Saturday, October 6, 2012


ಕಾವೇರಿಗೆ  ಚಿ.ನಾ.ಹಳ್ಳಿಯಲ್ಲಿ ಬಂದ್ಗೆ ಸಂಪೂರ್ಣ ಬೆಂಬಲ
aPÀÌ£ÁAiÀÄPÀ£ÀºÀ½î §AzïUÁV £ÉºÀgÀÄ ¸ÀPÀð¯ï §½ ¸ÀÛ§Ý
ka,ra,ve strice


memorandam sallike
raitha sangatane strice


ಚಿಕ್ಕನಾಯಕನಹಳ್ಳಿ,ಅ.06 : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು  ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕನರ್ಾಟಕ ಬಂದ್ಗೆ ತಾಲ್ಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಇಲ್ಲಿನ ಕನರ್ಾಟಕ ರಕ್ಷಣ ವೇದಿಕೆ, ಜನಪರ ವೇದಿಕೆ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸ್ಪಂದನ ಪ್ರಗತಿಪರ ಒಕ್ಕೂಟ, ಸ್ನೇಹಕೂಟ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ಟಿಪ್ಪುಸುಲ್ತಾನ್ ಯುವಕ ಸಂಘ, ಭುವನೇಶ್ವರಿ ಯುವ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ಸಾಹಿತ್ಯ ಪರಿಷತ್, ಛಾಯಾಗ್ರಾಹಕರ ಸಂಘ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಸಂಘ, ಕನ್ನಡಭಿಮಾನಿಗಳು ಕನರ್ಾಟಕ ಬಂದ್ಗೆ ಬೆಂಬಲಿಸಿ ಧರಣಿ ಸತ್ಯಾಗ್ರಹ ಹಾಗೂ  ಪ್ರತಿಭಟನೆ ನಡೆಸಿದವು.
ಆಸ್ಪತ್ರೆಗಳು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿದರು.
ಪ್ರತಿಭಟನೆಯ ವೇಳೆ ಸಂಚರಿಸುತ್ತಿದ್ದ ವಾಹನಗಳನ್ನು ಕನ್ನಡಪರ ಸಂಘಟನೆಗಳು ತಡೆದು ಬಂದ್ಗೆ ಸಹಕರಿಸುವಂತೆ ಒತ್ತಾಯಿಸಿದವು.
ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಎಸ್.ಮುರುಡಯ್ಯ ಮಾತನಾಡಿ ರಾಜ್ಯದಲ್ಲಿ ಈಗಾಗಲೇ ಮಳೆ ಇಲ್ಲದೆ  ಬರ ಬಂದು ರೈತರು ಕಂಗಾಲಾಗಿದ್ದಾರೆ, ರೈತರು ಬಿತ್ತಿರುವ ಬೆಳೆಗಳು ಅರ್ಧಕ್ಕೆ ಒಣಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಸುಪ್ರಿಂಕೋಟರ್್ ಅವೈಜ್ಞಾನಿಕ ತೀಪರ್ು ನೀಡಿದ್ದು ಈ ತೀರ್ಪನ್ನು ಕೂಡಲೇ   ಮರುಪರಿಶೀಲಿಸಿ ಕನರ್ಾಟಕ ರಾಜ್ಯದ ಸಮಸ್ಯೆಯ ಕಡೆಯೂ ಗಮನ ಹರಿಸಿ ತೀಪರ್ು ನೀಡಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಕಾವೇರಿ ನಮ್ಮವಳು, ಕೇಂದ್ರ ಸಕರ್ಾರ ಯಾರನ್ನೊ ಮೆಚ್ಚುಸುವುದಕ್ಕಾಗಿ ಕನರ್ಾಟಕದವರಿಗೆ ನೋವುಂಟು ಮಾಡಬಾರದು, ನಮ್ಮ ರಾಜ್ಯದಲ್ಲಿ ಬರದ ಈ ಸಂದರ್ಭದಲ್ಲಿ ಕುಡಿಯಲು  ನೀರಿಲ್ಲದೆ ಹಾಹಾಕಾರ ಪಡುತ್ತಿರುವಾಗ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತಿದ್ದಾರೆ, ಆ ನೀರಾದರೂ ಬೆಳೆಗೆ ಹೋಗುತ್ತಿದೆಯೇ ಎಂದರೆ  ಅದೂ ಇಲ್ಲ. ಪ್ರಾಧಿಕಾರದ ತೀಪರ್ು ಅವೈಜ್ಞಾನಿಕ ಎಂದು ಜರಿದರು.
ಪ್ರತಿಭಟನೆಯಲ್ಲಿ  ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶೆಟ್ಟೀಕೆರೆ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ದಬ್ಬೆಘಟ್ಟ ಜಗದೀಶ್,  ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಕಾರ್ಯದಶರ್ಿ ಸುರೇಶ್,  ಪುರಸಭಾ ಸದಸ್ಯರುಗಳಾದ ವರದರಾಜು, ದೊರೆಮುದ್ದಯ್ಯ, ಸಿ.ಎಂ.ರಂಗಸ್ವಾಮಯ್ಯ, ಎಂ.ಎನ್.ಸುರೇಶ್, ಸಿ.ಎಸ್.ರಮೇಶ್, ರಾಜಣ್ಣ, ರುಕ್ಮಿಣಮ್ಮ,  ತಾ.ಭಾಜಪ ಹಿಂದುಳಿದ ವರ್ಗಗಳ ಅಧ್ಯಕ್ಷ  ಶ್ರೀನಿವಾಸಮೂತರ್ಿ, ತಾ.ಕ.ಸಾ.ಪ.ಅಧ್ಯಕ್ಷ ಎಂ.ಎಸ್.ರವಿಕುಮಾರ್, ನಗರ ಕೇಂದ್ರಿತ ಘಟಕದ ಅಧ್ಯಕ್ಷ ಸುನಿಲ್ಕುಮಾರ್,  ಕೃಷ್ಣೆಗೌಡ, ಸಿದ್ದರಾಮಯ್ಯ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ಸೇರಿದಂತೆ ಕನ್ನಡ ಪರ ಅಭಿಮಾನಿಗಳು ಪಾಲ್ಗೊಂಡಿದ್ದರು.