ವಿ.ನಾಗರಾಜ್ರಾವ್ರವರ ಅಮೃತಮಹೋತ್ಸವ ಕಾರ್ಯಕ್ರಮ.  
ಸೆಪ್ಟೆಂಬರ್-2015 : ಶ್ರೀ ಕೃಷ್ಣ ಜಯಂತಿ ಅಂಗವಾಗಿ ಯುವಕರಿಗೆ ಮಡಕೆ ಹೊಡೆಯುವ ಸ್ಪಧರ್ೆ, ಮಕ್ಕಳ ಕೃಷ್ಣ ವೇಷ ಸ್ಪಧರ್ೆ, ಮಹಾಲಕ್ಷ್ಮೀ ಬಡಾವಣೆಯಲ್ಲಿ ರಸ್ತೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿದ ಅಧಿಕಾರಿಗಳು, ಕನರ್ಾಟಕ ಸಾಹಿತ್ಯ ಅಕಾಡೆಮಿ ನೀಡುವ ಮಧುರ ಚೆನ್ನ ದತ್ತಿ ನಿಧಿ ಪ್ರಶಸ್ತಿಯನ್ನು ತಾಲ್ಲೂಕಿನ ಮಾಕಳ್ಳಿ ಗ್ರಾಮದ ಯುವ ಬರಹಗಾತರ್ಿ ಸ್ಮಿತರವರಿಗೆ ನೀಡಲಾಗಿತ್ತು. ಪೋಲಿಸ್ ಸಮುದಾಯ ಭವನ ಉದ್ಘಾಟನೆ ಐಜಿಪಿ ಅರುಣ್ಚಕ್ರವತರ್ಿ ಭೇಟಿ, ಜೆ.ಸಿ.ಪುರದಲ್ಲಿ ಹೊಡೆದಿದ್ದ ಹೇಮಾವತಿ ಪೈಪ್ಲೈನ್ಗೆ ಪುರಸಭೆಯಿಂದ ವೆಲ್ಡಿಂಗ್, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ, ನಾನು ಅವನಲ್ಲ ಅವಳು ಚಿತ್ರ ವೀಕ್ಷಿಸಿದ ತಾಲ್ಲೂಕಿನ ಸ್ವಾಮಿಜಿಗಳು.
ಅಕ್ಟೋಬರ್-2015 : ತುಮಕೂರಲ್ಲಿ ಕೊಲೆಯಾದ ವ್ಯಕ್ತಿಯ ಪೋಸ್ಟ್ಮಾಟಂ ಆಗದೆ ಚಿ.ನಾ.ಹಳ್ಳಿಯಲ್ಲಿ ಸಮಾಧಿ ಮಾಡಿದ್ದ ಶವವನ್ನು ಹೊರತೆಗೆದ ಪೋಲಿಸರು, ಪಟ್ಟಣದಲ್ಲಿ ದೇವರ ಮೆರವಣಿಗೆ ಕೊಂಡೊಯ್ಯಲು ಕುರುಬ-ಬಲಿಜ ಜನಾಂಗದ ನಡುವೆ ಘರ್ಷಣೆ, ಗಲಭೆ ವ್ಯಕ್ತಿಗಳ ಬಂಧನ, ಎರಡು ಸಮಾಜಗಳ ನಡುವೆ ಪೋಲಿಸರ ಶಾಂತಿ ಸಭೆ, ರೈತ ಅನುವುಗಾರರ ಪ್ರತಿಭಟನೆ, ಸರ್ವಧಮರ್ೋತ್ಸವ ಸಮ್ಮೇಳನ, ಲೋಕಾಯುಕ್ತರ ಕುಂದುಕೊರತೆ ಸಭೆ.
ನವಂಬರ್-2015 : ಹಂದನಕೆರೆಯಲ್ಲಿ ವೃದ್ದ ದಂಪತಿ ನಿಗೂಡ ಕೊಲೆ, ತಾಲ್ಲೂಕಿನ ಗ್ರಾಮ ರಸ್ತೆ ಡಾಂಬರೀಕರಣಕ್ಕೆ ಚಾಲನೆ, ಮಕ್ಕಳ ದಿನಾಚಾರಣೆ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಮಕ್ಕಳಿಂದ ಭಾಷಣ, ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರುಗಳಿಂದ ತಾಲ್ಲೂಕು ಭೇಟಿ, ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ, ಹೆಚ್ಚು ಮಳೆ ರಾಗಿ ಬೆಳೆ ನಾಶ.
ಡಿಸಂಬರ್-2015 :  ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ತಾಲ್ಲೂಕಿನ ಮಕ್ಕಳು ಆಯ್ಕೆ, ವ್ಯಾಪಕವಾಗಿ ಹರಡಿದ ಕುರಿಗಳಿಗೆ ನೀಲಿನಾಲಗೆ ರೋಗ, ವಿಧಾನ ಪರಿಷತ್ ಚುನಾವಣೆಯ ಅಭ್ಯಥರ್ಿಗಳಿಂದ ಪ್ರಚಾರ ಭರಾಟೆ, ಕಾತರ್ಿಕಮಾಸದ ಅಂಗವಾಗಿ ದೇವಾಲಯಗಳಲ್ಲಿ ದೀಪೋತ್ಸವ, ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ, ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚುನಾವಣಾ ಪ್ರಚಾರ, ಕುಪ್ಪೂರು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಜೆಡಿಎಸ್ ಅಭ್ಯಥರ್ಿ ಬೆಮೆಲ್ ಕಾಂತರಾಜು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು.


ರೈತರು ಮೇವು ಸ್ವಾವಲಂಬನೆ ಸಾಧಿಸಬೇಕು
ಚಿಕ್ಕನಾಯಕನಹಳ್ಳಿ,ಡಿ.30 : ರೈತರು ಮೇವು ಸ್ವಾವಲಂಭನೆ ಸಾಧಿಸಿದಾಗ ಮಾತ್ರ ಹೈನುಗಾರಿಕೆ ಲಾಭದಾಯಕ ಕಸುಬು ಆಗಬಲ್ಲದು ಎಂದು ಕೇಂದ್ರೀಯ ಮೇವು ಬೀಜ ಉತ್ಪಾಧನಾ ಕೇಂದ್ರ ನಿದರ್ೇಶಕ ಎ.ಬಾಲಸುಬ್ರಮಣ್ಯನ್ ಹೇಳಿದರು.
  ತಾಲ್ಲೂಕಿನ ಮುದ್ದೇನಹಳ್ಳಿ ರೈತ ವಿರಭದ್ರಯ್ಯ ಅವರ ತೋಟದಲ್ಲಿ ಬುಧವಾರ ಸುಧಾರಿತ ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರೈತರು ಹಾಲು ಉತ್ಪಾಧನೆಯಿಂದ ಬರುವ ಆಧಾಯದ ಶೇ.70 ಭಾಗ ಕೃತಕ ಆಹಾರ ಕಂಪನಿಗಳ ಪಾಲಾಗುತ್ತಿದೆ, ರಾಸುಗಳ ಲಾಲನೆ-ಪಾಲನೆ, ರೈತರ ಶ್ರಮ ಲೆಕ್ಕ ಹಾಕಿದರೆ ರೈತರು ಶೇ.15ರಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
  1979ರಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಸ್ಥಾಪಿತವಾಗಿರುವ ಕೇಂದ್ರೀಯ ಮೇವು ಬೀಜ ಉತ್ಪಾಧನೆ ಕೇಂದ್ರ ಮೇವು ಸ್ವಾವಲಂಭನೆ ಸಾಧಿಸಲು ರೈತರಿಗೆ ನೆರವು ಆಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಈ ವರ್ಷ ದಕ್ಷಿಣ ಭಾರತದ 5 ರಾಜ್ಯಗಳಾದ ಕನರ್ಾಟಕ, ಕೇರಳ, ತಮಿಳುನಾಡು, ಆಂದ್ರ ಮಧ್ಯಪ್ರದೇಶಗಳಲ್ಲಿ 1200 ಮಾಧರಿ ಮೇವು ತಾಕುಗಳನ್ನು ನಿಮರ್ಾಣ ಮಾಡುವ ಗುರಿ ಹೊಂದಿದೆ. ಕನರ್ಾಟಕದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಯೋಜನೆಗೆ ಆಯ್ಕೆಯಾಗಿದ್ದು 200 ಮಾಧರಿ ತಾಕುಗಳನ್ನು ತಾಲ್ಲೂಕಿನಲ್ಲಿ ನಿಮರ್ಿಸಲಾಗಿದೆ ಎಂದರು.
