Thursday, December 10, 2015


ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಾಗಲಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಬಿವೈಎಸ್ ತಂಡಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ಹಾಗೂ ಜಗೋಸಿರಾ-2015 ಟ್ರೋಫಿ ವಿತರಿಸಿದರು.
 ಚಿಕ್ಕನಾಯಕನಹಳ್ಳಿ, : ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಪ್ರತಿ ವರ್ಷ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಬಡ್ಡಿ ಪಂದ್ಯಾವಳಿ ಅಖಿಲ ಭಾರತ ಮಟ್ಟದಲ್ಲಿ ನಡೆಸಲು  ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಲಹೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡೆಕೆರೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಸಂಘ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಜಗೋಸಿರಾ-2015 ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕ್ರಿಕೆಟ್ಗಿಂತಲೂ ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಲಕ್ಷಾಂತರ ಮಂದಿ ನೋಡುತ್ತಿದ್ದಾರೆ, ಮುಂದೆ ಪುರುಷರ ತಂಡಗಳ ಜೊತೆ ಮಹಿಳಾ ಕಬಡ್ಡಿ ತಂಡಗಳನ್ನು ರಚಿಸುವಂತೆ ಸಲಹೆ ನೀಡಿದರು.
ರಾಜ್ಯದಿಂದ 8ಕಬಡ್ಡಿ ತಂಡಗಳು ಭಾಗವಹಿಸಿದ್ದು ರಾಜ್ಯದಲ್ಲಿ ಒಟ್ಟು 23 ಜಿಲ್ಲೆಗಳಲ್ಲಿ ಬಲಿಷ್ಠ ಕಬಡ್ಡಿ ತಂಡಗಳಿದ್ದು ಮುಂದೆ ಎಲ್ಲಾ ತಂಡಗಳು ಕಬಡ್ಡಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದ ಅವರು ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಶೇ.70% ರಷ್ಟು ಕಬಡ್ಡಿ ಆಟಗಾರರು ಹರಿಯಾಣದವರಾಗಿದ್ದು ಮಹರಾಷ್ಟ್ರದವರು ಶೇ.15% ರಷ್ಠಿದ್ದು ಕನರ್ಾಟಕ ಶೇ.5ರಿಂದ 6% ರಷ್ಠಿದ್ದಾರೆ. ರಾಜ್ಯದ ಯುವಕರು ಹೆಚ್ಚಾಗಿ ಕಬಡ್ಡಿ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಶೇ.35%ರಷ್ಟಾದರೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಯುವಕರು ಉತ್ಸಾಹ ತೋರುವಂತೆ ಹೇಳಿದರು. 
ಉತ್ತಮ ಆಟಗಾರರಿಗೆ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಉದ್ಯೋಗಗಳಲ್ಲಿ ಮೀಸಲಾತಿ ಇರುತ್ತದೆ ಅದೇ ರೀತಿ ವಿದ್ಯಾಭ್ಯಾಸದಲ್ಲೂ ಕ್ರೀಡೆಗೆ ಮೀಸಲಾತಿ ಇದ್ದು ಇದರ ಪ್ರಯೋಜನ ಪಡೆಯಲು ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಎಂದರು.
ಯುವಕರು ದುಷ್ಠಟಗಳಿಂದ ಬಲಿಯಾಗುತ್ತಿದ್ದು ಇದರಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಯುವಕರು ಕ್ರೀಡೆ ಹಾಗೂ ಸೇನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಬಿ.ಸುರೇಶ್ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಅಭ್ಯಥರ್ಿ ಎಂ.ಎಲ್.ಕಾಂತರಾಜು, ಜಿ.ಪಂ.ಮಾಜಿ ಸದಸ್ಯ ಬಿ.ಎನ್.ಶಿವಪ್ರಕಾಶ್, ರಾಜ್ಯ ಅಮೆಚೂರ್ ಕಬಡ್ಡಿ ಕ್ಲಬ್ ಉಪಾಧ್ಯಕ್ಷ ಶಿವಮೂತರ್ಿ ಹಾಗೂ ಕಾರ್ಯದಶರ್ಿ ಜಯರಾಂ, ಬೆಂಗಳೂರು ಕಬಡ್ಡಿ ಅಮೆಚೂರ್ ಆಟಗಾರ ಷಣ್ಮುಗಂ, ನಿವೃತ್ತ ಸಿಇಓ ಸಿದ್ದರಾಮಣ್ಣ, ಜೆಡಿಎಸ್ ಮುಖಂಡ ಕಲ್ಲೇಶ್, ಜೆಟ್ಟಿ ಗಂಗಾಧರ ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪುರುಷ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರಿನ ಬಿವೈಎಸ್ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 40ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು. ಮಂಡ್ಯ ಬಾಯ್ಸ್ ಕಬಡ್ಡಿ ತಂಡ ದ್ವಿತಿಯ ಸ್ಥಾನ ಪಡೆದು 25ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ತೃತೀಯ ಬಹುಮಾನ ಬೆಂಗಳೂರು ಹೂಡಿ ಸ್ಪೋಟ್ಸ್ ಕ್ಲಬ್, ಕೇಶವ ಕ್ಲಬ್ ಬೆಂಗಳೂರು ತಂಡ ತಲಾ 10ಸಾವಿರ ನಗದು ಹಾಗೂ ಟ್ರೋಪಿ ಪಡೆಯಿತು.
ಮಹಿಳಾ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರು ಬಿವೈಎಸ್ ಹೆಣ್ಣುಮಕ್ಕಳ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 12ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಬೆಂಗಳೂರು ಮಾತಾ ಕಬಡ್ಡಿ ತಂಡ 8ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಶಿವಮೊಗ್ಗ ಜಿಲ್ಲಾ ಕಬಡ್ಡಿ ತಂಡ ತೃತೀಯ ಬಹುಮಾನ 4ಸಾವಿರ, ಟ್ರೋಫಿ, ಬೆಂಗಳೂರು ವಿಜಯನಗರ ಕ್ಲಬ್ ಕಬಡ್ಡಿ ತಂಡ 4ಸಾವಿರ ನಗದು ಟ್ರೋಪಿ ಪಡೆಯಿತು.
ಕಬಡ್ಡಿ ತಂಡದ ಉತ್ತಮ ದಾಳಿಕಾರನಾಗಿ ಬಿವೈಎಸ್ ತಂಡದ ಗೋಪಾಲ್ ಪಡೆದರು. ಉತ್ತಮ ಹಿಡಿತಗಾರನಾಗಿ(ಬೆಸ್ಟ್ ಕ್ಯಾಚರ್) ಹೂಡಿ ಕ್ಲಬ್ನ ಕಬಡ್ಡಿ ತಂಡದ ರಘು ಪಡೆದರು. ಆಲ್ರೌಂಡರ್ ಆಗಿ ಮಂಡ್ಯದ ಅಜರ್ುನ್ ಹೊರ ಹೊಮ್ಮಿದರು. 
ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು, ಕೊಡಗು, ಬೆಳಗಾಂ ಸೇರಿದಂತೆ ಒಟ್ಟು 30 ತಂಡಗಳು ಭಾಗವಹಿಸಿದ್ದವು. ಮಹಿಳಾ ತಂಡದಲ್ಲಿ ಶಿವಮೊಗ್ಗ, ಬೆಂಗಳೂರು ಸೇರಿದಂತೆ 5ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ 
ಚಿಕ್ಕನಾಯಕನಹಳ್ಳಿಡಿ.10 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿರುವ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿ, ಜಾತಿ, ಮತ, ಧರ್ಮ ಎಲ್ಲವನ್ನೂ ಮರೆತು ಮನುಷ್ಯರಲ್ಲಿ ವರ್ಗಬೇದವಾಗಲಿ, ಬಡವ ಬಲ್ಲಿದ ಎಂಬ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನೋಡಬೇಕೆಂಬ ಉದ್ದೇಶದಿಂದಲೇ ಮಾನವ ಹಕ್ಕುಗಳು ರಚನೆಯಾಯಿತು. ದೇಶದಲ್ಲಿ ಹಸಿವಿನಿಂದ ಯಾರು ಸಾಯಬಾರದು, ಎಲ್ಲರೂ ಸಮಾನರು, ಪ್ರತಿಯೊಬ್ಬ ವ್ಯಕ್ತಿಗೂ ಸ್ಥಾನಮಾನ, ಗೌರವ ನೀಡುವಂತಹ ಮಾನವ ಹಕ್ಕುಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ, ಇದರ ಜವಬ್ದಾರಿಯನ್ನು ನ್ಯಾಯಾಂಗಕ್ಕೆ ನೀಡಿದ್ದು ನ್ಯಾಯಾಂಗ ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದರು.
ವಕೀಲ ಹನುಮಂತಪ್ಪ ಮಾತನಾಡಿ, ನಮ್ಮ ದೇಶದ ಸಂವಿಧಾನದಡಿಯಲ್ಲಿ ರಚನೆಯಾದ ಮಾನವ ಹಕ್ಕು ಉಲ್ಲಂಘನೆಯಾಗುವುದನ್ನು ತಡೆಯಲೆಂದೇ ಕಾನೂನು ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಆದರೆ ಸಮಾಜದಲ್ಲಿ ಬದುಕುವ ನಾವುಗಳು ನಮ್ಮ ಜವಬ್ದಾರಿಯನ್ನು ಅರಿಯದೇ ಜಾತಿ, ಮತ, ಧರ್ಮ, ಪಂಥ ಎಲ್ಲವನ್ನು ಮೀರಿ ಕಟ್ಟಕಡೆಯ ವ್ಯಕ್ತಿಯೂ ಸಹ ಎಲ್ಲರಂತೆ ಬದುಕುವ ಹಕ್ಕಿದೆ, ಧರ್ಮ, ಧರ್ಮಗಳ ನಡುವಿನಲ್ಲಿ ಸಂಘರ್ಷ ಉಂಟುಮಾಡುವ ಮೂಲಕ ಪ್ರತಿಯೊಂದು ಪಕ್ಷಗಳು ಮುಗ್ಧ ಜನರನ್ನು ಸಂಘರ್ಷಕ್ಕೆ ತಳ್ಳುವ ಮೂಲಕ ಅಧಿಕಾರ ಮಾಡಲು ಪ್ರಯತ್ನಿಸುತ್ತಿವೆ ಎಂದು ವಿಷಾಧಿಸಿದರು ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಅನ್ಯಾಯ ನಡೆದಾಗ ನಮಗೆ ಸಂಬಂದವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ, ಜವಬ್ದಾರಿಯುತ ನಾಗರೀಕರಾದ ನಾವು ಕಾನೂನನ್ನು ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ರವಿಚಂದ್ರ, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.