Thursday, March 31, 2016

ಚಿ.ನಾ.ಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಸಿ.ಟಿ.ದಯಾನಂದ್,  ಉಪಾಧ್ಯಕ್ಷರಾಗಿ ಇಂದಿರಾಪ್ರಕಾಶ್
                              
ಚಿಕ್ಕನಾಯಕನಹಳ್ಳಿ,: ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ  ಎರಡನೇ ಅವಧಿಗೆ ಬಂದ ಮೀಸಲಾತಿ ಅನ್ವಯ ನಡೆದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಸಿ.ಟಿ.ದಯಾನಂದ್ ಹಾಗೂ ಉಪಾಧ್ಯಕ್ಷರಾಗಿ ಇಂದಿರಾಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಆಯ್ಕೆಗೆ ಮೀಸಲಾತಿಯು ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದುದ್ದರಿಂದ  19ನೇ ವಾಡರ್್ನ ಸಿ.ಟಿ ದಯಾನಂದ್ ಅಧ್ಯಕ್ಷರಾಗಿ, 8ನೇ ವಾಡರ್್ನ ಇಂದಿರಾಪ್ರಕಾಶ್ ಉಪಾಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ  ತಹಶೀಲ್ದಾರ್ ಗಂಗೇಶ್ ಘೋಷಿಸಿದರು.
ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದ ಸಿ.ಟಿ ದಯಾನಂದ್ ಎರಡು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಒಂದು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸರಿಯಾಗಿರುವುದರಿಂದ ಚುನಾವಣೆಯಲ್ಲಿ ಈ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಸಿಲ್ದಾರ್ ಆರ್.ಗಂಗೇಶ್ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಬಿ ಸುರೇಶ್ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್. ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು. 
ನೂತನ ಪುರಸಭಾಧ್ಯಕ್ಷ ಸಿ.ಟಿ ದಯಾನಂದ್ ಮಾತನಾಡಿ,  ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಘನತಾಜ್ಯ ವಿಲೇವಾರಿಗೆ ಹೆಚ್ಚಿನ ಆಧ್ಯತೆ ನೀಡುವುದಾಗಿ ತಿಳಿಸಿದ ಅವರು,  ಎಲ್ಲ ನೌಕರರನ್ನು ಹಾಗೂ ಪುರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಊರಿನ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದ ಅವರು,  ಪುರಸಭೆಯಲ್ಲಿ ಸಾರ್ವಜನಿಕ ಕೆಲಸಕ್ಕೆ ಲಂಚಗುಳಿತನ ನಡೆದರೆ ತಮ್ಮ ಗಮನಕ್ಕೆ ತರುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.


Wednesday, March 30, 2016


ಸಮರ್ಪಕ ವಿದ್ಯುತ್ಗಾಗಿ ಬೆಸ್ಕಾಂ ಕಛೇರಿಗೆ ರೈತರ ಮುತ್ತಿಗೆ

ಚಿಕ್ಕನಾಯನಹಳ್ಳಿ,ಮಾ.30:  ಶೆಟ್ಟಿಕೆರೆ ಹೋಬಳಿ ತಿಮ್ಲಾಪುರ ಲಕ್ಮೆಗೊಂಡನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕೂಡಲೇ ವಿದ್ಯುತ್ ಪರಿವರ್ತಕ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಳೆದ ಹದಿನೈದು ದಿನಗಳಿಂದ ತಿಮ್ಲಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಿಯಾಗಿ ಇಲ್ಲದೇ ಇರುವುದರಿಂದ ಈ ಭಾಗದಲ್ಲಿ ಟ್ರಾನ್ಸ್ಪಾರ್ಮರ್ ಕೆಟ್ಟುಹೋಗಿ ಕುಡಿಯುವ ನೀರು ಇಲ್ಲದೆ ಪರದಾಡುವ ಸ್ಥಿತಿ ಒದಗಿದ್ದು ಕೂಡಲೇ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸುವಂತೆ ಆಗ್ರಹಿಸಿದರು. 
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ತಿಮ್ಲಾಪುರ ಶಂಕರಣ್ಣ ಮಾತನಾಡಿ, ವಿದ್ಯುತ್ತೊಂದರೆಯಿಂದಾಗಿ ಸುಮಾರು 15ರಿಂದ 20ದಿನಗಳಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ,  ಜೊತೆಗೆ ಈಗ ಮಕ್ಕಳಿಗೆ ಪರೀಕ್ಷೆ ಸಮಯವಾಗಿರುವುದರಿಂದ ರಾತ್ರಿ ವೇಳೆ ಸರಿಯಾಗಿ ವಿದ್ಯುತ್ ಇಲ್ಲದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದ ಅವರು,  ತಾಲ್ಲೂಕಿನಾದ್ಯಂತ  ಸುಮಾರು 60 ವಿದ್ಯುತ್ಪರಿವರ್ತಕಗಳು ಸುಟ್ಟುಹೋಗಿದ್ದು ವಿದ್ಯುತ್ಪರಿವರ್ತಕಗಳನ್ನು ದುರಸ್ತಿ ಮಾಡಿ ವಿದ್ಯುತ್ ಸರಿಪಡಿಸುವಂತೆ ಆಗ್ರಹಿಸಿದರು. 
ರೈತರು ಹೊಸ ವಿದ್ಯುತ್ ಪರಿವರ್ತಕಗಳನ್ನು ತರಲು ತಿಪಟೂರಿಗೆ ಹೋಗಬೇಕಾಗಿದ್ದು ಇದಕ್ಕೆ ಸಾವಿರಾರು ರೂಪಾಯಿಗಳು ಖಚರ್ಾಗುತ್ತಿವೆ ಆದ್ದರಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ಬೆಸ್ಕಾಂ ಕಛೇರಿಯಲ್ಲಿಯೇ ವಿದ್ಯುತ್ ಪರಿವರ್ತಕಗಳನ್ನು ನೀಡುವ ವ್ಯವಸ್ಥೆ ಕಲ್ಪಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು. 
ರೈತ ಮುಖಂಡ ಮಲ್ಲಿಕಾಜರ್ುನ್ ಮಾತನಾಡಿ, ಬೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ತರಲು ಲಾರಿಗಳಿದ್ದರೂ ಇಲಾಖಾ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ರೈತರು ಸ್ವತಃ ತಮ್ಮ ಖಚರ್ಿನಲ್ಲಿ ತಿಪಟೂರಿನಿಂದ ವಿದ್ಯುತ್ ಪರಿವರ್ತಕಗಳನ್ನು ತರಬೇಕಾಗಿದೆ ಇದರಿಂದ ರೈತರಿಗೆ ಸಾವಿರಾರು ರೂ ಖಚರ್ಾಗುವುದರ ಜೊತೆಯಲ್ಲಿ ಸಮಯವೂ ವ್ಯರ್ಥವಾಗುತ್ತಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ರಾಜಶೇಖರ್ ಮಾತನಾಡಿ, ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. 
ಈ ಸಂದರ್ಭದಲ್ಲಿ ರೈತರುಗಳಾದ ತೋಂಟಾದಾರ್ಯ, ಚಂದ್ರಯ್ಯ, ಮುತ್ತು, ಲೋಕೇಶ್, ಸೇರಿದಂತೆ ಲಕ್ಮಗೊಂಡನಹಳ್ಳಿ ಗ್ರಾಮಸ್ಥರು, ಪಿ.ಎಸ್.ಐ ವಿಜಯ್ಕುಮಾರ್ ಇದ್ದರು.

Tuesday, March 29, 2016

ಪೌರಕಾಮರ್ಿಕರಿಗೆ ನಿವೇಶನ ಕೊಡಿಸಲು ಮುಂದಾಗುವೆ : ಮುಖ್ಯಾಧಿಕಾರಿ ಪಿ.ಶಿವಪ್ರಸಾದ್
ಚಿಕ್ಕನಾಯಕನಹಳ್ಳಿ : ಪೌರಕಾಮರ್ಿಕರಿಗೆ ಪುರಸಭಾ ವತಿಯಿಂದ ನಿವೇಶನ ನೀಡಲು ಪುರಸಭಾ ವ್ಯಾಪ್ತಿಯಲ್ಲಿ ಒಂದೆರಡು ಎಕರೆ ಜಮೀನನ್ನು ಖರೀದಿಸಿ ನಿವೇಶವನವನ್ನು ನೀಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭಾ ಕಾಯರ್ಾಲಯ, ರಾಜ್ಯ ಹರಿಜನ-ಗಿರಿಜನ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ನಡೆದ ಪೌರಕಾಮರ್ಿಕರಿಗೆ ಕಾನೂನು ಅರಿವು ಮತ್ತು ಆರೋಗ್ಯ ಶುಚಿತ್ವ ಹಾಗೂ ನೈರ್ಮಲ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೇಶನದಲ್ಲಿ ಮನೆಗಳನ್ನು ಕಟ್ಟಲು ಈಗಾಗಲೇ 60ಲಕ್ಷ ಹಣ ಮಂಜೂರಾಗಿದ್ದು ಟೆಂಡರ್ ಕರೆಯುವ ಮೂಲಕ ಕಾಮರ್ಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದ ಅವರು,  1ರಿಂದ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪೌರಕಾಮರ್ಿಕರ ಮಕ್ಕಳಿಗೆ ಪುರಸಭಾ ವತಿಯಿಂದ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪೌರಕಾಮರ್ಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಧಿಕಾರಿಗಳನ್ನಾಗಿ, ಉನ್ನತ ಸ್ಥಾನಕ್ಕೆ ಬರುವ ಹಾಗೆ ನೋಡಿಕೊಳ್ಳುವಂತೆ ಸಲಹೆ ನೀಡಿದರು, ಪೌರ ಕಾಮರ್ಿಕರು ಸಹ ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡರಾಜ್ಯೋತ್ಸವ  ಇಂತಹ ಕಾರ್ಯಕ್ರಮಗಳನ್ನು ಮೂಲಕ ಸಂಘಟನೆಯಾಗಿ ತಮ್ಮ ಹಕ್ಕುಗಳು ಕೇಳುವ ಮೂಲಕ ಸಂಘಟನೆ ಬಲಪಡಿಸಿ ಹಾಗೂ ಹೋರಾಟದ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದ ಅವರು ಪೌರಕಾಮರ್ಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಸ್ವಚ್ಛತೆ ಕಾಪಾಡುವ ಪೌರಕಾಮರ್ಿಕರು 40-50ವರ್ಷದ ವಯಸ್ಸಿನವರಿದ್ದು ಇವರ್ಯಾರು ಆಥರ್ಿಕವಾಗಿ, ಸಾಮಾಜಿಕವಾಗಿ ಸದೃಢವಾಗಿಲ್ಲ ಇದುವರೆಗೂ ಖಾಯಂ ಆಗದೆ ಇರುವುದರಿಂದ ಸಕರ್ಾರ ಕೂಡಲೇ ಪೌರಕಾಮರ್ಿಕರನ್ನು ಖಾಯಂ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಪುರಸಭಾ ಸದಸ್ಯ ಅಶೋಕ್ ಮಾತನಾಡಿ, ಪೌರಕಾಮರ್ಿಕರಿಗೆ ನಿವೇಶನ ಹಾಗೂ ವಸತಿಯನ್ನು ಪುರಸಭೆ ವತಿಯಿಂದ ನೀಡುವಂತೆ ಮನವಿ ಮಾಡಿದ ಅವರು ಪೌರಕಾಮರ್ಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ಸಲಹೆ ನೀಡಿದರು.
ಪುರಸಭ ಸದಸ್ಯೆ ಪುಷ್ಪ.ಟಿ.ರಾಮಯ್ಯ ಮಾತನಾಡಿ, ಪೌರಕಾಮರ್ಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ, ಪುರಸಭೆಯ ಮೂಲಕ ದೊರೆಯುವಂತಹ ಸೌಲಭ್ಯವನ್ನು ಬಳಸಿಕೊಂಡು ಆಥರ್ಿಕವಾಗಿ ಸದೃಢರಾಗಲು ಮುಂದಾಗಿ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಂ.ಬಿ.ನಾಗರಾಜು, ಡಾ.ರಂಗನಾಥ್, ಪುರಸಭಾ ಅಭಿಯಂತರ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಉಚಿತ ಸಿಇಟಿ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮಾ.29 : ಸಿ.ಬಿ.ಸುರೇಶ್ಬಾಬು ಮತ್ತು ಸಂಗಡಿಗರ ವತಿಯಿಂದ ಪಿ.ಯು.ಸಿ.ವಿದ್ಯಾಥರ್ಿಗಳಿಗೆ ಉಚಿತ ಸಿಇಟಿ ತರಬೇತಿ ಶಿಬಿರ  ಏಪ್ರಿಲ್1 ರಿಂದ 28ರವರೆಗೆ ನಡೆಯಲಿದೆ.. 
ತರಬೇತಿಯ ಉದ್ಘಾಟನೆಯನ್ನು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಏಪ್ರಿಲ್ 1ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು  ತುಮಕೂರು ವಿ.ವಿ.ಉಪಕುಲಪತಿ ಪ್ರೊ.ಎ.ಹೆಚ್.ರಾಜಾಸಾಬ್ ಉದ್ಘಾಟಿಸುವರು,  ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಮೈಸೂರಿನ ಎನ್.ಐ.ಇ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪರಮೇಶ್ವರ್ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡುವರು. ಚಿ.ನಾ.ಹಳ್ಳಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಎಂ.ವಿ.ಸಿದ್ದಗಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. 
ಉಚಿತ ಸಿಇಟಿ ಶಿಬಿರವು ಪಟ್ಟಣದ ಸಕರ್ಾರಿ ಪದವಿಪೂರ್ವ ಕಾಲೇಜ್ನಲ್ಲಿ  ಏಪ್ರಿಲ್1ರಿಂದ 28ರವರೆಗೆ ನಡೆಯಲಿದೆ. ವಿದ್ಯಾಥರ್ಿಗಳು ಶಿಬಿರದ ಉಪಯೋಗವನ್ನು ಬಳಸಿಕೊಳ್ಳುವಂತೆ ಹಾಗೂ ಈ ಶಿಬಿರದಲ್ಲಿ ವಿದ್ಯಾಥರ್ಿಗಳ ಹೆಚ್ಚಿನ ಶಿಕ್ಷಣಕ್ಕೆ ಸಾಲ ದೊರೆಯುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು  ಮಾಹಿತಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


                                            
ಚಿಕ್ಕನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವಾಹನ ಸಾಲವನ್ನು ನೀಡಲಾಯಿತು. ಬ್ಯಾಂಕಿನ ಅಧ್ಯಕ್ಷ ಗುರುಮೂತರ್ಿ ಹೊನ್ನೆಬಾಗಿ ವಿಶ್ವನಾಥ್ರವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು. ಬ್ಯಾಂಕಿನ ಸಿಇಓ ಮಧು, ಗ್ರಾ.ಪಂ.ಸದಸ್ಯ ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.


ನವೋದಯ ಕಾಲೇಜಿನ ಎನ್.ಎಸ್.ಎಸ್ ಶಿಬಿರ ಮಾಚರ್್ 31ರಿಂದ ಏಪ್ರಿಲ್ 6ರವರೆಗೆ
ಚಿಕ್ಕನಾಯಕನಹಳ್ಳಿ,ಮಾ.29 : ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ವಾಷರ್ಿಕ ವಿಶೇಷ ಶಿಬಿರ ಮಾಚರ್್ 31ರಿಂದ ಏಪ್ರಿಲ್ 6 ವರೆಗೆ ತಾಲ್ಲೂಕಿನ ಬಗ್ಗನಹಳ್ಳಿಯಲ್ಲಿ ನಡೆಯಲಿದೆ.
ಏಪ್ರಿಲ್31ರಂದು ನಡೆಯುವ ಉದ್ಘಾಟನಾ ಸಮಾರಂಭ ಸಂಜೆ 6ಕ್ಕೆ ಏರ್ಪಡಿಸಿದ್ದು ಕಾಲೇಜಿನ ಸಂಸ್ಥಾಪಕ ಕಾರ್ಯದಶರ್ಿ ಪ್ರೊ.ಎಂ.ರೇಣುಕಾರ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಾಂಶುಪಾಲ ಪ್ರೊ.ಎಸ್.ಎಲ್.ಶಿವಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಹೆಚ್.ಎಸ್.ಶಿವಯೋಗಿ, ಶಿವಪ್ರಸಾದ್, ತಾ.ಪಂ.ಸದಸ್ಯೆ ಹೊನ್ನಮ್ಮ, ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಚಂದ್ರಶೇಖರಯ್ಯ, ಗ್ರಾಮಸ್ಥರಾದ ಶಂಕರಯ್ಯ, ಚನ್ನಬಸವಯ್ಯ, ಪತ್ರಕರ್ತರಾದ ಗಿರೀಶ್, ಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿರುವರು.

