Monday, April 21, 2014


ಎ.ಟಿ.ಎಂ.ನಲ್ಲೇ ಬಿಟ್ಟು ಹೋಗಿದ್ದ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದ ಹೇಮಂತ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.21: ಬ್ಯಾಂಕ್ ಡಿಸ್ಪೆಂನ್ಸರ್(ಹಣ ನೀಡುವ ಯಂತ್ರ)ನಲ್ಲಿ ಎಟಿಎಂ ಮೂಲಕ ಹಣ ಪಡೆಯಲು ಹೋಗಿದ್ದ ವ್ಯಕ್ತಿಗೆ ಹಣ ದಕ್ಕದೆ ನಂತರ ಬಂದ ವ್ಯಕ್ತಿಗೆ ಹಣ ಸಿಕ್ಕಿತ್ತು.ಹಣ ಪಡೆದ ವ್ಯಕ್ತಿ ಬ್ಯಾಂಕ್ ವ್ಯವಸ್ಥಾಪಕ ಎಚ್.ಡಿ.ಶಂಕರ್ಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
  ಕಂಪ್ಯೂಟರ್ ಇಂಟರ್ನೆಟ್ ಮುಂತಾದ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರಿಗೆ ಡಿಸ್ಪೆಂಸರ್ ಲೋಪದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ರಿತಿಯಲ್ಲಿ ಎಟಿಎಂ ಯಂತ್ರ ತಂದಿರುವ ಅವಾಂತರ ಇದು.
  ಏ.16ರಂದು ಬೆಳಗ್ಗೆ 7.10ರ ಸಮಯದಲ್ಲಿ ಹಣಕಾಸಿನ ಅಗತ್ಯತೆ ಮೇರೆಗೆ ಎಟಿಎಂ ಖಾತೆದಾರ ಶೆಟ್ಟಿಕೆರೆ ಗೇಟ್ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆವರಣದಲ್ಲಿರುವ ಎಟಿಎಂಗೆ ಬಂದ ವ್ಯಕ್ತಿಗಳು ಹಣ ತೆಗೆಯಲು ಸಿಕ್ರೇಡ್ ಕೋಡ್ ನಮೂದಿಸಿ ಹಣ ಪಡೆಯಲು ಮುಂದಾಗಿದ್ದಾರೆ.ಆದರೆ ತಾಂತ್ರಿಕ ದೋಷದಿಂದಾಗಿ ಹಣ ಬಾರದೆ ಇದ್ದ ಕಾರಣ ಪಕ್ಕದಲ್ಲೇ ಇದ್ದ  ಇನ್ನೊಂದು ಡಿಸ್ಪೆಂನ್ಸರ್ ನಿಂದ ಹಣ ತೆಗೆದುಕೊಂಡು ಹೋಗಿದ್ದಾರೆ.ಕೈಕೊಟ್ಟ ಡಿಸ್ಪೆಂನ್ಸರ್ ಯಂತ್ರ ನಂತರ ರೂ.7600 ಹಣ ಹಾಚೆ ಹಾಕಿದೆ.
  ಇದೇ ಸಮಯದಲ್ಲಿ ಸರಿಯಾಗಿ.ಹೇಮಂತ್ಕುಮಾರ್ ಎಂಬುವರು ಹಣ ತೆಗೆಯಲು ಎಟಿಎಂ ಒಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಸದರಿ ಹಣವನ್ನು ಕಂಡು ಹಣವನ್ನು ತೆಗೆದುಕೊಂಡು ಬ್ಯಾಂಕ್ ಮೇನೇಜರ್ ಕಾಣಲು ಹೋಗಿದ್ದರು ಆದರೆ ವ್ಯವಸ್ಥಾಪಕರು ಇಲ್ಲದ ಕಾರಣ ಹಣವನ್ನು ತಾವೇ ಇಟ್ಟುಕೊಂಡು ಸೋಮವಾರ ವ್ಯವಸ್ಥಾಪಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
