Friday, June 24, 2016


ಜಮೀನು  ವಶಪಡಿಸಿಕೊಂಡು ನಿವೇಶನ ನೀಡಿ : ಸಿಬಿಎಸ್
ಚಿಕ್ಕನಾಯಕನಹಳ್ಳಿ : ಪಟ್ಟಣದ ಜನತೆಗೆ ಆಶ್ರಯ ಸಮಿತಿವತಿಯಿಂದ ಉಚಿತವಾಗಿ ನೀಡುವವ  ನಿವೇಶನ ವಿಚಾರದಲ್ಲಿ ದಾರಿಯ ಸಂಬಂಧವಾಗಿ ಆಗಿರುವ ತೊಂದರೆಯನ್ನು ನಿವಾರಿಸಲು ಅಗತ್ಯವಿರುವ ಜಮೀನನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ಜನತೆಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಾವನಹಳ್ಳಿ ಬಳಿ ನಿವೇಶನಗಳನ್ನು ಪುರಸಭಾ ವತಿಯಿಂದ ವಿಂಗಡಿಸಿದ್ದು ಹಲವು ಕಾರಣಗಳಿಂದ ನಿವೇಶನ ನೀಡಲು ಸಾಧ್ಯವಾಗಿಲ್ಲ, ನಿವೇಶನಕ್ಕೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ನಿವೇಶನದ ಮಧ್ಯೆ ಇರುವ ಜಮೀನುಗಳನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ನಿವೇಶನ ನೀಡಲು ಶಾಸಕರು ಸೂಚಿಸಿದರು.
 ಈಗಾಗಲೇ ಜಮೀನು ಮಾಲೀಕರಿಗೆ ಹಲವಾರು ಬಾರಿ ಸಂಧಾನದ ಮೂಲಕ ನಿವೇಶನ ಮಧ್ಯೆ ಬರುವ ಜಮೀನಿನ ಮಾಲೀಕರು ಈಗಾಗಲೇ ಪುರಸಭೆಗೆ ಕರಾರು ಒಪ್ಪಂದ ಮಾಡಿಕೊಟ್ಟಿದ್ದರೂ ಇದುವರೆಗೆ ಜಮೀನು ಬಿಟ್ಟುಕೊಟ್ಟಿಲ್ಲದ ಕಾರಣ ನಿವೇಶನಕ್ಕೆ ಹೋಗಲು ದಾರಿ ಇಲ್ಲದ ಪ್ರಯುಕ್ತ ನಿವೇಶನವನ್ನು ನೀಡಲು ತೊಂದರೆಯಾಗಿದ್ದು ಇದಕ್ಕೆ ಅಧಿಕಾರಿಗಳು ಶೀಘ್ರವೇ ಕಾನೂನು ಪ್ರಕಾರ ಜಮೀನು ವಶಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವಿಂಗಡಣೆ ಮಾಡಿ ನಿವೇಶನ ನೀಡಲು ಸೂಚಿಸಿದರು. 
ಇಂಜನಿಯರ್ ಯೋಗಾನಂದ್ಬಾಬು ಮಾತನಾಡಿ, ಬಾವನಹಳ್ಳಿ ಸಮೀಪ 271 ನಿವೇಶನಗಳಿವೆ ಹಾಗೆಯೇ ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿಸಿ ನಂತರ ಸಭೆಗೆ ತಿಳಿಸಲಾಗುವುದು ಎಂದರು. 
ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, 2015-16ನೇ ಸಾಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಮನೆ ನಿಮರ್ಿಸಿಕೊಳ್ಳಲು ಪರಿಶಿಷ್ಠ ಜಾತಿ, ಪಂಗಡದಿಂದ 50ಜನರಿಗೆ ಮಂಜೂರು ಮಾಡಲಾಗಿದೆ, 75 ಮಂದಿ ಪ.ಜಾ, ಪ.ಪಂ ದವರಿಗೆ ಮನೆ ಕಟ್ಟಲು ಅವಕಾಶವಿದ್ದು ಪಟ್ಟಣ ತೊರೆದು ಬೇರೆ ಊರುಗಳಿಗೆ ವಲಸೆ ಹೋಗಿದ್ದು ಈಗ 50ಜನಕ್ಕೆ ಮನೆ ನಿಮರ್ಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪಟ್ಟಣ ಆಶ್ರಯ ಸಮಿತಿ ಸದಸ್ಯ ಸಿ.ಬಸವರಾಜು ಮಾತನಾಡಿ, ಪಟ್ಟಣದ ಜನತೆಗೆ ನಿವೇಶನ ನೀಡಲು ಹಲವು ಬಾರಿ ಸಭೆ ನಡೆಸಿ ಜಮೀನು ಮಾಲೀಕರಿಗೆ ನೋಟಿಸ್ ನೀಡಿದ್ದರೂ ಬಿಟ್ಟುಕೊಡದೆ ಇರುವುದರಿಂದ ನಿವೇಶನ ಇಲ್ಲದ ಬಡವರಿಗೆ ಶೀಘ್ರ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯನಂದ್, ಪಟ್ಟಣ ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಬಾಬುಸಾಹೇಬ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಾಲ ಕಟ್ಟಲು ಎರಡು ವರ್ಷ ಕಾಲಾವಕಾಶ ನೀಡಿ 
ಚಿಕ್ಕನಾಯಕನಹಳ್ಳಿ,ಜೂ.24 : ಬ್ಯಾಂಕನಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬಂದಿರುವ ತಗಾದೆ ನೋಟಿಸ್ಗಳನ್ನು ವಾಪಸ್ ಪಡೆಯುವಂತೆ  ರೈತ ಸಂಘದವರು  ಪಟ್ಟಣದ ಬ್ಯಾಂಕ್ಗಳಿಗೆ ತೆರಳಿ ಬರಗಾಲವಿರುವುದರಿಂದ ಸಾಲ ಕಟ್ಟಲು ತೊಂದರೆಯಾಗುತ್ತಿದ್ದು ಸಾಲ ಮರುಪಾವತಿ ಮಾಡಲು ಎರಡು ವರ್ಷ ಕಾಲಾವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿರುವ ಎಸ್.ಬಿ.ಎಂ ಹಾಗೂ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ಗಳಿಗೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತೆರಳಿ ಬ್ಯಾಂಕ್ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡ ಕೆಂಕೆರೆ ಸತೀಶ್ ಮಾತನಾಡಿ, ಕಳೆದ ವರ್ಷ, ಈ ವರ್ಷ ಎರಡೂ ವರ್ಷಗಳಿಂದ ಬರಗಾಲ ಎದುರಾಗಿದೆ, ರೈತರಿಗೆ ಉತ್ತಮ ಬೆಳೆಯಾಗದೆ ಆಥರ್ಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದಾರೆ, ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಹೆದರಿ ಮರುಪಾವತಿ ಮಾಡಲಾಗದೆ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ತಮ್ಮ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿಕೊಂಡರು.
ಎಸ್ಬಿಎಂ ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಭಾರ್ಗವ್ ದಾಸ್ ಮಾತನಾಡಿ,  ರೈತರು ಇರುವುದರಿಂದ ಬ್ಯಾಂಕ್ಗಳಿರುವುದು, ರೈತರಿಗೆ ಬಂದಿರುವ ನೋಟಿಸ್ಗಳು ಬ್ಯಾಂಕಿನಿಂದ ಬಂದಂತಹವುಗಳಲ್ಲ ಅದು ನ್ಯಾಯಾಲಯದಿಂದ ಬಂದಿರುವುದಾಗಿದೆ, ನಿಮ್ಮ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ದಬ್ಬೆಘಟ್ಟ ಜಗದೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಚಿ.ನಾ.ಹಳ್ಳಿ ವಸತಿ 

ನಿಲಯಕ್ಕೆ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.24: ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ಮೇಟ್ರಿಕ್ ಪೂರ್ವ ಹಾಗೂ ನಂತರ ವಸತಿ ನಿಲಯಗಳಿಗೆ ಧಿಡೀರಿ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹೊನ್ನೇಬಾಗಿ ಬಳಿ ಇರುವ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಮಾರ್ಗಮಧ್ಯೆ ಇರುವ ವಿದ್ಯಾಥರ್ಿನಿಯರ ಹಾಗೂ ವಿದ್ಯಾಥರ್ಿಗಳ ಹಾಸ್ಟೇಲ್ಗಳಿಗೆ ಭೇಟಿ ನೀಡಿ,  ಬಾಲಕಿಯರ ಹಾಸ್ಟೆಲ್ಗಳ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿ ಹಾಸ್ಟೆಲ್ಗಳ ಕೊಠಡಿಗಳನ್ನು  ಪರೀಶೀಲಿಸಿದರು,  ನಂತರ ಹಾಸ್ಟೆಲ್ನಲ್ಲಿರುವ ಶುದ್ದ ಕುಡಿಯುವ ನೀರಿನ್ನು ಸ್ವತಃ ಅವರೇ ಕುಡಿದು ಪರಿಶೀಲಿಸಿ,  ಓವರ್ಹೆಡ್ ಟ್ಯಾಂಕ್ನ್ನು ತಿಂಗಳಿಗೆ ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಿ ಎಂದು ವಾಡರ್್ನ್ಗೆ ಪ್ರಶ್ನಿಸಿದರು. ತಿಂಗಳಿಗೆ ಎರಡು ಬಾರಿ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ನಂತರ ಹಾಸ್ಟೆಲ್ ವಿದ್ಯಾಥರ್ಿನಿಯರ ಜೊತೆಯಲ್ಲಿ ಮಾತನಾಡಿ ವಸತಿ ನಿಲಯದಲ್ಲಿ ಯಾವುದಾದರೂ ಕುಂದು  ಕೊರತೆಗಳ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು  ನಂತರ ಜಿಲ್ಲಾಧಿಕಾರಿಗಳು ವಿದ್ಯಾಥರ್ಿನಿಯರ ಜೊತೆಯಲ್ಲಿ ಊಟ ಮಾಡಿ ನಂತರ ಮಕ್ಕಳಿಗೆ ಇದೇ ರೀತಿಯಲ್ಲಿ ಉತ್ತಮ ಆಹಾರ ನೀಡುವಂತೆ ವಾಡರ್್ನ್ ಜ್ಯೋತಿಯವರಿಗೆ ಸಲಹೆ ನೀಡಿದರು.
ಹಾಸ್ಟೆಲ್ ವಿದ್ಯಾಥರ್ಿನಿಯರಿಗೆ ತಮ್ಮ ಸಮಸ್ಯೆ ಏನಾದರೂ ಇದೆಯೇ ಎಂದು ಪ್ರಶ್ನಿಸಿದ ನಂತರ ವಿದ್ಯಾಥರ್ಿನಿಯರು ಡೈನಿಂಗ್ ಟೇಬಲ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ .ಉತ್ತರಿಸಿದ ಜಿಲ್ಲಾಧಿಕಾರಿಗಳು ಹಾಸಿಗೆ, ದಿಂಬಿನ ಕವರ್ಗಳು, ಹಾಗೂ ಸೊಳ್ಳೆಪರದೆ ಹಾಗೂ ಡೈನಿಂಗ್ ಟೇಬಲ್ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.