Tuesday, April 21, 2015


ಚಿ.ನಾ.ಹಳ್ಳಿಯಲ್ಲಿ ಬಸವಜಯಂತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : ಜಾತವೇದ ಮುನಿ ಶಿವಾಚಾರ್ಯಸ್ವಾಮಿ ವೀರಶೈವ ಧರ್ಮವನ್ನು ಸ್ಥಾಪಿಸಿದ ಮೊದಲಿಗರು, ಇವರ ಪ್ರೇರಣೆಯಿಂದ ಬಸವಣ್ಣನವರು ಆಗಿನ ಕಾಲದಲ್ಲಿ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದರು ಎಂದು ಕುಪ್ಪೂರು ಶ್ರೀಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಬಸವೇಶ್ವರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಬಸವಣ್ಣನವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ನಂತರ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದವರು, ಬಸವಣ್ಣನವರು ಜಾತಿ, ಬೇದ ಮರೆತು ಎಲ್ಲರನ್ನೂ ಒಟ್ಟುಗೂಡಿಸಲು ಶ್ರಮಪಟ್ಟವರು, ವಿಶ್ವಮಾನವರಾದ ಬಸವಣ್ಣನವರು ವಚನ ಸಾಹಿತ್ಯ ರಚಿಸಿ ವಿಶ್ವಕ್ಕೆ ಮಾದರಿಯಾದವರು ಎಂದರಲ್ಲದೆ ಕಾರ್ಯಕ್ರಮಗಳಿಗೆ ಎಷ್ಟು ಜನ ಬಂದಿದ್ದಾರೆ ಎಂಬುದು ಮುಖ್ಯವಲ್ಲ ಕಾರ್ಯಕ್ರಮದಿಂದ ಹೋದ ನಾವುಗಳು ಬಸವಣ್ಣನವರ ತತ್ವಗಳಂತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.
 ತಾಲ್ಲೂಕಿನ 26ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುವ ಯೋಜನೆಯಲ್ಲಿ ಕುಪ್ಪೂರು, ದಾಸಿಹಳ್ಳಿ, ತಮ್ಮಡಿಹಳ್ಳಿ, ಹಾಲ್ಕುರಿಕೆ ಕೆರೆಗಳನ್ನು ಕೈ ಬಿಡುವ ಹುನ್ನಾರ ನಡೆಯುತ್ತಿದ್ದು ಶೀಘ್ರವೇ ಇದರ ಬಗ್ಗೆ ಸಭೆಯನ್ನು ಕರೆದು ಚಚರ್ಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಶಾಸಕರು ಸಕರ್ಾರದ ಜೊತೆಯಲ್ಲಿ ಮಾತುಕತೆ ನಡೆಸುವಂತೆ ಸಲಹೆ ನೀಡಿದರು.
ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಧಾಮರ್ಿಕ ಮೌಲ್ಯಗಳನ್ನು ತಿಳಿಸುವ ಕಾರ್ಯಕ್ರಮಗಳು ಅವಶ್ಯ ಎಂದು ಸಲಹೆ ನೀಡಿದರು.
ಇನ್ನೂ ಗ್ರಾಮೀಣ ಭಾಗಗಳಲ್ಲಿ ಬಸವಣ್ಣ (ನಂದಿಯನ್ನು) ಪೂಜಿಸುವ ಸಂಪ್ರದಾಯವಿದೆ ನಾವು ಇನ್ನೂ ದಾರ್ಶನಿಕರ, ದಾಸರ, ವಚನಕಾರರ ಜಯಂತಿಗಳನ್ನು ಆಚರಿಸಿಕೊಳ್ಳುತ್ತಾ ಬಂದಿರುವುದರಿಂದಲೇ ನಮ್ಮ ಧಾಮರ್ಿಕ ಮೌಲ್ಯಗಳಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಬಸವಣ್ಣನವರು ಜಾತಿ ಬೇದಬಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲ ವರ್ಗಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲು ಅನುಭವ ಮಂಟಪ ಸ್ಥಾಪಿಸಿದರು. ಈಗ ರಾಜಕಾರಣಿಗಳು ಜಾತಿಗಳನ್ನು ಸೃಷ್ಠಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಜಾತಿ ನಮ್ಮ ಮನೆಯಲ್ಲಿರಬೇಕೆ ಹೊರತು ಹೊರಗಡೆಯಲ್ಲ ಎಲ್ಲರಿಗೂ ಒಂದೇ ಭಾವನೆ ಬಂದರೆ ಮಾತ್ರ ಸಮಾಜ ಉದ್ದಾರವಾಗುತ್ತದೆ, ಮಠ ಮಂದಿರಗಳು ಸಮಾಜ ತಿದ್ದುವ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿ, ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ, ಅನೇಕ ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿರುವುದು ಸಂತಸ, ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ,  ಬಸವಣ್ಣನವರು ಸ್ತ್ರೀಯರಿಗೆ ಸರಿಸಮಾನಾದ ಗೌರವವನ್ನು ಅನುಭವ ಮಂಟಪದಲ್ಲಿ ಅವಕಾಶ ನೀಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮವನ್ನು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಡಿಎಸ್ಎಸ್ನ ಬೇವಿನಹಳ್ಳಿಚನ್ನಬಸವಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾಧ್ಯಕ್ಷೆ ರೇಣುಕಮ್ಮಸಣ್ಣಮುದ್ದಯ್ಯ, ಸಿ.ಎಲ್.ಜಯದೇವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವಸ್ವಾಮಿ ನಿರೂಪಿಸಿ ಸ್ವಾಗತಿಸಿದರು. ರಾಜ್ಕುಮಾರ್ ವಂದಿಸಿದರು. ತಾಲ್ಲೂಕು ಕಛೇರಿಯಿಂದ ಹೊರಟ ಬಸವಣ್ಣನವರ ಭಾವಚಿತ್ರವಿರುವ ಮೆರವಣಿಗೆಯು ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. 


Saturday, April 18, 2015


ಕನರ್ಾಟಕ ಬಂದ್ಗೆ ಚಿ.ನಾ.ಹಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ


ಚಿಕ್ಕನಾಯಕನಹಳ್ಳಿ,ಏ.18 : ಮೇಕೆದಾಟು ಬಳಿ ಅಣೆಕಟ್ಟೆ ನಿಮರ್ಾಣ ಯೋಜನೆ ವಿರೋಧಿಸಿ ತಮಿಳುನಾಡು ನಡೆಸಿದ ಬಂದ್ಗೆ ಪ್ರತಿಯಾಗಿ ರಾಜ್ಯದಲ್ಲಿ ಶನಿವಾರ ಕರೆ ನೀಡಿದ್ದ ಕನರ್ಾಟಕ ಬಂದ್ಗೆ ಪಟ್ಟಣದಲ್ಲಿ  ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ನಡೆಸಿದರು.
ಶನಿವಾರ ಬೆಳಗ್ಗೆ 6ಗಂಟೆಯಿಂದಲೇ ಎಂದಿನಂತೆ ಬಸ್ಗಳು ಸಂಚರಿಸದಿದ್ದರೂ ವಿರಳವಾಗಿ ವಾಹನಗಳು ಸಂಚರಿಸುತ್ತಿದ್ದವು, ಕನರ್ಾಟಕ ಬಂದ್ ಇರುವುದನ್ನು ಅರಿತಿದ್ದ ಪ್ರಯಾಣಿಕರು ಬಸ್ಗಳು ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಇಲ್ಲದಿದ್ದರಿಂದ ಪ್ರಯಾಣಿಕರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದರಲ್ಲದೆ, ಕಡಿಮೆಯಿರುವ ಬಗ್ಗೆ ಮೊದಲೇ ತಿಳಿದಿದ್ದ ಪ್ರಯಾಣಿಕರು ತಮ್ಮ ಕೆಲಸಗಳಿಗೆ ರಜೆ ಹಾಕಿ ಮನೆಯಲ್ಲಿ ದಿನ ಕಳೆದರು.
ಪಟ್ಟಣದಲ್ಲಿನ ಸಾರ್ವಜನಿಕರಿಗೆ ಆಸ್ಪತ್ರೆ ಚಿಕಿತ್ಸೆಗೆ, ಮೆಡಿಕಲ್ಶಾಪ್, ಆಂಬುಲೆನ್ಸ್ ಸೇವೆಗೆ ಯಾವುದೇ ತೊಂದರೆಯಾಗಲಿಲ್ಲ.
ಬೆಳಗ್ಗೆ 6ಗಂಟೆಗೆ ಬಂದ್ ಆರಂಭವಾದರೂ ಅದರ ಬಿಸಿ ತಟ್ಟಿದ್ದು ಮಾತ್ರ ನಿಧಾನವಾಗಿ, ಕನ್ನಡ ಪರ ಸಂಘಟನೆಗಳ ಮುಖಂಡರು ಪಟ್ಟಣದ ನೆಹರು ಸರ್ಕಲ್ನ ಬಳಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಸಂಚಾರವನ್ನು ಸ್ಥಗಿತಗೊಳಿಸಿ ಇಲ್ಲವಾದರೆ ಮುಂದಿನ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಹನ ಸಂಚಾರಕರಿಗೆ ಹೇಳುತ್ತಿದ್ದರು. 
ಕನ್ನಡಪರ ಸಂಘಟನೆಗಳ ಬೆಂಬಲ : 

Thursday, April 16, 2015


ಏಪ್ರಿಲ್ 21, 22, 23  ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಸಂಗೀತ ಸ್ಪದರ್ೆ ಕಾರ್ಯಕ್ರಮವನ್ನು ಏಪ್ರಿಲ್ 21, 22, 24 ರಂದು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಗಾನವಿ ಲಲಿತಾ ಕಲಾವೃಂದದ ಉಪಾಧ್ಯಕ್ಷ ಸಿ.ಎಸ್.ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಾಗೂ ಶ್ರೀ ಗಾನವಿ ಲಲಿತಾ ಕಲಾ ವೃಂದದ ವತಿಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಶರಣರ ವಚನ, ದಾಸರ ಪದ, ರಂಗಗೀತೆ, ಭಾವಗೀತೆ, ಜಾನಪದ ಗೀತೆ, ಚತ್ರಗೀತೆ ಸ್ಪಧರ್ೆಗಳು ನಡೆಯಲಿವೆ.
21ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6ಕ್ಕೆ ಸನ್ಮಾನ ಸಮಾರಂಭ ಕಾರ್ಯಕ್ರಮ ನೆರವೇರಲಿದ್ದು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
22ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಬಿ.ಲಕ್ಕಪ್ಪ ಅಧ್ಯಕ್ಷತೆ ವಹಿಸಲಿರುವರು.
24ರಂದು ಸಂಜೆ 4ಕ್ಕೆ ಸಂಗೀತ ಸ್ಪಧರ್ೆಗಳ ಬಹುಮಾನ ವಿತರಣೆ ಕಾಯಕ್ರಮ ನಡೆಯಲಿದೆ. ಪುರಸಭಾಧ್ಯಕ್ಷೆ ರೇಣುಕಮ್ಮ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿರುವರು.
ಗೋಷ್ಠಿಯಲ್ಲಿ ಗಾನವಿ ಲಲಿತ ಕಲಾವೃಂದದ ಶಿವರುದ್ರಯ್ಯ, ಮಹಾಲಿಂಗಯ್ಯ ಉಪಸ್ಥಿತರಿದ್ದರು.

Friday, April 10, 2015




ರಾಷ್ಟ್ರಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ ಪ್ರಶಸ್ತಿಗಾಗಿ ಶ್ರದ್ದೆ, ತಾಳ್ಮೆ,, ಆಸಕ್ತಿಯ ಫಲವಿದೆ. : ನಟ ವಿಜಯ್
ಚಿಕ್ಕನಾಯಕನಹಳ್ಳಿ : ರಾಷ್ಟ್ರಮಟ್ಟದಲ್ಲಿ ಉತ್ತಮ ನಟನೆಂಬ ಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ, ಆತ್ಮವಿಶ್ವಾಸ, ತಾಳ್ಮೆ, ಶ್ರದ್ದೆ, ಆಸಕ್ತಿಯ ಫಲ ಈ ಪ್ರಶಸ್ತಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ವಿಜಯ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅವನಲ್ಲ ಅವಳು ಚಿತ್ರ ಮಂಗಳಮುಖಿಯರ ಸಂಬಂಧದ ಚಿತ್ರವಾಗಿದ್ದು ಈ ಚಿತ್ರಕ್ಕಾಗಿ ಮಂಗಳಮುಖಿಯರು ಹೇಗೆ ವತರ್ಿಸುತ್ತಾರೆಂಬ ಬಗ್ಗೆ ಮಂಗಳಮುಖಿಯರಿರುವ ಜಾಗಕ್ಕೆ ಹೋಗಿ ಅವರ ಹಾವ, ಭಾವಗಳನ್ನು ಕಲಿತೆ ಎಂದರಲ್ಲದೆ, ಚಿತ್ರತಂಡದ ಸಂಪೂರ್ಣ ಸಹಕಾರದಿಂದಲೇ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಲು ಸಹಕಾರವಾಯಿತು ಎಂದರು. 
ನಾನು ಅವನಲ್ಲ ಅವಳು ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಚಿತ್ರತಂಡದ ಪರಿಶ್ರಮ ಹೆಚ್ಚಿನದಾಗಿದೆ, ಆತ್ಮಚರಿತ್ರೆಯೊಂದನ್ನು ಸತತ ಆರು ವರ್ಷಗಳ ಕಾಲದಿಂದಲೂ ಸಿದ್ದಪಡಿಸಿಕೊಂಡಿದ್ದ ನಿದೇರ್ಶಕ ಲಿಂಗದೇವರು ಅವರು,  ಯಾರೊಬ್ಬರು ಮಾಡದೆ ಇದ್ದಾಗ ರಂಗಭೂಮಿ ಕಲಾವಿದನಾಗಿದ್ದ ನನ್ನನ್ನು ಆಯ್ಕೆ ಮಾಡಿ ಅವಕಾಶ ನೀಡಿದ ನಿಮರ್ಾಪಕರಾದ ರವಿಗರಣಿ ಹಾಗೂ ನಿದರ್ೇಶಕರಾದ ಬ್ಯಾಲದಕೆರೆ ಲಿಂಗದೇವರು ರವರು ಈ ಚಿತ್ರದಿಂದ ನನ್ನನ್ನು ಇಂದು ಇಡೀ ದೇಶವೇ ಗುರುತಿಸುವಂತೆ ಮಾಡಿದೆ ಎಂದರು. ನಾನು ಅವನಲ್ಲ ಅವಳು ಚಿತ್ರದ ಮಂಗಳಮುಖಿ ಪಾತ್ರವು ಸಾಧಾರಣವಾದ ಚಿತ್ರವಲ್ಲ, ಈ ಪಾತ್ರಕ್ಕಾಗಿ ನಿದರ್ೇಶಕರು ನೀಡಿದ ಸಲಹೆ, ಸೂಚನೆಗಳನ್ನು ಗಮನಿಸಿದ್ದಲ್ಲದೆ ಮಂಗಳಮುಖಿಯರ ಬಗ್ಗೆ ಅರಿತುಕೊಳ್ಳಲು ಮುಂದಾದೆ ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಿನಿಮಾ ಮಾಡುವುದು ಒಂದು ರೀತಿ ಕಷ್ಟವಾದರೆ, ಮಾಡಿದ ಕೆಲಸವನ್ನು ಜನರಿಗೆ ತೋರಿಸುವುದು ಮತ್ತೊಂದು ರೀತಿಯ ಕಷ್ಟ ಎಂದರಲ್ಲದೆ,  ಯು.ಎಫ್.ಓ ರವರು ಟಾಕೀಸ್ಗಳಲ್ಲಿ ಜೋಡಿಸಿರುವ ತಂತ್ರಜ್ಞಾನದಿಂದ ಇಂದು ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದರು.
ನಾನು ಅವನಲ್ಲ ಅವಳು ಚಿತ್ರದ ಮೂಲಕ  ತುಮಕೂರು ಜಿಲ್ಲೆಗೆ ಎರಡು ರಾಷ್ಟ್ರಪ್ರಶಸ್ತಿ ಬಂದಿದೆ, ನಟ ವಿಜಯ್ ತಾಲ್ಲೂಕಿನ ಪಕ್ಕದ ಪಂಚನಹಳ್ಳಿ ಯವರು, ಹಾಗೂ ಚಿತ್ರದ ಮೇಕಪ್ ಮ್ಯಾನ್ ರಾಜು ತಾಲ್ಲೂಕಿನ ಸಮೀಪದ ಹತ್ಯಾಳುವಿನವರು ಎಂಬುದೇ ಜಿಲ್ಲೆಗೆ ಸಂತಸದ ವಿಷಯವಾಗಿದೆ, 2009ರಲ್ಲಿ ನಾನು ಅವನಲ್ಲ ಅವಳು ಚಿತ್ರವನ್ನು ತೆರೆಗೆ ತರಲು ಆಲೋಚಿಸಿದೆನು, ಆತ್ಮಚರಿತ್ರೆಯೊಂದರ ಕಥೆಯಾದ ಈ ಚಿತ್ರ ಮಂಗಳಮುಖಿಯರ ಬದುಕಾಗಿದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕಡೆಗಳಲ್ಲಿ ಮಂಗಳಮುಖಿಯರನ್ನು ಹೇಗೆ ನೋಡುತ್ತಾರೆಂಬದು ಚಿತ್ರದ ಮುಖ್ಯ ವಸ್ತುವಾಗಿದೆ  ಎಂದರಲ್ಲದೆ ಈ ಚಿತ್ರವನ್ನು ಶೀಘ್ರದಲ್ಲೇ ಚಿ.ನಾ.ಹಳ್ಳಿಯಲ್ಲಿ ಬಿಡುಗಡೆ ಮಾಡಿಸಲಾಗುವುದು ಎಂದರು.
ಕೆಲವು ನಿದರ್ೇಶಕರು ಸ್ಕ್ರಿಪ್ಟ್ ಹಾಗೂ ತಯಾರಿಯೇ ಇಲ್ಲದೇ ಸಿನಿಮಾ ರಚನೆ ಮಾಡುತ್ತಾರೆ ನಂತರ ಸಿನಿಮಾ ಬಿಡುಗಡೆಯಾದಾಗ ಸಿನಿಮಾನೇ  ಓಡುತ್ತಿಲ್ಲ ಎಂದು ಹೇಳುತ್ತಾರೆ ಎಂದು ವಿಷಾಧಿಸಿದರು. 
ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆಲಸಮಾಡುವುದು ಅವಮಾನವಲ್ಲ, ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಸಿದ್ದಿ ದೊರೆಯುತ್ತದೆ ಅದಕ್ಕೆ ನಮ್ಮ ಮುಂದಿರುವ ಇವರೇ ಸಾಕ್ಷಿ ಎಂದರಲ್ಲದೆ,   ಕಾಲೇಜಿನಲ್ಲಿ ಸಿನಿಮಾ ಜಗತ್ತನ್ನು ಪರಿಚಯಿಸುವ ಅಗತ್ಯವಿರಲಿಲ್ಲ ಆದರೆ ತಮ್ಮ ಪ್ರತಿಭೆಯ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತರನ್ನು ನಿಮಗೆ ಪರಿಚಯಿಸುವ ಉದ್ದೇಶದಿಂದ ಅವರ ಸಾಧನೆಯನ್ನು ನಿಮ್ಮ ಮುಂದೆ ತರಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು ಸಾಧನೆಗೆ ಗುರಿ ಮುಖ್ಯವೇ ಹೊರತು ಅಹಂಕಾರವಲ್ಲ ಎಂದ ಅವರು ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಿ, ಇಂಜನಿಯರಿಂಗ್, ಕ್ಷೇತ್ರಗಳಲ್ಲಿನ ಅಭ್ಯಥರ್ಿಗಳಿಗೆ ಈಗಾಗಲೇ ಕೆಲಸವೇ ಇಲ್ಲದಂತಾಗುತ್ತಿದೆ, ಮುಂದಿನ ದಿನಗಳಲ್ಲಿ ಬಿ.ಎ ವಿದ್ಯಾಥರ್ಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಲಿದೆ ಆದ್ದರಿಂದ ವಿದ್ಯಾಥರ್ಿಗಳು ಬಿ.ಎ ಶಿಕ್ಷಣದ ಬಗ್ಗೆ ಅಸಡ್ಡೆ ತೋರಬೇಡಿ ಎಂದರು.
ಕಾರ್ಯಕ್ರಮಲ್ಲಿ ರಾಷ್ಟ್ರಪಶಸ್ತಿ ಪುರಸ್ಕೃತರಾದ ವಿಜಯ್, ರಾಜು ಹತ್ಯಾಳುರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್,  ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವೋದಯ ಕಾಲೇಜಿನ ಯುವಕ ಮಂಡಳಿ ವತಿಯಿಂದ ಭಾವಗೀತೆಗಳ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಕಾಲೇಜಿಗೆ ಆಗಮಿಸಿದ್ದ ನಾನು ಅವನಲ್ಲ ಅವಳು ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಾಯಕ ವಿಜಯ್, ನಿದರ್ೇಶಕ ಬಿ.ಎಸ್.ಲಿಂಗದೇವರು, ಮೇಕಪ್ಮ್ಯಾನ್ ರಾಜುಹತ್ಯಾಳ್ರನ್ನು ಚಿ.ನಾ.ಹಳ್ಳಿಯ ವಿವಿಧ ಸಂಘಟನೆಯವರು ಅಭಿನಂದಿಸಿದರು. ಎಂ.ಎಸ್.ರವಿಕುಮಾರ್, ಸುಪ್ರಿಂ.ಸುಬ್ರಹ್ಮಣ್ಯ, ಸಿದ್ದು.ಜಿ.ಕೆರೆ, ಸಿ.ಹೆಚ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಗಣತಿಗೆ ಸಾರ್ವಜನಿಕರು ಸಹಕರಿಸಿ
ಚಿಕ್ಕನಾಯಕನಹಳ್ಳಿ,ಏ.10 :- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ 23 ವಾಡರ್್ಗಳಲ್ಲಿ ರಾಜ್ಯ ಸಕರ್ಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿಗಣತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ ಪ್ರಾರಂಭವಾಗಿ ಏಪ್ರಿಲ್ 30 ಕ್ಕೆ ಮುಕ್ತಾಯವಾಗಲಿದೆ. ಜಾತಿ ಗಣತಿದಾರರು ಮನೆ ಮನೆಗಳಿಗೆ ಬೇಟಿ ನೀಡಿದಾಗ ಅಧಾರ್ ಕಾಡರ್್, ಪಡಿತರಚೀಟಿ ಮತ್ತು ಮತದಾರರ ಗುರುತಿನ ಚೀಟಿ ನೀಡಿ ಗಣತಿದಾರರು ಕೇಳುವ ಮಾಹಿತಿಯನ್ನು ನೀಡಿ ಅವರೊಂದಿಗೆ ಸಹಕರಿಸಿ ಗಣತಿ ಕಾರ್ಯ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಪುರಸಭಾ ಅಧ್ಯಕ್ಷೆ  ಕೆ. ರೇಣುಕಮ್ಮ, ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ ಶೆಟ್ಟಿ ಮನವಿ ಮಾಡಿದ್ದಾರೆ. 
   ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಮುಖ್ಯಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸಂಪಕರ್ಿಸಲು ಕೋರಿದೆ. 