Monday, March 28, 2016

ಜ್ಯೋತಿ ಸಂಜೀವಿನಿ ಕಾರ್ಯಕ್ರಮವನ್ನು ನೌಕರರು ಉಪಯೋಗಿಸಿಕೊಳ್ಳುವಂತೆ ಸಲಹೆ
ಚಿಕ್ಕನಾಯಕನಹಳ್ಳಿ,ಮಾ.27 : ಜ್ಯೋತಿ ಸಂಜೀವಿನಿ ಕಾರ್ಯಕ್ರಮವನ್ನು ನೌಕರರಿಗಾಗಿ ಸಕರ್ಾರ ಜಾರಿಗೆ ತಂದಿದ್ದು ಇದರ ಉಪಯೋಗವನ್ನು ಎಲ್ಲಾ ನೌಕರರು ಪಡೆದುಕೊಳ್ಳಬೇಕು ಎಂದು ತಾ.ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ನಡೆದ ಸಕರ್ಾರಿ ನೌಕರರ ನಾಗರೀಕ ಸೇವಾ ನಿಯಮಗಳು, ಜ್ಯೋತಿ ಸಂಜೀವಿನಿ ಯೋಜನೆಯ ರೂಪುರೇಷೆಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲಸದಲ್ಲೇ ತಲ್ಲೀನರಾಗಿರುವಂತಹ ನೌಕರರಿಗೆ ಅವರಿಗಾಗಿಯೇ ಇರುವಂತಹ ಯೋಜನೆಗಳು ಯಾವುವೆಂದು ಅವರಿಗೆ ತಿಳಿಯದಾಗಿದೆ,  ಅದಕ್ಕಾಗಿಯೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು, ನೌಕರರು ಸಕರ್ಾರ ಜಾರಿಗೆ ತರುವಂತರಹ ಯೋಜನೆಗಳ ಸವಲತ್ತುಗಳ ವಂಚಿತರಾಗುತ್ತಿದ್ದಾರೆ,  ಇದಕ್ಕಾಗಿ ನೌಕರರ ಸಂಘ ಯೋಜನೆ ರೂಪಿಸಿ ಅವರಿಗೆ ದೊರಕಬೇಕಾದಂತಹ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಿದ್ದೇವೆ,  ಅದಕ್ಕಾಗಿ ನೌಕರರ ಸಂಘ ಬಲಿಷ್ಠವಾಗಬೇಕು ಎಂದ ಅವರು ನೌಕರರ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಯಲ್ಲಿ ಹಾಗೂ ಪಾಂಪ್ಲೆಟ್ ಮಾಡಿ ಪ್ರಚಾರ ಮಾಡಿದ್ದರೂ ಸಹ ತಾಲ್ಲೂಕಿನಲ್ಲಿ ಇರುವ 2800ನೌಕರರಿಗೆ ಕೆಲವೇ ಕೆಲವು ನೌಕರರು ಆಗಮಿಸಿರುವುದು ವಿಷಾದದ ಸಂಗತಿ, ನೌಕರರ ಸಂಘ ಬಲಿಷ್ಠವಾದಾಗಲೇ ಕಾರ್ಯಕ್ರಮಗಳು, ಯೋಜನೆಗಳು ಯಶಸ್ವಿಯಾಗುವುದು ಎಂದರು.
ನೌಕರರ ಸಂಘದ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನೌಕರರಿಗೆ ತರಬೇತಿ ಕಾಯರ್ಾಗಾರಗಳು ಬಹಳ ಮುಖ್ಯವಾಗಿದೆ, ಕೆಲಸದ ಒತ್ತಡದಲ್ಲಿ ಯಾವ ಯೋಜನೆಗಳು ಜಾರಿಗೆ ಬಂದಿವೆ ಎನ್ನುವುದೇ ತಿಳಿಯದಂತಾಗಿದ್ದು ಇಂತಹ ಕಾರ್ಯಕ್ರಮಗಳು ಹಮ್ಮಿಕೊಂಡು ನೌಕರರಿಗೆ ಮಾಹಿತಿ ನೀಡುವುದು ಉತ್ತಮ ಕೆಲಸ ಎಂದರಲ್ಲದೆ,  ನೌಕರರಲ್ಲಿಯೇ ಇರುವ ವೇತನ ತಾರತಮ್ಯದ ಬದಲಾಯಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು.
ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಆರ್.ಸುಂದರ್ರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಥರ್ಿಕ ಸೇವಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. .
ಕಾರ್ಯಕ್ರಮದಲ್ಲಿ ಗ್ರೇಡ್-2-ತಹಶೀಲ್ದಾರ್ ಚಂದ್ರಕುಮಾರ್, ಇಸಿಓ ಶಾಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಜಿ.ಶಂಕರ್, ಹೆಚ್.ಎಂ.ಸುರೇಶ್, ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಕೆ.ಈರಯ್ಯ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕಾರ ಬೆಳೆಸಿಕೊಳ್ಳಲು ಶಿವಾಚಾರ್ಯಸ್ವಾಮೀಜಿ ಸಲಹೆ 
ಚಿಕ್ಕನಾಯಕನಹಳ್ಳಿ,ಮಾ.27 : ರಂಭಾಪುರಿ ಮಠದಲ್ಲಿ 36 ಅಡಿಯ ರೇಣುಕಾಚಾರ್ಯ ಭಗವತ್ಪಾದರ ಶಿಲಾಮೂತರ್ಿ ಸ್ಥಾಪಿಸುವ ಹಾಗೂ ಆಯುವರ್ೇದಿಕ್ ಆಸ್ಪತ್ರೆಯನ್ನು ತೆರೆಯುವ ಸಂಕಲ್ಪವನ್ನು ಹೊಂದಿದ್ದೇವೆ ಎಂದು ಬಾಳೆಹೊನ್ನೂರು 1008 ಜಗದ್ಗುರು ಪ್ರಸನ್ನ ರೇಣುಕವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಮಾದಿಹಳ್ಳಿ ಹಿರೇಮಠದಲ್ಲಿ ನೂತನ ಗುರುನಿವಾಸ ಪ್ರಾರಂಭೋತ್ಸವ ಹಾಗೂ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜನರು ವೈಚಾರಿಕತೆ ನೆಪದಲ್ಲಿ ಸಂಸ್ಕೃತಿ, ಸಂಸ್ಕಾರ ಮರೆಯುತ್ತಿದ್ದಾರೆ, ಉತ್ತಮ ಸಮಾಜಕ್ಕಾಗಿ ಹಾಗೂ ಸಮಾಜದ ಏಳಿಗೆಗಾಗಿ ಸಂಸ್ಕಾರ ಅಗತ್ಯ ಅದಕ್ಕಾಗಿ ವೀರಶೈವ ಧರ್ಮ ಧಾಮರ್ಿಕ ಸಮಾರಂಭಗಳನ್ನು ಏರ್ಪಡಿಸುತ್ತಿದೆ, ಇಂತಹ ವೀರಶೈವ ಧರ್ಮದಲ್ಲಿ 12ನೇ ಶತಮಾನದಿಂದಲೂ ಧರ್ಮಜಾಗೃತಿಗಾಗಿ ಬಸವಣ್ಣ, ಶಿವಶರಣರು ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ ಎಂದ ಅವರು ವೀರಶೈವ ಧರ್ಮದಲ್ಲಿ ರೇಣುಕಾಚಾರ್ಯರು ಗಂಡು-ಹೆಣ್ಣು, ಮೇಲು-ಕೀಳು ಎಂಬ ಭೇದವಿಲ್ಲದೆ ಧರ್ಮದ ಪರಿಪಾಲನೆ ಮಾಡಿಕೊಂಡು ಬರುತ್ತಿದ್ದಾರೆ, ರೇಣುಕಾಚಾರ್ಯರು ಅಹಿಂಸೆ, ಧರ್ಮ, ಜ್ಞಾನ, ಸತ್ಯ ಈ ರೀತಿಯ ದಶಧರ್ಮಸೂತ್ರಗಳನ್ನು ಅಳವಡಿಸಿದ್ದಾರೆ ಇದನ್ನು ಮಹಾತ್ಮ ಗಾಂಧೀಜಿಯವರು ಅಳವಡಿಸಿಕೊಂಡು ದೇಶದ ಶಾಂತಿಗೆ ಶ್ರಮಿಸಿದ್ದಾರೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಮಾದಿಹಳ್ಳಿ ಮಠ ಚಿಕ್ಕದಾದರೂ ಮನಸ್ಸು ದೊಡ್ಡದಾಗಿದೆ,  ಅದಕ್ಕಾಗಿಯೇ ನಮ್ಮಗಳ ಮನಸ್ಸು ಈ ಮಠಗಳ ಬೆಳವಣಿಗೆಗೆ ಸದಾ ಮುಂದಾಗಿರುತ್ತದೆ, ಒಳ್ಳೆಯ ಗುಣವಿರುವವರನ್ನು ಗೌರವಿಸುವುದು ನಮ್ಮಗಳ ಕರ್ತವ್ಯ, ರಂಭಾಪುರಿ ಶ್ರೀಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ, ಅವರ ಸರಳತೆ ನಮ್ಮೆಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದ ಅವರು ತಾಲ್ಲೂಕಿನಲ್ಲಿ ಕುಪ್ಪೂರು ಮಠ, ಯಳನಡು ಮಠ, ಗೋಡೆಕೆರೆಯಲ್ಲಿ ಎರಡು ಮಠ, ತಮ್ಮಡಿಹಳ್ಳಿ ಮಠ, ಮಾದಿಹಳ್ಳಿ ಮಠ ಸೇರಿ ಒಟ್ಟು 6 ಮಠಗಳಿವೆ ಈ ಮಠಗಳ ಗುರುಗಳು, ಸ್ವಾಮೀಜಿಗಳವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ ಹಾಗೂ ಕ್ಷೇತ್ರದ ಜನತೆಯ ಮೇಲೆ ಆಶೀವರ್ಾದವೂ ಇದೆ ಎಂದರಲ್ಲದೆ ಪಟ್ಟಣದಲ್ಲಿ ರೇಣುಕಜಯಂತಿ ಮಾಡುವ ಆಲೋಚನೆ ಇದೆ ಇದಕ್ಕೆ ಗುರುಗಳು ಅವಕಾಶ ನೀಡಿದರೆ ಎಲ್ಲಾ ಸಮಾಜದವರ ಒಡಗೂಡಿ ರೇಣುಕಜಯಂತಿಯನ್ನು ಮಾಡೋಣ ಎಂದು ಸಲಹೆ ನೀಡಿದರು.
ಮಾದಿಹಳ್ಳಿಯ ಹಿರೇಮಠದ ಪೀಠಾಧ್ಯಕ್ಷ ಚನ್ನಮಲ್ಲಿಕಾಜರ್ುನಶಿವಾಚಾರ್ಯಸ್ವಾಮೀಜಿ ಮಾತನಾಡಿ, 22ವರ್ಷಗಳ ಹಿಂದೆ ಮಾದಿಹಳ್ಳಿ ಮಠ ಅಭಿವೃದ್ದಿಯಿಂದ ದೂರ ಉಳಿದಿತ್ತು,  ಇತ್ತೀಚೆಗೆ ಭಕ್ತರು ಹೆಚ್ಚಿದ ಹಾಗೂ ಶಾಸಕರ ಬೆಂಬಲದಿಂದ ಮಠವು ಅಭಿವೃದ್ದಿಯತ್ತ ಸಾಗುತ್ತಿದೆ, ಮಠದ ಬೆಳವಣಿಗೆಗೆ ಭಕ್ತರ ಮಾರ್ಗದರ್ಶನವೂ ಅಗತ್ಯ ಎಂದ ಅವರು,  ನಾವು ಮಠಕ್ಕೆ ಪಟ್ಟಾಧಿಕಾರ ಹೊಂದಿ 22ವರ್ಷಗಳಾಗಿದೆ, ನಂತರದ 3ವರ್ಷಗಳಲ್ಲಿ 25ನೇ ವರ್ಷದ ಪಟ್ಟಾಧಿಕಾರ ನಡೆಯಲಿದ್ದು ಆ ಸಮಯದಲ್ಲಿ ಶ್ರೀಮಠದಲ್ಲಿ ಕಟ್ಟಲಾಗುತ್ತಿರುವ ಯಾತ್ರಾನಿವಾಸ ಪೂರ್ಣಗೊಳ್ಳಲಿದೆ ಅದನ್ನು ಶಾಸಕರ ಹಾಗೂ ಬಾಳೆಹೊನ್ನೂರು ಮಠದ ಪ್ರಸನ್ನರೇಣುಕಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಉದ್ಘಾಟನೆ ನೆರವೇರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ ಸೇವಕ ಕೆ.ವಿ.ನಿವರ್ಾಣಸ್ವಾಮಿ ಮಾತನಾಡಿ, ಗುರುಗಳ ಆಶೀವರ್ಾದವೇ ಭಕ್ತರ ಅಭಿವೃದ್ದಿ, ದಾನ ಕೊಡುವುದು ಎಷ್ಟು ಮುಖ್ಯವೋ ಕೊಟ್ಟಂತಹ ದಾನಗಳನ್ನು ಸಮಾಜದ ಅಭಿವೃದ್ದಿಗೆ ಸದ್ವಿನಿಯೋಗ ಪಡಿಸಿಕೊಳ್ಳುವುದು ಉತ್ತಮ, ಗುರುಗಳ ಮೇಲೆ ನಂಬಿಕೆ ಇಟ್ಟಂತಹವರು ಅಭಿವೃದ್ದಿ ಪಥದತ್ತ ಸಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಿವಾನಂದಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶಶಿವಾಚಾರ್ಯಸ್ವಾಮೀಜಿ, ಸಿದ್ದರಬೆಟ್ಟ, ಬೆಳ್ಳಾವಿಮಠ, ಹುಲ್ಲಿಕೆರೆ ಮಠದ ಪೀಠಾಧ್ಯಕ್ಷರುಗಳು  ಸೇರಿದಂತೆ ಹರಗುರುಚರಮೂತರ್ಿಗಳು ಹಾಗೂ ತಾ.ಪಂ.ಸದಸ್ಯರುಗಳಾದ ಜಯಮ್ಮ, ಸಚ್ಚಿನ್, ಆಲದಕಟ್ಟೆತಿಮ್ಮಣ್ಣ ಸೇರಿದಂತೆ  ಇಂದ್ರಮ್ಮ, ಗಂಗಾಧರಯ್ಯ, ರುದ್ರಸ್ವಾಮಿ ಮತ್ತಿತರರು  ಉಪಸ್ಥಿತರಿದ್ದರು.



Tuesday, March 22, 2016



ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಚಿಕ್ಕನಾಯಕನಹಳ್ಳಿ,ಮಾ.22 : ದೇವರಿಗೆ ಬಲಿ ಬದಲು ಬಂಢಾರ ಅಪರ್ಿಸಿ, ಕುಲ ಕಸುಬು, ಸಂಪ್ರದಾಯಿಗಳನ್ನು ಮೈಗೂಡಿಸಿಕೊಳ್ಳಿ ಎಂದು ದೇವದುರ್ಗ ಶಾಖಾ ಮಠದ ತಿಂಥಣಿ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ, ಮಾಕುವಳ್ಳಿ ಪಾಳ್ಯದ ಗೊಲ್ಲರಹಟ್ಟಿಯ ಏಳು ಬೆಡಗಿನ ಒಡೆಯ ಕುರುಬರ ಕುಲದೈವ ಶ್ರೀಗುರು ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಾಲು ಮತ ಸಮಾಜ ಹಾಲಿನಷ್ಟೇ ಪವಿತ್ರ. ಬೀರಪ್ಪನ ಸೇವೆಯ ಭಂಡಾರ, ಕಬ್ಬಿಣದ ಹಲಗಿನ ಸೇವೆ, ಗುಂಡಿನ ಸೇವೆ, ತಲೆಯ ಮೇಲೆ ಕಾಯಿ ಹೊಡೆಯುವ ಸೇವೆಯ ಮಹತ್ವವನ್ನು  ಮೊದಲು ಅರಿಯಿರಿ ಎಂದರು.
  ಕನಕಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜಕ್ಕೆ 5ಸಾವಿರ ವರ್ಷಗಳ ಇತಿಹಾಸವಿದೆ. ಹಾಲುಮತಸ್ಥರು ಜಾನಪದ ಶೈಲಿಯಾದ ಡೊಳ್ಳು ಸಂಪ್ರದಾಯ ಹಾಗೂ ಕಂಬಳಿ ನೇಯ್ಗೆಯನ್ನು ಕುಲ ಸಂಸ್ಕೃತಿಯ ಉಳಿವಿನ ಭಾಗವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಕುಲಧೈವ ಬೀರಲಿಂಗೇಶ್ವ ನಮ್ಮಲ್ಲಿರುವ ದ್ವೇಷ, ಅಸೂಯೆ, ಸೇಡಿನ ಮನೋಭಾವಗಳನ್ನು ಬಲಿಯಾಗಿ ಅಪರ್ಿಸಿ, ಭಕ್ತಿಯ ಮೂಲಕ ಪರೋಪಕಾರದ ಮೌಲ್ಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಅದ್ದೂರಿ ಹಬ್ಬ ಆಚರಿಸುವ ಬದಲು ಊರಿನಲ್ಲಿ ಸೋರುವ ಶಾಲೆಯ ಸೂರುಗಳನ್ನು ಸರಿಪಡಿಸಲು ಹಣ ವ್ದಯ ಮಾಡಿ ಎಂದರು. ಬಡ ಕುಟುಂಬಗಳ ಹಾಗೂ ಶಿಕ್ಷಣದ ಅಭಿವೃದ್ಧಿಗೆ ಶಾಲೆ ಹಾಗೂ ವಸತಿಗಳನ್ನು ಸ್ಥಾಪಿಸಿ ಶಿಕ್ಷಣದ ಪ್ರಗತಿಗೆ ಒತ್ತು ನೀಡಿದರೆ ಸಮಾಜ ಮೇಲೆ ಬರುತ್ತದೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಕುರುಬ ಸಮಾಜವು ಹಿಂದುಳಿದ ವರ್ಗಗಳನ್ನು ಒಟ್ಟಿಗೆ ಕರೆದೊಯ್ಯುವ ದೊಡ್ಡ ಸಮಾಜವಾಗಿದ್ದು ನಮ್ಮ ಆಚಾರ ವಿಚಾರಗಳನ್ನು ನಾವೂ ಎಂದು ಬಿಡಬಾರದು ಎಂದರು.
 ತಾಲ್ಲೂಕಿನ 22 ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಸದನದಲ್ಲಿ ಚಚರ್ೆಯಾಗಿದ್ದು ಈ ವರ್ಷವೇ ನೀರು ಹರಿಸುವ ಇಂಗಿತವನ್ನು ಸಕರ್ಾರ ಒಪ್ಪಿಕೊಂಡಿದ್ದು 94 ಕೋಟಿ ವೆಚ್ಚದ ಗುರುತ್ವಾಕರ್ಷಣೆ ನಾಲಾ ಕಾಲುವೆ ಮೂಲಕ ಬೋರನ ಕಣಿವೆ ಭಾಗಕ್ಕೂ ನದಿ ನೀರು ಹರಿಸುವ ಹೇಮಾವತಿ ನಾಲಾ ಕಾಮಗಾರಿ ವಿಚಾರ ಸೋಮವಾರ  ಸದನದಲ್ಲಿ ಚಚರ್ೆಯಾಗಿದೆ ಎಂದರು.
 ಶೆಟ್ಟಿಕೆರೆ ಮೂಲಕ ಹಾದು ಹೋಗಿರುವ ತಿಪಟೂರು-ಚಿಕ್ಕನಾಯಕನಹಳ್ಳಿ ರಸ್ತೆಗೆ ರೂ.34 ಕೋಟಿ ಹಣ ಬಿಡುಗಡೆಯಾಗಿದೆ. 5 ಮೀಟರ್ ರಸ್ತೆಯನ್ನು 7 ಮೀಟರ್ಗೆ ವಿಸ್ತರಿಸುವ ತೀಮರ್ಾನ ಕೈಗೊಳ್ಳಲಾಗಿದೆ, ಇದೇ ತಿಂಗಳ 28ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಏಪ್ರಿಲ್ನಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು. 
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಜಾತ್ರೆಗಳ ಮೂಲಕ ಸಮಾಜದ ಎಲ್ಲರೂ ಒಗ್ಗೂಡಲು ಸಾಧ್ಯ ಎಂದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯರುಗಳಾದ ಕಲ್ಲೇಶ್, ಮೈಲಾರಪ್ಪ, ಜಿ.ನಾರಾಯಣ್, ತಾ.ಪಂ. ಸದಸ್ಯರಾದ ಜಯಮ್ಮ, ಗ್ರಾ.ಪಂ. ಅಧ್ಯಕ್ಷೆ ನಾಗಮಣಿ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಜಗದೀಶ್ ಒಡೆಯರ್, ಸೀಮೆಎಣ್ಣೆ ಕೃಷ್ಣಯ್ಯ, ಶರಣಪ್ಪಸ್ವಾಮೀಜಿ, ಜಯರಾಮಯ್ಯ, ಬೀರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ನಿಂಗರಾಜು, ಬಾನು ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು. 
ಸಮಾರಂಭದಲ್ಲಿ ಹಾಲು ಮತ ಸಮಾಜದ ಇತಿಹಾಸ ಪುರುಷರ ಕಥೆಯನ್ನು ತಲ್ಲೂರು ಗದಗದ ಹರಿಕಥಾ ವಿದ್ವಾಂಸ ಬಸವರಾಜು ಜೆ. ಬಂಟನೂರು ಇವರಿಂದ ಸುಗಮ ಸಂಗೀತ, ಗೊರಪ್ಪನವರಿಂದ ಬೀರಲಿಂಗೇಶ್ವರ ಬಹುಪರಾಕ್ ಉಗೇ ಉಗೇ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು. 


ಸಾಶಿಮ ನೆನಪು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮಾ.22 : ಕನ್ನಡ ಸಾಹಿತ್ಯದ ವಿಶಿಷ್ಟ ಪ್ರತಿಭೆ ಸಾ.ಶಿ.ಮರುಳಯ್ಯ ಅವರನ್ನು ತಾಲ್ಲೂಕಿನ ಸಾಹಿತ್ಯ ಲೋಕ ಸರಿಯಾಗಿ ನಡೆಸಿಕೊಳ್ಳದಿರುವುದು ವಿಷಾದದ ಸಂಗತಿ ಎಂದು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. 
 ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ವಿಭಾಗ, ನವೋದಯ ಹಿರಿಯ ವಿದ್ಯಾಥರ್ಿ ಸಂಘ ಹಾಗೂ ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದ ವತಿಯಿಂದ ಮಂಗಳವಾರ ನಡೆದ ಸಾ.ಶಿ.ಮ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಭಾಷೆ, ನೆಲದ ಮೌಲ್ಯಗಳು ಕುಸಿಯುತ್ತಿವೆ. ನಾಡು ನುಡಿಯ ಬಗ್ಗೆ ಯುವಸಮುದಾಯ ಜಾಗೃತವಾಗಬೇಕಿದೆ ಎಂದ ಅವರು ಸಾ.ಶಿ.ಮ ಅವರಲ್ಲಿ ಅದ್ಭುತವಾದ ಭಾಷಾ ಸಂಪತ್ತು ಅಡಕವಾಗಿದ್ದ ಕಾರಣಕ್ಕಾಗಿಯೇ ಈ ನೆಲದಲ್ಲಿ ಭಾಷೆಗೆ ಸಂಬಂಧಿಸಿದ ಅಪಾರವಾದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಯಿತು. ತಮ್ಮ ಕೊನಯುಸಿರೆಳೆಯುವ ಸಂದರ್ಭದ ತನಕವೂ ಅವರು ನಿರಂತರ ಅಧ್ಯಯನಶೀಲರಾಗಿ ಉಳಿದಿದ್ದರು.  ಅಂತಹವರ ವ್ಯಕ್ತಿತ್ವ ನಮಗೆ ದಾರಿದೀಪವಾಗಬೇಕು ಎಂದರು.
     ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿದರ್ೇಶಕರಾದ ಬಿ.ಎಸ್.ಲಿಂಗದೇವರು ಮಾತನಾಡಿ, ಸಾ.ಶಿ.ಮ ಬದುಕು ನಮ್ಮಂತವರಿಗೆ  ಆದರ್ಶ.  ಇಂದು ವಿದ್ಯಾಥರ್ಿಗಳಲ್ಲಿ ಬೌದ್ಧಿಕತೆಗಿಂತ ಯಾತ್ರಿಕತೆಯೇ ಹೆಚ್ಚಾಗಿದೆ, ಪದವಿ ಕೇವಲ ಉದ್ಯೋಗಕ್ಕೆ ಮೀಸಲಾಗಬಾರದು ಎಂದರು.
   ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮಾತನಾಡಿ, ತಾಲ್ಲೂಕಿನ ಶ್ರೇಷ್ಠ ಸಾಹಿತಿಗಳಾದ ತೀ.ನಂ.ಶ್ರೀ ಹಾಗೂ ಸಾಶಿಮ ಅವರನ್ನು  ಪ್ರತಿಮೆಗಳನ್ನಾಗಿಸದೇ ಅವರ ಸಾಹಿತ್ಯದ ಗಂಭೀರ ಅಧ್ಯಯನ ಆಗಬೇಕಿದೆ ಎಂದರು.
      ಸಮಾರಂಭದಲ್ಲಿ ಸಾ.ಶಿ.ಮ ಕುರಿತು ಗೋವಿಂದರಾಜು ಮಾತನಾಡಿದರು. ಪ್ರಿನ್ಸಿಪಾಲ್ ಪ್ರೊ.ಎಸ್.ಎಲ್. ಶಿವಕುಮಾರಸ್ವಾಮಿ ಹಾಜರಿದ್ದರು. ವಿದ್ಯಾಥರ್ಿನಿ ರೋಜಾ ನಿರೂಪಿಸಿ, ಬಸವರಾಜು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ರವಿಕುಮಾರ್ ವಂದಿಸಿದರು.

ವಿದ್ಯಾಥರ್ಿ ಸಂಗಾತಿ ಪುಸ್ತಕ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮಾ.22 : ಪುಸ್ತಕಗಳು ಚರಿತ್ರೆ ಹಾಗೂ ಸರ್ವಕಾಲೀನ ಸತ್ಯವನ್ನು ಕಟ್ಟಿಕೊಡುವಲ್ಲಿ ಮಹತ್ತರವಾದ ಪಾತ್ರ ವಯಿಸುತ್ತವೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಸವಲಿಂಗಪ್ಪ ತಿಳಿಸಿದರು.
 ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಕನ್ನಡ ಪುಸ್ತಕ ಪ್ರಾಧಿಕಾರದ   ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದ ವತಿಯಿಂದ ಏಪರ್ಾಡಾಗಿದ್ದ ವಿದ್ಯಾಥರ್ಿ ಸಂಗಾತಿ ಪುಸ್ತಕ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ,  ಯುವಜನತೆ ಚಂಚಲ ಮನಸ್ಥಿತಿಯಿಂದ ಹೊರಬಂದು ಸಮಚಿತ್ತ ರೂಡಿಸಿಕೊಳ್ಳು ಪುಸ್ತಕಗಳು ನೆರವಾಗುತ್ತವೆ ಎಂದರು. 
ಪ್ರೋ ಶ್ರೀನಿವಾಸಪ್ಪ ಮಾತನಾಡಿ, ಓದಿನ ಅಭಿರುಚಿ ಜ್ಞಾನ, ವ್ಯಕ್ತಿತ್ವ ವಿಕಾಸನ ಹಾಗೂ ಸಾಮರಸ್ಯದ ಬದುಕಿಗೆ ಸಹಕಾರಿಯಾಗುತ್ತದೆ, ಮೌಲ್ಯಯುತ ಓದು ಜಗತ್ತಿನ ದಿವ್ಯ ದರ್ಶನ ಮಾಡಿಸುತ್ತದೆ ಎಂದರು.
  ಪ್ರಿನ್ಸಿಪಾಲ್ ಪ್ರೊ.ಸಿ.ಜಿ.ಸುರೇಶ್ ಮಾತನಾಡಿ, ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದಡಿಯಲ್ಲಿ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳು ಹೆಚ್ಚು ಭಾಗವಯಿಸುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. 
 ಉಪನ್ಯಾಸಕರುಗಳಾದ ಚಂದ್ರಶೇಖರ್, ಪ್ರಸನ್ನಕುಮಾರ್, ಶಿವರಾಮಯ್ಯ, ಶೈಲೇದ್ರ ಕುಮಾರ್, ದರ್ಶನ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಆರ್. ಶೇಖರ್,ಪ್ರಾದ್ಯಾಪಕರಾದ ಕೃಷ್ಣಮೂತರ್ಿ. ಎನ್., ಕೃಷ್ಣನಾಯಕ್, ಗೋವಿಂದ ನಾಯ್ಕ, ಮಹದೇವಯ್ಯರವರು ಹಾಜರಿದ್ದರು.

ಆಟೋಗೆ ಲಾರಿ ಡಿಕ್ಕಿ : ಪ್ರಾಣಾಪಾಯವಿಲ್ಲ
ಚಿಕ್ಕನಾಯಕಹಳ್ಳಿ.ಮಾ.22 : ವೇಗವಾಗಿ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಎದುರು ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಬರುತ್ತಿದ್ದ ಆಟೋ, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ, ಆಟೋ, ಕಾರು ಮೂರು ವಾಹನಗಳು ಜಖಂ ಗೊಂಡಿದ್ದು ಯಾವುದೇ ಪ್ರಾಣಪಾಯವಾಗಿರದ ಘಟನೆ ಚಿ.ನಾ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.,
ಪಟ್ಟಣದ ಹೊರವಲಯದ ಕಾಡೇನಹಳ್ಳಿ ತಿರುವಿನಲ್ಲಿ ಮಂಗಳವಾರ ಮದ್ಯಾಹ್ನ 2ಗಂಟೆ ಸುಮಾರಿನಲ್ಲಿ ಕಿಬ್ಬನಹಳ್ಳಿ ಕ್ರಾಸ್ ಕಡೆಯಿಂದ ಚಿ.ನಾ.ಹಳ್ಳಿ ಮಾರ್ಗವಾಗಿ ಬರುತ್ತಿದ್ದ ಕ್ಯಾಂಟರ್ಗೆ ಕಾರೊಂದು ಡಿಕ್ಕಿ ಹೊಡೆದಿದ್ದು ಲಾರಿಯ ಹಿಂಬದಿ ಬರುತ್ತಿದ್ದ ಆಟೋ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ, ಆಟೋ ಹಳ್ಳಕ್ಕೆ ಬಿದ್ದಿದ್ದು ಯಾವುದೇ ಪ್ರಾಣಪಾಯ ಸಂಬವಿಸಿಲ್ಲ.
ಕಾಡೇನಹಳ್ಳಿ ಬಳಿಯ ತಿರುವಿನಲ್ಲಿ ಯಾವಾಗಲೂ ಅಪಘಾತಗಳು ಸಂಬವಿಸುತ್ತಲೇ ಇದ್ದು ಅನೇಕ ಬಾರಿ ಅಪಘಾತಗಳು ನಡೆದಾಗ ಸಾವುಗಳು ಸಂಬವಿಸುತ್ತಿವೆ, ಈ ಭಾಗದಲ್ಲಿ ತಿರುವಿನ ಸೂಚನ ಫಲಕ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿರಾಜ್ಕುಮಾರ್ರವರು ತೀರ್ಥಪುರ ತಾ.ಪಂ.ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ತೀರ್ಥಪುರ ಕೃಷಿ ಸಹಕಾರ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು. ಸ್ಥಳೀಯ ಬ್ಯಾಂಕ್ನ ಅಧ್ಯಕ್ಷ ರುದ್ರಮುನಿ ಮತ್ತು ನಿದರ್ೇಶಕರು ಉಪಸ್ಥಿತರಿದ್ದರು.








