Thursday, May 30, 2013


ಚರಂಡಿಯ ಸೇತುವೆಯಲ್ಲಿ ಗುಂಡಿ : ಸಾರ್ವಜನಿಕರಿಗೆ
ತೊಂದರೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ದೇಶೀಯ ವಿದ್ಯಾಪೀಠ ಶಾಲೆಯ ಬಳಿ ಇರುವ ಚರಂಡಿಯ ಸೇತುವೆಗೆ ಗುಂಡಿ ಬಿದ್ದಿದ್ದು, ಶಾಲೆಗೆ ಹೋಗುವ ಮಕ್ಕಳಿಗೆ ಇದರಿಂದ ತೀವ್ರ ತೊಂದರೆಯಾಗಿದೆ.
ನಿತ್ಯ ನೂರಾರು ಮಕ್ಕಳು ಶಾಲೆಗೆ ಸೈಕಲ್ ಮೇಲೆ ಹಾಗೂ ನಡೆದುಕೊಂಡು ಈ ದಾರಿಯಲ್ಲಿ ಹೋಗುತ್ತಾರೆ ಅಲ್ಲದೆ ಡಿವಿಪಿ ಶಾಲಾ ಮೈದಾನಕ್ಕೆ ಬೆಳಗಿನ ಜಾವ ಹಾಗೂ ಸಂಜೆ ನಿವೃತ್ತ ನೌಕರರು, ವಯೋವೃದ್ದರು ಸೇರಿದಂತೆ ನೂರಾರು ಜನ ವಾಯು ವಿಹಾರಕ್ಕೆ ತೆರಳುತ್ತಾರೆ, ಆಕಸ್ಮಿಕವಾಗಿ ಗುಂಡಿಗೆ ಬಿದ್ದರೆ ಶಾಲಾ ಮಕ್ಕಳು ಹಾಗೂ ವೃದ್ದರ ಕೈ ಕಾಲು ಮುರಿಯುವ ಭೀತಿಯಿರುವುದರಿಂದ ಕೂಡಲೇ ಅಧಿಕಾರಿಗಳು ಸೇತುವೆಯನ್ನು ರಿಪೇರಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿದ್ಯುತ್ ಕಂಬದಲ್ಲಿ ಬಿರುಕು 

ಚಿಕ್ಕನಾಯಕನಹಳ್ಳಿ : ಪಟ್ಟಣದ ದಶಾವತಾರ ದೇವಾಲಯದ ಮುಂಭಾಗದ ರಸ್ತೆಯಲ್ಲಿರುವ ಅತ್ಯಂತ ಹಳೆಯದಾದ ಸಿಮೆಂಟಿನ ವಿದ್ಯುತ್ ಕಂಬ ಬಿರುಕುಬಿಟ್ಟಿದೆ.
 ಕಂಬದ ತಳಭಾಗ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲವಾದ್ದರಿಂದ ಮಳೆ ಬಿರುಗಾಳಿಗೆ ಕಂಬ ಮುರಿದು ಬೀಳುವ ಸಂಭವವಿದ್ದು ಈ ಭಾಗದಲ್ಲಿ ನಿತ್ಯ ನೂರಾರು ಜನರು ತಮ್ಮ ಮನೆಗಳಿಗೆ ಹೋಗುವಾಗ ಹಾಗೂ ಸುತ್ತಮುತ್ತಲು ವಾಸದ ಮನೆಗಳಿರುವುದರಿಂದ ಆಕಸ್ಮಿಕವಾಗಿ ವಿದ್ಯುತ್ ಕಂಬ ಮುರಿದು ಬಿದ್ದರೆ ಪ್ರಾಣ ಹಾನಿ ಸಂಭವಿಸುವ ಮುನ್ನ ವಿದ್ಯುತ್ ಕಂಬವನ್ನು ತೆಗೆದು ಹೊಸ ವಿದ್ಯುತ್ ಕಂಬವನ್ನು ನೆಡುವಂತೆ ಕೆಪಿಟಿಎಸ್ಎಲ್ ಅಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಿಪ್ಪೆಗುಂಡಿಯಾಗಿ ಮಾರ್ಪಟ್ಟ ಮತಿಘಟ್ಟ ಗ್ರಾಮ

