Tuesday, May 24, 2016ಬೆಳ್ಳಿಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯಗೊಂಡ ಗುರುಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.24 : ವರ್ಷಗಳ ನಂತರ ಸಂಪನ್ನಗೊಂಡ ತಾಲ್ಲೂಕಿನ ಗೋಡೆಕೆರೆ ಶ್ರೀ ಸಿದ್ದರಾಮೇಶ್ವರಸ್ವಾಮಿಯ ಮಹಾರಥೋತ್ಸವ (ದೊಡ್ಡಜಾತ್ರೆ) ಗುರುಸಿದ್ದರಾಮೇಶ್ವರರ ಬೆಳ್ಳಿಪಲ್ಲಕ್ಕಿಯ ಉತ್ಸವದೊಂದಿಗೆ ತೆರೆಕಂಡಿತು.
ಮಂಗಳವಾರ ನಸುಕಿನಲ್ಲಿ ನಡೆದ ಬೆಳ್ಳೀಪಲ್ಲಕ್ಕಿ ಉತ್ಸವದಲ್ಲಿ ಸಿದ್ಧರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ,ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಭಾಗಿಯಾಗಿದ್ದರು. ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಮವಾರ ರಾತ್ರಿ 10ಕ್ಕೆ ಪ್ರಾರಂಭವಾಗಿ ಮಂಗಳವಾರ ಬೆಳಗ್ಗೆ 6ಗಂಟೆಯವರೆಗೆ ನಡೆಯಿತು.
   ಒಂದು ವಾರದ ಕಾಲ ಪ್ರತೀ ಸಂಜೆ ಜಾತ್ರೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳು ಜಾತ್ರೆಗೆ ಮೆರುಗು ತಂದವು. ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
   ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಶ್ರೀ ಗುರುಸಿದ್ದರಾಮೇಶ್ವರ ದೇವಾಲಯದ ಜೀಣರ್ೋದ್ದಾರ ಮಹಾಪೋಷಕರಾದ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಶಾಸಕ ಸಿ.ಬಿ.ಸುರೇಶ್ಬಾಬು ಸೇರಿದಂತೆ ಭಕ್ತಾಧಿಗಳು ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.
ಮುಕ್ತಾಯ ಸಮಾರಂಭ :   109ಅಡಿ ಎತ್ತರದ ರಾಜಗೋಪುರ ನಿಮರ್ಾಣಕ್ಕೆ ತನುಮನದಿಂದ ಧನ ಸಹಾಯ ಮಡುವಂತೆ ಹಾಗೂ ಗೋಡೆಕೆರೆ ಯಾತ್ರಾ ಸ್ಥಳವಾಗದೇ ಒಂದು ವಿಶ್ವ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಎಲ್ಲರೂ ಕೈಜೋಡಿಸುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆಯ ಶ್ರೀಸಿದ್ದರಾಮೇಶ್ವರ ಮಹಾಸ್ವಾಮಿಯವರ ದೊಡ್ಡಜಾತ್ರೆಯ ಕೊನೆಯ ದಿನವಾದ ಸೋಮವಾರ ರಾತ್ರಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ದಾಸೋಹ ತತ್ವ ಭೋದಕ, ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ ಜಾತ್ರೆಯು ಒಂದು ವಾರಗಳಕಾಲ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ, ವಿವಿಧ ಸಾಧಕರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಲ್ಲ ವರ್ಗದ ಜನರು ತಾರತಮ್ಯವಿಲ್ಲದೇ ಪಾಲ್ಗೊಂಡು ಯಾವುದೇ ಬಿನ್ನಾಬಿಪ್ರಾಯಗಳು ಬರದಂತೆ ನಡೆದುಕೊಂಡು ಬಂದಿದ್ದು ಈ ಜಾತ್ರೆಯು ಅದ್ದೂರಿಯಾಗಿ ಜಾತ್ರೆಯು ಯಶಸ್ವಿಯಾಗಿದೆ, ಈ ಯಶ್ವಸಿಗೆ ಕಾರಣರಾದ ಎಲ್ಲಾ ಸಕರ್ಾರಿ ಇಲಾಖೆಗಳಿಗೆ ಹಾಗೂ ಎಲ್ಲಾ ಭಕ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಸುಮಾರು ಎರಡುವರೆ ಎಕರೆ ವಿಸ್ತೀರ್ಣವಿರುವಂತಹ ಶ್ರೀಸಿದ್ದರಾಮೇಶ್ವರಸ್ವಾಮಿ ದೇವಾಲಯದ ಜೀಣರ್ೋದ್ದಾರ ಕಾರ್ಯ ನಡೆಯುತ್ತಿದ್ದು ಈ ಕ್ಷೇತ್ರದಲ್ಲಿ ಸುಮಾರು ಒಟ್ಟಾರೆ 25ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತ್ರೆಯ ಯಶ್ವಸಿಗೆ ಕಾರಣರಾದ ಸಿದ್ದರಾಮೇಶ್ವರ ಸ್ವಾಮಿಯ ಭಕ್ತರಿಗೆ ಹಾಗೂ ಜಾತ್ರೆಯಲ್ಲಿ ತೊಡಗಿಸಿಕೊಂಡಂತಹ ಎಲ್ಲರನ್ನು ಪ್ರಶಂಸಿದ ಅವರು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ನಿಮರ್ಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು, ಮುಂದಿನ ವರ್ಷ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲು ಅನುಮತಿ ನೀಡಿದರೆ ಗೋಡೆಕೆರೆಯಲ್ಲೇ ಆಚರಿಸಲು ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು ಗಣಿ ಬಾದಿತ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಈ ಕ್ಷೇತ್ರದ ಅಭಿವೃದ್ದಿಗಾಗಿ ಹೆಚ್ಚು ಹಣವನ್ನು ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಾತ್ರೆಯ ಯಶಸ್ವಿಯಾಗಲು ಕಾರಣರಾದಂತಹ ದೇವರ ಜೊತೆಯಲ್ಲಿ ಓಡಾಡಿದವರು, ದಾಸೋಹವನ್ನು ನೋಡಿಕೊಂಡವರು, ಬೆಳಕಿನ ವ್ಯವಸ್ಥೆ ಮಾಡಿದವರು, ರಸ್ತೆ, ಕಲ್ಯಾಣಿ, ದೇವಾಲಯದ ಸ್ವಚ್ಚತೆ, ತಪೋವನದ ಸ್ವಚ್ಛತೆ, ನೀರಿನ ವ್ಯವಸ್ಥೆ ಮಾಡಿದ್ದಂತಹವರನ್ನು  ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಡೆಕೆರೆಯ ಮೃತ್ಯುಂಜಯದೇಶೀಕೇಂದ್ರ ಸ್ವಾಮಿಜಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಗುಬ್ಬಿ ಜಿ.ಪಂ.ಸದಸ್ಯ ಕೃಷ್ಣಪ್ಪ, ರಾಜ್ಯ ಹಾಲುಒಕ್ಕೂಟದ ಸದಸ್ಯರಾದ ಚಂದ್ರಶೇಖರ್, ತಿಪ್ಪೂರು ಶಿವಯ್ಯ, ಜಗಜ್ಯೋತಿ ಸಿದ್ದರಾಮಯ್ಯ, ಬೆಣ್ಣೆಹಳ್ಳಿ ಸಿದ್ದರಾಮಯ್ಯ ಗುರುಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.