 ಈ ಸಂಬಂಧ ಎಸ್.ಬಿ.ಎಂ. ವ್ಯವಸ್ಥಾಪಕ ಎಚ್.ಡಿ.ಶಂಕರ್ ವಿಚಾರನೆ ನಡೆಸಿದ್ದಾರೆ, ನಂತರದಲ್ಲಿ  ಮಾತನಾಡಿದ ವ್ಯವಸ್ಥಾಪಕ ಎಚ್.ಡಿ.ಶಂಕರ್,   ವಿವಿಧ ಬ್ಯಾಂಕ್ಗಳ ಎಟಿಎಂ ಕಾಡರ್್ ಬಳಸುವ ಸಂದರ್ಭದಲ್ಲಿ  ಬ್ಯಾಟರಿ ಬ್ಯಾಕಪ್ ನಿಂದ ಹಣ ತಡವಾಗಿ ಬರುವ ಸಾಧ್ಯತೆ ಇದ್ದು ಗ್ರಾಹಕರು ಆತುರಪಡದೆ ಕಾಯಬೇಕು ಎಂದರು. ಹಣದ ವ್ಯತ್ಯಯಕ್ಕೆ ಕಾಡರ್್ದಾರರೇ ಕಾರಣರಾಗುತ್ತಾರೆ. ಒಂದು ವೇಳೆ ಗ್ರಾಹಕರು ದೂರುನೀಡಿದರೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು. ಈ ಹಣವನ್ನು ಸೆಂಟ್ರೀ ಡೆಪಾಸಿಟ್ ಅಕೌಂಟ್ನಲ್ಲಿ ಹಿಡಲಾಗುವುದು. ಬಾಂಬೆಯಲ್ಲಿ ಇರುವ ಸ್ವಿಥ್ ಸೆಂಟರ್ ಮಾಹಿತಿ ಪಡೆದು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುವುದು ಎಂದರು. ಎಟಿಎಂನಿಂದ ಹಣ ಪಡೆಯುವ ಗ್ರಾಹಕರು ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
  


ಚಿಕ್ಕನಾಯಕನಹಳ್ಳಿ,ಏ.21 : ಭೂ ಹೊದಿಕೆ ಮತ್ತು ಬಳಕೆಯ ಸಾಂಪ್ರದಾಯಿಕ ಜ್ಞಾನವನ್ನು ಹಾಳು ಮಾಡಿಕೊಂಡಿರುವುದರಿಂದ ಜಲಕ್ಷಾಮ ಆವರಿಸಿದೆ.ಬಯಲು ನಾಡಿನಲ್ಲಿ ಬೀಳುತ್ತಿರುವ ಶೇ.35ರಷ್ಟು ಮಳೆನೀರು ಮಾತ್ರ ಕೃಷಿಗೆ ಬಳಕೆಯಾಗುತ್ತಿದೆ.ಉಳಿದ ಶೇ.65ಭಾಗ ಪೋಲಾಗುತ್ತಿದೆ ಎಂದು ಪರಿಸರವಾದಿ ಪ್ರೊ.ಸಿ.ಯತಿರಾಜ್ ಆತಂಕ ವ್ಯಕ್ತಪಡಿಸಿದರು.

  
  ತಾಲ್ಲೂಕಿನ ಕಂದಿಕೆರೆ ಹೋಬಳಿ ಕಣಿವೆ ಕ್ರಾಸ್ ಬಳಿ ರಮೇಶ್ ತೊಟದಲ್ಲಿ ಸೃಜನ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರ ಸಂಯುಕ್ತವಾಗಿ ಆಯೋಜಿಸಿರುದ್ದ ಸಿರಿಧಾನ್ಯಬೆಳೆ ಮಹತ್ವ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇದನ್ನು ಸರಿಯಾಗಿ ಬಳಸಿಕೊಳ್ಳಲು ಮುಚ್ಚಿಗೆ ಹೊದಿಕೆ ಮತ್ತು ಸರಿ ಹೊಂದುವ ಬೆಳೆ ವಿನ್ಯಾಸ ಅಳವಡಿಸಿಕೊಳ್ಳುವುದೊಂದೆ ಸರಿಯಾದ  ದಾರಿ ಎಂದರು.
ಅಂತರ್ಜಲದ ಅಪವ್ಯಯದಿಂದ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿ,ತಾಲ್ಲೂಕು ತಾಲ್ಲೂಕುಗಳಲ್ಲಿ ಜಲಸಂಘರ್ಷ ಶುರುವಾಗಲಿ,ಬಯಲು ನಡಿಗೆ ಒಗ್ಗುವ ಸರಿಯಾದ ಬೆಳೆ ವಿನ್ಯಾಸ ನೀರು ನಿರ್ವಹಣೆ ಕ್ರಮವನ್ನು ಅನುಸರಿದರೆ ಬೀಳುವ ಮಳೆಯಲ್ಲಿ ಸಮೃದ್ಧಿ ಕಾಣಬಹುದು ಎಂದರು.