   ಮಳೆ ಆಶ್ರಿತ ಪ್ರದೇಶಕ್ಕೆ ಸೂಕ್ತವಾದ ಗಿನಿಯಾ ಮೆಕುನಿ ಹಾಗೂ ಕೆಲಿಡಿ ಕೊತ್ತಂಬರಾ ಜಾತಿಯ ಮೇವಿನ ಬೀಜವನ್ನು ತಾಲ್ಲೂಕಿನ ಮಾಧರಿ ತಾಕುಗಳಲ್ಲಿ ಬಿತ್ತಲಾಗಿದೆ. ಬಿತ್ತನೆ ಮಾಡಿದ 50 ದಿವಸಕ್ಕೆ ಕಟಾವಿಗೆ ಬರುತ್ತದೆ. ಕಟಾವು ಮಾಡಿದಂತೆ ಮತ್ತೆ ಚಿಗುರುವ ಗುಣ ಇರುವ ಈ ಪ್ರಬೇಧ ನಿರಂತರವಾಗಿ 15ರಿಂದ 20 ವರ್ಷ ರಾಸುಗಳಿಗೆ ಮೇವ ಒದಗಿಸಬಲ್ಲದು. ನೀರಾವರಿ ಹಾಗೂ ಮಳೆ ಆಶ್ರಿತ ತಾಕುಗಳಲ್ಲಿ ಬೆಳೆಯಬಲ್ಲ ಈ ಮೇವು ಬಯಲು ನಾಡಿನ ರೈತರ ಮೇವು ಸ್ವಾವಲಂಭನೆಗೆ ಸಹಕಾರಿಯಾಗಲಿದೆ ಎಂದರು. 
   ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶು ಇಲಾಖೆ ಸಹಾಯಕ ನಿದರ್ೇಶಕ ಡಾ.ಜಿ.ಕೆ.ನಾಗರಾಜು ಮಾತನಾಡಿ, ಮೇವಿನ ಕ್ರಾಂತಿ ಕ್ಷೀರಕ್ರಾಂತಿಯ ತಾಯಿ, ಈ ಯೋಜನೆಯನ್ನು ಪಶು ಇಲಾಖೆ ಹಾಗೂ ಹಂದನಕೆರೆ ರೇವಣಸಿದ್ಧೇಶ್ವರ ಕುರಿಗಾಹಿಗಳ ಸಹಕಾರ ಸಂಘ ಸೋಯುಕ್ತವಾಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿವೆ ಎಂದರು.
 ಈ ಸಂದರ್ಭದಲ್ಲಿ ರೈತ ವೀರಭದ್ರಪ್ಪ, ಡಾ.ಅಜಿತ್, ಡಾ.ಸಂಜಯ್, ಡಾ.ತಿಮ್ಮರಾಜು, ಡಾ.ರಘುಪತಿ, ಹುಳಿಯಾರ್ ರಾಜಪ್ಪ ಮುಂತಾದವರು ಇದ್ದರು.