Thursday, September 16, 2010





ಚಿಕ್ಕನಾಯಕನಹಳ್ಳಿ,ಸೆ.16: ವ್ಯವಹಾರಕ್ಕಾಗಿ ಕಲಿಯುತ್ತಿದ್ದ ಶಿಕ್ಷಣ ಇಂದು ವ್ಯಾಪಾರೀಕರಣವಾಗಿ ಡೊನೇಶನ್ ಎಂಬ ಭೂತ ಬಡವರ ಬೆನ್ನುಹತ್ತಿದೆ. ಎಲ್.ಕೆ.ಜಿ, ಯು.ಕೆಜಿ.ಯಂತಹ ಪೂರ್ವ ಪ್ರಾಥಮಿಕ ಶಿಕ್ಷಣಗಳಕ್ಕೂ ತಾಲ್ಲೂಕು ಮಟ್ಟದ ಶಾಲೆಗಳಲ್ಲಿ ಸುಮಾರು 10 ರಿಂದ 20 ಸಾವಿರದವರೆವಿಗೂ ಡೊನೇಶನ್ ಎಂಬುದನ್ನು ದೇಣಿಗೆ ರೂಪದಲ್ಲಿ ವಸೂಲಿ ಮಾಡುವ ಮೂಲಕ ಶಿಕ್ಷಣ ಸಂಸ್ಥೆಗಳು ನಾಗರೀಕರನ್ನು ವಂಚಿಸುತ್ತಿವೆ ಎಂದು ಎ.ಬಿ.ವಿ.ಪಿ. ನಗರ ಕಾರ್ಯದಶರ್ಿ ಚೇತನ್ ಪ್ರಸಾದ್ ಆಂತಕವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಎ.ಬಿ.ವಿ.ಪಿ.ಕರೆ ನೀಡಿದ್ದ ರಸ್ತೆ ತಡೆ ನಡೆಸಿ ಮಾತನಾಡಿದ ಅವರು, ಶಿಕ್ಷಣದ ವ್ಯಾಪಾರೀಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬಡ ವಿದ್ಯಾಥರ್ಿಗಳ ಪೋಷಕರಲ್ಲಿ ಆತಂಕ ಮಡುಗಟ್ಟಿದ್ದು ಸಮಾಜದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕಾದರೆ ಶಿಕ್ಷಣ ಅತ್ಯವಶ್ಯಕ. ಮನುಷ್ಯನಿಗೆ ನೀರು, ಗಾಳಿ, ಆಹಾರ ಎಷ್ಟು ಅಗತ್ಯವೆನಿಸಿದ್ದರು ಅಷ್ಟೇ ಪ್ರಮಾಣದಲ್ಲಿ ಶಿಕ್ಷಣ ಕೂಡ ಅಷ್ಟೇ ಅಗತ್ಯವಾಗಿದ್ದು ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಡೊನೇಶನ್ ಹಾವಳಿಯಿಂದ ನಲುಗುತ್ತಿದೆ ಎಂದರಲ್ಲದೆ, ಶಾಲಾ, ಕಾಲೇಜುಗಳಲ್ಲಿ ಪ್ರತಿ ನಿತ್ಯವು ಶಾರದೆಯನನು ಪೂಜಿಸುವ ಬದಲು ಲಕ್ಷ್ಮಿಯುನ್ನೇ ಬರಮಾಡುವುದರಲ್ಲಿ ವಿದ್ಯಾಸಂಸ್ಥೆಗಳು ಮುಂದಾಗಿವೆ ಎಂದರು.
ಎ.ಬಿ.ವಿ.ಪಿ. ಹಿರಿಯ ಕಾರ್ಯಕರ್ತ ರಾಕೇಶ ಮಾತನಾಡಿ ಸಕರ್ಾರಗಳು ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು ಶಿಕ್ಷಕರು ಮನೆ ಪಾಠ ಮಾಡವ ಲೆಕ್ಕಾಚಾರದಲ್ಲಿ ಇರುತ್ತಾರೆ. ಇಂತಹವರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು ಮಕ್ಕಳ ಪೋಷಕರಲ್ಲಿ ಆತಂಕ ಕೂಡ ಹೆಚ್ಚಾಗಿದೆ. ಮೈಸೂರು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕ್ರಮ ಜರುಗಿಸುವಂತೆ ಮಾನ್ಯ ರಾಜ್ಯಪಾಲ ಹೆಚ್.ಆರ್.ಭಾರದ್ವಜ್ ಅವರಲ್ಲಿ ಎ.ಬಿ.ವಿ.ಪಿ. ಮನವಿ ಮಾಡಲು ಹೋದ ಸಂದರ್ಭದಲ್ಲಿ. ಪೋಲಿಸರು ವಿದ್ಯಾಥರ್ಿ ಸಮೂಹಕ್ಕೆ ನ್ಯಾಯೋಚಿತವಾಗಿ ಸೂಕ್ತ ಸಲಹೆ ಸಹಕಾರ ನೀಡದೆ ಪೋಲಿಸರು್ರೆ ಏಕಾಏಕಿ ಲಾಠಿ ಚಾಚರ್್ ಮಾಡಿರುವುದನ್ನು ತಾಲ್ಲೂಕು ಎ.ಬಿ.ವಿ.ಪಿ.ಖಂಡಿಸುತ್ತದೆ. ಶಿಕ್ಷಣದಲ್ಲಿ ಏಕರೂಪ ಶಿಕ್ಷಣವನ್ನು ಜಾರಿಗೆ ತರುವುದರ ಮೂಲಕ ಸಕರ್ಾರ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು ಅಣೇಕಟ್ಟೇ, ವಿಜಯ್, ದಿಲೀಪ್, ದರ್ಶನ್, ಆನಂದ್, ಗುರು, ನಂದ ಎಲ್ಲಾ ಶಾಲಾ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಳ್ಳುವುದರ ಮೂಲಕ ಪ್ರತಿಭಟನೆ ನಡೆಸಿದರು.
ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿ ಪೊಲೀಸರ ವಶಕ್ಕೆ
ಚಿಕ್ಕನಾಯಕನಹಳ್ಳಿ,ಸೆ.16: ಮಹಿಳೆಯ ಕೈಮೇಲೆ ಲಾರಿ ಚಕ್ರ ಹರಿದ ಪರಿಣಾಮ ಎಡಗೈ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಕೆನರಾ ಬ್ಯಾಂಕ್ ಎದರು ಬೈಕ್ನಲ್ಲಿ ತಮ್ಮನ ಜೊತೆ ಬಟ್ಟೆ ತರಲೆಂದು ಹೋಗುತ್ತಿದ್ದ ರಾಜಮ್ಮ(30) ಎಂಬಾಕೆಗೆ ಹಿಂದಿನಿಂದ ಬಂದ ರಾಜಸ್ಥಾನದ ನೊಂದಾಣೆ ಹೊಂದಿರುವ ಲಾರಿ(ಆರ್.ಜೆ.04 ಜಿ.ಎ.4331) ಢಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ರಾಜಮ್ಮ ಕೆಳಗೆ ಬಿದ್ದ ತಕ್ಷಣ ಲಾರಿಯ ಚಕ್ರ ಈಕೆಯ ಎಡಗೈ ಮೇಲೆ ಹರಿದ ಪರಿಣಾಮ ಕೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಢಿಕ್ಕಿ ಹೊಡೆದ ತಕ್ಷಣ ಚಾಲಕ ವೇಗವಾಗಿ ಲಾರಿಯನ್ನು ಓಡಿಸಿಕೊಂಡು ಹೋಗಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಲಾರಿಯನ್ನು ಬೆನ್ನತ್ತಿ ಕಾಡೇನಹಳ್ಳಿಯ ಬಳಿ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.