Saturday, April 9, 2016


ಯುಗಾದಿ ಸಂಭ್ರಮಕ್ಕೆ ಎಣ್ಣೆಸ್ನಾನ ಮಾಡಿಕೊಂಡು ಹಬ್ಬ ಆಚರಣೆ
ಚಿಕ್ಕನಾಯಕನಹಳ್ಳಿ,ಏ.09 : ಯುಗಾದಿ ಹೊಸ ವರ್ಷದ ಹಬ್ಬವನ್ನು ಹಿರಿಯರು, ಮಕ್ಕಳು ಎಣ್ಣೆಸ್ನಾನ ಮಾಡಿಕೊಂಡು ಮನೆಯನ್ನು  ಮಾವಿನ ತೋರಣ ಹಾಗೂ ಬೇವಿನ ಹೂವಿಗಳನ್ನು ಮನೆಯಲ್ಲಿ ಸಿಂಗರಿಸಿ, ಗೋವಿಗೆ ನವಗ್ರಹದಾನ್ಯವನ್ನು ನೀಡಿ ಯುಗಾದಿ ಹಬ್ಬವನ್ನು ಸಂತೋಷದಿಂದ ಆಚರಿಸಿದರು.
ಬೇವು ಬೆಲ್ಲ ಹಂಚಿ ನೆರೆಹೊರೆಯ ಸಾಮರಸ್ಯವನ್ನು ವೃದ್ದಿಕೊಳ್ಳಿಸುವುದು ಯುಗಾದಿ ಹಬ್ಬದ ವಾಡಿಕೆ, ಅದೇ ರೀತಿ ಜನರು ತಮ್ಮ ತಮ್ಮ ಇಷ್ಟದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಮುಂಜಾನೆಯೇ ಎದ್ದು, ಹಬ್ಬಕ್ಕೆ ಬೇಕಾದಂತಹ ತಯಾರಿ ಮಾಡಿಕೊಂಡ ಜನತೆ ಹೊಸವರ್ಷ ಹಾಗೂ ಯುಗಾದಿಯ ಸಂಭ್ರಮವನ್ನು ನೆರೆಹೊರೆಯವರೊಂದಿಗೆ ಶುಭಾಷಯ ಹೇಳುವ ಮೂಲಕ ಹಂಚಿಕೊಂಡರು.
ಎಣ್ಣೆಸ್ನಾನ : ಯುಗಾದಿಯಂದು ಎಣ್ಣೆಸ್ನಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ವಿಶೇಷ, ಅದರಂತೆ ಚಿಕ್ಕಮಕ್ಕಳಿನಿಂದ , ಯುವಕರು, ಹಿರಿಯರವರೆಗೆ ಪ್ರತಿಯೊಬ್ಬರೂ ಮೈಗೆ ಹರಳೆಣ್ಣೆಯನ್ನು ಹಚ್ಚಿಕೊಂಡಿದ್ದರು, ಚಿಕ್ಕಮಕ್ಕಳು ಎಣ್ಣೆ ಹಚ್ಚಿಕೊಂಡು ಜೂಟಾಟ, ಚೆಂಡಾಟ ದಂತಹ ಆಟಗಳನ್ನು ಆಡಿದರೆ ಯುವಕರು ಕಬ್ಬಡ್ಡಿ, ಥ್ರೋಬಾಲ್, ದೇಹಪ್ರದರ್ಶನ ದಂತಹ ಆಟಗಳನ್ನು ಆಡುತ್ತಿದ್ದದ್ದು ವಿಶೇಷವಾಗಿತ್ತು.
ಮಹಿಳೆಯರು ಎಂದಿನಂತೆ ತಮ್ಮ ತಮ್ಮ ಮನೆಗಳಲ್ಲಿ ಯುಗಾದಿ ಹಬ್ಬಕ್ಕೆ ಹೋಳಿಗೆ ಊಟವನ್ನು ಸಿದ್ದಪಡಿಸಿ ಹಬ್ಬದ ಹೆಸರಿನಲ್ಲಿ ಸಿಹಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದದ್ದು ಎಲ್ಲೆಡೆಯೂ ಕಂಡುಬಂದಿತು. 

ಗೋಪಾಲನಹಳ್ಳಿಯಲ್ಲಿ ಹಾರಕ ಸಿರಿಧಾನ್ಯ ಬೆಳೆಯ ಬಗ್ಗೆ ಸಚಿವರ ಮಾಹಿತಿ
ಚಿಕ್ಕನಾಯಕನಹಳ್ಳಿ,ಏ.09 : ಗೋಪಾಲನಹಳ್ಳಿಯ ಹಾರಕ ಬೆಳೆಗಾರರ ಸಂಘದ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ ಸಿರಿಧಾನ್ಯಗಳಾದ ಹಾರಕ, ನವಣೆ, ಸಾವೆ, ಕೊರಲೆ ಬೀಜದಿಂದ ಅಕ್ಕಿ ಬೇರ್ಪಡಿಸುವ ಯಂತ್ರ ಮತ್ತು ಇನ್ಸಿಂಪ್ ಯೋಜನೆಯಿಂದ ಕೃಷಿ ಇಲಾಖೆ ಶೇ.100ರ ರಿಯಾಯಿತಿಯಲ್ಲಿ ವಿತರಿಸುವ ಹಿಟ್ಟುಮಾಡುವ ರಾಗಿಶುದ್ದೀಖರಿಸುವ ತೂಕದ ಸೀಲಿಂಗ್ ಮಿಷನ್ಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಕರ್ಾರದ ಸವಲತ್ತುಗಳನ್ನು ಹಾರಕ ಬೆಳೆಗಾರರ ಸಂಘ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದಕ್ಕೆ ತೃಪ್ತಿವ್ಯಕ್ತಪಡಿಸಿ, ಬಹಳ ದಿನಗಳಿಂದ ಈ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಬೇಕೆಂದು ಕೊಂಡಿದ್ದೆ ಎಂದರಲ್ಲದೆ ಸಂಘದ ಸದಸ್ಯರುಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ, ಸಿರಿಧಾನ್ಯಗಳಿಂದಲೇ ತಯಾರಿಸಿದ ಹಾರಕದ ಮೊಸರು, ಹಾರಕದ ಟೊಮಟೊಬಾತ್, ನವಣೆಪಾಯಸ ಸಂಪ್ರದಾಯಕ ಬೆಳೆಗಳ ಆಹಾರ ಆರೋಗ್ಯಕ್ಕೂ ತುಂಬ ಸಹಕಾರಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಿರಿಧಾನ್ಯಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದ್ದು ನಗರಗಳಲ್ಲಿ ಸಿರಿಧಾನ್ಯಗಳ ಮಳಿಗೆಗಳ ಸ್ಥಾಪನೆಯಿಂದ ಈ ಆಹಾರಗಳನ್ನು ಬಳಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು. ಗೋಪಾಲನಹಳ್ಳಿಯಲ್ಲಿ ಕಳೆದ 5-6ವರ್ಷಗಳಿಂದ ಸಿರಿಧಾನ್ಯಗಳ ಉಳಿವಿಗಾಗಿ ಯುವಕರ ಸಂಘ ರಚಿಸಿ ಹಾರಕ ಬೆಳೆಯನ್ನು ಪುನಃ ಮರಳಿ ಉಳಿಸಿದ ಯುವಕರ ಸಂಘದವರನ್ನು ಪ್ರಶಂಸಿದರು.
ಹಾರಕ ಬೆಳೆಗಳಾದ ನವಣೆ, ಸಾವೆ, ಕೊರಲೆ, ಅಕ್ಕಿಯನ್ನು ಕೊಂಡೊಯ್ದದ್ದು ವಿಶೇವಾಗಿತ್ತು, ಆಗಮಿಸಿದ್ದ ಗಣ್ಯರಿಗೆ ಸಿರಿಧಾನ್ಯಗಳಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.  
ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯ ಕಲ್ಲೇಶ್, ನಾರಾಯಣ್, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲನಹಳ್ಳಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್, ಸದಸ್ಯರಾದ ಜಿ.ಪಿ.ಮಂಜುನಾಥ್, ಜಿ.ಎಸ್.ನಿರಂಜನ್, ಸುರೇಶ್, ರಂಗಯ್ಯ, ಬಸವರಾಜು, ಪ್ರದೀಪ್, ಜಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.

