Tuesday, June 21, 2016ಚಿ.ನಾ.ಹಳ್ಳಿ ಪಟ್ಟಣದಲ್ಲಿ ಯೋಗ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.21 : ಯೋಗ ಒಂದು ಧರ್ಮಕ್ಕೆ ಸೀಮಿತವಾದುದಲ್ಲ ಅದು ಮನುಷ್ಯನ ಒಳಿತಿಗಾಗಿ ಇರುವ ಉತ್ತಮವಾದ ಜೀವನ ಕ್ರಮ  ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷ ರಮೇಶ್ ಕೆಂಬಾಳ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮುಂಜಾನೆ 5.30ಕ್ಕೆ ಪತಂಜಲಿ ಯೋಗ, ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆದ ವಿಶ್ವ ಯೋಗ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗ ಹುಟ್ಟಿದ್ದೆ ಭಾರತದಲ್ಲಿ ಎಂದ ಅವರು ಭಾರತ ಪ್ರಪಂಚಕ್ಕೆ ಅಪಾರವಾದ ಕೊಡುಗೆ ನೀಡಿದೆ. ಯೋಗ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದದ್ದು, ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು ಯೋಗದಿಂದ ಎಲ್ಲರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಮಾತನಾಡಿ,  ಯೋಗಾಭ್ಯಾಸವು ನಿರಂತರವಾಗಿರಬೇಕು ಇದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬೇಕು ಎಂದ ಅವರು ಇಂತಹ ಯೋಗಾಭ್ಯಾಸಕ್ಕೆ ಒಂದು ಯೋಗ ಮಂದಿರವನ್ನು ನಿಮರ್ಿಸಿಕೊಡುವಂತೆ ಶಾಸಕರ ಅನುಪಸ್ಥಿತಿಯಲ್ಲಿ ಮನವಿ ಮಾಡಿದರು.
ಮುಂಜಾನೆ 5.30ಕ್ಕೆ ಆರಂಭವಾದ ಯೋಗಶಿಬಿರ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಯುವಕರು, ಮಹಿಳೆಯರು, ವಯಸ್ಕರು ಭಾಗವಹಿಸಿದ್ದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆ, ಹಾಗೂ ಸ್ವಾಮಿವಿವೇಕಾನಂದರ ವೇಷ ಧರಿಸಿದ ಮಕ್ಕಳೊಂದಿಗೆ ನೂರಾರು ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಯೋಗ ಉಚಿತ ರೋಗ ಖಚಿತ. ಎಂಬ ಘೋಷಣೆ ಕೂಗುತ್ತ ಕನ್ನಡ ಸಂಘದ ವೇದಿಕೆಗೆ ಆಗಮಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ,ರೋಟರಿ ಅಧ್ಯಕ್ಷ ಸಿಎನ್ ಪ್ರಸನ್ನಕುಮಾರ್ ಗಂಗಾಧರ್,ಡಾ||ಪ್ರಶಾಂತ್ಕುಮಾರ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು. 
     ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಮಳೆಗಾಗಿ                                     ವಿಶೇಷ ಪೂಜೆ
ಚಿಕ್ಕನಾಯಕನಹಳ್ಳಿ,ಜೂ.21 : ನಾಡಿಗೆ ಉತ್ತಮ ಮಳೆ-ಬೆಳೆ ಆಗಲೆಂದು ನೂರಾರು ರೈತರು ಹಾಗೂ ಸಾರ್ವಜನಿಕರು ಹೊನ್ನೆಬಾಗಿ ಬಳಿಯ ಗಣಿಪ್ರದೇಶದಲ್ಲಿರುವ ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಭಕ್ತರಿಗೆ ಒಂದು ವಾರ ಕಾಲ ದಾಸೋಹ ವ್ಯವಸ್ಥೆ ಮಾಡಿದ್ದರು. 
  ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸರಿಯಾಗಿ ಮಳೆ ಬಾರದ ಕಾರಣ, ಸೋಮವಾರ ನೂರಾರು ರೈತರು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ರುದ್ರಾಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿನಿತ್ಯ ಗುರು ನಿವರ್ಾಣಸ್ವಾಮಿ ಹಾಗೂ ಗ್ರಾಮ ದೇವತೆ ದುರ್ಗಮ್ಮ ದೇವರುಗಳ ಅಬ್ಬಿಗೆ ಮಲ್ಲೇಶ್ವರ ಬೆಟ್ಟಕ್ಕೆ ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಪೂಜೆ ಸಲ್ಲಿಸಿದರು.
   ಶ್ರೀ ಅಭ್ಬಿಗೆ ಮಲ್ಲೇಶ್ವರಸ್ವಾಮಿ ಸನ್ನಿಧಿಯಲ್ಲಿ 9ದಿನಗಳ ಕಾಲ ಅಖಂಡ ಸೇವೆ, ರುದ್ರಾಭಿಷೇಕ ನಂದಾದೀಪ, ಅಖಂಡ ಭಜನೆ, ನಿರಂತರ ಶಿವಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
   ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಕೇದಿಗೆಹಳ್ಳಿ, ಜೋಗಿಹಳ್ಳಿ, ಹೊನ್ನೇಬಾಗಿ, ಬುಳ್ಳೇನಹಳ್ಳಿ, ಗೊಲ್ಲರಹಟ್ಟಿ, ಹೊಸಹಳ್ಳಿ, ಬಾವನಹಳ್ಳಿ, ಗೋಡೆಕೆರೆ, ಕಾಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತಾಧಿಗಳು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾಸೋಹ ನಡೆಯಿತು.
  ಈ ಸಂದರ್ಭದಲ್ಲಿ ನಿವರ್ಾಣಸ್ವಾಮಿ ಮಠದ ಗುಡಿ ಗೌಡರಾದ ಗೋಪಾಲಗೌಡರು, ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷ ಜಯದೇವ್ಕುಮಾರ್, ಜಿ.ಪಂ ಮಾಜಿ ಸದಸ್ಯ ಬುಳ್ಳೇನಹಳ್ಳಿ ಶಿವಪ್ರಕಾಶ್, ಇಟ್ಟಿಗೆ ರಂಗಸ್ವಾಮಯ್ಯ, ಕರವೇ ಗುರುಮೂತರ್ಿ, ಮಲ್ಲೇಶಯ್ಯ, ಇತರರು ಹಾಜರಿದ್ದರು.     


ಶೆಟ್ಟಿಕೆರೆಯಲ್ಲಿ ಯೋಗ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.21 : ದೇಹ ಮತ್ತು ಮನಸ್ಸಿನ ಸುಸ್ಥಿರ ಆರೋಗ್ಯಕ್ಕೆ ಯೋಗ ಸಾಧನ ಎಂದು ದಿಬ್ಬದಹಳ್ಳಿ ಶಾಮಸುಂದರ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಜನತಾ ಯುವಕ ಸಂಘ ಹಾಗೂ ಜನತಾ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವ್ಯಾಯಾಮ ಹಾಗೂ ಯೋಗಕ್ಕೆ ವ್ಯತ್ಯಾಸವಿದೆ. ವ್ಯಾಯಾಮ ದೇಹವನ್ನು ಸದೃಢವಾಗಿಸಿದರೆ ಯೋಗ ಮನಸ್ಸನ್ನು ಸದೃಢವಾಗಿಸುತ್ತದೆ ಎಂದರು.
  ಸಾಮಾನ್ಯ ಉಸಿರಾಟದಲ್ಲಿ ಶೇ.30 ಭಾಗ ಆಮ್ಲಜನಕ ಬಳಕೆಯಾದರೆ ಯೋಗದ ಮೂಲಕ ಮಾಡುವ ದೀರ್ಘ ಉಸಿರಾಟದಿಂದ ದೇಹದೊಳಗಿನ 77 ಸಾವಿರ ಗಾಳಿ ಚೀಲಗಳು ಜಾಗೃತವಾಗುತ್ತವೆ ಇದರಿಂದ ಶೇ.100ರಷ್ಟು ಆಮ್ಲಜನಕ ಶಕ್ತಿಯಾಗಿ ಮಾರ್ಪಡುತ್ತದೆ ಎಂದರು.
   ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಯಮ್ಮ ಮಾತನಾಡಿ, ಹಿಂದೆ ಬದುಕೇ ಒಂದು ಯೋಗವಾಗಿತ್ತು. ಕುಟ್ಟುವ, ಬೀಸುವ ಹಾಗೂ ಕೃಷಿ ಕಾಯಕದಲ್ಲಿ ತಂತಾನೆ ಆರೋಗ್ಯ ವೃದ್ಧಿಯಾಗುತ್ತಿತ್ತು, ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಯೋಗಕ್ಕೆ ಮೊರೆ ಹೋಗುವ ಅನಿವಾರ್ಯತೆ ಇದೆ ಎಂದರು.
 ಕಾರ್ಯಕ್ರಮದಲ್ಲಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ.ದಯಾಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ಚಂದ್ರಮೌಳಿ, ಎಚ್.ಎಸ್.ಕುಮಾರಸ್ವಾಮಿ ಭಾಗವಹಿಸಿದ್ದರು. 150ಕ್ಕೂ ಹೆಚ್ಚು ಮಕ್ಕಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.