Wednesday, March 16, 2016


ಅಕ್ಷರ ದಾಸೋಹದಲ್ಲಿ ಗೋಲ್ಮಾಲ್ ಗ್ರಾಮಸ್ಥರಿಂದ
 ಆರೋಪ 

ಚಿಕ್ಕನಾಯಕನಹಳ್ಳಿ : ಮಕ್ಕಳಿಗೆ ನೀಡುವ ಬಿಸಿಯೂಟದ ದಾಸ್ತಾನಿನಲ್ಲೂ ಗೋಲ್ಮಾಲ್ ಮಾಡಿ, ಅಳತೆಯಲ್ಲಿ ಮೊಸ ಮಾಡುವ ಮೂಲಕ ಅದರಲ್ಲೂ ಹಣ ಸಂಪಾದಿಸುವ ಹುನ್ನಾರ ತಾಲ್ಲೂಕಿನಾದ್ಯಂತ ನಡೆಯುತ್ತಿತ್ತು, ಈಗ ತಾಲೂಕಿನ ಗಂಟಿಗನಪಾಳ್ಯದಲ್ಲಿ ಗ್ರಾಮಸ್ಥರು ಮಾಲು ಸಮೇತ ಹಿಡಿದಿರುವ ಘಟನೆ ನಡೆದಿದೆ. 
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗಂಟಿಗನಪಾಳ್ಯದಲ್ಲಿರುವ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಮಕ್ಕಳಿಗೆ ನೀಡುವ ಬಿಸಿಯೂಟಕ್ಕಾಗಿ ಅಕ್ಷರ ದಾಸೋಹದ ವತಿಯಿಂದ ಬೇಳೆ ವಿತರಿಸಲಾಗುತ್ತಿತ್ತು,   ಬಿಸಿಯೂಟಕ್ಕಾಗಿ ಶಾಲೆಗಳಿಗೆ ನೀಡುವ ಬೇಳೆಯು ಸರಬರಾಜಿಗಿಂತ ಕಡಿಮೆ ವಿತರಿಸುತ್ತಿದ್ದದ್ದನ್ನು ಗ್ರಾಮಸ್ಥರು ಕಂಡು ಬೇಳೆಯ ಲಾರಿಯನ್ನು ದಾಸ್ತಾನಿನ ಸಮೇತ ಗ್ರಾಮಸ್ಥರು ಹಿಡಿದು ನಿಲ್ಲಿಸಿ ಅಕ್ಷರ ದಾಸೋಹದ ಹೆಸರಿನಲ್ಲೂ ನಡೆಯುತ್ತಿರುವ ಭ್ರಷ್ಠತೆಯನ್ನು ಖಂಡಿಸಿದ್ದಾರೆ.
ಬೇಡಿಕೆಯ ಪಟ್ಟಿಯಂತೆ ಅಲಾಟ್ಮೆಂಟ್ ಸಂಬಂಧಿಸಿದ ಇಲಾಖೆ ಮಾಡಿದ್ದರೂ, ಶಾಲೆಗಳಿಗೆ ತೂಕಮಾಡಿಕೊಡುವಾಗ ತೂಕದಲ್ಲಿ ಮೋಸಮಾಡಿ ಶಾಲೆಗೆ ಅಕ್ಕಿ-ಬೇಳೆ ಇಳಿಸುವ ಸಂದರ್ಭದಲ್ಲಿ ಗ್ರಾಮಸ್ಥರು ತೂಕದಲ್ಲಿ ಮಾಡುತ್ತಿರುವ ಮೋಸವನ್ನು ಪತ್ತೆಹಚ್ಚಿದ್ದಾರೆ. ಮೋಸ ಸಾಭೀತಾಗುತ್ತಿದ್ದಂತೆಯೇ ಗ್ರಾಮಸ್ಥರು ಮೇಲಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಅಕ್ಷರ ದಾಸೋಹದ ಹೆಸರಿನಲ್ಲಿ  ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಕ್ಷರ ದಾಸೋಹವನ್ನಾಗಿಸಿಕೊಂಡು ಮಕ್ಕಳ ಆಹಾರದಲ್ಲೂ ಲೂಟಿ ಮಾಡುತ್ತಿದ್ದಾರೆಂದು ಪೋಷಕರು ಆರೋಪಿಸಿದರು.
 ಶಾಲೆಗೆ ವಿತರಿಸಿಬೇಕಾದ 8ಕೆ.ಜಿ.ಯ ಬೇಳೆಯ ಬದಲು 5.900ಗ್ರಾಂ ಬೇಳೆ ವಿತರಿಸಿದ್ದರು. ಈ ರೀತಿ ಕಡಿಮೆ ಬೇಳೆ ನೀಡುತ್ತಿರುವ ಬಗ್ಗೆ ಪಕ್ಕದ ಶಾಲೆಗಳಲ್ಲೂ ವಿತರಿಸಿದ್ದಾರೆ, ತಾಲೂಕಿನ ಹಲವು ಶಾಲೆಗಳಲ್ಲಿ ಈ ರೀತಿಯ ದೂರುಗಳು ಕೇಳಿಬಂದಿದೆ. ನಿಗಧಿಯಾದ  ಬೇಳೆಗಿಂತ 5ಕೆ.ಜಿ, 3ಕೆ.ಜಿಯಷ್ಟು ಕಡಿಮೆ ಬೇಳೆ ವಿತರಿಸುತ್ತಿದ್ದಾರೆ,  ಲಾರಿಯಲ್ಲಿ ತಂದಿದ್ದ ಬೇಳೆಯ ತೂಕದಲ್ಲಿನ ಮೋಸದ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಗ್ರಾಮಸ್ಥರು ಮಾಧ್ಯಮದವರಿಗೆ ತಿಳಿಸಿದರು.
ಎಸ್.ಡಿ.ಎಂ.ಸಿ ಸದಸ್ಯ ದಯಾನಂದ್ ಮಾತನಾಡಿ, ಬಿಸಿಯೂಟ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ ಆದರೆ ಶಾಲೆಗಳಲ್ಲಿ ಬಿಸಿಯೂಟಕ್ಕಾಗಿ ನೀಡುವ ದಾಸ್ತಾನು ಸರಬರಾಜಿನಲ್ಲಿ ಕೆಲವು ಕೆ.ಜಿಗಳಷ್ಟು ಕಡಿಮೆ ವಿತರಿಸಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು, ಈ ಬಗ್ಗೆ ನಾವು ಪರಿಶೀಲಿಸಲಿರಲಿಲ್ಲ,  ಆದರೆ ಕಳೆದ ಬಾರಿ ಬೇಳೆಯನ್ನು ವಿತರಿಸಿದವರು ತೂಕ ಮಾಡದೆ, ಅಂದಾಜಿನಲ್ಲಿ ಬೇಳೆಕೊಟ್ಟು ಕ್ಷಣಮಾತ್ರದಲ್ಲಿ ಬೇರೆ ಶಾಲೆಗಳಿಗೆ ತೆರಳಿದ್ದರು. ಈ ಬಾರಿ ಆಗಾಗಬಾರದೆಂದು ಲಾರಿ ಬರುವ ವೇಳೆಗೆ  ನಾವು ಶಾಲೆಯ ಬಳಿ ಇದ್ದು,  ನಾವು ಬೇಳೆಯನ್ನು ತೂಕ ಮಾಡಿದಾಗ ದಾಖಲೆಯಲ್ಲಿ ನೀಡಿದಕ್ಕಿಂತ ಕಡಿಮೆ ಬೇಳೆ ವಿತರಿಸಿರುವುದು ಕಂಡುಬಂದಿತು, ಇದೇ ರೀತಿ ಹಲವಾರು ವರ್ಷಗಳಿಂದ ಆಹಾರದ ದಾಸ್ತಾನನ್ನು ನೀಡುತ್ತಿದ್ದು ಇದರಿಂದ ಮಕ್ಕಳಿಗೆ ನೀಡುವ ಬೇಳೆಯ ಹಣವೆಲ್ಲಾ ಯಾರಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು. 
ಗಂಟಿಗನಹಳ್ಳಿ ಗ್ರಾಮಸ್ಥ ಉಮೇಶ್ ಮಾತನಾಡಿ, ಶಾಲೆಗಳಿಗೆ ಬಿಸಿಯೂಟ ಆರಂಭವಾದಾಗಿನಿಂದಲೂ  ಬೇಳೆ ನೀಡಲಾಗುತ್ತಿದೆ ಅದೇ ರೀತಿ ಅಕ್ಕಿ ಇನ್ನಿತರ ದಾಸ್ತಾನನ್ನು ವಿತರಿಸಲಾಗುತ್ತಿದೆ ಆಗಿನಿಂದಲೂ ಈಗಿನವರೆಗೆ ಎಷ್ಟು ಲಕ್ಷ ಟನ್ ದಾಸ್ತಾನನ್ನು ಅಕ್ರಮವಾಗಿ ಕೊಳ್ಳೆ ಹೊಡೆಯಲಾಗಿದೆ. ಮಕ್ಕಳಿಗೆ ನೀಡುವ ಆಹಾರದಲ್ಲೂ ಕಳವು ಮಾಡುತ್ತಿರುವ ಬಗ್ಗೆ ಸಂಬಂಧಿಸಿದ  ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ  ಸಮಸ್ಯೆ ಬಗೆಹರಿಯುತ್ತಿಲ್ಲ, ಸಕರ್ಾರ ಕೂಡಲೇ ಮಕ್ಕಳಿಗೆ ನೀಡುವಂತಹ ಆಹಾರದಲ್ಲೂ ಲೋಪವೆಸಗುವಂತಹವರ ವಿರುದ್ದ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರು ತೂಕ ಪರಿಶೀಲಿಸುವಾಗ ಲಾರಿಯ ಜೊತೆಯಲ್ಲಿ ಬಂದಿದ್ದಂತಹ ವ್ಯಕ್ತಿ  ಹಾಗೂ ಚಾಲಕರಿಬ್ಬರು ಲಾರಿಯನ್ನು ಬಿಟ್ಟು ಜಾಗ ಖಾಲಿಮಾಡಿದ್ದರು. ಈ ಘಟನೆ ನಡೆದು ಹಲವು ಗಂಟೆ ಕಳೆದರು ಸಂಬಂಧಿಸಿದ ಅಧಿಕಾರಿಗಳಾಗಲಿ, ಆಹಾರ ಸರಬರಾಜು ಗುತ್ತಿಗೆಪಡೆದರಾಗಲಿ ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರಲ್ಲಿ ಬೇಸರ ಉಂಟುಮಾಡಿತ್ತು. 
ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಆರೋಪ:   ಹೆಸರು ಹೇಳಲು ಇಚ್ಚಿಸದಂತಹ ಕೆಲವು ಶಿಕ್ಷಕರುಗಳು ಮಾಧ್ಯಮದವರೊಂದಿಗೆ ಮಾತನಾಡಿ, ಇಡೀ ತಾಲ್ಲೂಕಿಗೆ ಸರಬರಾಜಗುತ್ತಿರುವ ಆಹಾರಧಾನ್ಯ ಕಡಿಮೆ ಸರಬರಾಜಾಗುತ್ತಿದ್ದು,  ಶಾಲೆಗಳ ಮಕ್ಕಳಿಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಸಕರ್ಾರ ನೀಡಿದರೂ ಸರಬರಾಜು ಮಾಡುವ ಗುತ್ತಿಗೆದಾರರು  ಶಾಲೆಗೆ ಕಡಿಮೆ ಸರಬರಾಜು ಮಾಡುತ್ತಿದ್ದರು, ನಾವು ತೂಕಮಾಡುವವರನ್ನು  ಕೇಳಿದರೆ ನಾವು ಕೊಟ್ಟಷ್ಟು ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಿ ಎಂದು ಗದರುತ್ತಾರೆ ಎಂದರಲ್ಲದೆ,  ಇದರಿಂದ ಮಕ್ಕಳಿಗೆ ಸರಿಯಾಗಿ ಮಧ್ಯಾಹ್ನದ ಬಿಸಿಯೂಟ ಮಾಡಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ನಾವೇ ಅಕ್ಕಪಕ್ಕದ ಶಾಲೆಗಳಲ್ಲಿ ಸಾಲದ ರೂಪದಲ್ಲಿ ಅಕ್ಕಿ ಬೇಳೆಗಳನ್ನು ತೆಗೆದುಕೊಳ್ಳುತ್ತಿದ್ದು ನಮಗೆ ಬಂದ ನಂತರ ಅದನ್ನು ಅವರಿಗೆ ಹಿಂತಿರುಗಿಸುವಂತ ಪರಿಸ್ಥಿತಿ ಇದ್ದು ನಾವು ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ, ಅಧಿಕಾರಿಗಳ  ಕೈಕೆಳಗೆ ಕೆಲಸ ಮಾಡುತ್ತಿರುವುದರಿಂದ ಅವರು ಮಾಡುವಂತಹ ಕೆಲವೊಂದು ಉದ್ದೇಶಪೂರ್ವಕ ಅಸಡ್ಡೆಗಳ ಬಗ್ಗೆ ಮಾತನಾಡುವಂತಿಲ್ಲವಾಗಿದೆ ಎಂದರು.


Tuesday, March 15, 2016


ಬೈಪಾಸ್ ರಸ್ತೆಗೆ ತೋಟದಲ್ಲಿ ಮಾಡುವುದಕ್ಕೆ ರೈತರ
ವಿರೋಧ 

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿ 150ಎ ಚಾಮರಾಜನಗರ-ಜೇವಗರ್ಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ನಿಮರ್ಿಸಲು ಮೇಲನಹಳ್ಳಿ ಬಳಿ ಸವರ್ೆ ಕಾರ್ಯ ನಡೆಸಲಾಯಿತು, ಈ ಸಮಯದಲ್ಲಿ ಆ ಭಾಗದ ರೈತರು ಸವರ್ೆಕಾರ್ಯಕ್ಕೆ ತಡೆಯೊಡ್ಡಿ ಚಿ.ನಾ.ಹಳ್ಳಿ ಪಟ್ಟಣದ ಮುಖಾಂತರವೇ ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿಮರ್ಿಸಲು ಆಗ್ರಹಿಸಿದರು.
 ಬೆಂಗಳೂರಿನ ಇ.ಐ.ಟಿ ಟೆಕ್ನಾಲಜಿ ಕಂಪನಿಯ ಸವರ್ೆಯರ್ಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ನಕ್ಷೆ ತಯಾರಿಸಲು 9ಕಿ.ಮೀ ವ್ಯಾಪ್ತಿಯಲ್ಲಿ ಸವರ್ೆ ನಡೆಸಬೇಕು, ಈಗಾಗಲೇ ತಾಲ್ಲೂಕಿನ ತರಬೇನಹಳ್ಳಿ, ಕಾಡೇನಹಳ್ಳಿ, ಕೇದಿಗೆಹಳ್ಳಿ, ರಾಯಪ್ಪನಪಾಳ್ಯ ಹಾಗೂ ಆಲದಕಟ್ಟೆಯ ತಾಲ್ಲೂಕಿನ 8.ಕಿಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಸವರ್ೆ ನಡೆಸಿದ್ದಾರೆ, ಅದೇ ರೀತಿ ಸೋಮವಾರ ಮೇಲನಹಳ್ಳಿಯ ಗ್ರಾಮದೊಳಗೆ ಸವರ್ೆ ಕಾರ್ಯ ಮಾಡುವಾಗ ಕೆಲವು ರೈತರು ಹಾಗೂ ಗ್ರಾಮಸ್ಥರು ಸವರ್ೆ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ, ಗ್ರಾಮದೊಳಗಿನ ಮಾರ್ಗವನ್ನು ಬಿಟ್ಟು ಗ್ರಾಮದ ಹೊರಭಾಗದಲ್ಲಿನ ಮಾರ್ಗದಲ್ಲಿ ಮಂಗಳವಾರ ಪೋಲಿಸ್ ಬಂದೋಬಸ್ತ್ನಲ್ಲಿ ಸವರ್ೆ ಕಾರ್ಯ ನಡೆಸಿದರು ಇಲ್ಲಿಯೂ ರೈತರು ಅಡ್ಡಿಪಡಿಸಿದರು. ಪೊಲೀಸರ ನಿಗಾವಣೆಯಲ್ಲಿ ಸವರ್ೆಕಾರ್ಯ ನಡೆಸಿದರು.
 ಮೇಲನಹಳ್ಳಿಯ ಗ್ರಾಮದೊಳಗೆ 150ಎ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾದು ಹೋದರೆ ಜಮೀನುಗಳು, ತೋಟಗಳು, ಮನೆಗಳು ಕಳೆದುಕೊಳ್ಳುವ ಭೀತಿಯಲ್ಲಿ ಇರುವುದರಿಂದ ಸವರ್ೆ ಕಾರ್ಯ ಮಾಡಲು ಬಿಡುವುದಿಲ್ಲ ಎಂದು ಸೋಮವಾರ ಆಗ್ರಹಿದ್ದರು. ಮಂಗಳವಾರ ಮೇಲನಹಳ್ಳಿಯ ಬಳಿ ಇರುವ ಮೊರಾಜರ್ಿ ಶಾಲೆಯ ಹಿಂಭಾಗದ ಜಮೀನುಗಳಲ್ಲಿ ಸವರ್ೆ ಕಾರ್ಯ ಮಾಡಲು ಹೋದಾಗ ರೈತರು ವಿರೋಧ ವ್ಯಕ್ತಪಡಿಸಿದರು, ಪೋಲಿಸರ ನೆರವಿನೊಂದಿಗೆ ಸವರ್ೆ ಕಾರ್ಯ ಪ್ರಾರಂಭಿಸಿದರು.
ಒಂದು ವಾರದಿಂದ ಮೇಲನಹಳ್ಳಿ ಬಿಟ್ಟು ಉಳಿದ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ 8.ಕಿ.ಮೀ ಸವರ್ೆ ಕಾರ್ಯ ನಡೆಸಲಾಗಿದೆ, ಮೇಲನಹಳ್ಳಿ ಭಾಗದಲ್ಲಿ ಎರಡು ರೀತಿಯ ಸವರ್ೆಯ ನಕ್ಷೆ ತಯಾರಿಸಿದ್ದು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಸವರ್ೆಯರ್ ಪುನಿತ್.
ತೋಟಗಳಲ್ಲಿ  ಬೈಪಾಸ್ ರಸ್ತೆ ಮಾಡಲು ಗ್ರಾಮಸ್ಥರ ವಿರೋಧ :
   ಗ್ರಾಮಸ್ಥ ರಮೇಶ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಮೂಲಕ ರಸ್ತೆ ಕಾಮಗಾರಿ ಮಾಡಿದರೆ 2.ಕಿ.ಮೀನಲ್ಲಿ ರಸ್ತೆ ನಿಮರ್ಾಣ ಮಾಡಬಹುದು, ಬಸವನಗುಡಿ, ಕಾಡೇನಹಳ್ಳಿಯ ಮೂಲಕ ಬೈಪಾಸ್ ರಸ್ತೆ ನಿಮರ್ಾಣ ಮಾಡಿದರೆ 9.ಕಿ.ಮೀ ರಸ್ತೆ ಮಾಡಬೇಕಾಗುತ್ತದೆ ಇದರಿಂದ ಸಕರ್ಾರದ ಬೊಕ್ಕಸಕ್ಕೆ ನೂರಾರು ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ ಎಂದರು.
ಮಾರಸಂದ್ರದ ಸಂಗಮೇಶ್ ಮಾತನಾಡಿ, ನನಗೆ ನಾಲ್ಕು ಎಕರೆ ಜಮೀನು ಇದೆ ಇದರಲ್ಲಿ ಸಾವಿರ ಅಡಿಕೆ, 300ತೆಂಗಿನ ಗಿಡಗಳಿವೆ, ಲಕ್ಷಾಂತರ ರೂ ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸಿದ್ದೇವೆ, ಇದೇ ನಮಗೆ ಜೀವನಕ್ಕೆ ಆಧಾರ, ಇರುವ ಅಲ್ಪಸ್ವಲ್ಪ ಜಮೀನನ್ನು ಸಕರ್ಾರ ವಶಪಡಿಸಿಕೊಂಡರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ, ಅಧಿಕಾರಿಗಳು ಇದೇ ರೀತಿ ಧೋರಣೆ ತಳೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೇಲನಹಳ್ಳಿಯ ದಯಾನಂದ್ ಮಾತನಾಡಿ, ಮೇಲನಹಳ್ಳಿಯ ಮೂಲಕ ಹಾದು ಹೋಗುವ 150ಎ ಬೈಪಾಸ್ ರಸ್ತೆಯಿಂದ ಈ ಭಾಗದಲ್ಲಿನ ಸಾವಿರಾರು ಎಕರೆ ತೆಂಗು, ಅಡಿಕೆ, ಬಾಳೆ, ಬೇವು, ಹುಣಸೇ, ಹಲಸು, ತೇಗ ಮುಂತಾದ ಗಿಡಗಳು ನಾಶವಾಗುತ್ತವೆ, ಇದರಿಂದ ಜೀವನ ನಿರ್ವಹಿಸಲು ತೋಟ, ಜಮೀನುಗಳಿವೆ ಇವುಗಳನ್ನು ಕಳೆದುಕೊಂಡರೆ ನಾವು  ಪಟ್ಟಣಕ್ಕೆ ಗುಳೇ ಹೋಗುವ ಸ್ಥಿತಿ ಎದುರಾಗುತ್ತದೆ ಎಂದರು.

Monday, March 14, 2016


ವಿದ್ಯುತ್ ಶಾಕ್ ವ್ಯಕ್ತಿ ಸಾವು 
ಚಿಕ್ಕನಾಯಕನಹಳ್ಳಿ,ಮಾ.14: ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿ,  ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಕಾತ್ರಿಕೆಹಾಳ್ ಗ್ರಾಮದ ಹೊಸೂರಿನಲ್ಲಿ  ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ ಗ್ರಾಮದ ನಾಗರಾಜು(ರಾಜು) 40 ವರ್ಷ ದುದರ್ೈವಿ, ಸೋಮವಾರ ಬೆಳಗ್ಗೆ ತಾನು ಸಾಕಿದ್ದ ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿ, ಸೊಪ್ಪು ಕತ್ತರಿಸಲು ಮರಕ್ಕೆ ಹತ್ತಿದ ವೇಳೆ ಈ ಅವಘಡ ಸಂಭವಿಸಿದೆ.
 ಚಿಕ್ಕನಾಯಕನಹಳ್ಳಿಯಿಂದ ಹಾಗಲವಾಡಿಗೆ ಹೋಗುವ ಮಾರ್ಗ ಮಧ್ಯದ 14 ನೇ ಕಿಲೋಮೀಟರ್ ಕಲ್ಲಿನ ಬಳಿ ಇರುವ ಗೋಣಿಮರವು ನಿರಂತರ ವಿದ್ಯುತ್ ಕಂಬದ ತಂತಿಗಳಿಗೆ ತಗುಲಿಕೊಂಡಿದ್ದು,  ವಿದ್ಯುತ್ ತಂತಿಯು ತರಂಗ ಸ್ಪರ್ಶದಿಂದಾಗಿ ವ್ಯಕ್ತಿಗೆ ಪ್ರವಹಿಸಿ ಆತ ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದೆ. ಮೃತ ವ್ಯಕ್ತಿ ಹೆಂಡತಿ ನಲ್ಲೂರಮ್ಮ, 6ನೇ ತರಗತಿ ಹಾಗೂ ಅಂಗನವಾಡಿಗೆ ಹೋಗುತ್ತಿರುವ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದು ಇಡೀ ಕುಟುಂಬ ನಿರ್ವಹಣೆ ಜವಬ್ದಾರಿ ನಾಗರಾಜು ಹೆಗಲ ಮೇಲಿತ್ತು ಈ ಅವಘಡದಿಂದಾಗಿ ಇಡೀ ಕುಟುಂಬಕ್ಕೆ  ದಿಕ್ಕು ಕಾಣದಂತಾಗಿದೆ. 
ಘಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು   ಸ್ಥಳಕ್ಕೆ ಭೇಟಿ ನೀಡಿದ್ದು.  ಚಿಕ್ಕನಾಯಕನಹಳ್ಳಿ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ನವೋದಯ ಕಾಲೇಜಿನ ವಿದ್ಯಾಥರ್ಿಗಳಿಂದ ಬಜೆಟ್ 
ಚಿಕ್ಕನಾಯಕನಹಳ್ಳಿ,ಮಾ.14:   ಈ ಬಾರಿಯ ಕೇಂದ್ರ  ಬಜೇಟ್ ಮಿಶ್ರ ಪ್ರತಿಕ್ರೀಯೆಯಿಂದ ಕೂಡಿದ್ದು ಅಭಿವೃದ್ದಿಯ ವಿಚಾರಗಳಿಗೆ ಹೆಚ್ಚಿನ ಮನ್ನಣೆ ನೀಡದೆ,  ಕಳೆದ ಬಾರಿ ಇದ್ದಂತಹ ವಿಚಾರವನ್ನೆ ಮುಂದುವರಿಸಿದೆ ಎಂದು ವಿದ್ಯಾಥರ್ಿನಿ ನಂದನ ವಿಶ್ಲೇಷಿಸಿದರು.
ಪಟ್ಟಣದ  ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ  ಆಯೋಜಿಸಿದ್ದ ಕೇಂದ್ರ ಸರಕಾರ ಮಡಿಸಿದ್ದಂತಹ 2016 -17 ನೇ ಸಾಲಿನ  ಬಜೆಟ್ ವಿಶ್ಲೇಷಣೆ ವಿಚಾರ ಸಂಕಿರಣದಲ್ಲಿ ವಿದ್ಯಾಥರ್ಿಗಳು  ಆಯೋಜಿಸಿದ್ದರು. 
ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,  ಆರೋಗ್ಯ, ಕೃಷಿ, ಶಿಕ್ಷಣ, ರಕ್ಷಣೆ  ಕೈಗಾರಿಕೆ, ಗ್ರಾಮೀಣಾಭಿವೃದ್ದಿ, ರಸ್ತೆ, ರಾಷ್ಟ್ರೀಯ ಹೆದ್ದಾರಿ ಇನ್ನಿತರೆ ವಿಷಯಗಳಿಗೆ ಸಂಬಂಧ ಪಟ್ಟಂತೆ ಪರಿಪೂರ್ಣವಾದ ಅಂಕಿ ಅಂಶಗಳ ಮುಖೇನ ತಮ್ಮ ವಿಚಾರ ಮಂಡನೆ ಮಾಡಿದರು. ನಂತರ ಇದಕ್ಕೆ ಹಲವು ವಿದ್ಯಾಥರ್ಿಗಳು ಪ್ರತಿಕ್ರಯಿಸಿ ಸಾಕಷ್ಟು ಚಚರ್ೆಯನ್ನು ಮಾಡುವ ಮೂಲಕ ಬಜೆಟ್ ನಲ್ಲಿ ಅನುಸರಿಸದಂತಹ ವಿಷಯಗಳ ಬಗ್ಗೆ ಚಚರ್ಿಸಿದರು.  
ಕೃಷಿಯ ಬಗ್ಗೆ ಹೆಚ್ಚು ಪ್ರೆಶ್ನೆ ಮಾಡಿದ ವಿದ್ಯಾಥರ್ಿಗಳು ನಾವೆಲ್ಲರೂ ಕೃಷಿಯನ್ನೆ ಮಾಡುತ್ತಿದ್ದೇವೆ ಆದರೆ ಕೃಷಿಗಾಗಿ ಸಾವಿರಾರು ಕೊಟಿಯಷ್ಟು ಹಣವನ್ನು ಸರಕಾರ ಬಜೆಟ್ ನಲ್ಲಿ ಮಂಡನೆ ಮಾಡುತ್ತದೆ ಆದರೆ ಅದರ ಫಲಗಳು ನಮಗೆ ಸಿಗುತ್ತಿಲ್ಲವಲ್ಲ ಈ ಹಣವೆಲ್ಲ ಎಲ್ಲಿ ಹೋಗುತ್ತಿದೆ ಎಂದು ಕೇಳಿದಾಗ ಅದರ ಮೇಲ್ವಿಚಾರಕರಾದ ಪ್ರೋ ಚಂದ್ರಶೇಖರ್ ಮಾತನಾಡಿ ಅದಕ್ಕೆ ಸಮಂಜಸ ಉತ್ತರವನ್ನು ನೀಡಿದರು ಹೀಗೆ ಹಲವು ಪ್ರೆಶ್ನೆಗಳು ವಿದ್ಯಾಥರ್ಿಗಳಿಂದ ಬಂದವು ಇದಕ್ಕೆ ಉಪನ್ಯಾಸಕರು ಮಾರ್ಗದರ್ಶನವನ್ನು ನೀಡಿದರು.
ವಿದ್ಯಾಥರ್ಿನಿ ಮೇಘನಾ ಎಂ.ಬಿ ಬಜೆಟ್ ಮಂಡನೆ ಯಾದ ನಂತರ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಬಜೆಟ್ನ ಮೇಲಿನ  ಅಭಿಪ್ರಾಯವನ್ನು ಹಂಚಿಕೊಂಡರು.
 ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಿ.ಜಿ ಸುರೇಶ್, ಪ್ರೋ ಶಿವರಾಮಯ್ಯ, ಶ್ರೀನಿವಾಸ್ ಪ್ರಸನ್ನಕುಮಾರ್, ಪ್ರಸನ್ನ.ಡಿ.ಆರ್ ಇನ್ನಿತರರು ಹಾಜರಿದ್ದರು.

ಶಿವಪ್ಪನ ಗುಡಿಯಲ್ಲಿ ಏಳು ದಿನ ನಡೆದ ಶಿವಪೂಜೆ
ಚಿಕ್ಕನಾಯಕನಹಳ್ಳಿ,ಮಾ.14: ಪಟ್ಟಣದ ಶಿವನ ದೇವಾಲಯದಲ್ಲಿ ನಡೆಯುತ್ತಿದ್ದ  ಅಹೋರಾತ್ರಿ ಶಿವಸ್ತತಿ, ಅಖಂಡ ಭಜನೆಯ ಅಂಗವಾಗಿ  ಏಳನೇ ದಿನದಂದು  ಹೋಮ, ಹವನ ಪೂಜೆಯೊಂದಿಗೆ ಅಂತ್ಯಗೊಂಡಿತು.
ಏಳು ದಿನಗಳವರೆಗೆ ನಡೆದ ಶಿವಸಪ್ತಾಹದ ಅಂಗವಾಗಿ ಅಹೋರಾತ್ರಿ ಶಿವಸ್ತುತಿ ಹಾಗೂ ಅಖಂಡ ಭಜನೆ ಪೂಜೆಗೆ ಪ್ರತಿನಿತ್ಯ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು, ಅಬಾಲವೃದ್ದರಾಗಿ ಆ ಭಾಗದ ಭಕ್ತರು ಶಿವಸ್ತುತಿಯನ್ನು ಕಳೆದ ಏಳುದಿನಗಳಿಂದ  ದಿನದ ಇಪ್ಪತ್ತನಾಲ್ಕು ಗಂಟೆಯೂ ನಡೆಸುತ್ತಿದ್ದರು, ಅಂತಿಮ ದಿನವಾದ ಸೋಮವಾರ ಹರಿಯ ಭಕ್ತರಾದ ದಾಸಪ್ಪಗಳು ಹರನಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಭಕ್ತ ಆರ್ ಸಿದ್ದರಾಮಯ್ಯ ಮಾತನಾಡಿ, 66 ವರ್ಷಗಳಿಂದಲೂ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು,  ಶಿವರಾತ್ರಿ ಆರಂಭವಾದ ದಿನದಿಂದ ಏಳು ದಿನಗಳ ವರೆಗೆ ದೇವಾಲಯದಲ್ಲಿ ಅಹೋರಾತ್ರಿ ಶಿವಸ್ಮರಣೆಯ ಭಜನೆ ನಡೆಯುತ್ತದೆ,  ಜಾತಿ, ಮತ ಬೇದವಿಲ್ಲದೆ ಎಲ್ಲಾ ಜನಾಂಗದವರು ಭಜನೆಯಲ್ಲಿ ಭಾಗವಹಿಸಿ ದೇವಾಲಯದ ಗರ್ಭಗುಡಿಯೊಳಗಿನ ಶಿವಲಿಂಗವನ್ನು  ಪ್ರದಕ್ಷಣೆ ಮಾಡುತ್ತಾ ಶಿವಸ್ತುತಿ ಮಾಡುತ್ತಾರೆ, ಏಳು ದಿನದ ನಂತರ ಕೊನೆಯ ದಿವಸ ಹೋಮ, ಹವನ, ನವಗ್ರಹ ಪೂಜೆ, ಗಣಪತಿ ಪೂಜೆ ನೆರವೇರಲಿದೆ ನಂತರ ಮರುದಿನ  ಊರಿನ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಲಿದೆ, ಈ ಕಾರ್ಯಕ್ರಮದ ಕೊನೆಯಲ್ಲಿ ಪಟ್ಟಣದ ಸಮಸ್ತ ಜನರಿಗೆ  ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದರು.
ಮತ್ತೋರ್ವ ಭಕ್ತ ಸಿದ್ದರಾಜು ಮಾತನಾಡಿ, ಶಿವರಾತ್ರಿಯ ದಿನದಂದು ಆರಂಭವಾದ ಭಜನೆ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗುತ್ತಾರೆ, ದೇವಾಲಯದಲ್ಲಿ ನಂದಾದೀಪ ಬೆಳಗಿದ ನಂತರದ ಏಳು ದಿವಸಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು ಶಿವಭಕ್ತರು ಶಿವನ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ, ಅನ್ನಸಂತರ್ಪಣೆ ನಡೆಯಲು ಭಿಕ್ಷಾಟನೆಗಾಗಿ ಹೋಗುವ ಭಕ್ತರಿಗೆ ಏಳುದಿವಸಗಳ ಕಾಲ ಭಕ್ತರ ಮನೆಯಲ್ಲಿ ಭೋಜನದ ವ್ಯವಸ್ಥೆಯೂ ಇರುತ್ತದೆ ಹಾಗೂ ಶಿವರಾತ್ರಿ ಆರಂಭವಾದ ನಂತರ ಪ್ರತಿನಿತ್ಯ ರಾತ್ರಿ ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ, ಜಗದೀಶ್ ಗಾರೆ, ಮಹಲಿಂಗಣ್ಣ, ಸ್ವಾಮಿ, ನಾಗರಾಜು, ಶಿವಣ್ಣ, ರವಿಕುಮಾರ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ,ಮಾ.14 : ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಹೃದಯ ರೋಗ ಹಾಗೂ ಮಹಿಳೆಯರಿಗಾಗಿ ಸ್ತನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಚರ್್ 20ರಂದು ಹಮ್ಮಿಕೊಳ್ಳಲಾಗಿದೆ. 
ಪಟ್ಟಣದ ರೋಟರಿ ಕ್ಲಬ್, ತಾಲ್ಲೂಕು ವೈದ್ಯರ ಸಂಘ, ಸಾರ್ವಜನಿಕ ಆಸ್ಪತ್ರೆ, ನಾರಾಯಣ ಇನ್ಸ್ಟ್ಯೂಟ್ ಕಾಡರ್ಿಯಕ್ ಸೈನ್ಸೆಸ್ ಇವರ ಸಂಯುಕ್ತಾಶ್ರಯದಲ್ಲಿ  ಈ ಶಿಬಿರವನ್ನು ಹಮ್ಮಿಕೊಂಡಿದ್ದು, ರೋಗಿಗಳು ಈ ಹಿಂದೆ ತಪಾಸಣೆ ಮಾಡಿಸಿದ್ದರೆ ಸಂಬಂಧಿಸಿದ ಮಾಹಿತಿಗಳನ್ನು ಶಿಬಿರಕ್ಕೆ ತರುವುದು ಎಂದು ತಿಳಿಸಿದ್ದಾರಲ್ಲದೆ,  ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ 9448748225 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.

ಗುರುಪರಪ್ಪಸ್ವಾಮಿ ದೇವಾಲಯದ 25ನೇ ವರ್ಷದ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಮಾ.14 : ಪಟ್ಟಣದ ಶ್ರೀ ಗುರುಪರಪ್ಪಸ್ವಾಮಿ ಮಠ 25ನೇ ವರ್ಷದ ವಾಷರ್ಿಕ ಮಹೋತ್ಸವ ಹಾಗೂ ರಜತ ಕವಚ ಧಾರಣಾ ಕಾರ್ಯಕ್ರಮವನ್ನು ಇದೇ ಮಾಚರ್್ 21ರಿಂದ 22ರವರೆಗೆ ನಡೆಯಲಿದೆ.
21ರ ಸೋಮವಾರ ರಜತ ಕವಚಕ್ಕೆ ಗಂಗಾಸ್ನಾನ ಶ್ರೀ ತೀರ್ಥರಾಮಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡಯಲಿದೆ. 22ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ನಂದಾದೀಪ, 9ಗಂಟೆಗೆ ಅಭಿಷೇಕ, ರಜತಕವಚಧಾರಣೆ, ಗಣಪತಿ ಹೋಮ, ನವಗ್ರಹಹೋಮ, ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ 12ಕ್ಕೆ ಪೂಣರ್ಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, 12.30ಕ್ಕೆ ಶ್ರೀ ದೇವಿಪಾರಾಯಣ, ರಾತ್ರಿ 8ಕ್ಕೆ ಆರಂಭಗೊಳ್ಳುವ ಭಜನೆ ಅಹೋರಾತ್ರಿ ನಡೆಯಲಿದೆ. 
ಇದೇ 22ರಂದು ರಾತ್ರಿ 8ಕ್ಕೆ  ಧಾಮರ್ಿಕ ಸಮಾರಂಭ ನಡೆಯಲಿದ್ದು ಕನಕ ಹೊಸದುರ್ಗ ಗುರುಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ ಸಾನಿದ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಪರಪ್ಪಸ್ವಾಮಿ ಮಠದ ಅಧ್ಯಕ್ಷ ಸಿ.ಎಸ್.ದೊರೆಸ್ವಾಮಿ, ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಉಪಾಧ್ಯಕ್ಷ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಕ್ಯಾಪ್ಟನ್ಸೋಮಶೇಖರ್, ಪುರಸಭಾ ಸದಸ್ಯ ಸಿ.ಟಿ.ದಯಾನಂದ, ಸಿ.ಎಸ್.ರಾಜಣ್ಣ ಹಾಗೂ ಸಿ.ಬಸವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
23ರಂದು ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪರಪ್ಪಸ್ವಾಮಿ ಮಠದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


 ಸಿದ್ದರಾಮನಗರದಲ್ಲಿ ದೇವರುಗಳ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮಾ.14 : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಸಿದ್ದರಾಮನಗರದ ಹಾಗೂ ವಿವಿಧ ಗ್ರಾಮಗಳಿಗೆ ಸೇರಿದ ಹೆಂಜಾರ ಭೈರವೇಶ್ವರ, ಸಿದ್ದರಾಮೇಶ್ವರ, ಹತ್ತಿಮರದಮ್ಮ ಹಾಗೂ ಆಲದಮರದಮ್ಮ ದೇವರ ರಥೋತ್ಸವ ಹಾಗೂ ದನಗಳ ಜಾತ್ರೆ ಕಾರ್ಯಕ್ರಮ ಮಾಚರ್್ 18ರಿಂದ 23ರವರೆಗೆ ನಡೆಯಲಿದೆ.
18ರಂದು ಹೆಂಜಾರ ಭೈರವೇಶ್ವರಸ್ವಾಮಿಗೆ ಅಂಕುರಾರ್ಪಣೆ ಸೇವೆ, 19ರಂದು ಗಿರಿಜಾ ಕಲ್ಯಾಣೋತ್ಸವ, 20ರಂದು ಗುರುಸಿದ್ದರಾಮೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ, 21ರಂದು ಬಸವೋತ್ಸವ, 22ರಂದು ಬೆಳಗ್ಗೆ 6.30ಕ್ಕೆ ದೊಡ್ಡ ರಥೋತ್ಸವ ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರ ದಿವ್ಯ ಸಾನಿದ್ಯದಲ್ಲಿ ನಡೆಯಲಿದೆ, ಬೆಳಗ್ಗೆ 8ಕ್ಕೆ ಸ್ವಾಮಿಯವರ ಉಯ್ಯಾಲೋತ್ಸವ, ಮಧ್ಯಾಹ್ನ 2ರಿಂದ 3ರವರೆಗೆ ಆಲದಮರದ ದೇವರ ಬನ್ನಿಮರ ಹತ್ತುವ ಕಾರ್ಯಕ್ರಮ ನಡೆಯಲಿದೆ. 23ರಂದು ಗುರುಸಿದ್ದರಾಮೇಶ್ವರಸ್ವಾಮಿ ರಥೋತ್ಸವ ನಂತರ ಗಂಗಾಸ್ನಾನ ಹಾಗೂ ಮೂಲಸ್ಥಾನಕ್ಕೆ ದೇವರನ್ನು ಕರೆತರುವುದು.



Tuesday, March 8, 2016


ಅಭಿವ್ಯಕ್ತಿ ಸ್ವಾತಂತ್ರದ ಅಪ್ರತಿಮ ಪ್ರತಿಭೆ ಪಿ.ಲಂಕೇಶ್.