ಮಾಕುವಳ್ಳಿಯ ಎಂ.ಎನ್.ಕಲ್ಲಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಏ.9: ತಾಲೂಕಿನ ಶೆಟ್ಟೀಕೆರೆಯ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಮಾಕುವಳ್ಳಿ ಎಂ.ಎನ್.ಕಲ್ಲಯ್ಯ(80) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಾಕುವಳ್ಳಿ ಗ್ರಾಮದ ಕರಿಯಮ್ಮ ದೇವಾಲಯದ ಗುಡಿಗೌಡರಾಗಿದ್ದ ಇವರು, ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮಗಳ ಮನೆಯಿದ್ದ ಎಳ್ಳೆನಹಳ್ಳಿಯಿಂದ ತಮ್ಮ ಸ್ವಗ್ರಾಮವಾದ ಮಾಕುವಳ್ಳಿಗೆ ಬರುವ ಮಾರ್ಗ ಮಧ್ಯೆ ದ್ವಿಚಕ್ರವಾಹನದಲ್ಲಿ ಬರುವಾಗ ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಮಗಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಗ್ರಾಮಸ್ಥರ ಆಗ್ರಹ
ಚಿಕ್ಕನಾಯಕನಹಳ್ಳಿ,ಏ.9: ತಾಲ್ಲೂಕಿನ ನವಿಲೆ ಹಾಗೂ ಮೇಲನಹಳ್ಳಿ ಕೆರೆಗಳಲ್ಲಿ ಮರಳು ಲೂಟಿಯಾಗುತ್ತಿದೆ. ಅಕ್ರಮವಾಗಿ ಮರಳು ಸಾಗಿಸುತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೇಲನಹಳ್ಳಿ ಮತ್ತು ಮಾರಸಂದ್ರ ಗ್ರಾಮಸ್ಥರು ತಾಲ್ಲೂಕು ಕಛೇರಿ ಎದುರು ಪ್ರತಿಭಟಿಸಿದರು.
 ಈ ಸಂದರ್ಭದಲ್ಲಿ  ಗ್ರಾಮಸ್ಥ ಎಂ.ರಾಜಶೇಖರ್ ಮಾತನಾಡಿ, ಸುತ್ತ ಮುತ್ತಲಿನ ಹಳ್ಳಿಗಳ ರೈತರನ್ನೇ ಬಳಸಿಕೊಂಡು ಎತ್ತಿನ ಗಾಡಿಗಳಲ್ಲಿ ಕೆರೆಯಿಂದ ಮರಳನ್ನು ಹೊರಗಡೆ ಸಾಗಿಸಲಾಗುತ್ತಿದೆ, .ತೋಟ, ಹೊಲಗಳಲ್ಲಿ ಮರಳನ್ನು ಸಂಗ್ರಹಿಸಲಾಗುತ್ತಿದೆ. ರಾತ್ರಿ ವೇಳೆ ಟ್ರಾಕ್ಟರ್ಗಳ ಮೂಲಕ ಸಂಗ್ರಹವಾದ ಮರಳನ್ನು ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ. ಈ ದಂಧೆ ನಿರಂತರವಾಗಿ ಕಳೆದ ಎರಡು ತಿಂಗಳಿಂದಲೂ ನಡೆಯುತ್ತಿದೆ.ಆದರೂ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಪೊಲೀಸರಾಗಲಿ ಮರಳು ಲೂಟಿಯನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
  ಗ್ರಾಮಸ್ಥರಾದ ಹರೀಶ್ ಹಾಗೂ ರಮೇಶ್ ಮಾತನಾಡಿ,ಕೆರೆಗಳಲ್ಲಿ ಮರಳು ಬಾಚುತ್ತಿರುವುದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ.ಪ್ರತೀ ದಿನ 50ಕ್ಕೂ ಹೆಚ್ಚು ಎತ್ತಿನ ಗಾಡಿ ಮರಳು ಸಾಗಿಸುತ್ತಿವೆ ದಿನವೊಂದಕ್ಕೆ ಸುಮಾರು 800 ಎತ್ತಿನಗಾಡಿ ಮರಳು ಕೆರೆಯಿಂದ ಹೊರಕ್ಕೆ ಸಾಗಿಸಲ್ಪಡುತ್ತಿವೆ, ಅಲ್ಲಿಂದ ಟ್ರ್ಯಾಕ್ಟರ್ಗಳಲ್ಲಿ ಪಟ್ಟಣಗಳಿಗೆ ಹೊಡೆಯಲಾಗುತ್ತಿದೆ ಎಂದ ಅವರು, ಇದರಿಂದ ಕಾರ್ಯನಿರ್ವಹಿಸುತ್ತಿದ್ದ ಕೊಳವೆಬಾವಿಗಳು ಏಕಾಏಕಿ  ಬತ್ತುತ್ತಿವೆ. ತೆಂಗು,ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ ಎಂದರು.
  ಮರಳು ತುಂಬಲು ಅಮಾಯಕ ರೈತರು ಹಾಗೂ ಕೂಲಿ ಕಾಮರ್ಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಮರಳು ದಿಬ್ಬಕುಸಿದು ಅಮಾಯಕ ಕಾಮರ್ಿಕರು ಬಲಿಯಾಗಿರುವ ಉದಾಹರಣೆಗಳು ಇವೆ. ತಕ್ಷಣ ಮರಳು ಲೂಟಿ ನಿಲ್ಲಿಸಬೇಕು ಎಂದು ಮನವಿ ಸಲ್ಲಿಸಿದರು.
 ತಹಶಿಲ್ದಾರ್ ಆರ್.ಗಂಗೇಶ್ ಮನವಿ ಸ್ವೀಕರಿಸಿ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶಿಲಿಸಲಾಗುವುದು .ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು : ಎನ್.ಪಿ.ಕುಮಾರಸ್ವಾಮಿ
ಚಿಕ್ಕನಾಹಯಕನಹಳ್ಳಿ,ಏ.9: ಶಿಕ್ಷಣ ಮಕ್ಕಳ ಹಕ್ಕು ಅದನ್ನು ಕಿತ್ತುಕೊಳ್ಳುವ ಹಕ್ಕು ಹುಟ್ಟಿಸಿದ ತಂದೆ ತಾಯಿಗೂ ಇಲ್ಲ ಎಂದು ಹಂದನಕೆರೆ ಹೋಬಳಿ ಶಿಕ್ಷಣ ಸಂಯೋಜಕ ಎನ್.ಪಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗಾಪುರ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,  ಪೋಷಕರು ತಮ್ಮ, ಅಜ್ಞಾನದ ಕಾರಣಕ್ಕೋ,ಆಥರ್ಿಕ ಸಂಕಷ್ಟದ ಕಾರಣಕ್ಕೋ ಅಥವಾ ಇನ್ನಿತರೆ ಸಮಸ್ಯೆಗಳಿಂದಲೋ ಮಕ್ಕಳನ್ನು ಶಾಲೆ ಬಿಡಿಸುವ ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಇದೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಅದನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದರು.
  ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಮಕ್ಕಳು ಅರ್ಧಕ್ಕೆ ಶಾಲೆ ಬಿಡಬಾರದು ಎಂಬ ಕಾರಣಕ್ಕೆ ಅನೇಕ ಸೌಲಭ್ಯ ನೀಡಿದೆ.ಸೌಲಭ್ಯ ಬಳಸಿಕೊಂಡು ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ದೊಡ್ಡ ಸ್ಥಾನಕ್ಕೆ ಏರಬೇಕು ಎಂದರು.
  ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ,ಸಕರ್ಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಖಾಸಗಿ ಶಾಳೆ ಶಿಕ್ಷಕರುಗಳಿಗಿಂತ ಉನ್ನತ ಹಾಗೂ ಗುಣಮಟ್ಟದ ತರಬೇತಿ ಹೊಂದಿರುತ್ತಾರೆ. ಸಕರ್ಾರಿ ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಳಗುಲಿ ಗ್ರಾಪಂ ಅಧ್ಯಕ್ಷ ಮಧುಚಂದ್ರ, ಸದಸ್ಯೆ ರಂಗಮ್ಮ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯ ಚೌಡಯ್ಯ, ಮುಖಂಡರಾದ ಕರಿಯಪ್ಪ, ಆರ್.ಬಿ.ರಂಗಧಾಮಯ್ಯ,ಆರ.ಎಲ್.ಶಾಂತರಾಜು,ಶ್ರೀಕಂಠಯ್ಯ, ಮುಖ್ಯೋಪಾಧ್ಯಾಯ ಶಿವಣ್ಣ ಮುಂತಾದವರು ಹಾಜರಿದ್ದರು.

ಬುದ್ದಿಗಿಂತ ಹೃದಯವಂತಿಕೆ, ಓದಿಗಿಂತ ಅನುಭವ ದೊಡ್ಡದು
  ಚಿಕ್ಕನಾಯಕನಹಳ್ಳಿ,ಏ.9: ಬುದ್ದಿಗಿಂತ ಹೃದಯವಂತಿಕೆ, ಓದಿಗಿಂತ ಅನುಭವ ಹಾಗೂ ವ್ಯಕ್ತಿಗಿಂತ ಸಮಾಜ ಯಾವಾಗಲೂ ದೊಡ್ಡದು ಎಂಬ ಸತ್ಯವನ್ನು ವಿದ್ಯಾಥರ್ಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿ ಹೇಳಿದರು.
ಈಚೆಗೆ ತಾಲ್ಲೂಕಿನ ಬಗ್ಗನಹಳ್ಳಿ ಗ್ರಾಮದಲ್ಲಿ ನವೋದಯ ಪ್ರಥಮದಜರ್ೆ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಕುಚಿತ ಮನೋಭಾವನೆ ಹಾಗೂ ಯಾಂತ್ರಿಕತೆ ಬದುಕನ್ನು ಭಾವ ಶೂನ್ಯವಾಗಿಸಿವೆ.  ಭಾವನಾತ್ಮಕತೆ ಕೇವಲ ವ್ಯಕ್ತಿ ಹಾಗೂ ಮನೆಗೆ ಸೀಮಿತವಾಗಿದೆ. ಸುತ್ತಮುತ್ತಲ ಪರಿಸರ ಹಾಗೂ ಗ್ರಾಮವೂ ನಮ್ಮದೇ ಎಂಬ ಹೃದಯ ವೈಶಾಲ್ಯತೆ ಮರೆಯಾಗುತ್ತಿದೆ  ಎಂದರು.
  ಎನ್ಎಸ್ಎಸ್ ಶಿಬಿರಗಳು ವಿದ್ಯಾಥರ್ಿಗಳಿಗೆ ಅನುಭವ ಹಾಗೂ ಜನರಲ್ಲಿ ಅರಿವು ಮೂಡಿಸುವಂತಿರಬೇಕು. ಬೀದಿ, ಗ್ರಾಮ ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದೆಂದರೆ ಇತರರಿಗೆ ತೊಂದರೆಯಾಗದಂತೆ ಬಾಳುವುದೇ ಆಗಿದೆ. ಪ್ರಗತಿಯ ತೇರು ಸ್ವಚ್ಛತೆ ಹಾಗೂ ಸೇವೆ ಎಂಬ ಗಾಲಿಗಳ ಮೇಲೆ ಚಲಿಸುವಂತದ್ದು ಎಂದರು. 
   ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಸಿ.ರವಿಕುಮಾರ್  ಐದು ದಿನಗಳ ಶಿಬಿರದ ಮಾಹಿತಿಯನ್ನು ಓದಿದರು.ಎನ್ಎಸ್ಎಸ್ ವಿದ್ಯಾಥರ್ಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಫೈರ್ ಕ್ಯಾಂಪ್ ನಡೆಸಲಾಯಿತು. ಶಿಬಿರಾಥರ್ಿಗಳು, ಗ್ರಾಮಸ್ಥರು ಖುಷಿಯಿಂದ ಪಾಲ್ಗೊಂಡರು. ನವೋದಯ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಕಾಲೇಜಿನ ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಗ್ರಾಮಪಂಚಾಯಿತಿ ಸದಸ್ಯ ಚಂದ್ರಶೇಖರ್, ಶಿಬಿರಾಧಿಕಾರಿ ಲೋಕೆಶ್, ಹಾಜರಿದ್ದರು.