Thursday, August 19, 2010

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ನೀಡಲು ಡಿ.ಸಿ.ಸಿ.ಬ್ಯಾಂಕ್ ಒಲವು
ಚಿಕ್ಕನಾಯಕನಹಳ್ಳಿ,ಆ.18: ಇಂದಿನ ತಂತ್ರಜ್ಞಾನ, ಕಂಪ್ಯೂಟರಿಕರಣ ಮತ್ತು ಎಲೆಕ್ಟ್ರಾನಿಕರಣದಂತಹ ಯುಗದಲ್ಲಿ ರೈತರು ಉಳುಮೆ ಮಾಡಿ ಜೀವನ ನಡೆಸುವುದು ಕಷ್ಟಕರವಾಗಿದ್ದು ಅದಕ್ಕಾಗಿ ಉಪಕಸುಬುಗಳನ್ನು ನೆಚ್ಚಿಕೊಂಡಿರುವ ಸಣ್ಣ ರೈತರಿಗೆ ಅತಿಯಾದ ಕಟ್ಟುಪಾಡುಗಳಿಲ್ಲದೆ ಸಾಲ ನೀಡಲು ನಮ್ಮ ಬ್ಯಾಂಕ್ ಸಿದ್ದವಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು
ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ವಿವಿಧ ಯೋಜನೆಯ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಅಲ್ಪ ಬಂಡವಾಳವನ್ನು ಹೂಡಿ ಆದಾಯಗಳಿಸಿ ಸ್ವಾವಲಂಬಿ ಜೀವನ ನಡೆಸಬೇಕು ಅದಕ್ಕಾಗಿ ಬ್ಯಾಂಕ್ ಕಡಿಮೆ ಬಡ್ಡಿದರದ ಸಾಲ ನೀಡುತ್ತಿದೆ ಎಂದರಲ್ಲದೆ, ಸಾಲವನ್ನು ಪಡೆದವರು ಎಚ್ಚರಿಕೆಯಿಂದ ಇಂದ ಸಾಲ ಮರುಪಾವತಿ ಮಾಡಬೇಕು ಇಲ್ಲದಿದ್ದರೆ ಸಾಲದ ಬಡ್ಡಿ ಶೇ.13 ರಷ್ಟು ಹೆಚ್ಚಿ ಸಾಲಗಾರ ಆತಂಕಕ್ಕೆ ಒಳಗಾಗುತ್ತಾನೆ ಎಂದರು.
ಸಾಲ ಪಡೆಯುವುದು ಸಾಲಗಾರನ ಹಕ್ಕು ಅದನ್ನು ಹಿಂತಿರುಗಿಸುವುದು ಅವರ ಜವಬ್ದಾರಿಯಾಗಿದೆ ಎಂದರಲ್ಲದೆ, ಸಾಲವನ್ನು ಮರುಪಾವತಿ ಮಾಡಿ ಸಾಲವನ್ನು ನೀಡುವ ಸಂಸ್ಥೆಯನ್ನು ಉಳಿಸಬೇಕು ಎಂದ ಅವರು ರೈತರು ಉಳುಮೆ ಜೊತೆ ಉಪಕಸುಬುಗಳನ್ನು ಮಾಡಬೇಕು ಇದರಿಂದ ನಿಮ್ಮ ಆಥರ್ಿಕ ಪರಿಸ್ಥಿತಿ ಸುದಾರಿಸುತ್ತದೆ ಈ ವಿಷಯವನ್ನು ಪ್ರತಿ ಬಾರಿ ಸಾಲ ನೀಡುವಾಗ ಎಲ್ಲಾ ರೈತರಿಗೂ ಹೇಳುತ್ತೇನೆ ಎಂದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ನೇಕಾರರಿಗೂ ಶೇ.4ರ ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಬ್ಯಾಂಕ್ ಜಾರಿಗೆ ತರಲಿದೆ ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದ ಈ ಭಾಗ, ಕೇವಲ ಮಳೆಯನ್ನು ಆಧರಿಸಿ ರೈತರು ಜೀವನ ನಡೆಸುತ್ತಿರುವ ನಮ್ಮ ಜನರಿಗೆ ಜಿಲ್ಲಾ ಬ್ಯಾಂಕ್ನಿಂದ ಸಾಲ ಒದಗಿಸಿ ಇವರ ಆಥರ್ಿಕ ಪರಿಸ್ಥಿತಿ ಸುಧಾರಿಸಲು ಮತ್ತು ಇಲ್ಲಿನ ಹಾಲಿನ ಸಹಕಾರ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಜಿಲ್ಲಾ ಬ್ಯಾಂಕ್ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ಮುಖಂಡರುಗಳಾದ ಹನುಮಂತಪ್ಪ, ರಾಮಕೃಷ್ಣಯ್ಯ, ರಾಜಣ್ಣ, ಸಣ್ಣಯ್ಯ, ವೆಂಕಟರಾಮಯ್ಯ, ರತ್ನಮ್ಮ, ಕೇಶವಮೂತರ್ಿ, ಈಶ್ವರಪ್ಪ ಹಾಗೂ ಬ್ಯಾಂಕ್ನ ಅಧಿಕಾರಿಗಳಾದ ರಾಮಕೃಷ್ಣಯ್ಯ ಮುದ್ದಪ್ಪ, ಜಯರಾಮ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಂಗನಾಥ್ ಸ್ವಾಗತಿಸಿ, ವಂದಿಸಿದರು.

ಕರಡಿ ದಾಳಿ ಗಾಯಾಳು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಆ.19: ಕರಡಿ ದಾಳಿಯಿಂದ ವ್ಯಕ್ತಿಯೊಬ್ಬನ ತಲೆಬುರುಡೆಗೆ ತೀವ್ರ ಹಾನಿಯಗಿರುವ ಘಟನೆ ತಾಲೂಕಿನ ದೊಡ್ಡಬಿದರೆ ಬಳಿಯ ಕಲ್ಲಹಳ್ಳಿ ಪಾಳ್ಯದಲ್ಲಿ ನಡೆದಿದೆ.
ಬೆಳಗಿನ ಜಾವ 5.30ಕ್ಕೆ ಬಹಿದರ್ೆಸೆಗೆ ಹೋದ ಸಂದರ್ಭದಲ್ಲಿ ತಾಯಿಕರಡಿ ಮತ್ತು ಮರಿಕರಡಿಗಳ ದಾಳಿಯಿಂದ ನರಸಿಂಹಯ್ಯ(50) ಎಂಬ ವ್ಯಕ್ತಿಯ ತಲೆಬುರುಡೆಕಿತ್ತಿದ್ದು ನರಸಿಂಹಯ್ಯ ಹುಳಿಯಾರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರಡಿ ದಾಳಿಯಂತಹ ಘಟನೆ ಈ ಭಾಗದಲ್ಲಿ ಪದೇ ಪದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ತೀವ್ರ ಗಮನ ನೀಡುತ್ತಿಲ್ಲವೆಂದು ವಕೀಲ ಜಯಣ್ಣ ಆರೋಪಿಸಿದ್ದಾರೆ.
ರಸ್ತೆಯಲ್ಲಿ ವ್ಯಕ್ತಿ ಸಾವು: ತಾಲೂಕಿನ ಗೌರಸಾಗರ ಗೇಟ್ಬಳಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸಕೆರೆಯ ಕುಮಾರಸ್ವಾಮಿ(35) ಎಂಬ ವ್ಯಕ್ತಿ ಟಿ.ವಿ.ಎಸ್ ಮೊಪೆಡ್ನಲ್ಲಿ ತೆರುಳುತ್ತಿರುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಓದುಗರ ಪತ್ರ
ಕೈಮಗ್ಗ ಸಂಘದಿಂದ ವಿದ್ಯಾಥರ್ಿ ವೇತನದ ಚೆಕ್ ನೀಡಲು ಹಣಕ್ಕಾಗಿ ಒತ್ತಾಯ
ಚಿಕ್ಕನಾಯಕನಹಳ್ಳಿಯ ಬನಶಂಕರಿ ಕೈಮಗ್ಗ ಅಭಿವೃದ್ದಿ ಸಂಘವು ನೇಕಾರರ ಮಕ್ಕಳಿಗೆ ವಿವಿಧ ಯೋಜನೆಯಲ್ಲಿ ಬಂದಂತಹ ವಿದ್ಯಾಥರ್ಿ ವೇತನ ಮತ್ತು ಇತ್ತೀಚಿಗೆ ಸಕರ್ಾರದಿಂದ ಬಂದಂತಹ ಮಹಾತ್ಮಾಗಾಂಧೀ ಬುನ್ಕರ್ ಭೀಮಾ ಯೋಜನೆಯ ಚೆಕ್ಗಳನ್ನು ವಿದ್ಯಾಥರ್ಿಗಳಿಗೆ ನೀಡಲು ಪ್ರತಿಯೊಬ್ಬ ವಿದ್ಯಾಥರ್ಿಗಳಿಂದ 100ರೂಗಳಂತೆ ಹಣವನ್ನು ಬನಶಂಕರಿ ಸೊಸೈಟಿ ಅಧ್ಯಕ್ಷರು ಹಣವನ್ನು ವಸೂಲಿ ಮಾಡುತ್ತಿದ್ದು, ಅಧ್ಯಕ್ಷರಿಗೆ ಹಣ ನೀಡದ ವಿದ್ಯಾಥರ್ಿಗಳಿಗೆ ಚೆಕ್ ನೀಡದೆ ಇಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ವಿದ್ಯಾಥರ್ಿಗಳು ದೂರಿದ್ದಾರೆ.
ಚೆಕ್ಗಳನ್ನು ಅಥವ ಹಣವನ್ನು ನೀಡಲು 1000 ರೂಗಳಿಗೆ 100ರೂನಂತೆ ಹಣವನ್ನು ಬಡ ವಿದ್ಯಾಥರ್ಿಗಳಿಂದ ಹಣ ಪಡೆದು ಬಡವಿದ್ಯಾಥರ್ಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅನ್ಯಾಯಕ್ಕೊಳಪಟ್ಟ ವಿದ್ಯಾಥರ್ಿಗಳು ಆರೋಪಿಸಿದ್ದಾರೆ.
ನೊಂದ 10 ವಿದ್ಯಾಥರ್ಿಗಳ ಸಹಿ ಇದೆ