ಇಂದಿನ ಕೃಷಿ ಅಧೊಗತಿಗೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಗಳು ಕಾರಣ.ಇಲಾಖೆಯ ಸಲಹೆಯಂತೆ ರೈತರು ಅಡಿಕೆ ಮತ್ತು ತೆಂಗು ಬೆಳೆಗಳನ್ನು ಹಾಕಿದ್ದಾರೆ.ತೊಟ ಉಳಿಸಿಕೊಳ್ಳಲು ಅಂತರ್ಜಲದ ವಿಪರೀತ ಬಳಕೆಗೆ ತೊಡಗಿದ್ದಾರೆ.ರಾಜಕಾರಣಿಗಳು ಶಾಶ್ವತ ನೀರಾವರಿ ಅಂಥ ಸಮುದ್ರಕ್ಕೆ ಹೋಗುವ ನೀರನ್ನು ಬಯಲುನಾಡಿಗೆ ಹರಿಸುತ್ತೇವೆ ಅನ್ನುತ್ತಾರೆ. ಅವು ನೀರಿನ ದಾಹ ಮತ್ತು ಸಂಘರ್ಷ ಹೆಚ್ಚಿಸುತ್ತವೆ. ಆದರೆ ನಮಗೆ ನಿರಾವರಿ ಯೋಜನೆಗಳು ಬೇಡ ಬದಲಿಗೆ ಬಿದ್ದ ಮಳೆನೀರನ್ನು ಭೂಮಿಗೆ ಇಂಗಿಸಿ ಭವಿಷ್ಯದ ನೀರಿನ ನಿಧಿ ಭದ್ರಪಡಿಸಿಕೊಳ್ಳುವ ಯೋಜನೆಗಳು ಬೇಕು ಎಂದು ಅಭಿಪ್ರಾಯಪಟ್ಟರು.
  ಕಾಡು ಕೃಷಿ ಪ್ರತಿಪಾದಕ ಡಾ.ಖಾದರ್ ಮಾತನಾಡಿ,ತೋಟ ಹೊಲಗಳಲ್ಲಿ ಉಳಿವ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡುವ ಪರಿಪಾಟ ರೈತರಲ್ಲಿದೆ ಅದು ತಪ್ಪು.ಕೃಷಿ ಉಳಿಕೆಗಳುನ್ನು ಭೂ ಹೊದಿಕೆಯನ್ನಾಗಿ ಪರಿವತರ್ಿಸುವುದರಿಂದ ಅಂತರ್ಜಲ ಹಾವಿಯಾಗದಂತೆ ತಡೆಯಬಹುದು ಮತ್ತು ಕೋಟ್ಯಾಂತರ ಸೂಕ್ಷ್ಮಾಣುಗಳ ವೃದ್ಧಿಗೂ ಕಾರಣವಾಗುತ್ತದೆ ಆದ್ದರಿಂದ ಉಳಿಕೆಗೆ ಬೆಂಕಿ ಹಾಕಬೇಡಿ. ಕಾಡು ಮತ್ತು ಗುಡ್ಡಗಳಿಗೆ ಬೆಂಕಿ ಹಾಕುವುದು ಅಕ್ಷಮ್ಯ ಅಪರಾಧ ಎಂದರು
  ಬಯಲು ನಾಡಿನ ಕೃಷಿಗೆ ಸಿರಿಧಾನ್ಯಗಳಾದ ಹಾರ್ಕ,ನವಣೆ ಸಾವೆ,ಸಜ್ಜೆ,ರಾಗಿ,ಕೊರಲೆ,ಹುರುಳಿ ಅಲಸಂದೆ ಮುಂತಾದವುಗಳು ಸೂಕ್ತವಾಗಿವೆ ರೈತರು ಉದಾಸೀನ ಮಾಡದೆ ಸಿರಿಧಾನ್ಯಗಳ ಬಿತ್ತನೆಗೆ ಮುಂದಾಗಿ ಎಂದರು.
  ಕಾರ್ಯಕ್ರಮದಲ್ಲಿ ಗ್ರೀನ್ ಇನೋವೇಟೀವ್ ಫೌಂಡೇಷನ್ನ ಚಮದ್ರಶೇಖರ್ ಬಾಳೆ, ವಿಜ್ಞಾನ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್,ರಾಮಕೃಷ್ಣಪ್ಪ,ಸೃಜನ ಕಾರ್ಯದಶರ್ಿ ಇಂದಿರಮ್ಮ, ಕಂದಿಕೆರೆ ವಲಯ ಕೃಷಿ ಅಧಿಕಾರಿ ನಾಗರಾಜು,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮುಂತಾದವರು ಇದ್ದರು.