Tuesday, July 5, 2011



ತಾಲ್ಲೂಕಿನಲ್ಲಿ ಯಶಸ್ವಿಯಾದ ಶಾಲೆಗಾಗಿ ನೀವು ನಾವು
ಚಿಕ್ಕನಾಯಕನಹಳ್ಳಿ,ಜು..05 : ವಿದ್ಯೆಯನ್ನು ಕಲಿಸಬೇಕೆಂಬ ಆಸಕ್ತಿ ಶಿಕ್ಷಕರಲ್ಲಿದ್ದಾಗ ಮಕ್ಕಳಿಗೆ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಕುತೂಹಲ ಹೆಚ್ಚುತ್ತದೆ, ಈ ವಿಷಯಗಳನ್ನು ತಿಳಿಸುವುದೇ ಶಾಲೆಗಾಗಿ ನಾವು ನೀವು ಕಾರ್ಯಕ್ರಮವಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲ್ಲೂಕಿನ ಸಾಸಲು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲೆಲ್ಲಾ ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೋಷಕರಿಗೆ, ಎಸ್.ಡಿ.ಎಂ.ಸಿ ಸದಸ್ಯರಿಗೆ ಹಾಗೂ ಜನಪ್ರತಿನಿಧಿಗಳು ಶಾಲೆಯ ಸ್ವಚ್ಚತೆ, ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು. ಎಸ್.ಡಿ.ಎಂ.ಸಿ ಸದಸ್ಯರು ಶಾಲೆಗೆ ಆಗಾಗ ಬಂದು ಶಾಲೆಯ ಅಭಿವೃದ್ದಿ ಕೆಡ ಗಮನ ಹರಿಸಬೇಕು. ಶಾಲೆಯಲ್ಲಿ ಮೊದಲು ಗುಣಾತ್ಮಕ ಶಿಕ್ಷಣ ಕ್ರಿಯಾಶೀಲವಾದ ಸ್ಪಷ್ಠ ಓದಿಗೆ ಪ್ರಾಮುಖ್ಯತೆ ಇತ್ತು ಈಗ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತವೇ ಮುಖ್ಯವಾಗಿದೆ ಎಂದ ಅವರು ಎಸ್.ಡಿ.ಎಂ.ಸಿ ಸದಸ್ಯರುಗಳು 14 ವರ್ಷ ವಯಸ್ಸಾಗಿದ್ದು ಶಾಲೆಗೆ ಸೇರದೇ ಇದ್ದವರನ್ನು ಶಾಲೆಗಳತ್ತ ಪೋಷಕರ ಮನವೊಲಿಸಿ ಕರೆತರುವಲ್ಲಿ ನಮಗೆ ನೆರವಾಗಬೇಕು. ಶಾಲಾ ಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುತ್ತಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಿರಬೇಕು ಮತ್ತು ಸಕರ್ಾರಿ ಶಾಲೆಗಳಲ್ಲಿ ಆಯ್ಕೆಯಾಗಿ ಬಂದಿರುವ ಶಿಕ್ಷಕರು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಉತ್ತಮವಾಗಿ ಭೋದನೆ ನೀಡಲು ಸಕರ್ಾರಿ ಶಾಲೆಗೆ ಬಂದಿರುತ್ತಾರೆ ಆದರೂ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು ಸಕರ್ಾರಿ ಶಾಲೆಗಳತ್ತ ಮಕ್ಕಳು ವಾಲುವಂತೆ ಎಲ್ಲಾ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯ ರಮೇಶ್ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ಸಮನ್ವಯಾಧಿಕಾರಿ ಸುಧಾಕರ್, ದಿನೇಶ್, ರವಿಕುಮಾರ್, ಕುಮಾರ್, ಸುರೇಶ್, ಸುವರ್ಣಮ್ಮ ಮುಂತಾದವರಿದ್ದರು.
ಚಿಕ್ಕನಾಯಕನಹಳ್ಳಿ,: ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವಿದ್ದು ಉಚಿತ ಸಮವಸ್ತ್ರ, ಪಠ್ಯಪುಸ್ತಕವನ್ನು ಸಕರ್ಾರ ನೀಡುತ್ತಿರುವುದರಿಂದ ಶೈಕ್ಷಣಿ ಪದ್ದತಿ ಸುಧಾರಣೆಯಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಶ್ರದ್ದೆಯಿಂದ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಶಿಕ್ಷಣವನ್ನು ಪಡೆಯಲು ಸಲಹೆ ನೀಡಿದರು.
ವಿಷಯ ಪರಿವೀಕ್ಷಕ ಭೈರಪ್ಪನವರು ಮಾತನಾಡಿ ಶಿಕ್ಷಣದ ಹಕ್ಕನ್ನು ಯಾರು ಕಿತ್ತುಕೊಳ್ಳು ಸಾಧ್ಯವಿಲ್ಲ, ಉನ್ನತವಾದ ಶಿಕ್ಷಣ ಪಡೆಯುತ್ತಾ ವಿದ್ಯೆಯನ್ನು ಕಲಿತು ಪ್ರತಿಭಾವಂತರಾಗಲು ತಿಳಿಸಿದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಪ್ರತಿಜ್ಞಾವಿದಿ ಭೋದಿಸಿ ಈ ನಾಡಿನ ಪ್ರಜ್ಞಾವಂತ ಪ್ರಜೆಯಾದ ನಾವು,6ರಿಂದ 14 ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳು ಮನೆಗೆ ಸಮೀಪದಲ್ಲಿರುವ ಶಾಲೆಯಲ್ಲಿ ಉಚಿತವಾಗಿ ಹಾಗೂ ಕಡ್ಡಾಯವಾಗಿ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗುವಂತೆ ನೋಡಿಕೊಳ್ಳುತ್ತೇವೆ ಈ ಮೂಲಕ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆಗೆ ಬದ್ದತೆಯನ್ನು ಘೋಷಿಸಿದರು.
ಸಮಾರಂಭದಲ್ಲಿ ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ರೋಟರಿ ಕ್ಲಬ್ ಕಾರ್ಯದಶರ್ಿ ಅಶ್ವಥ್ನಾರಾಯಣ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಸಮಾರಂಭದಲ್ಲಿ ಸ್ವಾಭಿಮಾನಿ ಯುವಕರ ಪಡೆ ನಿಮರ್ಾಣ ಮಾಡಲು ಶಿಕ್ಷಕರಷ್ಠೇ ಸಮುದಾಯದ ಪಾತ್ರವೂ ಶ್ರೇಷ್ಠ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳನ್ನು ಸ್ವಾವಲಂಭಿ ಮಾಡಲು ಮಾನಸಿಕ ದೈಹಿಕ ಸಾಮಥ್ರ್ಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದ ಅವರು ಮಕ್ಕಳ ಕಲಿಕೆಯ ವಾಸ್ತವಿಕತೆಯನ್ನು ಪೋಷಕರು ಅರಿಯಲು ಶಾಲೆಯ ಬಗ್ಗೆ ಕಾಳಜಿಯಿಟ್ಟು ಆಗಾಗ ಶಾಲೆಗೆ ಭೇಟಿ ನೀಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ಎಮ್.ಎಮ್.ಜಗದೀಶ್, ಪಾರ್ವತಮ್ಮ, ಬಿ.ನಾಗರಾಜು, ಬಿ.ಎನ್.ಶಶಿಕಲಾ, ರವಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಮೂಲಕ ಹೆಚ್.ಪಿ.ಎಸ್. ಕಾಳಮ್ಮನಗುಡಿ ಬೀದಿ ಶಾಲೆಯ ಶಾಲೆಗಾಗಿ ನೀವು ನಾವು ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳಾದ ಎಚ್.ಸಿ.ಜಗದೀಶ್, ಮುಖ್ಯೋಪಾಧ್ಯಾಯ ಕೆ.ಜಿ.ಶಂಕರಪ್ಪ, ಹಾಗೂ ಪಟ್ಟಣದ ಬಸವೇಶ್ವರ ನಗರದ ಶಾಲೆಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಸಿ.ಎಲ್.ದೊಡ್ಡಯ್ಯ, ಎಂ.ಎನ್.ಸುರೇಶ್, ಬಾಬುಸಾಹೇಬ್ ಮುಂತಾದವರಿದ್ದರು.
11ನೇ ವಷರ್ಾಚರಣೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.05 : ಮಿತ್ರಕಲಾಸಂಘದ ವತಿಯಿಂದ ಸಂಪೂರ್ಣ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು ಇದೇ 13ರ ಬುಧವಾರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ನಾಟಕವನ್ನು ಶ್ರೀ ಆಂಜನೇಯಸ್ವಾಮಿ ಜಾತ್ರೆ ಮತ್ತು ಉಯ್ಯಾಲೋತ್ಸವದ ಅಂಗವಾಗಿ 11ನೇ ವಷರ್ಾಚರಣೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೈನುಗಾರಿಕೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಕರ್ಾರೇತರ ಸಂಸ್ಥೆ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರ

ಚಿಕ್ಕನಾಯಕನಹಳ್ಳಿ,ಜು.05 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರವನ್ನು ಇದೇ 8ರ ಶುಕ್ರವಾರದಂದು ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
ಶಿಬಿರವನ್ನು ಶ್ರೀ ಷಡಕ್ಷರಿ ತರಬೇನಹಳ್ಳಿ ಇವರ ತೋಟದಲ್ಲಿ, ರಾಜ್ಯ ರೈತ ಸಂಘ, ಹಸಿರು ಸೇನೆ, ತರಬೇನಹಳ್ಳಿ ಗ್ರಾಮೀಣ ಘಟಕ, ಪಶುಸಂಗೋಪನೆ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದು ಹಸಿರು ಸೇನೆಯ ಸತೀಶ್ ಕೆಂಕರೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಗ್ರಾ.ಪಂ.ಉಪಾಧ್ಯಕ್ಷೆ ಬಿ.ಎಸ್.ಗಂಗಾಧರ್, ಸದಸ್ಯೆ ಜಯಮ್ಮ, ತಿಪಟೂರು ಹಸಿರು ಸೇನೆ ಅಧ್ಯಕ್ಷ ದೇವರಾಜು, ತರಬೇನಹಳ್ಳಿ ಘಟಕದ ರಾಜ್ಯ ರೈತ ಸಂಘದ ಅಧ್ಯಕ್ಷ ಟಿ.ಬಿ.ಷಡಕ್ಷರಿ, .ಚಿ..ತಾ..ಮೂಲದ ಗೆಳೆಯರ ಒಕ್ಕೂಟದ ಅಧ್ಯಕ್ಷ ಹೊಸೂರಪ್ಪ, ಪ್ರಗತಿಪರ ಕೃಷಿಕ ಶಿವನಂಜಪ್ಪ ಬಾಳೇಕಾಯಿ, ಭೈಪ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಎಂ.ಎನ್.ಕುಲಕಣರ್ಿ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವ್ ಉಪಸ್ಥಿತರಿರುವರು.