Tuesday, July 12, 2016

ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸದವ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ
ಎಂಟು ನೂರು ವರ್ಷಗಳಿಂದ ನಡೆಯುತ್ತಿರುವ ಜಾತ್ರೆ, ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ.
ಜುಲೈ 16 ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ಚಿತ್ರಕಲಾ ಪ್ರದರ್ಶನ,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ. ಸಮೂಹ ಚಿತ್ರಕಲಾ ಪ್ರದರ್ಶನ.
17 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ನಗೆಹಬ್ಬ.

ಚಿಕ್ಕನಾಯಕನಹಳ್ಳಿ,ಜು.12 : ಎಂಟು ನೂರು ವರ್ಷಗಳ ಇತಿಹಾಸವಿರುವ ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಜುಲೈ 15 ರಿಂದ 17 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ, ಜಾತ್ರೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 
. ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಎಂಟು ನೂರು ವರ್ಷಗಳ ಇತಿಹಾಸವಿದೆ.
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 16ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿಬಿಎಸ್ ಅಭಿಮಾನಿ ಬಳಗ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. 
ವಿಜೇತರಿಗೆ ಒಟ್ಟು 1ಲಕ್ಷದ 70ಸಾವಿರ ರೂಪಾಯಿ ಬಹುಮಾನ ವಿತರಿಸಲಿದ್ದು, ಸ್ಪಧರ್ೆಯ ಸೀನಿಯರ್ ಗ್ರೂಪ್ ಪ್ರಥಮ ಸ್ಥಾನ 70ಸಾವಿರ ರೂಪಾಯಿ, ದ್ವಿತಿಯ 30ಸಾವಿರ, ತೃತೀಯ 15ಸಾವಿರ ಬಹುಮಾನ ನೀಡಲಿದ್ದು ಸ್ಪಧರ್ೆಯಲ್ಲಿ ಭಾಗವಹಿಸುವ ಗ್ರೂಪ್ಗಳಗೆ 1500ಸಾವಿರ ರೂ ಪ್ರವೇಶ ಶುಲ್ಕವಿದೆ.
ಜೂನಿಯರ್ಗ್ರೂಪ್ಗೆ ಭಾಗವಹಿಸುವವರಿಗೆ ಪ್ರಥಮ ಬಹುಮಾನ 20ಸಾವಿರ, ದ್ವಿತಿಯ ಬಹುಮಾನ 10ಸಾವಿರ, ತೃತಿಯ ಬಹುಮಾನ 5ಸಾವಿರ ರೂ ಇದ್ದು ಭಾಗವಹಿಸುವ ತಂಡಗಳಿಗೆ 500ರೂ ಪ್ರವೇಶ ಶುಲ್ಕವಿದೆ. 
ಸೀನಿಯರ್ ಸೋಲೋದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ, ತೃತಿಯ ಬಹುಮಾನ 2ಸಾವಿರವಿದೆ, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 200ರೂವಿದೆ.
ಜೂನಿಯರ್ ಸೋಲೋ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ,  ತೃತಿಯ 2ಸಾವಿರ ಹಾಗೂ ಪ್ರವೇಶ ಶುಲ್ಕ 200ರೂಗಳಾಗಿದೆ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಿದ್ದಾರೆ.
ಸಮೂಹ ಚಿತ್ರಕಲಾ ಪ್ರದರ್ಶನ : ಕುಂಚಾಂಕುರ ಕಲಾ ಸಂಘದ ವತಿಯಿಂದ 14ನೇ ವರ್ಷದ ಸಮೂಹ ಚಿತ್ರಕಲಾ ಪ್ರದರ್ಶನ ಜುಲೈ 16 ಮತ್ತು 17ರಂದು ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾಲ್ಲೂಕು ರಂಗಭೂಮಿ ಕಲಾವಿದರಾದ ಮಹೇಶ್ ಉದ್ಘಾಟಿಸುವರು. 
ತೇರಿನ ಕಳಸಕ್ಕೆ ಬಾಳೇಹಣ್ಣು ಎಸೆಯುವ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 23ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜುಲೈ 16ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗದಲ್ಲಿ ನಡೆಯಲಿದೆ.  ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸುವರು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು ಜುಲೈ 17ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್ ಉದ್ಘಾಟಿಸುವರು. ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ಉಪ ಪೋಲಿಸ್ ವರಿಷ್ಠಾಧಿಕಾರಿ ಸಿ.ಆರ್.ರವೀಶ್, ಬಿಬಿಎಂಪಿ ಉಪ ಆಯುಕ್ತ ಸಿ.ಟಿ.ಮುದ್ದುಕುಮಾರ್ ಉಪಸ್ಥಿತರಿರುವರು.   ಅದೇ ದಿನ ಸಂಜೆ 8ಕ್ಕೆ ನವದಂಪತಿಗಳ ಸ್ಪಧರ್ೆ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ದಿವ್ಯಜ್ಯೋತಿ ಹ್ಯವಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗೆಹಬ್ಬ : ಪಟ್ಟಣದ ಕನ್ನಡ ಸಂಘದ ವೇದಿಕೆ ಬಳಿ ಜುಲೈ 17ರ ಭಾನುವಾರ ಮಧ್ಯಾಹ್ನ 3.30ಕ್ಕೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆಹಬ್ಬ ಏರ್ಪಡಿಸಲಾಗಿದೆ.
ಕುಸ್ತಿ ಸ್ಪಧರ್ೆ: ಜುಲೈ 17ರ ಭಾನುವಾರ ಪಟ್ಟಣದ ಶ್ರೀ ಮಾರುತಿ ವ್ಯಾಯಾಮ ಶಾಲೆ ಮತ್ತು ಗರಡಿ ಕುಸ್ತಿ ಸಂಘದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪಧರ್ೆಯ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.  ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ.
ನಾಟಕ :  ರಾಮಾಂಜನೇಯಯುದ್ದ ನಾಟಕ, ಲವಕುಶ ನಾಟಕ, ಅನ್ನಸಂತರ್ಪಣೆ ನಡೆಯುವುದು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,ಜು.12 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸುಜ್ಞಾನ ಶಿಷ್ಯವೇತನ, ನಿರ್ಗತಿಕರಿಗೆ ಮಾಶಾಸನ, ಶುದ್ದಗಂಗಾ ಘಟಕ, ಸಿಎಹ್ಸಿಇ ಯಂತ್ರಗಳ ಧಾರೆ ಹಾಗೂ ಮತ್ತಿತರ ಹಲವು ಯೋಜನೆಗಳನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಹೇಳಿದರು.
ತಾಲ್ಲೂಕಿನ ಗೋಡೆಕೆರೆ ಶ್ರೀ ಬಸವಲಿಂಗಪ್ರಭು ಸಭಾಭವನದಲ್ಲಿ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿದ ಪ್ರಗತಿಸಾಲ ಮಾತ್ರವಲ್ಲದೆ ಹಲವಾರು ರೀತಿಯ ಸೌಲಭ್ಯ ನೀಡುತ್ತಿದೆ ಎಂದರು.
ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಹಾಗೂ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಯಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗೋಡೆಕೆರ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಶಿವಾನಂದಯ್ಯ, ಸಾಸಲು ಚಂದ್ರಶೇಖರ್, ಎ.ಎಲ್.ಚಂದ್ರಶೇಖರ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮೇಲ್ವಿಚಾರಕ ವಿಜಯ್ಕುಮಾರ್ ನಿರೂಪಿಸಿದರು. ಸಹಾಯಕ ನರಸಿಂಹಮೂತರ್ಿ ಸ್ವಾಗತಿಸಿದರು. ಪದ್ಮ ವಂದಿಸಿದರು.


ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ 

ಚಿಕ್ಕನಾಯಕನಹಳ್ಳಿ,ಜು.12 : ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ ಬಂದಿದೆ.
ತಾಲ್ಲೂಕು ಅಧ್ಯಕ್ಷರಾಗಿ ದಬ್ಬಗುಂಟೆ ಡಿ.ಆರ್.ರುದ್ರೇಶ್, ಗೌರವಾಧ್ಯಕ್ಷರಾಗಿ ಯಳ್ಳೇನಹಳ್ಳಿ ನಿರಂಜನಮೂತರ್ಿ, ಉಪಾಧ್ಯಕ್ಷರಾಗಿ ಗೋಡೆಕೆರೆ ವಸಂತ್ಕುಮಾರ್, ಕಾರ್ಯಧ್ಯಕ್ಷ ಕಾತ್ರಿಕೆಹಾಳ್ ಜಯಣ್ಣ, ಪ್ರಧಾನ ಕಾರ್ಯದಶರ್ಿ ಡಿ.ಕೆ.ರುದ್ರಯ್ಯ, ಜಂಟಿಕಾರ್ಯದಶರ್ಿಗಳಾಗಿ ತಿಮ್ಮನಹಳ್ಳಿಬಾಲಾಜಿ, ಬಾಚಿಹಳ್ಳಿಶಿವಕುಮಾರ್, ಸೋಮನಹಳ್ಳಿ ನರಸಿಂಹಮೂತರ್ಿ, ಹೊಯ್ಸಳಕಟ್ಟೆ ದೇವರಾಜು, ಹುಳಿಯಾರು ಮೂತರ್ಿ, ಆಶ್ರೀಹಾಳ್ ರಾಮಯ್ಯ, ಅರಳೀಕೆರೆ ಕರಿಯಪ್ಪ ಹಾಗೂ ಖಜಾಂಚಿಗಳಾಗಿ ಅಗಸರಹಳ್ಳಿ ನರಸಿಂಹಮೂತರ್ಿ ಆಯ್ಕೆಯಾಗಿದ್ದಾರೆ.