ಶಿಕ್ಷಕರ ಅಭಿವೃದ್ದಿಗೆ ಸಂಘ ಗಮನ ಹರಿಸುವುದು.

ಚಿಕ್ಕನಾಯಕನಹಳ್ಳಿ,ಏ.10 :- ತಾಲ್ಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್ ತಿಂಗಳಲ್ಲಿ ಗುರುಸ್ವಂದನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಪ್ರಾಥಾಮಿಕ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಎನ್. ಪ್ರಕಾಶ್ ತಿಳಿಸಿದರು. 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪ್ರಾಥಮಿಕ ಪಾಠಶಾಲಾ ಶಿಕ್ಷಕರಿಗೆ ಸಂಘದವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿ ಹೋಬಳಿಗಳಲ್ಲಿ ಶಿಕ್ಷಕರಿಗೆ ಪೂಸ್ಕೊ ಕಾಯ್ದೆ ಕುರಿತು ವಿಚಾರ ಸಂಕೀರ್ಣ 720 ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ, ಸ್ವಯಂ ಚಾಲಿತ ವೇತನ ಬಡ್ತಿ, ಕಾಲಮಿತಿ ವೇತನ ಬಡ್ತಿ ಸಕಾಲದಲ್ಲಿ ಮಾಡಿಸಲಾಗಿದೆ. ಹಲವು ವರ್ಷಗಳಿಂದ ಶಿಕ್ಷಕರಿಗೆ ಬಾಕಿ ಇದ್ದ ಭತ್ಯೆ ಬಿಲ್ಲು ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪ್ರತಿ ತಿಂಗಳು 5 ನೇ ತಾರೀಖಿನ ಒಳಗಡೆ ವೇತನ, 14-15 ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ನಲ್ಲಿ ನ್ಯಾಯ ಸಮ್ಮತವಾಗಿ ನಡೆಸಿಕೊಡುವ ಮೂಲಕ ಶಿಕ್ಷಕರ ಅಭಿವೃದ್ಧಿಗೆ ಸಂಘ ಗಮನ ಹರಿಸಿದೆ. ಎಂದು ತಿಳಿಸಿದರು. 
   ಪತ್ರಿಕಾ  ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಜೆ.ವೆಂಕಟೇಶ್ ಪ್ರದಾನ ಕಾರ್ಯದಶರ್ಿ ಹೆಚ್.ಸಿ.ಲೋಕೇಶ್, ಉಪಾಧ್ಯಕ್ಷ ಎಂ.ಎಸ್. ಈಶ್ವರಯ್ಯ, ಎ.ವಿನೋಧ, ಎಂ.ಈಶ್ವರಯ್ಯ, ಮಹದೇವಮ್ಮ ಚಂದ್ರಯ್ಯ, ಸಿ.ವೀಣಾ, ಮುಂತಾದವರು ಉಪಸ್ಥಿತರಿದ್ದರು. 


5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ 
ಚಿಕ್ಕನಾಯಕನಹಳ್ಳಿ,ಏ.10 : 5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗಾಗಿ ಇನ್ಸ್ಫೈರ್ ಕೆರಿಯರ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಯೋಜಕ ಜಾಕಿರ್ ಹುಸೇನ್ ತಿಳಿಸಿದ್ದಾರೆ.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಬೇಸಿಗೆ ಶಿಬಿರ ನಡೆಯಲಿದ್ದು ಬೇಸಿಗೆ ಶಿಬಿರದಲ್ಲಿ ನೃತ್ಯ, ಕರಾಟೆ, ಚಿತ್ರಕಲೆ, ಕರಕುಶಲ, ಮಣ್ಣಿನ ಶಿಲ್ಪಕಲೆ ಹಾಗೂ ಬುದ್ದಿಶಕ್ತಿಗೆ ಸಂಬಂಧಪಟ್ಟ ಆಟಗಳು ಹಾಗೂ ಇತರ ಸಾಮಾನ್ಯ ಜ್ಞಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೃತ್ಯ ನಿದರ್ೇಶಕ .ಆರ್.ವಿಶ್ವನಾಥ್ ತಿಳಿಸಿದ್ದಾರೆ. ಬೇಸಿಗೆ ಶಿಬಿರದ ಪ್ರವೇಶಕ್ಕೆ ಏಪ್ರಿಲ್ 15ರೊಳಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ.ನಂ. 9620692112, 85489910040 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.





Monday, April 6, 2015



ರಾಜ್ಯದಲ್ಲಿ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿವಗೆ : ರಮೇಶ್ಬಾಬು
ಚಿಕ್ಕನಾಯಕನಹಳ್ಳಿ,: ರಾಜ್ಯದಲ್ಲಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘ, ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ವಕೀಲ ರಮೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಉಪಾಧ್ಯಾಯರ ಸಹಕಾರ ಸಂಘದ ನೂತನ ಕಟ್ಟಡ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ಪ್ರಾರಂಭವಾಗಿರುವ ಸಹಕಾರ ಸಂಘಗಳು ನಿತ್ಯ ಠೇವಣಿ ಸಂಗ್ರಹ, ನಿಶ್ಚಿತ ಠೇವಣಿ ಸಂಗ್ರಹಿಸಲು ಬೈಲಾ ತಿದ್ದುಪಡಿ ಮಾಡಿಕೊಂಡು ಹಣ ಸಂಗ್ರಹ ಮಾಡಿ ಶಿಕ್ಷಕರಿಗೆ ನಿವೇಶನ ಕಟ್ಟಡ ನಿಮರ್ಾಣಕ್ಕೆ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಈ ಹಣವನ್ನು ಉಪಯೋಗಿಸಿಕೊಳ್ಳಲು ಸಲಹೆ ನೀಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 10 ಸಾವಿರ ರೂಪಾಯಿ ಮೇಲ್ಪಟ್ಟು ಬಡ್ಡಿ ಬಂದರೆ ಸಹಜವಾಗಿ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಇರುವುದಿಲ್ಲ ಆದ್ದರಿಂದ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿಗೆ ಇಡಲು ಉತ್ತೇಜನ ನೀಡಿ ಇದರಿಂದ ಶಿಕ್ಷಕರಿಗೂ ಅನುಕೂಲವಾಗಲಿದೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಲ್ಲಾ ರಾಜಕೀಯ ರಂಗಗಳಲ್ಲೂ ಇದ್ದಾರೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಹಕಾರಿ ಸಂಘಗಳ ಹೆಚ್ಚುವರಿ ಕೊಠಡಿ ನಿಮರ್ಿಸಲು 2ಲಕ್ಷ ರೂಪಾಯಿ ನೀಡುವುದಾಗಿ ಮತ್ತು ಸಕರ್ಾರಿ ನೌಕರರ ಸಂಘದ ಕಟ್ಟಡದ ಗ್ರಂಥಾಲಯಕ್ಕೆ 2ಲಕ್ಷದ 70ಸಾವಿರ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ ಅವರು ಅಕ್ಷರ ದಾಸೋಹ ಶಿಕ್ಷಣ ಇಲಾಖೆಗೆ ಬರುವ ಅನುದಾನದ ಹಣವನ್ನು ಶಿಕ್ಷಕರ ಸಹಕಾರ ಸಂಘದಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ ಅವರು ಶಿಕ್ಷಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಿಕ್ಷಕರು ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನೆಡೆಸಿಕೊಂಡು ಹೋದರೆ ತಾವು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾಥರ್ಿಗಳಿಗೆ ಬೆಳ್ಳಿ ಪದಕ ನೀಡುತ್ತಿದ್ದು ಇನ್ನು ಹೆಚ್ಚಿನ ವಿದ್ಯಾಥರ್ಿಗಳಿಗೆ ಪದಕ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಸಾ.ಚಿ.ನಾಗೇಶ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಪುರಸಭಾಧ್ಯಕ್ಷೆ ರೇಣುಕಮ್ಮ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯಬಿ.ಇ.ಓ ಕೃಷ್ಣಮೂತರ್ಿ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಹೆಚ್.ಎಂ.ಸುರೇಶ್, ಸಿ.ಜಿ.ಶಂಕರ್, ರಾಜಯ್ಯ, ಸಿ.ಎಂ.ದಿನಕರ್, ಶಿವಕುಮಾರ್, ಚಿ.ನಾ.ಪುರುಷೋತ್ತಮ್ ಮತ್ತಿತರರರು ಉಪಸ್ಥಿತರಿದ್ದರು.


ಜಾತಿಗಣತಿಯಲ್ಲಿ ಸವಿತಾ ಮಾಜದವರು ಸವಿತಾ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ಜಾತಿಗಣತಿಯ ಸಂದರ್ಭದಲ್ಲಿ ಪ್ರತಿ ಸವಿತಾ ಸಮಾಜದ ಬಂಧುಗಳು ತಮ್ಮ ಜಾತಿಯ ಕಾಲಂನಲ್ಲಿ ಸವಿತಾ ಎಂದು ದಾಖಲಿಸಬೇಕೆಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ(ಸುಪ್ರಿಂ) ಕೋರಿದ್ದಾರೆ.
ಉಪಜಾತಿಯ ಕಾಲಂನಲ್ಲಿ ಭಜಂತ್ರಿ ಅಥವಾ ನಾಯಿಂದ ಎಂದು ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.


ಜಾತಿಗಣತಿಯಲ್ಲಿ ಮಾದಿಗ ಜನಾಂಗದವರು ಮಾದಿಗ ಹಾಗೂ ಹೊಲೆಯ  ಜನಾಂಗದವರು ಛಲವಾದಿ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ರಾಜ್ಯ ಸಕರ್ಾರ ಏಪ್ರಿಲ್ 11ರಿಂದ ಆರಂಭಿಸಲಿರುವ ಜಾತಿಗಣತಿಯ ಸಂದರ್ಭದಲ್ಲಿ ಗಣತಿದಾರರು ತಮ್ಮ ಮನೆಗೆ ಬಂದಾಗ ಪರಿಶಿಷ್ಠ ಜಾತಿ ಕಾಲಂನಲ್ಲಿ ಮಾದಿಗ ಜನಾಂಗದವರು ಮಾದಿಗ ಅಂತಲೂ ಹಾಗೂ ಹೊಲೆಯ ಸಮುದಾಯದವರು ಛಲವಾದಿ ಎಂತಲೂ ನಮೂದಿಸುವಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಲಿಂಗದೇವರು ಮಾತನಾಡಿ,  ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ವಗರ್ೀಕರಣಕ್ಕೆ ಇಂದಿನ ಪರಿಶಿಷ್ಠ ಜಾತಿಯ ಉಪಜಾತಿಯ ಜನಸಂಖ್ಯಾ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಅನಿವಾರ್ಯವಾಗಿದ್ದು ಇದೇ ತಿಂಗಳ ಏಪ್ರಿಲ್ 11ರಿಂದ ಆರಂಭವಾಗುತ್ತಿರುವ ಸಾಮಾಜಿಕ ಜನಗಣತಿಯ ಸಮೀಕ್ಷೆಗಾಗಿ ದಸಂಸ ಮುಖಂಡರುಗಳು ತಾಲ್ಲೂಕಿನಾದ್ಯಂತ ಮಾದಿನ ಜನಾಂಗದವರ ಮನೆಮನೆಗೆ ತೆರಳಿ ಗಣತಿಯ ಬಗ್ಗೆ ಅರಿವು ಮೂಡಿಸುತ್ತೇವೆ, ತಾಲ್ಲೂಕು ಕಛೇರಿಗಳಲ್ಲಿ ಸಟರ್ಿಫಿಕೇಟ್ಗಳಿಗಾಗಿ ಆದಿಕನರ್ಾಟಕ ಎಂದು ನಮೂದಿಸಿರುವ ಜನಾಂಗದವರು ಗಣತಿ ಸಂದರ್ಭದಲ್ಲಿ ಮಾದಿಗ ಎಂದು ನಮೂದಿಸಿ, ಇದರಿಂದ ಸವಲತ್ತುಗಳು ದೊರಕುವುದಿಲ್ಲವೆಂಬ ಭಯ ಬೇಡ ಎಂದ ಅವರು ಮಾದಿಗ ಜನಾಂಗದವರು ಗಣತಿ ಅಜರ್ಿಯಲ್ಲಿ ಕಾಲಂ ನಂ 6ರಲ್ಲಿನ ಬಿ061ರಲ್ಲಿ ಮಾದಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಛಲವಾದಿ ಜನಾಂಗದ ಮುಖಂಡ ದೇವರಾಜು ಮಾತನಾಡಿ, ಆದಿದ್ರಾವಿಡ ಜನಾಂಗದಲ್ಲಿ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಜಾತಿಗಣತಿ ಸಹಕಾರಿಯಾಗಿದ್ದು ಜನಾಂಗದವರು ಗಣತಿ ಸಂದರ್ಭದಲ್ಲಿ ಹೊಲೆಯ ಸಮುದಾಯದವರು ಛಲವಾದಿ ಎಂದು ನಮೂದಿಸಲು ಮನವಿ ಮಾಡಿದ ಅವರು ಗಣತಿಯ ಅಜರ್ಿಯ ಕಾಲಂ ನಂ 6ರಲ್ಲಿ ಬಿ027ರಲ್ಲಿ ಛಲವಾದಿ ಎಂದು ನಮೂದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಗೋವಿಂದರಾಜು, ಸತೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.


 ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ, : ಗಣಿಗಾರಿಕಾ ಪ್ರದೇಶದಲ್ಲಿ ನಡೆದ ಅಕ್ರಮ ಅದಿರು ಹರಾಜಿನಿಂದ ಸಂಗ್ರಹವಾದ 3ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಸಕರ್ಾರ ಗಣಿ ಪರಿಸರ ಪುನರ್ ಸ್ಥಾಪನಾ ನಿಗಮ ಸ್ಥಾಪಿಸಲು ಮುಂದಾಗಿದ್ದು ಇದರಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ನಂಜುಂಡಯ್ಯ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ಪ್ರದೇಶಗಳ ಅಕ್ರಮ ಅದಿರಿನಿಂದ ಸಂಗ್ರಹವಾದ ಹಣವನ್ನು ಸವರ್ೋಚ್ಛ ನ್ಯಾಯಾಲಯದ ಆದೇಶದಂತೆ ಗಣಿಭಾದಿತ ಪ್ರದೇಶಗಳಿಗೆ ವೆಚ್ಚ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ಪೋಸರ್್ ಸಮಿತಿ ಸಭೆಯಲ್ಲಿ ಚಚರ್ಿಸಲು ಸ್ಥಳೀಯ ಜನರನ್ನು ಆಯ್ಕೆ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ಅವಕಾಶ ನೀಡಬೇಕು ಎಂದರಲ್ಲದೆ, ಗಣಿಭಾದಿತ ಪ್ರದೇಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರೂ ಇದುವರೆವಿಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ, ಈಗಾಗಲೇ ದಂಡದ ರೂಪದಲ್ಲಿ ವಸೂಲಾಗಿರುವ ಹಣ ಸಕರ್ಾರದ ಬೊಕ್ಕಸದಲ್ಲಿದೆ ಈ ಹಣವನ್ನು ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಆರಂಭಿಸದಿದ್ದರೆ ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಕೆಯಾಗಲಿದೆ ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಣಿಭಾದಿತ ಪ್ರದೇಶಗಳ ಪುನರ್ವಸತಿ ಮತ್ತು ಪುನಶ್ಚೇತನ ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲವು ಗಣಿ ಮಾಲೀಕರು ಗಣಿಭಾಗದಲ್ಲಿ ಅಂಗನವಾಡಿ ಕೇಂದ್ರ, ಶೌಚಾಲಯ ಮತ್ತು ಇತರೆ ಕೆಲವು ಅಭಿವೃದ್ದಿ ಮಾಡಿದ್ದೇವೆಂದು ತೋರ್ಪಡಿಸುತ್ತಿದ್ದು ಈ ಕಾಮಗಾರಿಗಳನ್ನು ಸ್ಥಳೀಯ ಜನರಿಗೆ ನೀಡದೆ ಪರಸ್ಥಳದ ಹಾಗೂ ರಾಜಕಾರಣಿಗಳ ಬೆಂಬಲವಿರುವವರಿಗೆ ನೀಡುತ್ತಿದ್ದು ಇಂಥಾ ದ್ವಂದ್ವ ನೀತಿ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸವರ್ೋಚ್ಚ ನ್ಯಾಯಾಲಯದ ಆದೇಶದಂತೆ ಸ್ಥಳೀಯರಿಗೆ ಮೊದಲ ಆಧ್ಯತೆ ನೀಡಬೇಕು ಇಲ್ಲದೇ ಹೋದರೆ ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆ ಗ್ರಾ.ಪಂ.ಸದಸ್ಯರಾದ ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ ಉಪಸ್ಥಿತರಿದ್ದರು.

ಕಾಡು ಹಂದಿಗೆ ಡಿಕ್ಕಿ ಶಿಕ್ಷಕ ಸಾವು
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿ ಯಿಂದ  ಹುಳಿಯಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರು ಕಾಡುಹಂದಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಯಳನಡು ಸಕರ್ಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಯ್ಯ(57) ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರಿಗೆ ತೆರಳುವಾಗ ಆಲದಕಟ್ಟೆ ಸಮೀಪದಲ್ಲಿ ಶನಿವಾರ ರಾತ್ರಿ 7.30ರ ಸುಮಾರಿನಲ್ಲಿ ಅಪಘಾತದ ಸಂಭವಿಸಿದ್ದು,  ತಕ್ಷಣ ಚಿಕ್ಕನಾಯಕನಹಳ್ಳಿ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು,  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಚಂದ್ರಯ್ಯನವರ ಮಗ ದೀಕ್ಷಿತ್(22) ಎಂಬುವವರಿಗೆ ಗಾಯವಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ.. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.


ಕಪ್ಪುಹಣ ವಾಪಸ್ ತರದ ಬಿಜೆಪಿ ಸಕರ್ಾರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ, : ಬಿಜೆಪಿ ಸಕರ್ಾರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 100 ದಿನದೊಳಗೆ ವಿದೇಶದಲ್ಲಿರುವ ಕಪ್ಪುಹಣವನ್ನು  ವಾಪಾಸ್ ತಂದು ಭಾರತೀಯ ಪ್ರತಿ ಪ್ರಜೆಗೆ 15ಲಕ್ಷ ರೂಪಾಯಿಗಳನ್ನು ಹಂಚುವುದಾಗಿ ಹೇಳಿದ್ದರು ಆದರೆ ಕಳೆದ ಹತ್ತು ತಿಂಗಳಿಂದಲೂ ಬಿಜೆಪಿ ಸಕರ್ಾರ ಅಧಿಕಾರದಲ್ಲಿದ್ದರೂ ಕಪ್ಪುಹಣದ ಬಗ್ಗೆ ಯಾವುದೇ ಚಕಾರವನ್ನು ಎತ್ತುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟಿಸಿದ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಹಣದ ಬಗ್ಗೆ ಜನತೆಯ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರಮೋದಿರವರು ಕೂಡಲೇ ಉತ್ತರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಶಿವಕುಮಾರ್ರವರ ಮೂಲಕ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಚಿನಾಹಳ್ಳಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಾತನಾಡಿ,   ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರಮೋದಿಯವರು ಹಾಗೂ ಅಮಿತ್ಷಾರವರು ಕಪ್ಪುಹಣವನ್ನು ಸಕರ್ಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ತರುತ್ತೇವೆಂದು ಭರವಸೆ ನೀಡಿದ್ದರೂ ಕಪ್ಪುಹಣದ ಬಗ್ಗೆ ಯಾವ ಚಚರ್ೆಯೂ ನಡೆಯುತ್ತಿಲ್ಲ ಆದ್ದರಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರರವರ ಸೂಚನೆ ಮೇರೆಗೆ ಕಪ್ಪುಹಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 15ಲಕ್ಷ ನಮೂದಿಸಿರುವ ಚೆಕ್ ಮಾದರಿಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ್ದ ಸುಳ್ಳು ಆಶ್ವಾಸನೆಯನ್ನು ಜನತೆಗೆ ಮನದಟ್ಟು ಮಾಡಿ ಕೇಂದ್ರ ಸಕರ್ಾರ ಪೊಳ್ಳು ಭರವಸೆಗಳನ್ನು ದೇಶದ ಜನರಿಗೆ ನೀಡುತ್ತಿದೆ ಎಂದು ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಕಪ್ಪುಹಣವನ್ನು ಭಾರತಕ್ಕೆ ತರಲು ಯಾವುದೇ ಒಂದು ನಿಧರ್ಿಷ್ಠವಾದ ಪ್ರಯತ್ನವನ್ನು ಮಾಡಿರದ ಬಿಜೆಪಿ ಸಕರ್ಾರ ಚುನಾವಣಾ ಸಮಯದ ರಾಜಕೀಯ ತಂತ್ರಗಾರಿಕೆಗಾಗಿ ಬಿಜೆಪಿ ಪಕ್ಷ ಮತದಾರರಿಗೆ ಸುಳ್ಳಿನ ಆಶ್ವಾಸನೆ ನೀಡಿದ್ದಾರೆ, ಯುಪಿಎ ಸಕರ್ಾರವಿದ್ದಾಗ ಮೇ. 2012ರಲ್ಲಿ ಶ್ವೇತ ಪತ್ರವನ್ನು ಹೊರಡಿಸಿ ಕಪ್ಪು ಹಣವನ್ನು ತರುವಲ್ಲಿ ಸಕರ್ಾರದ ಪ್ರಯತ್ನಗಳು ಹಾಗೂ ಕಪ್ಪುಹಣದ ಬಗ್ಗೆ ಅಂಕಿ-ಅಂಶಗಳನ್ನು ಮತ್ತು ಸೂಕ್ಷ್ಮವಿಚಾರಗಳನ್ನು ತಿಳಿಸಲಾಗಿತ್ತು, ಯುಪಿಎ ಸಕರ್ಾರದ ಕಪ್ಪು ಹಣದ ಬಗೆಗಿನ ವರದಿಯ ನಂತರವೂ ಕಪ್ಪುಹಣದ ವಿಚಾರವು ತುಂಬ ಸಂಕೀರ್ಣವಾದುದೆಂದು ತಿಳಿದಿದ್ದರೂ ಬಿಜೆಪಿಯು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ ಆದ್ದರಿಂದ ಜನತೆಗೆ ಆಶ್ವಾಸನೆ ವಂಚನೆಯ ಬಗ್ಗೆ ಬಹಿರಂಗ ಪಡಿಸಬೇಕಾಗಿದೆ ಎಂದು ಕಾರ್ಯಕರ್ತತರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯತರುಗಳಾದ ಶಶಿಧರ್, ಕೆ.ಜಿ.ಕೃಷ್ಣೆಗೌಡ, ಜ್ಞಾನೇಷ್, ಅಮೀರ್ಪಾಷ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.


