Thursday, September 9, 2010



ಅಧರ್ಮ ಹೆಚ್ಚಿದಾಗ ಧರ್ಮದ ದಾರಿಯನ್ನು ತೋರುವವನೇ ಗುರು
ಚಿಕ್ಕನಾಯಕನಹಳ್ಳಿ,ಸೆ.09: ಅಧರ್ಮ ಹೆಚ್ಚಿದಾಗ ಧರ್ಮವನ್ನು ಎತ್ತಿ ಹಿಡಿಯುವುದು ಉತ್ತಮ ಜ್ಞಾನದಿಂದ ಮಾತ್ರ ಸಾಧ್ಯ ಇಂತಹ ಜ್ಞಾನವನ್ನು ಪಸರಿಸುವ ಶಿಕ್ಷಕ ಇಂತಹ ಸಂದರ್ಭದಲ್ಲಿ ನಾಗರೀಕ ಸಮಾಜಕ್ಕೆ ಮುಖ್ಯನೆನಿಸಿಕೊಳ್ಳುತ್ತಾನೆ ಎಂದು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಹಾಗೂ ಇನ್ನರ್ವೀಲ್ ಮತ್ತು ಕೆನರಬ್ಯಾಂಕ್ ಹಮ್ಮಿಕೊಂಡಿದ್ದ 'ಗುರುನಮನ' ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸನ್ಮಾನಿಸಿ ಮಾತನಾಡಿದರು.
ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಗಳು ಉತ್ತಮ ಸಮಾಜವನ್ನು ನಿಮರ್ಿಸಬಲ್ಲವು ಈ ಮೂರು ಶಕ್ತಿಗಳು ಎಲ್ಲರಲ್ಲೂ ಇರುತ್ತದೆ ಇದು ಸುಪ್ತವಾಗಿರುತ್ತದೆ, ಇದನ್ನು ಹೊರಕ್ಕೆ ತೋರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದರಲ್ಲದೆ, ವಿದ್ಯೆ ಪ್ರತಿಯೊಬ್ಬರ ಆಂತರ್ಯದಲ್ಲಿರುವ ದಿವ್ಯಶಕ್ತಿ. ಇದನ್ನು ಉತ್ತೇಜಿಸುವ ಕೆಲಸವನ್ನು ಶಿಕ್ಷಕ ಮಾಡಬೇಕೆಂದರು.
ಸಮಾಜವನ್ನು ಕಟ್ಟುವ ಕೆಲಸಕ್ಕೆ ಕೈಜೋಡಿಸುವ ಶಿಕ್ಷಕರಿಗೆ ಯಾವುದೇ ಕೊರತೆ ಉಂಟಾಗುತ್ತದೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರದ ಮೇಲಿದೆ. ಶಿಕ್ಷಕರ ಸಂಬಳ, ಸವಲತ್ತುಗಳನ್ನು ಕೊಡುವಾಗ ಚೌಕಾಸಿ ಮಾಡಬಾರದು ಅವರನ್ನು ಸುಖವಾಗಿಟ್ಟು ತನ್ಮೂಲಕ ಜ್ಞಾನ ಪ್ರಸಾರಕ್ಕೆ ಅವರನ್ನು ಅಣಿಗೊಳಿಸಬೇಕೆ ಹೊರತು ಅವರಿಗೆ ಕೊಡುವ ಸಂಬಳಕ್ಕೆ ಸತಾಯಿಸುವುದು, ಅವರಿಗೆ ನೀಡುವ ಸವಲತ್ತುಗಳಿಗೆ ಅಧಿಕಾರ ವರ್ಗಹಣದ ನಿರೀಕ್ಷೆ ಇಟ್ಟುಕೊಳ್ಳುವುದು ಸರ್ವತಾ ಸಮ್ಮತವಲ್ಲ ಎಂದರು.
ಶಿಕ್ಷಕ ಬೋಧನೆಗೆ ಸಮರ್ಥನಾಗಿರಬೇಕು, ಮನಸ್ಸು ಶಾಂತವಾಗಿರಬೇಕು ಮಕ್ಕಳಿಗೆ ವಂಚನೆ ಮಾಡಬಾರದೆಂಬ ಮನೋಭಾವದವರಾಗಿರಬೇಕು ಇದನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಣಕ್ಕಾಗಿ ಸಕರ್ಾರಗಳು ಸಾವಿರಾರು ಕೋಟಿಗಳಷ್ಟು ಹಣವನ್ನು ವ್ಯಯಿಸುತ್ತಿದೆ ಎಂದರು.
ಕೆನರ ಬ್ಯಾಂಕ್ ಎ.ಜಿ.ಎಂ, ಎಂ.ಟಿ ಪದ್ಮನಾಭ ಮಾತನಾಡಿ, ಕೆನರಾ ಬ್ಯಾಂಕ್ ಶಿಕ್ಷಕರಿಗಾಗಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಟೀಚರ್ ಲೋನ್ ಕೊಡಲು ಮೊದಲು ಆರಂಭಿಸಿದ್ದು ನಾವು ಎಂದರಲ್ಲದೆ, ಶಿಕ್ಷಣದ ಅಭಿವೃದ್ದಿ ಒಂದು ದೇಶದ ಸರ್ವತೋಮುಖ ಅಭೀವೃದ್ದಿಯ ಸೂಚಕ ಎಂದರು. ಮಕ್ಕಳಿಗೆ ಶಿಕ್ಷಣ ಒಂದನ್ನು ನೀಡಿದರೆ ಮಿಕ್ಕೆಲ್ಲವನ್ನು ಅವರು ತನ್ನ ಸಾಮಥ್ರ್ಯದ ಮೇಲೆ ತಾವೇ ಪಡೆಯುತ್ತಾರೆ ಎಂದರಲ್ಲದೆ ಹೈದರಾಲಿ ಮತ್ತು ದಿವಾನ್ ಪೂರ್ಣಯ್ಯನವರ ನಡುವೆ ನಡೆದ ಘಟನೆಯೊಂದನ್ನು ವಿವರಿಸಿದರು.
ಪ್ರೊ.ನಾ.ದಯಾನಂದ ಮಾತನಾಡಿ ಸರಿಯಾಗಿರುವುದನ್ನು ಪ್ರಶಂಸಿಸುವ, ತಪ್ಪನ್ನು ಖಂಡಿಸುವ ನೈಜ ಸ್ವಭಾವವನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಳ್ಳುವ ಗುಣವನ್ನು ಶಿಕ್ಷಕ ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾಥರ್ಿಗಳು ತಪ್ಪಾಗಿ ನಡೆದಾಗ ಸರಿದಾರಿಯನ್ನು ತೋರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಪ್ರೌಡಶಾಲೆಗಳ ಮುಖ್ಯೋಪಾಧ್ಯಾಯರಿಗೆ ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸನ್ಮಾನಿಸಲಾಯಿತು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳಸುವ ಜವಾಬ್ದಾರಿ ಹೊತ್ತಿದ್ದು ಇದರ ಅಂಗವಾಗಿ ಗುರುಗಳನ್ನು ಅಭಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ರೋಟರಿ ಸಂಸ್ಥೆ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಸಹೋದರಿಯರು ಪ್ರಾಥರ್ಿಸಿದರೆ, ಉಪನ್ಯಾಸಕ ಶಿವಲಿಂಗಮೂತರ್ಿ, ಸ್ವಾಗತಿಸಿ, ವೀಣಾ ಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ವಂದಿಸಿದರು.
ಜ್ಞಾನದಾಹಿಗಳಿಗೆ ಗುರುಗಳು ದಾರಿ ದೀಪವಾಗಬೇಕು
ಚಿಕ್ಕನಾಯಕನಹಳಳ್ಳಿ,ಸೆ.09: ಗ್ರಂಥಗಳು ಜ್ಞಾನದ ರಾಶಿಗಳಿದ್ದಂತೆ ಇವುಗಳನ್ನು ಏಕಾಗ್ರತೆಯಿಂದ ಓದಿದಾಗ ಜ್ಞಾನವನ್ನು ಇನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರ ವೃತ್ತಿ ಪುಣ್ಯವಾದದ್ದು ಇವರು ವಿದ್ಯಾಥರ್ಿಗಳ ಜ್ಞಾನ ಹೆಚ್ಚಿಸುವಂತಹ ಶಿಲ್ಪಿಗಳಾಗಬೇಕು ಎಂದ ಅವರು ಶಿಕ್ಷಕರು ಅಹಃನ್ನು ತೊರೆದು ವಿದ್ಯಾಥರ್ಿಗಳೊಂದಿಗೆ ತಾನೊಬ್ಬ ವಿದ್ಯಾಥರ್ಿಯೆಂದು ತಿಳಿಯಬೇಕು ಎಂದರು.
ಉಪನ್ಯಾಸಕ ವಾಸುದೇವರಾಜು ಮಾತನಾಡಿ ಸಮರ್ಥ ಗುರುಗಳು ಎಲ್ಲರಿಗೂ ಸಿಗುವುದಿಲ್ಲ ಸಿಕ್ಕ ಗುರುಗಳನ್ನು ಗುರುಭಕ್ತಿಯಿಂದ ಶಿಕ್ಷಣ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಉಪನ್ಯಾಸಕರಾದ ಶಿವಲಿಂಗಮೂತರ್ಿ, ಚಂದ್ರಶೇಖರ್ ಉಪಸ್ಥಿತರಿದ್ದರು.