Thursday, November 10, 2011ನೇಕಾರರಿಗೆ ವಿವಿಧ ರೀತಿಯ ಯೋಜನೆಗಳು 
ಚಿಕ್ಕನಾಯಕನಹಳ್ಳಿ,ನ.10 : ಸುವರ್ಣ ವಸ್ತ್ರನೀತಿ ಯೋಜನೆಯಡಿ ಕೈಮಗ್ಗದಲ್ಲಿ ಕೆಲಸ ನಿರ್ವಹಿಸುವವರಿಗೆ ಆಥರ್ಿಕವಾಗಿ ಸಹಾಯ ಮಾಡಲು ಸುಮಾರು 2 ಲಕ್ಷರೂಗಳು ಸಾಲ ನೀಡಲಿದ್ದು ಅದರಲ್ಲಿ 1 ಲಕ್ಷರೂ ಸಬ್ಸಿಡಿಯಾಗಿ ಹಾಗೂ 1ಲಕ್ಷ ಸಾಲದ ರೂಪದಲ್ಲಿ ನೀಡವುದಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ತೀಮರ್ಾನಿಸಲಾಗಿದೆ ಎಂದು ಜವಳಿ ಸಚಿವ ವತರ್ೂರ್ ಪ್ರಕಾಶ್ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ನಡೆದ ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ, ಸಮುದಾಯ ಭವನದ ಭೂಮಿಪೂಜೆ ಹಾಗೂ ಉಲ್ಕಾಡರ್ಿಂಗ್ ಕಟ್ಟಡ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಮುಖವಾಗಿ ಜವಳಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರಿಕೆಯು ಜವಳಿ ಕ್ಷೇತ್ರದಲ್ಲಿ ಉತ್ತಮ ಚಟುವಟಿಕೆಯೊಂದಿದೆ ಆದರೆ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವರ ಆಥರ್ಿಕವಾಗಿ  ಹಿಂದುಳಿದಿದ್ದಾರೆ, ಅವರಿಗೆ ನೆರವಾಗಲು ಇಲಾಖೆ ಶ್ರಮಿಸುತ್ತದೆ. ತುಮಕೂರು ಜಿಲ್ಲೆಯಲ್ಲಿ ಪ್ರಮುಖವಾಗಿ ಉಣ್ಣೆ ಕೈಮಗ್ಗ ನೇಕಾರಕೆಯ ಸಾಂಪ್ರದಾಯಿಕ ಕಸುಬಾಗಿ ನಡೆಯುತ್ತಿದ್ದು ಇವರಿಗೆ ನಿರಂತರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ನಿಗಮ ಕೇಂದ್ರಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿವೆ. ವಿದ್ಯುತ್ ಮಗ್ಗ ನೇಕಾರರಿಗಾಗಿ ಕೇಂದ್ರ ಸಕರ್ಾರದಿಂದ ತಾಂತ್ರಿಕತೆ ಉನ್ನತೀಕರಣ ಯೋಜನೆ ಜಾರಿಯಲ್ಲಿದ್ದು, ಜಾಗತಿಕ ಮಾರುಕಟ್ಟೆಗೆ ಹೊಂದುವಂತಹ ಉತ್ಪನ್ನಗಳ ತಯಾರಿಕೆಗೆ ಅವಶ್ಯವಿರುವ ಆಧುನಿಕ ಮಗ್ಗಗಳನ್ನು ಅಳವಡಿಸಿಕೊಳ್ಳುವ ನೇಕಾರರಿಗೆ ಆಥರ್ಿಕ ಸೌಲಭ್ಯವನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ. ಯುವಕ ಯುವತಿಯರಿಗಾಗಿ ಇಲಾಖೆ ವತಿಯಿಂದ ಜವಳಿ ವಲಯದ ಸಿದ್ದ ಉಡುಪು ತಯಾರಿಕೆಗಾಗಿ ವಿವಿಧ ಕೋಸರ್್ಗಳಲ್ಲಿ ತರಬೇತಿಯನ್ನು ನೀಡಲು ತಾಲ್ಲೂಕು ಮಟ್ಟದಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೆಚ್ಚಿನ ಸ್ಥಾನ ನೀಡುವುದಾಗಿ ತಿಳಿಸಿದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ನೇಕಾರರು ಆಥರ್ಿಕವಾಗಿ ಹಿಂದುಳಿದಿದ್ದಾರೆ ಅವರ ಉತ್ಪನ್ನಕ್ಕೆ  ಸಚಿವರು ಉತ್ತಮ ಬೆಲೆ ನೀಡಿ ಅವರ ಸಂಕಷ್ಟವನ್ನು ತೀರಿಸಬೇಕು ಎಂದ ಅವರು ತಾಲ್ಲೂಕಿನ ಬಗ್ಗೆ ಹೆಚ್ಚು ಒತ್ತು ನೀಡಬೇಕೆಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸ್ವಾಗತಿಸಿದರು.

ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ನ.10 : ಕಲಿ, ಸಂತ, ಕೀರ್ತನಕಾರ, ಸಮಾಜಸೇವಕ, ಕವಿಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 14ರ ಸೋಮವಾರ  ಮಧ್ಯಾಹ್ನ 12ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಆಡಳಿತ, ಕನಕ ಯುವಕ ಸಂಘದವರ ಸಂಯುಕ್ತಾಶ್ರಯದಲ್ಲಿ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅದ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸಿದ್ದಗಂಗಾ  ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಡಿ.ಎನ್.ಯೋಗಿಶ್ ವಿಶೇಸ ಉಪನ್ಯಾಸ ನೀಡಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
 ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಸಿ.ಎಲ್.ಪ್ರಹ್ಲಾದ್(ವೈದ್ಯಕೀಯ ಸೇವೆ)  ಶಿವಶಂಕರ್(ಶೈಕ್ಷಣಿಕ ಸೇವೆ),  ಎಸ್.ಚಂದ್ರಶೇಖರ್(ಸಾವಯುವ ಕೃಷಿ), ಶಾರದಮ್ಮ(ಸಾಮಾಜಿಕ ಸೇವೆ), ಅಬ್ದುಲ್ ಹಮೀದ್(ಸಾಹಿತ್ಯ) ಸಾಧಕರಿಗೆ ಸನ್ಮಾನಿಸಲಾಗುವುದು.