ಚಿಕ್ಕನಾಯಕನಹಳ್ಳಿ,ಮೇ.30: ಸುಮಾರು 650 ಮನೆಗಳನ್ನು ಹೊಂದಿರುವ ಮತಿಘಟ್ಟ ಗ್ರಾಮದ ಊರಿನ ಒಳಭಾಗದಲ್ಲಿ ಹೆಚ್ಚಿನ ತಿಪ್ಪೆಗುಂಡಿಗಳ ಸೃಷ್ಠಿಯಿಂದ ಸೊಳ್ಳೆಗಳ ವಾಸಸ್ಥಾನವಾಗಿ ಡೆಂಗ್ಯೂ, ಮಲೇರಿಯದಂತಹ ರೋಗಗಳನ್ನು ತರಲಿವೆ ಎಂದು ಮತಿಘಟ್ಟ ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಮತಿಘಟ್ಟ ಗ್ರಾಮ ಸುಮಾರು 650 ಮನೆಗಳನ್ನು ಹೊಂದಿದೆ, ಈಗಾಗಲೇ ಹಂದನಕೆರೆ ಹೋಬಳಿಯ ಸುತ್ತಮುತ್ತಲಿನಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ, ಮತಿಘಟ್ಟ ಗ್ರಾಮದಲ್ಲಿರುವ ತಿಪ್ಪೆಗುಂಡಿಗಳಿಂದಾಗಿ ಈ ಭಾಗದಲ್ಲಿ ಸೊಳ್ಳೆಗಳ ತಾಣ ಹೆಚ್ಚಾಗಿವೆ. ತಿಪ್ಪೆಗಳ ವಾಸನೆಯಿಂದ ಜನತೆ ವಾಸಿಸಲೂ ಆಗದಂತಾಗಿದೆ ಎಂದು ದೂರಿರುವ ಮತಿಘಟ್ಟ ಗ್ರಾಮಸ್ಥರು ಇದರಿಂದ ಈ ಭಾಗದಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಮಲೇರಿಯ ಡೆಂಗ್ಯೂನಂತಹ ಕಾಯಿಲೆಗೆ ತುತ್ತಾಗುವ ಮುನ್ನ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿ ಗ್ರಾಮದ ನೈರ್ಮಲ್ಯವನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ. 

ಕುಪ್ಪೂರು ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಆಗ್ರಹ

ಚಿಕ್ಕನಾಯಕನಹಳ್ಳಿ,ಮೇ.30 : ತಾಲ್ಲೂಕಿನ ಕುಪ್ಪೂರು ಸುತ್ತಮುತ್ತಲಿನಿಂದ ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರಿಗೆ ಸಂಚರಿಸುವ ವಿದ್ಯಾಥರ್ಿಗಳು, ಉದ್ಯೋಗಿಗಳು ಸಾರ್ವಜನಿಕರು ಪ್ರತಿದಿನವೂ ಕೆಎಸ್ಆರ್ಟಿಸಿ ಇಲಾಖೆಗೆ ಬೈಗುಳದ ಮಳೆಯನ್ನೇ ಹರಿಸುತ್ತಿದ್ದು ಈ ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಒತ್ತಾಯಿಸಿದ್ದಾರೆ.
  ತಾಲ್ಲೂಕಿನಿಂದ ಕುಪ್ಪೂರು ಮತ್ತು ಈ ಭಾಗದ ಸುತ್ತಮುತ್ತಲಿನ ಗ್ರಾಮಕ್ಕೆ ತೆರಳಲು ಹಾಗೂ ಗ್ರಾಮದಿಂದ ಪಟ್ಟಣಕ್ಕೆ ಬರಲು ಅಲ್ಲಿನ ಗ್ರಾಮಸ್ಥರು ಪ್ರತಿದಿನ ಆಟೋರಿಕ್ಷಕ್ಕಾಗಿ ಮತ್ತು  ಆಗೊಮ್ಮೆ, ಈಗೊಮ್ಮೆ ಇರುವ ಖಾಸಗಿ ಬಸ್ಗಳಿಗೆ ಪರದಾಡುವಂತಾಗಿದೆ.
 ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರಿಗೆ ಹೋಗುವ ಭಾಗದಲ್ಲಿ ಸುಮಾರು 16ಗ್ರಾಮಗಳಿದ್ದು ಈ ಭಾಗದ ಜನರು ಪ್ರತಿದಿನ ಸಂಚರಿಸಲು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ ಈ ಭಾಗದಲ್ಲಿ ಬರುವ ಖಾಸಗಿ ಬಸ್ಗಳ ಸಂಖ್ಯೆ ಕಡಿಮೆಯಿದ್ದು,  ಕೆಎಸ್ಆರ್ಟಿಸಿ ಬಸ್ ಬಿಡಲು ಒತ್ತಯಿಸಿದ್ದಾರೆ.
ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಹಲವು ಬಾರಿ ತಿಪಟೂರು ಕೆಎಸ್ಆರ್ಟಿಸ ಡಿಪೋ, ಮೇನೇಜರ್ ರವರಿಗೆ ಸಮಸ್ಯೆ ನಿವಾರಿಸುವಂತೆ ಅಜರ್ಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ದೂರುತ್ತಾರೆ.  ಇಲ್ಲಿಯವರೆಗೆ ಬಂದಂತಹ ಯಾವ ಶಾಸಕರು ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನ ಪಡಲೇ ಇಲ್ಲ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ.