Wednesday, June 20, 2012


ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮಾದಿಗ ದಂಡೋರ ಸಮಿತಿಯ ಒತ್ತಾಯ

        ಚಿಕ್ಕನಾಯಕನಹಳ್ಳಿ,ಜೂ.20: ಮಾದಿಗ ಜನಾಂಗಕ್ಕೆ ಪರಿಶಿಷ್ಠ ಜಾತಿಯಲ್ಲಿ ಶೇ.15ರಷ್ಟರ ಸರಿಯಾದ ಮೀಸಲಾತಿ ದೊರೆಯದೇ ಇರುವುದರಿಂದ  ಜನಾಂಗಕ್ಕೆ ಎ.ಬಿ.ಸಿ.ಡಿ ಮೀಸಲಾತಿ ವಗರ್ೀಕರಣ ಆಗಬೇಕೆಂದು ಸಕರ್ಾರಕ್ಕೆ ಸದಾಶಿವ ಆಯೋಗ ವರದಿ ಸಲ್ಲಿಸಿರುವುದನ್ನು ತಕ್ಷಣವೇ ಸಕರ್ಾರ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಬೇಡಿಕೆಯನ್ನು ಈಡೇರಿಸಬೇಕೆಂದು ರಾಜ್ಯ ಮಾದಿಗ ದಂಡೋರ ಸಮಿತಿಯ ಜಂಟಿ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಸದಾಶಿವ ಆಯೋಗ ಪರಿಶಿಷ್ಠ ಜಾತಿಗಳ ಸ್ಥಿತಿಗತಿ ಕುರಿತು ಸಕರ್ಾರಕ್ಕೆ 200 ಪುಟಗಳ ವರದಿ ಸಲ್ಲಿಸಿದೆ, ಶೇ.6 ಎಡಗೈ(ಮಾದಿಗರಿಗೆ), ಶೇ.5 ಬಲಗೈ, ಶೇ.3 ಪರಿಶಿಷ್ಠರಲ್ಲಿ ಸ್ಪೃಷ್ಯರಿಗೆ, ಶೇ.1ರಷ್ಟು ಒಳಮೀಸಲಾತಿಗಾಗಿ ನೀಡಲು ಆಯೋಗ ಶಿಫಾರಸ್ಸು ಮಾಡಿ ಸಕರ್ಾರಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಸಕರ್ಾರ ಪುರಸ್ಕರಿಸಿ ಜನಾಂಗದ ಸುಮಾರು 96.60ಲಕ್ಷ ಜನರ ಮೀಸಲಾತಿಯನ್ನು ನೀಡುವ ಬಗ್ಗೆ ಸಕರ್ಾರ ಜಾರಿಗೊಳಿಸಲು ಸಂಪುಟದಲ್ಲಿ ತೀಮರ್ಾನಿಸಿ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಅಭಿವೃದ್ದಿಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹಾಗೂ ಸಚಿವರಾದ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿಯವರಿಗೆ ಒತ್ತಾಯಿಸಿದ್ದು, ತತ್ಕ್ಷಣ ಸಕರ್ಾರ ಶಿಫಾರಸ್ಸು ಮಾಡಿ ಲೋಕಸಭೆಗೆ ಕಳುಹಿಸಲು ಒತ್ತಾಯಿಸಿದರು ಎಂದ ಅವರು ಜನಾಂಗದ ಸುಮಾರು 6ಲಕ್ಷ ಜನರು ಸರಿಯಾಗಿ ಜಾತಿ ಹೆಸರು ಹೇಳದೆ ಶೇ.1ರ ಮೀಸಲಾತಿಯನ್ನು ಕಳೆದುಕೊಂಡಿರುವುದು ವಿಷಾದನೀಯವಾಗಿದ್ದು ಜನಂಗದವರು ದಯಮಾಡಿ ಜಾತಿ ಹೆಸರನ್ನು ಪ್ರಸ್ತಾಪಿಸಲು ಕೋರಿದರು.
ಗೋಷ್ಠಿಯಲ್ಲಿ ತಾಲ್ಲೂಕು ಮಾದಿಗ ಸಂಘದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದಶರ್ಿ ರಾಜು ಬೆಳಗಿಹಳ್ಳಿ, ಸಿ.ಎನ್.ಹನುಮಯ್ಯ, ರಾಮಯ್ಯ, ನೀಲಕಂಠಯ್ಯ, ಸಿದ್ದರಾಮಣ್ಣ ಉಪಸ್ಥಿತರಿದ್ದರು.

ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ

ಚಿಕ್ಕನಾಯಕನಹಳ್ಳಿ,ಜೂ.20 ; ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಇದೇ 30 ಮತ್ತು 1 ಮತ್ತು 2ರಂದು ನಡೆಯಲಿದೆ, 30ರ ಶನಿವಾರ ಬೆಳ್ಳಿಪಲ್ಲಕ್ಕಿ, ಜುಲೈ1ರಂದು ಬ್ರಹ್ಮ ರಥೋತ್ಸವ, ಜುಲೈ2ರಂದು ರಥೋತ್ಸವ ಹಮ್ಮಿಕೊಳ್ಳಲಾಗಿದೆ.
 ಜಾತ್ರೆಯ ಪ್ರಯುಕ್ತ ಪಟ್ಟಣದಲ್ಲಿ ಅದ್ದೂರಿ ತಯಾರಿ ನಡೆಯುತ್ತಿದೆ, ರಸ್ತೆಗಳಿಗೆ ಡಾಂಬರೀಕರಣ, ವಿದ್ಯುತ್ ಕಂಬಗಳ ಮರು ಜೋಡಣೆ, ಶುಭಕೋರುವ ಪ್ಲೆಕ್ಸ್ಗಳ ಮೂಲಕ ಜಾತ್ರೆಗೆ ಆಗಮಿಸುವವರಿಗೆ ಕಂಗೊಳಿಸಲು ಬೇಕಾಗುವ ಎಲ್ಲಾ ರೀತಿಯ ತಯಾರಿ ಹೆಚ್ಚಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವವು ಪ್ರತಿ ವರ್ಷಕ್ಕಿಂತ ಈ ವರ್ಷದ ತಯಾರಿ ಜೋರಾಗಿ ನಡೆಯುತ್ತಿದೆ. 
ಆಷಾಡ ಮಾಸದ ಸಮಯದಲ್ಲಿ ನಡೆಯುವ ಈ ಜಾತ್ರೆಗೆ ನವದಂಪತಿಗಳು ಒಟ್ಟಾಗಿ ಪಾಲ್ಗೊಂಡು ತೇರಿಗೆ ಬಾಳೆಹಣ್ಣು ಎಸೆಯುತ್ತಾರೆ.
ಇನ್ನು ಜಾತ್ರೆಗೆ ಕುಂಚಾಂಟಿಗರ ಸಂಘವು ಚಿತ್ರಕಲೆಯನ್ನು ಪ್ರದಶರ್ಿಸುವ, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ ನವದಂಪತಿಗಳ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಹಾಗೂ ಮಾರುತಿ ವ್ಯಾಯಾಮ ಸಂಘ ಕುಸ್ತಿ ಪಂದ್ಯವನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದಾರೆ. 


ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20: ತಾಲೂಕಿನ ಗೋಪಾಲನಹಳ್ಳಿಯಲ್ಲಿ ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮವನ್ನು ಶ್ರೀ ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ದಿ ಸಂಘದ ಕಛೇರಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಶ್ವ ವಿದ್ಯಾನಿಲಯದ ಸಹ ಪ್ರಧ್ಯಾಪಕರಾದ ಸಿ.ಸೋಮಶೇಖರ್ ರವರು ಹಾರಕ ಬೆಳೆಯ ಬೇಸಾಯಕ್ರಮ ಮತ್ತು ಕೃಷಿ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕಿರು ಧಾನ್ಯ ಯೋಜನೆಯಡಿಯಲ್ಲಿ ಹಾರಕದ ತಳಿಗಳಾದ ಜಿ.ಪಿ.ಯು.ಕೆ.-3 ಹಾಗೂ ಆರ್.ಬಿ.ಕೆ.-155ರ ಬೀಜಗಳನ್ನು ಗುಂಪಿನ ಸದಸ್ಯರಿಗೆ ವಿತರಿಸಲಾಯಿತು.
ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಶಂಕರ್ ರವರು ಮಾತನಾಡಿ ಹಾರಕ ಬೆಳೆಗೆ ತಗಲುವ ಕೀಟ ಬಾದೆಗಳ ಬಗ್ಗೆ ಮಾಹಿತಿ ನೀಡಿದರು
ತಾಲೂಕಿನ 'ಆತ್ಮ' ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಜಗನಾಥ್ ರವರು ಸರಕು ಆಸಕ್ತರ ಗುಂಪುಗಳನ್ನು ರಚನೆ ಅವುಗಳ ಕಾರ್ಯ ಮಹತ್ವದ ಬಗ್ಗೆ ತಿಳಿಸಲು ಈ ಯೋಜನೆಯಡಿಯಲ್ಲಿ ಪ್ರವಾಸಗಳ ಮೂಲಕ ತರಬೇತಿ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಎಮ್.ಬಸವರಾಜು ವಹಿಸದ್ದರು. ಕಾರ್ಯಕ್ರಮದಲ್ಲಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷರಾದ ಜಿ.ಎಸ್.ಚಂದ್ರಶೇಖರಯ್ಯ ಭಾಗವಹಿಸಿದ್ದರು. ಜಿಲ್ಲಾ ಸಂಯೋಜಕ ಡಾ.ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರೆ ಉಪನ್ಯಾಸಕ ಜಿ.ಎಸ್.ರಘು ಸ್ವಾಗತಿಸಿ ವಂದಿಸಿದರು.