Sunday, December 9, 2012


ಮೇಲ್ಜಾತಿ ಕೆಳಜಾತಿಗಳ ಅಂತರ ಹೆಚ್ಚುತ್ತಿದೆ, ಇದು ತರವಲ್ಲ:  ಡಾ.ವೀರೇಶಾನಂದ ಸರಸ್ವತಿ

                              
ಚಿಕ್ಕನಾಯಕನಹಳ್ಳಿ,ಡಿ.09 :  ಜಾತಿಯ ಅಭಿಮಾನ ನಮ್ಮನ್ನು ಆಳುವ ಜನ ನಾಯಕರು ಸಹ ಕಟ್ಟಿ ಹಾಕುವತಂಹ ರೀತಿಯಲ್ಲಿ ಬೆಳೆದಿದೆ. ನಾವು ಯಾವಾಗಲು ನಿಂತ ನೀರಾಗಿರದೆ ಹರಿಯುವಂತಾಗಿ ಎಲ್ಲಾರನ್ನು ಸಮಾನ ಮನ ಸ್ಥಿತಿಯಲ್ಲಿ ನೊಡಿದರೆ ದಾಸ ಶ್ರéೇಷ್ಟರಿಗೆ ನಾವುಗಳು ಗೌರವ ಅಪರ್ಿಸಿದಂತಾಗುತ್ತದೆ ಎಂದು ಶ್ರೀ ರಾಮಕೃಷ್ಣ ಮಠದ ಡಾ|| ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನಕಜಯಂತಿ ಆಚರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,  ವ್ಯಾಸ ಕೂಟದ ಸಮೂಹಗಳು, ಮಠ ದೇವಾಲಯಗಳ ಮೂಲಕ ಸಂದೇಶ ಸಾರಿದರೆ ಇವೆಲ್ಲವನ್ನು ಮೀರಿ ದಾಸ ಕೂಟಗಳು ಜಾತ್ರೆ ರಥೋತ್ಸವ, ಹಬ್ಬ ಹರಿದಿನಗಳು ಎನ್ನದೇ ಮನೆ ಮನೆ ಬಾಗಿಲಿಗೆ ಮನು ಕುಲವನ್ನು ಜಾಗೃತಗೊಳಿಸುವಂತಹ ಕೆಲಸವನ್ನು ಮಾಡುವ ಮೂಲಕ ದೇವದೂತರಾದವರು. ಇವತ್ತಿನ ದಿನಗಳಲ್ಲಿ ಮೇಲ್ಜಾತಿ ಮತ್ತು ಕೆಳ ಜಾತಿಗಳಲ್ಲಿನ ಅಂತರ ಹೆಚ್ಚು ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅನುಕೂಲಸ್ಥ ವ್ಯಕ್ತಿಗಳು ಅನಾನುಕೂಲಸ್ಥನಿಗೆ ನೆರವು ನೀಡುವ ಮೂಲಕ ಸಮಾನ ಮನಸ್ಥಿತಿ ಹೋಂದಿರೆ ಮಾತ್ರ ನಾವು ಆಚರಣೆಗೆ ತರುವಂತಹ ಜಂಯಂತ್ಯೋತ್ಸವಗಳಿಗೆ ಅರ್ಥ ದೋರೆಯುತ್ತದೆ ಎಂದರು
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿಗಳಿಂದ ಯಾರನ್ನು ಸೀಮಿತಗೊಳಿಸಬಾರದು, ವ್ಯಕ್ತಿಯ ಆದರ್ಶ ಜೀವನದ ಮೂಲಕ ಅವರ ಮಾದರಿ ಅನುಸರಿಸಬೇಕು ಎಂದ ಅವರು ಸಮಾಜ ನಮಗೆ ಏನು ಮಾಡಿತು ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಯಾವ ರೀತಿಯಲ್ಲಿ ನೆರವಾಗಿದ್ದೇವೆ ಎಂಬುದೇ ಉತ್ತಮ ಅಲ್ಲದೆ ಇದರಿಂದ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬಹುದು ಎಂದರು. 
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡುತ್ತ ದೇಶದಲ್ಲಿ ಆರು ಸಾವಿರ ಜಾತಿಗಳಿವೆ. 12-15 ನೇ ಶತಮಾನಗಳಲ್ಲಿ ಬಸವಣ್ಣ, ದಾಸಶೇಷ್ಠರು, ವಿವೇಕಾನಂದರು ಶತಮಾನಗಳಿಂದಲು ಮೂಡನಂಬಿಕೆಗಳನ್ನು ದೂರ ಮಾಡಲು ಜಾಗೃತಗೊಳಿಸಿಕೊಂಡು ಬಂದಿದ್ದರು. ಮನುಷ್ಯ ಮನುಷ್ಯರನ್ನು ಸಮಾನ ದೃಷ್ಠಿಯಿಂದ ಕಾಣುವುದು ಇನ್ನು ದೂರ ಉಳಿದಿದೆ ಎಂದರು. 
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ದಾಸರು ತಮ್ಮ ಕೀರ್ತನೆಯ ಮೂಲಕ ಅನೇಕ  ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುತ್ತಾ ಜನರ ಮನದಲ್ಲಿ ನೆಲೆನಿಂತವರು, ಅವರ ಆಧ್ಯ್ಮಾತಿಕ ಚಿಂತನೆ ಎಲ್ಲರಲ್ಲೂ ಮೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ದೇವರಾಜು ಅಭಿವೃದ್ದಿ ನಿಗಮದ ವತಿಯಿಂದ 106ಜನಕ್ಕೆ ಮೂಲ ಕಸಬುಗಳ ಅಭಿವೃದ್ದಿಗಾಗಿ 106 ಫಲಾನುಭವಿಗಳಿಗೆ 22 ಲಕ್ಷರೂಗಳ ಚೆಕ್ ವಿತರಿಸಲಾಯಿತು.
ಸಮಾರಂಬದಲ್ಲಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಮಂಜುಳ, ಜಾನಮ್ಮರಾಮಚಂದ್ರಯ್ಯ, ತಾ.ಪಂ. ಸದಸ್ಯೆ ಲತಾ ಕೇಶವಮೂತರ್ಿ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ರುಕ್ಮಿಣಮ್ಮ, ಸಿ.ಟಿ.ವರದರಾಜು, ಸಿ.ಎಂ.ರಂಗಸ್ವಾಮಯ್ಯ  ಚೇತನಗಂಗಾಧರ್, ಶಾರದಾಶಂಕರ್ ಬಾಬು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ,  ಸೇರಿದಂತೆ ಹಲವರಿದ್ದರು.
ಪ್ರಾರ್ಥನೆ ಅಂಬಿಕ ಸ್ವಾಗತ ಕಣ್ಣಯ್ಯ ನಿರೂಪಣೆ ಬಸವರಾಜು, ಸುರೇಶ್ ವಂದಿಸಿದರು.

ಪುರಸಭಾ ಸದಸ್ಯ ಮೈನ್ಸ್ ರವಿ ನಿಧನ
ಚಿಕ್ಕನಾಯಕನಹಳ್ಳಿ,ಡಿ.09 : ಪುರಸಭಾ ಸದಸ್ಯ ಮೈನ್ಸ್ ರವಿ(35) ಭಾನುವಾರ ಬೆಳಗ್ಗೆ ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಿಧನರಾದರು.
ರವಿ ಪುರಸಭಾ ಉಪಾಧ್ಯಕ್ಷರಾಗಿ, ಟೌನ್ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು 6ತಿಂಗಳಿನಿಂದ ಕಾಮಾಲೆ ರೋಗದಿಂದ ನರಳುತ್ತಿದ್ದರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು  ಅವರ ದಿಬ್ಬದಹಳ್ಳಿಯ ತೋಟದಲ್ಲಿ ನಡೆಯಿತು. 
ಅಂತಿಮ ದರ್ಶನ : ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರಾಜಣ್ಣ, ಸಿ.ಡಿ.ಚಂದ್ರಶೇಖರ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಕಾಂಗ್ರೆಸ್ ಮುಖಂಡರಾದ ಕ್ಯಾಪ್ಟನ್ ಸೋಮಶೇಖರ್, ಸೀಮೆಎಣ್ಣೆಕೃಷ್ಣಯ್ಯ,  ಕೆ.ಜಿ.ಕೃಷ್ಣೇಗೌಡ, ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.