Saturday, April 30, 2016



ಪಟ್ಟಣದಲ್ಲಿ ಸೋರಿಕೆಯಾಗುವ ನೀರು ತಡೆಗಟ್ಟಲು ಪುರಸಭಾಧ್ಯಕ್ಷ ಮನವಿ
ಚಿಕ್ಕನಾಯಕನಹಳ್ಳಿ,:ಪಟ್ಟಣದಲ್ಲಿ ಪ್ರತಿನಿತ್ಯ 3ಲಕ್ಷ ಲೀಟರ್ ನೀರು ಸೋರಿಕೆಯಾಗುತ್ತಿದೆ. ಪೋಲಾಗುತ್ತಿರುವ ನೀರನ್ನು ತಡೆಗಟ್ಟಿದರೆ 3ದಿನಗಳಿಗೊಮ್ಮೆ ಎಲ್ಲಾ ವಾಡರ್್ಗಳಿಗೂ ಕುಡಿಯುವ ನೀರು ಒದಗಿಸಬಹುದು ಎಂದು ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್ ಹೇಳಿದರು. 
ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಿಸಿದ ಬಳಿಕ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ತಡರಾತ್ರ ಸಭೆಕರೆದು ಸಮಸ್ಯೆ ಆಲಿಸುವ ಸಂದರ್ಭದಲ್ಲಿ ಪುರಸಭೆ ಸದಸ್ಯರು ಪಟ್ಟಣದಲ್ಲಿ ತಲೆದೋರಿರುವ ಸಮಸ್ಯೆಯನ್ನು ವಿವರಿಸಿದರು.
   ಪಟ್ಟಣದಲ್ಲಿ 23ಸಾವಿರ ಜನಸಂಖ್ಯೆ ಇದೆ.ಪ್ರತಿನಿತ್ಯ ಪಟ್ಟಣಕ್ಕೆ 20ಲಕ್ಷ ಲೀಟರ್ ಅವಶ್ಯಕತೆ ಇದೆ. ಪಟ್ಟಣದಲ್ಲಿ 59 ಕೊಳವೆಬಾವಿ ಇದ್ದು, 27 ಬರಿದಾಗಿವೆ. ಹೊಸದಾಗಿ ಕೊರೆಸಲಾಗಿರುವ 9 ಕೊಳವೆಬಾವಿಗಳಿಗೆ ಮೋಟ್ರು ಅಳವಡಿಸಬೇಕಿದೆ. 23 ಕೊಳವೆಬಾವಿಗಳಲ್ಲಿ ನೀರು ಲಭ್ಯ ಇದ್ದು, 6.5ಲಕ್ಷ ನೀರು ಲಭ್ಯ ಇದೆ.ಇದರಲ್ಲಿ ಅರ್ಧದಷ್ಟು ನೀರು ಸೋರಿಕೆಯಾಗುತ್ತಿದೆ ಎಂದು ಪುರಸಭೆ ಇಂಜಿನಿಯರ್ ಮಹೇಶ್ಬಾಬು ಸಭೆಗೆ ವಿವರಣೆ ನೀಡಿದರು.
  ನೀರು ಸರಬರಾಜು ಮಾಡಲು ಅಳವಡಿಸಿರುವ ಕೊಳವೆ ಮಾರ್ಗ 30 ವರ್ಷ ಹಳೆಯದಾಗಿದ್ದು ನೀರು ಸೋರಿಕೆಯಾಗುತ್ತಿದೆ ಹಾಗೂ 171 ರೈಸಿಂಗ್ ಮೈನ್ಗಳು ಇದ್ದು ನಿರಂತರವಾಗಿ ನೀರು ಪೋಲಾಗುತ್ತಿದೆ. ನೀರಿನ ಅಪವ್ಯಯ ತಪ್ಪಿಸಲು ಹೊಸ ಕೊಳವೆ ಮಾರ್ಗ ಹಾಕಬೇಕು ಹಾಗೂ ಅಕ್ರಮ ರೈಸಿಂಗ್ ಮೈನ್ಗಳಿಗೆ ಕಡಿವಾಣ ಹಾಕಬೇಕು ಎಂದರು.
  
  ಹೇಮಾವತಿ ನಾಲೆಯಿಂದ ಪಟ್ಟಣದ ಕೆರೆಗೆ ಕುಡಿಯುವ ನೀರು ಹರಿಸಲು ಅವಶ್ಯವಿರುವ ಹೊಸ ಮೋಟ್ರು ಅಳವಡಿಸಲು ರೂ.50ಲಕ್ಷದ ಕ್ರಿಯಾ ಯೋಜನೆ ಹಾಗೂ ಹೇಮಾವತಿ ನೀರನ್ನು ಸಂಗ್ರಹಿಸಲು ಚಿಕ್ಕನಾಯಕನಹಳ್ಳಿಕೆರೆಗೆ ಸಿಮೆಂಟ್ ಬೆಡ್ಡಿಂಗ್ ಹಾಕಲು ಕ್ರಿಯಾ ಯೋಜನೆ ರೂಪಿಸಿ ಹಾಗೂ ಹೊಸದಾಗಿ ಹತ್ತು ಕೊಳವೆ ಬಾವಿಗಳನ್ನು ಕೊರೆಸಲು ಪ್ರಸ್ತಾವನೆ  ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ ಪಟ್ಟಣಕ್ಕೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಾ,  ಕುಡಿಯುವ ನೀರು ಸಮಸ್ಯೆಯ ಬಗ್ಗೆ,  ನೆನಗುದಿಗೆ ಬಿದ್ದಿರುವ ಯು.ಜಿ.ಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ಬಗ್ಗೆ ಹಾಗೂ  ಹೆಚ್ಚುವರಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ  ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವುದು ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಸ್ಥಳ ಮಂಜೂರು ಮಾಡಬೇಕೆಂದು ಬೇಡಿಕೆಯನ್ನು ಓದಿ ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ನಾನಾ ಅಭಿವೃದ್ದಿ ಕಾರ್ಯಗಳಿಗಾಗಿ, ಗಣಿ ಪುನಶ್ಚೇತನ ಯೋಜನೆ ಅಡಿಯಲ್ಲಿ ರೂ.32 ಕೋಟಿ ಹಣ ಮೀಸಲಿಡಲಾಗಿದೆ ಎಂದರು.

ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ಡಾಂಬರು ರಸ್ತೆ ನಿಮರ್ಿಸಿರುವುದರಿಂದ ರಸ್ತೆಯ ಎರಡೂ ಬದಿಗಳಲ್ಲೂ ಪೈಪ್ಲೈನ್ ಮಾಡಲು ಹಣ ಬಿಡುಗಡೆ ಮಾಡಬೇಕು.ಪುರಸಭೆಗೆ ಕೈಲಾಸರಥ ಮುಂಜೂರು ಮಾಡಬೇಕುನೀರು ಸೋರಿಕೆ ತಡೆಗಟ್ಟಲು .ರೈಸಿಂಗ್ ಮೈನ್ಗೆ ಲಾಕ್ ಸಿಸ್ಟಮ್ ಅಳವಡಿಸಬೇಕು ಹಾಗೂ ಮೊಕದ್ದಮೆ ಹಿಂಪಡೆದು ಕೆರೆ ಅಂಗಳದಲ್ಲಿ ಸಂತೆ ಮೈದಾನ ನಿಮರ್ಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಲ್ಲಿಕಾಜರ್ುನಯ್ಯ, ರೂಪಶಿವಕುಮಾರ್, ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಧರಣಿ.ಬಿ.ಲಕ್ಕಪ್ಪ, ಮಹಮದ್ಖಲಂದರ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ: ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ವಿದ್ಯುತ್ ಚಿತಾಗಾರ ಮುಂಜೂರು ಮಾಡಿ ಎಂದು ಸದಸ್ಯರೊಬ್ಬರು ಕೇಳಿದ ತಕ್ಷಣ, ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ ಎಂದು ಜಿಲ್ಲಾಧಿಕಾರಿ  ಮೋಹರಾಜ್ ಪ್ರಶ್ನಿಸಿದರು..ಚಿತಾಗಾರ ಬೇಕೆಂದರೆ ಪ್ರತಿದಿನ ಸಾವು ಸಂಭವಿಸಲೇಬೇಕು ಎಂದು ಧ್ವನಿ ಗೂಡಿಸಿದರು.ಸಭೆ ನಗೆಗಡಲಲ್ಲಿ ತೇಲಿತು.

ಕಾರಿಗೆ ಲಾರಿ ಡಿಕ್ಕಿ ಯುವಕರು ಸಾವು
ಚಿಕ್ಕನಾಯಕನಹಳ್ಳಿ,ಏ.30: ಈರುಳ್ಳಿ ತುಂಬಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ ಮತ್ತೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನು ಮೂವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ಈ ಅಪಘಾತ ಸಂಬಂವಿಸಿದ್ದು, ಚಿಕ್ಕನಾಯಕನಹಳ್ಳಿ ಕಡೆಯಿಂದ ಹೋರಟ ಕಾರು ಹುಳಿಯಾರಿನ ಕಡೆಯಿಂದ ಬಂದ ಲಾರಿ ಮುಖಾಮುಖಿಯಾದ್ದರಿಂದ ಕಂದಿಕೆರೆಯ ಚೇತನ್(25), ಕಿರಣ್(25) ಇಬ್ಬರು ಸ್ಥಳದಲ್ಲೇ ಸಾವನ್ನಪಿದರೆ, ಸಿ.ಆರ್.ಯೋಗಿಶ್  ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ, ಉಳಿದ ಗಾಯಾಳುಗಳಾದ  ಕೆ.ಎನ್. ಯೋಗೀಶ್, ನಾಗರಾಜ್, ಹರೀಶ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸ್ಥಳಕ್ಕೆ ಸಿ.ಪಿ.ಐ.ಮಾರಪ್ಪ, ಪಿ.ಎಸೈ.ವಿಜಯಕುಮಾರ್ ಭೇಟಿ ನೀಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 ಈಜಲು ಹೋದ ಯುವಕ ಸಾವು 



ಚಿಕ್ಕನಾಯಕನಹಳ್ಳಿ,ಏ.30: ಕುಡಿದ ಅಮಲಿನಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ತಾಲೂಕಿನ ಸಿಂಗದಹಳ್ಳಿ ದೊಡ್ಡ ಕೆರೆಯಲ್ಲಿ ನಡೆದಿದೆ.
ಸಿಂಗದಹಳ್ಳಿ  ಗ್ರಾಮದ ವಾಸಿ ಮೀನಿನ ನರಸಿಂಹಮೂತರ್ಿಯ ಅಳಿಯ ಹತ್ಯಾಳ್ನ ಸ್ವಾಮಿ(35) ತಮ್ಮ ಮಾವನ ಮನೆಗೆ ಬಂದ ಸಂದರ್ಭದಲ್ಲಿ ಮಾವನ ಮನೆಯವರು ಮದುವೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡೆದಿದೆ.   ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಧ್ಯ ಪಾನ ಸೇವಿಸಿ ಈಜಲು ಹೋಗಿದ್ದಾನೆ. ಕೆರೆಯ ಸಮೀಪ ಯಾರೂ ಇಲ್ಲದ ಸಂದರ್ಭದಲ್ಲಿ  ಕೆರೆಯ ತೂಬಿನ ಮೇಲಿದ್ದ ಜಿಗಿದಿದ್ದಾನೆ, ಈ ಸಂದರ್ಭದಲ್ಲಿ ಮೃತ ಸ್ವಾಮಿಯ ಆಯಕಟ್ಟಿನ ಜಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಕೈಕಾಲ ಆಡಿಸಲು ಸಾಧ್ಯವಾಗದೆ ನೀರಿನೊಳಗೆ ಊದುಕೊಂಡಿದ್ದಾನೆ ಎಂದು ಕೆರೆಯ ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಜಯಣ್ಣ ಪತ್ರಿಕೆ ತಿಳಿಸಿದರು. 
 ಕೆರೆಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟದ್ದನ್ನು ಮನಗಂಡಿದ್ದರು, ಆದರೆ ಕೆರೆಯೊಳಗೆ  ಯಾರೂ ಈಜಾಡುತ್ತಿರುವುದು ಕಾಣದೆ ಇದ್ದಾಗ ಗಾಬರಿಗೊಂಡ ಸಿಂಗದಹಳ್ಳಿ ಗ್ರಾಮಸ್ಥರು ಕೆರೆಯ ನೀರಿಗೆ ಇಳಿದು ಹುಡುಕಾಡಿದ್ದಾರೆ, ಹಲವು ಘಂಟೆಗಳವರೆಗೆ ಹುಡುಕಾಟದ  ನಂತರ ಮೃತ ದೇಹ ನೀರಿನಲ್ಲಿರುವುದು ಪತ್ತೆಯಾಗಿದೆ. ಪೊಲೀಸರ ಸ್ಥಳಕ್ಕೆ ಆಗಮಿಸಿದ ನಂತರ ಮೃತ ದೇಹವನ್ನು ಹೊರತೆಗೆಯಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.