Saturday, November 5, 2011





ಕ್ರೀಡೆಗೆ ಜಾತಿ ಮತ ತೋರದೆ ಪ್ರತಿಭೆಗಳಿಗೆ  ಪ್ರೋತ್ಸಾಹ ನೀಡಿ
ಚಿಕ್ಕನಾಯಕನಹಳ್ಳಿ,ನ.05 : ಕ್ರೀಡೆಗೆ ಜಾತಿ ಮತದಲ್ಲಿನ ಬೇದ ಭಾವ ತೋರದೆ ಕ್ರೀಡಾ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಅವರ ಭವಿಷ್ಯಕ್ಕೆ ದಾರಿಯಾಗಬೇಕು ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕನಕ ಯುವಕರ ಬಳಗ ಹಾಗೂ ಬ್ಲೂ ಬಾಯ್ಸ್ ಯೂತ್ ಕ್ಲಬ್ನ ವತಿಯಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಟೂನರ್ಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲಾ, ಕ್ರೀಡೆ, ವಿಜ್ಞಾನ ಇನ್ನಿತರ ಕ್ಷೇತ್ರಗಳಲ್ಲಿ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕೆ ಹೊರತು ಅವರ ಭವಿಷ್ಯದ ದಾರಿಗೆ ಮುಳ್ಳಾಗಬಾರದು ಎಂದು ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ಸಂತೋಷ್ ಜಯಚಂದ್ರ ಮಾತನಾಡಿ ಕ್ರೀಡೆಯಲ್ಲಿ ಗೆಲುವು ಸೋಲು ಅನಿವಾರ್ಯ ಅದರ ಬಗ್ಗೆ ಯೋಚಿಸದೆ ಆಟವನ್ನು ಮನಸ್ಪೂತರ್ಿಯಿಂದ ಆಡಲು ಕರೆ ನೀಡಿದರು.
ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಕ್ರೀಡಾಪಟು ಮುದ್ದುರಾಮಯ್ಯನವರ ನೆನಪಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಟೂನರ್ಿಯನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದು ಅವರು ರಾಜ್ಯಮಟ್ಟದ ಕುಸ್ತಿಪಟುವಾಗಿ ತಾಲ್ಲೂಕಿಗೆ ಹೆಸರು ತಂದಿದ್ದರು, ಅವರಂತೆ ಯುವ ಪ್ರತಿಭೆಗಳು ಹೊರಹೊಮ್ಮಿ ತಾಲ್ಲೂಕಿಗೆ ಉತ್ತಮ ಹೆಸರು ತರಲು ಆಶಿಸಿದರು.


ಸಮಾರಂಭದಲ್ಲಿ ಕಂಬಳಿ ಸೊಸೈಟಿ ಸದಸ್ಯ ಸಿ.ಎಂ.ಬೀರಲಿಂಗಯ್ಯ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಜಯಣ್ಣ, ವಾಸು ಉಪಸ್ಥಿತರಿದ್ದರು.

ಹಿಂದು ಮುಸ್ಲಿಂ ಸೌಹಾರ್ಧತೆಗೆ ಸಹಕರಿಸಿ
ಚಿಕ್ಕನಾಯಕನಹಳ್ಳಿ,ನ.05 : ಹಿಂದು, ಮುಸ್ಲಿಂ ಸೌಹಾರ್ಧತೆಗೆ ದಕ್ಕೆ ತರುವ ಕಿಡಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಿ.ಪಿ.ಐ ಕೆ.ಪ್ರಭಾಕರ್ ತಿಳಿಸಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ಬಗ್ಗೆ ಕೆರೆದಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ತಾಲ್ಲೂಕಿನ ಹಿಂದು ಮುಸ್ಲಿಂ ಭಾಂದವ್ಯದ  ಬಗ್ಗೆ ನಾನು 10 ವರ್ಷಗಳಿಂದಲೂ ಪತ್ರಿಕೆಗಳಲ್ಲಿ ಓದಿ ತಿಳಿದಿರುವೆ, ಈ ಭಾಂದವ್ಯದ ಬಗ್ಗೆ ಯಾರೂ ಅಡ್ಡಿಪಡಿಸಬಾರದು, ಅಂತಹ ಘಟನೆಗಳು ನಡೆಯುವ ಬಗ್ಗೆ ತಿಳಿದು ಬಂದರೆ ಸಾರ್ವಜನಿಕರು ನಮಗೆ ತಿಳಿಸಿ ಸಹಕರಿಸಬೇಕೆಂದು ಕೋರಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ತಾಲ್ಲೂಕಿನಲ್ಲಿ ನಡೆಯುವ ತಾತಯ್ಯನಗೋರಿ ಜಾತ್ರೆ ಹಾಗೂ ಆಂಜನೇಯನ ಜಾತ್ರೆಯಲ್ಲಿ ಹಿಂದು, ಮುಸ್ಲಿಂರು ಅಣ್ಣತಮ್ಮಂದಿರಂತೆ ಒಟ್ಟುಗೂಡಿ ಜಾತ್ರೆಯನ್ನು ಯಶಸ್ವಿಯಾಗಿಸುತ್ತಾರೆ ಇದು ಈಗೆ ಮುಂದುವರೆಯಬೇಕೆಂದು ಆಶಿಸಿದರು.
ಸಭೆಯಲ್ಲಿ ಎಸ್.ಐ ಚಿದಾನಂದಮೂತರ್ಿ, ತಾತಯ್ಯನ ಗೋರಿ ಕಮಿಟಿ ಕಾರ್ಯದಶರ್ಿ ಗನ್ನಿಸಾಬ್, ಸಿ.ಕೆ.ಮಹಮದ್, ಮಹಮದ್ ಇಕ್ಬಾಲ್, ಪುರಸಭಾ ಸದಸ್ಯರಾದ ರಂಗಸ್ವಾಮಯ್ಯ, ದೊಡ್ಡಯ್ಯ, ಕರವೇ ಅಧ್ಯಕ್ಷ ಸಿ.ಟಿ. ಗುರುಮೂತರ್ಿ,   ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಕೆ.ಜಿ.ಕೃಷ್ಣೆಗೌಡ, ದಯಾನಂದ್ ಹಾಗೂ ಪೋಲಿಸ್ ಸಿಬ್ಬಂದಿ  ಉಪಸ್ಥಿತರಿದ್ದರು.