ಸಿ.ಗುರುಮೂತರ್ಿ ಕೊಟಿಗೆಮನೆ
                              ಶಿಕ್ಷಕ, ಹವ್ಯಾಸಿ ಲೇಖಕ, ಚಿಕ್ಕನಾಯಕನಹಳ್ಳಿ. 9448659573 
 ಕನ್ನಡ ಪತ್ರಿಕಾಲೋಕದಲ್ಲಿ 'ಮೇಷ್ಟ್ರು' ಎಂದಾಕ್ಷಣ ನೆನಪಾಗುವುದು ಪಿ.ಲಂಕೇಶ್. ನಿದರ್ೇಶಕ, ಅಂಕಣಕಾರ, ವಿಚಾರವಾದಿ, ಎಂಬಿತ್ಯಾದಿ ಅಭಿನಾಮಗಳಿದ್ದರೂ,  ಜ್ಞಾನಲೋಕದಲ್ಲಿ ಇವರತ್ತ ಕಣ್ಣು ಹೊರಳುವಂತೆ ಮಾಡಿದ್ದು ಬರವಣಿಗೆ.   ಎಂಭತ್ತು-ತೊಂಭತ್ತರ ದಶಕದಲ್ಲಿ ಯುವಕರನ್ನು ಹೆಚ್ಚು ಪ್ರಭಾವಿಸಿದ್ದು ಇವರ ಸಂಪಾದಕತ್ವದ ಕನ್ನಡ ಜಾಣ-ಜಾಣೆಯರ ಪತ್ರಿಕೆ ಲಂಕೇಶ್.
ಎರಡು ದಶಕಗಳ ಕಾಲ ಕನ್ನಡ ಟ್ಯಾಬುಲ್ಯಾಡ್ ಪತ್ರಿಕಾ ಕ್ಷೇತ್ರದಲ್ಲಿ ವಿಚಾರವಾದಿಯಾಗಿ, ರಂಜನೆ, ಬೋಧನೆ ಹಾಗೂ ಪ್ರಚೋದನೆಗಳನ್ನು ಅಸ್ತ್ರವಾಗಿಟ್ಟುಕೊಂಡು, ಸಕರ್ಾರಗಳನ್ನು ರಾಜಕಾರಣಿಗಳನ್ನು ವಿಚಾರವಂತರನ್ನು ತನ್ನತ್ತ ಸೆಳೆದುಕೊಂಡಿದ್ದು ಲಂಕೇಶ್ ಪತ್ರಿಕೆ. ವಿಡಂಬನೆ, ಸ್ಮರಣೆ, ಭಾವುಕತೆ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸುತ್ತಾ ಅಭಿವ್ಯಕ್ತಿ ಸ್ವತಂತ್ರದ ಪರವಾಗಿ ದೊಡ್ಡ ಧ್ವನಿಯಾಗಿದ್ದ ಲಂಕೇಶ್, ಕನ್ನಡ ಓದುಗರ ಒಳನೋಟವನ್ನು ಬದಲಿಸಿದ ಲೇಖಕ. ಇಂಗ್ಲೀಷ್ ಸಾಹಿತ್ಯವನ್ನು ಓದಿಕೊಂಡು, ಗೋಪಾಲಕೃಷ್ಣ ಅಡಿಗರ ಗರಡಿಯಲ್ಲಿ ಸಾಹಿತ್ಯ ಲೋಕದ ಪಟ್ಟುಗಳನ್ನು ತಿಳಿದ ಲಂಕೇಶ್, ಕನ್ನಡ ಸಾಹಿತ್ಯವನ್ನು ವಿಸ್ತರಿಸುವಂತಹ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಂತಹ ಸೃಜನಶೀಲ ಲೇಖಕ. ಕೆಲವೊಮ್ಮೆ ಇಂಗ್ಲೀಷ್ ಸಾಹಿತ್ಯದ ಒಳತೋಟಿಗಳನ್ನು ಕನ್ನಡಕ್ಕೆ ರೂಪಾಂತರಿಸುವಲ್ಲೂ ಸಫಲರಾಗಿರುವ ಅಪರೂಪದ ಪತ್ರಿಭೆ.
ವಿದ್ಯಾಥರ್ಿ ದೆಸೆಯಲ್ಲೇ ಸಾಹಿತ್ಯದ ತೆಕ್ಕೆಗೆ ಬಂದ ಲಂಕೇಶ್, ಶಿವಮೊಗ್ಗದಲ್ಲಿ ತಾವು ಓದುತ್ತಿದ್ದ ಕಾಲೇಜ್ಗೆ ಮೊದಲಬಾರಿಗೆ  ಕಾದಂಬರಿಕಾರ ಅ.ನ.ಕೃಷ್ಣರಾಯರನ್ನು ಕರೆತಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮೊದಲ ಬಾರಿಗೆ ಸಾಹಿತ್ಯ ಸಂಘಟನೆಯಲ್ಲಿ ತೊಡಗುತ್ತಾರೆ. ನಂತರ ತನ್ನ ಓರುಗೆಯವರಿಗೆ ಕನ್ನಡ ಸಾಹಿತ್ಯದ ರುಚಿಯನ್ನು ಹತ್ತಿಸುವ ಸಲುವಾಗಿ ಕನ್ನಡ ಸಾಹಿತ್ಯ ಸಂಘವನ್ನು ಕಟ್ಟಿಕೊಂಡು,  ಕಾದಂಬರಿಕಾರ ನಿರಂಜನ್, ಶಿವರಾಮ ಕಾರಂತ, ಜಿ.ಎಸ್.ಶಿವರುದ್ರಪ್ಪನಂತವರ ಒಡನಾಟದಿಂದ ಪೂರ್ಣ ಪ್ರಮಾಣದ ಸಾಹಿತ್ಯ ಪರಿಚಾರಿಕೆಗೆ ಒಗ್ಗಿಕೊಂಡ ವ್ಯಕ್ತಿ. ಬೆಂಗಳೂರು, ಮೈಸೂರುನಲ್ಲಿ ಓದುವಾಗಲೇ ಹಲವು ಸಾಹಿತಿಗಳ ಅಂತರಂಗದ ಗೆಳೆಯರಾಗಿದ್ದುಕೊಂಡು ಕಥಾಲೋಕವನ್ನು ಪ್ರವೇಶಿಸಿದರು, ಕವಿತೆ ಎಂದರೆ ಇಷ್ಟಪಡುವ ಪಿ.ಎಲ್,  ಆರಂಭದಲ್ಲಿ ತಮ್ಮನ್ನು ತೆತ್ತುಕೊಂಡಿದ್ದು ಕಥೆ, ಲೇಖನಗಳಿಗೆ. ನಂತರ ಓದು ಮುಗಿಸಿಕೊಂಡು ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನಲ್ಲಿ ಇಂಗ್ಲೀಷ್ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದರು, ಆಗ ಅಲ್ಲಿನ ವಿದ್ಯಾಥರ್ಿಗಳಿಗೆ ಕವಿತೆಗಳನ್ನು ಬರೆಯುವದಕ್ಕೆ ಪ್ರೇರಿಪಿಸುತ್ತಲ್ಲೇ ತಮ್ಮ ಕಾವ್ಯಕೃಷಿಯನ್ನು ವಿಸ್ತರಿಸಿಕೊಂಡರು, ದೇ.ಜವರೇಗೌಡರು ಇವರ  ಪ್ರಾಂಶುಪಾಲರಾಗಿದ್ದರು.
ಪಿ.ಎಲ್. ಶಿವಮೊಗ್ಗದಿಂದ ವರ್ಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ನ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಕಾಲವಿದ್ದರು, ನಂತರದಲ್ಲಿ ಹನ್ನೆರಡು ವರ್ಷ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಈ ಮಧ್ಯೆ ಅನಂತಮೂತರ್ಿಯವರ 'ಸಂಸ್ಕಾರ'ದಲ್ಲಿ ಅಭಿನಯಿಸಿದ್ದರಿಂದ ಇವರ ಚಿತ್ತ  ಚಲನಚಿತ್ರದತ್ತ ವಾಲುತ್ತದೆ. ತಮ್ಮ ಮೊದಲ ಚಿತ್ರ 'ಪಲ್ಲವಿ'ಯನ್ನು ತಮ್ಮದೇ ನಿದರ್ೇಶನದಲ್ಲಿ ನಿಮರ್ಿಸಿದ ನಂತರದಲ್ಲಿ ಅವರ ಆಸಕ್ತಿ ಹೆಚ್ಚು ನಿದರ್ೇಶನದ ಕಡೆ ತಿರುಗಿ 'ಅನುರೂಪ' ಚಿತ್ರವನ್ನು ತೆಗೆಯುತ್ತಾರೆ. ಇಷ್ಟರಲ್ಲಾಗಲೇ ಪೂರ್ಣ ಪ್ರಮಾಣದ ನಿದರ್ೇಶಕನ ಸ್ಥಾನಕ್ಕೆ ಹೊಂದಿಕೊಂಡಿದ್ದ ಪಿ.ಎಲ್. ತಮ್ಮ ಅಧ್ಯಾಪಕ ಹುದ್ದೆಗೆ ರಾಜಿನಾಮೆ ನೀಡಿ ವಿಶ್ವವಿದ್ಯಾಲಯದ ಸಂಕೋಲೆಯಿಂದ ಹೊರಬಂದು ಸ್ವತಂತ್ರವಾಗಿ ಅಲೋಚಿಸುವ ಕ್ರಮವನ್ನು ತನ್ನದಾಗಿಸಿಕೊಳ್ಳುತ್ತಾರೆ.  ಇಂಗ್ಲೀಷ್ ಸಾಹಿತ್ಯವನ್ನು ಹೆಚ್ಚು ಓದುತ್ತಾ, ಇಂಗ್ಲೀಷ್ ಫಿಲಂಗಳ ಕಡೆ ತಮ್ಮ ಕಣ್ಣುಗಳನ್ನು ಹರಿಸುತ್ತಾ ಹೋಗುತ್ತಾರೆ. ಈ ಮಧ್ಯೆ ಪ್ರಜಾವಾಣಿಯ ಕೆ.ಎನ್.ಹರಿಕುಮಾರ್ ರವರ ಭೇಟಿಯಿಂದಾಗಿ ಹವ್ಯಾಸಿ ಅಂಕಣಕಾರರಾಗಿ ಬರೆಯಲಾರಂಭಸುತ್ತಾರೆ. ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ರವರ ಸಂದರ್ಶನವೊಂದನ್ನು ತಮ್ಮ ಅಂಕಣದಲ್ಲಿ ದಾಖಲಿಸಿದ್ದರಿಂದ ಪತ್ರಿಕಾ ಆಡಳಿತದವರೊಂದಿಗೆ ಉಂಟಾದ ಗೊಂದಲದಿಂದ  ತಮ್ಮ ಅಂಕಣಕಾರನ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಕಿಚ್ಚಿನಲ್ಲಿ ಹುಟ್ಟಿಕೊಂಡಿದ್ದೇ ಲಂಕೇಶ್ ಪತ್ರಿಕೆ. ಆ ಕಾಲಕ್ಕೆ ಟ್ಯಾಬುಲ್ಯಾಡ್ ಪತ್ರಿಕೆಗಳಲ್ಲಿ ಶೇಷಪ್ಪನವರ 'ಕಿಡಿ'ಪತ್ರಿಕೆಯೊಂದೇ ಸ್ವಲ್ಪ ಮಟ್ಟದಲ್ಲಿ ಜೀವ ಹಿಡಿದುಕೊಂಡಿದ್ದ ಪತ್ರಿಕೆ, ಆದರೆ ಅದು ರಾಜಕೀಯವನ್ನೇ ಹೆಚ್ಚು ಭಿತ್ತರಿಸುತಿತ್ತು.   ಸಾಹಿತ್ಯ, ಸಾಂಸ್ಕೃತಿ ಹಾಗೂ ವಿಚಾರವಂತಿಕೆಯ ಕ್ಷೇತ್ರಗಳನ್ನು ಹೆಚ್ಚು ವಿಸ್ತರಿಸಲು ಲಂಕೇಶ್ ಪತ್ರಿಕೆಯನ್ನು 1980 ರಲ್ಲಿ ಆರಂಭಿಸುತ್ತಾರೆ, ಈ ಪತ್ರಿಕೆಗೆ ಲಂಕೇಶ್ ಎಂದು ಹೆಸರಿಡಲು ಸೂಚಿಸಿದ್ದು, ಇನ್ನೊಬ್ಬ ಸ್ಕಾಲರ್, ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ, ಪತ್ರಿಕೆಗೆ ಆರಂಭದಲ್ಲಿ ಚಂದ್ರಶೇಖರ ಪಾಟೀಲ(ಚಂಪಾ) ಅಂಕಣಕಾರರಾಗಿದ್ದರು. ಆರಂಭದಲ್ಲಿ ಎಂಟು ಪುಟಗಳ ಈ ಪತ್ರಿಕೆಯ ಬೆಲೆ ಅರವತ್ತು ಪೈಸೆ ಮಾತ್ರ.
ಲಂಕೇಶ್ ಪತ್ರಿಕೆ ಅಕ್ಷರ ಲೋಕದಲ್ಲಿ ನಾಗಲೋಟದಲ್ಲಿ ಓಡಲಾರಂಭಿಸುತ್ತದೆ, ಎಂಭತ್ತರ ದಶಕದ ಕೊನೆಯ ಹೊತ್ತಿಗೆ ಇದರ ಪ್ರಸಾರ ಸಂಖ್ಯೆ ಒಂದುವರೆ ಲಕ್ಷದವರೆಗೆ ಮುಟ್ಟಿದ್ದು ಒಂದು ಮೈಲಿಗಲ್ಲು. ಪತ್ರಿಕೆ ಇವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಪತ್ರಿಕೆಯಲ್ಲಿ ರಾಜಕೀಯ ಚಿಂತನೆಗಳನ್ನು  ಬರೆಯುತ್ತಲ್ಲೇ, ತಮ್ಮ ಚಿಂತನಾ ಕ್ರಮವನ್ನು ಪ್ರಯೋಗಕ್ಕಿಳಿಸುವ ನಿಟ್ಟಿನಲ್ಲಿ ಪತ್ರಿಕಾರಂಗದಿಂದ  'ಪ್ರಗತಿರಂಗ' ಎಂಬ ಪಕ್ಷವನ್ನು ಕಟ್ಟಿಕೊಂಡು  ರಾಜಕೀಯ ಸಂಘಟನೆಗೆ  ಇಳಿಯುತ್ತಾರೆ. ಇವರಂತೇ ಆಲೋಚಿಸುವ ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್ ರಂತಹ  ಗೆಳೆಯರೊಂದಿಗೆ ರಾಜ್ಯದ ನಾನಾಕಡೆ ತಿರುಗುತ್ತಾರೆ, ಈ ಪ್ರಯೋಗದಲ್ಲಿ ಸೋಲುತ್ತಾರೆ. ಏಳು ಬೀಳುಗಳಿಗೆ ಚಿಕ್ಕಂದಿನಿಂದಲೂ ಒಗ್ಗಿಕೊಂಡಿದ್ದ ಇವರಿಗೆ ಇದು ಅಂತಹ ಹತಾಶೆ ಎನಿಸಲಿಲ್ಲ.  ಇದರಿಂದ ನಿರಾಶರಾಗದೆ ಪತ್ರಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುತ್ತಾರೆ. ಇವರ ಸೃಜನಶೀಲತೆಗೆ ಕೊನೆಯವರಿಗೂ ಸಾಥ್ ನೀಡಿದ್ದು ಬರವಣಿಗೆಯೊಂದೆ.
ಇವರು ಲೇಖನಿಯಿಂದ ಹೊರಬಂದ ಕೃತಿಗಳು, ಪ್ರಶಸ್ತಿಗಳು:  ಕಥಾ ಸಂಕಲಗಳ ಪೈಕಿ, ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ. 'ತಲೆ ಮಾರು' ಎಂಬ ಕವನ ಸಂಕಲನ. ಬಿರುಕು, ಮುಸ್ಸಂಜೆಯ ಕಥಾಪ್ರಸಂಗ, ಅಕ್ಕ ಎಂಬ ಕಾದಂಬರಿಗಳು. ತೆರೆಗಳು, ಸಂಕ್ರಾಂತಿ, ಗುಣಮುಖ ನಾಟಕಗಳು. ಪಾಪದ ಹೂವುಗಳು, ದೊರೆ ಈಡಿಪಸ್, ಅಂತಿಗೊನೆ ಅನುವಾದ ಕೃತಿಗಳು. ಪ್ರಸ್ತುತ, ಕಂಡದ್ದು ಕಂಡಹಾಗೆ, ಟೀಕೆ-ಟಿಪ್ಪಣಿ ಇವೆಲ್ಲಾ ಗದ್ಯ ಬರಹಗಳ ಸಂಕಲನ. ಪಲ್ಲವಿ ಅನುಪಲ್ಲವಿ, ಅನುರೂಪ, ಎಲ್ಲೆಂದಲೊ ಬಂದವರು ಚಲನಚಿತ್ರಗಳು. ಪಲ್ಲವಿ ಚಿತ್ರದ ನಿದರ್ೇಶನಕ್ಕಾಗಿ 1977ರಲ್ಲಿ ರಾಷ್ಟ್ರಪ್ರಶಸ್ತಿ, 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಅನುರೂಪ ಚಿತ್ರಕ್ಕೆ ರಾಜ್ಯ ಪ್ರಶಸ್ತಿ,  ಚಲನಚಿತ್ರ ವಿಮರ್ಶಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಹರಿಸಿ ಬರುತ್ತವೆ.
ಇಂತಹ ದೈತ ಪ್ರತಿಭೆ 1935 ರಲ್ಲಿ  ಒಬ್ಬ ಸಾಮಾನ್ಯ ರೈತ ಕುಟುಂಬದ ಐದನೇ ಮಗನಾಗಿ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಶಿವಮೊಗ್ಗೆಯಲ್ಲಿ ಇಂಟರ್ ಮೀಡಿಯಟ್, ಬೆಂಗಳೂರಿನ ಸೆಂಟ್ರಲ್ ಕಾಲೇಜ್ನಲ್ಲಿ ಇಂಗ್ಲೀಷ್ ಆನರ್ಸ್, ಮೈಸೂರಿನ ಮಹಾರಾಜ್ ಕಾಲೇಜ್ನಲ್ಲಿ ಇಂಗ್ಲೀಷ್ ಎಂ.ಎ.ಯನ್ನು ಓದಿ, ಗ್ರಾಮೀಣ ಸೊಗಡನ್ನು ಕೊನೆಗಳಿಗೆಯ ವರೆಗೆ ಉಳಿಸಿಕೊಂಡಿದ್ದ ಪಿ.ಲಂಕೇಶ್ ರವರನ್ನು ಅವರ ಜನ್ಮದಿನವಾಗಿ ಅಂಗವಾಗಿ ಇಂದು ಸ್ಮರಿಸುತ್ತಾ ಇಂದಿನ ಪೀಳಿಗೆಯವರಿಗೆ ಇವರ ಪತ್ರಿಭಾವಂತಿಕೆಯನ್ನು ತಲುಪಿಸುವ ಸಲುವಾಗಿ ಈ ಬರಹ.  



ಪುರಸಭೆ ಮುಂಭಾಗ ಕಸದ ತೊಟ್ಟಿಯಂತಾದ ನೀರಿನ ವಾಲ್ವ್
ಚಿಕ್ಕನಾಯಕನಹಳ್ಳಿ : ಪಟ್ಟಣದ ಪುರಸಭಾ ಮುಂಭಾಗದಲ್ಲಿ ಕುಡಿಯುವ ನೀರಿನ ವಾಲ್ವ್ ಇರುವ ಗುಂಡಿಗಳು ಕಸದ ತೊಟ್ಟಿಗಳಾಗಿವೆ.
ನಿತ್ಯ ಪುರಸಭಾ ವತಿಯಿಂದ ಪಟ್ಟಣಕ್ಕೆ ಸರಬರಾಜು ಮಾಡುವ ನೀರಿನ ಪೈಪ್ಲೈನ್ಗೆ ಹಾಕಿರುವ ವಾಲ್ವ್ ಗುಂಡಿಗಳ ಬಳಿ ದನಗಳನ್ನು ಕಟ್ಟಿ ಹುಲ್ಲು ಹಾಕಿ ಮೇಯಿಸುತ್ತಿರುವುದರಿಂದ ಹುಲ್ಲು ಹಾಗೂ ಘನತ್ಯಾಜ್ಯ ವಾಲ್ವ್ಗುಂಡಿಯಲ್ಲಿ ಹಾಕುವುದರಿಂದ ವಾಲ್ವ್ನಿಂದ ಸೋರುವ ನೀರು ಗುಂಡಿಯಲ್ಲಿ ಶೇಖರಣೆಯಾಗಿ ಪುನಹ ವಾಲ್ವ್ ಮುಖಾಂತರ ಪಟ್ಟಣಕ್ಕೆ ಕೊಚ್ಚೆ ನೀರು ಹೋಗುತ್ತಿದ್ದು ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಅನೇಕ ಬಾರಿ ಪುರಸಭಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಮನವಿ ಮಾಡಿದರೂ ಇದುವರೆವಿಗೂ ಏನೂ ಪ್ರಯೋಜನವಾಗಿಲ್ಲ, ಪುರಸಭೆ ಅಧಿಕಾರಿಗಳು, ಸದಸ್ಯರು ವಾಲ್ವ್ನ ಗುಂಡಿಯನ್ನು ನೋಡಿಕೊಂಡು ಹೋಗುತ್ತಾರೆಯೇ ವಿನಃ ಗುಂಡಿಯಲ್ಲಿರುವ ಘನತ್ಯಾಜ್ಯವನ್ನು ತೆರವುಗೊಳಿಸುವುದಾಗಲಿ ಅಥವಾ ಪಕ್ಕದಲ್ಲೇ ಹಾಕಿರುವ ಕಾಂಕ್ರಿಟ್ ಹಾಸುಗಲ್ಲನ್ನು ಹಾಕದೇ ನಿರ್ಲಕ್ಷಿಸಿದ್ದಾರೆ, ನಿತ್ಯ ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಾರೆ ರಾತ್ರಿ ವೇಳೆ ವಿದ್ಯುತ್ ಹೋದ ಸಂದರ್ಭದಲ್ಲಿ ವಾಲ್ವ್ವಿರುವ ಗುಂಡಿ ಕಾಣದೇ ಬೀಳುವ ಸಂಭವವೇ ಹೆಚ್ಚಾಗಿದ್ದು ಇದರಿಂದ ಕೈಕಾಲು ಮುರಿದುಕೊಳ್ಳಬೇಕಾಗುತ್ತದೆ ಆದ್ದರಿಂದ ಕೂಡಲೇ ಅಧಿಕಾರಿಗಳು ವಾಲ್ವ್ ಗುಂಡಿಯಲ್ಲಿರುವ ಘನತ್ಯಾಜ್ಯ ಹಾಗೂ ಕಾಂಕ್ರಿಟ್ ಹಾಸುಗಲ್ಲು ಹಾಕಿ ಮುಚ್ಚುವರೇ ?.
                  ಬಿಆರ್ಪಿ ಹಾಗೂ ಸಿಆರ್ಪಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮಾ.07 : 2016-17ನೇ ಸಾಲಿನ ಬಿಆರ್ಪಿ ಹಾಗೂ ಸಿಆರ್ಪಿಯ ಖಾಲಿಯಿರುವ ಹುದ್ದೆಗಳಿಗೆ ಭತರ್ಿ ಮಾಡಲು ಅಜರ್ಿ ಆಹ್ವಾನಿಸಲಾಗಿದೆ.
ಸಮೂಹ ಸಂಪನ್ಮೂಲ ವ್ಯಕ್ತಿಗಳ ಖಾಲಿ ಹುದ್ದೆಗಳಿಗೆ ಭತರ್ಿ ಮಾಡಲು ರಾಜ್ಯ ಯೋಜನ ನಿದರ್ೇಶಕರ ಕಛೇರಿಯ ಆದೇಶದಂತೆ ಅಜರ್ಿ ಆಹ್ವಾನಿಸಲಾಗಿದೆ, ಆಸಕ್ತ ಶಿಕ್ಷಕರು ಅಜರ್ಿಗಳೊಂದಿಗೆ ಎರಡು ಪ್ರತಿ ಪ್ರವೇಶ ಪತ್ರ ಹಾಗೂ ಭಾವಚಿತ್ರದೊಂದಿಗೆ ಬಿಇಓ ಕಛೇರಿಯಿಂದ ದೃಢೀಕರಿಸಿ ಮಾಚರ್್ 14ರ ಸಂಜೆ 5ಗಂಟೆಯೊಳಗೆ ಕ್ಷೇತ್ರ ಸಮನ್ವಯಧಿಕಾರಿಗಳ ಕಛೇರಿಗೆ ಪ್ರವೇಶ ಪತ್ರದ ದ್ವಿಪ್ರತಿ ಹಾಗೂ ನಿಗದಿತ ನಮೂನೆಯಲ್ಲಿ ವಿವರಗಳೊಂದಿಗೆ ಕಛೇರಿಗೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯ ವೆಬ್ಸೈಟ್ ತಿತಿತಿ.ಚಿಞಚಿಡಿಟಿಚಿಣಚಿಞಚಿ.ರಠತ.ಟಿ <ಣಣಠಿ://ತಿತಿತಿ.ಚಿಞಚಿಡಿಟಿಚಿಣಚಿಞಚಿ.ರಠತ.ಟಿ> ನಲ್ಲಿ ವೀಕ್ಷಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಕೋರಿದ್ದಾರೆ.

ಮೂರೇ ದಿನಕ್ಕೆ ಕಿತ್ತುಹೋದ ಚರಂಡಿ ಕಾಮಗಾರಿ
 

ಚಿಕ್ಕನಾಯಕನಹಳ್ಳಿ,ಮಾ.07  : ತಾಲ್ಲೂಕಿನ ದೊಡ್ಡಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವಳಗೆರೆ ಭೋವಿ ಕಾಲೋನಿಯಲ್ಲಿ ಈವರೆಗೆ  ಚರಂಡಿ ಹಾಗೂ ರಸ್ತೆಯಂತಹ ಕನಿಷ್ಟ ಮೂಲಭೂತ ಸೌಕರ್ಯ ಕಂಡಿರಲಿಲ್ಲ, ಚರಂಡಿ ಹಾಗೂ ಸಿಮೆಂಟ್ ರಸ್ತೆ ಮುಂಜೂರಾಗಿದ್ದರಿಂದ ಗ್ರಾಮಸ್ಥರು ಸಹಜವಾಗೇ ಖುಷಿಯಾಗಿದ್ದರೂ ಆದರೆ ನಿಮರ್ಾಣವಾದ 3ದಿನಕ್ಕೆ ಚರಂಡಿ ಮುರಿದು, ರಸ್ತೆ ಕಿತ್ತು ಹೋಗಿದೆ ಇದರಿಂದ ಬೇಸತ್ತ ಜನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಹಾಗೂ ಕಳಪೆ ಕಾಮಗಾರಿ ಕುರಿತು ತನಿಖೆ ಹಾಗಬೇಕು ಎಂದು ಒತ್ತಾಯಿಸಿದ್ದಾರೆ.
   60 ಮನೆ 200 ಜನಸಂಖ್ಯೆ ಹೊಂದಿರುವ ಅವಳಗೆರೆ ಭೋವಿ ಕಾಲೋನಿ ಮುಖ್ಯ ರಸ್ತೆಯಿಂದ 2.ಕಿಮಿ ದೂರದಲ್ಲಿದೆ, ಪರಿಶಿಷ್ಠ ಜಾತಿಯವರೇ ಇರುವ ಗ್ರಾಮಕ್ಕೆ  ಕನರ್ಾಟಕ ಸಕರ್ಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 5054-04-337-0-01-422 ವಿಶೇಷ ಘಟಕ ಯೋಜನೆಯಲ್ಲಿ ಗ್ರಾಮಕ್ಕೆ  162 ಮೀಟರ್ ಉದ್ದದ ಸಿ.ಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಮುಂಜೂರಾಗಿದೆ, ನಿಮರ್ಾಣದ ಜವಾಬ್ಧಾರಿಯನ್ನು ತುಮಕೂರಿನ ಗುತ್ತಿಗೆದಾರ ಕೆ.ಎಸ್.ನಾಗರಾಜು ಎಂಬುವರು ವಹಿಸಿಕೊಂಡಿದ್ದಾರೆ, ತರಾತುರಿಯಲ್ಲಿ ಕಾಮಗಾರಿ ಮುಗಿಸಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ಜನ ದೂರುತ್ತಿದ್ದಾರೆ.
   ಗ್ರಾಮದ ಮುಖಂಡ ಪ್ರಕಾಶ್ ಮಾತನಾಡಿ, ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ, ಒಬ್ಬ ಮೇಸ್ತ್ರಿ ಉಸ್ತುವಾರಿಯಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಮುಗಿದು ಹೋಗಿದೆ, ಇಲಾಖೆ ನೀಡಿರುವ ಮಾರ್ಗ ಸೂಚಿ ಪ್ರಕಾರ 6ಅಡಿ ದಪ್ಪದ ಸಿ.ಸಿ ರಸ್ತೆ ನಿಮರ್ಾಣ ಆಗಬೇಕಿತ್ತು, ಆದರೆ 3ಅಡಿಗೂ ಕಡಿಮೆ ದಪ್ಪದ ಸಿಮೆಂಟ್ ಹಾಕಿದ್ದಾರೆ, ಅಲ್ಲದೆ ಕಳಪೆ ಗುಣಮಟ್ಟದ ಮರಳು ಹಾಗೂ ಸಿಮೆಂಟ್ ಬಳಸಿದ್ದಾರೆ, ಸರಿಯಾದ ಕ್ಯೂರಿಂಗ್ ಮಾಡಿಲ್ಲ ಎಂದು ದೂರಿದರು.
    ಚರಂಡಿ ಹಾಗೂ ರಸ್ತೆ ಅವೈಜ್ಞಾನಿಕವಾಗಿ ನಿಮರ್ಾಣವಾಗಿದೆ, ನೀರು ಹರಿಯಲು ಸರಿಯಾದ ದಾರಿಯಿಲ್ಲ, ಚರಂಡಿ ದಾಟಲು ರಸ್ತೆಗೆ ಅಡ್ಡಲಾಗಿ ಹಾಕಿರುವ ಒದಿಕೆ ಸರಿಯಿಲ್ಲ. ಈಗಾಗಲೆ ಮೂನರ್ಾಲ್ಕು ಕಡೆ ಚರಂಡಿ ದಡ ಕುಸಿದಿದೆ. ರಸ್ತೆ ಸಮತಟ್ಟಾಗಿಲ್ಲದೆ ಓಡಾಟ ಅಸಾಧ್ಯ ಎನ್ನುವಂತಾಗಿದೆ, ಗುಂಡಿ ಬಿದ್ದಿದೆ, ಈ ಭಾಗ್ಯಕ್ಕೆ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ಬೇಕಿತ್ತಾ ಎನ್ನುವಂತಾಗಿದೆ ಎಂದು ಹನುಮಕ್ಕ ಪ್ರಶ್ನೆ ಹಾಕುತ್ತಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆಯ ಮಹೇಶ್ ಎಂಬುವರ ಒಡೆತನದ ಹಸು ಅವಳಿ ಕರುಗಳಿಗೆ ಜನ್ಮ ನೀಡಿದೆ.

Friday, March 4, 2016


ವಾಚ್ ವಿಷಯವನ್ನೇ ದೊಡ್ಡ ಹಗರವನ್ನಾಗಿ ಪರಿವತರ್ಿಸುತ್ತಿರುವ ವಿರೋಧ ಪಕ್ಷಗಳು : ಸಿದ್ದರಾಮಯ್ಯನವರ ಅಭಿಮಾನಿಗಳು ಕಿಡಿ
ಚಿಕ್ಕನಾಯಕನಹಳ್ಳಿ, : ಬಡವರ ಪರ, ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಎಲ್ಲಾ ವರ್ಗಗಳ ಏಳಿಗೆ ಬಯಸುತ್ತಿರುವ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸಲಾಗದ ವಿರೋಧ ಪಕ್ಷದ ನಾಯಕರು ವಾಚ್ ಹಗರಣವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ವಿರುದ್ದ ನಡೆಸುತ್ತಿರುವ ಅಪಪ್ರಚಾರ, ಷಡ್ಯಂತ್ರವನ್ನು ಖಂಡಿಸಿ ಚಿ.ನಾ.ಹಳ್ಳಿ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿತು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಸೇರಿದ್ದ ಸಿದ್ದರಾಮಯ್ಯನವರ ಅಭಿಮಾನಿ ಬಳಗ ವಿರೋಧ ಪಕ್ಷದ ಮುಖಂಡರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿ ಮಾತನಾಡಿದ ಪ್ರತಿಭಟನಾಕಾರರು, ಕೆಳಜಾತಿ, ಅಹಿಂದ ವರ್ಗದ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದನ್ನೇ ಸಹಿಸದ ವಿರೋಧ ಪಕ್ಷದ ನಾಯಕರು ಅವರ ವಿರುದ್ದ ಷಡ್ಯಂತ್ರ ರೂಪಿಸುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರ ಮೂಲಕ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಾ ಅಪಪ್ರಚಾರ ನಡೆಸುತ್ತಿದ್ದಾರೆ, ಕಳೆದ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಯಾವುದೇ ಕಳಂಕ ಹಾಗೂ ಹಗರಣ ರಹಿತ ರಾಜಕೀಯ ಬದುಕನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎಲ್ಲಾ ವರ್ಗಗಳ ಬಡವರು ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳವಾದ ನೆಹರು ಸರ್ಕಲ್ ಬಳಿ ಬಂದ ಗ್ರೇಡ್-2 ತಹಶೀಲ್ದಾರ್ ಚಂದ್ರಕುಮಾರ್ ಮನವಿ ಪತ್ರವನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಾದ  ಪುರಸಭಾ ಸದಸ್ಯ ಸಿ.ಪಿ.ಮಹೇಶ್, ರಾಮದಾಸ್, ಹಂದನಕೆರೆ ಸಿದ್ದಣ್ಣ, ಪ್ರಸನ್ನಕುಮಾರ್, ರಂಗನಾಥ್, ಚಿದಾನಂದ್, ಮಹದೇವಣ್ಣ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.


ವಿವಾಹಿತೆ ನೆಣಿಗೆ ಶರಣು
ಚಿಕ್ಕನಾಯಕನಹಳ್ಳಿ03: ಪಟ್ಟಣದ ಹೊರವಲಯದ ಹೊಸಹಳ್ಳಿ ಗ್ರಾಮದ ಸುಮಾರು 23 ವರ್ಷದ ವಿವಾಹಿತೆ ನೆಣು ಹಾಕಿಕೊಂಡು ಸಾವನ್ನಪ್ಪಿರುವ  ಘಟನೆ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಹಳ್ಳಿ ಗ್ರಾಮದ ಆಟೋ ಚಾಲಕ ರಘು ಎಂಬುವರ ಪತ್ನಿ ರಾಧ (22) ಮೃತ ಮಹಿಳೆ,  ತಮ್ಮ ವಾಸದ ಮನೆಯಲ್ಲಿ ನೇಣು ಹಾಕಿಕೊಂಡಿದ್ದು, ಇವರು ವಿವಾಹವಾಗಿ ಸುಮಾರು ಒಂದುವರೆ ವರ್ಷ ಆಗಿದ್ದು ಮಕ್ಕಳಿರುವುದಿಲ್ಲ, ಸಂಬಂಧಿಕರ ಮನೆಯ ನಿಶ್ಚಿತಾರ್ಥಗೆ ಕರೆದುಕೊಂಡು ಹೋಗಲಿಲ್ಲವೆಂಬ ಕಾರಣಕ್ಕೆ  ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.  ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.

Wednesday, March 2, 2016


ಕಂದಾಯ ಇಲಾಖೆ ನೌಕರರಿಂದ ಕಪ್ಪುಪಟ್ಟಿ ಧರಸಿ ಪ್ರತಿಭಟನೆ.
ಚಿಕ್ಕನಾಯಕನಹಳ್ಳಿ,ಮಾ.02 : ಗ್ರಾಮೀಣ ಅಭಿವೃದ್ದಿ ಇಲಾಖೆ ಅಧಿಕಾರಿಗಳನ್ನು ಕಂದಾಯ ಇಲಾಖೆಗೆ ಖಾಯಂ ಆಗಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಿ, ಇಲಾಖೆಯಲ್ಲಿಯೇ 20-25 ವರ್ಷಗಳ ಕಾಲ ಪದೋನ್ನತಿ ಹೊಂದದೇ ಇರುವ ಮೂಲ ಕಂದಾಯ ಇಲಾಖೆಯ ನೌಕರರಿಗೆ ಪದೋನ್ನತಿಯ ಅವಕಾಶಗಳನ್ನು ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಂದಾಯ ಇಲಾಖೆ ನೌಕರರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ಳಾ ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಕಂದಾಯ ಇಲಾಖೆ ನೌಕರರು ಗ್ರಾಮೀಣ ಇಲಾಖೆಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನಸ್ನು ಕಂದಾಯ ಇಲಾಖೆಯ ಶಿರಸ್ತೆದಾರ್/ಉಪತಹಶೀಲ್ದಾರ್ ವೃಂದದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಲು ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.
ಗ್ರಾಮೀಣಾಭಿವೃದ್ದಿ ಇಲಾಖೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳನ್ನು 1977ರ ನಿಯಮ 16ರ ಅಡಿ ಖಾಯಂ ಆಗಿ ಕಂದಾಯ ಇಲಾಖೆಯಲ್ಲಿ ವಿಲೀನಗೊಳಿಸಿ ಆದೇಶ ಹೊರಡಿಸಲಾಗಿದೆ, ಈ ಪ್ರಕ್ರಿಯೆಯಿಂದಾಗಿ ಕಂದಾಯ ಇಲಾಖೆಯ ಮೂಲ ನೌಕರರಿಗೆ ಅನ್ಯಾಯವಾಗುತ್ತಿದೆ, ಇದರಿಂದಾಗಿ ಕಂದಾಯ ಇಲಾಖೆಯ ನೌಕರರಿಗೆ ಪದೋನ್ನತಿ ಹೊಂದುವ ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಪ್ರತಿ ಪಂಚಾಯಿತಿಗೆ ಒಂದರಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುದ್ದೆಗಳನ್ನು ಸೃಜಿಸಲಾಗಿದ್ದು ಇದರಿಂದಾಗಿ ರಾಜ್ಯದಲ್ಲಿ 5629 ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಹುದ್ದೆ ಇವೆ, ಈ  ಪೈಕಿ 1048 ಹುದ್ದೆಗಳು ಖಾಲಿಯಿವೆ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಸಾಕಷ್ಟು ಪಿಡಿಓ ಖಾಲಿ ಹುದ್ದೆಗಳು ಇದ್ದರೂ ಸಹ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ವಿಲೀನಗೊಂಡಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳು ಪದೋನ್ನತಿ ಅವಕಾಶಗಳಿಂದ ವಂಚಿತರಾಗುವುದರ ಜೊತಗೆ ಮಾನಸಿಕವಾಗಿಯೂ ಕುಗ್ಗಲಿದ್ದಾರೆ ಆದ್ದರಿಂದ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ತಮ್ಮ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಶಿರಸ್ತೆದಾರ್ ನಾಗೇಂದ್ರಪ್ಪ, ನೌಕರರಾದ ವನಜಾಕ್ಷಿ, ಅಂಬುಜಾಕ್ಷಿ, ಗಂಗಾಧರ್, ರವಿಕುಮಾರ್, ಈರಣ್ಣ, ಅಜಯ್, ರಮೇಶ್, ಪ್ರತಾಪ್, ಮಧು, ಡಿ.ನಾಗರಾಜು, ಎಂ.ಎಸ್.ರಾಜಶೇಖರ್, ಈಶ್ವರಾಚಾರ್ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಮಾ.02 :   ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿ ಮತ್ತು ಅನುದಾನದಲ್ಲಿ ಯಾವುದೇ ಹೆಚ್ಚಳ ಮಾಡದಿರುವುದನ್ನು ವಿರೋಧಿಸಿ ಕಸಬಾ ಹೋಬಳಿಯ ಅಂಗನವಾಡಿ ಕಾರ್ಯಕತರ್ೆಯರು  ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕೇಂಧ್ರ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕತರ್ೆಯರ ಸೇವಾ ಭದ್ರತೆ ಅಥವಾ ಸಂಬಳದ ಬಗ್ಗೆ  ಗಮನ ಹರಿಸಿಲ್ಲ ಎಂದು ಆಗ್ರಹಿಸಿ ಪ್ರತಿಭಟಿಸಿದರು.
ಅಂಗನವಾಡಿ ಕಾರ್ಯಕತರ್ೆ ರಾಜಮ್ಮ ಮಾತನಾಡಿ 1975ರಲ್ಲಿ ಪ್ರಾರಂಭವಾದ ಐಸಿಡಿಎಸ್, ಮಕ್ಕಳ ಹಾಗೂ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಕೇಂದ್ರ ಸಕರ್ಾರ 50% ಅನುದಾನ ಕಡಿತ ಮಾಡಿದೆ, ರಾಜ್ಯಕ್ಕೆ 137 ಕೋಟಿ 54 ಲಕ್ಷ 86ಸಾವಿರದಲ್ಲಿ ಸುಮಾರು 700 ಕೋಟಿ ಹಣ ಕಡಿತವಾಗಿದೆ, ಇದರಿಂದ  ಯೋಜನೆಯ ಮೇಲೆ ಈಗಾಗಲೇ ಕರಿನೆರಳು ಬೀರಲು ಪ್ರಾರಂಭವಾಗುತ್ತಿದೆ ಎಂದರಲ್ಲದೆ,  ಇದೊಂದು ಪ್ರತ್ಯೇಕ ಇಲಾಖೆ ಅಲ್ಲದ್ದರಿಂದ ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಂದ ಬಳಲುತ್ತಿದೆ ಅನುದಾನ ಕಡಿತವೂ ಮತ್ತೋಂದು ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.  ರಾಜ್ಯದಲ್ಲಿ ಸುಮಾರು 58 ಲಕ್ಷ ಫಲಾನುಭವಿಗಳಿದ್ದಾರೆ ಅವರಲ್ಲಿ 23.35% ಅಪೌಷ್ಠಿಕತೆ ಇರುವ ಮಕ್ಕಳು 914 ರಿಂದ 917 ಲಿಂಗ ತಾರತಮ್ಯವಿದೆ ದೊಡ್ಡ ಪ್ರಮಾಣದ ಮಹಿಳೆಯರ ಅಪೌಷ್ಠಿಕತೆಯೂ ಇದೆ ಇಂತಹ ಸಮಸ್ಯೆಗಳನ್ನೊಳಗೊಂಡಿರುವ ಇಲಾಖೆಯ ಕಾರ್ಯಕತರ್ೆಯರಿಗೆ ಯಾವುದೇ ಸವವಲತ್ತುಗಳನ್ನು ನೀಡದೇ ಇರುವುದು ಖಂಡನೀಯವಾಗಿದೆ ಅದ್ದರಿಂದ ರಾಜ್ಯ ಸಕರ್ಾರವಾದರೂ ನಮಗೆ ಅಗತ್ಯವಿರುವಂತಹ ಕನಿಷ್ಠ ಕೂಲಿ ಹಾಗೂ ಅನುದಾನ ಹೆಚ್ಚಳ ಮಾಡಬೇಕೆಂದು ತಿಳಿಸಿದರು.
ಅಂಗನವಾಡಿ ಕಾರ್ಯಕತರ್ೆ ಸಿ.ಆರ್.ತುಳಸಿ ಮಾತನಾಡಿ, ಐಸಿಡಿಎಸ್ ಯೋಜನೆಯ ಭಾಗವಾಗಿ ಅಂಗನವಾಡಿ ನೌಕರರ ಪರಿಸ್ಥಿತಿಯನ್ನು ಪರಿಗಣಿಸಿ ಕೇಂದ್ರ ಸಕರ್ಾರ 1500 ರಿಂದ 3000ರೂಗಳಿಗೆ ಅಂಗನವಾಡಿ ನೌಕರರನ್ನು ದುಡಿಸುತ್ತಿದೆ, ಇದರೊಂದಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ರಾಜ್ಯಸಕರ್ಾರದ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದು 40 ವರ್ಷಗಳ ಸೇವೆಯನ್ನು ಪೂರೈಸಿದ್ದರು ಯಾವುದೇ ನಿವೃತ್ತಿ ಸೌಲಭ್ಯವನ್ನು ನೀಡಿಲ್ಲ, 2011 ರಿಂದ ಗೌರವ ಧನವನ್ನು ಹೆಚ್ಚಳ ಮಾಡಿಲ್ಲ ಅಂಗನವಾಡಿ ಕಾರ್ಯಕತರ್ೆಯರ ಆರೋಗ್ಯದ ಬಗ್ಗೆ ಯಾವುದೇ ಯೋಜನೆಯನ್ನು ರೂಪಿಸಿಲ್ಲ ಈ ಬಗ್ಗೆ ಫೆ.15ರಂದು ಹೋರಾಟ ನಡೆಸಿ ಹಣಕಾಸು ಸಚಿವರಿಗೆ ಮನವಿಯನ್ನು ಸಹ ನೀಡಿದೆ ಆದರೂ ಈ ಬಜೆಟ್ನಲ್ಲಿ  ಕನಿಷ್ಠ ಕೂಲಿ ಮತ್ತು ಅನುದಾನವನ್ನು ಹೆಚ್ಚಳ ಮಾಡಿಲ್ಲ ಅದ್ದರಿಂದ ಸಕರ್ಾರಗಳು ಈ ಬಗ್ಗೆ ಗಮನ ಹರಿಸಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರಾದ ವೀಣಾ, ಜಯಮ್ಮ, ಸಿ.ಕೆ.ನಾಗಮ್ಮ, ಸಾವಿತ್ರಮ್ಮ, ಮೆಹಬೂಬಿ ಬಾನು, ನಾಗರತ್ನಮ್ಮ, ಬಿ.ಎಲ್.ಮಾಲತಿ, ಹೆಚ್.ಎನ್.ಜಯಲಕ್ಷ್ಮಮ್ಮ, ವರಲಕ್ಷ್ಮಿ, ಅಂಬಿಕಾ, ಲಕ್ಷ್ಮೀದೇವಮ್ಮ ಸೇರಿದಂತೆ ಹಲವಾರು ಕಾರ್ಯಕತರ್ೆಯರು ಭಾಗವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ಚಂಧ್ರಕುಮಾರ್ ಮನವಿಯನ್ನು ಸ್ವಿಕರಿಸಿದರು
.
ನವೋದಯ ಶಾಲಾ ವಿದ್ಯಾಥರ್ಿನಿಗೆ ಸರ್.ಸಿ.ವಿ.ರಾಮನ್ 


                                       
ಪ್ರಶಸ್ತಿ

ಚಿಕ್ಕನಾಯಕನಹಳ್ಳಿ,ಮಾ.02 : ತಾಲ್ಲೂಕಿನ ಬೋರನ ಕಣಿವೆ ಪ್ರೌಢಶಾಲೆಯಲ್ಲಿ ಇತ್ತಿಚೇಗೆ ನಡೆದ ವಿಜ್ಞಾನ ರಸಪ್ರೇಶ್ನೆ ಸ್ಫಧರ್ೇಯಲ್ಲಿ ಭಾಗವಹಿಸಿ 2015-16ನೇ ಸಾಲಿನ ಸರ್.ಸಿ.ವಿ.ರಾಮನ್ ಪ್ರಶಸ್ತಿಯನ್ನು  ಪಟ್ಟಣದ ನವೋದಯ ಪ್ರೌಢಶಾಲೆಯ 9ನೇ ತರಗತಿಯ ಪೂಜಾ ಎಸ್. ಆರ್. ಇವರು ಪಡೆದು ಶಾಲೆಗೆ ಕೀತರ್ಿ ತಂದಿದ್ದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ, ಮುಖ್ಯೋಪಾದ್ಯಾಯಿನಿ ಸುಧಾ ಸೇರಿಂದತೆ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಇವರಿಗೆ ಶುಭ ಕೋರಿದ್ದಾರೆ.
.

ಎನ್.ಆರ್.ಸಿಮೆಂಟ್ ಕಾಖರ್ಾನೆಯ ಮುಂದೆ ಸುತ್ತಮುತ್ತಲಿನ ಗ್ರಾಮಸ್ಥರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಮಾ.02: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಬಿ.ಹೆಚ್.ರಸ್ತೆಯ ಕನಕನಗರದ ಎನ್.ಆರ್ ಸಿಮೆಂಟ್ ಕಾಖರ್ಾನೆಯಿಂದ ಬರುವ ಧೂಳಿನಿಂದ ಪರಿಸರ ಹಾಗೂ ವಾಸಿಸುವ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು  ಮುದ್ದೇನಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಕಾಖರ್ಾನೆ ಮುಂಭಾಗ  ಪ್ರತಿಭಟನೆ ನಡೆಸಿದರು.
ಮುದ್ದೇನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಎನ್.ಆರ್.ಸಿಮೆಂಟ್ ಕಾಖರ್ಾನೆ ಎದುರು ಪ್ರತಿಭಟನೆ ನಡೆಸಿ ಕಾಖರ್ಾನೆ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದರು. 
ಎನ್.ಆರ್.ಸಿಮೆಂಟ್ ಕಾಖರ್ಾನೆ 20ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚೆಗೆ ಸಿಮೆಂಟಿನ ಬೇಡಿಕೆ ಹೆಚ್ಚಾಗಿದ್ದು ಇದರಿಂದ ಉತ್ಪಾದನೆ ಹೆಚ್ಚಾಗಿರುವುದರಿಂದ ಕಾಖರ್ಾನೆಯಿಂದ ಬರುವ ಸಿಮೆಂಟಿನ ಧೂಳು ಗಿಡಮರಗಳ ಹಾಗೂ ಮನೆಗಳ ಮೇಲೆ ಹರಡಿ ಪರಿಸರ ಹಾಗೂ ಮನುಷ್ಯರ ಆರೋಗ್ಯ ಹಾಳಾಗುತ್ತಿದೆ,  ಇದರಿಂದ ಕುಡಿಯುವ ನೀರು, ಆಹಾರದ ಮೇಲೆ ದುಷ್ಪರಿಣಾಮ ಬೀರುತ್ತಾ ಗ್ರಾಮಸ್ಥರು ದಿನನಿತ್ಯ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ದೂರಿದರು.     
ಗ್ರಾಮಸ್ಥ ಸ್ವಾಮಿ ಮಾತನಾಡಿ ಕಾಖರ್ಾನೆಯಿಂದ ಬರುವ ಧೂಳಿನಿಂದ ಸುತ್ತಮುತ್ತಲ ವಾತಾವರಣ ಕಲುಷಿತಗೊಂಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಇದರಿಂದ ಕುಡಿಯುವ ನೀರು, ಆಹಾರ, ಧವಸಧಾನ್ಯಗಳ ಮೇಲೆ ಧೂಳು ಕುಳಿತು ಪರಿಸರ ಹಾಳಾಗುತ್ತಿದೆ, ಈ ಬಗ್ಗೆ ಕಾಖರ್ಾನೆಯ ಮುಖ್ಯಸ್ಥರನ್ನು ಪ್ರಶ್ನಿಸಿದರೆ ಪೋಲಿಸರಿಗೆ ದೂರು ನೀಡುತ್ತೇವೆ ಎಂದು  ಧಮಕಿ ಹಾಕುತ್ತಾರೆ,  ಜನಪ್ರತಿನಿಧಿಗಳು ನಮ್ಮ ಸಮಸ್ಯಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
  ರೈತ ಮಹಿಳೆ ಶಾರದಮ್ಮ ಮಾತನಾಡಿ, ಎನ್.ಆರ್.ಸಿಮೆಂಟಿನ ಕಾಖರ್ಾನೆ ಪ್ರಾರಂಭವಾದರೆ ಈ ಭಾಗ ಧೂಳುಮಯವಾಗಿ ಬಿ.ಹೆಚ್.ರಸ್ತೆಯಲ್ಲಿ ಓಡಾಡುವ ವಾಹನಗಳು ಧೂಳಿನಿಂದ ಎದುರುಗಡೆ ಬರುವ ವಾಹನಗಳು ಕಾಣಿಸುವುದಿಲ್ಲ ಹಾಗೂ ಕುಡಿಯುವ ನೀರು ಸೇರಿದಂತೆ ಮನೆಯ ತುಂಬಾ ಧೂಳು ತುಂಬಿಕೊಳ್ಳುತ್ತಿದೆ, ಇದರಿಂದ ಈ ಭಾಗದಲ್ಲಿ ವಾಸಿಸುವ. ಅಸ್ತಮಾ, ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ, ಜಾನುವಾರುಗಳು ಇಲ್ಲಿನ ಧೂಳು ಮಿಶ್ರಿತ ಹುಲ್ಲನ್ನು ತಿಂದು ಹಸುಕರುಗಳು ಅನ್ಯಾರೋಗ್ಯಕ್ಕೆ ಒಳಗಾಗುತ್ತಿವೆ ಎಂದರು.
  ಕಾಮರ್ಿಕ ಮಂಜುನಾಥ್ ಮಾತನಾಡಿ ಈ ಕಾಖರ್ಾನೆಯಲ್ಲಿ ಕಾಮರ್ಿಕರಿಗೆ ಯಾವುದೇ ರೀತಿಯ ಸೇವಾ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಕಾಖರ್ಾನೆ ಮಾಲೀಕರು ಗಮನ ಹರಿಸುತ್ತಿಲ್ಲ ಎಂದು ದೂರಿದರು.
    ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶಶಿಕಲಾ ಮಂಜುನಾಥ್, ಶಿವಣ್ಣ, ನಾಯಕ್, ನಾಗರಾಜು, ಮಹೇಶ್ ಶಾರದಮ್ಮ, ಸರೋಜಮ್ಮ, ನರಸಿಂಹಯ್ಯ, ಸಿದ್ದಮ್ಮ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು  ಹಾಜರಿದ್ದರು.