ಹಸಿವಿನಿಂದ ಬಲಳುತ್ತಿರುವ ದನಕರುಗಳಿಗೆ ಮೇವನ್ನು ಒದಗಿಸಿ : ರೈತನ ಅಳಲು
ತಾಲ್ಲೂಕಿನ ಮಹತ್ವಾಂಕಾಕ್ಷಿ ಯೋಜನೆಯಾದ 23 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಅನುಷ್ಠಾನಗೊಂಡಿದ್ದರೇ ಅಂತರ್ಜಲ ಹೆಚ್ಚಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೈತರು ನಿಟ್ಟಿಸುರು ಬಿಡುತ್ತಿದ್ದರು, ಆದರೇ ಕೇಂದ್ರ ಸಕರ್ಾರದ ಭೂ ಸ್ವಾಧೀನ ಕಾಯಿದೆಯಿಂದ ಸ್ಥಳೀಯ ರಾಜಕಾರಣಿಗಳ ನಿಲ್ರ್ಯಕ್ಷತನ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ತನ್ನ ಜಾನವಾರುಗಳನ್ನು ಉಳಿಸಿಕೊಳ್ಳಲು ಹೆಣಗುವಂತಾಗಿದೆ ಎನ್ನುತ್ತಾರೆ ಮಾರಮರ್ಧನ್.
ರೈತರ ಮೂಲ ಸೌಕರ್ಯಗಳಾದ ನೀರು, ವಿದ್ಯುತ್, ಜಮೀನುಗಳನ್ನು ಒದಗಿಸಿಕೊಟ್ಟರೇ ರೈತ ಶ್ರಮ ಹಾಕಿ ದುಡಿಯಲು ತೊಡಗುತ್ತಾನೆ. ಆದರೇ ಸಕರ್ಾರದ ಕೆಲವು ನೀತಿಗಳಾದ ರೈತ ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸದರೆ ರೈತರ ಬೆಳೆಗೆ ಬೆಲೆ ಸಿಕ್ಕಿ ಬಾಳು ಹಸನಾಗುತ್ತಿದ್ದು, ರೈತರು ಬೆಳೆದಿರುವ ಕೊಬ್ಬರಿ ಮಾರಲು ಬೆಲೆ ಕಡಿಮೆ ಇರುವುದರಿಂದ ಹಣಕಾಸಿನ ತೊಂದರೇ ಎದುರಾಗಿದೆ, ನಮ್ಮ ರಾಸುಗಳಿಗೆ ಮೇವು ಕೊಳ್ಳಲು ಕಷ್ಟವಾಗಿದೆ. ತನ್ನಲ್ಲಿರುವ 31 ರಾಸು ದನಗಳಿಗೆ ಹಾಗೂ 13 ಎಮ್ಮೆ, ಮೇಕೆಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡದಿದ್ದರೇ ತಾಲ್ಲೂಕು ಕಛೇರಿ ಮುಂದೆ ತನ್ನ ರಾಸುಗಳೊಂದಿಗೆ ಹಾಗೂ ನನ್ನಂತೆ ಪರಿತಪಿಸುತ್ತಿರುವ ರೈತರೊಂದಿಗೆ ತಾಲೂಕು ಕಛೇರಿ ಮುಂದೆ ಧರಣಿ ಕೂರುವುದಾಗಿ ರೈತ ಮಾರಮರ್ಧನ್ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,: ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ಕೊಠಡಿಯ ಕೊರತೆಯಿದ್ದದರಿಂದ 2ಕೊಠಡಿಯನ್ನು 54ಲಕ್ಷರೂಗಳಿಗೆ ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ವಿದ್ಯಾಥರ್ಿಗಳ ಉಪಯೋಗಕ್ಕೆ ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನ ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆರ್.ಎ.ಡಿ.ಎಫ್-19ರ ಯೋಜನೆಯ ಅಡಿಯಲ್ಲಿ 54ಲಕ್ಷ ರೂ ವೆಚ್ಚದಲ್ಲಿ ಕೊಠಡಿ ನಿಮರ್ಿಸಲಾಗುತ್ತಿದ್ದು ಕಾಲೇಜಿನ ವ್ಯವಸ್ಥೆಗೆ ಅನುಕೂಲವಾಗುವಂತೆ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
54ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಕಾಮಗಾರಿಗೆ ಯೋಜನೆ ರೂಪಿಸಿದ್ದು, ಕಟ್ಟಡದಲ್ಲಿ ಎರಡು ಕೊಠಡಿ, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯವನ್ನು ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತೆ ನಿಮರ್ಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ದೊರೆಮುದ್ದಯ್ಯ, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಪ್ರಾಂಶುಪಾಲ ಸಿದ್ದಗಂಗಯ್ಯ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಅಂಜನಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕಿನ 14ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ
ಚಿಕ್ಕನಾಯಕನಹಳ್ಳಿ,ಮೇ.27 : ತಾಲ್ಲೂಕಿನ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 14ವಿದ್ಯಾಥರ್ಿಗಳು 125ಕ್ಕೆ 125ಅಂಕಗಳನ್ನು ಪಡೆದಿದ್ದಾರೆ.
ಪಟ್ಟಣದ ನವೋದಯ ಶಾಲೆಯ ಸ್ಪೂತರ್ಿ, ಸ್ವಾತಿ, ರೋಟರಿ ಶಾಲೆಯ ಧನುಷ್.ಎನ್.ನಾಯ್ಕ್, ಚಿ.ನಾ.ಹಳ್ಳಿ ಸಕರ್ಾರಿ ಪ್ರೌಢಶಾಲೆಯ ದಿಲೀಪ್.ಬಿ.ಗೌಡ, ಮೇಲನಹಳ್ಳಿ ಮೊರಾಜರ್ಿ ಪ್ರೌಢಶಾಲೆಯ ದರ್ಶನ್, ದೇವರಾಜು.ಹೆಚ್.ಎಂ, ಕೀತರ್ಿ.ಡಿ.ಆರ್, ಜೆ.ಸಿ.ಪುರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಲಕ್ಷ್ಮೀ.ಹೆಚ್.ಎಂ, ಹುಳಿಯಾರು-ಕೆಂಕೆರೆಯ ಸ.ಪ.ಪೂ.ಕಾಲೇಜಿನ ಸಂಜಯ್.ಎಲ್.ಎನ್, ಜ್ಯೋತಿ ಹೆಚ್, ಸ್ವಾತಿ ಹೆಚ್.ಎಲ್, ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಯ ಲಕ್ಷ್ಮೀದೇವಿ.ಎಸ್, ಕುಪ್ಪೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸೌಮ್ಯ.ಜಿ, ದೊಡ್ಡೇಣೆಗೆರೆ ಶ್ರೀ ಗವಿರಂಗನಾಥ ಪ್ರೌಢಶಾಲೆಯ ಕಾವ್ಯ.ಎನ್.ಆರ್. ಈ ವಿದ್ಯಾಥರ್ಿಗಳು ಕನ್ನಡ ವಿಷಯದಲ್ಲಿ ಪೂರ್ಣ ಅಂಕಗಳಿಸುವುದರೊಂದಿಗೆ ಕನ್ನಡಾಭಿಮಾನವನ್ನು ಮೆರಿದಿರುವ ಜೊತೆಗೆ ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
ಚಿಕ್ಕನಾಯಕನಹಳ್ಳಿ,ಮೇ.28: ಆಕಸ್ಮಿಕವಾಗಿ ರಸ್ತೆಯಲ್ಲಿ ಸಾವನ್ನಪ್ಪಿದ್ದ ಕೋತಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮನುಷ್ಯರು ಅಂತ್ಯಕ್ರಿಯೆ ರೀತಿಯೇ ಕೋತಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಶ್ಯಾವಿಗೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಕೋತಿ ಸಾವನ್ನಪ್ಪಿದ್ದನ್ನು ನೋಡಿದ ಗ್ರಾಮಸ್ಥರು ಕೋತಿಯ ಅಂತ್ಯಕ್ರಿಯೆ ಮಾಡಲು ತೀಮರ್ಾನಿಸಿದರು. ಕೋತಿ ಸಾವನ್ನಪ್ಪಿದ್ದ ಸ್ಥಳದಿಂದ ಶ್ಯಾವಿಗೆಹಳ್ಳಿ ಊರಿನ ಸುತ್ತಾಮುತ್ತಾ ಕೋತಿಯ ಶವದ ಮೆರವಣಿಗೆ ಮಾಡಿ ನಂತರ ಊರಿನ ಒಳಗಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾಧಿ ಮಾಡಲಾಗುವುದು. ಮೆರವಣಿಗೆಯ ವೇಳೆ ಕರಡೇವು, ನಗಾರಿ, ಓಲಗದ ಮೂಲಕ ಕೋತಿಯನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು.
ಕೋತಿಯ ಸಂಸ್ಕಾರದ ನಂತರ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಪಾನಕ, ಫಲಹಾರ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಯ್ಯ, ವೆಂಕಟೇಶ್, ರಂಗಮ್ಮ, ಚರಣ್, ಸುನಂದಮ್ಮ, ರಾಧಮ್ಮ, ನೇತ್ರಾವತಿ, ರಾಜೇಶ್, ಓಬಳೇಶ್, ರಂಗಸ್ವಾಮಿ, ಪವನ್, ಮನು, ಗಿರೀಶ್ ಸೇರಿದಂತೆ ಗ್ರಾಮಸ್ಥರು ಕೋತಿಯ ಸಮಾಧಿಕಟ್ಟಿ ನಿತ್ಯವೂ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.