Wednesday, February 9, 2011


ಬೇಡಿಕೆ ಈಡೇರುವ ತನಕ ಹೋರಾಟ ನಿರಂತರ: ಆರ್.ಪರಶಿವಮೂತರ್ಿ
ಚಿಕ್ಕನಾಯಕನಹಳ್ಳಿ.ಫೆ.09: ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರ ವೇತನ, ಭತ್ಯೆಗಳಲ್ಲಿ ಅಘಾದವಾದ ವ್ಯತ್ಯಾಸವಿದ್ದು, ಇಬ್ಬರಿಗೂ ಒಂದೇ ರೀತಿಯ ವೇತನವನ್ನು ನೀಡುವ ಮೂಲಕ ಇದನ್ನು ಸರಿಪಡಿಸುವುದರ ಜೊತೆಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು, ಶೀಘ್ರವಾಗಿ ಸಕರ್ಾರ ಈಡೇರಿಸಬೇಕೆಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಕೋರಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ನಡೆದ ಸಕರ್ಾರಿ ನೌಕರರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ಇತರೆ ರಾಜ್ಯ ಸಕರ್ಾರಿ ನೌಕರರ ವೇತನ ಹಾಗೂ ಭತ್ಯೆಗಳಿಗೆ ಹೊಲಿಸಿದರೆ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರು ಸುಮಾರು ಶೇ.40 ರಷ್ಟು ವೇತನದ ವ್ಯತ್ಯಾಸವನ್ನು ಹೊಂದಿದ್ದು ಇದರಿಂದ ರಾಜ್ಯ ಸಕರ್ಾರಿ ನೌಕರರು ಆಥರ್ಿಕವಾಗಿ ನಷ್ಠವನ್ನು ಅನುಭವಿಸುತ್ತಿದ್ದಾರೆ, ಅಲ್ಲದೆ ಕೇಂದ್ರ ಸಕರ್ಾರಿ ನೌಕರರು ಪ್ರತಿ 10ವರ್ಷಗಳಿಗೊಮ್ಮೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವ ಪರಿಪಾಠ ಹೊಂದಿದ್ದಾರೆ. ಇದನ್ನು ರಾಜ್ಯ ಸಕರ್ಾರಿ ನೌಕರರಿಗೂ ಅನ್ವಯಿಸಬೇಕೆಂದರು.
ಕೇಂದ್ರ ಸಕರ್ಾರ 1998ರ 5ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗವನ್ನು ರಚಿಸುವ ಪೂರ್ವದಲ್ಲಿ ನೌಕರರಿಗೆ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಿಲೀನಗೊಂಡ ಮೂಲ ವೇತನಕ್ಕನುಗುಣವಾಗಿ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿತ್ತು ಆದರೆ ರಾಜ್ಯ ಸಕರ್ಾರ ಇಂತಹ ಯಾವುದೇ ಸೌಲಭ್ಯಗಳನ್ನು ನೌಕರರಿಗೆ ಕಲ್ಪಿಸಿಲ್ಲ, ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದ ಅವರು, 2001ರ ಜನಗಣತಿಯ ಆಧಾರದ ಮೇಲೆ ಕೇಂದ್ರ ಸಕರ್ಾರ ತನ್ನ ನೌಕರರಗೆ ಜಿಲ್ಲಾ ಮತ್ತು ತಾಲೂಕುಗಳನ್ನು ಪುನರ್ ವಿಂಗಡಿಸಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಮತ್ತು ಇತರ ಸೌಲಭ್ಯ ನೀಡಿದೆ ಅದೇ ಮಾದರಿಯಲ್ಲಿ ರಾಜ್ಯ ಸಕರ್ಾರಿ ನೌಕರರಿಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ನಮ್ಮ ಬೇಡಿಕೆಗಳು ಈಡೇರುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದರಲ್ಲದೆ, ಈ ಹೋರಾಟದ ವಿರುದ್ದವಾಗಿ ನಾವು ನೌಕರಿಯಿಂದ ವಜಾಗೊಳಿಸಿದರೂ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಕರ್ಾರಿ ನೌಕರರು ಶಿರಸ್ತೆದಾರ್ ಕೆ.ವಿ.ಕುಮಾರ್ರವರಿಗೆ ಮನವಿ ಅಪರ್ಿಸಿದರು.
ಸಭೆಯಲ್ಲಿ ಎಸ್.ಸಿ.ನಟರಾಜು, ನೌಕರರ ಸಂಘದ ತಿಮ್ಮಾಬೋವಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ಕುಮಾರಸ್ವಾಮಿ, ನರಸಿಂಹಮೂತರ್ಿ, ಬಸವರಾಜು ಮಾತನಾಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶೋಭಾ, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.