Monday, April 11, 2016


ಡಿಸಿಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ವಿತರಣೆ : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.11 :  ರಾಮನಹಳ್ಳಿ ಪ್ರಾ.ಕೃ.ಸ.ಸಂಘದ ವತಿಯಿಂದ ರೈತರಿಗೆ ಬೆಳೆಸಾಲ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ, ವಾಹನ ಸಾಲ,  ಆಭರಣ ಅಡಮಾನ ಸಾಲ ಸೇರಿದಂತೆ ಇತರೆ ಡಿ.ಸಿ.ಸಿ. ಬ್ಯಾಂಕ್ ಮತ್ತು ಸಂಘದ ಸ್ವಂತ ಬಂಡವಾಳದಿಂದ ರೈತರಿಗೆ ಸುಮಾರು ಮೂರುವರೆ ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು.
ತಾಲ್ಲೂಕಿನ ರಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಂಘ ಇಂದು 114 ಜನ ರೈತರಿಗೆ 22 ಲಕ್ಷದ 88 ಸಾವಿರ ರೂಗಳ ಸಾಲವನ್ನು ವಿತರಿಸಲಾಗಿದೆ ಎಂದರು. ರೈತರು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಸಲು ಕೋರಿದರು, ಡಿ.ಸಿ.ಸಿ.ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ರೈತರಿಗೆ ಅನೇಕ ರೀತಿಯ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಬೆಳೆಸಾಲ, ಅಡಮಾನಸಾಲ, ಹೈನುಗಾರಿಕೆ ಸಾಲ, ಅಲೆಮಾರಿಗಳಿಗೆ  ವ್ಯಾಪಾರ ಸಾಲ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲವನ್ನು ಜಿಲ್ಲಾದ್ಯಂತ ನೀಡುತ್ತಿದ್ದು, ಬ್ಯಾಂಕ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿ ಬ್ಯಾಂಕಿಗೆ ಬಂದ ಲಾಭದ ಹಣದಿಂದ ಒಂದು ಲಕ್ಷ ರೂಗಳ ಮಿತಿಗೆ ಒಳಪಟ್ಟಿರುವ  ವ್ಯವಸಾಯ ಸಾಲವನ್ನು  ಪಡೆದು ಮರಣಹೊಂದಿರುವ ರೈತ ಕುಟುಂಬದವರಿಗೆ ನೆರವಾಗಿದೆ, ಜಿಲ್ಲೆಯಲ್ಲಿ 1720 ಜನ ಸಾಲಗಾರರಿಗೆ ಸುಮಾರು ನಾಲ್ಕುವರೆ ಕೋಟಿ ರೂ ಮನ್ನಾ ಮಾಡಲಾಗಿದೆ,  ಇದು ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು. 
    ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನಲ್ಲಿ ಸಾಲ ಪಡೆದು ಮರಣ ಹೊಂದಿರುವ ರೈತರುಗಳ ಸಾಲವನ್ನು ಮನ್ನಾವಾಗಿರುವ ಕುಟುಂಬದವರಿಗೆ   ತೀರುವಳಿ ಪತ್ರವನ್ನು ಇದೇ ತಿಂಗಳ 13 ರಂದು ತುಮಕೂರಿನ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ನಡೆಯುವ  ಸಮಾರಂಭದಲ್ಲಿ ನೀಡಲಾಗುವುದು ಎಂದರು. ಈ ಭಾಗಕ್ಕೆ ನೀರಾವರಿ ಸೌಲಭ್ಯವಿಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲೆ ಅಥವಾ ಇನ್ಯಾವುದೇ ಮೂಲದಿಂದಲಾದರೂ ಸರಿಯೇ ಇಲ್ಲಿಗೆ ನೀರು ತರುವುದು ಅಗತ್ಯವಾಗಿದೆ, ನೀರಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ, ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು. 
ರಾಮನಹಳ್ಳಿ ಸೊಸೈಟಿಯ ನಿದರ್ೇಶಕ ಸತ್ಯ ನಾರಾಯಣ್ ಮಾತನಾಡಿ, ಐದಾರು ತಿಂಗಳಿಂದ   ಸಾಲ ಕೊಡಲು ಸಾಧ್ಯವಾಗಿರಲಿಲ್ಲ, ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕರ ಪ್ರಯತ್ನದಿಂದ  ಈ ವರ್ಷ 1 ಕೋಟಿ 70ಲಕ್ಷ ಸಾಲವನ್ನು ಡಿಸಿಸಿ ಬ್ಯಾಂಕ್ ಬಿಡುಗಡೆ ಮಾಡಿದೆ,  116 ಜನ ಬಡ ರೈತರಿಗೆ ಪಾಣಿಯ ಮುಖಾಂತರವಾಗಿ ಸಾಲವನ್ನು ಪ್ರಾಥಮಿಕ ಸಹಕಾರಿ ಬ್ಯಾಂಕ್ ಸಾಲವನ್ನು ನೀಡಿದೆ ಈ ಸಾಲವನ್ನು ರೈತರು ಸದುಪಯೋಗ ಪಡಿಸಿಕೊಂಡು ಮರುಪಾವತಿ ಮಾಡಬೇಕು ಎಂದರು.
ನಿದರ್ೇಶಕ ಆರ್.ಬಿ.ಕುಮಾರ್ ಮಾತನಾಡಿ. ಸಾಲ ಪಡೆದ ರೈತರು ಮರು ಪಾವತಿಯನ್ನು ಸರಿಯಾಗಿ ಮಾಡುತ್ತಾರೆ ಎಂದು ನಂಬಿ ಸಾಲ ಕೊಡುಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಿಮ್ಮನಹಳ್ಳಿ ತಾ.ಪಂ. ಇಂದ್ರಕುಮಾರಿ, ರಾಮನಹಳ್ಳಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷೆ  ಗಿರಿಜಮ್ಮ, ನಿದರ್ೇಶಕ ಮರುಳಸಿದ್ದಪ್ಪ, ಮಂಜುನಾಥ್, ಜೋಗಣ್ಣ, ರಘನಾಥ್, ಸತ್ಯನಾರಾಯಣ್, ಆರ್.ಬಿ.ಕುಮಾರ್, ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ  ಮತ್ತಿತರರು ಉಪಸ್ಥಿತರಿದ್ದರು.

ಬಸವನ ಉಪಟಳ ತಾಳಲಾರದೆ ಮಠದಲ್ಲಿ ಕಟ್ಟಿಹಾಕಿದ ಜನತೆ
ಚಿಕ್ಕನಾಯಕನಹಳ್ಳಿ,ಏ.11:  ಊರ ಜನರಿಗೆ ಉಪಟಳ ನೀಡುತ್ತಿದ್ದ ದೇವರ ಮುದ್ರೆ ಹೊತ್ತಿರುವ ಬಸವನನ್ನು ಗ್ರಾಮಸ್ಥರೇ ಒಗ್ಗೂಡಿ ಮಠದಲ್ಲಿ ಕಟ್ಟಿಹಾಕಿದ ಘಟನೆ ತಾಲ್ಲೂಕಿನ ಹಂದನಕೆರೆಯಲ್ಲಿ ನಡೆದಿದೆ.
    ಕಳೆದ ಒಂದು ವರ್ಷದಿಂದ ದೇವರ ಬಸವ ಪುಂಡಾಟ ಪ್ರಾರಂಭಿಸಿದೆ. ಕಳೆದ 2 ತಿಂಗಳಿಂದ ಬಸವ ವಾಘ್ರವಾಗುತ್ತಿದೆ.ದೇವರ ಬಸವ ಕಳೆದಚ 2 ತಿಂಗಳ ಹಿಂದೆ ಮಹಿಳೆಯೊಬ್ಬರನ್ನು ತಿವಿದು ಸಾಯಿಸಿದೆ.ಕಳೆದ ವಾರ ಮತ್ತೋರ್ವಚ ಮಹಿಳೆ ಗೂಳಿ ದಾಳಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ.ಊರಿನ ಸಾಕು ದನಗಳು,ವಾಹನಗಳು ಹಾಗೂ ಜನರ ಮೇಲೆ ನಿರಂತರ ದಾಳಿ ನಡೆಸುತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
  ಗ್ರಾಮಸ್ಥ ಸಿದ್ದಣ್ಣ ಮಾತನಾಡಿ,ಊರಿನಲ್ಲಿ ಈಗಾಗಲೆ ರೇವಣಸಿದ್ಧೇಶ್ವರ ಮಠಕ್ಕೆ 4 ದೇವರ ಬಸವಗಳು ಇವೆ.ಅದರಲ್ಲಿ 4 ವರ್ಷ ಪ್ರಾಯದ ಬಸವ ಹಾಗೂ 1 ಬಸವಿ ಜನರಿಗೆ ತೊಂದರೆ ನೀಡುತ್ತಿವೆ.ನಗಾರಿ ಬಸವನ್ನು ಹೊರತುಪಡಿಸಿ ಉಳಿದ 3 ಬಸವಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
   ಚಿಕ್ಕಂದಿನಿಂದಲೂ  ಬಸವ ತನ್ನ ಪರಾಕ್ರಮವನ್ನು  ತೋರಿಸುತ್ತಿತ್ತು. ಊರಿನವರು ಬಸವ ಸಣ್ಣದು ಎಂದು ಗಮನ ಹರಿಸಿರಲಿಲ್ಲ, ಬಸವ ಈಗ ಆಳೆತ್ತರಕ್ಕೆ ಬೆಳೆದು ಕಟ್ಟುಮಸ್ತಾದ ದೇಹವನ್ನು ಹೊಂದಿದೆ. ಸದರಿ ಬಸವ ಹಳ್ಳಿಕಾರ್ ಜಾತಿಗೆ ಸೇರಿದೆ.ಬಸವನನ್ನು ಹೆಸರುಘಟ್ಟದ ವೀರ್ಯ ಸಂಗ್ರಹ ಕೇಂದ್ರದ ವಶಕ್ಕೆ ಪಡೆಯಬೇಕು.ಆಮೂಲಕ ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಸಂವರ್ಧನೆಗೆ ಸಾಧ್ಯವಾಗುತ್ತದೆ ಎಂದರು.
ಹಳೆ ಸಂಪ್ರದಾಯದಂತೆ ನಗಾರಿ ಬಡೆಯಲು ಬಸವನನ್ನು ಬೆಳೆಸಿ ದೇವಸ್ಥಾನಕ್ಕೆ ಬಿಟ್ಟಿದ್ದೆವು. ಆದರೆ ಈ ಬಸವ ಮನುಷ್ಯರ ಮೇಲೆ ತನ್ನ ಶಕ್ತಿಯನ್ನು ಪ್ರದಶರ್ಿಸುತ್ತಿದೆ. ರಾಮಕ್ಕ ಎಂಬುವರು ಬಸವನ ದಾಳಿಗೆ ಬಲಿಯಾಗಿದ್ದಾರೆ. ಹಲರನ್ನು ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ರೋಸಿ ಹೋಗಿ ಬಸವನನ್ನು ಗ್ರಾಮಸ್ಥರೆಲ್ಲ ಸೇರಿ ಕಟ್ಟಿಹಾಕಿದ್ದೇವೆ ಎಂದರು.
ಗ್ರಾಮಸ್ಥ ಪರಮೇಶ್ ಮಾತನಾಡಿ, ಎತ್ತಿನ ಬಂಡಿಯಲ್ಲಿ ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಬಸವ ಏಕಾಏಕಿ ಬಂಡಿಗೆ ಕಟ್ಟಿದ್ದ ಎತ್ತುಗಳ ಮೇಲೆ ದಾಳಿ ಮಾಡಿತು. ಗಾಡಿಯನ್ನು ಕೆಡವಿತು,. ಇದರಿಂದ ಗಾಡಿಯಲ್ಲಿದ್ದ ಎಲ್ಲರೂ ಕೆಳಕ್ಕೆ ಬಿದ್ದೆವು, ನಮ್ಮ ಸಂಬಂಧಿಕರೊಬ್ಬರ ಮೇಲೆ ಗಾಡಿಯ ಚಕ್ರ ಹರಿದು ಗಂಭೀರ ಗಾಯಗಳಾದವು.  ಈ ಘಟನೆಗಳು ಬಸವನಿಂದಾಗಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ ಎಂದರು.
ಗ್ರಾಮಸ್ಥೆ ನಂಜಮ್ಮ ಮಾತನಾಡಿ, ಬಸವನ ಉಪಟಳ ತಾಳಲಾರದೆ ಬಸವ ಸಂಚರಿಸುವ ರಸ್ತೆಯಲ್ಲಿ ನಡೆದಾಡಲು ಭಯಪಡುವಂತಾಗಿದೆ.ಮನೆ ಮುಂದೆ ನಿಲ್ಲಿಸಿದ್ದ ಗಾಡಿಯನ್ನು ಜಖಂಗೊಳಿಸಿದೆ.ಸೋಮವಾರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ತುಳಿದು ಜಖಂಗೊಳಿಸಿದೆ.


ಎಂ.ಎಚ್.ಕಾವಲ್ ಗ್ರಾಮಸ್ಥರು ಕುಡಿಯುವ ನೀರಿಗೆ ಒತ್ತಾಯಿಸಿ ತಾ.ಪಂ. ಕಛೇರಿ ಮುಂದೆ ಪ್ರತಿಭಟನೆ.
ಚಿಕ್ಕನಾಯಕನಹಳ್ಳಿ11: ತಾಲೂಕಿನ ಮರಳುಹಳ್ಳದ ಕಾವಲ್ ಗ್ರಾಮದ ಜನ ಕುಡಿಯುವ ನೀರಿಗಾಗಿ ಒತ್ತಾಯಿಸಿ ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  
 ಮುದ್ದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ  ಎಂ,ಹೆಚ್.ಕಾವಲ್ ಕಾಲೋನಿಯ ಜನ ತಾಲ್ಲೂಕು ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಿ ಸುಮಾರು 30ಮನೆಗಳಿರುವಂತಹ ಕಾಲೋನಿಯಲ್ಲಿ ಒಂದು ಬೋರ್ವೆಲ್ ಇದ್ದು,  ಅದರಲ್ಲಿ ನೀರು ಬರುವುದು ನಿಂತುಹೋಗಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ  ಜನರು  ತೀವ್ರವಾಗಿ  ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದೇವೆ  ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ  ಪಂಚಾಯಿತಿ ಸದಸ್ಯೆ ಯಶೋದಮ್ಮ ಮಲ್ಲೇಶಯ್ಯ ಮಾತನಾಡಿ ಪಂಚಾಯಿತಿಯಿಂದ ಬೋರ್ವೆಲ್ಗೆ ಪಂಪು ಮೋಟಾರ್ ಆಳವಡಿಸಿ ಪೈಪ್ಲೈನ್ ಕಾರ್ಯವೆಲ್ಲ ಮುಗಿದಿದ್ದು ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,  ಇಂದು ಭೇಟಿ ಮಾಡಿ ಒತ್ತಾಯಿಸಿದ್ದು ಇನ್ನು ಎರಡು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಲೋನಿಯ ಜಯಮ್ಮ ಮಾತನಾಡಿ,  ಬೋರ್ವೆಲ್ನಲ್ಲಿ ನೀರು ಬರದೇ ನಿಂತುಹೋಗಿದ್ದು ಸುಮಾರು ಒಂದು ತಿಂಗಳಿಂದ ಕೈಪಂಪಿನಲ್ಲೇ ನೀರನ್ನು ಪಡೆಯುತ್ತಿದ್ದು ಅದರಲ್ಲೂ ಸಹ ನೀರು ಕಡಿಮೆಯಾಗಿದೆ,  ಈ ಬಗ್ಗೆ ಪಂಚಾಯಿತಿಯವರಿಗೆ ತಿಳಿಸಿದ್ದು ಅವರು ಒಂದು  ವರ್ಷದ ಹಿಂದೆಯೇ ಬೋರ್ವೆಲ್ ಕೊರೆದಿದ್ದು ಅದರಲ್ಲಿ ನೀರು ಬಂದಿತ್ತು,  ಆದಕ್ಕೆ ಪಂಚಾಯಿತಿಯಿಂದ ಮೋಟಾರ್ ಪಂಪು ಎಲ್ಲವನ್ನು ಆಳವಡಿಸಿದ್ದರೂ,  ವಿದ್ಯುತ್ಸಂಪರ್ಕ ಕಲ್ಪಿಸದೇ ಇದ್ದು ನೀರಿನ ಸಮಸ್ಯೆ ಉಂಟಾಗಿದೆ ಆದ್ದರಿಂದ ಕೂಡಲೇ ಸಂಬಂಧಪಟ್ಟ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಿ,  ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗೌರಮ್ಮ ಮಾತನಾಡಿ,  ನಮ್ಮ ಜನಪ್ರತಿನಿಧಿಗಳು ನಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ,  ಸಾಮಾನ್ಯಜನರಿಗೆ ಮೂಲಭೂತ ಸವಲತ್ತುಗಳನ್ನು ನೀಡುವಲ್ಲಿ ಪಂಚಾಯಿತಿ ಸದಸ್ಯರು ವಿಫಲರಾಗಿದ್ದಾರೆ,  ಕೇವಲ ಬೋರ್ವೆಲ್ ಕೊರೆದು ಪಂಪು ಮೋಟಾರ್ ಆಳವಡಿಸಿ ತಮ್ಮ ಕೆಲಸವಾಯಿತು ಎಂದು ಕೈಕಟ್ಟಿಕುಳಿತಿದ್ದಾರೆ,  ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಾಲೋನಿಯ ಜಗದೀಶ್ ಮಾತನಾಡಿ,  ನಮ್ಮ ಕಾಲೋನಿಯಲ್ಲಿ ಶುದ್ದನೀರಿನ ಘಟಕವನ್ನು ಪ್ರಾರಂಭಿಸಲು  ಜಿಪಿಎಸ್ ಮಾಡಿ,  ಸುಮಾರು ತಿಂಗಳುಗಳೇ ಕಳೆದರೂ ಯಾವುದೇ ಕ್ರಮ ಕೈ ಗೊಂಡಿಲ್ಲ ತ್ವರಿತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಶುದ್ದನೀರಿನ ಘಟಕವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಲೋನಿಯ ಇಂದ್ರಮ್ಮ, ಮಂಜುಳ, ಉಮೇಶ, ಜಗದೀಶ್, ಶಂಕರಯ್ಯ, ಮಾಜಿ ಸದಸ್ಯರಾದ ವೀರಭದ್ರಯ್ಯ, ಕೆಂಚಪ್ಪ, ಹಾಗೂ ಸದಸ್ಯ ಮಂಜುನಾಥ್ ಹಾಜರಿದ್ದರು.

ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಚುನಾವಣೆ 
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ 3 ಜನ ಗ್ರಾಮ ಪಂಚಾಯಿತಿ ಸದಸ್ಯರು  ನಿಧನ ಹೊಂದಿದ್ದು ಆ ಸ್ಥಾನಗಳಿಗೆ  ಏಪ್ರಿಲ್ 17ರಂದು ಚುನಾವಣೆಯು ನಡೆಯಲಿದೆ.
ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದ್ರೆಹಳ್ಳಿ, ಗ್ರಾಮಪಂಚಾಯಿತಿ ಅನುಸೂಚಿತ ಜಾತಿ ಮಹಿಳೆಗೆ ಮೀಸಲಿದ್ದು 4 ಜನ ಅಭ್ಯಥರ್ಿಗಳು ಅಂತಿಮ ಕಣದಲ್ಲಿ, ಎಸ್.ಹೆಚ್ ಜೈ.ಗೀತಾ, ರುಕ್ಮಿಣಿಬಾಯಿ, ಸಿ.ಶೋಭ, ಹಾಗೂ ಸುನೀತಾ, ಕಣದಲ್ಲಿದ್ದಾರೆ.
 ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಅಂತಿಮ ಕಣದಲ್ಲಿ ಆರ್.ಪಂಕಜ, ಹಾಗೂ ಬಿ.ಎಮ್.ವೀಣಮ್ಮ ಸ್ಪದರ್ಿಸಿದ್ದಾರೆ.
ತೀರ್ಥಪುರ ಗ್ರಾಮ ಪಂಚಾಯಿತಿಯ ದೊಡ್ಡರಾಂಪುರ, ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿದ್ದು ಅಂತಿಮ ಕಣದಲ್ಲಿ ಕರಿಯಮ್ಮ, ಗೌರಮ್ಮ, ನಾಗಮ್ಮ, ಕಣದಲ್ಲಿದ್ದಾರೆ.


ಚಿಕ್ಕನಾಯಕನಹಳ್ಳಿಯಲ್ಲಿ ಇಂದು ದೇವರದಾಸಿಮಯ್ಯ ಜಯಂತಿ

ಚಿಕ್ಕನಾಯಕನಹಳ್ಳಿ,ಏ.10:  ತಾಲ್ಲೂಕು ಆಡಳಿತ, ತಾಲ್ಲೂಕು ದೇವಾಂಗ ಸಂಘ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಇದೇ 12(ಇಂದು) ರಂದು ಆಚರಿಸಲಾಗುತ್ತಿದೆ.
ಪಟ್ಟಣದ ಪುರಸಭಾ ಕಚೇರಿಯ ಮುಂಭಾಗದಿಂದ ದೇವರ ದಾಸಿಮಯ್ಯನವರ ಭಾವಚಿತ್ರ ಮೇರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. 
