Friday, January 29, 2016

ವಿವಾಹ ಒಂದರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,: ವಿವಾಹ ಒಂದರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹೊಸ ಬಾಳಿಗೆ ಅಡಿಯಿಟ್ಟ ದಂಪತಿಗಳಿಗೆ ಹಾಜರಿದ್ದ ಜನರು ಮನದುಂಬಿ ಶುಭ ಹಾರೈಸಿದ ಘಟನೆ ತಾಲೂಕಿನ ಜಾಣೇಹಾರ್ನಲ್ಲಿ ನಡೆಯಿತು.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಜಾಣೆಹಾರ್ ಗ್ರಾಮದ ತೋಟದ ಮನೆಯಲ್ಲಿ  ಜಯಲಕ್ಷ್ಮಮ್ಮ ಮತ್ತು ನಾಗರಾಜು ರವರ ಪುತ್ರರಾದ ರಾಮಚಂದ್ರ ಮತ್ತು ಪುಷ್ಪ ರವರ ವಿವಾಹ ಮಹೋತ್ಸವದಲ್ಲಿ ಅಂತರ್ಜಲ ಹೆಚ್ಚಿಸುವ ಅರಿವು ಮೂಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಳೆನೀರು ಕೊಯ್ಲು ಮತ್ತು ಕೊಳೆವೆಬಾವಿಗೆ ಜಲಮರುಪೂಣದ ಬಗ್ಗೆ ಉಪನ್ಯಾಸ ಏರ್ಪಡಿಸಿದ್ದರು.
ಜಾಗೃತಿ ಸಭೆಯಲ್ಲಿ ರಾಜ್ಯದ ಖ್ಯಾತ ಅಂತರ್ಜಲ ಮಳೆ ನೀರು ಕೊಯ್ಲು ತಜ್ಞರು ಹಾಗೂ ಕೃಷಿ ಪಂಡಿತರಾದ ಎನ್.ಜೆ ದೇವರಾಜರೆಡ್ಡಿ ಮಾತನಾಡಿ, ಹೆಚ್ಚು ಅಂತರ್ಜಲ ಇರುವಂತಹ ಕ್ಷೇತ್ರಗಳಲ್ಲೇ ಅಂತರ್ಜಲ ಬರಿದಾಗುತ್ತಿದ್ದರೆ ಮುಂದೊಂದು ದಿನ ಇಡೀ ನಾಡೆ ಜಲಕ್ಷಾಮದಿಂದ ತತ್ತರವಾಗುತ್ತದೆ ಆದ್ದರಿಂದ ಅಂತರ್ಜಲವನ್ನು ಹೆಚ್ಚು ಮಾಡುವಂತಹ ಜಲಪೂರಣ ಕಾರ್ಯವನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗದಂತಹ ಕ್ಷೇತ್ರದಲ್ಲಿ ಆಗಿರುವಷ್ಟು ಈ ಭಾಗದಲ್ಲಿ ಅಂತರ್ಜಲದ ಮಟ್ಟ ಕುಸಿದಿಲ್ಲ ಅಂತಹ ಕ್ಷೇತ್ರದಲ್ಲಿ ಜಲಪೂರಣ ವ್ಯವಸ್ಥೆಯಿಂಧ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಬರುವಂತಾಗಿದ್ದು ಇಂತಹ ಭಾಗಗಳಲ್ಲಿ ಈಗಲೇ ಮಳೆ ಕೂಯ್ಲು, ಕೊಳವೆ ಬಾವಿಗೆ ಜಲ ಪೂರಣದಿಂದ ಅಂತರ್ಜಲವನ್ನು ಹೆಚ್ಚಿಸಬಹುದಾಗಿದೆ ಎಂದ ಅವರು ಕೃಷಿಯಲ್ಲಿ ನೀರನ್ನು ಹಾಳುಮಾಡದೇ ಇರುವಷ್ಟು ನೀರನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಬೇಕು ಎಂಬುದನ್ನು  ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳ ನಿಮರ್ಾಣ, ಸೇರಿದಂತೆ ಅನೇಕ ವಿಚಾರಗಳನ್ನು ತಿಳಿಸಿ ನೀರಿನ ಗುಣ ಪರೀಕ್ಷೆಯ ಬಗ್ಗೆ ಹಾಗೂ ಮಳೆಕುಯ್ಲು, ಕೊಳವೆ ಬಾವಿಗಳಿಗೆ ಜಲ ಪೂರಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ,  ಜಿಲ್ಲೆಯಲ್ಲೇ ಮಲೆನಾಡಿನಂತಿರುವ ಈ ಭಾಗದಲ್ಲಿ ಅರಣ್ಯಗಳನ್ನು ರಕ್ಷಿಸವುದು ನಮ್ಮ ಕರ್ತವ್ಯವಾಗಿದ್ದು ಗುಡ್ಡಗಾಡು ಪ್ರದೇಶವಾದ ಅಂತರ್ಜಲ ಕುಸಿಯಲು ಅರಣ್ಯಗಳ ನಾಶವೇ ಕಾರಣವಾಗಿದೆ ಆದ್ದರಿಂದ ಅರಣ್ಯವನ್ನು ಬೆಳೆಸುವಂತಹ ಮನಸ್ಸನ್ನು ಪ್ರತಿಯೊಬ್ಬ ರೈತರು ಮಾಡಬೇಕು ಎಂದರು.
ಸಭೆಯಲ್ಲಿ ಕಾತ್ರಿಕೆಹಾಳ್ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯರು ಎನ್.ಇಂದಿರಮ್ಮ ಮಾತನಾಡಿ ಅರಣ್ಯಗಳಿಗೆ ಬೇಸಿಗೆಯಲ್ಲಿ ಬೆಂಕಿಯನ್ನು ಇಟ್ಟು ಸುಟ್ಟುಹಾಕುವಂತಹ ಪ್ರೌವೃತ್ತಿಯನ್ನು ನಮ್ಮ ಜನ ಬಿಡಬೇಕು ಅರಣ್ಯವನ್ನು ರಕ್ಷಿಸಿದರೆ ಮಳೆ ಬೆಳೆ ಸಕಾಲಕ್ಕಾಗುತ್ತದೆ ಹಾಗೂ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಬರಹಗಾರ ಮಲ್ಲಿಕಾಜರ್ುನ್ ಹೊಸಪಾಳ್ಯ, ಗದಗಿನ ಸಮಾಜ ಸೇವಕ ಚಂದ್ರಪ್ಪ, ಶಿಕ್ಷಕ ಜಯಣ್ಣ, ಹಾಗೂ ಸಂಘಟಕ ಮಾಜಿ ಗ್ರಾ.ಪಂ.ಅಧ್ಯಕ್ಷ ನಾಗರಾಜು ಸೇರಿದಂತೆ ಕಾತ್ರಿಕೆಹಾಳ್, ಕೆಂಪರಾಯನಹಟ್ಟಿ, ದೊಡ್ಡರಾಂಪುರ, ಅಜ್ಜಿಗುಡ್ಡೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಪಾಲ್ಗೊಂಡು ಜಲಪೂರಣದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಧುವರರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.