Sunday, August 7, 2011

ಚಿಕ್ಕನಾಯಕನಹಳ್ಳಿ,ಆ.07 : ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ಕಾರ್ಯಕ್ರಮವನ್ನು ಇದೇ 11ರ ಗುರುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಮನ್ವಯ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಹೆಚ್.ಕೆ.ಕುಮಾರರಾಜ್ ಅರಸ್ ಉದ್ಘಾಟನೆ ನೆರವೇರಿಸಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಆಶಯ ಭಾಷಣ ಮಂಡಿಸಲಿದ್ದಾರೆ. ಗೋಷ್ಠಿ 1 : ಬೆಳಗ್ಗೆ 11ರಿಂದ 12.30ರವರೆಗೆ ನಡೆಯುವ ಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಚಂದ್ರಶೇಖರ ನಂಗಲಿ ಜಾಗತೀಕರಣ ಮತ್ತು ಗ್ರಾಮೀಣ ಸ್ತ್ರೀ ಸ್ವಾಯತ್ತತೆಯ ನೆಲೆಗಳು, ಹಂಪಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾದ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಬಹುಸ್ತರೀಯ ವಸಾಹತು ಶಾಹಿಗಳಿಂದ ಸ್ಥಳೀಯ ನೆಲೆಗಳ ಉಳಿವಿನ ಸಾಧ್ಯತೆಗಳ ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದು ಡಾ.ಎಸ್.ಗುರುಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿ2: ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಗೋಷ್ಠಿಯಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ವಿಜಯ್ ಅಂಗಡಿ ನಮ್ಮ ಅನ್ನ ಆರಂಬ ಪ್ರಸ್ತುತ ಪರಿಸ್ಥಿತಿ ಬಗ್ಗೆ, ಡಾ.ನಟರಾಜ್ ಬೂದಾಳ್ ಈ ನೆಲದ ಕಾವ್ಯ ಮೀಮಾಂಸೆಯ ಹೊಸ ಸಾಧ್ಯತೆಗಳು ಬಗ್ಗೆ ಪ್ರಬಂದ ಮಂಡಿಸಲಿದ್ದು ಡಾ.ಬಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಗೋಷ್ಠಿ 3 : 2.30ರಿಂದ ನಡೆಯಲಿದ್ದು ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ನಡೆಯಲಿದ್ದು ಅಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ ಸಮಾರೋಪ ಭಾಷಣ ಮಾಡಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಆ.07 : ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ ರಾಷ್ಟ್ರೀಯ ಸೇವಾ ಘಟಕದ ಉದ್ಘಾಟನಾ ಸಮಾರಂಭವನ್ನು ಇದೇ 9ರ ಮಂಗಳವಾರ ಬೆಳಗ್ಗೆ 11ಕ್ಕೆಏರ್ಪಡಿಸಲಾಗಿದೆ.ಸಮಾರಂಭವನ್ನು ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಯವರು ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ.ಪೂ.ಶಿ ಉಪನಿದರ್ೇಶಕ ಕೆ.ಎನ್.ರಂಗನಾಥ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ವಿಶೇಷ ಆಹ್ವಾನಿತರಾಗಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಮಾಜಿ ಪುರಸಭಾಧ್ಯಕ್ಷ ಮಹಮದ್ ಇಕ್ಬಾಲ್, ಪುರಸಭೆ ಸದಸ್ಯೆ ಕವಿತಾಚನ್ನಬಸವಯ್ಯ, ಇಂದಿರಪ್ರಕಾಶ್ ಉಪಸ್ಥಿತರಿರುವರು.