ನಂತರ ಮಧ್ಯ್ಯಾಹ್ನ 12-30ಕ್ಕೆ ಕನ್ನಡ ಸಂಘದ ವೇಧಿಕೆಯಲ್ಲಿ ಸಮಾರಂಭ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದಾರೆ,  ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ನೆರೆವೆರಿಸಲಿದ್ದು ದೇವರದಾಸಿಮಯ್ಯನವರ ಭಾವಚಿತ್ರವನ್ನು ಪುರಸಭಾ ಉಪಾಧ್ಯ್ಯಕ್ಷೆ ಬಿ.ಇಂದಿರಾ ನೆರೆವೆರಿಸುವರು, ತುಮಕೂರು ಸ.ಪ್ರ.ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶಿವಲಿಂಗಮೂತರ್ಿ ಉಪನ್ಯಾಸ ನೀಡಲಿದ್ದು ಈ ಸಂದರ್ಭದಲ್ಲಿ ಸಾಧಕರಾದ ನೇಕಾರ ಹೊಸಹಳ್ಳಿ ರಂಗನಾಥ್, ಮೀನುಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿದರ್ೇಶಕ ಸಿ.ಎಸ್.ನಾಗರಾಜಯ್ಯ, ಹುಳಿಯಾರಿನ ಅನಂತಕುಮಾರ್, ನೇಕಾರ ಎಸ್.ಸಿದ್ದಪ್ಪ, ಲಕ್ಷ್ಮೀದೇವಯ್ಯ, ಅಕ್ಷರ ದಾಸೋಹದ ನಿದರ್ೇಶಕ ತಿಮ್ಮರಾಜು ಇವರುಗಳನ್ನು ಸನ್ಮಾನಿಸಲಾಗುವುದು.
ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿ
ಚಿಕ್ಕನಾಯಕನಹಳ್ಳಿ11: ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿಯನ್ನು ಇದೇ 14ರಂದು  ಆಚರಿಸಲಾಗುತ್ತಿದೆ.
ಗುರುವಾರ ಬೆಳಗ್ಗೆ 9-30ಕ್ಕೆ ತಾಲ್ಲೂಕು ಕಚೇರಿಯ ಮುಂಭಾಗದಿಂದ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಭಾವಚಿತ್ರ ಮೇರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. 
ನಂತರ ಮದ್ಯಾಹ್ನ 12-00ಕ್ಕೆ ಕನ್ನಡ ಸಂಘದ ವೇಧಿಕೆಯಲ್ಲಿ ಸಮಾರಂಭ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ನೆರೆವೆರಿಸಲಿದ್ದು ಡಾ||ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರವನ್ನು ಜಿ.ಪಂ.ಸದಸ್ಯ ಎಸ್.ಟಿ.ಮಹಲಿಂಗಯ್ಯ, ನೆರೆವೆರಿಸುವರು, ಡಾ|ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಪುರಸಭಾ ಉಪಾದ್ಯಕ್ಷೆ ಬಿ.ಇಂದಿರಾ ನೆರೆವೆರಿಸುವರು, ಮೈಸೂರಿನ ಮಹಾರಾಜ ಕಾಲೇಜಿನ ವಾಣಿಜ್ಯ ಶಾತ್ಸ್ರದ ಮುಖ್ಯಸ್ಥ ಡಾ|| ಆರ್ ತಿಮ್ಮರಾಯಪ್ಪ ಉಪನ್ಯಾಸ ನೀಡಲಿದ್ದು ಈ ಸಂದರ್ಭದಲ್ಲಿ ವಿದ್ಯಾಥರ್ಿನಿಯರಾದ ಎಂ.ಬಿ.ದಿವ್ಯ, ಎಲ್.ಹೇಮಾ, ದಸೂಡಿಯ ಪ್ರಗತಿಪರ ರೈತ ಮಹಿಳೆ ಅರ್ಚನಾ , ಹನುಮಂತಪುರದ ಅಂಗನವಾಡಿ ಕಾರ್ಯಕತರ್ೆ ಎನ್.ಭಾಗ್ಯಮ್ಮ, ಕಲಾವಿದ ಸಿ.ಎಸ್.ಚಂದ್ರಯ್ಯ, ಪತ್ರಿಕಾ ಪ್ರತಿನಿಧಿ ಸಿ.ಹೆಚ್.ಚಿದಾನಂದ್ ಇವರುಗಳನ್ನು ಸನ್ಮಾನಿಸಲಾಗುವುದು.