Thursday, September 1, 2016

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಾಬ್ದಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.01 : ಬದುಕನ್ನು ಪ್ರೀತಿಸುವವರು ಜೀವನದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ಕವಿ ಕೆಎಸ್.ನರಸಿಂಹಸ್ವಾಮಿರವರ ಕವಿತೆಗಳಲ್ಲಿ ಮೂಡಿದೆ ಎಂದು ನವೋದಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ರವಿಕುಮಾರ್ ಹೇಳಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ರೋಟರಾಕ್ಟ್ನ ಸಂಯುಕ್ತಾಶ್ರಯದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಾಬ್ದಿ ಅಂಗವಾಗಿ ನಡೆದ ಕವಿಗೋಷ್ಠಿ ಹಾಗೂ ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಗರು ಮತ್ತು ನರಸಿಂಹಸ್ವಾಮಿರವರ ಕಾಲಾನುಘಟ್ಟದಲ್ಲಿ ಮೂಡಿ ಬಂದಂತಹ ಕವಿತೆಗಳು ಹೆಚ್ಚಾಗಿ ಭಾವಗೀತೆಗಳಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು, ಮಗುವಿನ ಆಟೋಟ, ಮುಗ್ಧತೆಗಳನ್ನು ತಮ್ಮ ಕವಿತೆಗಳಲ್ಲಿ ಸುಂದರವಾಗಿ ವಣರ್ಿಸುತ್ತಿದ್ದರು ಎಂದರು.
ನವೋದಯ ಕಾಲಾನುಘಟ್ಟದಲ್ಲಿ ಕೆ.ಎಸ್.ಎನ್ರವರ ಕವಿತೆಗಳ ಬಗ್ಗೆ ಹೆಚ್ಚೆಚ್ಚು ಟೀಕೆಗೆ ಒಳಪಟ್ಟವು, ಅವರು ಗಾಂಧೀಜಿಯ ಬಗ್ಗೆ ಕಟ್ಟಿಕೊಟ್ಟಂತಹ ಸಂದೇಶಗಳು, ಇಲ್ಲಿನ ನೆಲ, ಜಲ, ಮಣ್ಣಿನ ಬಗ್ಗೆ ಪ್ರೀತಿಯಿಂದ ಕವಿತೆ ಕಟ್ಟುತ್ತಿದ್ದರು, 21ನೇ ಶತಮಾನದಲ್ಲಿ ವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗುತ್ತಿರುವ ಈ ದಿನಮಾನಗಳಲ್ಲಿ ಅವರ ಕವಿತೆ ಅವಿಭಕ್ತ ಕುಟುಂಬದ ಎಳೆಯನ್ನು ನೀಡುತ್ತಿತ್ತು, ಮೈಸೂರು ಮಲ್ಲಿಗೆ, ತೆರದ ಬಾಗಿಲು ಕಾವ್ಯಗಳು ಕೆ.ಎಸ್.ಎನ್ರವರ ಕಾವ್ಯದ ಪ್ರಚಲಿತವಾಗಿ ಜನರನ್ನು ಆಕಷರ್ಿಸುತ್ತದೆ ಎಂದರು.
ಉಪನ್ಯಾಸಕ ಡಾ.ಶಿವಣ್ಣಬೆಳವಾಡಿ ಮಾತನಾಡಿ, ಇಂದಿನ ಕವಿಗಳು ಯಾವ ಚಳುವಳಿಗೂ ಒಳಗಾಗದೆ ಹೊಸ ದೃಷ್ಠಿಕೋನದಿಂದ ಕಾವ್ಯ ಕಟ್ಟುತ್ತಿದ್ದಾರೆ, ಗೋಪಾಲಕೃಷ್ನ ಅಡಿಗರು, ಗಂಗಾಧರ್ ಇವರ ಚಿತ್ತಗಳೆಲ್ಲವೂ ಸಮಾಜದ ಅಸಮಾನತೆ ವಿರುದ್ದ, ನೋವಿನ ಪ್ರತೀಕದ ಅಂಶಗಳು, ದಲಿತ ಬಂಡಾಯದಗಳ ಕವಿತೆಗಳಾಗಿ ಹೊರಬರುತ್ತಿದ್ದವು, ಪ್ರತಿಯೊಬ್ಬ ಕವಿಯೂ ಉತ್ತಮ ಕವಿಯಾಗಬೇಕಾದರೆ ಈ ನೆಲದ ಭಾಷೆ ಮೈಗೂಡಿಸಿಕೊಳ್ಳಬೇಕು, ತನ್ನ ನೆಲದ ಸಂಗತಿಗಳನ್ನು ಅರಿಯಬೇಕು ಅದೇ ರೀತಿ ಕೆ.ಎಸ್.ಎನ್ರವರು ತಮ್ಮ ಬದುಕಿನ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡ್ಡಿದ್ದರು ಎಂದ ಅವರು, ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಆಸ್ಪತ್ರೆಗಳು ವಾಣಿಜ್ಯಕರಣಗೊಳ್ಳುತ್ತಿವೆ ಎಂದು ವಿಷಾಧಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ದೇವರಾಜು ಮಾತನಾಡಿ, ಉದಯೋನ್ಮುಖ ಕವಿಗಳಿಗೆ ವೇದಿಕೆ ಕಲ್ಪಿಸುವುದು ಅಗತ್ಯ ಅಂತಹ ಕೆಲಸವನ್ನು ನಮ್ಮ ರೋಟರಿ ಸಂಸ್ಥೆ ಮಾಡುತ್ತಿದೆ, ಮುಂದೆಯು ಮಾಡಲಿದೆ, ಕವಿತೆಯ ರಚನೆ ಕೇಳಿದಷ್ಟು ಸುಲಭವಲ್ಲ ಅದಕ್ಕೆ ಪೂರಕವಾದ ವಾತಾವರಣ ಅಗತ್ಯ ಎಂದರು.
ಕವಿಗಳಾದ ಕುಮಾರ್ ಎಸ್.ಬಿ, ಪುಷ್ಪಶಿವಣ್ಣ, ಗುರುಪ್ರಸಾದ್ಕಂಟಲಗೆರೆ, ಚನ್ನಬಸವಯ್ಯ ಬೇವಿನಹಳ್ಳಿ, ಮಂಜುಳ ಪ್ರಕಾಶ್, ಹುಳಿಯಾರ್ಷಬ್ಬೀರ್, ರಾಧಾಕೃಷ್ಣ, ಎಂ.ಎಸ್.ರವಿಕುಮಾರ್ ತಮ್ಮ ಕವಿತೆಯನ್ನು ವಾಚಿಸಿದರು. 
ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ಛಾಯಾಚಿತ್ರಕಾರರಾದ ಕಲ್ಪನಾ ಸ್ಟುಡಿಯೋದ ಎಸ್.ನಾಗರತ್ನಗಂಗಣ್ಣರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ವಿ. ನಾಗರಾಜ್ರಾವ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ಡಿ.ಸಿ.ಶಶಿಕಲಜಯದೇವ್, ರೋಟರಾಕ್ಟ್ ಅಧ್ಯಕ್ಷ ಕಾಶಿಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣಕ್ಕೆ ಆಗಮಿಸಿದ ಗಣೇಶ ಮೂತರ್ಿಗಳು
ಚಿಕ್ಕನಾಯಕನಹಳ್ಳಿ,ಸೆ.01 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ.
ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಗಣಪತಿಯನ್ನು ಇಡಲು ಯುವಕರ ತಂಡಗಳು ಈಗಾಗಲೇ ಗಣಪತಿ ಇಡುವ ಸ್ಥಳಗಳಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
 ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.

ಜೇನಿಗಾಗಿ ಮರವೇರಿದ ಕರಡಿ 
ಚಿಕ್ಕನಾಯಕನಹಳ್ಳಿ,ಸೆ.01 : ಜೇನಿನ ಆಸೆಗಾಗಿ ಮರವೇರಿದ ಕರಡಿ ಮರದಿಂದ ಕೆಳಗೆಬಾರಲು ಸಾಧ್ಯವಾಗದೇ ಮರದಲ್ಲೇ ಕುಳಿತುಕೊಂಡು ಸಾರ್ವಜನಿಕರಿಗೆ ದರ್ಶನ ನೀಡಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿಗೇಟ್ ಬಳಿಯ ಆಲದಮರದಲ್ಲಿದ್ದ ಜೇನಿನ ಆಸೆಗೆ ಬುಧವಾರ ರಾತ್ರಿ ಮರವನ್ನು ಏರಿದ ಕರಡಿಯೊಂದು ಮರದಿಂದ ಕೆಳಗೆ ಬಾರಲು ಸಾದ್ಯವಾಗದೇ ಅಲ್ಲೇ ಸಮಯವನ್ನು ಕಳೆದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ತಿಳಿಸಿದರು, ಕೇವಲ ಕರಡಿಯನ್ನು ವೀಕ್ಷಿಸಿದರೆ ವಿನಃ ಅದರ ಸಮಸ್ಯೆಗೆ ಸ್ಪಂದಿಸಿ ಅದರ ರಕ್ಷಣೆಗೆ ಯಾವುದೇ ಕ್ರಮವನ್ನು ತೆಗೆದುಕೊಳದೇ ಇರುವುದು ಕೆಲವು ಪ್ರಾಣಿಪ್ರಿಯರಲ್ಲಿ ಅಸಮದಾನ ಮೂಡಿತು.

ಪಟ್ಟಣಕ್ಕೆ ಟಿಪ್ಪು ಸುಲ್ತಾನ್ ರಾಜ್ಯಧ್ಯಕ್ಷ 


ಚಿಕ್ಕನಾಯಕನಹಳ್ಳಿ,ಸೆ.01 : ಟಿಪ್ಪು ಸುಲ್ತಾನ್ ಪ್ರಾಧಿಕಾರವೂ ಸೇರಿದಂತೆ ಸಂಗೋಳ್ಳಿರಾಯಣ್ಣ, ಕಿತ್ತೂರುರಾಣಿಚೆನ್ನಮ್ಮ ಪ್ರಾಧಿಕಾರ ಸೇರಿದಂತೆ ಮೂರು ಪ್ರಾಧಿಕಾರಗಳನ್ನು ಸ್ಥಾಪಿಸಬೇಕು ಕೇವಲ ಒಂದು ಪ್ರಾಧಿಕಾರವನ್ನು ಸ್ಥಾಪಿಸಿದರೆ ನಾವು ವಿರೋಧಿಸುತ್ತೇವೆ ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.
ಮೈಸೂರಿನ ಟಿಪ್ಪು ಸುಲ್ತಾನ್ ಸಮಾದಿಗೆ ಶ್ರೀಗಂಧ ಲೇಪನಮಾಡಲು ಚಿತ್ರದುರ್ಗದಿಂದ ಶ್ರೀಗಂಧವನ್ನು ತೆಗೆದುಕೊಂಡು ಹೋಗುವಾ ಮಾರ್ಗಮದ್ಯೆ ಪಟ್ಟಣದ ತಾತಯ್ಯನ ಗೋರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸಂಘಟನೆಯಲ್ಲಿ ಕೇವಲ ಮುಸ್ಲೀಂರಷ್ಟೇ ಅಲ್ಲದೇ ಎಲ್ಲಾ ಸಮುದಾಯದವರೂ ಸೇರಿ ಸಂಘಟನೆ ಮಾಡಲಾಗಿದ್ದು  ತಾಲ್ಲೂಕಿನಲ್ಲೂ ಇಂತಹ ಸಂಘಟನೆಯನ್ನು ರಚಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು ಈ ನಾಡಿಗಾಗಿ ಬ್ರಿಟೀಷರೊಡನೆ ಹೋರಾಡಿದ ಮಹಾನ್ ವ್ಯಕ್ತಿ ಟಿಪ್ಪು ಇವರ ಹೆಸರಿನಲ್ಲಿ ನಾವು ಸಂಘಟನೆ ಮಾಡಿ ದೇಶಭಕ್ತಿಯ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಲಿಂಗದೇವರು, ಶಾಂತಕುಮಾರ್, ಕೃಷ್ಣೇಗೌಡ, ಕನರ್ಾಟಕ ಜಾಗೃತಿ ಸೇನೆಯ ಅಧ್ಯಕ್ಷ ನಿಂಗರಾಜು, ಪೈಲ್ವಾನ್ ಸದ್ದಾಂ, ಸಮೀಉಲ್ಲಾ, ತಾಹಿರಾ, ಸೇರಿದಂತೆ ಹಲವರು ಶುಭಕೋರಿದರು.