ಏಪ್ರಿಲ್ 10ರಿಂದ 12ರವರೆಗೆ ಹೆಸರಹಳ್ಳಿ-ಗೌಡನಹಳ್ಳಿ ಜಾತ್ರಾಮಹೋತ್ಸವ

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹೆಸರಹಳ್ಳಿ-ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ 10 ರಿಂದ 12ರವರೆಗೆ ನಡೆಯಲಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಹೆಸರಹಳ್ಳಿ ಮತ್ತು ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಉತ್ಸವಾದಿಗಳು ನೆರವೇರಲಿದೆ.
10ರಂದು ಗೌಡನಹಳ್ಳಿ ರಂಗನಾಥಸ್ವಾಮಿ ಮದನಿಂಗ ಮತ್ತು ಹೆಸರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವರು ಮದನಗಿತ್ತಿಯ ಹೊಳೆಸೇವೆ, ಮತ್ತು ಪಾನಕ ಫಲಹಾರ ಸೇವೆ, ಆರತಿಬಾನ ಮತ್ತು ಧ್ವಜಾರೋಹಣ ನೆರವೇರಲಿದೆ.
11ರಂದು ಬೆಳಗ್ಗೆ 7ಕ್ಕೆ ಗೌಡನಹಳ್ಳಿಯಲ್ಲಿ ದೂಪದ ಸೇವೆ, ಮಧ್ಯಾಹ್ನ 3ಕ್ಕೆ ಹೆಸರಹಳ್ಳಿಯಲ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಮುಹೂರ್ತ, ಬಂಡಿಬಾನ, ಕಳಸೋತ್ಸವ, ಕಳಸಬಾನ ನೆರವೇರಲಿದೆ.
12ರಂದು ಬೆಳಗ್ಗೆ 7ಕ್ಕೆ ಚಿಕ್ಕಮ್ಮನಹಳ್ಳಿಯಲ್ಲಿ ಗಂಗಾಸ್ನಾನ ಮತ್ತು ಪಾನಕ ಫಲಹಾರ ಸೇವಾರ್ಥ, ಲಕ್ಷ್ಮೀರಂಗನಾಥಸ್ವಾಮಿಗೆ ತುಂಬೆ ಹೂವಿನ ಧಾರೆ, ಬನ್ನಿಮರದ ಪವಾಡ ಹಾಗೂ ಹೆಸರಹಳ್ಳಿಯಲ್ಲಿ ಬನ್ನಿ ಮರ ಹತ್ತಿಸುವ ಪವಾಡ ನಡೆಯಲಿದೆ. ಹೆಸರಹಳ್ಳಿ ಗ್ರಾಮಸ್ಥರಿಂದ ರಾತ್ರಿ 8.30ಕ್ಕೆ ಹೆಸರಹಳ್ಳಿಯಲ್ಲಿ ಮಹಾಮಂಗಳಾರತಿ, ಓಕಳಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಾಡಜಾಗೃತಿ ಜಿಲ್ಲಾಧ್ಯಕ್ಷ ನಿಂಗರಾಜು ತಿಳಿಸಿದ್ದಾರೆ.

ಬೈಕ್ಗೆ ನಾಯಿ ಡಿಕ್ಕಿ ಯುವಕ ಸಾವು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹಂದನಕೆರೆ ರಾಮಘಟ್ಟದ ಕೆರೆಕೋಡಿ ಬಳಿ ಆರ್.ಸಿ.ಮರುಳೇಗೌಡ(20) ಎಂಬುವವರು ಭಾನುವಾರ ರಾತ್ರಿ ತಮ್ಮ ಮನೆಯ ವಸ್ತುಗಳನ್ನು ತರಲು ರಾಮಘಟ್ಟದಿಂದ ಹಂದನಕೆರೆಗೆ ತೆರಳುವಾಗ ಕೆರೆಕೋಡಿ ಬಳಿ ಆಕಸ್ಮಿಕ ನಾಯಿ ಅಡ್ಡ ಬಂದಾಗ ಬ್ರೇಕ್ ಹೊಡೆದ ಪರಿಣಾಮ ಡಾಂಬರ್ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.





Wednesday, April 1, 2015


ದಬ್ಬೆಘಟ್ಟ ಹಾಗೂ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ       ವಿಜೃಂಭಣೆಯಾಗಿ ನೆರವೇರಿದ  ಜಾತ್ರಾಮಹೋತ್ಸವ,       ಅಗ್ನಿಕುಂಡ ಉತ್ಸವ.           
ಚಿಕ್ಕನಾಯಕನಹಳ್ಳಿ : ಪಟ್ಟಣದ ವಾಡರ್್4ರ  ದಬ್ಬೆಘಟ್ಟ ಗ್ರಾಮದ ಮರುಳಸಿದ್ದಸ್ವಾಮಿ ದೇವಾಲಯ ಹಾಗೂ ಪಟ್ಟಣದ ಹೊರವಲಯದ ನಿವರ್ಾಣಸ್ವಾಮಿ ಗದ್ದಿಗೆ ಬಳಿ ಜಾತ್ರಾಮಹೋತ್ಸವದ ಅಂಗವಾಗಿ ದೇವರ ಉತ್ಸವ  ಹಾಗೂ ಅಗ್ನಿಕುಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಪಟ್ಟಣದ ದಬ್ಬೆಘಟ್ಟದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾಮಹೋತ್ಸವ ನಡೆಯಿತು. ಸಾವಿರಾರು ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಮರುಳಸಿದ್ದಸ್ವಾಮಿಗೆ ಹಣ್ಣು, ಕಾಯಿಯನ್ನು ತಂದು ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು ಹಾಗೂ ಪಟ್ಟಣದ ದಿಬ್ಬದಹಳ್ಳಿ, ಬಾವನಹಳ್ಳಿ ಸಮೀಪದ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿಯೂ ಸಹ ಪ್ರತಿ ವರ್ಷದಂತೆ ದೇವರ ಪೂಜೆ ಹಾಗೂ ಅಗ್ನಿಕುಂಡ ಮಹೋತ್ಸವ ನೆರವೇರಿತು.
ನಂತರ ದೇವಾಲಯದ ಬಳಿ ಹಾಕಿದ್ದ ಅಗ್ನಿಕುಂಡಕ್ಕೆ ಉತ್ಸವ ಮೂತರ್ಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾದು ಹೊರಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಅಗ್ನಿಕೆಂಡದ ಮೇಲೆ ನಡೆದಾಡುವ ದೃಶ್ಯ ಭಕ್ತಾಧಿಗಳಲ್ಲಿ ಮೈನವರೀಳಿಸುವಂತಿತ್ತು, ಬೆಂಗಳೂರು , ತುಮಕೂರು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವರ ಅಗ್ನಿಕುಂಡದ ನಂತರ ದಾಸೋಹ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಮಾತನಾಡಿದ, ದಬ್ಬೆಘಟ್ಟದ ಗ್ರಾಮದ ಮುಖಂಡ ಶಿವಕುಮಾರ್, ಶ್ರೀ ಮರುಳಸಿದ್ದರು ಗ್ರಾಮಕ್ಕೆ ಬಂದು ನೆಲಸಿದ್ದರು ಎಂದು ಪ್ರತೀತಿ ಇದೆ, ಈ ಸಂದರ್ಭದಲ್ಲಿ ಕೆಂಪಮ್ಮ ಮಾರಿ ಬಂದು ಮಾನವರ ಹಾಗೂ ಪ್ರಾಣಿಗಳ ಆಹಾರ ಬೇಕೆಂದಾಗ ಮರುಳಸಿದ್ದರು ಕೊಡಲು ಸಾಧ್ಯವಿಲ್ಲ ಎಂದಾಗ, ಮಾರಿ ಕೆಂಡದ ಉಂಡೆಗಳನ್ನು ಸುರಿದಾಗ ಮರುಳಸಿದ್ದರು ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಮಾರಿಯಿಂದ ಕಾಪಾಡಿದರೆಂಬ ಪ್ರತೀತಿ ಇದೆ ಆದ್ದರಿಂದ ಪ್ರತಿ ವರ್ಷದ ಮರುಳಸಿದ್ದರಿಗೆ ಕೆಂಡದ ಸೇವೆಯನ್ನು ಸಲ್ಲಿಸಲಾಗುವುದು ಎಂದರು.
ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ ಉತ್ಸವ ಮೂತರ್ಿಯೊಂದಿಗೆ ಗ್ರಾಮ ದೇವತೆಗಳಾದ ಮಾವೂರದ ಯಲ್ಲಮ್ಮ, ದುರ್ಗಮ್ಮ, ಬ್ಯಾಲಕೆರೆಯಮ್ಮ, ಸೋಮದೇವರೊಂದಿಗೆ ಬಸವಣ್ಣ ಸೇರಿದಂತೆ ನಂಧಿಧ್ವಜ ಹೊತ್ತವರು ಅಗ್ನಿಕೊಂಡ ಹಾಯುವ ಮೂಲಕ ಜಾತ್ರಾಮಹೋತ್ಸವದಲ್ಲಿ ಭಕ್ತಿಯನ್ನು ಸಮಪರ್ಿಸುವ ಮೂಲಕ ವಿಜೃಂಭಣೆಯ ಮೆರಗು ತಂದರು. ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹಾಜರಿದ್ದು ಮುಖಡರುಗಳಾದ ಸಿ.ಬಸವರಾಜು ವಿವಿಧ ಜನಪ್ರತಿನಿಧಿಗಳು  ಗ್ರಾಮದ ಹಿರಿಯರಾದ ಗೋಪಾಲಯ್ಯ, ನಾಗಣ್ಣ ಹಾಗೂ ಭಕ್ತಾಧಿಗಳು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ರವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ :  ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಅವರಲ್ಲಿನ ಆದರ್ಶಗಳನ್ನು ಅರಿವು ಮೂಡಿಸಬೇಕಾದ ಅಧಿಕಾರಿಗಳಲ್ಲಿರುವ ನಿರಾಸಕ್ತಿಯಿಂದಾಗಿ ದಲಿತ ಮನಸ್ಸುಗಳನ್ನು ಕದಡಿದಂತೆ ಮಾಡುತ್ತಿದೆ ಎಂದು ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಪ್ಪ ಆಕ್ರೋಶ ವ್ಯಕ್ತಪಡಿಸಿದರು. 
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಡಾ||ಬಾಬು ಜಗಜೀವನರಾಂ ರವರ 108 ಹಾಗೂ ಡಾ||ಅಂಬೇಡ್ಕರ್ರವರ 124 ನೇ ಜಯಂತಿ ಆಚರಣೆಯನ್ನು ಒಟ್ಟಿಗೆ ಆಚರಿಸುವ ಸಲುವಾಗಿ ಕರೆದಿದ್ದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು,  ಭಾರತದ ಮಹಾನ್ ವ್ಯಕ್ತಿಗಳಾದ ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಇವರು ಈ ದೇಶದ ಅತ್ಯಮೂಲ್ಯ ಆಸ್ತಿಯಾಗಿದ್ದು ಇವರ ಜನ್ಮ ಆಚರಣೆಯನ್ನು ಸಕರ್ಾರ ಆಚರಿಸುವಂತೆ ಆದೇಶ ನೀಡಿದ್ದರೂ ಇಲ್ಲಿನ ಆಡಳಿತ ನಿರಾಸಕ್ತಿ ತೋರುತ್ತ ಬೇಜವಬ್ದಾರಿ ಎದ್ದು ಕಾಣುತ್ತಿದೆ. ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಿದ್ದರೂ ಅಧಿಕಾರಿಗಳೂ ಭಾಗವಹಿಸಿಲ್ಲ. ಅಧಿಕಾರಿಗಳು ಈ ಬಗ್ಗೆ  ಉದಾಸೀನದ ಮನೋಭಾವ ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳ ಪ್ರತಿ ನಾಗರೀಕರಿಗೂ ತಿಳಿಯುವಂತೆ ಮಾಡುವ ಆಚರಣೆಗೆ ಎಲ್ಲರ ಸಹಕಾರ ಬೇಕು. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗದ ಜನರಿಗೆ ಇಲಾಖೆಗಳಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ಪಡೆಯುವಂತೆ ಮಾಹಿತಿ ಅಗತ್ಯವಾಗಿದೆ. ಇಂತಹ ಜನ್ಮ ಆಚರಣೆಯ ಸಂದರ್ಭದಲ್ಲಿ ಶೋಷಿತ ವರ್ಗದವರನ್ನು ಒಂದು ಕಡೆ ಕಲೆಹಾಕಿ ಆ ಜನರಿಗೆ ಇವರ ಆದರ್ಶಗಳ ಬಗ್ಗೆ ತಿಳಿಸುವ ಕಾರ್ಯಕ್ರಮವಾಗಬೇಕು ಎಂದರು. 
   ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ ಮಹಾನ್ ವ್ಯಕ್ತಿಗಳ ಜನ್ಮ ಆಚರಣೆಗಳು ಸರ್ವಸಮಾಜಕ್ಕೂ ಆಗತ್ಯವಾದ ಆಚರಣೆಯನ್ನು ನಮ್ಮನ್ನಾಳುವ ಸಕರ್ಾರಗಳು ಕೇವಲ ಒಂದೊಂದು ಸಮಾಜಕ್ಕೆ ಅವರನ್ನು ಸೀಮಿತಗೊಳಿಸಿ ಆಚರಿಸುತ್ತಿರುವುದು ಖಂಡನಾರ್ಹ ವಿಷಯ, ಇವರುಗಳೇ ಸಮಾಜಗಳನ್ನು ಒಡೆದು ಅಳುವ ನೀತಿಗೆ ಹೋಗಿರುವುದರಿಂದ ನಮ್ಮ ನಾಯಕರ ಆಚರಣೆಯನ್ನು ಸಹ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘಟನೆಗೆ ಸಿಮಿತಗೊಳಿಸಿಬೇಡಿ ಎಂದು ಮನದಾಳದ ಆಕ್ರೋಶವನ್ನು ಬಿಚ್ಚಿಟ್ಟರು. 
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಕ್ಷಮ್ಮ ಮಾತನಾಡಿ ಒಂದು ಸಮಾಜಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲಾ ಆಚರಣೆಯ ಸಂದರ್ಭದಲ್ಲಿ ಭಾಗವಹಿಸಿದರೆ ಯಾರ ಅಡ್ಡಿಯೂ  ಇರುವುದಿಲ್ಲ ಎಲ್ಲರೂ ಒಟ್ಟಾಗಿ ಆಚರಿಸುವ ಆಚರಣೆಯಾಗಬೇಕು ಇದಕ್ಕೆ ಎಲ್ಲರ ಸಹಕಾರವೂ ಇದ್ದು ಅಧಿಕಾರಿಗಳ ಸಹಕಾರವು ನಮಗೆ ಸಿಗುತ್ತಿದೆ ಜೊತೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
 ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲತಾಕೇಶವಮೂತರ್ಿ ಪುರಸಭಾಧ್ಯಕ್ಷೆ ರೇಣುಕಮ್ಮ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ನಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ಶೆಟ್ಟಿ, ಬಿ.ಇ.ಓ ಕೃಷ್ನಮೂತರ್ಿ ಬೆಸ್ಕಾಂ ಎ.ಇ.ಇ.ರಾಜಶೇಖರ್, ಕೃಷಿ ಸಹಾಯಕ ನಿದರ್ೇಶಕ ಹೊನ್ನೆದಾಸೆಗೌಡ, ಕೃಷ್ಣನಾಯಕ್ ತಾಲ್ಲುಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಉಪಸ್ಥಿತರಿದ್ದರು.


ಹೆಚ್ಚುವರಿ ಶಿಕ್ಷಣರ ತಾತ್ಕಾಲಿಕ ಪಟ್ಟಿ ಪ್ರಕಟ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮಾ.31: 2014-15ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಥರ್ಿ, ಶಿಕ್ಷಕರ ಅನುಪಾತದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ತಾತ್ಕಾಲಿಕ ಪಟ್ಟಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ. ಕೃಷ್ಣಮೂತರ್ಿ ತಿಳಿಸಿದ್ದಾರೆ.
ಈ ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಮಥರ್ಿಸ ಬಲ್ಲಂತಹ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4ರ ಒಳಗೆ ಕಛೇರಿಯ ನೋಡಲ್ ಅಧಿಕಾರಿಗಳಿಗೆ ಮುದ್ದಾಂ ಸಲ್ಲಿಸುವುದು, ತಡವಾಗಿ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು.
ಬಿ.ಆರ್.ಪಿ ಮತ್ತು ಸಿ.ಆರ್.ಪಿ.ಹುದ್ದೆಗಳಿಗೆ ಪರೀಕ್ಷೆ: 2015-16ನೇ ಸಾಲಿನ ಸಿ.ಆರ್.ಪಿ. ಮತ್ತು ಬಿ.ಆರ್.ಪಿ. ಖಾಲಿ ಹುದ್ದೆಗಳನ್ನು ಭತರ್ಿ ಮಾಡುವ ಸಂಬಂಧ ಅರ್ಹ ಶಿಕ್ಷಕರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ. 
ಅಜರ್ಿ ಸಲ್ಲಿಸಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ 31.5.2015ಕ್ಕೆ 10 ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರಬೇಕು, ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಹುದ್ದಗಳಿಗೆ ಅಜರ್ಿ ಸಲ್ಲಿಸುವ ಶಿಕ್ಷಕರು ದಿ. 31.05.2015ಕ್ಕೆ ಐದು ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವುದು ಕಡ್ಡಾಯವಾಗಿರುತ್ತದೆ.
ದಿನಾಂಕ 31.05.215ಕ್ಕೆ ಗರಿಷ್ಟ ವಯೋಮಿತಿ 50 ವರ್ಷ ಮೀರಿರಬಾರದು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಹೆಚ್ಚಿನ ಮಾಹಿತಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಅಜರ್ಿ ಸಲ್ಲಿಸಲು ಕೊನೆ ದಿನಾಂಕ 16.04.2015, ಲಿಖಿತ ಪರೀಕ್ಷೆ 26.04.2015 ಅಜರ್ಿ ಸಲ್ಲಿಸುವ ಸ್ಥಳ ಕ್ಷೇತ್ರ ಸಮನ್ಯಯಾಧಿಕಾರಿಗಳು ಬಿ.ಆರ್.ಸಿ. ಕಛೇರಿ ಚಿ.ನಾ.ಹಳ್ಳಿ ಇಲ್ಲಿ ಸಂಪಕರ್ಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀನಂಶ್ರೀ ಭವನ ಶೀಘ್ರ ಪೂರ್ಣಗೊಳಿಸಲು ವಿಪ್ರ ಹಿತರಕ್ಷಣಾ ವೇದಿಕೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಏ.01 : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಕುಂಟುತ್ತಾ ಸಾಗುತ್ತಿರುವ ತೀ.ನಂ.ಶ್ರೀಕಂಠಯ್ಯ ಭವನ ಕಾಮಗಾರಿಯನ್ನು ತ್ವರಿತವಾಗಿ ಪೂರೈಸುವಂತೆ ಹಾಗೂ ತೀ.ನಂ.ಶ್ರೀ  ಭವನವನ್ನು ವಿಪ್ರ ಹಿತರಕ್ಷಣ ವೇದಿಕೆಗೆ ಹಸ್ತಾಂತರಿಸುವಂತೆ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ ಸಕರ್ಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ವಿಪ್ರ ಹಿತರಕ್ಷಣಾ ವೇದಿಕೆ ಮಾಸಿಕ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಶೆಟ್ಟಿಕೆರೆ ವಿಶ್ವನಾಥ್, ತಾಲ್ಲೂಕಿನ ತೀರ್ಥಪುರದ ಹೆಸರಾಂತ ಸಾಹಿತಿ  ತೀ.ನಂ.ಶ್ರೀಯವರ  ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ತೀ.ನಂ.ಶ್ರೀ ಭವನದಲ್ಲಿ ಸುಸ್ಸಜಿತ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು  ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಭವನ ನಿಮರ್ಿಸಬೇಕು, ಪ್ರತಿ ಸೋಮವಾರದಂದು ಇಲ್ಲಿ ನಡೆಯುತ್ತಿರುವ ಸಂತೆಯನ್ನು ಬೇರೆಡೆಗ ಸ್ಥಳಾಂತರಿಸಬೇಕು ಎಂದರು.
ತಾಲ್ಲೂಕಿವ ವಿಪ್ರ ಸಮುದಾಯದವರ ಶ್ರೇಯೋಭಿವೃದ್ದಿಗಾಗಿ ವಿಪ್ರ ಹಿತರಕ್ಷಣಾ ವೇದಿಕೆಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕಿನ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆಯಬೇಕೆಂದು ಸಧ್ಯ ನಡೆಯುವ ಜಾತಿಗಣತಿಯಲ್ಲಿ ಒಳಪಂಗಡಗಳನ್ನು ನಮೂದಿಸದೆ ಜಾತಿ ಸೂಚಕದಲ್ಲಿ ಬ್ರಾಹ್ಮಣ ಎಂದೆ ನಮೂದಿಸಿ ಎಂದು ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗುತ್ತಿದ್ದು ಆಥರ್ಿಕವಾಗಿ ಹಿಂದುಳಿದ ವಿಪ್ರ ಸಮಾಜದ ಅಭಿವೃದ್ಧಿಗಾಗಿ ಸ್ಥಾಪಿಸಲಿದ್ದು, ತಾಲ್ಲೂಕಿನಾದ್ಯಂತ ವಿಪ್ರ ಸಂಘ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿದ್ದು ಗಾಯಿತ್ರಿ ಪತ್ತಿನ ಸಹಕಾರ ಸಂಘಕ್ಕೆ  ಮುಖ್ಯ ಪ್ರವರ್ತಕರನ್ನಾಗಿ ಹುಳಿಯಾರಿನ ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ, ನೋಂದಣಿ ಕಾರ್ಯ ಪೂರ್ಣಗೊಂಡ ನಂತರ ತಾಲ್ಲೂಕಿನಾದ್ಯಂತ ಸಂಚರಿಸಿ ಷೇರು ಹಣವನ್ನು ಸಂಗ್ರಹಿಸಲಾಗುವುದು ಎಂದರು. 
 ಪಟ್ಟಣದ ಕೆರೆ ಬಳಿಯಲ್ಲಿ ಇರುವ ದಹನ ಕಾರ್ಯಕ್ಕೆ ನೆರವಾಗಲು ಸುಸಜ್ಜಿತ ಮುಕ್ತಿಧಾಮ ನಿಮರ್ಿಸಲು ತೀಮರ್ಾನಿಸಿದ್ದು ಮುಕ್ತಿಧಾಮ ಅಭಿವೃದ್ದಿ ಸಮಿತಿಯನ್ನು ರಚಿಸಲಾಗಿದ್ದು ಸ್ಮಶಾನ ಭೂಮಿಯ ಹಸ್ತಾಂತರಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ಈ ಮುಕ್ತಿಧಾಮಕ್ಕೆ 10ಲಕ್ಷ ರೂಪಾಯಿ ತಗಲುವ ಅಂದಾಜಿದ್ದು ದಾನಿಗಳ ನೆರವಿನಿಂದ ಕಾಮಗಾರಿ ನಡೆಸಲು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಿಪ್ರಹಿತರಕ್ಷಣಾ ವೇದಿಕೆ ಅಧ್ಯಕ್ಷ ನರೇಂದ್ರಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್, ಕಾರ್ಯದಶರ್ಿ ಮಧುಸೂದನ್ ರಾವ್, ಪದಾಧಿಕಾರಿಗಳಾದ ಸಿ.ಡಿ.ರವಿ, ತೀರ್ಥಪುರ ಶ್ರೀಕಂಠಪ್ರಸಾದ್, ಶ್ರೀನಿವಾಸ್,ರಂಗನಾಥಪ್ರಸಾದ್, ರಾಜೀವಲೋಚನ, ಸೂರ್ಯನಾರಾಯಣ, ಗಣೇಶ್,ಮೋಹನ್, ಲಕ್ಷ್ಮಿನಾರಾಯಣ, ಭಾಸ್ಕರ್, ರವಿಕುಮಾರ್ ,ರಂಗನಾಥ ಉಡುಪ ಮತ್ತಿತರರಿದ್ದರು.