Tuesday, November 1, 2016


ಚಿಕ್ಕನಾಯಕನಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ 
ಚಿಕ್ಕನಾಯಕನಹಳ್ಳಿ.ನ.01 : ಜಗತ್ತಿನಲ್ಲಿರುವ ಎಲ್ಲಾ ಭಾಷೆ ಕಲಿಯಬೇಕು ಆದರೆ ನಮ್ಮ ಮಾತೃ ಭಾಷೆಯಾಗಿರುವ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಕನ್ನಡವನ್ನು ಇತರರಿಗೆ ಕಲಿಸಿ ಬೆಳೆಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 61ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಂಬರ್ನಲ್ಲಿ ನಾವು ಕನ್ನಡಿಗರಾಗದೇ ವರ್ಷವಿಡೀ ಕನ್ನಡಿಗರಾಗಬೇಕು, ವಿದ್ಯಾಥರ್ಿಗಳು ರಾಷ್ಟ್ರ, ರಾಜ್ಯದ ಬಗ್ಗೆ ಅಭಿಮಾನ ಬೆಳೆಸಿ ಶಿಸ್ತನ್ನು ರೂಢಿಸಿಕೊಳ್ಳಬೇಕು, ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದು ತಿಳಿಸಿದರು.
  ಕನ್ನಡ ನಾಡಿನಲ್ಲಿ ಹುಟ್ಟಿರುವ ಎಲ್ಲರೂ ಕನ್ನಡಾಭಿಮಾನವನ್ನು ಹೊಂದುವುದು ಖಡ್ಡಾಯವಾಗಬೇಕು, ಈ ನೆಲದ ನೀರು, ಭೂಮಿ, ಸಂಪತ್ತು ಹಂಚಿಕೊಂಡು ಇಲ್ಲಿಯ ಭಾಷಾ ಅಭಿಮಾನ ಬೆಳಸಿಕೊಳ್ಳದಿದ್ದರೆ ಹೇಗೆ ಎಂದು ತಿಳಿಸಿದರಲ್ಲದೆ ಕಾವೇರಿ ತೀಪರ್ಿಗೆ ತಲೆಬಾಗಿ ಬೇರೆಯವರಿಗೆ ನೀರು ನೀಡುವ ಪರಿಸ್ಥಿತಿ ಉಂಟಾಗಿದೆ, ಈಗಾಗಲೇ ರಾಜ್ಯದಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.  
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಗಂಗೇಶ್ ಮಾತನಾಡಿ, ಕ್ರಿ.ಶ.850ರಲ್ಲಿ ಕವಿರಾಜಮಾರ್ಗದಲ್ಲಿ ಕನ್ನಡ ಉಜ್ವಲವಾಯಿತು, ಆ ಸಾಹಿತ್ಯದಲ್ಲಿ ಕನರ್ಾಟಕದ ವಿಸ್ತಾರ, ವರ್ಣನೆಯ ಬಗ್ಗೆ ತಿಳಿದುಕೊಳ್ಳಲಾಯಿತು, ಕಾವೇರಿಯಿಂದ ಗೋದಾವರಿಯವರೆಗೂ ಕನರ್ಾಟಕ ವಿಸ್ತರಿಸಿದೆ ಎಂದ ಅವರು, 1956 ನವಂಬರ್ 1ರಂದು ಕನ್ನಡಿಗರೆಲ್ಲರ ಹೆಮ್ಮಯ ವಿಶಾಲ ಮೈಸೂರು ರಾಜ್ಯ ಉದಯವಾಯಿತು, 1973ರಲ್ಲಿ ಮೈಸೂರು ರಾಜ್ಯವನ್ನು ಕನರ್ಾಟಕ ಎಂದು ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಅವಧಿಯಲ್ಲಿ ನಾಮಕರಣ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಿ.ಬಿ.ಲೋಕೇಶ್, ಭಾಗವತ ಹನುಮಂತಯ್ಯನವರ ಮಗ ಬಸವರಾಜುರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. 
ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಗಂಗೇಶ್, ಬಿಇಓ ಕೃಷ್ಣಮೂತರ್ಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಸಬ್ಇನ್ಸೆಪೆಕ್ಟರ್ ಮಂಜುನಾಥ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿಸುವ ಅರಿವು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗರ, ಕನ್ನಡಾಂಬೆಯ ವೇಷಭೂಷಣಗಳನ್ನು ತೊಟ್ಟ ವಿದ್ಯಾಥರ್ಿಗಳು ಟ್ರಾಕ್ಟರ್ ಮೂಲಕ ಮೆರವಣಿಗೆ ನಡೆಸಿದರು. ಶಾಲಾ ವಿದ್ಯಾಥರ್ಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಾಕ್ಸ್-1
ಕನ್ನಡ ರಾಜ್ಯೋತ್ಸವ ನವಂಬರ್ 1ರಂದು ತಿಳಿದಿದ್ದರೂ ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಕೆಲವರು ಆಗಮಿಸಿದ್ದರು, ತಹಶೀಲ್ದಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಬಿಟ್ಟರೆ ಬೇರೆ ಇಲಾಖೆಯ ಯಾವ ತಾಲೂಕು ಮಟ್ಟದ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಹಾಗೂ ತಾ.ಪಂ.ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದ ಸದಸ್ಯರು ಸಹ ಕಾರ್ಯಕ್ರಮಕ್ಕೆ ಬರದಿದ್ದದ್ದು ಕನ್ನಡ ರಾಜ್ಯೋತ್ಸವದ ಬಗ್ಗೆ ಇರುವ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂಬುದು  ಸಾರ್ವಜನಿಕರ ಅಭಿಪ್ರಾಯ. 


ತಾಲ್ಲೂಕಿಗೆ ಶೀಘ್ರ ನೀರಾವರಿ ಯೋಜನೆ ಆರಂಭಿಸಲು ಹೋರಾಟ ಸಮಿತಿ ಜಿಲ್ಲಾಧಿಕಾರಿ, ಸಚಿವರಿಗೆ ಮನವಿ ಅಪರ್ಿಸಲು ನಿಯೋಗ 
ಚಿಕ್ಕನಾಯಕನಹಳ್ಳಿ,ನ.01 : ತಾಲ್ಲೂಕಿಗೆ ಶೀಘ್ರ ಹೇಮಾವತಿ ನೀರು ಹರಿಸುವುದು, ಎತ್ತಿನಹೊಳೆ ಮತ್ತು ಭದ್ರಾಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಹಾಗೂ ಸಚಿವರಿಗೆ ಮನವಿ ಅಪರ್ಿಸಲು ನಿಯೋಗ ತೆರಳಿತು.
ಹೇಮಾವತಿ ನಾಲಾ ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳುತ್ತಲೇ ಇಲ್ಲ, ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಮಳೆಯ ಅಭಾವ ಕೂಡ ಹೆಚ್ಚಾಗಿ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ಒಣಗುತ್ತಿದೆ ಇದರಿಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ , ಜಾನುವಾರುಗಳಿಗೂ ಹಾಗೂ ಕೃಷಿ ಬೆಳೆಗೂ ನೀರಿನ ಸಮಸ್ಯೆ ಹೆಚ್ಚಿದೆ ಆದ್ದರಿಂದ ಹೇಮಾವತಿ ಜೊತೆಗೆ ಎತ್ತಿನಹೊಳೆ ಹಾಗೂ ಭದ್ರಮೇಲ್ದಂಡೆ ನೀರಾವರಿ ಯೋಜನೆಯನ್ನು ತಾಲ್ಲೂಕಿಗೆ ಶೀಘ್ರ ತರುವಂತೆ ಒತ್ತಾಯಿಸಲಾಗುವುದು ಎಂದು ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ತುಮಕೂರಿಗೆ ತೆರಳಿದ ನಿಯೋಗದಲ್ಲಿ ಹೋರಾಟ ಸಮಿತಿಯ ಕೆಂಕೆರೆಸತೀಶ್, ಸಿ.ಹೆಚ್.ಚಿದಾನಂದ್, ಸಿ.ಡಿ.ಚಂದ್ರಶೇಖರ್, ಸಿ.ಟಿ.ಗುರುಮೂತರ್ಿ, ದಬ್ಬೆಘಟ್ಟಜಗದೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಗೋಡೆಕೆರೆಯ ಶ್ರೀತುರುಬಿನಮ್ಮ ದೇವಾಲಯ ನೂತನ ವಿಗ್ರಹ ಪ್ರತಿಷ್ಠಾಪನೆ 
ಚಿಕ್ಕನಾಯಕನಹಳ್ಳಿ,ನ.1 : ತಾಲ್ಲೂಕಿನ ಗೋಡೆಕೆರೆಯ ಶ್ರೀತುರುಬಿನಮ್ಮ ದೇವರ ಜೀಣರ್ೋದ್ದಾರ,  ನೂತನ ದೇವಾಲಯ ಪ್ರವೇಶ, ನೂತನ ವಿಗ್ರಹ ಶಿಖರ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭ ನವಂಬರ್ 3ರಿಂದ 4ರವರೆಗೆ ಶ್ರೀ ಕ್ಷೇತ್ರ ಗೋಡೆಕೆರೆಯಲ್ಲಿ ನಡೆಯಲಿದೆ.
3ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗೋಡೆಕೆರೆ ಜಗದ್ಗುರು ಸಿದ್ದರಾಮೇಶ್ವರಸ್ವಾಮಿಯ ಆಗಮನದೊಂದಿಗೆ ಗಂಗಾಪೂಜೆ, ರುದ್ರಪಠಣ ಆಲಯ ಪ್ರವೇಶ, ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗಿನ ಜಾವ 4ರಿಂದ 5ಗಂಟೆಯವರೆಗೆ ಸಲ್ಲುವ ಶುಭ ಬ್ರಾಹ್ಮಿ ಲಗ್ನದಲ್ಲಿ ಮೃತ್ಯುಂಜಯದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ತುರುಬಿನಮ್ಮ ದೇವಿ ಮತ್ತು ಶ್ರೀ ಪಾತಪ್ಪಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ನೂತನ ಶಿಖರಕ್ಕೆ ಕಲಶ ಪ್ರತಿಷ್ಠಾಪನೆ ನಡೆಯಲಿದೆ.
ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಸಿದ್ದರಾಮದೇಶೀಕೇಂದ್ರಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ, ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ, ಆದಿಜಾಂಬವ ಮಠದ ಷಡಕ್ಷರಿಮುನಿ ದೇಶೀಕೇಂದ್ರಸ್ವಾಮೀಜಿ ಧಾಮರ್ಿಕ ಸಮಾರಂಭ ಉದ್ಘಾಟಿಸುವರು. ಚಿತ್ರದುರ್ಗ ಯಾದವಾನಂದಸ್ವಾಮೀಜಿ, ಹೊಸದುರ್ಗ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿಸ್ವಾಮೀಜಿ, ಶಾಸಕ ಸಿ.ಬಿ.ಸುರೇಶ್ಬಾಬು ಆಗಮಿಸಲಿದ್ದಾರೆ.

Friday, September 30, 2016ಸಿಡಿಪಿಓ ಕಛೇರಿಯಿಂದ ಮಕ್ಕಳಿಗೆ ಆಧಾರ್ ನೊಂದಣಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಆಧಾರ್ ನೊಂದಣಿ ಕಾರ್ಯದಿಂದ ತಾಲ್ಲೂಕಿನ ಮಕ್ಕಳ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಈ ಮೂಲಕ ಆರಂಭದಿಂದಲೇ ಮಕ್ಕಳ ದೊರಕುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಪ್ಪಯ್ಯ ಹೇಳಿದರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ್ ನೊಂದಣಿ ದೇಶದ ಯಾವುದೇ ಮೂಲೆಯಲ್ಲಿದ್ದರು ಇಂತಹ ವ್ಯಕ್ತಿಯೇ ಎಂಬುದು ಪತ್ತೆಯಾಗುವ ಸಾಧನ, ಈ ನೊಂದಣಿಯಿಂದ ಸಕರ್ಾರಿ ಸೌಲಭ್ಯಗಳಿಗೂ ಸಹಾಯವಾಗುತ್ತದೆ ಇದನ್ನು ಪ್ರತಿ ಮಗುವು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ಮಾತನಾಡಿ, ಸಕರ್ಾರ ನೀಡಿರುವ ಟ್ಯಾಬ್ ಮೂಲಕ ಮಕ್ಕಳ ನೊಂದಣಿ ಮಾಡುವುದರಿಂದ ಸಮಗ್ರ ವರದಿ ಲಭ್ಯವಾಗುತ್ತದೆ, ಈ ನೊಂದಣಿಯಿಂದ ಯಾವುದೇ ಮಾಹಿತಿಯ ಕೊರತೆ ಉಂಟಾಗಲಾರದು ಎಂದರು. 
ಈ ಸಂದರ್ಭದಲ್ಲಿ ಮಕ್ಕಳಿಂದ ಹೆಬ್ಬೆಟ್ಟು ಗುರುತು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಚಾರಕಿ ಅನುಸೂಯಮ್ಮ, ಮಹದೇವಮ್ಮ, ಲಕ್ಷ್ಮಯ್ಯ, ಶಾರದಮ್ಮ, ಪ್ರಮೀಳಾ, ಚೌಗತಿ ಹಾಜರಿದ್ದು ನೊಂದಣಿ ಕಾರ್ಯ ನೆರವೇರಿಸಿದರು.


ಎಪಿಎಂಸಿ ರೈತ ಸಂಜೀವಿನಿ ಯೋಜನೆ ವತಿಯಿಂದ ಮೃತ

ರೈತನ ಕುಟುಂಬಕ್ಕೆ 1ಲಕ್ಷ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, : ಮೃತ ರೈತ ಕುಟುಂಬಕ್ಕೆ ಸಕರ್ಾರ ನೀಡುವ ಪರಿಹಾರದ ಹಣವನ್ನು ಬದುಕು ಕಟ್ಟಿಕೊಳ್ಳಲು ತೊಡಗಿಸಿಕೊಂಡು ಜೀವನವನ್ನು ಸದೃಡ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜು ಹೇಳಿದರು.
ಕೆಲವು ತಿಂಗಳ ಹಿಂದೆ ಚುಂಗನಹಳ್ಳಿ ಗ್ರಾಮದ ರೈತ ಮಧುಸೂದನ್ ಟ್ಯಾಕ್ಟರ್ನಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುವ ವೇಳೆ ಟ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಸೂಕ್ತ ದಾಖಲಾತಿ ಪಡೆದು ಸಕರ್ಾರಕ್ಕೆ ವರದಿ ಸಲ್ಲಿಸಿದ ಪ್ರಸ್ಥಾವನೆಯಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಶಾರಾಣಿ ರವರಿಗೆ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ.ರೂ ಮೊತ್ತದ ಚೆಕ್ ನೀಡಲಾಗಿದೆ ಈ ಹಣವನ್ನು ನಿಮ್ಮ ಆಥರ್ಿಕ ಭದ್ರತೆಗೆ ತೊಡಗಿಸಿಕೊಳ್ಳುವಂತೆ ಹೇಳಿದರು. 
ಎ.ಪಿ.ಎಂ.ಸಿ ಕಾರ್ಯದಶರ್ಿ ಶ್ರೀನಿವಾಸ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ರೈತ ಭಾಗಿಯಾಗಿದ್ದಾಗ ಅಪಘಾತ ಅಥವಾ ಸಾವು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ವಸ್ತು ಸ್ಥಿತಿಯ ದಾಖಲೆ ಸಂಗ್ರಹಿಸಿ ರೈತ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ಹಣ ನೀಡಲಾಗುತ್ತದೆ ಇದರಿಂದ ಸಂಕಷ್ಟಕ್ಕೊಳಗಾದವರ ಆಥರ್ಿಕ ಸಮಸ್ಯೆ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜು, ಈಶಣ್ಣ ಹಾಜರಿದ್ದರು.

