Saturday, April 21, 2012


ಅಕ್ರಮ ಮರಳು : ಸಾಗಾಣಿಕೆ ತಡೆಯಲು ಕೆರೆ ಅಂಗಳಕ್ಕೆ ನಿಷೇದಾಜ್ಞೆ ಜಾರಿ. ಎನ್.ಆರ್.ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಏ.21 : ತಾಲ್ಲೂಕಿನ ಶೆಟ್ಟಿಕೆರೆ ಕೆರೆಯಲ್ಲಿನ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕೆರೆಯ ಒಳಗೆ ಅತಿಕ್ರಮ ಪ್ರವೇಶ ಮಾಡದಂತೆ  ಐ.ಪಿ.ಸಿ ಸೆಕ್ಷನ್ 133ರ ಪ್ರಕಾರ  ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದೇ ಏಪ್ರಿಲ್ 23ರಿಂದ ಈ ಆದೇಶ ಜಾರಿಗೆ ಬರಲಿದ್ದು  ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ, 2011 ಮೇ 5ರಿಂದ 2012 ಏಪ್ರಿಲ್ 1ರವರೆಗೆ ವಿವಿಧ ಸ್ಥಳಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯಯನ್ನು ಸೀಜ್ ಮಾಡಲಾಗಿದ್ದು ಈ ಸಂಬಂಧ ವಿಧಿಸಿದ ದಂಡವು  ಒಂದು ಲಕ್ಷದ ಏಳು ಸಾವಿರದ ಐದುನೂರು ರೂಪಾಯಿಯನ್ನು ಸಕರ್ಾರಕ್ಕೆ ಜಮಾ ಮಾಡಲಾಗಿದೆ. ನಲವತ್ಮೂರು ಸಾವಿರದ ಐದುನೂರು ರೂ ಮರಳನ್ನು ಹರಾಜು ಮಾಡಲಾಗಿದೆ ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕಾನೂನಿನ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು  ಕೆಲವು ಕಡೆ ನಡೆಯುತ್ತಿದ್ದ ಮರಳು ಸಾಗಾಣಿಕೆಯನ್ನು ಸೀಜ್ ಮಾಡಲು ಹೋದಾಗ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಬೇಕಾಯಿತು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಶ್ನಿಸಿದರೆ ನಮಗೆ ಮನೆ ಕಟ್ಟಿಕೊಳ್ಳಲು ಮರಳು ಲಭ್ಯವಾಗದ್ದರಿಂದ ಮರಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬ ವಿಷಯಗಳನ್ನು ತಿಳಿಸಿತ್ತಾರೆ ಎಂದ ಅವರು ಹೊರಗಡೆಯಿಂದ ತಂದಂತಹ ಮರಳನ್ನು ಶೇಖರಿಸಿಡಲು ತಾಲ್ಲೂಕಿನ ಪ್ರತಿ ಹೋಬಳಿಗೂ 2ಎಕರೆ ಜಮೀನು ಕಲ್ಪಿಸಿದ್ದು ಇದರ ಉಸ್ತುವಾರಿಯನ್ನು ಪಿ.ಡಬ್ಯೂ.ಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ
ಚಿಕ್ಕನಾಯಕನಹಳ್ಳಿ,ಏ.21 : ರಾಜ್ಯ ಸಕರ್ಾರ ರೈತರಿಗೆ ವಿದ್ಯುತ್ ಶಕ್ತಿ ಸರಬರಾಜು, ಸಾಲ ಮನ್ನಾ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವುದರ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೇ 25ರ ಬುಧುವಾರ ಹಮ್ಮಿಕೊಂಡಿರುವ  ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ.
ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದಲ್ಲಿ ಹಲವು ಬೇಡಿಕೆಗಳನ್ನಿಟ್ಟಿದ್ದು ಅದರಲ್ಲಿ ಬರಗಾಲ ಪ್ರದೇಶದ ರೈತರ ಎಲ್ಲಾ ಸಾಲಗಳನ್ನು ತಕ್ಷಣ ರದ್ದು ಮಾಡಬೇಕು, ಟ್ರಾಕ್ಟರ್ ಸಾಲ ಮನ್ನ ಮಾಡಿ  ಹೊಸದಾಗಿ ಸಾಲ ಕೊಡಬೇಕು, ಪ್ರತಿ ಜಿಲ್ಲೆಗೆ ತಕ್ಷಣ 5ಕೋಟಿ ಮೊದಲನೆ ಕಂತಿನಲ್ಲಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲೆಗೊಬ್ಬರಂತೆ ರಾಜ್ಯ ಮಟ್ಟದ ಅಧಿಕಾರಿ ಮತ್ತು ಮಂತ್ರಿಗಳನ್ನು ನೇಮಿಸಿ ಜನಗಳಿಗೆ ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು, ನೀರು ಒದಗಿವುದು ಇವುಗಳು ಸೇರಿದಂತೆ ರೈತರಿಗೆ ನೆರವಾಗುವಂತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕಾರ್ಯಕ್ರಮ ಬೆಂಬಲಿಸಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್, ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ಉಪಾಧ್ಯಕ್ಷ ಗಂಗಣ್ಣ ಕಾಡೇನಹಳ್ಳಿ, ಕಾರ್ಯದಶರ್ಿ ಮರುಳಪ್ಪ ಕಾರ್ಯಕ್ರಮಕ್ಕೆ ಬೆಂಬಲ ತಿಳಿಸಿದ್ದಾರೆ.

ಬಸವೇಶ್ವರರ ಜಯಂತ್ಯೋತ್ಸವ
ಚಿಕ್ಕನಾಯಕನಹಳ್ಳಿ,ಏ.21 : ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಹಾಗೂ ಶ್ರೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 24ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಆಡಳಿತ ಮತ್ತು ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ.ಅಧ್ಯಕ್ಷ ಸೀತರಾಮಯ್ಯ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸಲಿದ್ದು, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಜಿ.ಪಂ.ಸದಸ್ಯತು, ಮಾಜಿ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುವರು.