Saturday, October 18, 2014

ಕೋಟ್ಯಾಂತರ ರೂ ಅನುದಾನ: ತಾಲೂಕಿನ ಅಭಿವೃದ್ದಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಅಧಿಕಾರಿಗಳಿಗೆ ಸೂಚನೆ:
  • ಪ್ರತಿವರ್ಷ 400 ಕೋಟಿ ಅನುದಾನ ಮುಂದಿನ 10 ವರ್ಷದವರೆಗೆ
  • ಇಡೀ ದೇಶದಲ್ಲಿ ತಾಲೂಕಿನ ಅಭಿವೃದ್ದಿಗೆ ಇಷ್ಟೋಂದು ಹಣ ಪಡೆದ ತಾಲೂಕು ಇನ್ನೊಂದಿಲ್ಲವೆಂದ ಸಚಿವರು.
  • ತಾಲೂಕಿನಲ್ಲಿ ಮತ್ತೇ ಗಣಿ ಆರಂಭದ ಸೂಚನೆ ನೀಡಿದ ಸಚಿವರು.
  • ಹಣಕ್ಕೆ ಯೋಚನೆ ಮಾಡಬೇಡಿ, ಕ್ರಿಯಾ ಯೋಜನೆ ಸರಿಯಾಗಿ ತಯಾರಿ ಮಾಡಿ.
  • ವಕೀಲರ ಸಂಘದ ಕಟ್ಟಡಕ್ಕೂ ಗಣಿ ಹಣದಲ್ಲಿ ಐವತ್ತು ಲಕ್ಷ ರೂಗಳನ್ನು ಮೀಸಲಿಡಲು ಸೂಚನೆ
  • ಸಭಿಕರು ಏನೇ ಕೇಳಿದರೂ ಕ್ರಿಯಾ ಯೋಜನೆಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ.
  • ಸರಿಯಾದ ಮಾಹಿತಿ ನೀಡದ ಡಿ.ಡಿ.ಮೈನಿಂಗ್ ಮೇಲೆ ಕೆಂಡಾಮಂಡಲವಾದ ಶಾಸಕ ಸಿ.ಬಿ.ಸುರೇಶ್ಬಾಬು
  • ಹೈಟೆಕ್ ಆಸ್ಪತ್ರೆಗೆ ಯೋಜನೆ ರೂಪಿಸಲು ಶಾಸಕ ಸಿ.ಬಿ.ಎಸ್. ಸೂಚನೆ


ಚಿಕ್ಕನಾಯಕನಹಳ್ಳಿ,ಅ.18 :  ತಾಲೂಕಿನ ಅಭಿವೃದ್ದಿಗೆ ರೂಪಿಸುತ್ತಿರುವ ಕ್ರಿಯಾ ಯೋಜನೆಗೆ ಮಂಜೂರು ಆಗುವ ಅನುದಾನ ಅಧಿಕವಾಗಿದ್ದು, ಇಡೀ ದೇಶದಲ್ಲಿ ಒಂದು ತಾಲೂಕಿನ ಅಭಿವೃದ್ದಿಗೆ ಇಷ್ಟು ಹಣವನ್ನು ಯಾವ ತಾಲೂಕು ಪಡೆಯಲು ಸಾಧ್ಯವಿಲ್ಲ ಅಷ್ಟು ಹಣ ಮೀಸಲಿದೆ, ಆದ್ದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ  ನಡೆದ ಜಿಲ್ಲಾ, ತಾಲೂಕು ಮಟ್ಟದ  ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ  ಸಭೆಯಲ್ಲಿ ಮಾತನಾಡಿ, ಇನ್ನೂ ಹತ್ತು ದಿನಗಳಲ್ಲಿ ಈ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು, ಈ ಯೋಜನೆಯನ್ನು ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಕೆ.ಡಿ.ಪಿ ಸಭೆಯಲ್ಲಿ ಚಚರ್ಿಸಿ ನಂತರ ಅಂತಿಮಗೊಳಿಸಬೇಕು ಎಂದರು.
ಈ ಹಂತದಲ್ಲಿ ಗಣಿಬಾಧಿತ ಹಳ್ಳಿಗಳ ಪಟ್ಟಿಯ ವಿಷಯವಾಗಿ ಗಣಿ ಮತ್ತು ಭೂ ವಿಜ್ಞಾನ ಉಪನಿದರ್ೇಶಕ ಸಿದ್ದಗಂಗಯ್ಯ ನೀಡಿದ ಉತ್ತರಕ್ಕೆ ಕೆಂಡಾಮಂಡಲವಾದ ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲೆಯ ಗಣಿ ಪ್ರದೇಶಗಳ ಬಗ್ಗೆ ಮಾಹಿತಿ ಇಲ್ಲದ ಇಂತಹ ಅಧಿಕಾರಿಗಳನ್ನು ಏಕೆ ಇಟ್ಟುಕೊಂಡಿದ್ದೀರಾ ಎಂದರಲ್ಲದೆ, ಕೊನೆ ಪಕ್ಷ ಈ ಸಭೆಗೆ ಬರುವ ಮೊದಲು ಸರಿಯಾದ ಮಾಹಿತಿಯನ್ನು ಇಟ್ಟುಕೊಂಡಿಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿದರು. 
ಅಂತಿಮವಾಗಿ ವಿಧಾನ ಸಭೆಯಲ್ಲಿ ಶಾಸಕರು ಲಿಖಿತವಾಗಿ ಸಕರ್ಾರದಿಂದ ಪಡೆದಿದ್ದ ಗಣಿ ಬಾಧಿತ ಹಳ್ಳಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಸಕರ್ಾರದ ಪ್ರಕಾರ ತಾಲೂಕಿನ 22 ಹಳ್ಳಿಗಳು ಗಣಿ ಬಾಧಿತ ಪ್ರದೇಶವಾಗಿದ್ದು ಹೊನ್ನೇಬಾಗಿ, ಗೊಲ್ಲರಹಳ್ಳಿ, ಬುಳ್ಳೇನಹಳ್ಳಿ, ಬೆಳವಾಡಿ, ಜಾಣೇಹಾರ್, ಭೈರಲಿಂಗನಹಳ್ಳಿ, ಮತಿಘಟ್ಟ, ಗುರುವಾಪುರ, ಅಗ್ರಹಾರ, ಸೋಮನಹಳ್ಳಿ, ಯರೇಕಟ್ಟೆ, ಸೊಂಡೇನಹಳ್ಳಿ, ಮಂಚೇಕಟ್ಟೆ, ಕೆಂಕೆರೆ, ರಾಮನಹಳ್ಳಿ, ಸಾದರಹಳ್ಳಿ, ದೊಡ್ಡರಾಂಪುರ, ಆಶ್ರಿಹಾಲ್, ತೊನ್ನಲಾಪುರ, ಕಾತ್ರಿಕೆಹಾಳ್, ಹೊಂಬಳಘಟ್ಟ, ಬೆಳ್ಳಾರ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 
ತಾಲ್ಲೂಕಿನ ಗಣಿಬಾಧಿತ ಪ್ರದೇಶಗಳ 22 ಹಳ್ಳಿಗಳ ರಸ್ತೆಯನ್ನು ಕಾಂಕ್ರೇಟ್ ರಸ್ತೆಗಳು ಹಾಗೂ ಎರಡೂ ಬದಿಯಲ್ಲಿ ಚರಂಡಿ ಹಾಗೂ ಸಸಿಗಳನ್ನು ನಡೆಸಬೇಕು ಎಂದಾಗ ಸ್ಥಳದಲ್ಲಿದ್ದ ತುಮಕೂರು ಕಾರ್ಯನಿವರ್ಾಹಕ ಇಂಜನಿಯರ್ ಶಿವಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗಗಳಲ್ಲಿ ಪಿಡಬ್ಯೂಡಿ ಇಲಾಖೆಗೆ ಸೇರಿದ ಗಣಿ ಬಾಧಿತ ಪ್ರದೇಶಗಳ   ಕಾಂಕ್ರಿಟ್ ರಸ್ತೆಗೆ 118 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು. 
ಜಿಲ್ಲಾ ಪಂಚಾಯ್ತಿ ಇಂಜನಿಯರಿಂಗ್ ವಿಭಾಗದ ರಾಜಶೇಖರ್ ಮಾತನಾಡಿ,  ಈ ವ್ಯಾಪ್ತಿಯಲ್ಲಿ ಬರುವ 36.95 ಕಿ.ಮೀ ರಸ್ತೆ, ಚರಂಡಿ ನಿಮರ್ಿಸಲು 42 ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು ಈ ಎಲ್ಲಾ ಕಾಂಕ್ರಿಟ್ ರಸ್ತೆಗಳ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ತಾಲ್ಲೂಕಿನಲ್ಲಿನ ವಸತಿಶಾಲೆ, ಹಾಸ್ಟಲ್ಗಳು, ಶುದ್ದ ಕುಡಿಯುವ ನೀರು ಘಟಕಗಳು,  ಶಾಲಾ ಕಟ್ಟಡಗಳು, ಆಟದ ಮೈದಾನದ ಅಭಿವೃದ್ದಿ,  ಶಾಲಾವನ, ಕಾಲೇಜು ಕಟ್ಟಡಗಳು, ಗ್ರಂಥಾಲಯ, ಪ್ರತಿ ಹಳ್ಳಿಗಳಲ್ಲಿ ಗ್ರಂಥಾಲಯ ಕಟ್ಟಡಗಳು, ಶಾಲಾ ಕಾಂಪೌಂಡ್ಗಳು, ಶೌಚಾಲಯಕ್ಕೆ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳು ಸೂಚಿಸಿದರು.
ಗೋಡೆಕೆರೆ, ತೀರ್ಥಪುರ, ಬೋರನಕಣಿವೆ, ಬೆಳ್ಳಾರದಲ್ಲಿ ಸಮುದಾಯ ಭವನ ನಿಮರ್ಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಸಲಹೆ ನೀಡಿದರು. 
ಪ್ರತಿ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಪಶುಸಂಗೋಪನಾ ಇಲಾಖೆ ಕಟ್ಟಡಗಳನ್ನು ನಿಮರ್ಿಸಲು ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆರೆಗಳ ಜೀಣರ್ೋದ್ದಾರ, ಕೆರೆಗಳಲ್ಲಿನ ಊಳು ತೆಗೆಯುವುದು ಸೇರಿದಂತೆ ಸಮಗ್ರ ಅಭಿವೃದ್ದಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಕ್ರಿಯಾ ಯೋಜನೆ ರೂಪುಗೊಳ್ಳಬೇಕು ಎಂದರು. ಇದೊಂದು ತಾಲೂಕಿನ ಅಭಿವೃದ್ದಿಯ ಮಾಸ್ಟರ್ ಪ್ಲ್ಯಾನ್ ಆಗಬೇಕು ಎಂದು ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ಹೇಮಾವತಿ ಕಾಲುವೆ ಅಗಲೀಕರಣಕ್ಕೆ ಕ್ರಿಯಾ ಯೋಜನೆ. ಗೋರೂರು ಡ್ಯಾಂನಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ನಾಲೆ ಅಗಲೀಕರಣ ಹಾಗೂ ನಾಲೆಗಳ ಅಭಿವೃದ್ದಿಗೆ ಸಕರ್ಾರ 562 ಕೋಟಿ ರೂಪಾಯಿ ಕ್ರಿಯಾ ಯೋಜನೆ ತಯಾರಿಸಿ ಸಕರ್ಾರಕ್ಕೆ ವರದಿ ನೀಡಿದ್ದು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು ಶೀಘ್ರವೇ ಸಂಪುಟದಲ್ಲಿ ಚಚರ್ೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿದ್ದರು, ತಿಪಟೂರು ಶಾಸಕ ಕೆ.ಷಡಾಕ್ಷರಿ, ಜಿ.ಪಂ.ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಲ್ಲಾಧಿಕಾರಿ ಕೆ.ಸತ್ಯಮೂತರ್ಿ, ಜಿ.ಪಂ. ಸಿ.ಇ.ಓ.ಗೋವಿಂದರಾಜು, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ.ಕೃಷ್ನಮೂತರ್ಿ,  ತಾ.ಪಂ. ಅಧ್ಯಕ್ಷೆ ಲತಾ ಕೇಶವಮೂತರ್ಿ, ಪುರಸಭಾ ಅಧ್ಯಕ್ಷೆ ಪುಷ್ಪಾ ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ,  ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಮಂಜುಳಾ, ಜಾನಮ್ಮ, ನಿಂಗಮ್ಮ, ತಾ.ಪಂ ಸದಸ್ಯರುಗಳು, ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, October 10, 2014

ತಾ.ಪಂ ಸಾಮಾನ್ಯ ಸಭೆ 

                             
ಚಿಕ್ಕನಾಯಕನಹಳ್ಳಿ,ಅ.10:  ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ  ರೈತರಿಗೆ ಬರುವ ಸವಲತ್ತುಗಳ ಬಗ್ಗೆ ತಿಳಿಸದೆ,  ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ತಾ.ಪಂ.ಸದಸ್ಯರು ಆರೋಪಿಸಿದ್ದಾರೆ. 
ಪಟ್ಟಣದ ತಾಲ್ಲೂಕೂ ಸಭಾಂಗಣದಲ್ಲಿ ಅಧ್ಯಕ್ಷ ಲತಾ ಕೇಶವಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚಚರ್ಿಸಿದ ಸದಸ್ಯರು, ತಾಲೂಕಿನ 28 ಗ್ರಾ.ಪಂ.ಗಳಿಗೂ ಸೂಕ್ತ ರೀತಿಯ ಸುತ್ತೋಲೆ ಹಾಗೂ ವಿವಿಧ ಮಾಧ್ಯಮಗಳಿಗೆ ರೈತರಿಗೆ ಸವಲತ್ತುಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು, ಇದಕ್ಕೆ ಪ್ರತಿಕ್ರಯಿಸಿದ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ,  ಇನ್ನು ಮುಂದೆ ಗ್ರಾಮಪಂಚಾಯ್ತಿಗಳಿಗೆ ರೈತರಿಗೆ ಬರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ, ತಾಲೂಕಿನ ಅಧಿಕಾರಿಗಳ ನಿರ್ಲಕ್ಷದಿಂದ  ನಮ್ಮ ತಾಲೂಕನ್ನು  ಬರಪೀಡಿತ ಪ್ರದೇಶವೆಂದೆ ಸಕರ್ಾರ ಘೋಷಿಸದಿರಲು ಕಾರಣ ವಾಗಿದೆ ಎಂದು  ಆರೋಪಿಸಿದರು 
ತಾಲ್ಲೂಕ್ ಪಂಚಾಯ್ತಿ ಸದಸ್ಯ ಸೀತಾರಾಮಯ್ಯ ಮಾತಾನಾಡಿ ತಾಲ್ಲೂಕು ಪಂಚಾಯ್ತಿಯ ಶೇಕಡ 3 ರ ಅನುದಾನದ ಅಡಿಯಲ್ಲಿ ಮೈಕ್ಸೇಟ್ಕೊಳ್ಳಲು 3 ಬಾರಿ ಬಿಲ್ಲು ಮಾಡಿಕೊಂಡಿದ್ದಾರೆ.ಹಾಗೂ ತಾಲ್ಲೂಕು ಪಂಚಾಯ್ತಿಗೆ ಪೀಠೋಪಕರಣಗಳು ತೆಗೆದುಕೊಳ್ಳುವಾಗ ಸದಸ್ಯರ  ಗಮನಕ್ಕೆ ಬರುವುದಿಲ್ಲ ಅಧಿಕಾರಿಗಳು ನೀವೇ ಬಿಲ್ಲು ಮಾಡಿಕೊಂಡರೇ  ಸದಸ್ಯರ ಗಮನಕ್ಕೆ ಏಕೆ ತೆಗೆದುಕೊಂಡು ಬರುತ್ತಿಲ್ಲ ಆಗಾದರೆ ತಾ,ಪಂ ಸದಸ್ಯರು ಸಭೆಗೆ ಏಕೆ ಬರಬೇಕು ಎಂದು ಇ.ಒ ಅವರನ್ನು ಪ್ರಶ್ನಿಸಿದರು.
ಇ.ಒ.ಉತ್ತರಿಸಿ ನಾನು ಹೊಸದಾಗಿ ಬಂದಿದ್ದು ನನಗೆ ಇದರ ಬಗ್ಗೆ ಯಾವುದೆ ಮಾಹಿತಿ ಇಲ್ಲ, ತಿಳಿದ ನಂತರ ಉತ್ತರಿಸುವುದಾಗಿ ಹೇಳಿದರು.
ಕೃಷಿ ಇಲಾಖೆಗೆ ಸಂಬಂದಿಸಿದಂತೆ  ಸಹಾಯಕ ನಿದರ್ೇಶಕ ಹೆಚ್. ಹೊನ್ನದಾಸೇಗೌಡ ಮಾತಾನಾಡಿ, ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ  ಪಾಲಿಹೌಸ್ ಹಾಗೂ ನಾನ್ ಪಾಲಿಹೌಸ್ ಯೋಜನೆ ಜಾರಿಗೆ ಬಂದಿದ್ದು ಪಾಲಿಹೌಸ್ ತರಕಾರಿ ಹಾಗೂ ತೋಟಗಾರಿಕ ಬೆಳೆಗಳನ್ನು ಎನ್.ಹೆಚ್.ಎಂ,ಯೋಜನೆ ಅಡಿಯಲ್ಲಿ ಶೇಕಡ 50 ರಷ್ಷು ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ ಈವರೆಗೆ 10 ಅಜರ್ಿ ಬಂದಿದ್ದು ಇನ್ನು ಹೆಚ್ಚು ಅಜರ್ಿಗಳು ಬಂದರೆ ಲಾಟರಿ ಎತ್ತುವ ಮೂಖಾಂತರ ಪಲಾನುಭವಿಗಳನ್ನು  ಆಯ್ಕೆಮಾಡಲಾಗುವುದು.
 ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 2.5 ಎಕರೆ ಜಮೀನು ಹೊಂದಿರುವ ರೈತರಿಗೆ ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 1.2 5 ಲಕ್ಷದಿಂದ 2.5 ಲಕ್ಷದವರೆಗೆ ಸಹಾಯ ದನ ನೀಡಲಾಗುತ್ತದೆ ಈ ಯೋಜನೆ ಅಡಿಯಲ್ಲಿ ರೈತರು ಬದು, ಪಾಲಿಥಿನ್ ಸಹಿತ ಕೃಷಿ ಹೊಂಡ, ಡೀಜೆಲ್ ಪಂಪ್ಸೆಟ್, ಹಾಗೂ ಸ್ಪಿಂಕ್ಲರ್ ಅಳವಡಿಸಿಕೊಳ್ಳಬಹುದು ಎಂದರು.
ತಾಲ್ಲೂಕು ಪಂಚಾಯ್ತಿಯ ಹಣಕಾಸು ಸಭೆ ನಡೆಯುವಾಗ ಸಮಾಜ ಕಲ್ಯಾಣಾಧಿಕಾರಿಗಳು ಸಭೆಗೆ ಹಾಜರಾಗಿ ಪುಸ್ತಕಕ್ಕೆ ಸಹಿ ಹಾಕಿ ಹೇಳದೆ ಕೇಳದೆ ಹೊರಗೆ ಏಕೆ ಹೊಗಿದ್ದಿರಿ ಇದರಿಂದ ತಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಎಷ್ಟು ಗೌರವ ಇದೆ ಎಂದು ಸೂಚಿಸುತ್ತದೆ. ಎಂದು ತಾ.ಪಂ ಅಧ್ಯಕ್ಷೆ ಲತಾಕೇಶವಮೂತರ್ಿ ಸಮಾಜ ಕಲ್ಯಾಣಾಧಿಕಾರಿ ರಾಮಣ್ಣನವರನ್ನು ಖಾರವಗಿ ಪ್ರಶ್ನಿಸಿದರು ಅನಿವಾರ್ಯ ಕಾರಣಗಳು ಇದ್ದರೆ ಮಾತ್ರ ಸಭೆಯಿಂದ ಅನುಮತಿ ಪಡೆದು ಹೊರಗೆ ಹೊಗಬೇಕೆವರತು ಸಣ್ಣಪುಟ್ಟ ವಿಷಯಗಳಿಗೆಲ್ಲಾ ಹೊರಗೆ ಹೋದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ  ಅಧಿಕಾರಿ ಮೌನದಿಂದ್ದಿದ್ದರು.
    ಸಮಾಜ ಕಲ್ಯಾಣಾ ಇಲಾಖಾಯ ವಸತಿ ನಿಲಯದಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ವಸತಿ ನಿಲಯದ ಸಮಸ್ಯೆಗಳನ್ನು ಕಾಲೇಜು ವಿದ್ಯಾಥರ್ಿಗಳು ಹೇಳಿದರೆ ಹಾಸ್ಟೆಲ್ ವರ್ಡನ್ ವಿದ್ಯಾಥರ್ಿಗಳನ್ನು ಗದರಿಸಿ ಬೈಯುತ್ತಾರೆ ಎಂಬ ದೂರಿದೆ ಆ  ವಾರ್ಡನನ್ನು  ಸಭೆಗೆ ಕರೆಸುವಂತೆ ಸದಸ್ಯ ನಿರಂಜನ್ ಅಧಿಕಾರಿಗಳನ್ನು ಆಗ್ರಹಿಸಿದರು. 
   ಇನ್ನು ಮುಂದೆ ಈಗಾಗದಂತೆ ನೋಡುಕೊಳ್ಳುವುದಾಗಿ ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ ತಿಳಿಸಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ವಸಂತಯ್ಯ ಸಾಮಾಜಿ ನ್ಯಾಯ ಸ್ಥಾಯಿ ಸಮಿತಿ ಚಿಕ್ಕಮ್ಮ, ಸದಸ್ಯರಾದ ಜಯಣ್ಣ, ಚೇತನ ಗಂಗಾಧರ್, ಹೇಮಾವತಿ, ಲತಾ ವಿಶ್ವೇಶ್ವರ್, ಉಮಾದೇವಿ, ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚೆಕ್ ವಿತರಣೆ: ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ಆಕಸ್ಮಿಕವಾಗಿ ಮರಣಹೊಂದಿದ ಕುರಿ ಮಾಲೀಕರಿಗೆ ತಲಾ ಐದು ಸಾವಿರದಂತೆ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.