Saturday, April 23, 2011







ನೆಮ್ಮದಿಯ ಜೀವನ ನಡೆಸಲು ಉತ್ತಮ ಆರೋಗ್ಯ ಬೇಕು : ಡಿ.ಸಿ.ಸೋಮಶೇಖರ್ಚಿಕ್ಕನಾಯಕನಹಳ್ಳಿ,
.23 : ಜೀವನದ ಅರ್ಧ ಆಯುಷ್ಯನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯ ಕಾಪಾಡಲು ತಾವು ಸಂಪಾದಿಸಿದ ಸಂಪತ್ತನ್ನು ಖಚರ್ು ಮಾಡುತ್ತಾ ಜೀವನ ಕಳೆಯುತ್ತೇವೆ, ಇದನ್ನು ತಪ್ಪಿಸಲು ಆರೋಗ್ಯವನ್ನು ಉತ್ತಮವಾಗಿರಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದೆಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಅರುಣೋದಯ ಮಹಿಳಾ ಮಂಡಳಿ ಉದ್ಗಾಟನಾ ಸಮಾರಂಭದ ಅಂಗವಾಗಿ ನಡೆದ ಉಚಿತ ಸ್ತ್ರೀರೋಗ ತಪಾಸಣೆ, ಚಿಕಿತ್ಸೆ ಮತ್ತು ಸಲಹಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜೀವನದ ಅರ್ಧ ಆಯುಷ್ನ್ನು ಹಣ ಸಂಪಾದನೆ ಮಾಡಲು, ಉಳಿದ ಅರ್ಧ ಆಯುಷ್ನ್ನು ಆರೋಗ್ಯ ಕಾಪಾಡಿಕೊಳ್ಳುವುದರಲ್ಲೇ ಜೀವನ ಕಳೆಯುತ್ತದೆ ಎಂದ ಅವರು ಇದನ್ನು ತಪ್ಪಿಸಲು ಆರೋಗ್ಯ ಉತ್ತಮವಾಗಿರಿಸಿಕೊಳ್ಳಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯು ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಕಳಸದ ಮಾತನಾಡಿ ಮಹಿಳೆಯರು ಬಹಳ ಸಂಕೋಚ ಸ್ವಭಾವದವರಾಗಿದ್ದು, ತಮ್ಮ ಕಾಯಿಲೆಗಳ ಬಗ್ಗೆ ಬೇರೆಯವರ ಹತ್ತಿರ ಹೇಳಿಕೊಳ್ಳಲಾಗದಂತವರಿಗೆ ಆರೋಗ್ಯ ಆರೋಗ್ಯ ಶಿಬಿರಗಳು ಬಹಳ ಉಪಯುಕ್ತವಾಗಿದೆ, ಮತ್ತು ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕು, ಪ್ರತಿಕುಟುಂಬವು ಶೌಚಲಯವನ್ನು ಹೊಂದಬೇಕು ಎಂದರು. ಸಂಘದ ಅಧ್ಯಕ್ಷೆ ಜಿ.ಎಸ್.ಕುಶಲ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬಂದ ನಾನು ಗ್ರಾಮೀಣ ಪ್ರದೇಶದ ಮಹಿಳೆಯರು ಅನುಭವಿಸುತ್ತಿರುವ ಆರೋಗ್ಯದ ಸಮಸ್ಯಗಳನ್ನು ಬಹಳ ಹತ್ತಿರದಿಂದ ನೋಡಿರುವ ಕಾರಣ ಇಂತಹ ಕಾರ್ಯಕ್ರಮಗಳು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ನಡೆಸಲು ನನಗೆ ಸಾಧ್ಯವಾಹಿತೆಂದು ಹೇಳಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಎನ್.ಎಂ.ದಯಾನಂದ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಚನ್ನಮಲ್ಲಯ್ಯ, ನಗರಾಭಿವೃದ್ದಿ ಆಯುಕ್ತ ಆದರ್ಶಕುಮಾರ್, ತಾ.ಪಂ.ಸದಸ್ಯ ಜಗದೀಶ್, ವೈದ್ಯರುಗಳಾದ ಶ್ರೀಧರ್, ಮಹೇಂದ್ರ, ಗಣೇಡ್, ಗಂಗಾಮಣಿ. ಸುದರ್ಶನ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವೀಣಾರಮೇಶ್ ಪ್ರಾಥರ್ಿಸಿ, ತಾರಾ ಸ್ವಾಗತಿಸಿ, ಸಿ.ಎ.ರಮೇಶ್ಕೆಂಬಾಳ್ ನಿರೂಪಿಸಿ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.23: ಗ್ರಾಮಾಂತರ ಪ್ರದೇಶದ ರೈತರು ಆಥರ್ಿಕವಾಗಿ ಸದೃಡವಾಗಲು ನಂದಿನಿ ಹಾಲು ಒಕ್ಕೂಟ ಹೆಚ್ಚಿನ ಪ್ರೋತ್ಸಾಹ ನೀಡಲು ಕಂಕಣ ಬದ್ದವಾಗಿದೆ ಎಂದು ಜಿಲ್ಲಾ ನಂದಿನಿ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಪ್ರತಿಪಾದಿಸಿದರು. ತಾಲೂಕಿನ ನವಿಲೆ ಗ್ರಾಮದ ಕಲ್ಲೇನಹಳ್ಳಿಯಲ್ಲಿ ನಂದಿನಿ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ಕನರ್ಾಟಕ ಸಕರ್ಾರ ಹಾಲು ಹಾಕುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ, ಹಸು ಕೊಳ್ಳುವವರಿಗೆ ಧನ ಸಹಾಯ ಹಸುವಿಗೆ ವಿಮೆ ಸೌಲಭ್ಯ ಒಂದು ಲೀಟರ್ ಹಾಲಿಗೆ ಹೆಚ್ಚುವರಿ 2ರೂ ನೀಡಿಕೆ, ಮೇವು ಕತ್ತರಿಸುವ ಯಂತ್ರ ಕೊಳ್ಳುವವರಿಗೆ ಶೇ.25 ಸಬ್ಸಿಡಿ ಗ್ರಾಹಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 2400 ರೂ. ಸಹಾಯ ಧನ ನೀಡುವುದು, ಆರೋಗ್ಯದ ವ್ಯವಸ್ಥೆಗೆ ಯಶಸ್ವಿನಿ ಯೋಜನೆ, ಮನೆ ಬಾಗಿಲಿಗೆ ಮಾಕರ್ೆಟ್ ವ್ಯವಸ್ಥೆ ಮುಂತಾದ ಅತ್ಯಮೂಲ್ಯವಾದ ಸೌಲಭ್ಯಗಳನ್ನು ಒಕ್ಕೂಟ ಒದಗಿಸಲಿದೆ, ಆದುದರಿಂದ ಖಾಸಗೀಯವರೊಂದಿಗೆ ವ್ಯವಹರಿಸದೆ, ಸಕರ್ಾರದ ಅಧೀನದ ಈ ಸಂಸ್ಥೆಯೊಂದಿಗೆ ಸಹಕರಿಸಿ, ಮುಂದಿನ ದಿನಗಳಲ್ಲಿ 250ಕ್ಕೂ ಹೆಚ್ಚಿನ ಲೀಟರ್ ಹಾಲು ನೀಡುವುದರ ಮುಖಾಂತರ ಮುಖ್ಯ ಕೇಂದ್ರವನ್ನಾಗಿಸಲು ಎಲ್ಲಾ ರೈತರು ಸಹಕರಿಸಬೇಕೆಂದರು. ಸ್ಥಳೀಯ ಶಿಕ್ಷಕರಾದ ಅಧ್ಯಕ್ಷ ಹಾಗೂ ಅಧಿಕಾರಿಗಳಿಳ ಉಪಕೇಂದ್ರ ಸಥಾಪನೆಗೆ ಸಹಕರಿಸಿದ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿ ರೈತರು ಕೇಂದ್ರಕ್ಕೆ ಹಾಲು ಹಾಕುವುದರ ಮುಖಾಂತರ ಸದೃಡವಾಗಲು ಸಹಕರಿಸಬೇಕೆಂದರು. ಸಮಾರಂಭದಲ್ಲಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಂಚಾಯ್ತಿ ಸದಸ್ಯರುಗಳಾದ ಶಕುಂತಲಾ ನಾಗರಾಜ್, ಶ್ರೀಧರ್, ಸ್ವಾತಂತ್ರ ಹೋರಾಟಗಾರ ಕೆ.ಶಿವಪ್ಪ, ಜಿಲ್ಲಾ ವಿಸ್ತರಣಾಧಿಕಾರಿ ಯರಗುಂಟಪ್ಪ, ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್, ನವಿಲೆ ಒಕ್ಕೂಟದ ಅಧ್ಯಕ್ಷ ನಂಜುಡಪ್ಪ ಉಪಸ್ಥಿತರಿದ್ದರು.ಸಮಾರಂಭದಲ್ಲಿ ನಂದನ, ತನುಪ್ರಭ ಪ್ರಾಥರ್ಿಸಿ ಕೆ.ಎನ್.ಶಂಕರಯ್ಯ ಸ್ವಾಗತಿಸಿ, ನಾಗರಾಜ್ ನಿರೂಪಿಸಿರಾಜಶೇಖರ್ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.20: ರಾಜ್ಯ ನಿವೃತ್ತ ನೌಕರರ 8ನೇ ಮಹಾ ಸಮ್ಮೇಳನವು ಇದೇ ತಿಂಗಳ 25ರಂದು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿದ್ದು ತಾಲೂಕಿನ ಎಲ್ಲಾ ನಿವೃತ್ತ ನೌಕರ ಬಾಂದವರು ಈ ಸಮ್ಮೇಳನಕ್ಕೆ ಪಾಲ್ಗೊಳ್ಳಬೇಕೆಂದು ತಾಲೂಕು ನಿವೃತ ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಕೋರಿದ್ದಾರೆ.ಶ್ರೀ ಶಿವಕುಮಾರಸ್ವಾಮಿಯವರ ಸಾನಿದ್ಯದಲ್ಲಿ ಸಮ್ಮೇಳನ ನಡೆಯಲಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರರು ಪಾಲ್ಗೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

,ಏ.20;: 2011-12ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಗುರತಿಸಿ ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಆದ್ಯತಾಪಟ್ಟಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ತಾತ್ಕಾಲಿಕ ಆದ್ಯತಾಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಇದೇ 23ರೊಳಗಾಗಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ಸಲ್ಲಿಸಲು ತಿಳಿಸಿದ್ದು, ಸಲ್ಲಿಸಲು ವಿಳಂಬವಾದಲ್ಲಿ ಇಲಾಖೆಯು ಹೊಣೆಯಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.