Saturday, September 24, 2016


ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ಶಿಕ್ಷಣಕ್ಕಾಗಿ  ಹೋರಾಟವಾಗಿತ್ತು
ಚಿಕ್ಕನಾಯಕನಹಳ್ಳಿ,ಸೆ.24: ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸ್ವಾತಂತ್ರ್ಯ ಚಳುವಳಿಯ ಜೊತೆಯಲ್ಲಿ ನೋಡಬೇಕು ಆಗಲೇ ಶಿಕ್ಷಣ ಪಡೆಯಲು ನಡೆದ ಹೋರಾಟ, ಚಳುವಳಿ, ಚಚರ್ೆಗಳು ತಿಳಿಯುವುದು ಎಂದು ಕನರ್ಾಟಕ ಜನಶಕ್ತಿಯ ಡಾ.ವಾಸು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ನಗರ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಆಯ್ದ ಶಿಕ್ಷಕರಿಗಾಗಿ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂವಿಧಾನದ ಆಶಯ ವಿಷಯದ ಕುರಿತು ಮಾತನಾಡಿದರು.
ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ, ಇದನ್ನು ಪಡೆಯಲು ಹಲವರು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಚಳುವಳಿಗಾಗಿ ನಡೆದ ಹೋರಾಟದಂತೆ ಮಧ್ಯಮ ವರ್ಗದ ಜನತೆ, ಶೋಷಿತ ಸಮುದಾಯ ಶಿಕ್ಷಣಕ್ಕಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು, ಬ್ರಿಟೀಷ್ ಸಕರ್ಾರ ಎಲ್ಲರಿಗೂ ಶಿಕ್ಷಣ ನೀಡಲಿಲ್ಲ ಆಗಿನ ಮಿಷನಿರಿಗಳು ಮಾತ್ರ ಶಿಕ್ಷಣ ನೀಡಿದವು, ಬ್ರಿಟೀಷ್ ಗವರ್ನರ್ ಮೆಕಾಲೆ ಗೋಪಾಲಕೃಷ್ಣ, ಗಾಂಧೀಜಿ ಮತ್ತಿತರರು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ಮುಂದಾಗಿದ್ದರು, ಶಿಕ್ಷಣ, ಆರೋಗ್ಯ, ಜನರ ಹಕ್ಕುಗಳಿಗಾಗಿ ಚಚರ್ೆಗಳನ್ನು ನಡೆಸಿದರು ಎಂದ ಅವರು, ಶಿಕ್ಷಣ ಮೂಲಭೂತ ಹಕ್ಕು ಆಗಬೇಕು ಎಂದು ಸಂವಿಧಾನ ರಚನಾ ಸಭೆಯಲ್ಲಿ ನಿಧರ್ಾರವಾಗಿತ್ತು ಆದರೂ ಈ ಬಗ್ಗೆ ಹಲವರು ವಿರೋಧಿಸಿದರು, ದೇಶದಲ್ಲಿ 2006ರ ವರದಿಯಂತೆ 100ಕ್ಕೆ 20ರಷ್ಟು ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ, ಎಸ್.ಎಸ್.ಎಲ್.ಸಿ ನಂತರ ಶೇ.45%ರಷ್ಟು ಪಿ.ಯು.ಸಿ ನಂತರ ಶೇ.8% ಪರಿಶಿಷ್ಠ ಜಾತಿ ಹಾಗೂ ಶೇ.7%ರಷ್ಟು ಪರಿಶಿಷ್ಟ ಪಂಗಡದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಿಲ್ಲ ಎಂದು ವಿಷಾಧಿಸಿದರು.
ಅಸಮಾನತೆ ಹೋಗಲಾಡಿಸಲು ಸಮಾನ ಶಾಲಾ ನೀತಿ ಜಗತ್ತಿನಲ್ಲಿ ಇದೆ, ಆದರೆ ಅಸಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಮಸ್ಯೆ ಹೆಚ್ಚುತ್ತಿದೆ, ಶಿಕ್ಷಕರಿಗೆ ಬೋಧನೆಯ ಜೊತೆಗೆ ಸಕರ್ಾರ ಹೇರುತ್ತಿರುವ ಒತ್ತಡಗಳಿಂದಲೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಹೇಳಿದರು. 
ಮಂಡ್ಯದ ಮಹಿಳಾ ಮುನ್ನಡೆಯ ಮಲ್ಲಿಗೆಯವರು  ಮಾತನಾಡಿ, ಮಕ್ಕಳ ಕಲಿಕಾಮಾದ್ಯಮ ಮಾತೃಭಾಷೆಯಲ್ಲಿರಬೇಕು ನಂತರದಲ್ಲಿ ಅವರಿಗೆ ಅನ್ಯಭಾಷೆಗಳ ಪರಿಚಯವನ್ನು ಮಾಡಬೇಕು ಈ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆ ನಮಗೆ ಭಾಷೆಯಾಗಿ ಬೇಕಾಗಿದೆ ವಿನಃ ಕಲಿಕಾಮಾದ್ಯಮವಾಗಿ ಅಲ್ಲ ಎಂದರು.
ಇಂದು ನಮ್ಮ ದೇಶದ ಒಟ್ಟು ಮಕ್ಕಳಲ್ಲಿ ಶೇಕಡ27ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮದಲ್ಲಿ ವ್ಯಾಸಾಂಗಮಾಡುತ್ತಿದ್ದಾರೆ ಅದರೆ ಕೆಲವೊಂದು ಪ್ರಯೋಗಗಳ ಮೂಲಕ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ, ಖಿನ್ನತೆಗೆ ಒಳಗಾಗುತ್ತಾರೆ, ಬಹುತೇಕ ಆತ್ಮಹತ್ಯಾ ಪ್ರೌವೃತ್ತಿ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ ಹಾಗೂ ಸಾಮಾಜಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುವಂತಹ ಧೈರ್ಯವಾಗಲಿ ಇವರಿಗಿರುವುದಿಲ್ಲ ಹಾಗೂ ಇಂತಹ ಮಕ್ಕಳು ವೃತ್ತಿ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುವುದು ಕಷ್ಟಕರ ಅದ್ದರಿಂದ ನಾವು ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಮಾತೃಭಾಷೆಯ ಅಗತ್ಯತೆ ಹೆಚ್ಚಾಗಿದ್ದು ಅನ್ಯಭಾಷೆಯನ್ನು ಮಾತೃಭಾಷೆಯಮೂಲಕ ಕಲಿಯುವುದು ಸೂಕ್ತ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಂವಿಧಾನದ ಆಶಯವೇ ಶಿಕ್ಷಣವಾಗಿದೆ, ಆಥರ್ಿಕವಾಗಿ, ಸಾಮಾಜಿಕವಾಗಿ ಮುಂದುವರಿಯುವದರ ಜೊತೆಗೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು.
ಕೆ.ಆರ್.ಪೇಟೆಯ ನಾಗೇಶ್.ಎ ಇಲಾಖೆಯ ಒತ್ತಡಗಳ ನಡುವೆ ಶಿಕ್ಷಕ ಎಂಬ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಸಾಪ ನಗರ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪದಾಧಿಕಾರಿಗಳಾದ ರಾಮಕೃಷ್ಣಪ್ಪ, ಕಂಟಲಗೆರೆ ಗುರುಪ್ರಸಾದ್, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.
27ರಂದು ಸಕರ್ಾರಿ ಪಿ.ಯು.ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಗಳ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.24 : ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇದೇ 27ರ ಮಂಗಳವಾರ ನಡೆಯಲಿದೆ.
ಸಮಾರಂಭ ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಕೃಷ್ಣಸ್ವಾಮಿ, ಸಾಹಿತಿ ಹಾಗೂ ಲೋಕೋಪಯೋಗಿ ಎಇಇ ಗಂಗಾಧರ ಕೊಡ್ಲಿಯವರ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿರುವರು.


Friday, September 23, 2016


ಪೌರ ಕಾಮರ್ಿಕರ ಮಕ್ಕಳು ಶಿಕ್ಷಣ ಪಡೆಯಿರಿ : ಸಿಡಿಸಿ 
ಚಿಕ್ಕನಾಯಕನಹಳ್ಳಿ : ಪೌರ ಕಾಮರ್ಿಕರು ತಮ್ಮ ಮಕ್ಕಳನ್ನು ಕಾಮರ್ಿಕರನ್ನಾಗಿ ಮಾಡದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ  ಇಂಜನಿಯರ್, ಡಾಕ್ಟರ್, ಅಧಿಕಾರಿ ಯಾವುದೇ ವೃತ್ತಿಯಾದರೂ  ಸರಿ ಸತ್ಪ್ರಜೆಯನ್ನಾಗಿ  ಮಾಡಿ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸಲಹೆ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಸಮುದಾಯ ಭವನದಲ್ಲಿ ಪೌರ ಕಾಮರ್ಿಕರ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಪಟೈಟಿಸ್ ಬಿ ಚುಚುಮದ್ದು ನೀಡಿ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಮರ್ಿಕರ ಮಕ್ಕಳು ಕಾಮರ್ಿಕರಾಗಿಯೇ ಇರಬೇಕು ಎಂಬ ತತ್ವ ತೊಲಗಬೇಕು, ಅವರೂ ವಿದ್ಯಾವಂತರಾಗಿ ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಆಗಬೇಕು ಆ ನಿಟ್ಟಿನಲ್ಲಿ ಅವರ ಪೋಷಕರು ಶ್ರಮಿಸಬೇಕು, ಪೌರ ಕಾಮರ್ಿಕರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಆರೋಗ್ಯವಿದ್ದರೆ ಎಲ್ಲಿ ಬೇಕಾದರೂ ಸಮರ್ಥವಾಗಿ ದುಡಿಯಬಲ್ಲೇ ಎಂಬ ಆತ್ಮವಿಶ್ವಾಸ ಮೂಡುತ್ತದೆ  ಅದಕ್ಕಾಗಿ ಪುರಸಭೆ ವತಿಯಿಂದ ನೀಡುವ ಗ್ಲೌಸ್ಗಳನ್ನು ಬಳಸಿ ಕರ್ತವ್ಯ ನಿರ್ವಹಿಸಿ ಎಂದ ಅವರು,  ಆಮ್ಟೆ ಎಂಬ ವ್ಯಕ್ತಿಯ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ಆಚರಿಸುತ್ತಾರೆ, ಆಮ್ಟೆ 1952ರಲ್ಲಿ ಕಲ್ಕತ್ತಾ ಪುರಸಭೆಯ ಉಪಾಧ್ಯಕ್ಷರಾಗಿದ್ದವರು, ಪೌರ ಕಾಮರ್ಿಕರು ಕೆಲಸ ಮಾಡುತ್ತಿದ್ದ ಕೊಳಚೆ ಪ್ರದೇಶಗಳು ಹಾಗೂ ಚರಂಡಿಗಳ ಸ್ಥಿತಿಗತಿ ಕಂಡು ಅವರಲ್ಲಿ ಮರುಕ ಉಂಟಾಗಿ ಪೌರ ಕಾಮರ್ಿಕರಿಗೆ ಇದರಿಂದ ಆಗುತ್ತಿದ್ದ ತೊಂದರೆಯನ್ನು ಕಣ್ಣಾರೆ ಕಾಣಲು ಖದ್ದು ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವುದರಿಂದ ಕುಷ್ಟ ರೋಗ ಹಾಗೂ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಅವರ ಮನಪರಿವರ್ತನೆಯಾಗಿ ತಮ್ಮ ಸ್ವಂತ ಒಂದು ನೂರ ಐವತ್ತು  ಎಕರೆ ಜಮೀನಲ್ಲಿ ಐವತ್ತು ಎಕರೆ ಜಮೀನನ್ನು  ಕುಷ್ಟ ರೋಗ ನಿವಾರಣೆ ಮಾಡಲು ಆಸ್ಪತ್ರೆಗೆ ದಾನ ನೀಡಿದ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯ ಪ್ರದೀಪ್ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಕಾಮರ್ಿಕರು ತಾವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಪುರಸಭೆ ವತಿಯಿಂದ ನೀಡುವ ಸಲಕರಣೆಗಳನ್ನು ಉಪಯೋಗಿಸಿ ಸ್ವಚ್ಛತೆ ಕಡೆ ಪಾಲ್ಗೊಳ್ಳಬೇಕು, ಮಲಿನತೆಯನ್ನು ಸ್ವಚ್ಛ ಮಾಡುವಾಗ ವೈರಸ್ನ ಸೋಂಕು ತಗುಲಬಹುದು ಅದಕ್ಕಾಗಿಯೇ ಕಾಮರ್ಿಕರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಅಶೋಕ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಆರೋಗ್ಯ ಇಲಾಖೆಯ ಮಧು, ಪರಿಸರ ಇಂಜನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಉಪಸ್ಥಿತರಿದ್ದರು.

ಕೋ ಆಪರೇಟಿವ್ ಬ್ಯಾಂಕ್ ವಾಷರ್ಿಕ ಸಭೆ

ಚಿಕ್ಕನಾಯಕನಹಳ್ಳಿ,ಸೆ.23 : ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ 2015-16ನೇ ಸಾಲಿನಲ್ಲಿ 33 ಕೋಟಿ ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿ 7 ಲಕ್ಷ 30 ಸಾವಿರ ರೂಪಾಯಿಗಳು ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಎಲ್ ದೊಡ್ಡಯ್ಯ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ  ನಡೆದ 2015-16ನೇ ಸಾಲಿನ ವಾಷರ್ಿಕ ಸಭೆ ಹಾಗೂ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 5937 ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ 87 ಲಕ್ಷ 85 ಸಾವಿರ ರೂಗಳಿದ್ದು ಬ್ಯಾಂಕಿನ ಆಪತ್ ನಿಧಿ ಹಾಗೂ ಇತರೆ ನಿಧಿಗಳು ಸೇರಿ 1 ಕೊಟಿ  47 ಲಕ್ಷಕ್ಕೆ ಹೆಚ್ಚು ಠೇವಣಿಗಳಿವೆ,  ಈ ಸ್ಟಾಂಪಿಂಗ್ ಹಾಗೂ ಡಿ.ಡಿಗಳಿಂದ 3 ಲಕ್ಷದ 14 ಸಾವಿರ ರೂ ಕಮಿಷನ್ ಬಂದಿದೆ ಎಂದರು. 
ನನ್ನ ಅಧ್ಯಕ್ಷಾವಧಿಯ 3 ತಿಂಗಳಲ್ಲಿ  75 ಲಕ್ಷ ಸಾಲ ವಸೂಲು ಮಾಡಿರುವುದಾಗಿ  ಹೇಳಿದ ಅವರು,  2015-16ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು 651 ಜನ ಷೇರುದಾರರು 3 ಕೊಟಿ 57 ಲಕ್ಷ 94 ಸಾವಿರ ರೂ ಸುಸ್ತಿಯಾಗಿದ್ದಾರೆ. ಪ್ರತಿವರ್ಷ ಬ್ಯಾಂಕಿನ ಷೇರುದಾರರಿಗೆ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತುಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕಿನ ಷೇರುದಾರರು ನಿಧನ ಹೊಂದಿದರೆ,  1 ಸಾವಿರ ರೂ ಸಂಸ್ಕಾರ ನಿಧಿಯನ್ನು. 5000ರೂ ಹೆಚ್ಚಿಸಲು ಅನುಮತಿ ನಿಡುವಂತೆ ಸಭೆಯಲ್ಲಿ ಕೋರಿದ್ದಾರೆ.
ವಾಷರ್ಿಕ ಸಭೆ ಉದ್ಘಾಟಿಸಿದ ಸಾಹಿತಿ ಎಮ್.ವಿ.ನಾಗರಾಜರಾವ್ ಮಾತನಾಡಿ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನ ಸಪ್ತತಿ ಸಭಾಂಗಣವನ್ನು ನವೀಕರಿಸಿ ಷೇರುದಾರರ ಮಕ್ಕಳ ಮದುವೆ ಸಮಾರಂಭಗಳಿಗೆ ನೀಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಯಾವುದಾದರೂ ತೊಡಕುಗಳಿದ್ದರೆ ಗಣ್ಯರ ಸಮಿತಿಯನ್ನು ರಚಿಸಿ ಬಾಡಿಗೆ ನೀಡುವಂತೆ ಸಲಹೆ ನೀಡಿದರು.
 ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲವಕುಮಾರ್, ಸದಸ್ಯರಾದ ಸಿ.ಪಿ.ಚಂದ್ರಶೇಖರ್ಶೆಟ್ಟಿ. ಮಹಮದ್ ಖಲಂದರ್, ರಂಗಸ್ವಾಮಯ್ಯ, ಪಾಪಯ್ಯ, ಹೆಚ್.ಬಿ.ಪ್ರಕಾಶ್, ಸಿ.ಹೆಚ್ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುಷ್ಪ, ಟಿ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಣ್ಣ ಕಥೆಗಳ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಸ್ತಿಯವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಸಣ್ಣ ಕಥೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು 
ಸ್ಪಧರ್ೆಯಲ್ಲಿ ಭಾಗವಹಿಸುವರು ತಾಲ್ಲೂಕಿನ ವ್ಯಾಪ್ತಿಯಲ್ಲಿರಬೇಕು. ಸ್ಪಧರ್ೆಯಲ್ಲಿ ಎರಡು ವಿಭಾಗಗಳಲಿದ್ದು,  ವಿದ್ಯಾಥರ್ಿಗಳ ವಿಭಾಗ ಹಾಗೂ ಸಾರ್ವಜನಿಕರ ವಿಭಾಗ ಎಂಬುದಾಗಿದೆ.  ವಿದ್ಯಾಥರ್ಿ ವಿಭಾಗದಲ್ಲಿ ಯಾವುದಾದರೂ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವರಾಗಿದ್ದರೂ ಸಹ ಸ್ಪಧರ್ೆಯಲ್ಲಿ ಪಾಲ್ಗೋಳ್ಳಬಹುದು.
 ಸಾರ್ವಜನಿಕ ವಿಭಾಗದಲ್ಲಿ 18 ರಿಂದ 50 ವಯೋಮಾನದವರು ಭಾಗವಹಿಸಬಹುದು. ಕಥೆಯನ್ನು ಕಳುಹಿಸುವವರು ಎ4 ಅಳತೆಯ ಹಾಳೆಯಲ್ಲಿ ಕೈಬರಹದಲ್ಲಿ 4 ಪುಟಗಳು ಮೀರದಂತೆ ಬರೆದಿರಬೇಕು. ಕಥೆ ಯಾವುದೇ ಭಾಷೆಯ ಅನುವಾಗಿರದೆ ಸ್ವಂತ ರಚಿಸಿರಬೇಕು ಕಸಾಪ ಪಧಾಧಿಕಾರಿಗಳು ಭಾಗವಹಿಸುವಂತಿಲ್ಲ. ಒಬ್ಬರಿಗೆ ಒಂದು ಕಥೆ ಬರೆಯಲು ಅವಕಾಶವಿದೆ ಆಯ್ದ ಕತೆಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಕ್ಟೋಬರ್ 30ರೊಳಗೆ ಮಾಸ್ತಿಯವರ ಸಣ್ಣಕಥೆಗಳನ್ನು ತಾಲ್ಲೂಕು ಕಸಾಪ ಅಧ್ಯಕ್ಷೆ ಇಂದಿರಮ್ಮ ದಶಾವತರ ದೇವಾಲಯದ ಬಳಿ ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9900538918, 8970430264.ಸಂಪಕರ್ಿಸಿ.
ಬ್ರಹ್ಮಶ್ರೀ ನಾರಾಯಣ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸೆ.26ರಂದು 


ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ವಿವಿಧ ಸಂಘಗಳ ಸಂಯ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಹಾಗೂ ವಿಶ್ವ ಕರ್ಮ ಜತಂತೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು 10.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ದೇವರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಾವಚಿತ್ರ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಗೃಹ ಸಚಿವ ಡಾ||ಜಿ.ಪರಮೇಶ್ವರ ತಾ.ಪಂ ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಪುರಸಭಾ ಉಪಾಧ್ಯಕ್ಷೆ ಬಿ.ಇಂದಿರಾಪ್ರಕಾಶ್, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ವೈ.ಸಿ ಸಿದ್ದರಾಮಯ್ಯ,ಎಸ್.ಟಿ ಮಹಾಲಿಂಗಯ್ಯ, ಮಂಜುಳ ಭಾಗವಹಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಕನರ್ಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ,ತುಮಕೂರು ಜಿಲ್ಲಾಧ್ಯಕ್ಷ ಅಜಯಕುಮಾರ್, ಹಾಗೂ ತುಮಕೂರು ವಿವಿ ಪ್ರಾಧ್ಯಾಪಕ ಪ್ರೋ.ರಮೇಶ್ ಸಾಲಿಯಾನ್, ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡುವರು. ವಿರ್ಶವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿಯ ಶ್ರೀಗುರು ಶಿವಸುಜ್ಞಾನ ಸ್ವಾಮೀಜಿ, ಹಾಗೂ ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಸ್ವಾಮೀಜಿ ಭಾಗವಹಿಸಲಿದ್ದಾರೆ. ತುಮಕೂರು ವಿಶ್ವಕರ್ಮ ಸಮಾಜದ ಹೆಚ್.ಬಿ.ನಾಗರಾಜಚಾರ್, ಬೆಂಗಳೂರು ಬಿ.ಬಿ.ಎಮ್.ಪಿ ಸದಸ್ಯೆ ಹೇಮಲತಾ ಸತೀಶ್, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯಈಡಿಗ ಸಮಾಜದ ಅಧ್ಯಕ್ಷ ಎನ್.ಜಿ.ನಾಗರಾಜು, ವಿಶ್ವಕರ್ಮ ಜನಾಂಗದ ಅಧ್ಯಕ್ಷ ನಾಗರಾಜಾಚಾರ್, ಈಡಿಗ ಸಮಾಜದ ಮುಖಂಡ ಹಾಗೂ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸೋಮಶೇಖರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.Thursday, September 22, 2016


ಪುರಸಭೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೊಳಪಡಿಸಿ : 
  ಚಿಕ್ಕನಾಯಕನಹಳ್ಳಿ,: ಪುರಸಭೆಯಲ್ಲಿ ಲೆಕ್ಕಪತ್ರ ಹಾಗೂ ಚೆಕ್ ವಿತರಣೆಯಲ್ಲಿ ನಡೆದಿರವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಆಗ್ರಹಿಸಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬಿಟ್ಟಿರುವ ಪೈಪ್ಲೈನ್ ಇಳಿಸುವ ಕಾಮಗಾರಿ ಕೂಲಿಗೆ 70ಸಾವಿರ ರೂಪಾಯಿ ನೀಡಿರುವುದರ ಹಿಂದೆ ಅವ್ಯವಹಾರ ನಡೆರುವ ಶಂಕೆ ಇದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಸದಸ್ಯರು ಇರುವಂತಹ ವಾಡರ್ಿನಲ್ಲಿ ಕೊರೆದಿರುವಂತಹ ಕೊಳವೆ ಬಾವಿಗಳಿಗೆ  ಶಿಘ್ರವಾಗಿ ಮೋಟಾರ್ ಪಂಪ್ಆಳವಡಿಸಿ ವಿದ್ಯುತ್ಸಂಪರ್ಕ ಕೊಡಿಸುತ್ತೀರಾ ಆದರೆ ನಮ್ಮ ವಾಡರ್ಿನಲ್ಲಿ ಕೊಳವೇ ಬಾವಿ ಕೊರೆದು ತಿಂಗಳುಗಳು ಕಳೆದರೂ ಮೋಟಾರ್ ಪಂಪ್ ಆಳವಡಿಸುವುದಿಲ್ಲವೆಂದು ಹಾಗೂ ನಾವು ಸಭೆಯಲ್ಲಿ ಹೇಳಿದಂತಹ ವಿಚಾರಗಳನ್ನು ದಾಖಲಿಸುತ್ತಿಲ್ಲ ಎಂದು ಸಿ.ಪಿ.ಮಹೇಶ್ ಆರೋಪಿಸಿದರು.
ಅಧ್ಯಕ್ಷ ಸಿ.ಟಿ.ದಯಾನಂದ್ ಉತ್ತರಿಸಿ ತುತರ್ು ನೀರಿನ ಸಮಸ್ಯೆ ತಲೆದೂರಿದ್ದರಿಂದ ಪಂಪ್ ಆಳವಡಿಸಿ ನೀರನ್ನು ನೀಡಬೇಕಾಗುತ್ತದೆ ನಮಗೆ ಎಲ್ಲಾ ವಾಡರ್ಿನ ಜನರು ಒಂದೇ ನಾವು ಯಾವುದೇ ಕಾರಣಕ್ಕೂ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದರು.
2013-14ನೇ ಸಾಲಿನಲ್ಲಿ ಪುರಸಭೆಯಿಂದ ಸಾರ್ವಜನಿಕರ ಮನೆಮನೆಗಳಿಗೆ ಕಸದಬುಟ್ಟಿ ನೀಡಲು ಸಭೆಯಲ್ಲಿ ಅಂಗೀಕರಿಸಲಾಗಿತ್ತು ಆದರೆ ಇದುವರೆಗೂ ಕಸದಬುಟ್ಟಿಗಳನ್ನು ನೀಡದೇ ಇರಲು ಕಾರಣವೇನು ಎಂದು ಸಿ.ಎಸ್.ರಮೇಶ್ ಪರಿಸರ ಇಂಜನಿಯರ್ ಚಂದ್ರಶೇಖರ್ರವರನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮೋದನೆಯಾಗಿದೆ ಟೆಂಡರ್ ಕರೆಯುವುದಾಗಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧ ಪಟ್ಟ ಆಸ್ತಿ ಎಲ್ಲೆಲ್ಲಿ ಇದೆ ಇದರ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಅನೇಕ ಬಾರಿ ಸಭೆಯಲ್ಲಿ ಚಚರ್ಿಸಿದರೂ ಇದುವರೆಗೂ ಅಧಿಕಾರಿಗಳು ಪಟ್ಟಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಮಂಜುಳಾದೇವಿಯನ್ನು ಸದಸ್ಯ ಸಿ.ಎಸ್.ರಮೇಶ್ ಪ್ರಶ್ನಿಸಿದರು. ಪುರಸಭೆಯ ಆಸ್ತಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪುರಸಭೆಯ ಮಳಿಗೆಗಳ ಅವಧಿ ಮುಗಿದಿದ್ದು ಪುಃನ ಟೆಂಡರ್ ಕರೆಯುವಂತೆ ಸದಸ್ಯರು ಆಗ್ರಹಿಸಿ ಬಾಡಿಗೆ ಇರುವ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡಿದರೆ ಅಂಗಡಿಗಳನ್ನು ತೆರವುಗೊಳಿಸಲು ಬರುವುದಿಲ್ಲ, ಎಷ್ಟು ಅಂಗಡಿಯಿಂದ ಟ್ರೇಡ್ ಲೈಸೆನ್ಸ್ ನೀಡಿದ್ದೀರಿ ಎಂದು ಮುಖ್ಯಾಧಿಕಾರಿ ಮಂಜುಳದೇವಿ ರವರನ್ನು ಸಿ.ಎಸ್.ರಮೇಶ್ ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕ ಜಯರಾಂ ಮಾತನಾಡಿ ಯಾರಿಗೂ ಟ್ರೇಡ್ ಲೈಸೆನ್ಸ್ ನೀಡಿಲ್ಲ ಎಂದರು.
ಪಟ್ಟಣದ ಸ್ವಚ್ಛತೆಯನ್ನು ಕಾಪಾಡಲು ಕ್ರಿಮಿನಾಶಕ ಔಷದಿಯ ಖರೀದಿಯಲ್ಲಿ 62555 ರೂ ಪಾವತಿಸಿದ್ದೀರಿ, ಎಲ್ಲಿ ಔಷಧಿಯನ್ನು ಸಿಂಪಡಿಸಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದಾಗ ಆರೋಗ್ಯ ನಿರೀಕ್ಷಕ ಜಯರಾಂ ಸದಸ್ಯರ ಮಾತಿಗೆ ತಬ್ಬಿಬ್ಬಾಗಿ ಹೋದರು, ಎಲ್ಲಾ ಚರಂಡಿಗಳಿಗೆ ಔಷಧಿ, ಫಿನಾಯಿಲ್ ಮತ್ತು ಡಿ.ಡಿ.ಟಿ ಫೌಡರ್ ಹಾಕಿದ್ದೇನೆ ಎಂದರು.
ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಲಾರ್ವ ಸವರ್ೆ ಕಾರ್ಯ ನಡೆಸಿದುದರಿಂದ ಆಶಾ ಕಾರ್ಯಕತರ್ೆಯರಿಗೆ  6ಸಾವಿರ ಊಟದ ಬಿಲ್ಲು ಪಾವತಿಸಿದ್ದೀರ ಎಂದ ಸದಸ್ಯರು, ಪಟ್ಟಣದಲ್ಲಿ ಎಷ್ಟು ಕಡೆ ಡೆಂಗ್ಯೂ, ಚಿಕನ್ಗುನ್ಯಾ ಬಂದಿದೆ ಎಂಬ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ ಯಾವುದೇ ಪ್ರಕರಣಗಳಿಲ್ಲ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, 18ನೇ ವಾಡರ್್ನಲ್ಲಿ ಡೆಂಗ್ಯೂ ಜ್ವರದಿಂದ ಒಬ್ಬರು ನಿಧನರಾಗಿದ್ದಾರೆ ಎಂದ ಸದಸ್ಯರು ಸಭೆಗೆ ಬರುವಾಗ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ ಎಂದರು.
ಪುರಸಭೆಯ ಆಸ್ತಿ ಸಂ:98/92/1982ರಲ್ಲಿರುವ 173*116ಆಳತೆಯ ಜಾಗವನ್ನು ಅಂಜುಮನ್ ಮಫೀದುಲ್ಲಾ ಇಸ್ಲಾಂ ಜಮೀಯಾ ಮಸೀದಿಗೆ ಕಿಮ್ಮತ್ತಿನ ಬೆಲೆಗೆ ಮಂಜೂರಾತಿ ನೀಡುವ ಬಗ್ಗೆ ಶಾಸಕರ ಹಾಜರಿದ್ದ ಸಭೆಯಲ್ಲಿ ತೀಮರ್ಾನಿಸಲಾಗಿತ್ತು ಎಂಬುದು ಒಂದು ಕಡೆಯ ವಾದವಾದರೆ, ಮತ್ತೊಂದು ಕಡೆಯವರು  ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ದಾಖಲಿಸಿಲ್ಲ ಹಾಗೂ ಈ ಜಾಗದ ಬಗ್ಗೆ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹೊನ್ನಪ್ಪನವರು ನೀಡಲು ಬರುವುದಿಲ್ಲ ಎಂದು ಅಜರ್ಿಯನ್ನು ವಜಾಮಾಡಿದ್ದರೂ ಪುನಃ ಈ ಜಾಗದ ವಿಷಯ ಪ್ರಸ್ತಾಪವಾಗುತ್ತಿದೆ, ಈ ಬಗ್ಗೆ ಸಂಬಂಧ ಪಟ್ಟ ಕಡತವನ್ನು ಸಭೆಯ ಮುಂದಿಡಲು ಒತ್ತಾಯಿಸಿದಾಗ ಸಂಬಂಧ ಪಟ್ಟ ಕಡತವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಅದರೆ ಆಡಳಿತ ಪಕ್ಷದ ಸದಸ್ಯರು ಈ ಬಗ್ಗೆಯಾವುದೇ ಚಕಾರ ಎತ್ತಲಿಲ್ಲ ಈ ಬಗ್ಗೆ ಕೇಲವು ಸದಸ್ಯರಲ್ಲಿ ಅನುಮಾನಗಳು ಹರಿದಾಡತೊಡಗಿದವು.
ಸದಸ್ಯ ಮಹಮದ್ಖಲಂದರ್ ಮಾತನಾಡಿ ಸಭೆಯಲ್ಲಿ ಸೂಚನಾ ಪತ್ರದ ವಿಷಯಗಳನ್ನು ಚಚರ್ಿಸದೆ ಬೇರೆ ವಿಷಯಗಳ ಚಚರ್ೆ ಮಾಡಿ ಕಾಲ ಹರಣ ಮಾಡುವುದು ಸರಿಯಲ್ಲ ಸೂಚನಾ ಪತ್ರದಲ್ಲಿರುವ ವಿಷಯಗಳನ್ನು ಚಚರ್ಿಸಿದ ನಂತರ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಿ ಎಂದರು.
ಎಸ್.ಎಫ್.ಸಿ.2016-17ನೇ ಸಾಲಿನ ಕ್ರೀಯಾ ಯೋಜನೆಯಡಿ ಇತರೆ ಬಡ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿರುವ ಶೇ 7.25 ರಡಿಯಲ್ಲಿ ಒಟ್ಟು ಎಂಟು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗಳನ್ನು ಮೀಸಲಿಡಲಾಗಿದೆ,  ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದ ವೃತ್ತಿ ಮಾಡುತ್ತಿರುವವರಿಗೆ ಅಗತ್ಯವಾದ ಪೂರಕ ಸಾಮಾಗ್ರಿಗಳನ್ನು ನೀಡುವುದಾಗಿ ಮೂರು ಲಕ್ಷದ ನಲವತ್ತು ಸಾವಿರ ರೂಪಾಯಿಗಳನ್ನು ಮೀಸಲಿಡಲು ತೀಮರ್ಾನಿಸಲಾಯಿತು,  ಜೊತೆಗೆ  ಇತರೆ ಸಮುದಾಯದವರಿಗೂ ಹಣವನ್ನು ಮೀಸಲಿಡಬೇಕೆಂದು ತಿಳಿಸಿದರು. 
ಸಮುದಾಯ ಕಾರ್ಯಕ್ರಮಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿ ನಿಲಯಕ್ಕೆ ಶೌಚಾಲಯ ನಿಮರ್ಾಣಕ್ಕೆ ಒಂದು ಲಕ್ಷ ಅನುದಾನ ನೀಡುವುದನ್ನು ಸದಸ್ಯರು ವಿರೋದ ವ್ಯಕ್ತಪಡಿಸಿ ಹಾಸ್ಟೆಲ್ಗಳಲ್ಲಿ ಪಟ್ಟಣದ ವಿದ್ಯಾಥರ್ಿಗಳು ಇಲ್ಲ ಅದ್ದರಿಂದ ಅನುದಾನವನ್ನು ನೀಡಬಾರದು ಎಂದು ಸದಸ್ಯರಾದ ರೇಣುಕಾಗುರುಮೂತರ್ಿ, ಸಿ.ಪಿ.ಮಹೇಶ್ ಸೇರಿದಂತೆ ಇತರೆ ಸದಸ್ಯರು ವಿರೋಧಿಸಿದರು.
ಪುರಸಭೆಗೆ ಸಕರ್ಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾತಿಯಾಗಿರುವ ನಿಧಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಎಂದು ಸದಸ್ಯ ಎಂ.ಕೆ.ರವಿಚಂದ್ರ ಹೇಳಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ಗೀತಾರಮೇಶ್, ಧರಣಿ.ಬಿ.ಲಕ್ಕಪ್ಪ, ರೂಪಶಿವಕುಮಾರ್, ನೇತ್ರಾವತಿ ಶಿವಕುಮಾರ್, ಅಶೋಕ್, ಸಿ.ಡಿ.ಚಂದ್ರಶೇಖರ್, ಸಿ.ರಾಜಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಕೆ.ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಸೆ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಿ ಅವರ ಮುಂದಿನ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿಲಿ ಎಂಬ ಉದ್ದೇಶದಿಂದ ಪ್ರತಿವರ್ಷ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಬಿಇಓ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘವತಿಯಿಂದ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥರ್ಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೋತ್ಸಾಹದ ನೆಪದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಕೇವಲ ಹಣ ನೀಡಿದರೆ ಮಾತ್ರ ಸಾಲದು, ವಿದ್ಯಾಥರ್ಿಗಳನ್ನು ವೇದಿಕೆಗೆ ಆಹ್ವಾನಿಸಿ ಪ್ರತಿಭಾ ಪುರಸ್ಕಾರ, ಸನ್ಮಾನ ನೀಡುವ ಕಾರ್ಯಕ್ರಮಗಳು ನಡೆಯಬೇಕು ಇದರಿಂದ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ, ಇಂದಿನ ಜಗತ್ತು ಸ್ಮಧರ್ಾತ್ಮಕ ಯುಗವಾಗಿದೆ, ಒಂದೊಂದು ಅಂಕಗಳಿಂದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಿರುತ್ತದೆ, ಇಂಜನಿಯರಿಂಗ್ ಮಾಡುವ ವಿದ್ಯಾಥರ್ಿಗಳು ಶೇ.1ರಷ್ಟು ಅಂಕ ಕಡಿಮೆಯಾದರೂ ಅವರಿಗೆ ಒಳ್ಳೆಯ ಕಾಲೇಜುಗಳು ಸಿಗದಂತಾಗಿದೆ ಎಂದರು.
 ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೂ ಕೆಲವೊಮ್ಮೆ ಇಂಜನಿಯರಿಂಗ್ ಮಾಡಿದ ವಿದ್ಯಾಥರ್ಿಗಳಿಗೆ ಕ್ಯಾಂಪಸ್ ಸೆಲಕ್ಷನ್ನಲ್ಲಿ ಉದ್ಯೋಗ ಸಿಗುವಂತಹ ಕಾಲೇಜುಗಳಲ್ಲಿ ಸೀಟುಗಳು ಸಿಗುವುದಿಲ್ಲ ಅದಕ್ಕೆ ಅಂಕಗಳ ಕೊರತೆಯೇ ಕಾರಣವಾಗಿದೆ, ಇಂದು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಹಲವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ, ಹಲವರು ಕಡಿಮೆ ಸಂಬಳಕ್ಕೆ ಉದ್ಯೋಗದಲ್ಲಿ ನಿರತರಾಗಿದ್ದಾರೆ, ಕ್ಯಾಂಪಸ್ನಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳು ಉತ್ತಮ ಕೆಲಸದಲ್ಲಿ ತೊಡಗಿದ್ದಾರೆ ಅವರಂತೆ ಇಂಜನಿಯರಿಂಗ್ ವಿದ್ಯಾಭ್ಯಾಸ ಆಯ್ಕೆ ಮಾಡಿದ ವಿದ್ಯಾಥರ್ಿಗಳು ಒಳ್ಳೆಯ ಕಂಪನಿಗಳ ಉದ್ಯೋಗಸ್ಥರಾಗಲು ಅಂಕಗಳು ಪಡೆಯುವ ಅವಶ್ಯಕತೆ ಇದೆ ಎಂದರು.  ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಶಾಸಕರು ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಶಿಕ್ಷಣವೇ ವಿದ್ಯಾಥರ್ಿಗಳನ್ನು ಮುಂದೆ ಕರೆದೊಯ್ಯಲು ಸಾಧ್ಯ, ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳು ತನ್ನ ಮುಂದಿನ ವಿದ್ಯಾಭ್ಯಾಸದಲ್ಲೂ ಹೆಚ್ಚಿನ ಅಂಕ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಸಿದ್ದರಾಮಯ್ಯ, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಅಕ್ಷರ ಇಲಾಖೆ ಸಹಾಯಕ ನಿದರ್ೇಶಕ ತಿಮ್ಮರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ನಾರಾಯಣಪ್ಪ, ಸಿ.ಗವಿರಂಗಯ್ಯ ಮತ್ತಿತರರರು ಉಪಸ್ಥಿತರಿದ್ದರು.

