Sunday, March 27, 2011

ಯಡಿಯೂರಪ್ಪನವರನ್ನು ಕೆಳಗಿಸುವವರೆಗೆ ವಿರಮಿಸೆವು: ಜಮೀರ್ ಖಾನ್
ಚಿಕ್ಕನಾಯಕನಹಳ್ಳಿ,ಮಾ.26: ಸಾಧನೆಯ ಸೋಗಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬಗೆದು ಜನಪರ ಕಾರ್ಯಕ್ರಮ ಮಾಡದೆ ಬರೀ ಮಾಟ ಮಂತ್ರದ ಮೊರೆ ಹೋಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡಿದ್ದಾರೆ, ಕುಮಾರಣ್ಣನ ಜೊತೆಯಾಗಿರುವ ನಾವು ಭ್ರಷ್ಠ ಬಿಜೆಪಿ ಸಕರ್ಾರವನ್ನು ಉರುಳಿಸುತ್ತೇವೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪಟ್ಟಣದ ಹೈಸ್ಕೂಲ್ ಆವರಣದಲ್ಲಿ 51ನೇ ತಾತಯ್ಯನ ಉರುಸ್ ಅಂಗವಾಗಿ ಏರ್ಪಡಿಸಿದ್ದ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಸಕರ್ಾರ ರಚನೆ ಮಾಡುವಷ್ಠು ಸಾಮಥ್ರ್ಯ ತಂದುಕೊಟ್ಟವರೂ ತೃಪ್ತರಾಗದ ಬಿಜೆಪಿ ನಾಯಕರು, ಆಪರೇಷನ್ ಕಮಲವನ್ನೇ ತಮ್ಮ ಅಧಿಕಾರದಿನಗಳಲ್ಲಿ ಮಾಡಿಕೊಂಡು ಬಂದು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಜೆ.ಡಿ.ಎಸ್ ಪಕ್ಷ, 120 ಸದಸ್ಯರಿದ್ದ ಬಿಜೆಪಿಯನ್ನು 105ಕ್ಕೆ ಇಳಿಸಿದ್ದರೂ ಅವರಿಗೆ ಬುದ್ದಿ ಬಂದಿಲ್ಲ, ಜನಪರ ಕಾರ್ಯ ಮಾಡುತ್ತಿಲ್ಲ ಬರೀ ಧರ್ಮದ ಸೋಗಿನಲ್ಲಿ ಜನರನ್ನು ಗಾಡಾಂದರಕ್ಕೆ ತಳ್ಳಲು ಹೊರಟಂತಿದೆ ಉಳಿಸಿಕೊಳ್ಳಲು ಮಾಟಮಂತ್ರಕ್ಕೆ ಮೊರೆ ಹೋಗಿದ್ದಾರೆ, ರಾಜ್ಯದ ಜನರ ಮೇಲಿಲ್ಲದೆ ವಿಶ್ವಾಸ ಮಾಟ ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಹೆಚ್.ಡಿ.ಕುಮಾರಣ್ಣನ ಜೊತೆಗೆ ಚೆಲುವರಾಯಸ್ವಾಮಿ ಪುಟ್ಟಣ್ಣ, ಬಾಲಕೃಷ್ಣ, ಸುರೇಶ್ಬಾಬು, ನಾನೂ ಸೇರಿದರೆ ಸಾಕು ರಾಜ್ಯದ ಜನರ ಆಶೀವರ್ಾದ ಫಲದಿಂದಾಗಿ ಈ ಕೆಟ್ಟ ಸಕರ್ಾರವನ್ನು ಕಿತ್ತೊಗೆಯುತ್ತೇವೆ. ಕ್ಷೇತ್ರದ ಜನರಲ್ಲಿ ಮನವಿ ಮಾಡುವುದೇನೆಂದರೆ ಯಾರೋ ಇಲ್ಲಿ ಶಾಸಕರನ್ನು ಹುಡುಕಿಕೊಡಿ ಎಂದು ಮಾಧ್ಯಮಗಳ ಮೊರೆ ಹೋಗಿದ್ದರಂತೆ ಶಾಸಕರು ನಮ್ಮನ್ನು ಬಿಟ್ಟು ಎಲೂ ಹೋಗಿರಲಿಲ್ಲ, ರಾಜ್ಯದ ಮೂಲೆಮೂಲೆಗಳಲ್ಲಿನ ನಿಮ್ಮ ಅಣ್ಣ ತಮ್ಮಂದಿರುಗಳಿಗಾಗುತ್ತಿರುವ ಅನ್ಯಾಯ ಸರಿ ಪಡಿಸಬೇಕಾದರೆ ಬಿಜೆಪಿ ದುರಾಡಳಿತ ಸಕರ್ಾರದ ಅಕ್ರಮಗಳನ್ನು ಬಯಲು ಮಾಡಲು ಹೋಗಬೇಕಾಗಿ ನಿಮಗೆರಡು ತಿಂಗಳ ಸಿಗದೆ ಹೋಗಿರಬಹುದು, ಲಾಭಕ್ಕಾಗಿಯೇ ಇರೋ ರಾಜಕಾರಣಿಗಳ ಬೇರೆ ನಮ್ಮ ಶಾಸಕರು ಯಾವುದನ್ನು ನಿರೀಕ್ಷೆ ಮಾಡದೆ ತಲತಲಾಂತರದಿಂದ ಧಾಮರ್ಿಕ ಸೇವೆ ಮಾಡಿಕೊಂಡು ಹಿಂದು, ಮುಸಲ್ಮಾನರು ಒಂದೇ ಎಂಬ ಭಾವನೆಯಿಂದ ನಮ್ಮೊಂದಿಗೆ ಇರುವಂತಹವರ ಬಗ್ಗೆ ಅವಹೇಳನದ ಮಾತಿಗೆ ಕಿವಿಗೊಡದೆ ಅವರಲ್ಲಿರುವ ಏಕತೆಗೆ ಗೌರವ ನೀಡಿ, ಬಡವರ ರಕ್ಷಣೆಗೆ ಸದಾ ಸಿದ್ದವಿರುವಂತಹ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತು ಅಧಿಕಾರ ನೀಡಿ ರಾಜ್ಯದ ಪ್ರಗತಿಗೆ ಮುಂದಾಗಿ ಎಂದು ಹೇಳಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ನಡೆಯುವ ಸಂಘರ್ಷ ನಿಲ್ಲಬೇಕು ನಾವ್ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ದೇವರಲ್ಲಿ ಅಜರ್ಿ ಹಾಕಿರಲಿಲ್ಲ ನಮ್ಮ ಜೀವನ ಶೈಲಿಯಲ್ಲಿ ಭಾವೈಕತೆ ಬೆಳಸಿಕೊಂಡರೆ ನಿಜವಾದ ಅರ್ಥ ಸಿಗುವುದಲ್ಲದೆ ಮಾನವ ಸರ್ವಶ್ರೇಷ್ಠರನಿಸಲು ಸಾಧ್ಯವಾಗುತ್ತದೆ, ಒಂದು ಧರ್ಮದಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಧರ್ಮಗಳ ನಡುವೆ ಕಲಹ ಬೆರಸದೆ ಎಲ್ಲಾ ಧರ್ಮಗಳ ಸಮಾನವಾಗಿ ಕಂಡು ಬಾಳಿದರೆ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಜಿಲ್ಲ್ಲಾ ವಕ್ಪ್ ಮಂಡಳಿ ಛೇರ್ಮನ್ ಮುಸ್ತಾಕ್ ಅಹಮದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿ.ರಾಮಯ್ಯ, ಚಂದ್ರಶೇಖರಶೆಟ್ಟಿ, ಮಹಮದ್ಖಲಂದರ್, ರಾಜ್ಯ ಅಲ್ಪಸಂಖ್ಯಾ ಘಟಕ ಕಾರ್ಯದಶರ್ಿ ಶಕಿರ್ ಅಹಮದ್, ಪ್ಯಾರಜಾನ್ ಜಕಾವುಲ್ಲಾ, ಜಲಾಲ್ಸಾಬ್, ಸಿ.ಎಸ್.ನಟರಾಜು, ವರದರಾಜು ಉಪಸ್ಥಿತರಿದ್ದರು.

ಮಹಾಭಾರತದ ಪಾತ್ರಗಳ ವರ್ಣನೆಯನ್ನು ಸೂಫಿಸಂತರು ಅದ್ಭುತವಾಗಿ ಮಾಡುತ್ತಾರೆ: ರೆಹಮತ್ ತರೀಕೆರೆ
ಚಿಕ್ಕನಾಯಕನಹಳ್ಳಿ,ಮಾ.25: ಭಾರತದ ಪರಧರ್ಮ ಸಹಿಷ್ಣುತೆಯನ್ನು ಎತ್ತಿಹಿಡಿಯಲು ಅಸಂಖ್ಯಾತ ಹಿಂದೂ ಮುಸಲ್ಮಾನರು ಭಾವೈಕತೆಯ ಸಂಕೇತದಿಂದ ಉರುಸ್ ಆಚರಣೆಯಲ್ಲಿ ಭಾಗವಹಿಸಿರುವುದು ವಿಶ್ವಕ್ಕೆ ಮಾದರಿ ಎಂದು ಖ್ಯಾತ ಸಾಹಿತಿ ರಹಮತ್ ತರೀಖೆರೆ ವ್ಯಾಖ್ಯಾನಿಸಿದರು.
ಪಟ್ಟಣದ ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ತಾತಯ್ಯನವರ 51 ವಷರ್ಾಚರಣೆಯ ಉರುಸ್ ಅಂಗವಾಗಿ ಅಸ್ಲಂ ಅಕ್ರಂ ಪಾಟರ್ಿ ಮುಜಾಫರ್ ಮತ್ತು ಕರಿಷ್ಮಾ ತಾಜ್ ಪಾಟರ್ಿ ಆಫ್ ನಾಗಪುರ ತಂಡದಿಂದ ಜಿದ್ದಾ ಜಿದ್ದಿನ ಖವ್ವಾಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಡಿ ಚಚರ್್ಗಳಿಗೆ ಹೋಗುವವರಲ್ಲಿ ಸಂಬಂಧ ಪಟ್ಟವರು ಮಾತ್ರ ಹೋಗುತ್ತಾರೆ, ಸೂಫಿ ಸಂತರ ದರ್ಗಕ್ಕೆ ಹಿಂದೂ ಮುಸಲ್ಮಾನ್ ಕ್ರೈಸ್ತರು ಎಂಬ ಬಾವನೆಯನ್ನು ಮರೆತು ಎಲ್ಲರೂ ಹೋಗುವಂತ ಪವಿತ್ರ ಸ್ಥಳ ಈ ಗೋರಿಗಳು, ಇಂತಹ ಸಂತರು ಕೂಡ 12 ಶತಮಾನದ ಕಾಯಕ ಜೀವಿಗಳ ಪರಂಪರೆಯ ಹಾದಿಯಲ್ಲಿ ಬಂದವರು, ಸಂತರಿಗೆ ಮತ ಜಾತಿ ಎಂಬುದಿಲ್ಲ, ಎಲ್ಲಾಧಮರ್ೀಯರೂ ಒಂದೇ ಎಂದು ಸಾರುವ ತಾಣಗಳು ಎಂದರಲ್ಲದೆ, ಧರ್ಮದ ಹೆಸರಲ್ಲಿ ಅಂತಹ ಕಲಹ ಉಂಟು ಮಾಡದೆ ಶಾಂತಿ ನೆಲಸುವಂತಾಗಬೇಕು ಎಂದರು. ಭಾರತದ ಯೋಗಿ ಪರಂಪರೆ ಮತ್ತು ಸೂಫಿ ಪರಂಪರೆ ಒಂದೇ ಆಗಿರುತ್ತದೆ ಉತ್ತರ ಕನರ್ಾಟಕದ ಭಾಗಗಳಲ್ಲಿ ಮುಸಲ್ಮಾನರಿಲ್ಲದ ಊರುಗಳಲ್ಲೇ ಮೊಹರಂ ಹಬ್ಬವನ್ನು ಹೆಚ್ಚು ಆಚರಣೆ ಮಾಡುತ್ತಾರೆ.
ರಾಮಯಣದಲ್ಲಿ ಬರುವ ಪಾತ್ರಗಳನ್ನು ಮುಸ್ಲಿಂ ಧಮರ್ೀಯರಲ್ಲೂ ಅಂತಹ ಹೆಸರು ಹೋಲಿಕೆ ಹೊಂದಿರುವಂತಹವರ ಲಕ್ಷಣಗಳನ್ನು ಸೂಫಿಗಳಲ್ಲಿ ಕಾಠಣಬಹುದು ಅಲ್ಲದೆ ಇಡೀ ಮಹಾಭರತದ ಕತೆಗಳನ್ನು ನಿರರ್ಗಳವಾಗಿ ಹೇಳಿ ಧರ್ಮ ಸಾರುತ್ತಾರೆ ಸೂಫಿ ಸಂತರು, ವಿಶ್ವದ ರಕ್ಷಣೆ ಆಗಬೇಕಾದರೆ ಸೂಫಿ ಮೊಹರಂ ಗಾಯಕರ ಪರಂಪರೆಗಳ ಮೂಲಕ ಸುನಾಮಿಯಂತ ಭಯೋತ್ಪಾದನೆ ತಡೆಯಲು ಸಾಧ್ಯವಾಗುತ್ತದೆ, ದ್ವೇಷ ಹಗೆಯಂತಹ ವಿಷಬೀಜಗಳನ್ನು ಹುಟ್ಟು ಹಾಕದಂತೆ ರಾಜ್ಯಭಾರ ಮಾಡುವವನೇ ನಿಜವಾದ ದೊರೆ ಆಗುವನು, ಧರ್ಮಕ್ಕೆ ಜಿದ್ದಾಜಿದ್ದಿ ಹೆಚ್ಚಿ ದೇಶವನ್ನು ಅಶಾಂತಿಗೆ ತಳ್ಳದಂತೆ ಶಾಂತಿ ಕಾಪಾಡುವ ಪ್ರತಿಯೊಬ್ಬರೂ ಹಿಂದೂ ಮುಸ್ಲಿಂರ ಭಾವೈಕತೆಯನ್ನು ಸಾರುವ ಕೇಂದ್ರಕ್ಕೊಂದು ಬಾರಿ ಭೇಟಿ ನೀಡಬನ್ನಿ ಭಾವೈಕ್ಯತೆ ಸಾರ ಬನ್ನಿ ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಅರಿತು ಬಾಳುವ ಶಕ್ತಿಯನ್ನು ಮಾನವ ಹೊಂದಿದ್ದಾನೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಹೋಗದಂತೆ ರಕ್ತಪಾಕ ತಡೆದು ಸೌಹಾರ್ಧತೆ ಕಾಯಬೇಕು ಎಂದರು.
ರಾಜ್ಯ ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದಶರ್ಿ ಶಕಿಲ್ ಅಹಮದ್ ಮಾತನಾಡಿ ಕಾಯಕ ಮಾಡುವುದರ ಮೂಲಕ ಮೋಕ್ಷ ಕಾಣಬೇಕು ಅನಾಚಾರ ಅನೀತಿ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರ ಮೂಲಕ ಮೋಕ್ಷ ದೊರೆಯುತ್ತದೆ ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಮಾರಂಭ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಟಿ.ರಾಮಯ್ಯ ನಡೆಸಿಕೊಟ್ಟರು. ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಎಮ್.ರಂಗಸ್ವಾಮಯ್ಯ, ಚಂದ್ರಶೇಖರಶೆಟ್ಟಿ, ಹಾಜಿ ಮಹಮದ್ ಖಲಂದರ್, ಮುಕ್ತಿಯಾರ್, ಬಾಬುಸಾಹೇಬ್, ಸಿ.ಬಸವರಾಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕೃತಿ, ಪ್ರಗತಿ ಯಶಸ್ಸಿನ ಧ್ಯೂತಕಗಳು: ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.25: ಸಂಸ್ಕೃತಿ ಹಾಗೂ ಪ್ರಗತಿ ಎಂಬವವು ಒಂದೇ ನಾಣ್ಯದ ಎರಡು ಮುಖಗಳ ಪರಿಚಯಹೊಂದಿರುವ ರಾಜಕಾರಣಿಗಳಿಗೆ ಯಶಸ್ಸು ಖಂಡಿತ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ತಾತಯ್ಯನ ಉರುಸ್ ಆಚರಣೆಯ ಕೊನೆಯ ದಿನದಂದು ಏರ್ಪಡಿಸಿದ್ದ ಡಾ.ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲೋಪಾಸಕನಿಗೆ ವಯಸ್ಸೇ ತಿಳಿಯುವುದಿಲ್ಲ, ಚಿಕ್ಕನಾಯಕನಹಳ್ಳಿ ಕಲಾವಿದರ ಸಮ್ಮಿಲನ ಕೇಂದ್ರವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ವಿಜೃಂಭಣೆಯಿಂದ ನಡೆಯುತಿದ್ದು ನನ್ನಲ್ಲಿ ಕೃತಜ್ಞಾ ಭಾವನೆ ಮೂಡಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಕರ್ಾರದಿಂದ ಆಚರಿಸಿದ ಜಿಲ್ಲಾ ಉತ್ಸವವನ್ನೇ ನಾಚಿಸುವಂತಹ ಕಾರ್ಯಕ್ರಮದ ಮೂಲಕ ಹಲವು ದಶಕಗಳಿಂದ ಅತಿ ವಿಜೃಂಭಣೆಯಿಂದ ಆಚರಿಸಿ ಜನಸಾಗರವನ್ನೇ ಸಮ್ಮಿಲನಗೊಳಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಇಂತಹ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆ. ನಮ್ಮನ್ನಾಳುವಂತಹವರಿಗೆ ಸಂಸ್ಕೃತಿ ಮತ್ತು ಪ್ರಗತಿಯ ಬಗ್ಗೆ ಆಸಕ್ತಿ ಇದ್ದಂತವರಲ್ಲಿ ಬದುಕು ಹಿತವಾಗಿದ್ದು ಜನರ ಅಭಿರುಚಿಗೆ ತಕ್ಕಂತೆ ಬೇಕಿರುವುದನ್ನು ನೀಡುವವರು ಎಂದರು.
ಡಾ.ಪಿ.ಬಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಗೀತ ಸಾಹಿತ್ಯ ದಂಪತಿಗಳಿದ್ದಂತೆ ಇವರೆಡೂ ಒಂದಾದರೇ ಮಾತ್ರ ರಸಿಕರಿಗೆ ಸಂಗೀತ ರುಚಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಕಲೈಲಾಮಣಿ ಎಲ್.ಆರ್.ಈಶ್ವರಿ ಕಲಾವಿದರಾದ ಸಾಧುಕೋಕಿಲ, ಹೇಮಂತ್, ನಂದಿತ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾತನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎ.ಎಸ್.ಪಿ.ಬೋರಲಿಂಗಯ್ಯ, ಜಿ.ಪಂ.ಸದಸ್ಯೆ ಜಾನಮ್ಮ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿದ್ದರು.

Wednesday, March 23, 2011

ಚಿ.ನಾ.ಹಳ್ಳಿಯ ರೇವಣ್ಣ ಮಠ ಹಿರಿಯ ಪ್ರಾಥಮಿಕ ಶಾಲೆ ಪಾಕಶಾಲೆಗೆ ನಿವೇಶನದ ಕೊಡುಗೆ
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ವಿದ್ಯಾಥರ್ಿ ಸಂಖ್ಯೆಯನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, 'ರೇವಣ್ಣ ಮಠ ಹಿರಿಯ ಪ್ರಾಥಮಿಕ ಪಾಠಶಾಲೆ'. ಈ ಪಾಠಶಾಲೆಯು ಸುಮಾರು ಆರು ದಶಕಗಳಿಗೂ ಹಿಂದಿನಿಂದ ಇಲ್ಲಿನ ಶ್ರೀ ರೇವಣ್ಣ ಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು. ಈಗ್ಗೆ ಎರಡು ವರ್ಷಗಳ ಹಿಂದೆ ಶಾಲೆಗೆ ಸಕರ್ಾರಿ ಕಟ್ಟಡವನ್ನು ನಿಮಿಸಬೇಕೆಂಬ ಉದ್ದೇಶದಿಂದ ಸಕರ್ಾರವು ಶಾಲೆಯ ಪರಿಸರದಲ್ಲೇ ನಿವೇಶನವೊಂದನ್ನು ಹುಡುಕಲು ಪ್ರಾರಂಭಿಸಿತು. ಆ ಸಂದರ್ಭದಲ್ಲಿ ಇದೇ ಊರಿನ ನಿವೃತ್ತ ವಾತರ್ಾ ಜಂಟಿ ನಿದರ್ೇಶಕ ಶ್ರೀ ಸಿ.ಕೆ.ಪರಶುರಾಮಯ್ಯನವರು ಶಾಲೆಗೆ ಸೂಕ್ತ ನಿವೇಶನವೊಂದನ್ನು ಹುಡುಕಿ, ಸುಮಾರು ಮೂರು ಲಕ್ಷ ರೂಗಳಿಗೆ ಕೊಂಡು; ತಮ್ಮ ಮಾತಾಪಿತೃ ದಿ.ಚೌಡಿಕೆ ಕರಿಯಪ್ಪ ಮತ್ತು ದಿ.ಸಣ್ಣಮುದ್ದಮ್ಮನವರ ಸ್ಮರಣಾರ್ಥ ಸಕರ್ಾರಕ್ಕೆ ದಾನ ಮಾಡಿದ್ದರು. ಪರಿಣಾಮವಾಗಿ ಈ ಶಾಲೆಗೆ ಈಗ ಸ್ವಂತ ಸಕರ್ಾರಿ ಕಟ್ಟಡದ ಸುಯೋಗ ಒದಗಿ ಬಂದಿದೆ.
ಈ ನಿವೇಶನದಲ್ಲಿ ಈಗಾಗಲೇ ವಿಶಾಲವಾದ ಮೂರು ಕೊಠಡಿಗಳ ನಿಮರ್ಾಣ ಮುಗಿದಿದ್ದು, ಅಲ್ಲಿ ಶಾಲೆಯೂ ನಡೆಯುತ್ತಿದೆ. ಶಾಲೆಯ ಮೇಲಿನ ಅಂತಸ್ತಿನಲ್ಲಿ ಇನ್ನೂ ಮೂರು ಕೊಠಡಿಗಳ ನಿಮರ್ಾಣ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿಗೆ ಕೊಠಡಿಗಳ ಅಗತ್ಯ ಪೂರ್ಣಗೊಳ್ಳುತ್ತದೆ. ಈ ಶಾಲೆಯ ಪರಿಸರದಲ್ಲಿ ವಾಹನಗಳ ಓಡಾಟದ ಒತ್ತಡವಿಲ್ಲದಿರುವುದರಿಂದ ಸುತ್ತಮುತ್ತಣ ಏಳೆಂಟು ಕೇರಿಗಳ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳು ನಿರಾತಂಕವಾಗಿ ಶಾಲೆಗೆ ಬಂದು, ಕಲಿತು ಹೋಗುವ ಸೌಲಭ್ಯವಿದೆ.
ಪ್ರಸ್ತುತ ಈ ಶಾಲೆಗೆ ಮಧ್ಯಾಹ್ನದ ಉಪಾಹಾರ ಸಿದ್ದಪಡಿಸಲು ಪಾಕಶಾಲೆಯ ನಿಮರ್ಾಣಕ್ಕೆ ಶಾಲೆಗೆ ಹೊಂದಿಕೊಂಡಂತೆ ಸೂಕ್ತ ನಿವೇಶನದ ಅಗತ್ಯವಿತ್ತು. ಈ ಕೊರತೆಯನ್ನು ತುಂಬುವ ಸಲುವಾಗಿ ಪಾಕ ಶಾಲೆಗೆ ಪುಟ್ಟ ನಿವೇಶನವೊಂದನ್ನು ಐವತ್ತು ಸಾವಿರ ರೂಗಳಿಗೆ ಕೊಂಡು, ಸಕರ್ಾರಕ್ಕೆ ದಾನವಾಗಿ ನೀಡಿದ್ದಾರೆ ಶ್ರೀ ಸಿ.ಕೆ.ಪರಶುರಾಮಯ್ಯ ದಂಪತಿಗಳು. ಈ ನಿವೇಶನವನ್ನು ಅವರು ತಮ್ಮ ಚಿಕ್ಕಮ್ಮ(ತಾಯಿಯ ತಂಗಿ) ಕೊಟಿಗೆಮನೆ ದಿ.ಸಿ.ಮುದ್ದೇಗೌಡ ಮತ್ತು ದಿ.ಸಿರಿಯಮ್ಮನವರ ಮಗಳು ದಿ. ಸವರ್ೇಯರ್ ಕವಡಿಕೆ ಆಂಜನಪ್ಪನವರ ಧರ್ಮಪತ್ನಿ ದಿ. ಶ್ರೀಮತಿ ಲಕ್ಕಮ್ಮ(ಅವ್ವಣ್ಣಿ)ನವರ ಸ್ಮರಣಾರ್ಥ ದಾನವಾಗಿ ನೀಡಿದ್ದಾರೆ.
ಶ್ರೀಮತಿ ಲಕ್ಕಮ್ಮ ಮದುವೆಯಾದ ಹರೆಯದಲ್ಲೇ, ಕೇವಲ ಆರೆಂಟು ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ನಿಭರ್ಾಗ್ಯೆ. ಆಕೆಯ ದೌಭರ್ಾಗ್ಯವನ್ನು, ಮಾನಸಿಕ ವೇದನೆಯನ್ನು ಮರೆಸಿ ಆಸರೆಯಾದವರು ಸೋದರರಾದ ಕೊಟಿಗೆಮನೆಯ ಸಿ.ಮುದ್ದುಲಿಂಗಯ್ಯ, ಸಿ.ಎಂ.ಗುರುಲಿಂಗಪ್ಪ, ಸಿ.ಎಂ.ರೇವಣ್ಣ- ಇವರೆಲ್ಲರೂ ಆ ಕಾಲಕ್ಕೇ ಎಂ.ಎ., ಬಿ.ಎ., ಬಿ.ಎಸ್ಸಿ(ಆನಸರ್್) ಪದವಿಗಳನ್ನು ಗಳಿಸಿ ಸಕರ್ಾರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಕಿರಿಯ ಮಗ ಸಿ.ಎಂ.ಮುದ್ದುರಾಮೇಗೌಡರು ಮನೆತನದ ಪ್ರತಿಷ್ಠಿತ ರೇವಣ್ಣ ಸಿದ್ದೇಶ್ವರ ಮಠದ ಹರಿವಾಣದ ಗೌಡರು ಹಾಗೂ ಆಕೆಯ ಹಿರಿಯಕ್ಕ ದಿ.ಸಣ್ಣಮುದ್ದಮ್ಮ ಮತ್ತು ಅತ್ತಿಗೆ ದಿ.ಯಲ್ಲಮ್ಮ, ಇವರೆಲ್ಲರ ಅಕ್ಕರೆಯ ಆರೈಕೆ ಮತ್ತು ಹಾರೈಕೆಯಲ್ಲಿ ವೈಧವ್ಯದ ಬರ ಸಿಡಿಲಿನ ನಡುವೆಯೂ ಬದುಕಿನಲ್ಲಿ ಭರವಸೆಯ ಬೆಳಕನ್ನು ಕಂಡುಕೊಂಡ ಆದರ್ಶ ಸಾದ್ವಿ ಶ್ರೀಮತಿ ಲಕ್ಕಮ್ಮ.
ಲಕ್ಕಮ್ಮ ಅದ್ಭುತವಾದ ಪಾಕ ಪ್ರವೀಣೆ. ಯಾವ ಅಡಿಗೆಯು ಯಾವ ಹದದಲ್ಲಿದ್ದರೆ ರುಚಿ ಮತ್ತು ಚಂದ ಎಂಬ ಅಡಿಗೆಯ ರಹಸ್ಯವನ್ನು ಅರಿತವರು. ಅರ್ಧ ಶತಮಾನದಷ್ಟು ಹಿಂದೆ ಮೈಸೂರಿನ ಕೃಷ್ಣಮೂತರ್ಿ ಪುರದಲ್ಲಿದ್ದ ತನ್ನ ಹಿರಿಯಣ್ಣ ಸೀನಿಯರ್ ಅಸಿಸ್ಟೆಂಟ್ ಕಮೀಷನರ್ ಸಿ.ಮುದ್ದಲಿಂಗಯ್ಯನವರ ಮನೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಜನ ಒಂದೇ ಸೂರಿನಡಿ ಸಂತೋಷದಿಂದ ವಾಸಿಸುತ್ತದ್ದ ಒಟ್ಟು ಕುಟುಂಬ. ಅವರಲ್ಲಿ ಮೂರನೆಯ ಎರಡರಷ್ಟು ಜನ ಆ ಕಾಲಕ್ಕೇ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾಥರ್ಿಗಳು. ಜೊತೆಗೆ ಆ ಮನೆಗೆ ಬರುತ್ತಿದ್ದ ಬಂಧು-ಬಾಂಧವರು, ಅತಿಥಿ-ಅಭ್ಯಾಘತರು; ಹೀಗೆ ಸದಾ ಜನರಿಂದ ತುಂಬಿದ್ದ ಗೃಹ. ಅವರೆಲ್ಲರಿಗೂ ಶ್ರೀಮತಿ ಲಕ್ಕಮ್ಮ ತನ್ನ ಅತ್ತಿಗೆ ಶ್ರೀಮತಿ ಎಲ್ಲಮ್ಮ(ದಿ.ಚೌಡಿಕೆ ಕರಿಯಪ್ಪನವರ ಹಿರಿಯ ಮಗಳು) ನವರೊಂದಿಗೆ ಮೂರು ಹೊತ್ತು ಅಷ್ಟು ದೊಡ್ಡ ಅಡಿಗೆಯನ್ನು ಮಾಡಿ ಒಲವಿನಿಂದ ಬಡಿಸುತ್ತಿದ್ದ ಅನ್ನಪೂಣರ್ೆ.
ಈಗ ಸಕರ್ಾರವು ಶಾಲಾ ಮಕ್ಕಳಿಗೆ ಒದಗಿಸುತ್ತಿರುವ ಮಧ್ಯಾಹ್ನದ ಉಪಾಹಾರ ಸಿದ್ಧತೆಯ ಕೊಠಡಿಗೆ ಪಾಕಪ್ರವೀಣೆ ಶ್ರೀಮತಿ ಲಕ್ಕಮ್ಮನವರ ಹೆಸರಿನಲ್ಲಿ ನಿವೇಶನವನ್ನು ನೀಡಿರುವುದು ಆಕೆಯ ತ್ಯಾಗ ಜೀವನಕ್ಕೆ ಸಂದ ಗೌರವವಾಗಿದೆ. ತಮ್ಮ ಚಿಕ್ಕಮ್ಮನ ಸ್ಮರಣೆಗೆ ಪುಟ್ಟ ಕೊಡಿಗೆಯನ್ನು ನೀಡಿರುವ ಸಿ.ಕೆ.ಪರಶುರಾಮಯ್ಯ ದಂಪತಿಗಳ ಕಲ್ಪನೆ ಮತ್ತು ಕೈಂಕರ್ಯಕ್ಕೆ ಈ ಕೊಡುಗೆ ಸಾಕ್ಷಿಯಾಗಿದೆ.
ಈ ನಿವೇಶನ ನೀಡಿಕೆಯ ಪುಟ್ಟ ಸರಳ ಸಮಾರಂಭವು ದಿ.21.03.11ರಂದು ಶ್ರೀ ರೇವಣ್ಣಸಿದ್ದೇಶ್ವರ ಮಠದ ಶ್ರೀಗುರು ಸನ್ನಿಧಿಯಲ್ಲಿ ನಡೆಯಿತು. ಶಾಲಾ ಶಿಕ್ಷಕ ವರ್ಗ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅವರು ಸಿ.ಕೆ.ಪರಶುರಾಮಯ್ಯನವರಿಂದ ಸಕರ್ಾರದ ಪರವಾಗಿ ನಿವೇಶನ ದಾನ ಪತ್ರವನ್ನು ಸ್ವೀಕರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯರಾದ ಎಸ್.ಮುರಡಯ್ಯನವರು ವಹಿಸಿದ್ದರು. ನಿವೃತ್ತ ಹಿರಿಯ ಶಿಕ್ಷಕರಾದ ಜಿ.ತಿಮ್ಮಯ್ಯನವರು ಸಂದರ್ಭಕ್ಕೆ ಉಚಿತವಾದ ಮಾತನಾಡಿ, ಶಿಕ್ಷಕರ ಜವಬ್ದಾರಿಯನ್ನು ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಸಿ.ಕೆ.ಪರಶುರಾಮಯ್ಯನವರು ತಮ್ಮ ಬಾಲ್ಯದ ಶಾಲಾದಿನಗಳನ್ನು ಮೆಲಕು ಹಾಕುತ್ತಾ ಹಳೆಯ ಶಿಕ್ಷಕರ ವೃತ್ತಿನಿಷ್ಠೆ ಮತ್ತು ಸೇವಾ ಮನೋಭಾವವನ್ನು ಮೆಲುಕು ಹಾಕಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲೋತ್ತಮೆ ಸ್ವಾಗತಿಸಿದರು, ಶಿಕ್ಷಕಿ ಚಂದ್ರಮತಿ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಮಾ.22: ಪಟ್ಟಣದ ಶೆಟ್ಟಿಕೆರೆ ಗೇಟ್ ವಾಡರ್್ ನಂ.9ರ ಹಳೇ ಆಸ್ಪತ್ರೆ ಹಿಂಭಾಗದಲ್ಲಿರುವ ಸಾರ್ವಜನಿಕರ ಶೌಚಾಲಯಕ್ಕೆ ಮಾಜಿ ಅಧ್ಯಕ್ಷ ರಾಜಣ್ಣನವರು ತಮಗೆ ಬೇಕಾದ ಖಾಸಗಿ ವ್ಯಕ್ತಿಗೆ ಶೌಚಾಲಯದ ಕೀ ಕೊಟ್ಟು ಉಪಯೋಗಿಸಿಕೊಳ್ಳಲು ನೀಡಿದ್ದು ಸಾರ್ವಜನಿಕರಿಗೆ ಅನ್ಯಾಯವೆಸಗಿದ್ದಾರೆಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಆರೋಪಿಸಿದ್ದಾರೆ.
ಕನರ್ಾಟಕ ಕೊಳಚೆ ನಿಮರ್ೂಲನ ಮಂಡಳಿಯು ನೈರ್ಮಲ್ಯವನ್ನು ಕಾಪಾಡಲು ಸಾರ್ವಜನಿಕರಿಗೆ ಶೌಚಾಲಯವನ್ನು ನೀಡಿದೆ ಆದರೆ ಇಲ್ಲಿನ ಮಾಜಿ ಅಧ್ಯಕ್ಷರು ಸಾರ್ವಜನಿಕರ ವಿರುದ್ದವಾಗಿ ತಮಗೆ ಬೇಕಾದವರಿಗೆ ಕೀ ನೀಡಿದ್ದಾರೆ ಎಂದು ಸಾರ್ವಜನಿಕರು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿಯವರ ಬಳಿ ಹೇಳಿದಾಗ, ಅವರು ಪುರಸಭೆ ಮುಖ್ಯಾಧಿಕಾರಿಗಳ ಬಗ್ಗೆ ಈ ವಿಷಯವಾಗಿ ಚಚರ್ಿಸಿದರು, ಆದರೆ ಮುಖ್ಯಾಧಿಕಾರಿಗಳು ನಮ್ಮ ಗಮನಕ್ಕೆ ಈ ವಿಷಯ ಬಂದಿಲ್ಲ ಎಂದು ಸಬೂಬು ಹೇಳಿದರು ಎಂದರೆಂದು ಆರೋಪಿಸಿದರಲ್ಲದೆ ಮಾಜಿ ಪುರಸಭಾಧ್ಯಕ್ಷ ರಾಜಣ್ಣನವರ ಬಳಿಯೂ ಈ ವಿಷಯವಾಗಿ ಚಚರ್ಿಸಿದಾಗ ಕರವೇ ಅಧ್ಯಕ್ಷ ಮತ್ತು ಪುರಸಭಾಧ್ಯಕ್ಷರಿಬ್ಬರಿಗೂ ಮಾತಿನ ಚಕಮಕಿ ಉಂಟಾಯಿತು, ಸ್ಥಳದಲ್ಲೇ ಇದ್ದ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ಇಬ್ಬರನ್ನು ಸಮಾಧಾನ ಪಡಿಸಿ ನಾಳೆಯಿಂದಲೇ ಸಾರ್ವಜನಿಕರಿಗೆ ಶೌಚಾಲಯ ಉಪಯೋಗಿಸಲು ಅನುಮತಿ ನೀಡುತ್ತೇವೆ ಎಂದು ಒಪ್ಪಿಕೊಂಡರು. ಘಟನಾ ಸ್ಥಳದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಮುಖ್ಯಾಧಿಕಾರಿ ಹೊನ್ನಪ್ಪ ಇದ್ದರು.

ಚಿಕ್ಕನಾಯಕನಹಳ್ಳಿ.ಮಾ.22: ತಾಲೂಕು ಕಾನೂನು ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಇದೇ 25ರಂದು ಕಾನೂನು ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಗಾರವನ್ನು ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದು
ಜಿಲ್ಲಾ ಸತ್ರ ನ್ಯಾಯಾದೀಶ ಜಿ.ವಿ.ಅಂಗಡಿ ಹಿರೇಮಠ್ ಉದ್ಘಾಟನೆ ನೆರವೇರಿಸಲಿದ್ದು ರಾಜ್ಯ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ, ಎನ್.ಶೀಲಾ, ರಾ.ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎಸ್.ಯೋಗೀಶ್ ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ಗೋಪಾಲಕೃಷ್ಣ ಉಪಸ್ಥಿತರಿರುವರು.

Saturday, March 19, 2011

ದಿನದ ಲೆಕ್ಕದಲ್ಲಿ ಅಧಿಕಾರ ಹಿಡಿಯುವ ಅಧ್ಯಕ್ಷರಿಂದ ಪುರಸಭೆ ಅಭಿವೃದ್ದಿ ಸಾಧ್ಯವಿಲ್ಲ: ಸಿ.ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.19: 180 ದಿನಕ್ಕೆ ಒಬ್ಬೊಬ್ಬರಂತೆ ಚಿ.ನಾ.ಹಳ್ಳಿಯ ಪುರಸಭೆಯ ಅಧ್ಯಕ್ಷರ ಬದಲಾವಣೆಯಾಗುತ್ತಿದ್ದು ಪಟ್ಟಣದ ಯಾವುದೇ ಅಭಿವೃದ್ದಿಯಾಗುತ್ತಿಲ್ಲ, ಈ ರೀತಿ ದಿನದ ಲೆಕ್ಕದಲ್ಲಿ ಬದಲಾಗುತ್ತಿರುವ ಅಧ್ಯಕ್ಷರ ಚುನಾವಣೆಯನ್ನು ವಿರೋಧ ಪಕ್ಷದವರು ಬಹಿಷ್ಕರಿತ್ತೇವೆ ಎಂದು ಪುರಸಭಾ ವಿರೋಧ ಪಕ್ಷದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಸಾರ್ವಜನಿಕರು 17 ಜನ ಜೆ.ಡಿ.ಎಸ್ ಸದಸ್ಯರನ್ನು ಆಯ್ಕೆ ಮಾಡಿ 6ಜನ ವಿರೋಧ ಪಕ್ಷದ ಸದಸ್ಯರನ್ನು ಆರಿಸಿ ಕಳುಹಿಸಿದ್ದು ಅವರಲ್ಲಿ 6 ಸದಸ್ಯರನ್ನು ಅಧ್ಯಕ್ಷರನ್ನಾಗಿ 4ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಕೇವಲ ಮೂರು ವರ್ಷಗಳಲ್ಲಿ ಬದಲಾಯಿಸಿದ್ದು, ನಮ್ಮ ಪುರಸಭೆ ಮಾತ್ರ 12ಜನ ಅಧಿಕಾರ ಹಿಡಿದರೂ ಅಭಿವೃದ್ದಿಯಾಗದೇ ಹಿಂದುಳಿದಿದೆ ಎಂದಿರುವ ಅವರು, ಸಕರ್ಾರದಿಂದ ಕೋಟಿಗಟ್ಟಲೇ ಅನುದಾನ ಬಂದರೂ ಪಟ್ಟಣ ಅಭಿವೃದ್ದಿಯಾಗದೆ ಅಧಿಕಾರಸ್ಥರು ಮಾತ್ರ ಅಭಿವೃದ್ದಿಯಾಗುತ್ತಿದ್ದಾರೆ, ಈ ಕಾರಣ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಇನ್ನಾದರೂ ದೀರ್ಘಕಾಲದ ಅಧ್ಯಕ್ಷರ, ಉಪಾಧ್ಯಕ್ಷರನ್ನು ನೇಮಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಬೇಕು ಮತ್ತು ಪಟ್ಟಣದ ನೈರ್ಮಲ್ಯ , ಕುಡಿಯುವ ನೀರಿನ ವ್ಯವಸ್ಥೆ ಶೋಚನಿಯವಾಗಿದೆ ಅದರ ಬಗ್ಗೆ ಗಮನಿಸಬೇಕು ಎಂದಿದ್ದಾರೆ.

ಬ್ಯಾಲಕೆರೆಮ್ಮನ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.19: ಬ್ಯಾಲದಕೆರೆ, ಮಾಳಿಗೆಹಳ್ಳಿ ಕಸಬಾ ಹೋಬಳಿಯ ಕೆಂಪಮ್ಮ ದೇವರ ಜಾತ್ರಾಮಹೋತ್ಸವವನ್ನು ಇದೇ 19ರಿಂದ 30ರವರಗೆ ಏರ್ಪಡಿಸಲಾಗಿದೆ.
19ರಂದು ಧ್ವಜಾರೋಹಣ, 23ರಂದು ಅಮ್ಮನವರ ಮದನಗಿತ್ತಿ ಶಾಸ್ತ್ರ, 25ರಂದು ಅಮ್ಮನವರ ಆರತಿ ಬಾನ, 26ರಂದು ಕೆಂಪಮ್ಮದೇವಿಯವರಿಗೆ ಆರತಿ, 28ರಂದು ಗ್ರಾಮದೇವತೆಗಳ ಆಗಮನ, 29ರಂದು ದೇವರ ಗಂಗಾಸ್ನಾನ, ರಥೋತ್ಸವ ಮತ್ತು ಸಿಡಿ, 30ರಂದು ಅಮ್ಮನವರಿಗೆ ಓಕಳಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.
ನವೋದಯ ಕಾಲೇಜ್ನ ಜಾನಪದ ತಂಡಕ್ಕೆ ಅಧಿಕ ಬಹುಮಾನಗಳು
ಚಿಕ್ಕನಾಯಕನಹಳ್ಳಿ,ಮಾ.:19: ತಾಲೂಕಿನ ನವೋದಯ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು ಕೆ.ಬಿ.ಕ್ರಾಸ್ನ ರಂಭಾಪುರಿ ಮಠದ ಆವರಣದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಕಾಲೇಜಿನ ವಿದ್ಯಾಥರ್ಿಗಳು ಸ್ಪಧರ್ೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸ್ಪಧರ್ೆಗಳಲ್ಲಿ ಪಾಲ್ಗೊಂಡು ವಿಜಯಶಾಲಿಯಾದವರೆಂದರೆ ಅನಿಲ್ಕುಮಾರ್-ಜಾನಪದ ನೃತ್ಯ, ಮಧು-ಗೀಗೀ ಪದ, ರಂಗಸ್ವಾಮಿ-ಕೋಲಾಟ, ರವಿಕುಮಾರ್-ಕೋಲಾಟ, ವಿನಯ್ಕುಮಾರ್ ಚರ್ಮವಾಧ್ಯ, ಹರೀಶ್ ಜಾನಪದ ಗೀತೆ, ನಾಗರಾಜ-ಲಾವಣಿ, ರಂಗನಾಥ-ಭಾವಗೀತೆ, ಅನ್ನಪೂರ್ಣ-ಜಾನಪದ ನೃತ್ಯ, ಪುಷ್ಪ ಗೀಗೀಪದ, ಪ್ರತಿಭಾ-ಭಜನೆ, ಅಶ್ವಿನಿ-ಸೋಬಾನೆ ಪದ, ಲಾವಣಿ-ಅನ್ನಪೂರ್ಣ, ಭಾವಗೀತೆ-ಅಶ್ವಿನಿ, ಲಾವಣಿ-ಅಶ್ವಿನಿ, ರಾಗಿಬೀಸೋ ಪದ-ಅನ್ನಪೂರ್ಣ, ಕೋಲಾಟ-ಅನಿಸಾ ಬಾನು, ಭಾವಗೀತೆ-ಪ್ರತಿಭಾ ಎಂ.ಎನ್ ಪ್ರಶಸ್ತಿಗಳ್ನು ಪಡೆದು ಶಿವಮೊಗ್ಗದಲ್ಲಿ ನಡೆಯಲಿರುವ ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ ಮತ್ತು ಪ್ರೊ.ಎಸ್.ಎಲ್.ಶಿವಕುಮಾರಸ್ವಾಮಿ ಇವರನ್ನು ಅಭಿನಂದಿಸಿದ್ದಾರೆ.
ಕೋಪ ಬೆಂಕಿಗೆ ಸಮಾನ
ಚಿಕ್ಕನಾಯಕನಹಳ್ಳಿ,ಮಾ.19 : ಕೋಪ ಮಾಡಿಕೊಂಡರೆ ತನ್ನನ್ನೇ ತಾನು ಹಿಂಸಿಸಿದಂತಾಗುತ್ತದೆ ಕೋಪವೆಂಬ ಬೆಂಕಿಯನ್ನು ಇತರರಿಗೆ ಎಸೆಯುವ ಮುನ್ನ ನಿಮ್ಮನ್ನೇ ಸುಡುವುದನ್ನು ಎಚ್ಚರಿಕೆಯಿಂದ ಗಮನಿಸಿ ಎಂದು ಭಾರತ ಕ್ರಿಕೆಟ್ ತಂಡದ ಯೋಗಗುರು ಯೋಗರತ್ನ ಡಾ.ಎಸ್.ಎನ್.ಓಂಕಾರ್ರವರು ವ್ಯಾಖ್ಯಾನಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯಾಥರ್ಿಗಳೆಲ್ಲರ ಮನ ಸೂರೆಗೊಂಡು ಯಶಸ್ವಿಗೊಳಿಸಿದರು. ಖ
ಸಮಾರಂಭದಲ್ಲಿ ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ, ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.

Tuesday, March 15, 2011

ತಾತಯ್ಯನವರ 51ನೇ ಉರುಸ್ ಮತ್ತು ಉತ್ಸವ
ಚಿಕ್ಕನಾಯಕನಹಳ್ಳಿ,ಮಾ.13: 51ನೇ ವರ್ಷದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್ ಮತ್ತು ತಾತಯ್ಯನವರ ಉತ್ಸವ ಕಾರ್ಯಕ್ರಮವನ್ನು ಇದೇ 21ರಿಂದ 23ರ ವರಗೆ ನಡೆಯಲು ಗೋರಿಯ ಕಮಿಟಿ ನಡೆಸಲು ತಿಮರ್ಾನಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಉತ್ಸವ ನಡೆಯಲಿದ್ದು 21ರಂದು ತಾತಯ್ಯನವರ ಉತ್ಸವ ಗೋರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ, 22ರಂದು ರಾತ್ರಿ ಹೈಸ್ಕೂಲ್ ಮೈದಾನದಲ್ಲಿ ಅಸ್ಲಂ ಅಕ್ರಮ್ ಸಾಬ್ರಿ ಪಾಟರ್ಿ ಮುಜಫ್ಫರ್ ಪುರ್ ಹಾಗೂ ಕರೀಷ್ಮಾ ತಾಜ್ ನಾಗಪುರ್ ಪಾಟರ್ಿ ಯವರಿಂದ ಜಿದ್ದಾ ಜಿದ್ದಿನ ಖವ್ವಾಲಿ ಏರ್ಪಡಿಸಲಾಗಿದ್ದು ಖವ್ವಾಲಿಯ ಉದ್ಘಾಟನೆಯನ್ನು ಖ್ಯಾತ ಸಾಹಿತಿ ರೆಹಮತ್ ತರೀಖೆರೆ ರವರು ಉದ್ಘಾಟನೆ ನೆರವೇರಿಸಲಿದ್ದು ಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, 23ರಂದು ಅಂತರಾಷ್ಟ್ರೀಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರವರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ
ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ರಂಗಸ್ವಾಮಯ್ಯ, ಮಹಮದ್ ಖಲಂದರ್, ಟಿ.ರಾಮಯ್ಯ, ಖನ್ನಿಸಾಬ್ ಉಪಸ್ಥಿತರಿದ್ದರು.
.ಸಕರ್ಾರದ ಯೋಜನೆಗಳು ಈಡೇರಲು ಸಫಲವಾಲಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಗಳು ತರುವ ಯೋಜನೆಗಳು ಕೇವಲ ಘೋಷಣೆಗಳಾಗುತ್ತವೆಯೇ ಹೊರತು ಫಲನಾಭವಿಗಳಿಗೆ ಸರಿಯಾಗಿ ತಲುಪುವಲ್ಲಿ ವಿಫಲವಾಗಿವೆ ಎಂದು ಕನರ್ಾಟಕ ಜನವಾದಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಕೆ.ಎನ್.ವಿಮಲಾ ವಿಷಾದಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನಾ ಮಹಿಳಾ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಚರ್್ 8ರಂದು ನ್ಯೂಯಾಕರ್್ ನಗರದಲ್ಲಿ ಉತ್ತಮ ವೇತನ, ಶೋಷಣೆಯ ವಿರುದ್ದ, ಸಮನಾದ ಹಕ್ಕುಗಳಿಗಾಗಿ ಮಹಿಳೆಯರು, ಜವಳಿ ಕಾಮರ್ಿಕರು ಸಂಘಟಿತರಾಗಿ ಪ್ರತಿಭಟಿಸಿದ ದಿನ, ಬೀದಿಗೆ ಇಳಿದು ಹೋರಾಟ ಮಾಡಿದ ನೆನಪಿಗಾಗಿ ವಿಶ್ವಸಂಸ್ಥೆಯ ನಿರ್ಣಯದಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಘೋಷಿಸಿದರು, ಮಹಿಳೆಯರಿಗೆ ಶಿಕ್ಷಣ ಉದ್ಯೋಗ, ಸಂವಿದಾನ ದತ್ತವಾದ ಮೀಸಲಾತಿ ಸಿಗುತ್ತಿಲ್ಲ, ಮಹಿಳೆಯರು ಶಿಕ್ಷಣ ಉದ್ಯೋಗದಲ್ಲಿ ಆಥರ್ಿಕವಾಗಿ ಸಫಲರಾದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ, ಹೆಣ್ಣು ಮಕ್ಕಳ ವಿರುದ್ದ ದೌರ್ಜನ್ಯ, ಅತ್ಯಾಚಾರ, ಶೋಷಣೆಗಳು ನೆಡಯುವುದು ಸ್ತ್ರೀ ಜಾತಿಗೆ ಅಪಮಾನ ಇಂತಹ ಘಟನೆಗಳ ನಡೆಯದಂತೆ ಸಕರ್ಾರ ಹಾಗೂ ಜನಪ್ರತಿನಿಧಿಗಳು ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಬೇಕು ಎಂದ ಅವರು ಹುಟ್ಟಿದ ಪ್ರತಿಯೊಂದು ಮಗುವಿಗೂ ಸೌಲಭ್ಯಗಳು ಸಿಗುವಂತಾಗಬೇಕು, ದೇಶದ ಗೋದಾಮುಗಳಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ ವಿತರಣೆ ಸರಿಯಾಗಿ ಆಗದೆ ಜನರಿಗೆ ಸಮಯಕ್ಕೆ ಸರಿಯಾಗಿ ಆಹಾರ ದೊರಕದೆ ನರಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಾಥಾವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು. ಮಹಿಳೆಯರು ನೆಹರು ಸರ್ಕಲ್ ಬಳಿ ಮೆರವಣಿಗೆಯ ಮೂಲಕ ಮಾನವ ಸರಪಳಿ ನಿಮರ್ಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಲಕ್ಷ್ಮಮ್ಮ, ಪೂರ್ಣಮ್ಮ, ಶಾಂತಮ್ಮ, ಪಂಕಜ ಚಂದ್ರಶೇಖರ್, ಗಂಗಮ್ಮರವರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಪ್ರಗತಿಪರ ಬರಹಗಾತರ್ಿ ವಿ.ಗಾಯಿತ್ರಿ, ಜಿ.ಪಂ.ಸದಸ್ಯೆ ಲೋಹಿತಾಬಾಯಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ಪುರಸಭಾ ಸದಸ್ಯರಾದ ಧರಣಿ ಲಕ್ಕಮ್ಮ, ರುಕ್ಮುಣಮ್ಮ, ಸಾವಿತ್ರಿ, ರೇಣುಕಮ್ಮ, ಇಂದ್ರಮ್ಮ ಉಪಸ್ಥಿತರಿದ್ದರು.
ದರ್ಶಗಳನ್ನು ಪಾಲಿಸಲು ವಿದ್ಯಾಥರ್ಿಗಳಿಗೆ ಕರೆ
ಚಿಕ್ಕನಾಯಕನಹಳ್ಳಿ,ಮಾ.14: ವಿದ್ಯಾಥರ್ಿಗಳು ಶಿಕ್ಷಕರ ಆದರ್ಶಗಳನ್ನು ಅನುಸರಿಸಿ ಜೀವನದಲ್ಲಿ ಮುಂದೆ ಬಂದು ಬದುಕನ್ನು ಹಸನುಗೊಳಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ ಅಂತಹ ಶಿಕ್ಷಕರು ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶತಮಾನ ಕಂಡ ಕುರುಬರ ಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಪ್ರಥಮ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಓದಿದ ಶಾಲೆ ಹಾಗೂ ಪಾಠಹೇಳಿಕೊಟ್ಟ ಶಿಕ್ಷಕರು ನಮ್ಮನ್ನು ಪೋಷಿಸಿದ ಪೋಷಕರಷ್ಟೇ ಪ್ರಮುಖರು ಎಂದ ಅವರು ತಮಗೆ ಪಾಠ ಹೇಳಿದ ಶಿಕ್ಷಕರ ಆದರ್ಶವೇ ನಮಗೆ ದಿಕ್ಸೂಚಿ ಆಯಿತು ಎಂದರು.
ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳಂತೆ ಇತರ ಶಾಲೆಯ ಹಿರಿಯ ವಿದ್ಯಾಥರ್ಿಗಳು ಸಂಘಟಿತರಾಗಿ ಶಾಲೆಯ ಅಬ್ಯುದಯಕ್ಕೆ ಶ್ರಮಿಸಿದರೆ ಶಾಲೆಗಳು ಸುಂದರಗೊಳಿಸುವ ಜೊತೆಗೆ ಆ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ ಎಂದರು.
ಕುರುಬರಶ್ರೇಣಿ ಶಾಲೆಗೆ ಆ ಶಾಲೆಯ ಹಿರಿಯ ವಿದ್ಯಾಥರ್ಿಗಳಾದ ಕ್ಯಾಪ್ಟನ್ ಸೋಮಶೇಖರ್ ಹಾಗೂ ಸಿ.ಪಿ.ಮಹೇಶ್ರವರು ಕೊಟ್ಟಿರುವ ನಿವೇಶನಕ್ಕೆ ಅಗತ್ಯ ಅನುದಾನವನ್ನು ನೀಡಿ ಉತ್ತಮ ಕೊಠಡಿ ನಿಮರ್ಿಸಲಾಗುವುದು ಎಂದರು.
ಸಮಾರಂಭದಲ್ಲಿ ಪ್ರತಿಭಾನ್ವಿನ ವಿದ್ಯಾಥರ್ಿಗಳನ್ನು ಪುರಸ್ಕರಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಎ.ಸಿ.ಕ್ಯಾಪ್ಟನ್ಸೋಮಶೇಖರ್ ಮಾತನಾಡಿ ಹಿರಿಯ ವಿದ್ಯಾಥರ್ಿಗಳೆಲ್ಲಾ ಒಂದು ಕಡೆ ಸೇರಿ ತಾವು ಓದಿದ ಶಾಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಸಲುವಾಗಿ ಈ ಸಂಘ ಅಸ್ತಿತ್ವಕ್ಕೆ ಬಂದಿತು ಎಂದರಲ್ಲದೆ ಈ ಶಾಲೆಯ ಶತಮಾನ ಕಂಡ ಸಂದರ್ಭದಲ್ಲಿ ಎರಡು ಮೂರು ತಂಡಗಳು ಶತಮಾನೋತ್ಸವ ಆಚರಿಸಲು ಮುಂದಾದವು ಆದರೆ ವ್ಯವಸ್ಥಿತವಾಗಿ ಸಂಘಟಿತರಾಗಲು ಸಾಧ್ಯವಾಗಲಿಲ್ಲ, ಆದರೆ ಶತಮಾನೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿತಲ್ಲದೆ, ಪ್ರಥಮ ವಾಷರ್ಿಕೋತ್ಸವವನ್ನು ಆಚರಿಸಿ ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಾಗುತ್ತಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಇಂದು ಗ್ರಾಮೀಣ ಭಾಗದ ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ಮುಂದಿಟ್ಟುಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ನಮ್ಮೂರಿನ ಶಾಲೆಗಳು, ವಿದ್ಯಾಥರ್ಿಗಳನ್ನು ಆಕಷರ್ಿಸುವಂತೆ ಮಾಡುವ ಮೂಲಕ ವಲಸೆ ಹೋಗುವ ಪ್ರವೃತ್ತಿ ತಪ್ಪಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ರಂಗಯ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಸಿ.ಎಸ್.ಬನಶಂಕರಯ್ಯ, ಆರ್.ಬಿ.ಐ ಕೆ.ಜಿ.ರಾಜೇಂದ್ರ, ಸಿ.ಗುರುಮೂತರ್ಿ, ಮು.ಶಿ.ಎಸ್.ಗಂಗಾಧರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕುರುಬರಶ್ರೇಣಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಎನ್.ನರಸಿಂಹಯ್ಯ, ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ವೀಣಾ ಹಾಗೂ ಹರೀಶ್ ಎಂಬ ವಿದ್ಯಾಥರ್ಿಗಳನ್ನು ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಗೀತಾ ಪ್ರಾಥರ್ಿಸಿದರೆ, ರಾಜೀವ್ ಸ್ವಾಗತಿಸಿ, ದೇವರಾಜ್ ಸಂಘದ ವರದಿ ವಾಚಿಸಿದರು, ಪುರಷೋತ್ತಮ್ ನಿರೂಪಿಸಿ ಬನಶಂಕರಯ್ಯ ವಂದಿಸಿದರು.

ಅರಿವಿನ ಮೂಲಕ ಏಡ್ಸ್ ಗುಣಪಡಿಸಿ
ಚಿಕ್ಕನಾಯಕನಹಳ್ಳಿ,ಮಾ.14: ಏಡ್ಸ್ ರೋಗವನ್ನು ಅರಿವಿನ ಮೂಲಕ ಗುಣ ಪಡಿಸಬಹುದೇ ಹೊರತು ಔಷದಿ ಮೂಲಕ ಗುಣ ಪಡಿಸಲು ಸಾಧ್ಯವಿಲ್ಲ ಎಂದು ಐ.ಸಿ.ಟಿ.ಸಿ ಆಪ್ತ ಸಲಹಾಗಾರ ನವೀನ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1983ರಲ್ಲಿ ಅಮೇರಿಕದಲ್ಲಿ ಮೊದಲು ಪತ್ತೆಯಾದ ಏಡ್ಸ್ ರೋಗ ಮನುಷ್ಯನಲ್ಲಿ ಮಾತ್ರ ಕಂಡು ಬಂದಿದೆ, ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಈ ರೋಗ ಬಹಳ ಅಪಾಯಕಾರಿಯಾಗಿ ಸಾವಿನ ದವಡೆಗೆ ಎಳೆದೊಯ್ಯುತ್ತದೆ ಎಂದ ಅವರು ಏಡ್ಸ್ ರೋಗವು ಮನುಷ್ಯನಲ್ಲಿ ಕಂಡು ಬಂದರೆ ಕನಿಷ್ಠ 6ವರ್ಷ ಬದುಕುವ ಸಾಧ್ಯತೆ ಇದ್ದು ಏಡ್ಸ್ ರೋಗದಿಂದ ಹಲವಾರು ಕಾಯಿಲೆಗಳು ಕಾಣದೆ ದೇಹದೊಳಗೆ ಸೇರಿ ಚಿಕಿತ್ಸೆ ಪಡೆದರೂ ಗುಣಪಡಿಸಲಾಗುವುದಿಲ್ಲ ಎಂದರು.
ಈ ರೋಗವು ಲೈಂಗಿಕತೆ, ಏಡ್ಸ್ ರೋಗದವನ ರಕ್ತ ಪಡೆಯುವುದರಿಂದ, ಏಡ್ಸ್ ರೋಗಿ ತಾಯಿಯು ತನ್ನ ಮಗುವಿಗೆ ಹಾಲುಣಿಸುವಾಗ, ಏಡ್ಸ್ ರೋಗಿಗೆ ಬಳಸಿದ ಸಿರಂಜನ್ನು ಬೇರೊಬ್ಬ ವ್ಯಕ್ತಿಗೆ ಬಳಸುವುದರಿಂದ ರೋಗವು ಹರಡಲಿದ್ದು ಈ ರೋಗದ ಬಗ್ಗೆ ಅರಿವನ್ನು ಪಡೆಯಲು ಸಲಹೆ ನೀಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಏಡ್ಸ್ ರೋಗದಿಂದ ಆಗುವ ತೊಂದರೆಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶಿವಲಿಂಗಮೂತರ್ಿ, ಸುರೇಶ್, ಚಂದ್ರಶೇಖರ್, ಪ್ರಸನ್ನಕುಮಾರ್, ಮಹೇಶ್ ಉಪಸ್ಥಿತರಿದ್ದರು.
ಗ್ರಾಹಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಮೋಸಹೋಗುವುದು ಖಂಡಿತ
ಚಿಕ್ಕನಾಯಕನಹಳ್ಳಿ,ಮಾ.15: ಗ್ರಾಹಕರು ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದಾಗ ಪ್ರತಿಯಾಗಿ ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಂಡು ನ್ಯಾಯ ದೊರಕಿಸಿಕೊಳ್ಳಬೇಕು, ಪ್ರಶ್ನಿಸಿದರೂ ಮೋಸವಾದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬೇಕು ಎಂದು ಜಿಲ್ಲಾ ಗ್ರಾಹಕ ಜಾಗೃತಿ ಹಕ್ಕು ಕಾರ್ಯದಶರ್ಿ ಟಿ.ಎಸ್.ನಿರಂಜನ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮದ್ಯಮ ಹಾಗೂ ಕೆಳ ವರ್ಗದವರ ಮೇಲೆ ಹೆಚ್ಚು ವಂಚನೆಗಳು ನಡೆಯುತ್ತಿದ್ದು ಈ ವಂಚನೆಗೆ ಒಳಗಾದವರು ಕೇಂದ್ರ ಮತ್ತು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದರೆ 90ದಿನಗಳ ಒಳಗಾಗಿ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದ ಅವರು ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ರಸೀತಿಗಳನ್ನು ಮರೆಯದೇ ಪಡೆಯಬೇಕು, ಅಲ್ಲಿ ಮೋಸವಾದರೆ ಗ್ರಾಹಕ ನ್ಯಾಯಾಲಯ ಗ್ರಾಹಕರ ನೆರವಿಗೆ ಬರುತ್ತದೆ ಎಂದರು.
ಗ್ರಾಹಕ ದಿನಾಚರಣೆಯನ್ನು ಜನಸಾಮಾನ್ಯರಿಗೆ ಪಸರಿಸುವದಕ್ಕೆ ಕಾಟಾಚಾರಕ್ಕೆ ನಡೆಯುತ್ತಿದ್ದ ಗ್ರಾಹಕ ದಿನಾಚರಣೆಯನ್ನು ಎಲ್ಲೆಡೆ ಸಮಾರಂಭಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಅವರು ನಾವು ಸಕರ್ಾರಕ್ಕೆ ಕಟ್ಟಿದಂತಹ ತೆರಿಗೆ ಹಣವನ್ನು ಹಾಗೂ ಸರಿಯಾಗಿ ಸರಬರಾಜಾಗದಂತಹ ವಿದ್ಯುತ್ ಈ ಎರಡು ಅಂಶಗಳನ್ನು ಜನಸಾಮಾನ್ಯರು ಪ್ರಶ್ನಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಹೆಗಡೆ ನಗರೆ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಗ್ರಾಹಕರು ತುಳಿತಕ್ಕೆ ಒಳಗಾಗುತ್ತಿದ್ದಾರೆ, ತುಳಿತಕ್ಕೆ ಒಳಗಾದವರಿಗೆ ಪ್ರತಿ ಜಿಲ್ಲೆಯಲ್ಲಿರುವ ಗ್ರಾಹಕರ ವೇದಿಕೆ ನೆರವಾಗಲಿದೆ ಎಂದ ಅವರು ನಾವು ಸಾರ್ವಜನಿಕರಿಗಾಗಿ ಮಾಡುವ ಕೆಲಸಗಳಿಗೆ ಸಕರ್ಾರ ಬೆಂಬಲವಾಗಿರಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಡಿ.ಶಿವಮಹದೇವಯ್ಯ ಮಾತನಾಡಿ ಗ್ರಾಹಕ ನ್ಯಾಯಾಲಯದಲ್ಲಿ, ಬ್ಯಾಂಕ್ ಖಾತೆದಾರರಾದರೆ ಬ್ಯಾಂಕ್ ಸರಿಯಾದ ಮಾಹಿತಿ ನೀಡದಿದ್ದರೆ, ಎಲ್.ಐ.ಸಿ. ಇತ್ಯಾದಿ ಕೆಲಸಗಳಲ್ಲಿ ಸರಿಯಾದ ಮಾಹಿತಿ ಇದ್ದರೂ ಕೆಲಸ ವಿಳಂಬವಾದರೆ ನ್ಯಾಯಾಲಯ ಸುಲಭ ರೀತಿಯಲ್ಲಿ ಶೀಘ್ರವಾಗಿ ಪರಿಹಾರ ನೀಡಲಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಗಿರಿಜಾ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಭಗೀರಥ ಗ್ರಾಹಕ ಸೇವಾ ಸಂಸ್ಥೆಯ ಡಾ.ನಂದ, ಆಹಾರ ನಾಗರೀಕ ಸರಬರಾಜು ಉಪನಿದರ್ೇಶಕ ಡಿ.ಹೊಂಬಾಳೇಗೌಡ, ಇ.ಓ ಎನ್.ಎಂ.ದಯಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಸಿ.ಗೋವಿಂದಪ್ಪ ಉಪಸ್ಥಿತರಿದ್ದರು
ಹೆಂಜಾರೆ ಭೈರವೇಶ್ವರ ಸ್ವಾಮಿ ರಥೋತ್ಸವ ಹಾಗೂ ದನಗಳ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಹೆಂಜಾರೆ ಭೈರವೇಶ್ವರಸ್ವಾಮಿ ಮತ್ತು ಸಿದ್ದರಾಮೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮ ದೇವರುಗಳ ರಥೋತ್ಸವ ಮತ್ತು ದನಗಳ ಜಾತ್ರೆಯನ್ನು ಇದೇ 18ರಿಂದ 23ರವರೆಗೆ ಏರ್ಪಡಿಸಲಾಗಿದೆ.
ಶೆಟ್ಟಿಕೆರೆ ಹೋಬಳಿಯ ಸಿದ್ದರಾಮನಗರ, ದುಗಡಿಹಳ್ಳಿ, ಕೊಡಲಾಗರ, ಬಾಚೀಹಲ್ಳಿ, ವಡೇರಹಳ್ಳಿ, ಬಲ್ಲೇನಹಳ್ಳಿ, ಕಾರೇಹಳ್ಳಿ, ಮಾರಸಂದ್ರ ಗ್ರಾಮಗಳಲ್ಲಿ 18ರಿಂದ 20ರವರಗೆ ಸ್ವಾಮಿಯವರಿಗೆ ಉತ್ಸವವನ್ನು ಏರ್ಪಡಿಸಿದ್ದು 21ರಂದು ಮಡಿ ರಥೋತ್ಸವ, ವೀರಗಾಸೆಕುಣಿತ, 22ರಂದು ದೊಡ್ಡರಥೋತ್ಸವ ಹಾಗೂ 23ರಂದು ಸ್ವಾಮಿಯವರು ಗಂಗಾಸ್ನಾನದ ಮೂಲಕ ಮೂಲಸ್ಥಾನಕ್ಕೆ ತೆರಳುತ್ತಾರೆ.
ರೇಣುಕ ಜಯಂತಿ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮಾ.15: 38ನೇ ವರ್ಷದ ಗುರು ರೇಣುಕ ಜಯಂತಿ ಮಹೋತ್ಸವವನ್ನು ಇದೇ 17ರಂದು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ
ಪಟ್ಟಣದ ಗುರು ರೇವಣಸಿದ್ದೇಶ್ವರ ಮಠದಲ್ಲಿ ಏರ್ಪಡಿಸಿರುವ ಜಯಂತಿಯನ್ನು ಮೂರು ದಿನಗಳ ಕಾಲ ನಡೆಸಲಾಗುವುದು, ಈ ಸಂದರ್ಭದಲ್ಲಿ ರೇಣುಕ ಸಾಂಗತ್ಯ ಪೌರಣಿಕ ಕತೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು, 17ರಂದು ಜಯಂತಿಯ ಅಂಗವಾಗಿ ಗುರುರೇವಣಸಿದ್ದೇಶ್ವಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಜಾನಪದ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ನಡೆದು ನಂತರ ಮಠದಲ್ಲಿ ಸ್ವಾಮಿಯವರ ಹೂವಿನ ಉಯ್ಯಾಲೆ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಲ್ಲಿಗೆರೆ ಗ್ರಾಮದೇವತೆ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಮಲ್ಲಿಗೆರೆ ಗ್ರಾಮದ ಗ್ರಾಮದೇವತೆ ಕರಿಯಮ್ಮದೇವಿಯವರ ಜಾತ್ರಾ ಮಹೋತ್ಸವವನ್ನು ಇದೇ 18ರಿಂದ 20ರವರಗೆ ನಡೆಯಲಿದೆ.
18ರಂದು ಧ್ವಜಾರೋಹಣ ಮತ್ತು ಮಡ್ಲಕ್ಕಿ ಸೇವೆ, 19ರಂದು ಬಾನದ ಸೇವೆ, ಮತ್ತು 20ರಂದು ಸಿಡಿಸೇವೆ ಹಾಗೂ ರಾತ್ರಿ 9ಗಂಟೆಗೆ ಕೃಷ್ಣ ಸಂಧಾನ ಪೌರಾಣಿಕ ನಾಟಕವಿದ್ದು 21ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ 7ಕ್ಕೆ ಸುಧಾ ಬರಗೂರು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು 22ರಂದು ಗಂಗಾಸ್ನಾನದೊಂದಿಗೆ ಮಹಾ ರಥೋತ್ಸವ ಹಾಗೂ ಉಯ್ಯಾಲೆ ಉತ್ಸವ ಏರ್ಪಡಿಸಲಾಗಿದೆ.

Friday, March 11, 2011

ಚಿಂತನ 3-ಡಿ ಚಿತ್ರ ರಚನಾ ಸ್ಪಧರ್ೆಯಲ್ಲಿ ವಿಜೇತರು
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಶೆಟ್ಟಿಕೆರೆ ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾಥರ್ಿಗಳು ಚಿಂತನ 3-ಡಿ ಚಿತ್ರರಚನಾ ಸ್ಫದರ್ೆಯಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ರ್ಯಾಂಕ್ ಪಡೆದಿದ್ದಾರೆ.
5ನೇ ತರಗತಿಯ ಲೋಕೇಶ್ ಎಸ್. ಬಿಂದುಕುಮಾರಿ, ಸಿಂಧು ಬಿ.ಎಸ್ ಈ ವಿದ್ಯಾಥರ್ಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಮಾರ್ಗದಶರ್ಿ ಶಿಕ್ಷಕ ಹೆಚ್. ಜಿ. ಜಗದೀಶ್, ಸಹಶಿಕ್ಷಕರು ಮತ್ತು ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಪಂಚಾಯ್ತಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.
ತಾಲೂಕಿಗೆ ಹೇಮೆ ಹರಿಸಲು ಭಾಜಪ ಒತ್ತಾಯ
ಚಿಕ್ಕನಾಯಕನಹಳ್ಳಿ,ಮಾ.11: ಕೃಷಿ ಪ್ರಧಾನ ಬದುಕನ್ನು ಅವಲಂಬಿಸಿರುವ ಈ ತಾಲೂಕಿಗೆ ಬೇಸಿಗೆ ಹತ್ತಿರವಾದಂತೆ ಜನ, ಜಾನುವಾರಿಗೂ ಕುಡಿಯಲು ನೀರಿಲ್ಲದ ಸ್ಥಿತಿ ನಿಮರ್ಾಣವಾಗಿದ್ದು, ತಾಲೂಕಿನ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆಹರಿಸಬೇಕೆಂದು ತಾ.ಭಾಜಪಾ ಕಾರ್ಯದಶರ್ಿ ಸುರೇಶ್ ಹಳೇಮನೆ ಒತ್ತಾಯಿಸಿದ್ದಾರೆ.
ಶೆಟ್ಟಿಕೆರೆ ಮಾರ್ಗವಾಗಿ ಬೋರನಕಣಿವೆಗೆ ಹಾಗೂ ರಜತಾದ್ರಿಪುರ ಮೂಲಕ ಚಿಕ್ಕನಾಯಕನಹಳ್ಳಿ ನಂತರ ಬೋರನಕಣಿವೆಗೆ ಹೇಮಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಲು ಸಾಧ್ಯವಿದ್ದು ಜೀವನಾವಶ್ಯಕವಾದ ಕುಡಿಯುವ ನೀರನ್ನು ಜನ ಜಾನುವಾರುಗಳಿಗಾಗಿ ನೀಡಲು ಮುಂದಾಗಬೇಕೆಂದು ಭಾಜಪಾ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಯುವ ಕಾಂಗ್ರೆಸ್ಗೆ ಹೆಚ್ಚುತ್ತಿರುವ ಸದಸ್ಯತ್ವ: ಸಂತೋಷ ಜಯಚಂದ್ರ
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿತ್ತಿದ್ದಾರೆ, ಕಾಂಗ್ರೆಸ್ ಪಕ್ಷವು ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಿದೆ ಎಂದು ಸಂತೋಷ ಜಯಚಂದ್ರ ತಿಳಿಸಿದರು.
ಈ ಕ್ಷೇತ್ರದ ಕಂದಿಕೆರೆ, ತಿಮ್ಮನಹಳ್ಳಿ, ಬುಕ್ಕಾಪಟ್ಣ ಭಾಗದ ಭೂತ್ ಮಟ್ಟದ ಪ್ರವಾಸ ಮುಗಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರತಿ ಭೂತ್ನಲ್ಲಿ ಕನಿಷ್ಟ 25 ಜನರಂತೆ ಸದಸ್ಯತ್ವವನ್ನು ನೊಂದಿಯಿಸಿಕೊಂಡಿದ್ದು, ಈಗಾಗಲೇ 1400 ಯುವಕರು ತಮ್ಮ ಹೆಸರನ್ನು ಪಕ್ಷದಲ್ಲಿ ನೊಂದಿಯಿಸಿಕೊಂಡಿದ್ದಾರೆ. ಇವರೆಲ್ಲಾ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುವುದಾಗಿ ತಿಳಿಸಿದ್ದಾರೆ. ನಾವು ಸದಸ್ಯತ್ವವನ್ನು ನೀಡುವಾಗ ಎಚ್ಚರಿಕೆಯಿಂದ ನೀಡುತ್ತಿದ್ದೇವೆ. ಪಕ್ಷಕ್ಕೆ ನಿಷ್ಠರಾಗಿ ದುಡಿಯುವಂತಹವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ ಎಂದರು.
ಕ್ಷೇತ್ರದಲ್ಲಿ 20 ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ 100 ಮತಕೇಂದ್ರಗಳಲ್ಲಿನ ಯುವಕರನ್ನು ನೊಂದಾಯಿಸಿಕೊಳ್ಳುವ ಜೊತೆಗೆ, ಗ್ರಾಮೀಣ ಭಾಗದ ಹಿರಿಯ ಮುಖಂಡರಗಳನ್ನು ಭೇಟಿ ಮಾಡಿ ಅವರೊಂದಿಗೆ ಪಕ್ಷ ಕಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಚಚರ್ಿಸುತ್ತಿದ್ದೇವೆ ಎಂದರು.
ಶೆಟ್ಟೀಕೆರೆ, ಹಂದನಕೆರೆ ಭಾಗಗಳಿಗೆ ವಿಧಾನ ಸಭೆಯ ಉಪನಾಯಕ ಟಿ.ಬಿ.ಜಯಚಂದ್ರ ಪ್ರವಾಸ ಕೈಗೊಳ್ಳಲಿದ್ದು, ಅವರೊಂದಿಗೆ ನಾವೆಲ್ಲಾ ಕೈ ಜೋಡಿಸಲಿದ್ದೇವೆ ಎಂದರು.
ಈ ಭಾಗದ 200 ಭೂತ್ಗಳ ಪೈಕಿ 100 ಭೂತ್ಗಳಿಗೆ ನಮ್ಮ ತಂಡದೊಂದಿಗೆ ಆಯಾ ಭಾಗದ ಮುಖಂಡರು ಪ್ರವಾಸದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ ಭೂತ್ಗಳಿಗೆ ನಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಸಂತೋಷ್ ಜಯಚಂದ್ರ ತಿಳಿಸಿದರು.

Tuesday, March 8, 2011

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಲಹೆ: ಅನಿತಾಕುಮಾರಸ್ವಾಮಿ
ಚಿಕ್ಕನಾಯಕನಹಳ್ಳಿ,ಮಾ.08: ಹೆಣ್ಣು ಹುಟ್ಟಿದಾಗ ತಾತ್ಸರ ಮಾಡದೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಮಡಿಲು(ಸೀಮಂತ) ತುಂಬುವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗು ಎಣ್ಣೆ ಕಲಿತರೆ ಸ್ವಾವಲಂಬಿಯಾಗಿ ಆಥರ್ಿಕವಾಗಿ ಸಬಲರಾಗಿ ಜೀವನ ನಡೆಸಲು ಸಾಧ್ಯ ಸಕರ್ಾರ ಸ್ತ್ರೀಯರಿಗೆ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕ ಸ್ವಾವಲಂಬಿಗಳಾಗಿ ಅಂತರಾಷ್ಟ್ರೀ ಮಹಿಳಾ ದಿನಾಚರಣೆ ನಡೆಸುತ್ತಿರುವುದು ಪುರುಷರ ವಿರುದ್ದವಲ್ಲ ಎಂದರು. ನಗರಗಳಲ್ಲಿ ನಡೆಯುತ್ತಿರುವ ಸಿದ್ದ ಉಡುಪು ಕಾಖರ್ಾನೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಇದು ಬಯಲಿಗೆ ಬರುತ್ತಿಲ್ಲ ಕಾರಣ ನಮ್ಮನ್ನು ಕೆಲಸದಿಂದ ಎಲ್ಲಿ ತಗೆಯುತ್ತಾರೋ ಎಂಬ ಭಯ, ಗ್ರಾಮೀಣ ಪ್ರದೇಶದಲ್ಲೂ ಹಾಗೂ ನಗರಗಳಲ್ಲೂ ಮಹಿಳೆಯರ ಮೇಲೆ ಹೆಚ್ಚಿನ ಲೈಂಗಿಕ ದೌರ್ಜನ್ಯ ನಡೆದರೂ ಯಾರೂ ಪೋಲಿಸರಿಗೆ ದೂರು ನೀಡುತ್ತಿಲ್ಲ ಎಲ್ಲಿ ಮಾನ ಹೋಗುತ್ತದೋ ಎಂಬ ಭಯದಿಂದ ಎಂದರು.
ಸ್ತ್ರೀರೋಗ ತಜ್ಞರಾದ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ ಗಬರ್ಿಣಿ ಸ್ತ್ರೀಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಾರತಮ್ಯವಿದ್ದು ಇದನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಬ್ರೂಣ ಹತ್ಯೆ ಮಾಡದೆ ಯಾವುದೇ ಮಗುವಾದರೂ ತಂದೆ ತಾಯಿ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಹೆಣ್ಣು ಮಕ್ಕಳಿಗೆ ಯಾವುದೇ ತರಹದ ಸಮಸ್ಯೆ ಬಂದಲ್ಲಿ ನಿವಾರಣೆ ಮಾಡುವುದು ಜನ ಪ್ರತಿನಿಧಿಗಳಿಗೆ ಕರ್ತವ್ಯ ಗಭರ್ಿಣಿ ಸ್ತ್ರೀಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು, 1800 ಗಭರ್ಿಣಿ ಸ್ತ್ರೀಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಉಪಸ್ಥಿತರಿದ್ದರು.

ಜೆ.ಸಿ.ಎಂ ಮೇಲೆ ಅವಹೇಳನಕಾರಿ ಮಾತಿಗೆ ಅಭಿಮಾನಿ ಬಳಗ ಖಂಡನೆ
ಚಿಕ್ಕನಾಯಕನಹಳ್ಳಿ,ಮಾ.08: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆದಿರುವ ಘಟನೆಗೆ ಭಾಗಿಯಾಗದ ಜಯಣ್ಣನನ್ನು ಬಂಧಿಸಿರುವುದಕ್ಕೆ ವಿರೋಧಿಸುತ್ತೇವೆ ಹೊರತು ನಿಜವಾದ ಆರೋಪಿಗಳನ್ನು ಬೆಂಬಲಿಸುವುದಿಲ್ಲ, ಈ ಘಟನೆಗೆ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಮಾಜಿ ಶಾಸಕರು ಆಡಿರುವುದಿಲ್ಲ ಎಂದು ಮಾಜಿ ಶಾಸಕರ ಅಭಿಮಾನ ಬಳಗ ಹೇಳಿಕೆ ನೀಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲ ದಲಿತ ಮುಖಂಡರು ಈ ಘಟನೆಗೆ ಸಂಬಂಧಿಸಿದಂತೆ ಜೆ.ಸಿ.ಮಾಧುಸ್ವಾಮಿಯರವರ ವಿರುದ್ದ ರಾಜಕೀಯ ಪಿತೂರಿ ಹೇಳಿಕೆ ನೀಡಿ ಅವರನ್ನು ಬಂಧಿಸಿ ಗಡಿಪಾರು ಮಾಡಿ ಎಂಬ ಹೇಳಿಕೆ ನೀಡಿರುವುದನ್ನು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರಾದ ಶಶಧರ್, ನಿರಂಜನಾಮೂತರ್ಿ ಖಂಡಿಸಿದ್ದಾರೆ.
ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿದ್ದಾರೆಂದು 5ಜನರ ಮೇಲೆ ಕೇಸು ದಾಖಲಾಗಿದ್ದು, ಈ ಘಟನೆಗೆ ಯಾವುದೇ ಪ್ರೇರಣೆ ನೀಡಿಲ್ಲದಿದ್ದರೂ ತಿಮ್ಲಾಪುರ ತಾಲೂಕು ಪಂಚಾಯ್ತಿ ಸದಸ್ಯ ಜಯಣ್ಣನವರ ಬಂಧಿಸಿದ್ದನ್ನು ಗ್ರಾಮಸ್ಥರು, ಮತ್ತು ಜೆ.ಡಿ.ಯು ಪಕ್ಷದ ಕಾರ್ಯಕರ್ತರು ಬಂಧಿಸಿರುವುದಕ್ಕೆ ವಿರೋಧಿಸಿ ಪ್ರತಿಭಟಿಸಿದಾಗ ಪೋಲಿಸ್ ಇಲಾಖೆಯವರು ಜಯಣ್ಣನವರನ್ನು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಆಡಿರುವುದಿಲ್ಲ, ತಾಲೂಕು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಅನೇಕ ದಲಿತ ಪರ ಕೆಲಸಗಳನ್ನು ಮಾಡಿರುವ ಇಂತಹವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕೀಯ ಪಿತೂರಿ ಮಾಡುವುದನ್ನು ಖಂಡಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಕೆ.ಆರ್.ಶಿವಾನಂದ, ಡಿ.ಎಸ್.ಎಸ್ ಮುಖಂಡ ಆರ್.ಗೋವಿಂದಯ್ಯ, ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ, ದಲಿತ ಮುಖಂಡರಾದ ಬಾಲಾಜಿ, ಶ್ರೀರಂಗಯ್ಯ, ರಂಗಸ್ವಾಮಿ, ವಿಶ್ವನಾಥ್, ಎ.ಪಿ.ಎಂ.ಸಿ ನಿದರ್ೇಶಕ ಮಲ್ಲಿಗೆರೆ ರಾಜಶೇಖರ್, ಜಿ.ಎಸ್.ಬಸವರಾಜು, ಶಿವಣ್ಣ ಉಪಸ್ಥಿತರಿದ್ದರು.
ಆಕಸ್ಮಿಕ ಬೆಂಕಿ: 4ಲಕ್ಷ ರೂ ನಷ್ಠ

ಚಿಕ್ಕನಾಯಕನಹಳ್ಳಿ,ಮಾ.08: ತಾಲೂಕಿನ ಕಸಬಾ ಹೋಬಳಿ ಸಾವೆಶೆಟ್ಟಿ ಹಳ್ಳಿ ಬೆಳೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಒಬ್ಬ ಸಾವನ್ನಪ್ಪಿದ್ದಾರೆೆ.
ದೇವರಾಜು ಎಂಬುವರ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 80ಗಿಡ ತೆಂಗು, 30ಅಡಿಕೆ, 30 ಮಾವು, ಸಪೋಟ, ಹಲಸಿನಗಿಡ ಹಾಗೂ ತೆಂಗಿಗೆ ಅಳವಡಿಸಿದ್ದ ಡ್ರಿಪ್ಪೈಪ್ಲೈನ್, ಪಿವಿಸಿ ಪೈಪ್ಗಳು ಸೇರಿ 4ಲಕ್ಷಕ್ಕೂ ಹೆಚ್ಚು ನಷ್ಠವುಂಟಾಗಿದೆ, ಮೃತ ರಾಮಯ್ಯ(65) ಬೆಂಕಿ ಹೊಗೆಗೆ ಆಚೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Saturday, March 5, 2011

ಬಿಡುಗಡೆಗೊಳಿಸಿರುವವರನ್ನು ಶೀಘ್ರ ಬಂಧಿಸಲು ಒತ್ತಾಯ: ದಸಂಸ
ಚಿಕ್ಕನಾಯಕನಹಳ್ಳಿ,ಮಾ.05: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿಯ ದಲಿತ ಮುಖಂಡ ಹನುಮಂತಯ್ಯ ಮತ್ತು ನರಸಿಂಹಯ್ಯನವರ ಮೇಲೆ ಇತ್ತೀಚಿಗೆ ಸವಣರ್ಿಯರಿಂದ ದೌರ್ಜನ್ಯ ನಡೆದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹದು ಈ ರೀತಿಯ ಕೃತ್ಯಗಳ ಹುಳಿಯಾರು ಸುತ್ತ ಮುತ್ತ ನಡೆಯುತ್ತಿದ್ದು ಇದರಿಂದ ದಲಿತರಲ್ಲಿ ಕಳವಳ ಉಂಟಾಗಿದೆ ಎಂದು ತಾಲೂಕು ದಸಂಸ ಸಂಘನಾ ಸಂಚಾಲಕ ಪಿ.ಕೃಷ್ಣಮೂತರ್ಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಈ ಸಂಭಂಧವಾಗಿ ಪೋಲಿಸರು ತನಿಖೆ ಮಾಡುತ್ತಿದ್ದು ಮೂರು ಜನ ಆರೋಪಿಗಳ ವಿರುದ್ದ ಎಫ್.ಐ.ಆರ್ ಹಾಕಿ ಬಂದಿಸಿದ್ದು ಉಳಿದ ಆರೋಪಿಗಳ ಶೋಧನೆಯಲ್ಲಿರುವಾಗಲೇ ಏಕಾ ಏಕೀ ಮಾಜಿ ಶಾಸಕರೊಬ್ಬರು ತಮ್ಮ ಅನುಯಾಯಿಗಳೊಂದಿಗೆ ಪೋಲಿಸ್ ಠಾಣೆ ಮುಂದೆ ಧರಣಿ ಮಾಡಿ ಮುಖ್ಯ ಆರೋಪಿಯಾದ ತಾಲ್ಲೂಕು ಪಂಚಾಯ್ತಿ ಸದಸ್ಯ ಜಯಣ್ಣ ಎಂಬುವರನ್ನು ಬಂಧ ಮುಕ್ತಗೊಳಿಸಿರುವುದು ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ, ಪೋಲಿಸರು ಈ ಧರಣಿಗೆ ಹೆದರಿ ರಾಜಕೀಯ ಮುಖಂಡರಿಗೆ ಆರೋಪಿಯನ್ನು ಬಿಡುಗಡೆಗೊಳಿಸಿರುವುದು ದಲಿತರಲ್ಲಿ ಭಯ ಹುಟ್ಟಿಸಿದೆ, ಪೋಲಿಸರು ಈ ರೀತಿ ಮಾಡಿದಲ್ಲಿ ನ್ಯಾಯಾಲಯ ಮತ್ತು ಜೈಲು, ಕಾನೂನಿನ ಗತಿಯೇನು ಎಂದು ಪ್ರಶ್ನಿಸಿರುವ ಅವರು ಮಾಜಿ ಶಾಸಕರಿಂದ ಈ ರೀತಿ ಆಗಿರಬೇಕಾದರೆ ದಲಿತ ಸಮುದಾಯಗಳ ರಕ್ಷಣೆ ಎಲ್ಲಿದೆ, ಸಕರ್ಾರ ಈ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಂಡು ಬಂಧ ಮುಕ್ತಗೊಂಡಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಇನ್ನಿತರ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ದಸಂಸ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಾರಾಯಣ್, ಕೆಂಚಪ್ಪ ತಿಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಮಾ.05: ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ನಿವರ್ಾಣೇಶ್ವರ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಘದ ಅಧ್ಯಕ್ಷ ಜಿ.ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ವಾಣಿಜ್ಯ ತೆರಿಗೆ ಸಹಾಯುಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜ್ರಾವ್, ನಿವೃತ್ತ ಸಹಾಯಕ ನಿದರ್ೇಶಕ ಸಿ.ಎಸ್.ನಾಗರಾಜ್, ನಿವೃತ್ತ ಶಿಕ್ಷಕ ಸಿ.ಎಸ್.ಬನಶಂಕರಯ್ಯ, ವೈದ್ಯ ಡಾ.ಸಿ.ಎಲ್.ಪ್ರಹ್ಲಾದ್, ಡಾ.ತಿಪ್ಪೇರುದ್ರಯ್ಯ, ಪ್ರಾಂಶುಪಾಲ ಸಿ.ಕೆ.ಶಿವರಾಜ್, ರಾ.ಅ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಆರ್.ಬಿ.ಐ. ಕೆ.ಜಿ.ರಾಜೇಂದ್ರ, ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ, ಮಾಜಿ ಯೋಧ ಶಿವಣ್ಣ(ಮಿಲ್ಟ್ರಿ), ಮುಖ್ಯ ಶಿಕ್ಷಕ ಎಸ್.ಗಂಗಾಧರಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಎಸ್.ನರಸಿಂಹಮೂತರ್ಿ ಉಪಸ್ಥಿತರಿರುವರು.