Monday, January 17, 2011





ಕುವೆಂಪುರವರಿಗೆ ಶಿಕ್ಷಣ, ವಿವಾಹ, ಕೆಲಸ, ಎಲ್ಲವನ್ನು ನೀಡಿದ್ದು ರಾಮಕೃಷ್ಣಾಶ್ರಮ: ವಿರೇಶನಂದಜೀ.
ಚಿಕ್ಕನಾಯಕನಹಳ್ಳಿ,ಜ.17: ರಾಷ್ಟ್ರ ಕವಿ ಕು.ವೆಂ.ಪು.ರವರಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ಕೆಲಸಕ್ಕೆ ಸೇರಿಸಿದ್ದು, ಅವರ ವಿವಾಹವನ್ನು ಮಾಡಿಸಿದ್ದು ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ದೇಶ್ವರಾನಂದರು ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಸ್ವಾಮಿ ವಿರೇಶನಂದಜೀರವರು ತಿಳಿಸಿದರು.
ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ತಾಲೂಕು ಕಾಸಾಪ, ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಕಂಡಂತೆ ರಾಮಕೃಷ್ಣ ವಿವೇಕನಂದರು ಎಂಬ ವಿಷಯವಾಗಿ ಮಾತನಾಡಿದರು.
ಕುಪ್ಪಳಿಯಿಂದ ಮೈಸೂರಿಗೆ ವಿದ್ಯಾಭ್ಯಾಸದ ಸಲುವಾಗಿ ಬಂದ ಪುಟ್ಟಪ್ಪ ಎಂಬ ಬಾಲಕನ ಮೈತುಂಬಾ ಗಾಯಗಳೆದ್ದು ವ್ರಣವಾಗಿದ್ದು, ದೇಹಕ್ಕೆ ಆರೈಕೆ ನೀಡಿ, ಅವರ ವ್ಯಕ್ತಿತ್ವವನ್ನು ರೂಪಿಸಿ ಕೊನೆಗೆ ಸ್ವಾಮಿಜಿಗಳೇ ತಮ್ಮ ಭಕ್ತರ ಮನೆಯ ಮಗಳೊಂದಿಗೆ ಮದುವೆ ಮಾಡಿಸಿದ್ದು ಸ್ವಾಮಿ ಸಿದ್ದೇಶ್ವರನಂದರು ಎಂದರು, ರಾಮಕೃಷ್ಣಾಶ್ರಮ ಧರ್ಮವನ್ನು ಬೋಧಿಸುತ್ತದೆ ಹೊರತು ಮತವನ್ನಲ್ಲ ಎಂದ ಅವರು, ಧರ್ಮದ ಹೆಸರಿನಲ್ಲಿ ಮೋಸವಾಗಿದೆಯೇ ಹೊರತು ಧರ್ಮವೇ ಮೋಸವಲ್ಲ, ಧರ್ಮವು ಬುದ್ದಿ ಹಾಗೂ ಹೃದಯದ ಸಂಸ್ಕಾರಕ್ಕೆ ಹೆಸರಾಗಿದೆ.
ಭಾರತೀಯರು ಸರ್ವಧರ್ಮ ಸಮನ್ವತೆಯಿಂದ ಕೂಡಿದ್ದು ಅವರ ಆಧ್ಮಾತ್ಮಿಕ ಸಂಸ್ಕೃತಿಯನ್ನು ಬೇರ್ಪಡಿವುದು ಅಸಾಧ್ಯವಾಗಿದೆ, ಅಮೇರಿಕ, ಜಪಾನ್ ವಾಣಿಜ್ಯ ಮತ್ತು ತಾಂತ್ರಿಕತೆಯನ್ನು ಬಿಡುವುದಿಲ್ಲವೋ, ಭಾರತ ಧರ್ಮದ ಸಂಸ್ಕೃತಿಯನ್ನು ಮರೆತು ದೂರವಾಗುವುದಿಲ್ಲ ಎಂದರು. ಕುವೆಂಪುರವರು ವಿವೇಕಾನಂದರ ಬಗ್ಗೆ ತಿಳಿಸಿದಂತೆ ಕಷ್ಟಗಳೇ ನಮ್ಮನ್ನು ರೂಪಿಸುವುದು, ಕೇವಲ ಮೋಜಿಗಾಗಿ, ಶೋಕಿಗಾಗಿ ನೈತಿಕ ಮಟ್ಟದಿಂದ ಕುಸಿಯುತ್ತಿರುವ ಯುವಕರು ವೈಚಾರಿಕತೆ, ಆದರ್ಶಗಳನ್ನು ರೂಪಿಸಿಕೊಂಡು ಸ್ವಪ್ರಯತ್ನದಿಂದ ಹೋರಾಡುವ ಮನೋಭಾವ ಬೆಳಸಿಕೊಳ್ಳಬೇಕೆಂದರು.
ಎಲ್ಲಿ ಅಪಾರವಾದ ಪ್ರೀತಿ ಇರುತ್ತದೆಯೋ ಅಲ್ಲಿ ಉತ್ಸಾಹದ ಮನಸ್ಸಿರುತ್ತದೆ ಇದು ರಾಮಕೃಷ್ಣರು ವಿವೇಕಾನಂದರಿಗೆ ನೀಡಿ ಅವರ ಗುರಿಗೆ ದಾರಿಯಾಗಲು ಮುಖ್ಯ ಕಾರಣ ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ರಾಮಕೃಷ್ಣ ಆಶ್ರಮದಲ್ಲಿನ ಸಮಯ ಪ್ರಜ್ಞೆ ಹಾಗೂ ಆಧ್ಮಾತ್ಮಿಕ ವಾತಾವರಣ ಅನುಕರಣೀಯ ಮಠದ ಒಡನಾಟ ಇಟ್ಟು ಕೊಂಡವರ ಜೀವನ ಶೈಲಿ ವಿಶೇಷವಾಗಿರುತ್ತದೆ ಎಂದ ಅವರು, ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು, ಉತ್ತಮ ರಾಷ್ಟ್ರ ನಿಮರ್ಾಣದ ಅನುಷ್ಠಾನಕ್ಕಾಗಿ ವಿವೇಕಾನಂದರು ಸಾಕಷ್ಟು ಶ್ರಮಿಸಿದರು. ಯುವಕರ ಪಡೆಯನ್ನು ಕಟ್ಟಿ ಉತ್ತಮ ದೇಶ ನಿಮರ್ಾಣದ ಗುರಿ ಹೊಂದಿದವರು ವಿವೇಕಾನಂದರು ಅವರ ಆದರ್ಶವನ್ನು ಮೈಗೂಡಿಸಿಕೊಂಡ ಕುವೆಂಪುರವರು ರಾಷ್ಟ್ರಕವಿಯ ಹಿರಿಮೆಗೆ ಪಾತ್ರರಾದರು ಎಂದರು.
ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಮಲ್ಲಿಕಾಜರ್ುನ ಡಿ.ಇಡಿ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಬಿ.ಆರ್.ಸಿ ಎನ್.ಎಸ್.ಸುಧಾಕರ್ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕಿನ ಕೀರ್ತಯನ್ನು ಬೆಳಗಿಸಿದ ಪ್ರತಿಭಾವಂತ ವಿದ್ಯಾಥರ್ಿನಿಯರಾದ ಆರ್.ಭವ್ಯ, ಜ್ಯೋತಿ, ಆರ್.ವೀಣಾ, ಕರಣಾರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಲಿಂಗರಾಜು ನಿರೂಪಿಸಿ, ಚಿದಾನಂದ್ ವಂದಿಸಿದರು.

ಅಧಿಕಾರಿಗಳ ಅಜ್ಞಾನದಿಂದ ನೂರಾರು ಯುವಕರು ಉದ್ಯೋಗದಿಂದ ವಂಚಿತ
ಚಿಕ್ಕನಾಯಕನಹಳ್ಳಿ,ಜ.17: ಅಧಿಕಾರಿಗಳ ಅಜ್ಞಾನದಿಂದ ಪಟ್ಟಣದ ನೂರಾರು ವಿದ್ಯಾಥರ್ಿಗಳು ಗ್ರಾಮೀಣ ಖೋಟಾದಡಿ ಉದ್ಯೊಗ ಅವಕಾಶದಿಂದ ವಂಚಿತವಾಗುತ್ತಿರುವ ಅಂಶ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಚಿಕ್ಕನಾಯಕನಹಳ್ಳಿಪಟ್ಟಣದಲ್ಲಿ 1995-96ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾಥರ್ಿಗಳಿಗೂ ಗ್ರಾಮೀಣ ಖೋಟಾದ ಸವಲತ್ತು ಸಿಗುತ್ತದೆ, ಆದರೆ 1996ರ ನಂತರ ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಈ ಸವಲತ್ತು ಸಿಗುವುದಿಲ್ಲ ಕಾರಣ ಚಿಕ್ಕನಾಯಕನಹಳ್ಳಿಯನ್ನು ನಗರ ಪ್ರದೇಶವೆಂದು ಸಕರ್ಾರ ಘೋಷಣೆ ಮಾಡಿದೆ. ಆದರೆ ಕೆಲವು ಅಧಿಕಾರಿಗಳು ಈ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ಕಳೆದ 10 ವರ್ಷಗಳಿಂದ ಗ್ರಾಮೀಣ ವಿದ್ಯಾಥರ್ಿ ಖೋಟಾವನ್ನು ಇಲ್ಲಿಯ ವಿದ್ಯಾಥರ್ಿಗಳಿಗೆ ದೊರಕದಂತೆ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ನಗರ ಪ್ರದೇಶವೆಂದು 1995ರಲ್ಲಿ ಘೋಷಣೆಯಾಗಿದೆ ಆದ್ದರಿಂದ ನಿಮಗೆ ಗ್ರಾಮೀಣ ಪ್ರದೇಶವೆಂದು ಕೊಡಲು ಬರುವುದಿಲ್ಲವೆಂದು ಹೇಳಿ ನೂರಾರು ವಿದ್ಯಾಥರ್ಿಗಳಿಗೆ ಅನ್ಯಾಯವೆಸಗಿದ್ದಾರೆ.
ಎಷ್ಟೋ ವಿದ್ಯಾಥರ್ಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾವು 1995ಕ್ಕಿಂತ ಹಿಂದೆ ಇಲ್ಲಿ ಓದಿದವರು, ನಮಗೆ ಈ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಿದರೂ ಅಥೈಸಿಕೊಳ್ಳದ ಅಧಿಕಾರಿಗಳು ಬೇಜವಬ್ದಾರಿಯಿಂದ ವತರ್ಿಸಿ ಉದ್ಯೋಗಾಂಕ್ಷಿಗಳಿಗೆ ಉತ್ಸಾಹಕ್ಕೆ ತಣ್ಣೀರ್ರೆಚಿದ್ದಾರೆ.
ಈ ವಿಷಯವನ್ನು ಜಿ.ಆರ್.ಶ್ರೀನಿವಾಸ ಎಂಬವರು ಹೈಕೋಟರ್್ನಲ್ಲಿ ಪ್ರಶ್ನಿಸಿದ್ದರಿಂದ, ಹೈಕೋಟರ್್ನ ನ್ಯಾಯ ಮೂತರ್ಿ ಎನ್.ಕುಮಾರ್ ಈ ವಿಷಯವಾಗಿ ತೀಪರ್ುನೀಡಿ, 1995-96ಕ್ಕಿಂತ ಹಿಂದೆ ಒಂದರಿಂದ ಹತ್ತನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಓದಿದ್ದರೆ ಅವರಿಗೆ ಗ್ರಾಮೀಣ ವಿದ್ಯಾಥರ್ಿ ಖೋಟಾ ನೀಡಬಹುದೆಂದು ಕಳೆದ ಡಿಸೆಂಬರ್6 ರಂದು ಆದೇಶ ನೀಡಿದ್ದಾರೆ.
ಈ ಆದೇಶ ಈಗಿನ ಉದ್ಯೋಗಾಕ್ಷಿಗಳಿಗೆ ಅನುಕೂಲವಾಗುತ್ತದೆ, ಆದರೆ ಇಲ್ಲಿಯವರೆಗೆ ಇದರಿಂದ ನೊಂದವರಿಗೆ ಅಧಿಕಾರಿಗಳು ಏನು ಪರಿಹಾರ ನೀಡುತ್ತಾರೆ. . . .?
30 ವರ್ಷಗಳಿಂದ ರಾತ್ರಿ ಸಮಯದಲ್ಲಿ ಬೆಳಕನ್ನೇಕಾಣದ ಬೀದಿ ಇಲ್ಲಿದೆ.
ಚಿಕ್ಕನಾಯಕನಹಳ್ಳಿ,ಜ.17: ಪಟ್ಟಣದ ಎಸ್.ಬಿ.ಎಂ. ಕಟ್ಟಡದ ಪಕ್ಕದ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ಬೀದಿ ದೀಪದ ವ್ಯವಸ್ಥೆಯೇ ಇಲ್ಲವೆಂದರೆ, ಇದು ಪುರಸಭೆಯವರಿಗೆ ನಾಚಿಕೆಯಾಗಬೇಕಾದ ವಿಷಯ.
ಇಲ್ಲಿಯ ನಿವಾಸಿಗಳು ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ, ಈ ರಸ್ತೆ ಪಟ್ಟಣದ ಹೃದಯದ ಭಾಗದಲ್ಲಿದೆ, ಅಷ್ಟೇ ಅಲ್ಲ ನಿಮರ್ಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಕೂಗಳತೆಯಷ್ಟು ದೂರು, ಪಟ್ಟಣದ ಹೆಸರಾಂತ ಅಭಿಯಂತರ ದೊರೆಸ್ವಾಮಿ ಇಲ್ಲಿಯ ನಿವಾಸಿ, ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕೀ ಪೋಸ್ಟ್ನಲ್ಲಿರುವ ಲಕ್ಷ್ಮಣಪ್ಪ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿಯ ನಿವಾಸಿ. ಇವರೆಲ್ಲಾ ಹತ್ತಾರು ಭಾರಿ ಈ ವಿಷಯವನ್ನು ಪುರಸಭೆಯವರ ಗಮನಕ್ಕೆ ತಂದರು ಇಲ್ಲಿಗೆ ಬೀದಿ ದೀಪದ ವ್ಯವಸ್ಥೆ ಆಗಿಲ್ಲ, ಇನ್ನೊಂದು ವಿಶೇಷವೆಂದರೆ ಈ ವಾಡರ್್ನ ಸದಸ್ಯೆ ಈಗಿನ ಪುರಸಭಾ ಉಪಾಧ್ಯಕ್ಷೆ, ಅವರಿಗೂ ಇಲ್ಲಿಯ ಜನ ತಮ್ಮ ಬೇಡಿಕೆಯನ್ನು ಅನೇಕ ಭಾರಿ ಸಲ್ಲಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂಬುದು ಖೇದಕರ.
ಈ ಬೀದಿಯ ಹಿಂಬದಿಯ ಬೀದಿ, ಇತ್ತೀಚೆಗೆ ನಿಮರ್ಾಣಗೊಂಡದ್ದು. ಕಳೆದ 10 ವರ್ಷಗಳ ಹಿಂದೆ ಈ ಪ್ರದೇಶ ಜನ ನಿಭೀಡ ಪ್ರದೇಶ. ಇತ್ತೀಚೆಗಷ್ಟೇ ಇಲ್ಲಿ ಹೊಸ ಮನೆಗಳು ನಿಮರ್ಾಣವಾಗಿದ್ದು ಇವರಿಗೆ ಬೀದಿ ದೀಪದ ವ್ಯವಸ್ಥೆ ದೊರೆತಿದೆ, ಆದರೆ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿರುವ ದೊರೆಸ್ವಾಮಿಯವರ ಬೀದಿಗೆ ದೀಪದ ವ್ಯವಸ್ಥೆ ಇಲ್ಲವೆಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪುರಸಭೆಯವರು ತಕ್ಷಣವೇ ಅಲ್ಲಿಗೆ ಬೀದಿ ದೀಪ ಅಳವಡಿಸಿ ತಮ್ಮ ಮಯರ್ಾದೆಯನ್ನು ಕಾಪಾಡಿಕೊಳ್ಳುವರೇ ? ಕಾದು ನೋಡಬೇಕು.