ಚಿತ್ರಕಲಾಕಾರರಿಂದ ಸಂವಾದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.22 : ತನ್ನ ಜನರ್ಿಯಲ್ಲಿ ದೊರಕಿದಂತಹ ಅನುಭವಗಳು, ಮನಸ್ಸಿನಲ್ಲಿ ಮೂಡುವಂತಹ ಕಲಾಕೃತಿಗಳು ಕುಂಚದ ಮೂಲಕ ರಚನೆಯಾಗಿವೆ ಎಂದು ಚಿತ್ರ ಕಲಾವಿದ ಗುಬ್ಬಿ ರವೀಶ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವರ್ಣಕಲ್ಪ ಚಿತ್ರಕಲಾ ಶಿಬಿರದ ಮೂರನೇ ದಿನ ಕಲಾವಿದರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘ ಚಿತ್ರ ಕಲಾಕಾರರಿಗೆ  ವೇದಿಕೆ ರೂಪಿಸಿ ಕಲಾಕೃತಿ ಪ್ರದಶರ್ಿಸಲು ಅನುಕೂಲ ಮಾಡಿರುವುದಕ್ಕೆ ಶ್ಲಾಘನೀಯ ಎಂದರು.
ತುಮಕೂರಿನ ಕಲಾವಿದ ರವಿ ಮಾತನಾಡಿ, ಶಿಬಿರದಲ್ಲಿ ಸಮಕಾಲೀನ, ಪ್ರಚಲಿತ ವಿದ್ಯಮಾನಗಳು ಹಾಗೂ ರಾಜ್ಯದಲ್ಲಿ ಉಂಟಾಗಿರುವ ಕಾವೇರಿ ಸಮಸ್ಯೆಗಳ ಬಗ್ಗೆ ಚಿತ್ರಗಳು ಬಿತ್ತರವಾಗುತ್ತಿವೆ, ಚಿತ್ರ ಕಲಾವಿದರು ಈಗಿನ ದಿನಮಾನಕ್ಕೆ ತಕ್ಕಂತೆ ಆಧುನಿಕ ಹಾಗೂ ತಂತ್ರಜ್ಞಾನ ಬಳಸಿ ಚಿತ್ರಕಲೆಯನ್ನು ರೂಪಿಸುವಂತೆ ಸಲಹೆ ನೀಡಿದರು.
ಚಿತ್ರಕಲೆಗಳು ಜನಸಮುದಾಯಕ್ಕೆ ತಲುಪಬೇಕು ಎಂಬ ನಿಧರ್ಾರದಿಂದ ಹೊರಾಂಗಣ ಪ್ರದೇಶದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳು ನಡೆಯುತ್ತಿರಬೇಕು, ನಾಲ್ಕು ಗೋಡೆ ಮಧ್ಯೆ ಬರೆಯುವ ಕಲೆಗಿಂತ ಜನರ ನಡುವಿನ ಪ್ರದೇಶಗಳಲ್ಲಿನ ಕಲೆಗಳು ರಚಿತವಾಗಬೇಕು, ಹಣಕ್ಕೋಸ್ಕರ ಶಿಬಿರದಲ್ಲಿ ಭಾಗವಹಿಸುವುದಕ್ಕಿಂತ ತಮ್ಮ ಪ್ರತಿಭೆಗಳ ಅಭಿವೃದ್ದಿಗಾಗಿ ಹಾಗೂ ಬದಲಾವಣೆಗಾಗಿ ಶಿಬಿರಗಳಲ್ಲಿ ಭಾಗವಹಿಸಬೇಕು ಎಂಬ ಮಾತುಗಳು ಭಾಗವಹಿಸಿದ್ದ ಕಲಾವಿದರು, ಶಿಬಿರಾಥರ್ಿಗಳಿಂದ ವ್ಯಕ್ತವಾಯಿತು.
ಕಲಾವಿದರ ಸಂವಾದದಲ್ಲಿ ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಎಂ.ಎಸ್.ರವಿಕುಮಾರ್, ಸಿ.ರವಿಕುಮಾರ್ ಸಿ.ಬಿ.ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕ ಶೌಚಾಲಯ ಸ್ಚಚ್ಛವಾಗಿಡುವಂತೆ ಒತ್ತಾಯ 
ಚಿಕ್ಕನಾಯಕನಹಳ್ಳಿ,ಸೆ.22 : ಪ್ರತಿದಿನ ನೂರಾರು ಜನರು ಬಳಸುವಂತಹ ಖಾಸಗಿ ಬಸ್ ಸ್ಟಾಂಡ್ನ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಖಾಸಗಿ ಬಸ್ನಿಲ್ದಾಣದ ಬಳಿ ಇರುವಂತಹ ಸಾರ್ವಜನಿಕ ಶೌಚಾಲಯ ಬಳಸಲು ಯೋಗ್ಯವಿಲ್ಲದಂತಿದೆ, ಕೆಟ್ಟವಾಸನೆಯಿಂದ ಜನರು ಓಡಾಡಲು ತೊಂದರೆಯಾಗುತ್ತಿದೆ ಕೂಡಲೇ ಇದರ ಸ್ವಚ್ಛತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.
 ಹಣಪಾವತಿ ಮಾಡಿ ಬಳಸುವಂತಹ ಶೌಚಾಲಯದಿಂದ ಪುರಸಭೆಗೆ ಆದಾಯಬರುತ್ತಿದೆ ಆದರೂ ಸ್ವಚ್ಛತೆ ಗಮನಹರಿಸುತ್ತಿಲ್ಲ ಇದರ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬಸ್ನಿಲ್ದಾಣದಲ್ಲಿ ಒಡಾಡುವಂತಹ ಜನರು ಆರೋಪಿಸಿದ್ದಾರೆ.
ಈ ಶೌಚಾಲಯವನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಇಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕಮಾಡಿದ್ದು, ಶೌಚಾಲಯ ಬಳಸಿದ ಪ್ರತಿಯೊಬ್ಬರಿಂದಲೂ  ಐದು ರೂಪಾಯಿಗಳನ್ನು ಪಡೆಯುತ್ತಿದ್ದರೂ  ಇದರ ಸ್ವಚ್ಛತೆಯ ಕಡೆ ಮಾತ್ರ ಗಮನಹರಿಸಿಲ್ಲ, ಪ್ರತಿದಿನ ನೂರಾರು ಜನರು ಈ ಶೌಚಾಲಯವನ್ನು ಬಳಸುತ್ತಿದ್ದು ಸಾವಿರಾರು ರೂಪಾಯಿಗಳ ಆದಾಯ ಬರುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆಯ ಮಲ್ಲಿಕಾಜರ್ುನ್ ಪುರಸಭೆಯು ಗುತ್ತಿಗೆ ಆದಾರದ ಮೇಲೆ ಪಡೆದ ಶೌಚಾಲಯದಿಂದ ಲಾಭಮಾಡಿಕೊಳ್ಳುತ್ತಿರುವ ಟೆಂಡರ್ದಾರರು ಇದರ ಸ್ವಚ್ಛತೆಯ ಕಡೆಗಮನಹರಿಸಿಲ್ಲ, ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಪುರಸಭೆಯವರು ಈ ಶೌಚಾಲಯಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಟೆಂಡರ್ದಾರರು ನೀರನ್ನು ಹೊರಗಡೆಯಿಂದ ತಂದು ಇದನ್ನು ಸ್ವಚ್ಛಮಾಡಬೇಕು ಎಂದು ತಿಳಿಸಿದರು.
ಶೌಚಾಲಯದ ಸ್ವಚ್ಛತೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಇಂಜಿನಿಯರ್ ಚಂದ್ರಶೇಖರ್ ಇದರ ಸ್ವಚ್ಛತೆಯ ಬಗ್ಗೆ ಟೆಂಡರ್ದಾರರಿಗೆ  ಹಲವು ಬಾರಿ ಹೇಳಿದ್ದರು ಕ್ರಮಕೈಗೊಂಡಿಲ್ಲ ಕೂಡಲೇ ಇದರ ಸ್ವಚ್ಛತೆಯ ಕಡೆ ಗಮನಹರಿಸಿ ಪೆನಾಯಿಲ್, ಬ್ಲೀಚಿಂಗ್ ಪೌಡರ್ಗಳನ್ನು ಬಳಸಿ ಸ್ವಚ್ಚಪಡಿಸುವಂತೆ ತಿಳಿಸುವುದಾಗಿ ಹೇಳಿದರು.

ಚಿತ್ರಕಲೆಗಳು ದೇಶದ ಇತಿಹಾಸ ಸಾರುತ್ತಿದ್ದವು : ಬಾ.ಹ.ರಮಾಕುಮಾರಿ 
ಚಿಕ್ಕನಾಯಕನಹಳ್ಳಿ,ಸೆ.22 : ಹಿಂದಿನ ದಿನ ಮಾನಗಳಲ್ಲಿ ದೇಶದ ಚಿತ್ರಣವನ್ನು ಬಡತನ, ಕೊಳಗೇರಿಗಳ ಮೂಲಕ ಚಿತ್ರಿಸಿ ಹೊರ ದೇಶಗಳಿಗೆ ಕಳುಹಿಸಿ ಹಣ ಮಾಡುತ್ತಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಿಷಾಧಿಸಿದರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘದ ವತಿಯಿಂದ ನಡೆದ ವರ್ಣಕಲ್ಪ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮುಕ್ತಾಯ ಸಮಾರಂಭದಲ್ಲಿ  ಸಮಾರೋಪ ಭಾಷಣ ಮಾಡಿದ ಅವರು, ಈಗ ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ, ಹಿಂದೆ  ಚಿತ್ರಕಲೆಗಳ ಮೂಲಕವೇ ಇತಿಹಾಸದ ಕಥೆಗಳನ್ನು ತಿಳಿಸುತ್ತಿದ್ದರು, ರಾಜ್ಯ ಏಕೀಕರಣದ ಸಂದರ್ಭದಲ್ಲಿ ಚಿತ್ರಕಲೆಯು ಮಹತ್ವಸಾರುತ್ತಿದ್ದವು ಎಂದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತರುವ ಲಲಿತಕಲಾ ಶಿಬಿರ ರಾಜ್ಯದಲ್ಲಿ ಹೆಸರು ತಂದುಕೊಟ್ಟಿದೆ, ನಗರಗಳ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯುವ ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ, ಗ್ರಾಮೀಣ ಭಾಗಗಳಲ್ಲಿ ಹಾಗೂ ಕಲಾವಿದ ರಚಿಸಿದ ಚಿತ್ರಕಲೆ ಮೂಲೆ ಸೇರಬಾರದು, ಇವು ಶಾಲಾ, ಕಾಲೇಜುಗಲ್ಲಿ, ಸಂಘ-ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಪ್ರದರ್ಶನವಾಗಬೇಕು ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಕರ್ಾರ ಶಿಕ್ಷಣಕ್ಕೆ ಒತ್ತು ನೀಡಿದಂತೆ ಚಿತ್ರಕಲೆಗಳಿಗೂ  ಪ್ರೋತ್ಸಾಹಿಸಬೇಕು ಎಂದರಲ್ಲದೆ, ಕಲಾವಿದರು ಎಲ್ಲಿ ವರ್ಣಚಿತ್ರ ರಚಿಸುತ್ತಾರೋ ಅಲ್ಲಿಯೇ ಮಾರಾಟದ ವ್ಯವಸ್ಥೆ ಮಾಡಿದರೆ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು, ರಾಜ್ಯದ ಮಂಗಳೂರಿನ ವ್ಯಕ್ತಿಯೊಬ್ಬರು ಹನುಮಂತನ ಮುಖದ ಅರ್ಧ ಚಿತ್ರ ರಚಿಸಿದರೂ ಅದು ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರ ಹೆಸರುವಾಸಿ ಪಡೆದಿದೆ ಎಂದ ಅವರು, ಕಲಾವಿದರು ರಚಿಸಿದ ಚಿತ್ರಕಲೆ ವರ್ಣಚಿತ್ರ ಕಲೆಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ ಎಂದರು.
ಲಲಿತಕಲಾ ಅಕಾಡೆಮಿಯ ಸದಸ್ಯ ಪ್ರಭುಹರಸೂರು ಮಾತನಾಡಿ, ಚಿತ್ರಕಲೆ ಸಾಮಾಜಿಕ ಕಲೆಯ ಪ್ರತಿಬಿಂಬ, ತಮ್ಮದೇ ಆದ ಅನುಭವಗಳ ಮೂಲಕ ಕಲೆ ರಚನೆಯಾಗುತ್ತದೆ ಎಂದ ಅವರು ಪಟ್ಟಣದಲ್ಲಿ ನಡೆಯುತ್ತಿರುವ ವಾಣಿ ಚಿತ್ರಕಲೆ ಶಾಲೆಗೆ ಪ್ರತಿ ತಿಂಗಳು ಕೊನೆಯ ವಾರದಲ್ಲಿ ಭೇಟಿ ನೀಡಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುತ್ತೇವೆ, ಇಲ್ಲಿಗೆ ಬರುವ ಚಿತ್ರಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಹಂಬಲವಿದೆ ಎಂದರು.
ಮಾಜಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಚಿತ್ರಕಲೆಗಳು ಸಾಂಸ್ಕೃತಿಕವಾಗಿ ಪರಿಚಯವಾಗಿ ಅದು ಎಲ್ಲಾ ಭಾಗದ ಮಕ್ಕಳಿಗೆ ಅನುಕೂಲವಾಗಬೇಕು, ಇಲ್ಲಿ ನಡೆದ ಶಿಬಿರ ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ಆಯೋಜನೆಯಾಗಿದೆ, ಶಿಬಿರದಲ್ಲಿ ರಚಿಸಿದ ಕಲಾಕೃತಿಳನ್ನು  ಮೂರು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವರ್ಣಕಲ್ಪ ಚಿತ್ರಕಲಾ ಶಿಬಿರದ ಸಂಚಾಲಕ ಪ್ರಭುಹರಸೂರು, ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಚಿತ್ರಕಲಾ ಶಿಕ್ಷಕ ಎನ್.ನಂಜುಂಡಾರಾಧ್ಯ, ಕಲಾವಿದ ರಾಜುಗೌಡ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಕಲಾಸಂಘದ ಚಿ.ಲಿಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Thursday, September 1, 2016

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಾಬ್ದಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.01 : ಬದುಕನ್ನು ಪ್ರೀತಿಸುವವರು ಜೀವನದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ಕವಿ ಕೆಎಸ್.ನರಸಿಂಹಸ್ವಾಮಿರವರ ಕವಿತೆಗಳಲ್ಲಿ ಮೂಡಿದೆ ಎಂದು ನವೋದಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ರವಿಕುಮಾರ್ ಹೇಳಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ರೋಟರಾಕ್ಟ್ನ ಸಂಯುಕ್ತಾಶ್ರಯದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಾಬ್ದಿ ಅಂಗವಾಗಿ ನಡೆದ ಕವಿಗೋಷ್ಠಿ ಹಾಗೂ ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಗರು ಮತ್ತು ನರಸಿಂಹಸ್ವಾಮಿರವರ ಕಾಲಾನುಘಟ್ಟದಲ್ಲಿ ಮೂಡಿ ಬಂದಂತಹ ಕವಿತೆಗಳು ಹೆಚ್ಚಾಗಿ ಭಾವಗೀತೆಗಳಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು, ಮಗುವಿನ ಆಟೋಟ, ಮುಗ್ಧತೆಗಳನ್ನು ತಮ್ಮ ಕವಿತೆಗಳಲ್ಲಿ ಸುಂದರವಾಗಿ ವಣರ್ಿಸುತ್ತಿದ್ದರು ಎಂದರು.
ನವೋದಯ ಕಾಲಾನುಘಟ್ಟದಲ್ಲಿ ಕೆ.ಎಸ್.ಎನ್ರವರ ಕವಿತೆಗಳ ಬಗ್ಗೆ ಹೆಚ್ಚೆಚ್ಚು ಟೀಕೆಗೆ ಒಳಪಟ್ಟವು, ಅವರು ಗಾಂಧೀಜಿಯ ಬಗ್ಗೆ ಕಟ್ಟಿಕೊಟ್ಟಂತಹ ಸಂದೇಶಗಳು, ಇಲ್ಲಿನ ನೆಲ, ಜಲ, ಮಣ್ಣಿನ ಬಗ್ಗೆ ಪ್ರೀತಿಯಿಂದ ಕವಿತೆ ಕಟ್ಟುತ್ತಿದ್ದರು, 21ನೇ ಶತಮಾನದಲ್ಲಿ ವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗುತ್ತಿರುವ ಈ ದಿನಮಾನಗಳಲ್ಲಿ ಅವರ ಕವಿತೆ ಅವಿಭಕ್ತ ಕುಟುಂಬದ ಎಳೆಯನ್ನು ನೀಡುತ್ತಿತ್ತು, ಮೈಸೂರು ಮಲ್ಲಿಗೆ, ತೆರದ ಬಾಗಿಲು ಕಾವ್ಯಗಳು ಕೆ.ಎಸ್.ಎನ್ರವರ ಕಾವ್ಯದ ಪ್ರಚಲಿತವಾಗಿ ಜನರನ್ನು ಆಕಷರ್ಿಸುತ್ತದೆ ಎಂದರು.
ಉಪನ್ಯಾಸಕ ಡಾ.ಶಿವಣ್ಣಬೆಳವಾಡಿ ಮಾತನಾಡಿ, ಇಂದಿನ ಕವಿಗಳು ಯಾವ ಚಳುವಳಿಗೂ ಒಳಗಾಗದೆ ಹೊಸ ದೃಷ್ಠಿಕೋನದಿಂದ ಕಾವ್ಯ ಕಟ್ಟುತ್ತಿದ್ದಾರೆ, ಗೋಪಾಲಕೃಷ್ನ ಅಡಿಗರು, ಗಂಗಾಧರ್ ಇವರ ಚಿತ್ತಗಳೆಲ್ಲವೂ ಸಮಾಜದ ಅಸಮಾನತೆ ವಿರುದ್ದ, ನೋವಿನ ಪ್ರತೀಕದ ಅಂಶಗಳು, ದಲಿತ ಬಂಡಾಯದಗಳ ಕವಿತೆಗಳಾಗಿ ಹೊರಬರುತ್ತಿದ್ದವು, ಪ್ರತಿಯೊಬ್ಬ ಕವಿಯೂ ಉತ್ತಮ ಕವಿಯಾಗಬೇಕಾದರೆ ಈ ನೆಲದ ಭಾಷೆ ಮೈಗೂಡಿಸಿಕೊಳ್ಳಬೇಕು, ತನ್ನ ನೆಲದ ಸಂಗತಿಗಳನ್ನು ಅರಿಯಬೇಕು ಅದೇ ರೀತಿ ಕೆ.ಎಸ್.ಎನ್ರವರು ತಮ್ಮ ಬದುಕಿನ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡ್ಡಿದ್ದರು ಎಂದ ಅವರು, ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಆಸ್ಪತ್ರೆಗಳು ವಾಣಿಜ್ಯಕರಣಗೊಳ್ಳುತ್ತಿವೆ ಎಂದು ವಿಷಾಧಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ದೇವರಾಜು ಮಾತನಾಡಿ, ಉದಯೋನ್ಮುಖ ಕವಿಗಳಿಗೆ ವೇದಿಕೆ ಕಲ್ಪಿಸುವುದು ಅಗತ್ಯ ಅಂತಹ ಕೆಲಸವನ್ನು ನಮ್ಮ ರೋಟರಿ ಸಂಸ್ಥೆ ಮಾಡುತ್ತಿದೆ, ಮುಂದೆಯು ಮಾಡಲಿದೆ, ಕವಿತೆಯ ರಚನೆ ಕೇಳಿದಷ್ಟು ಸುಲಭವಲ್ಲ ಅದಕ್ಕೆ ಪೂರಕವಾದ ವಾತಾವರಣ ಅಗತ್ಯ ಎಂದರು.
ಕವಿಗಳಾದ ಕುಮಾರ್ ಎಸ್.ಬಿ, ಪುಷ್ಪಶಿವಣ್ಣ, ಗುರುಪ್ರಸಾದ್ಕಂಟಲಗೆರೆ, ಚನ್ನಬಸವಯ್ಯ ಬೇವಿನಹಳ್ಳಿ, ಮಂಜುಳ ಪ್ರಕಾಶ್, ಹುಳಿಯಾರ್ಷಬ್ಬೀರ್, ರಾಧಾಕೃಷ್ಣ, ಎಂ.ಎಸ್.ರವಿಕುಮಾರ್ ತಮ್ಮ ಕವಿತೆಯನ್ನು ವಾಚಿಸಿದರು. 
ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ಛಾಯಾಚಿತ್ರಕಾರರಾದ ಕಲ್ಪನಾ ಸ್ಟುಡಿಯೋದ ಎಸ್.ನಾಗರತ್ನಗಂಗಣ್ಣರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ವಿ. ನಾಗರಾಜ್ರಾವ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ಡಿ.ಸಿ.ಶಶಿಕಲಜಯದೇವ್, ರೋಟರಾಕ್ಟ್ ಅಧ್ಯಕ್ಷ ಕಾಶಿಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣಕ್ಕೆ ಆಗಮಿಸಿದ ಗಣೇಶ ಮೂತರ್ಿಗಳು
ಚಿಕ್ಕನಾಯಕನಹಳ್ಳಿ,ಸೆ.01 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ.
ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಗಣಪತಿಯನ್ನು ಇಡಲು ಯುವಕರ ತಂಡಗಳು ಈಗಾಗಲೇ ಗಣಪತಿ ಇಡುವ ಸ್ಥಳಗಳಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
 ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.

ಜೇನಿಗಾಗಿ ಮರವೇರಿದ ಕರಡಿ 
ಚಿಕ್ಕನಾಯಕನಹಳ್ಳಿ,ಸೆ.01 : ಜೇನಿನ ಆಸೆಗಾಗಿ ಮರವೇರಿದ ಕರಡಿ ಮರದಿಂದ ಕೆಳಗೆಬಾರಲು ಸಾಧ್ಯವಾಗದೇ ಮರದಲ್ಲೇ ಕುಳಿತುಕೊಂಡು ಸಾರ್ವಜನಿಕರಿಗೆ ದರ್ಶನ ನೀಡಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿಗೇಟ್ ಬಳಿಯ ಆಲದಮರದಲ್ಲಿದ್ದ ಜೇನಿನ ಆಸೆಗೆ ಬುಧವಾರ ರಾತ್ರಿ ಮರವನ್ನು ಏರಿದ ಕರಡಿಯೊಂದು ಮರದಿಂದ ಕೆಳಗೆ ಬಾರಲು ಸಾದ್ಯವಾಗದೇ ಅಲ್ಲೇ ಸಮಯವನ್ನು ಕಳೆದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ತಿಳಿಸಿದರು, ಕೇವಲ ಕರಡಿಯನ್ನು ವೀಕ್ಷಿಸಿದರೆ ವಿನಃ ಅದರ ಸಮಸ್ಯೆಗೆ ಸ್ಪಂದಿಸಿ ಅದರ ರಕ್ಷಣೆಗೆ ಯಾವುದೇ ಕ್ರಮವನ್ನು ತೆಗೆದುಕೊಳದೇ ಇರುವುದು ಕೆಲವು ಪ್ರಾಣಿಪ್ರಿಯರಲ್ಲಿ ಅಸಮದಾನ ಮೂಡಿತು.

ಪಟ್ಟಣಕ್ಕೆ ಟಿಪ್ಪು ಸುಲ್ತಾನ್ ರಾಜ್ಯಧ್ಯಕ್ಷ 


ಚಿಕ್ಕನಾಯಕನಹಳ್ಳಿ,ಸೆ.01 : ಟಿಪ್ಪು ಸುಲ್ತಾನ್ ಪ್ರಾಧಿಕಾರವೂ ಸೇರಿದಂತೆ ಸಂಗೋಳ್ಳಿರಾಯಣ್ಣ, ಕಿತ್ತೂರುರಾಣಿಚೆನ್ನಮ್ಮ ಪ್ರಾಧಿಕಾರ ಸೇರಿದಂತೆ ಮೂರು ಪ್ರಾಧಿಕಾರಗಳನ್ನು ಸ್ಥಾಪಿಸಬೇಕು ಕೇವಲ ಒಂದು ಪ್ರಾಧಿಕಾರವನ್ನು ಸ್ಥಾಪಿಸಿದರೆ ನಾವು ವಿರೋಧಿಸುತ್ತೇವೆ ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.
ಮೈಸೂರಿನ ಟಿಪ್ಪು ಸುಲ್ತಾನ್ ಸಮಾದಿಗೆ ಶ್ರೀಗಂಧ ಲೇಪನಮಾಡಲು ಚಿತ್ರದುರ್ಗದಿಂದ ಶ್ರೀಗಂಧವನ್ನು ತೆಗೆದುಕೊಂಡು ಹೋಗುವಾ ಮಾರ್ಗಮದ್ಯೆ ಪಟ್ಟಣದ ತಾತಯ್ಯನ ಗೋರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸಂಘಟನೆಯಲ್ಲಿ ಕೇವಲ ಮುಸ್ಲೀಂರಷ್ಟೇ ಅಲ್ಲದೇ ಎಲ್ಲಾ ಸಮುದಾಯದವರೂ ಸೇರಿ ಸಂಘಟನೆ ಮಾಡಲಾಗಿದ್ದು  ತಾಲ್ಲೂಕಿನಲ್ಲೂ ಇಂತಹ ಸಂಘಟನೆಯನ್ನು ರಚಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು ಈ ನಾಡಿಗಾಗಿ ಬ್ರಿಟೀಷರೊಡನೆ ಹೋರಾಡಿದ ಮಹಾನ್ ವ್ಯಕ್ತಿ ಟಿಪ್ಪು ಇವರ ಹೆಸರಿನಲ್ಲಿ ನಾವು ಸಂಘಟನೆ ಮಾಡಿ ದೇಶಭಕ್ತಿಯ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಲಿಂಗದೇವರು, ಶಾಂತಕುಮಾರ್, ಕೃಷ್ಣೇಗೌಡ, ಕನರ್ಾಟಕ ಜಾಗೃತಿ ಸೇನೆಯ ಅಧ್ಯಕ್ಷ ನಿಂಗರಾಜು, ಪೈಲ್ವಾನ್ ಸದ್ದಾಂ, ಸಮೀಉಲ್ಲಾ, ತಾಹಿರಾ, ಸೇರಿದಂತೆ ಹಲವರು ಶುಭಕೋರಿದರು.

Friday, August 26, 2016

ಚಿ.ನಾ.ಹಳ್ಳಿ ಕಡೆಗೆ ಆನೆಗಳು
ಚಿಕ್ಕನಾಯಕನಹಳ್ಳಿ,ಆ.26: ತಾಲ್ಲೂಕಿನ ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂಟಿಸಲಗ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ಜನ ಜಾಗರೂಕರಾಗಿರಬೇಕು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಸಾವನದುರ್ಗ ಅರಣ್ಯ ಪ್ರದೇಶದಿಂದ ಹಿಂಡನ್ನು ಅಗಲಿ ಬಂದಿರುವ ಒಂಟಿಸಲಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಂಡಿದ್ದು ಜನರ ಭೀತಿಗೆ ಕಾರಣವಾಗಿದೆ. ಶುಕ್ರವಾರ ಸಂಜೆ ಗಂಟೇನಹಳ್ಳಿ ಕೆರೆಯಲ್ಲಿ ವಿಹರಿಸುತ್ತಿದೆ. ಹನುಮಂತನಹಳ್ಳಿ, ಸಿದ್ದನಕಟ್ಟೆ, ರಾಮನಹಳ್ಳಿ, ತೀರ್ಥಪುರ, ದೊಡ್ಡರಾಂಪುರ, ಬೆಳವಾಡಿ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿಯಿಂದ ಇರಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೆ.ಎಂ.ಎಚ್.ಪಿ.ಎಸ್ ಶಾಲೆ ವಿದ್ಯಾಥರ್ಿಗಳು ಸಮಗ್ರ ಪ್ರಶಶ್ತಿ 
ಚಿಕ್ಕನಾಯಕನಹಳ್ಳಿ,ಆ.26 : ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಕೆಎಂಎಚ್ಪಿಎಸ್)ಯ ವಿದ್ಯಾಥರ್ಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ವಿದ್ಯಾಥರ್ಿಗಳನ್ನು ಶ್ಲಾಘಿಸಿದ್ದಾರೆ.
ಬಾಲಕರ ವಿಭಾಗ : ಅಭಿಷೇಕ್-600.ಮೀ.ದ್ವಿತೀಯ, ಶ್ರೀನಿವಾಸ.ಎ-ಲಾಂಗ್ಜಂಪ್ ತೃತೀಯ, ಶ್ರೀನಿವಾಸ-ಶಾಟ್ಪುಟ್-ದ್ವಿತೀಯ, ವಿಜಯ್-ಡಿಸ್ಕಸ್ಥ್ರೋ-ತೃತೀಯ, ವಿಜಯ್.ಆರ್.ಮತ್ತು ತಂಡ-ಕಬಡ್ಡಿ-ಪ್ರಥಮ, ಶ್ರೀನಿವಾಸ ಮತ್ತು ತಂಡ-ವಾಲಿಬಾಲ್-ಪ್ರಥಮ, ಆರ್ಯ ಮತ್ತು ತಂಡ-ಷಟಲ್-ಪ್ರಥಮ, ದರ್ಶನ್.ಪಿ.ಕೆ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳಿಸಿದ್ದಾರೆ.
ಬಾಲಕಿಯರ ವಿಭಾಗ : ಸುಮಿತ್ರ.ಎ-100.ಮೀ ಪ್ರಥಮ, ಅಮೂಲ್ಯ.ಕೆ.-400.ಮೀ-ಪ್ರಥಮ, ಶಿವಮ್ಮ-600.ಮೀ-ದ್ವಿತೀಯ, ಸ್ವಾತಿ.ಎಂ.ಎಸ್-600.ಮೀ-ತೃತೀಯ, ಸುಮಿತ್ರ,ಅಮೂಲ್ಯ, ಶಿವಮ್ಮ, ರಮ್ಯ 4*100.ಮೀ-ಪ್ರಥಮ, ಮಮತ.ಸಿ ಮತ್ತು ತಂಡ ಕಬಡ್ಡಿ-ಪ್ರಥಮ, ಸುಮಿತ್ರ ಮತ್ತು ತಂಡ ಷಟಲ್-ದ್ವಿತೀಯ, ರಮ್ಯ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.
ಶಾಲೆಯ ವಿದ್ಯಾಥರ್ಿಗಳು ಈ ಎಲ್ಲಾ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿರುವುದಕ್ಕೆ ಶಾಲೆಯ ದೈಹಿಕ ಶಿಕ್ಷಕರಾದ ಜಗದಾಂಬ ಹಾಗೂ ಶಿಕ್ಷಕರುಗಳು ಅಭಿನಂದಿಸಿದ್ದಾರೆ.

ಚಿ.ನಾ.ಹಳ್ಳಿಯಲ್ಲಿ ತಿರಂಗಾ ರ್ಯಾಲಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಆ.26 : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಆಗಸ್ಟ್ 29ರಂದು ಬೆಳಗ್ಗೆ 11ಕ್ಕೆ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
74ನೇ ವರ್ಷದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿಗಾಗಿ ದೇಶದ ರಕ್ಷಣೆ ಮಾಡುತ್ತಿರುವ ವಿವಿಧ ಯೋಧರ ಹಾಗೂ ಹುತಾತ್ಮರಾದ ಯೋಧರ ಸ್ವಾಭಿಮಾನದ ಸಂಕೇತಿಕವಾಗಿ ನಗರದ ಪ್ರಮುಖ ಬೀದಿಗಳಲ್ಲಿ ತಿರಂಗಾ ರ್ಯಾಲಿಯನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಭಾಗವಹಿಸುವಂತೆ ತಾಲ್ಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀನಿವಾಸಮೂತರ್ಿ ತಿಳಿಸಿದ್ದಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಹರೇನಹಳ್ಳಿ ಗೇಟ್ ಚಿತ್ರಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಂದಿಹಳ್ಳಿ ಸಕರ್ಾರಿ ಪ್ರೌಢಶಾಲೆಯ ಮಕ್ಕಳು ಡೊಳ್ಳುಕುಣಿತ ಪ್ರದರ್ಶನ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿಯ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಮಕ್ಕಳು ಹಂದನಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

   ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಕೋಲಾಟ ಆಕರ್ಷಣೀಯವಾಗಿತ್ತು.
ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು, ಜಿ.ಪಂ.ಸದಸ್ಯರುಗಳಾದ ರಾಮಚಂದ್ರಯ್ಯ, ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್, ಪುರಸಭಾ ಅಧ್ಯಕ್ಷ ಸಿ.ಟಿ.ದಯಾನಂದ್, ತೀರ್ಥಪರು ಜಿ.ಎಚ್.ಪಿ.ಎಸ್.ನ ಎಸ್.ಡಿ.ಎಂ.ಸಿ.ಅಧ್ಯಕ್ಷೆ ದೇವಾಂಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Thursday, July 28, 2016


ಕಾನೂನು ಸಂಚಾರಿ ಸಾಕ್ಷರಥ ರಥಕ್ಕೆ ಚಾಲನೆ
ಚಿಕ್ಕನಾಯಕನಹಳ್ಳಿ,ಜು.28 : ಮನುಷ್ಯ ತನ್ನ ದಿನನಿತ್ಯದ ಬದುಕನ್ನು ಕಾನೂನಿನ ಮಿತಿಯ ಒಳಗಡೆಯೇ ನಡೆಸಬೇಕು, ನಿಯಮಗಳ ಸೂಕ್ಷ್ಮ ವಿಷಯಗಳನ್ನು ಅರಿತುಕೊಳ್ಳುವುದು ಅವಶ್ಯಕ  ಎಂದು ಪ್ರಧಾನ ಸಿವಿಲ್ ನ್ಯಾಯಾಧಿಶ ಸೋಮನಾಥ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು.
 ದುಗಡಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ನೆರವು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಕಾನೂನು ಸಂಚಾರಿ ರಥ ಸಂಚರಿಸುವ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹುಟ್ಟಿನಿಂದ ಸಾಯುವ ತನಕ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಮರಣ ಹೊಂದಿದ 7ದಿನಗಳ ಒಳಗೆ ಮರಣ ಪತ್ರವನ್ನು ಸಂಬಂದಪಟ್ಟ ಪುರಸಭೆ, ಗ್ರಾಮ ಪಂಚಾಯಿತಿಗೆ ನೀಡಿ ದೃಢೀಕರಣ ಪತ್ರ ಪಡೆಯಬೇಕು, ಅಪಘಾತವಾದ ಸಮಯದಲ್ಲಿ ವ್ಯಕ್ತಿಯನ್ನು ಬದುಕಿಸಲು ಕೈಲಾದ ಸಹಾಯ ಮಾಡಿ ಜೊತೆಗೆ ಅಪಘಾತವೆಸಗಿದ ಚಾಲಕನ ವಾಹನದ ಸಂಖ್ಯೆ  ಹಾಗೂ ವಾಹನ ಮಾಲೀಕರ ವಿವರವನ್ನು ಮುಚ್ಚಿಡದಂತೆ ಕಾನೂನಿನ ಗಮನಕ್ಕೆ ತರಬೇಕು ಎಂದರು.
ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ ಮಾತನಾಡಿ, ಯಾವುದೇ ವ್ಯಕ್ತಿ ಕಾನೂನು ತಿಳುವಳಿಕೆ ನನಗಿಲ್ಲ ಅಂತ ಅಪರಾದ ಕೃತ್ಯಗಳನ್ನು ಮಾಡಬಾರದು, ಬದುಕಿನ ನಿಯಮದಲ್ಲೇ ಕಾನೂನು ಅಳವಡಿಕೆಯಾಗಿರುತ್ತದೆ, ಮನುಷ್ಯನ ದುರಾಸೆಯಿಂದ ಹಣಗಳಿಸಿ  ಕಾನೂನಿಗೆ ಒಳಪಟ್ಟರೆ ದಂಡ ಕಟ್ಟಬೇಕಾಗುತ್ತದೆ, ವ್ಯವಹಾರ ಏನೇ ಮಾಡಲಿ ಅದಕ್ಕೆ ಸಂಬಂಧಿಸಿದ ಕಾನೂನು ಕಾಯ್ದೆಯ ನಿಯಮಗಳಿರುತ್ತವೆ ಅದನ್ನು ತಿಳಿಯಲು ಎಲ್ಲರೂ ವಿದ್ಯಾವಂತರಾಗಬೇಕು, ಮಕ್ಕಳಿಗೂ ಶಿಕ್ಷಣ ಕಡ್ಡಾಯವಾಗಿ ನೀಡಿ, ಶಿಕ್ಷಣ ಕೊಡಿಸಲು ಸಾಧ್ಯವಾಗದ ಕುಟುಂಬಸ್ಥರು ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಶಿಕ್ಷಣ ಪಡೆಯಲು ಸಹಕಾರ ಕೊರಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗಳಿಂದ ನಾಗರೀಕ ಸೌಲಭ್ಯ ಪಡೆಯುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂತರ್ಿ, ಸಹಾಯಕ ಸಂಚಾರಿ ಅಭಿಯೋಜಕ ಸಿ.ಬಿ.ಸಂತೋಷ್, ವಕೀಲ ಸಂಘದ ಅಧ್ಯಕ್ಷ ಟಿ.ಎಸ್.ಸೋಮಶೇಖರ್, ಕಾರ್ಯದಶರ್ಿ ಕೆ.ಎಂ.ಷಡಾಕ್ಷರಿ, ಬಿ.ಇ.ಓ ಕೃಷಮೂತರ್ಿ, ಸಿ.ಡಿ.ಪಿ.ಓ ತಿಪ್ಪಯ್ಯ, ಸಿ.ಪಿ.ಐ ಮಾರಪ್ಪ, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ವಿಜಿಯಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ ದಯಾನಂದ್, ಮಲ್ಲೇಶಪ್ಪ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಿ.ರಾಜಶೇಖರ್, ರತ್ನರಂಜಿನಿ, ಕಾರ್ಯದಶರ್ಿ ಗಂಗಾಧರ್, ರವಿಕುಮಾರ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು. ಮಹದೇವಮ್ಮ ಪ್ರಾಥರ್ಿಸಿದರು. ಷಡಕ್ಷರಿ ಸ್ವಾಗತಿಸಿದರು. ಹನುಮಂತಯ್ಯ ನಿರೂಪಿಸಿದರು.
ಮಕ್ಕಳಿಗೆ ಸರಳ ಬೋಧನೆ ಅಗತ್ಯ : ಬಿಇಓ ಕೃಷ್ಣಮೂತರ್ಿ 
 ಚಿಕ್ಕನಾಯಕನಹಳ್ಳಿ,ಜು.28: ಶಿಕ್ಷಕರು ತಾವು ತಿಳಿದ ವಿಷಯವನ್ನು ಸರಳವಾಗಿ ವಿದ್ಯಾಥರ್ಿಗಳಿಗೆ ತಲುಪಿಸುವ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.ಅದರಲ್ಲೂ ಗ್ರಾಮಾಂತರ ಮಕ್ಕಳಿಗೆ ಇಂಗ್ಲೀಷ್ ಬೋಧಿಸುವ ಶಿಕ್ಷಕರು ಸರಳ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
  ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಗವಿರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಆಂಗ್ಲಭಾಷಾ ಶಿಕ್ಷಕರಿಗಾಗಿ ನಡೆದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಅಂತೆಯೇ ಕಲಿಕಾ ತಂತ್ರಗಳೂ ವಿಪುಲವಾಗಿವೆ. ಆಧುನಿಕ ತಂತ್ರಜ್ಞಾನವನ್ನು ಬೋಧನೆಯಲ್ಲಿ ಬಳಸಿಕೊಳ್ಳುವ ಮೂಲಕ ಸರಳವಾಗಿ ಭಾಷೆ ಕಲಿಸಬಹುದು ಎಂದರು.
  ಸಂಪನ್ಮೂಲ ವ್ಯಕ್ತಿ ಎಂ.ಪಿ.ಬಾಲಾಜಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಶಿಕ್ಷಕರು ಮಕ್ಕಳಲ್ಲಿ ಇರುವ ಇಂಗ್ಲಿಷ್ ಭಯವನ್ನು ಹೋಗಲಾಡಿಸಬೇಕು. ಭಾಷೆ ಭಯ ಹೋಗಲಾಡಿಸಲು ಪೂರಕ ವಾತಾವರಣ ನಿಮರ್ಿಸಿಕೊಳ್ಳಬೇಕು. ಭಾಷಾ ಶುದ್ಧತೆಕಡೆ ಗಮನ ಕೊಡಬೇಕು. ದಿನ ನಿತ್ಯ ಬಳಕೆಯಾಗುವ ಪದ ಸಂಪತ್ತಿನ ಬಗ್ಗೆ ಗಮನ ಹರಿಸಬೇಕು. ಸಂದಭರ್ೋಚಿತವಾಗಿ ಮಕ್ಕಳ ಜತೆ ಸಂವಹನ ನಡೆಸಬೇಕು ಎಂದರು.
  ಕಾರ್ಯಕ್ರಮದಲ್ಲಿ ತಾಲ್ಲೂಕು ಇಂಗ್ಲಿಷ್ ಭಾಷಾ ಬೊಧಕರ ಸಂಘದ ಅಧ್ಯಕ್ಷ ಬಿ.ಎಸ್.ನಟರಾಜ್, ಖಜಾಂಚಿ ದೇವರಾಜ್, ಮುಖ್ಯೋಪಾಧ್ಯಾಯ ಬಸವಲಿಂಗಪ್ಪ,ಸಂಘದ ಪದಾಧಿಕಾರಿಗಳಾದ  ಮಾಧವ್, ಕೆ.ವಿ.ನಟರಾಜ್, ಓಂಕಾರ್ ಮುಂತಾದವರು ಹಾಜರಿದ್ದರು.Friday, July 22, 2016


ಅಕ್ರಮ ಮರಳು ಗಣಿಗಾರಿಕೆ ತಡೆಯಲು ರೈತರ ಒತ್ತಾಯ
ಚಿಕ್ಕನಾಯಕನಹಳ್ಳಿ,ಜು.22 : ಅಕ್ರಮ ಮರಳು ಗಣಿಗಾರಿಕೆಯಿಂದ ಅಂರ್ತಜಲ ನಾಶವಾಗಿ, ನೈಸಗರ್ಿಕ ಸಂಪತ್ತು ಹಾಳು ಮಾಡುತ್ತಿರುವ ದಂದೆಕೋರರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ನಗರ ಘಟಕ ಶಾಖೆ ಪದಾಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹಮೂತರ್ಿ ಮನವಿ ಸಲ್ಲಿಸಿದರು.
ರೈತ ಸಂಘದ ಟೌನ್ ಶಾಖೆ ಅಧ್ಯಕ್ಷ ಸಿ.ಕೆ.ಮೈಲಾರಪ್ಪ ಮಾತನಾಡಿ, ಪಟ್ಟಣದ ಕುಡಿಯುವ ನೀರಿಗೆ ಆಸರೆಯಾಗಿರುವ ಕೆರೆ ಅಕ್ರಮ ಮರಳುಗಣಿಗಾರಿಕೆಯಿಂದ ವಿರೂಪಗೊಂಡಿದೆ. 85ಎಕ್ಟರ್ ಪ್ರದೇಶಕ್ಕೂ ಹೆಚ್ಚೂ ಭೂ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಮರಳು ನಿಕ್ಷೇಪವನ್ನು ದಂಧೆಕೋರರು ದೋಚುತ್ತಿದ್ದಾರೆ. ಅಕ್ರಮ ಮರಳು ಸಾಕಣೆಯನ್ನು ತಕ್ಷಣ ತಡೆಯದಿದ್ದರೆ ಉಗ್ರ ಗಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
   ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನೀರನ್ನು ಏತ ನೀರಾವರಿ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆ ನೀರು ಹಿಡಿದಿಡುವ ಸಾಮಥ್ರ್ಯ ಕಳೆದುಕೊಂಡಿದ್ದು ಮಳೆಗಾಲದಲ್ಲೂ ಪಟ್ಟಣ ವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
    ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್ಗಳು ನಿರಂತರವಾಗಿ ಮರಳು ಎತ್ತುತ್ತಿವೆ. ಹಗಲು ರಾತ್ರಿ ಅವ್ಯಹತವಾಗಿ ಮರಳು ಸಾಗಣಿಕೆ ನಡೆಯುತ್ತಿದೆ. ಇದರಿಂದ ಅಂರ್ತಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಸುತ್ತ ಮುತ್ತಲ ಹಲವು ಹಳ್ಳಿಗಳ ಸಾವಿರಾರು ಹೆಕ್ಟೇರ್ ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ ಎಂದರು.
ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಅಕ್ರಮ ಮರಳು ದಂದೆಕೋರರ ವಿರುದ್ದ ಕ್ರಮ ಜರುಗಿಸಿ, ರೈತರ ನೀರಿನ ಬವಣೆ ನೀಗಿಸಬೇಕು. ಇಲಾಖೆಗಳು ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ರೈತ ಸಂಘದ ಕಾರ್ಯದಶರ್ಿ ಸಿ.ಕೆ.ಸತೀಶ್, ಸಿ.ಎಸ್.ಬಸವರಾಜು, ಮುಖಂಡರುಗಳಾದ ತಿಪ್ಪಯ್ಯ, ಪುಟ್ಟಹನುಮಯ್ಯ, ಈಶ್ವರಯ್ಯ, ಡಿ.ರಾಮಯ್ಯ, ಗೋಪಾಲಯ್ಯ. ಸಿ.ಆರ್, ಬಾಸ್ಕರ್ಬಾಬು, ಶಶಿಧರ್, ಬಸವಯ್ಯ, ಅನಿಲ್ಕುಮಾರ್, ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಿ 
ಚಿಕ್ಕನಾಯಕನಹಳ್ಳಿ,ಜು.22 : ಗಿಡಮರಗಳನ್ನು ನಾವು ಬೆಳೆಸುವುದರ ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೂ ಪರಿಸರ ಜಾಗೃತಿ ಮೂಡಿಸಬೇಕು ಎಂದು ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆದ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾಥರ್ಿ ಸಂಘದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರದಿಂದ ಆಗುವ ಅನುಕೂಲಗಳ ಬಗ್ಗೆ ಸಾರ್ವಜನಿಕರು ಒಬ್ಬರಿಂದ ಒಬ್ಬರು ಪ್ರಚಾರ ಮಾಡಬೇಕು, ಕಾಡು ಉಳಿದರೆ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ ಎಂದರು.
ಡಿಎಸ್ಎಸ್ ಮುಖಂಡ ಲಿಂಗದೇವರು ಮಾತನಾಡಿ, ಚಿ.ನಾ.ಹಳ್ಳಿಯಲ್ಲಿ ಗಣಿಕಾರಿಕೆಯಿಂದ ಪರಿಸರಕ್ಕೆ ಹಾನಿಯಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ ಜನರಿಗೆ ತೊಂದರೆ ಕೊಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಾರ್ವಜನಿಕರು ತಾಲ್ಲೂಕಿನ ಕಾಡು ಕಣಿವೆಗಳನ್ನು ಉಳಿಸುವ ಕಡೆ ಗಮನ ಹರಿಸಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮನುಷ್ಯ ಸಂಘ ಜೀವಿ, ಒಬ್ಬರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಪರಿಸರ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು.ಮನೆಗೊಂದು ಮರದಂತೆ ಶಾಲೆಗೊಂದು ವನ ರೂಪುಗೊಳ್ಳಬೇಕು ಎಂದರು.
ಶಿಕ್ಷಕ ದಿನಕರ್ ಮಾತನಾಡಿ, ತಾಲ್ಲೂಕಿಗೆ ಸಾಲು ಮರದ ತಿಮ್ಮಕ್ಕನವರು ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಗಿಡ ನೆಟ್ಟಿದ್ದರ ಪರಿಣಾಮ ಇಂದು ತಾಲ್ಲೂಕಿನಲ್ಲಿ ಮರಗಳು ದೊಡ್ಡದಾಗಿ ಬೆಳೆದು ಉತ್ತಮ ಗಾಳಿ ದೊರಕುತ್ತಿದೆ ಎಂದರು.
 ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ಮುಖ್ಯೋಪಾಧ್ಯಾಯರಾದ ರಾಮ್ಕುಮಾರ್, ದೇವರಾಜು, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.


ಜನಸಂಪರ್ಕ ಸಭೆ ಜುಲೈ 30
ಚಿಕ್ಕನಾಯಕನಹಳ್ಳಿ,ಜು.22 : ತಾಲ್ಲೂಕಿನ ಹಂದನಕೆರೆ ಹೋಬಳಿ ಚೌಳಕಟ್ಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಜುಲೈ 30ರಂದು ಬೆಳಗ್ಗೆ 11ಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ತಹಶೀಲ್ದಾರ್ ಗಂಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, July 12, 2016

ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸದವ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ
ಎಂಟು ನೂರು ವರ್ಷಗಳಿಂದ ನಡೆಯುತ್ತಿರುವ ಜಾತ್ರೆ, ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ.
ಜುಲೈ 16 ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ಚಿತ್ರಕಲಾ ಪ್ರದರ್ಶನ,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ. ಸಮೂಹ ಚಿತ್ರಕಲಾ ಪ್ರದರ್ಶನ.
17 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ನಗೆಹಬ್ಬ.

ಚಿಕ್ಕನಾಯಕನಹಳ್ಳಿ,ಜು.12 : ಎಂಟು ನೂರು ವರ್ಷಗಳ ಇತಿಹಾಸವಿರುವ ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಜುಲೈ 15 ರಿಂದ 17 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ, ಜಾತ್ರೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 
. ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಎಂಟು ನೂರು ವರ್ಷಗಳ ಇತಿಹಾಸವಿದೆ.
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 16ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿಬಿಎಸ್ ಅಭಿಮಾನಿ ಬಳಗ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. 
ವಿಜೇತರಿಗೆ ಒಟ್ಟು 1ಲಕ್ಷದ 70ಸಾವಿರ ರೂಪಾಯಿ ಬಹುಮಾನ ವಿತರಿಸಲಿದ್ದು, ಸ್ಪಧರ್ೆಯ ಸೀನಿಯರ್ ಗ್ರೂಪ್ ಪ್ರಥಮ ಸ್ಥಾನ 70ಸಾವಿರ ರೂಪಾಯಿ, ದ್ವಿತಿಯ 30ಸಾವಿರ, ತೃತೀಯ 15ಸಾವಿರ ಬಹುಮಾನ ನೀಡಲಿದ್ದು ಸ್ಪಧರ್ೆಯಲ್ಲಿ ಭಾಗವಹಿಸುವ ಗ್ರೂಪ್ಗಳಗೆ 1500ಸಾವಿರ ರೂ ಪ್ರವೇಶ ಶುಲ್ಕವಿದೆ.
ಜೂನಿಯರ್ಗ್ರೂಪ್ಗೆ ಭಾಗವಹಿಸುವವರಿಗೆ ಪ್ರಥಮ ಬಹುಮಾನ 20ಸಾವಿರ, ದ್ವಿತಿಯ ಬಹುಮಾನ 10ಸಾವಿರ, ತೃತಿಯ ಬಹುಮಾನ 5ಸಾವಿರ ರೂ ಇದ್ದು ಭಾಗವಹಿಸುವ ತಂಡಗಳಿಗೆ 500ರೂ ಪ್ರವೇಶ ಶುಲ್ಕವಿದೆ. 
ಸೀನಿಯರ್ ಸೋಲೋದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ, ತೃತಿಯ ಬಹುಮಾನ 2ಸಾವಿರವಿದೆ, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 200ರೂವಿದೆ.
ಜೂನಿಯರ್ ಸೋಲೋ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ,  ತೃತಿಯ 2ಸಾವಿರ ಹಾಗೂ ಪ್ರವೇಶ ಶುಲ್ಕ 200ರೂಗಳಾಗಿದೆ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಿದ್ದಾರೆ.
ಸಮೂಹ ಚಿತ್ರಕಲಾ ಪ್ರದರ್ಶನ : ಕುಂಚಾಂಕುರ ಕಲಾ ಸಂಘದ ವತಿಯಿಂದ 14ನೇ ವರ್ಷದ ಸಮೂಹ ಚಿತ್ರಕಲಾ ಪ್ರದರ್ಶನ ಜುಲೈ 16 ಮತ್ತು 17ರಂದು ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾಲ್ಲೂಕು ರಂಗಭೂಮಿ ಕಲಾವಿದರಾದ ಮಹೇಶ್ ಉದ್ಘಾಟಿಸುವರು. 
ತೇರಿನ ಕಳಸಕ್ಕೆ ಬಾಳೇಹಣ್ಣು ಎಸೆಯುವ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 23ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜುಲೈ 16ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗದಲ್ಲಿ ನಡೆಯಲಿದೆ.  ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸುವರು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು ಜುಲೈ 17ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್ ಉದ್ಘಾಟಿಸುವರು. ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ಉಪ ಪೋಲಿಸ್ ವರಿಷ್ಠಾಧಿಕಾರಿ ಸಿ.ಆರ್.ರವೀಶ್, ಬಿಬಿಎಂಪಿ ಉಪ ಆಯುಕ್ತ ಸಿ.ಟಿ.ಮುದ್ದುಕುಮಾರ್ ಉಪಸ್ಥಿತರಿರುವರು.   ಅದೇ ದಿನ ಸಂಜೆ 8ಕ್ಕೆ ನವದಂಪತಿಗಳ ಸ್ಪಧರ್ೆ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ದಿವ್ಯಜ್ಯೋತಿ ಹ್ಯವಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗೆಹಬ್ಬ : ಪಟ್ಟಣದ ಕನ್ನಡ ಸಂಘದ ವೇದಿಕೆ ಬಳಿ ಜುಲೈ 17ರ ಭಾನುವಾರ ಮಧ್ಯಾಹ್ನ 3.30ಕ್ಕೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆಹಬ್ಬ ಏರ್ಪಡಿಸಲಾಗಿದೆ.
ಕುಸ್ತಿ ಸ್ಪಧರ್ೆ: ಜುಲೈ 17ರ ಭಾನುವಾರ ಪಟ್ಟಣದ ಶ್ರೀ ಮಾರುತಿ ವ್ಯಾಯಾಮ ಶಾಲೆ ಮತ್ತು ಗರಡಿ ಕುಸ್ತಿ ಸಂಘದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪಧರ್ೆಯ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.  ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ.
ನಾಟಕ :  ರಾಮಾಂಜನೇಯಯುದ್ದ ನಾಟಕ, ಲವಕುಶ ನಾಟಕ, ಅನ್ನಸಂತರ್ಪಣೆ ನಡೆಯುವುದು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,ಜು.12 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸುಜ್ಞಾನ ಶಿಷ್ಯವೇತನ, ನಿರ್ಗತಿಕರಿಗೆ ಮಾಶಾಸನ, ಶುದ್ದಗಂಗಾ ಘಟಕ, ಸಿಎಹ್ಸಿಇ ಯಂತ್ರಗಳ ಧಾರೆ ಹಾಗೂ ಮತ್ತಿತರ ಹಲವು ಯೋಜನೆಗಳನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಹೇಳಿದರು.
ತಾಲ್ಲೂಕಿನ ಗೋಡೆಕೆರೆ ಶ್ರೀ ಬಸವಲಿಂಗಪ್ರಭು ಸಭಾಭವನದಲ್ಲಿ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿದ ಪ್ರಗತಿಸಾಲ ಮಾತ್ರವಲ್ಲದೆ ಹಲವಾರು ರೀತಿಯ ಸೌಲಭ್ಯ ನೀಡುತ್ತಿದೆ ಎಂದರು.
ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಹಾಗೂ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಯಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗೋಡೆಕೆರ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಶಿವಾನಂದಯ್ಯ, ಸಾಸಲು ಚಂದ್ರಶೇಖರ್, ಎ.ಎಲ್.ಚಂದ್ರಶೇಖರ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮೇಲ್ವಿಚಾರಕ ವಿಜಯ್ಕುಮಾರ್ ನಿರೂಪಿಸಿದರು. ಸಹಾಯಕ ನರಸಿಂಹಮೂತರ್ಿ ಸ್ವಾಗತಿಸಿದರು. ಪದ್ಮ ವಂದಿಸಿದರು.


ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ 

ಚಿಕ್ಕನಾಯಕನಹಳ್ಳಿ,ಜು.12 : ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ ಬಂದಿದೆ.
ತಾಲ್ಲೂಕು ಅಧ್ಯಕ್ಷರಾಗಿ ದಬ್ಬಗುಂಟೆ ಡಿ.ಆರ್.ರುದ್ರೇಶ್, ಗೌರವಾಧ್ಯಕ್ಷರಾಗಿ ಯಳ್ಳೇನಹಳ್ಳಿ ನಿರಂಜನಮೂತರ್ಿ, ಉಪಾಧ್ಯಕ್ಷರಾಗಿ ಗೋಡೆಕೆರೆ ವಸಂತ್ಕುಮಾರ್, ಕಾರ್ಯಧ್ಯಕ್ಷ ಕಾತ್ರಿಕೆಹಾಳ್ ಜಯಣ್ಣ, ಪ್ರಧಾನ ಕಾರ್ಯದಶರ್ಿ ಡಿ.ಕೆ.ರುದ್ರಯ್ಯ, ಜಂಟಿಕಾರ್ಯದಶರ್ಿಗಳಾಗಿ ತಿಮ್ಮನಹಳ್ಳಿಬಾಲಾಜಿ, ಬಾಚಿಹಳ್ಳಿಶಿವಕುಮಾರ್, ಸೋಮನಹಳ್ಳಿ ನರಸಿಂಹಮೂತರ್ಿ, ಹೊಯ್ಸಳಕಟ್ಟೆ ದೇವರಾಜು, ಹುಳಿಯಾರು ಮೂತರ್ಿ, ಆಶ್ರೀಹಾಳ್ ರಾಮಯ್ಯ, ಅರಳೀಕೆರೆ ಕರಿಯಪ್ಪ ಹಾಗೂ ಖಜಾಂಚಿಗಳಾಗಿ ಅಗಸರಹಳ್ಳಿ ನರಸಿಂಹಮೂತರ್ಿ ಆಯ್ಕೆಯಾಗಿದ್ದಾರೆ.


Monday, July 11, 2016ಬಿಜೆಪಿ ಯುವ ಮೋಚರ್ಾ ವತಿಯಿಂದ ಪ್ರತಿಭಟನೆ  

ಚಿಕ್ಕನಾಯಕನಹಳ್ಳಿ,ಜು.11 : ಮಂಗಳೂರು ಡಿ.ವೈ.ಎಸ್.ಪಿ ಗಣಪತಿಯವರ ಆತ್ಮಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾಜರ್್ ಕೈವಾಡವಿದೆ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಪ್ರಕರಣವನ್ನು ಸಿ.ಬಿ.ಐಗೆ ವಹಿಸುವಂತೆ ತಾ.ಬಿ.ಜೆ.ಪಿ.ಮಾಜಿ ಅಧ್ಯಕ್ಷ ಶ್ರೀನಿವಾಸ್ಮೂತರ್ಿ ಆಗ್ರಹಿಸಿದ್ದಾರೆ.
ಪಟ್ಟಣದ ಯುವ ಮೂಚರ್ಾ ವತಿಯಿಂದ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಸಕರ್ಾರದಲ್ಲಿ ಭ್ರಷ್ಠ ಅಧಿಕಾರಿಗಳು ಪ್ರಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಇದರಿಂದ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಕರ್ಾರವೇ ಕಾರಣ ಎಂದ ಅವರು ರಾಜ್ಯ ಸಕರ್ಾರದ ಅಧೀನದಲ್ಲಿರುವ ಸಿ.ಐ.ಡಿಗೆ ವಹಿಸುವ ಬದಲು ಸಿಬಿಐಗೆ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಎಮ್.ಎಮ್ ಜಗಧೀಶ ಮಾತನಾಡಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಚಿವ ಕೆ.ಜೆ.ಜಾಜರ್್ರವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ, ಗೃಹ ಸಚಿವರು ರಾಜ್ಯದಲ್ಲಿ ನಿವೃತ್ತ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಹೈಕಮಾಂಡಿಗೆ ದೂರು ನೀಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ಸಕರ್ಾರದಲ್ಲಿ ಅನೇಕ ಪ್ರಮಾಣಿಕ ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು. 
ಪ್ರತಿಭಟನೆಯಲ್ಲಿ ಯುವ ಮೂಚರ್ಾ ಅಧ್ಯಕ್ಷ ಚೇತನ್ಪ್ರಸಾದ್, ನಗರ ಅಧ್ಯಕ್ಷ ನರಸಿಂಹಮೂತರ್ಿ, ಮಲ್ಲಿಕಾಜರ್ುನ, ಶಿವಕುಮಾರ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರ ಮೇಲೆ ಕರಡಿ ದಾಳಿ 
ಚಿಕ್ಕನಾಯಕನಹಳ್ಳಿ,ಜು.11 : ತಾಲ್ಲೂಕಿನ ನಂದಿಹಳ್ಳಿಯಲ್ಲಿ ಕರಡಿ ದಾಳಿ ಮಾಡಿ ಮಂಜುಳ(28) ಹಾಗೂ ದ್ರಾಕ್ಷಾಯಿಣಮ್ಮ (45)ವರ್ಷ ತೀವ್ರವಾಗಿ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಮಂಜುಳ ತಮ್ಮ ತೋಟಕ್ಕೆ ಹೋಗಿ ನೀರುಹಾಯಿಸಲು ಮೋಟ್ರು ಚಾಲನೆ ಮಾಡಿ ಮನೆಗೆ ಹಿಂತಿರುಗುವಾಗ,  ಗ್ರಾಮದ ಪಕ್ಕದಲ್ಲಿ ಹೋಗುತ್ತಿರುವ ಸಮಯದಲ್ಲಿ 3ಕರಡಿಗಳು ಮಂಜುಳ ಮೇಲೆ ದಾಳಿ ಮಾಡಿ ಬೆನ್ನು ಹಾಗೂ ಬೆನ್ನಿನ ಕೆಳ ಭಾಗದಲ್ಲಿ ಪರಚಿದುದರಿಂದ ತೀವ್ರಗಾಯಗಳಾಗಿದೆ, ನಂದಿಹಳ್ಳಿ ಸುತ್ತಮುತ್ತಲು ಮೂರು ಕರಡಿಗಳು ನಿತ್ಯ ಸಂಚರಿಸುತ್ತವೆ, ಇದರಿಂದ ರೈತರು ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ, ಕೂಡಲೇ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿದು ಈ ಭಾಗದ ಜನರಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಷಯ ತಿಳಿದ  ಅರಣ್ಯಾಧಿಕಾರಿಗಳು ನಂದಿಹಳ್ಳಿಗೆ  ಆಗಮಿಸಿ ಕರಡಿ ಹಿಡಿಯುವ ಕಾರ್ಯಚರಣೆ ಕೈಗೊಳ್ಳುವ ಸಲುವಾಗಿ  ಟ್ರ್ಯಾಕ್ಟರ್ನಿಂದ ಬೋನ್ ಇಳಿಸುವ ಸಂದರ್ಭದಲ್ಲಿ ಉಂಟಾದ ಗೌಜುಗದ್ದಲದಿಂದ ಗಾಬರಿಗೊಂಡ ಕರಡಿಗಗಳು ಪಕ್ಕದ  ದಾಳಿಂಬೆ ಗಿಡದಲ್ಲಿ ಇದ್ದ ಕರಡಿಗಳು ದ್ರಾಕ್ಷಾಯಣಮ್ಮನ ಮೇಲೆ  ಏಕಾಏಕಿ ದಾಳಿ ನಡೆಸಿವೆ,   ಈ ಸಂದರ್ಭದಲ್ಲಿ ದ್ರಾಕ್ಷಾಯಣಮ್ಮನ ಕಿರಿಚಾಟ ಕೇಳಿ ದಾರಿ ಹೋಕರು ಬಂದು ಕರಡಿಗಳನ್ನು ಓಡಿಸಿದರು ಎಂದು ತಿಳಿದು ಬಂದಿದೆ.  ಕರಡಿ ದಾಳಿಯಿಂದ ಕೈ ಮುರಿದಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಆರು ಹೊಲಗೆಗಳನ್ನು ಹಾಕಿದ್ದಾರೆ. 
ಆಸ್ಪತ್ರೆಗೆ ಗಾಯಾಳಗಳನ್ನು ಕರೆತಂದಿದ್ದ ನಂದಿಹಳ್ಳಿ ಮಲ್ಲೇಶಯ್ಯ ಮಾತನಾಡಿ, ನಮ್ಮ ಗ್ರಾಮದ  ಸುತ್ತಮುತ್ತಾ ಈಗಾಗಲೇ ಮೂರು ನಾಲ್ಕು ಜನ ಕರಡಿ ದಾಳಿಗೆ ತುತ್ತಾಗಿದ್ದಾರೆ,  ಹುಳಿಯಾರು ಸಕರ್ಾರಿ ಆಸ್ಪತ್ರೆಯಲ್ಲಿ ವೈದ್ಯಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇಂತಹ ಘಟನೆಗಳಲ್ಲಿ ಚಿಕಿತ್ಸೆ ನೀಡಲಾಗದೇ ಇರುವುದರಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕಾಗಿದೆ.  ಕೂಡಲೇ ಕರಡಿಗಳನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆರ್.ಎಫ್.ಓ. ಲಕ್ಷ್ಮೀನಾರಾಯಣ ಭೇಟಿ ನೀಡಿ ಸಕರ್ಾರದಿಂದ ಗಾಯಾಳುವಿಗೆ ಚಿಕಿತ್ಸೆಯ ಖಚರ್ುವೆಚ್ಚಗಳನ್ನು ನೀಡಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ 
                                       
ಚಿಕ್ಕನಾಯಕನಹಳ್ಳಿ,ಜು.11 : ಅಂಗನವಾಡಿ ಕಾರ್ಯಕರ್ತರನ್ನು ಸಕರ್ಾರಿ ನೌಕರರಂತೆ ಪರಿಗಣಿಸಬೇಕು ಹಾಗೂ  ವೇತನವನ್ನು ಹೆಚ್ಚಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕಗಳನ್ನು  ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಗುರುಭವನ ಬಳಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಮೆರವಣಿಗೆ ಹೊರಟು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಅಧ್ಯಕ್ಷೆ ಪೂರ್ಣಮ್ಮ, ಅಂಗನವಾಡಿ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಬೇಕು, ಅಂಗನವಾಡಿ ಸಹಾಯಕರಿಗೆ, ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು, ಪರಿಣಿತ ಕೆಲಸಗಾರರಿಗೆ 20ಸಾವಿರ ರೂ  ಅಪರಿಣಿತ ಕೆಲಸಗಾರರಿಗೆ 17ಸಾವಿರ ರೂಗಳನ್ನು ಆರಂಭದ ವೇತನ  ನೀಡಬೇಕು ಹಾಗೂ  ಅಂಗನವಾಡಿ ಕಾರ್ಯಕರ್ತರನ್ನು ಮೂರನೇ ದಜರ್ೆ ನೌಕರರು, ಸಹಾಯಕರನ್ನು 4ನೇ ದಜರ್ೆ ನೌಕರರೆಂದು ಪರಿಗಣಿಸುವಂತೆ,  ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಚುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹಸಿರು ಸೇನೆಯ ಸತೀಶ್ಕೆಂಕೆರೆ ಮಾತನಾಡಿ, ಹದಿನೈದು ವರ್ಷಗಳಿಂದಲೂ ರಾಜ್ಯಸಕರ್ಾರವಾಗಲಿ, ಕೇಂದ್ರ ಸಕರ್ಾರವಾಗಲಿ ಅಂಗನವಾಡಿ ನೌಕರರಿಗೆ ವೇತನ ನೀತಿಯಂತೆ ಸೌಲಭ್ಯಗಳನ್ನು ನೀಡಿಲ್ಲ, ಇತರ ಇಲಾಖೆ ನೌಕರರಿಗೆ ಮಾತ್ರ 25ರಿಂದ 30 ಸಾವಿರದವರೆಗೂ ವೇತನ ಹೆಚ್ಚಿಸಿ ಹಲವು ಸೌಲಭ್ಯ ನೀಡುತ್ತಿವೆ, ಅಂಗನವಾಡಿ ನೌಕರರು ಬಾಣಂತಿಯರಿಗೆ, ಮಕ್ಕಳಿಗೆ ಸೇವೆ ಸಲ್ಲಿಸುತ್ತಿದ್ದಾರೆಮ ಇವರೂ ಇತರ ಸಕರ್ಾರಿ ನೌಕರರಂತೆ ಗ್ರಾಮಗಳಲ್ಲಿ  ಕೆಲಸ ನಿರ್ವಹಿಸುತ್ತಾರೆ ಆದರೂ ಸಕರ್ಾರ ತಾರತಮ್ಯ ಮಾಡುತ್ತಿರುವುದು ವಿಷಾದನೀಯ ಎಂದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದಶರ್ಿ ಸುನಂದ, ಪುಷ್ಪಾವತಮ್ಮ, ಶಾರದ, ಶಕುಂತಲ, ಮುಂತಾದವರು ಉಪಸ್ಥಿತರಿದ್ದರು.
Saturday, July 9, 2016ದಿ.ರೇವಣ್ಣನವರ ಹಾಗೂ ಕೆ.ಬಸವಯ್ಯನವರ 10ನೇ ವರ್ಷದ ವಾಷಿಕೋತ್ಸವ 
ಚಿಕ್ಕನಾಯಕನಹಳ್ಳಿ,ಜು.09 : ದಿ.ರೇವಣ್ಣನವರು ನಿಸ್ವಾರ್ಥ ಸೇವೆಗೆ ಹೆಸರಾಗಿದ್ದರು, ಜಾತಿ ಬೇದ ಮರೆತು ತಮ್ಮ ಬಳಿ ಸಹಾಯಕ್ಕಾಗಿ ಬಂದವರೆಲ್ಲರಿಗೂ ಶಿಕ್ಷಣದ ನೆರವು ನೀಡಿ, ಸಕರ್ಾರಿ ಕೆಲಸ ದೊರಕಿಸಿ, ಸಮಾಜದ ಉತ್ತಮ ವ್ಯಕ್ತಿಗಳಾಗುವಂತೆ ಮಾಡಿದರು ಎಂದು ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಿ.ಎಂ.ಗುರುಮೂತರ್ಿ ಹೇಳಿದರು.
ಪಟ್ಟಣದ ಕಂಬಳಿ ಸೊಸೈಟಿ ಮುಂಭಾಗದಲ್ಲಿ ಸ್ಥಾಪಿಸಿರುವ ದಿವಂಗತ ನಿವೃತ್ತ ಅಪರ ಕೃಷಿ ನಿದರ್ೇಶಕರಾಗಿದ್ದ ಸಿ.ಎಂ.ರೇವಣ್ಣ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ಬಸವಯ್ಯನವರ ಪುತ್ಥಳಿ ಪ್ರತಿಷ್ಠಾಪನೆಯ 10ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಕನಕ ಭವನದಲ್ಲಿ ನಡೆದ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
   ಪುತ್ಥಳಿ ಅನಾವರಣ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಬಡವಿದ್ಯಾಥರ್ಿಗಳ ಶಿಕ್ಷಣಕ್ಕೆ ನೆರವು ನೀಡಿದ ಮಹಾನ್ ವ್ಯಕ್ತಿ ರೇವಣ್ಣ. ಸುಮಾರು 300ಕ್ಕೂ ಹೆಚ್ಚು ಜನರಿಗೆ ಸಕರ್ಾರಿ ಕೆಲಸ ದೊರಕುವಂತೆ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಲಸ ಮಾಡಿದವರು ಇಂದು ಸಮಾಜದ ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಪುತ್ಥಳಿ ಅನಾವರಣ ಸಮಿತಿ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ರೇವಣ್ಣನವರ ಹಾಗೂ ಬಸವಯ್ಯ ಅವರ ನೆನಪಿಗಾಗಿ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಹಾಗೂ ಸೇವಾ ಸಮಿತಿ ರಚಿಸಿಕೊಂಡು ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದು, ಬಡವಿದ್ಯಾಥರ್ಿಗಳಿಗೆ ನೋಟ್ಬುಕ್, ಕನ್ನಡ ಇಂಗ್ಲಿಷ್ ನಿಘಂಟನ್ನು ನೀಡುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಪುತ್ಥಳಿ ಅನಾವಾರಣ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. 
ಸಮಿತಿ ಅಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಂಟಿ ಕೃಷಿ ನಿದರ್ೇಶಕ ಪಿ.ಮೋಹನ್, ಪತ್ರಿಕೋದ್ಯಮಿ ಸಿ.ಜಿ.ಮುದ್ದುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಮುಂದಾಗುವರೇ ? 
ಚಿಕ್ಕನಾಯಕನಹಳ್ಳಿ,ಜು.09 : ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಸ್ನಿಲ್ದಾಣ ನೆಹರು ವೃತ್ತ ದೇವಾಂಗ ಬೀದಿ ಸೇರಿದಂತೆ ಪಟ್ಟಣದ 23 ವಾಡರ್್ಗಳಲ್ಲಿ ಕಸದ ರಾಶಿಯೇ ಹರಡಿದ್ದು ಇದರಿಂದ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಪಟ್ಟಣದ  ಹೊಸ ಬಸ್ ನಿಲ್ದಾಣದ ಸುತ್ತಮುತ್ತಲ ಹೂವಿನ ಅಂಗಡಿಗಳು ಕಾಫಿ, ಟೀ, ಬಾಳೆ ಹಣ್ಣಿನ ಅಂಗಡಿಗಳಲ್ಲಿ ಬರುವ ತ್ಯಾಜ್ಯ ರಸ್ತೆ ಬದಿ ಚೆಲ್ಲಾಡುತ್ತಿದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ,  ಹೊಸ ಬಸ್ನಿಲ್ದಾಣದ ಹೈಮಾಸ್ಟ್ ಲೈಟ್ ಬಳಿ ಇಟ್ಟಿರುವ ಕಂಟೇನರ್ಗೆ ಕಸ ಹಾಕದೇ ಅಂಗಡಿ ಮಾಲೀಕರುಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ.
 ಖಾಸಗಿ ಬಸ್ ನಿಲ್ದಾಣದಲ್ಲಿರುವ ಚರಂಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ, ಅಕ್ಕಪಕ್ಕದ ಪೆಟ್ಟಿಗೆ ಅಂಗಡಿಯವರು ಟೀ, ಕಾಫಿ, ಲೋಟಗಳನ್ನು ಚರಂಡಿಯಲ್ಲಿ ಹಾಕುತ್ತಿರುವುದರಿಂದ ಚರಂಡಿ ಘನತ್ಯಾಜ್ಯದಿಂದ ತುಂಬಿಕೊಂಡು ದುನರ್ಾತ ಬೀರುತ್ತಿದೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆ ನೀರು ಚರಂಡಿಯಲ್ಲಿ ನಿಂತು, ತ್ಯಾಜ್ಯ ಕೊಳೆಯುತ್ತಿದೆ. ಕೆಲವರು ಚರಂಡಿಯ ಮೇಲೆ ಹಾಕಿರುವ ಹಾಸು ಕಲ್ಲುಗಳನ್ನು ಅಪಹರಣವಾಗಿದ್ದು ಪಾದಚಾರಿಗಳು ತೀವ್ರ  ತೊಂದರೆ ಅನುಭವಿಸುತ್ತಿದ್ದಾರೆ.
 ಪಾದಾಚಾರಿಗಳು ನಡೆದು ಹೋಗುವಾಗ ಚರಂಡಿಯಲ್ಲಿ ಬಿದ್ದು ಕೈಕಾಲು ಮುರಿದು ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ. ಪುರಸಭೆ ಅಧಿಕಾರಿಗಳು, ಸದಸ್ಯರು ಚರಂಡಿಗಳಲ್ಲಿ ಹಾಕಿರುವ ತ್ಯಾಜ್ಯವನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಕಳುವಾಗಿರುವ ಚಪ್ಪಡಿಗಳನ್ನು ಹಾಕಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಧರ್ಮಸ್ಥಳ ಸಂಸ್ಥೆಯ ಒಕ್ಕೂಟ ಪದಗ್ರಹ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.09 : ಧರ್ಮಸ್ಥಳ ಸಂಸ್ಥೆ ರೈತರಲ್ಲಿನ ಜ್ಞಾನವನ್ನು ಗುರುತಿಸಿಕೊಳ್ಳಲು ಹಾಗೂ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು  ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದೆ. ಸಂಸ್ಥೆಯ ನೆರವು ಬಳಸಿಕೊಂಡು ಆಥರ್ಿಕ ಪ್ರಗತಿ ಸಾಧಿಸಿಕೊಳ್ಳಿ ಎಂದು ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಹೇಳಿದರು.
ತಾಲ್ಲೂಕಿನ ಸಿದ್ದರಾಮನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಶನಿವಾರ ನಡೆದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದುಗಡಿಹಳ್ಳಿ ಮತ್ತು ಹೆಸರಹಳ್ಳಿ ಕಾರ್ಯಕ್ಷೇತ್ರಗಳ ನೂತನ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಆದರೆ ಸಾಲ ಪಡೆದವರು ಕೃಷಿ ಕೆಲಸಗಳಿಗೆ ಹಣ ಹೂಡಿದರೆ ಆಥರ್ಿಕವಾಗಿ ಲಾಭ ಪಡೆಯಬಹುದು ಎಂದರು.
ತಾ.ಪಂ.ಸದಸ್ಯೆ ಶೈಲಾ ಮಾತನಾಡಿ, ಯುವಕರು ಸಂಸ್ಕೃತಿ ಮರೆಯಬಾರದು. ದೇಶದ ಕಲೆ, ಸಾಂಸ್ಕೃತಿಯನ್ನು ಯುವಪೀಳಿಗೆ ಬೆಳೆಸಿ ಮುಂದೆ ಬರುವಂತಹ ಜನಾಂಗಕ್ಕೆ ಮಾದರಿಯಾಗಿ ನೀಡಬೇಕು. ಮಹಿಳೆಯರು ಅಭಿವೃದ್ಧಿ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ಗ್ರಾಮಗಳ ಕಲ್ಯಾಣ ರೈತರ ಅಭ್ಯೂದಯದಿಂದ ಮಾತ್ರ ಸಾಧ್ಯ ಎಂಬ ಆಶಯವನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ಸಾವಿತ್ರಮ್ಮ, ಶಿಕ್ಷಕ ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸುವೆ ಟಿ.ದಾಸೇಗೌಡ 

ಚಿಕ್ಕನಾಯಕನಹಳ್ಳಿ,ಜು.09 : ಸಕರ್ಾರ ಶಿಕ್ಷಕರನ್ನು ಜೀತದಾಳುಗಳಂತೆ ಕಾಣುತ್ತಿದೆ, ಘನತೆಯ ವೇತನ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದೆ ಶಿಕ್ಷಕ ಸಮುದಾಯವನ್ನು ವಂಚಿಸುತ್ತಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪಕ್ಷೇತರವಾಗಿ ಸ್ಪಧರ್ಿಸಿರುವ ಟಿ.ದಾಸೇಗೌಡ ಆರೋಪಿಸಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕುಮಾರ್ ನಾಯಕ್ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಿ ವೇತನ ತಾರತಮ್ಯ ನಿವಾರಿಸಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು. ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭತರ್ಿ ಮಾಡಬೇಕು ಎಂದು ಒತ್ತಾಯಿಸಿದರು.
    ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಆರೋಗ್ಯ ವಿಮೆ ವಿಸ್ತರಣೆ, ಅರೆಕಾಲಿಕ ಉಪನ್ಯಾಸಕರುಗಳ ಖಾಯಮಾತಿ, ಅನುದಾನ ರಹಿತ ಶಾಲೆ ಶಿಕ್ಷಕರುಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಸಂಬಳ ಹಾಗೂ ಸೇವಾ ಭದ್ರತೆ ಒದಗಿಸುವುದು, ಮಹಿಳಾ ಸಿಬ್ಬಂದಿಗೆ ವಿಶೇಷ ರಜೆ ಹಾಗೂ ಶಾಲೆಗಳ ಉನ್ನತೀಕರಣ ತಮ್ಮ ಗುರಿ ಎಂದರು.
  ಗೋಷ್ಠಿಯಲ್ಲಿ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು, ಎಸ್.ಎಂ.ಎಸ್, ಕಾಲೇಜ್ ಪ್ರಿನ್ಸಿಪಾಲ್ ಸ್ವಾಮಿಗೌಡ ಉಪಸ್ಥಿತರಿದ್ದರು.Friday, July 8, 2016

ಅಣೆಕಟ್ಟೆಗೆ ಆರೋಗ್ಯ ಸಚಿವ ರಮೇಶ್ಕುಮಾರ್ ಭೇಟಿ, ಚಿಕನ್ಗುನ್ಯಾ ಬಗ್ಗೆ ಪರಿಶೀಲನೆ
ಚಿಕ್ಕನಾಯಕನಹಳ್ಳಿ08: ಥೂ...ತ್ತೇರಿ ಹೋಡೆದುಬಿಡ್ತಿನಿ, ಎಲ್ಲಾ ತಿಳಿದುಕೊಂಡೆ ಬಂದಿದ್ದೇನೆ. ಮೂನ್ನೂರು ಜನ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಮುವಾತ್ತಾರು ಜನ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಿರಾ. ಏನ್ ಅವತಾರ ನಿಮ್ದು ಬಹಿರಂಗವಾಗಿ ಈ ರೀತಿ ಸುಳ್ಳು ಹೇಳಿದರೆ ಜನ ಕಾಪಾಳಕ್ಕೆ ಭಾರಿಸಿದರೆ ಗತಿ ಏನು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಅಣೇಕಟ್ಟೆ ಗ್ರಾಮದ ಚಿಕೂನ್ಗುನ್ಯಾ ರೋಗಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ದಿಢೀರ್ಭೇಟಿ ನೀಡಿ ಪರೀಶಿಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ,  ಸುಳ್ಳು ಹೇಳಿದರೆ ಸಸ್ಪೆಂಡ್ ಆಗ್ತಿರಾ. ಸುಳ್ಳು ಹೇಳಿದರೆ ಒಂದು ತಪ್ಪು ನಿರಾಕರಿಸಿದರೆ ಇನ್ನೊಂದು ತಪ್ಪುಮಾಡಿದಂತಾಗುತ್ತದೆ  ಎಚ್ಚರವಿರಲಿ ಎಂದು ಗದರಿದರು.
ನೀವು ಅಧಿಕಾರಿಗಳು ನಮಗೆ ಸುಳ್ಳು ಮಾಹಿತಿ ನೀಡಿ ಸಕರ್ಾರವನ್ನು ಕತ್ತಲಲ್ಲಿಟ್ಟಿದ್ದೀರಿ.  ನಿಮ್ಮ ವರದಿಗಳನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆಯಲ್ಲಿ ನಾನು ಯಾವರೀತಿ ಮಾತನಾಡಲಿ,  ನಮಗೆ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತೀರಿ. ಮನುಷ್ಯನಿಗೆ ಹೃದಯವಿರಬೇಕು ಕೇವಲ ಮನುಷ್ಯನಂತೆ ಕಂಡರೆ ಸಾಲದು. ಜನರು ನಮ್ಮನ್ನು ಆರಿಸಿ ಕಳುಹಿಸಿದ್ದು ಅವರ ಸೇವೆ ಮಾಡಲು ನೀವು ಕೇವಲ ಓದಿನಿಂದ ಅಧಿಕಾರ ಪಡೆದಿದ್ದು, ನಾವು ಜನರ ಕಷ್ಟ ನಷ್ಟಗಳನ್ನು ಕಂಡು ನೋಡಿ ತಿಳಿದು ಅವರಿಂದ ಆರಿಸಿ ಬಂದಿರುತ್ತೇವೆ. ಇದುವರೆವಿಗೂ ನಿಮಗೆ ಏನು ಖಾಯಿಲೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ 9 ಜನ ಮಲೆರಿಯಾ ಪೀಡಿತರಿದ್ದಾರೆ ಎಂದು ಹೇಳುತ್ತೀದ್ದಿರಿ, ಉಳಿದ 293ಜನರಿಗೆ ಬಂದಿರುವ ಖಾಯಿಲೆ ಯಾವುದು ಎಂಬುದರ ಬಗ್ಗೆ ಪರೀಕ್ಷೇ ನಡೆಸಿದ್ದಾರಾ ಎಂದ ಅವರು ಜನರಿಗೆ ಯಾವ ಖಾಯಿಲೆ ಎಂದು ತಿಳಿಯದೇ ಏನು ಚಿಕಿತ್ಸೆ ನೀಡುತ್ತಿದ್ದೀರಿ ಎಂದು ಪ್ರೇಶ್ನಿಸಿದರು.
ಗ್ರಾಮದ ಸ್ವಚ್ಛತೆಯ ಬಗ್ಗೆ ತಕ್ಷಣ ಕ್ರಮವಹಿಸಿ ಫಾಗಿಂಗ್ ಹಾಗೂ ರಕ್ತಪರೀಕ್ಷೆ, ನೀರಿನ ಪರೀಕ್ಷೆಯನ್ನು ತುತರ್ಾಗಿ ಮಾಡಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಒಂದು ತಿಂಗಳಾದರೂ ಪರವಾಗಿಲ್ಲ, ಸಮಸ್ಯೆ ಬಗೆಹರಿಸಿಯೇ ವೈದ್ಯರ ತಂಡ ಗ್ರಾಮವನ್ನು ತೊರೆಯಬೇಕು ಎಂದು ತಾಕಿತು ಮಾಡಿದರು. ಯಾವುದೇ ತಾರತಮ್ಯಮಾಡದೇ ಬಂದ ಎಲ್ಲರಿಗೂ ಇಲ್ಲವೇ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಬೇಕು ಸಕರ್ಾರದ ವತಿಯಿಂದ ಯಾವುದೇ ಸವಲತ್ತು ಬೇಕಾದರೂ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯ ಸಾಂಕ್ರಾಮಿಕ ರೋಗಗಳ ನಿಗಾವಣೆ ನಿದರ್ೇಶಕಿ ಡಾ|| ಲೋಲಾಪಾಟೀಲ್ ಇವರ ನಿದರ್ೇಶನದ ನಂತರ ಸ್ಥಳಕ್ಕೇ ಭೇಟಿ ನೀಡಿದ್ದೀರಿ,  ನಿಘಂಟನ್ನು ನೋಡಿ ಸವರ್ೇಲೆನ್ಸ್ ಎಂಬ ಪದಕ್ಕೆ ಅರ್ಥ ತಿಳಿದುಕೊಂಡು ಕೆಲಸ ಮಾಡಿ ಸಮಸ್ಯೆ ಮಾಧ್ಯಮದಲ್ಲಿ ಬಿತ್ತರಗೊಂಡ ನಂತರ ಸ್ಥಳಕ್ಕೆ ಭೇಟಿ ನೀಡಿರುವ ನೀವು ಈ ಬಗ್ಗೆ ಯಾವುದೇ ರೀತಿಯ ವರದಿಯನ್ನು ಸಂಗ್ರಹಿಸಿಲ್ಲ ಯಾಕೆ  ಇದರಿಂದ ನಿಮ್ಮ ಬೇಜಾವಾಬ್ದಾರಿ ಎಷ್ಟು ಎಂಬುದು ತಿಳಿಯುತ್ತದೆ ಎಂದರು.
ಜನಸಾಮಾನ್ಯರಿಗೆ ಇದು ಚಿಕೂನ್ಗುನ್ಯ ಎಂದು ಗೊತ್ತು, ನೀವು ಮಾತ್ರ ಪರೀಕ್ಷೆಯನ್ನೇ ನಡೆಸದೇ ಶಂಕಿತ ಖಾಯಿಲೆ ಎಂದು ಹೇಳುತ್ತಿದ್ದೀರಿ ನಿಮಗೆ ಈ ಖಾಯಿಲೆ ಬಂದಿದ್ದರೆ ತಿಳಿಯುತ್ತಿತ್ತು. ಜನರನ್ನು ನಿಮ್ಮ ಕುಟುಂಬದವರಂತೆ ಕಂಡು ಸಮಸ್ಯಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನರ ಋಣ ತೀರಿಸಿ ಎಂದರು.
ಊರು ಕಾಯುವವನು ಬಂದೂಬಸ್ತ್ ಮಾಡಿದ್ದರೆ ದನ ನುಗ್ಗುತ್ತಿರಲಿಲ್ಲ,  ಆಶಾ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ವರೆಗೆ ಎಲ್ಲಾ ಹಂತದ ಅಧಿಕಾರಿಗಳೂ ವರದಿಯನ್ನು ನೀಡದೇ ದೊಡ್ಡತಪ್ಪು ಮಾಡಿದ್ದೀರಿ ಇದರ ಪರಿಣಾಮ ಮುಂದೆ ನೋಡುತ್ತಿರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ,ಪಂ.ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ, ಡಿಎಸ್ಒ ಡಾ||ಪುರುಷೋತ್ತಮ್, ಎನ್ವಿಬಿಡಿಸಿಪಿ ಯ ಡಾ||ವೀಣಾ, ತಾಲ್ಲೂಕು ವೈದ್ಯಾಧೀಕಾರಿ ಡಾ||ಶಿವಕುಮಾರ್, ಇಒ ಕೃಷ್ಣಮೂತರ್ಿ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಚ್ಚರವಹಿಸಿ : ಪುರಸಭೆ ಸಭೆಯಲ್ಲಿ ಚಚರ್ೆ
ಚಿಕ್ಕನಾಯಕನಹಳ್ಳಿ,ಜು.08: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಹಿಸಬೇಕಾದ ಎಚ್ಚರ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗಧಿಗೆ ಸಂಬಂಧಿಸಿದ ತೀಮರ್ಾನ, ಮುಸ್ಲಿಂ ಸಮುದಾಯದವರಿಗೆ ನೀಡುತ್ತಿರುವಂತೆ ನಮಗೂ ಪುರಸಭಾ ನಿವೇಶನಗಳನ್ನು ನೀಡುವಂತೆ ವಿವಿಧ ಸಮಾಜದವರು ನೀಡಿರುವ  ಅಜರ್ಿಯ ಮೇಲೆ ಚಚರ್ೆ, ಪುರಸಭಾ ಆಸ್ತಿಗಳಿಗೆ ತಂತಿಬೇಲಿ ಹಾಕುವುದು  ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಷಯಗಳ ಮೇಲೆ ಪುರಪಿತೃಗಳು ನಿರ್ಣಯ ಕೈಗೊಂಡಿದ್ದಾರೆ.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ,  ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿದ್ದು ಮುನ್ನೇಚ್ಚರಿಕೆಯಾಗಿ ಕಸ, ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳ ಸುತ್ತುಮುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು ಹಾಗೂ ಬಿದ್ದಿರುವ ಹಳೆಮನೆಗಳಿಗೆ ಹೊಸದಾಗಿ ಕಟ್ಟಲು ಲೈಸೆನ್ಸ್ ನೀಡದ ಬಗ್ಗೆ ಸದಸ್ಯ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಬೀಡುತ್ತಿಲ್ಲ ಎಂದರಲ್ಲದೆ  ಪಟ್ಟಣದಲ್ಲಿ ಬೋರೆವೆಲ್ಗಳು ಎಷ್ಟು ಕೆಟ್ಟು ನಿಂತಿವೆ ಎಂದು ತಿಳಿಸಿಲ್ಲ ಹಾಗೂ 577 ಪೈಪ್ ಲೆಂತ್ಗಳ ಬಗ್ಗೆ ದಾಖಲೆ ನೀಡಿಲ್ಲ ಎಂದು ಆರೋಪಿಸಿದರು. 
  ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಬಡವರು ನಿವೇಶನಕ್ಕಾಗಿ ಅಜರ್ಿ ಹಾಕಿದ್ದರೂ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನಗಳನ್ನು ನೀಡಿಲ್ಲ ಎಂದ ಅವರು, ಮೊದಲು ಲೈಸೆನ್ಸ್ ಗೊಂದಲ ನಿವಾರಿಸಿ  ಹಾಗೂ ವಾಡರ್್ಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿ ಮುನ್ನೇಚ್ಚರಿಕೆ ವಹಿಸಲಾಗುವುದು, ಇನ್ನು ಮುಂದೆ ಬೋರ್ವೆಲ್ಗಳ ವಿವರ ಹಾಗೂ ಹೊಸದಾಗಿ ಕೊರಿಸಿದ ಬೋರ್ವೆಲ್ಗೆ ಎಷ್ಟು ವೆಚ್ಚವಾಯಿತು, ಮಾಸಿಕ ಜಮಾ ಖಚರ್ುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರಲ್ಲದೆ,  ಪುರಸಭಾ ಆಡಳಿತದಲ್ಲಿ ಲೋಪ ದೋಷಗಳೂ ಆಗದಂತೆ ಎಚ್ಚರವಹಿಸುತ್ತಿದ್ದೇನೆ ಎಂದರು. ಪಟ್ಟಣದಲ್ಲಿ 61ಬೋರೆವೆಲ್ಗಳಿದ್ದು 32 ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರಲ್ಲದೆ, ಹೊಸ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಮನೆ ಕಟ್ಟಲು ಅಗತ್ಯವಿರವ  ಲೈಸೆನ್ಸ್ ಸಮಸ್ಯೆಯನ್ನು ಮೇಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಹಾಗೂ ಪ್ರತಿ ವಾಡರ್್ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಅರಿತು ಬಗೆಹರಿಸುತ್ತೇನೆ ಎಂದರು. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಏನೇ ಸಮಸ್ಯೆ ಇದ್ದರೂ ಅಧಿಕಾರಿ ಹಾಗೂ ಸದಸ್ಯರ ಮುಖಾಂತರ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರು ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ರೂಪ, ನೇತ್ರಾವತಿ, ಧರಣಿ.ಬಿ.ಲಕ್ಕಪ್ಪ, ಪ್ರೇಮದೇವರಾಜು, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ರಾಜಶೇಖರ್, ಪುರಸಭಾಮುಖ್ಯಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು.