Monday, March 28, 2016

ಜ್ಯೋತಿ ಸಂಜೀವಿನಿ ಕಾರ್ಯಕ್ರಮವನ್ನು ನೌಕರರು ಉಪಯೋಗಿಸಿಕೊಳ್ಳುವಂತೆ ಸಲಹೆ
ಚಿಕ್ಕನಾಯಕನಹಳ್ಳಿ,ಮಾ.27 : ಜ್ಯೋತಿ ಸಂಜೀವಿನಿ ಕಾರ್ಯಕ್ರಮವನ್ನು ನೌಕರರಿಗಾಗಿ ಸಕರ್ಾರ ಜಾರಿಗೆ ತಂದಿದ್ದು ಇದರ ಉಪಯೋಗವನ್ನು ಎಲ್ಲಾ ನೌಕರರು ಪಡೆದುಕೊಳ್ಳಬೇಕು ಎಂದು ತಾ.ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ನಡೆದ ಸಕರ್ಾರಿ ನೌಕರರ ನಾಗರೀಕ ಸೇವಾ ನಿಯಮಗಳು, ಜ್ಯೋತಿ ಸಂಜೀವಿನಿ ಯೋಜನೆಯ ರೂಪುರೇಷೆಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲಸದಲ್ಲೇ ತಲ್ಲೀನರಾಗಿರುವಂತಹ ನೌಕರರಿಗೆ ಅವರಿಗಾಗಿಯೇ ಇರುವಂತಹ ಯೋಜನೆಗಳು ಯಾವುವೆಂದು ಅವರಿಗೆ ತಿಳಿಯದಾಗಿದೆ,  ಅದಕ್ಕಾಗಿಯೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು, ನೌಕರರು ಸಕರ್ಾರ ಜಾರಿಗೆ ತರುವಂತರಹ ಯೋಜನೆಗಳ ಸವಲತ್ತುಗಳ ವಂಚಿತರಾಗುತ್ತಿದ್ದಾರೆ,  ಇದಕ್ಕಾಗಿ ನೌಕರರ ಸಂಘ ಯೋಜನೆ ರೂಪಿಸಿ ಅವರಿಗೆ ದೊರಕಬೇಕಾದಂತಹ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಿದ್ದೇವೆ,  ಅದಕ್ಕಾಗಿ ನೌಕರರ ಸಂಘ ಬಲಿಷ್ಠವಾಗಬೇಕು ಎಂದ ಅವರು ನೌಕರರ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಯಲ್ಲಿ ಹಾಗೂ ಪಾಂಪ್ಲೆಟ್ ಮಾಡಿ ಪ್ರಚಾರ ಮಾಡಿದ್ದರೂ ಸಹ ತಾಲ್ಲೂಕಿನಲ್ಲಿ ಇರುವ 2800ನೌಕರರಿಗೆ ಕೆಲವೇ ಕೆಲವು ನೌಕರರು ಆಗಮಿಸಿರುವುದು ವಿಷಾದದ ಸಂಗತಿ, ನೌಕರರ ಸಂಘ ಬಲಿಷ್ಠವಾದಾಗಲೇ ಕಾರ್ಯಕ್ರಮಗಳು, ಯೋಜನೆಗಳು ಯಶಸ್ವಿಯಾಗುವುದು ಎಂದರು.
ನೌಕರರ ಸಂಘದ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನೌಕರರಿಗೆ ತರಬೇತಿ ಕಾಯರ್ಾಗಾರಗಳು ಬಹಳ ಮುಖ್ಯವಾಗಿದೆ, ಕೆಲಸದ ಒತ್ತಡದಲ್ಲಿ ಯಾವ ಯೋಜನೆಗಳು ಜಾರಿಗೆ ಬಂದಿವೆ ಎನ್ನುವುದೇ ತಿಳಿಯದಂತಾಗಿದ್ದು ಇಂತಹ ಕಾರ್ಯಕ್ರಮಗಳು ಹಮ್ಮಿಕೊಂಡು ನೌಕರರಿಗೆ ಮಾಹಿತಿ ನೀಡುವುದು ಉತ್ತಮ ಕೆಲಸ ಎಂದರಲ್ಲದೆ,  ನೌಕರರಲ್ಲಿಯೇ ಇರುವ ವೇತನ ತಾರತಮ್ಯದ ಬದಲಾಯಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು.
ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಆರ್.ಸುಂದರ್ರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಥರ್ಿಕ ಸೇವಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. .
ಕಾರ್ಯಕ್ರಮದಲ್ಲಿ ಗ್ರೇಡ್-2-ತಹಶೀಲ್ದಾರ್ ಚಂದ್ರಕುಮಾರ್, ಇಸಿಓ ಶಾಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಜಿ.ಶಂಕರ್, ಹೆಚ್.ಎಂ.ಸುರೇಶ್, ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಕೆ.ಈರಯ್ಯ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕಾರ ಬೆಳೆಸಿಕೊಳ್ಳಲು ಶಿವಾಚಾರ್ಯಸ್ವಾಮೀಜಿ ಸಲಹೆ 
ಚಿಕ್ಕನಾಯಕನಹಳ್ಳಿ,ಮಾ.27 : ರಂಭಾಪುರಿ ಮಠದಲ್ಲಿ 36 ಅಡಿಯ ರೇಣುಕಾಚಾರ್ಯ ಭಗವತ್ಪಾದರ ಶಿಲಾಮೂತರ್ಿ ಸ್ಥಾಪಿಸುವ ಹಾಗೂ ಆಯುವರ್ೇದಿಕ್ ಆಸ್ಪತ್ರೆಯನ್ನು ತೆರೆಯುವ ಸಂಕಲ್ಪವನ್ನು ಹೊಂದಿದ್ದೇವೆ ಎಂದು ಬಾಳೆಹೊನ್ನೂರು 1008 ಜಗದ್ಗುರು ಪ್ರಸನ್ನ ರೇಣುಕವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಮಾದಿಹಳ್ಳಿ ಹಿರೇಮಠದಲ್ಲಿ ನೂತನ ಗುರುನಿವಾಸ ಪ್ರಾರಂಭೋತ್ಸವ ಹಾಗೂ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜನರು ವೈಚಾರಿಕತೆ ನೆಪದಲ್ಲಿ ಸಂಸ್ಕೃತಿ, ಸಂಸ್ಕಾರ ಮರೆಯುತ್ತಿದ್ದಾರೆ, ಉತ್ತಮ ಸಮಾಜಕ್ಕಾಗಿ ಹಾಗೂ ಸಮಾಜದ ಏಳಿಗೆಗಾಗಿ ಸಂಸ್ಕಾರ ಅಗತ್ಯ ಅದಕ್ಕಾಗಿ ವೀರಶೈವ ಧರ್ಮ ಧಾಮರ್ಿಕ ಸಮಾರಂಭಗಳನ್ನು ಏರ್ಪಡಿಸುತ್ತಿದೆ, ಇಂತಹ ವೀರಶೈವ ಧರ್ಮದಲ್ಲಿ 12ನೇ ಶತಮಾನದಿಂದಲೂ ಧರ್ಮಜಾಗೃತಿಗಾಗಿ ಬಸವಣ್ಣ, ಶಿವಶರಣರು ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ ಎಂದ ಅವರು ವೀರಶೈವ ಧರ್ಮದಲ್ಲಿ ರೇಣುಕಾಚಾರ್ಯರು ಗಂಡು-ಹೆಣ್ಣು, ಮೇಲು-ಕೀಳು ಎಂಬ ಭೇದವಿಲ್ಲದೆ ಧರ್ಮದ ಪರಿಪಾಲನೆ ಮಾಡಿಕೊಂಡು ಬರುತ್ತಿದ್ದಾರೆ, ರೇಣುಕಾಚಾರ್ಯರು ಅಹಿಂಸೆ, ಧರ್ಮ, ಜ್ಞಾನ, ಸತ್ಯ ಈ ರೀತಿಯ ದಶಧರ್ಮಸೂತ್ರಗಳನ್ನು ಅಳವಡಿಸಿದ್ದಾರೆ ಇದನ್ನು ಮಹಾತ್ಮ ಗಾಂಧೀಜಿಯವರು ಅಳವಡಿಸಿಕೊಂಡು ದೇಶದ ಶಾಂತಿಗೆ ಶ್ರಮಿಸಿದ್ದಾರೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಮಾದಿಹಳ್ಳಿ ಮಠ ಚಿಕ್ಕದಾದರೂ ಮನಸ್ಸು ದೊಡ್ಡದಾಗಿದೆ,  ಅದಕ್ಕಾಗಿಯೇ ನಮ್ಮಗಳ ಮನಸ್ಸು ಈ ಮಠಗಳ ಬೆಳವಣಿಗೆಗೆ ಸದಾ ಮುಂದಾಗಿರುತ್ತದೆ, ಒಳ್ಳೆಯ ಗುಣವಿರುವವರನ್ನು ಗೌರವಿಸುವುದು ನಮ್ಮಗಳ ಕರ್ತವ್ಯ, ರಂಭಾಪುರಿ ಶ್ರೀಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ, ಅವರ ಸರಳತೆ ನಮ್ಮೆಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದ ಅವರು ತಾಲ್ಲೂಕಿನಲ್ಲಿ ಕುಪ್ಪೂರು ಮಠ, ಯಳನಡು ಮಠ, ಗೋಡೆಕೆರೆಯಲ್ಲಿ ಎರಡು ಮಠ, ತಮ್ಮಡಿಹಳ್ಳಿ ಮಠ, ಮಾದಿಹಳ್ಳಿ ಮಠ ಸೇರಿ ಒಟ್ಟು 6 ಮಠಗಳಿವೆ ಈ ಮಠಗಳ ಗುರುಗಳು, ಸ್ವಾಮೀಜಿಗಳವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ ಹಾಗೂ ಕ್ಷೇತ್ರದ ಜನತೆಯ ಮೇಲೆ ಆಶೀವರ್ಾದವೂ ಇದೆ ಎಂದರಲ್ಲದೆ ಪಟ್ಟಣದಲ್ಲಿ ರೇಣುಕಜಯಂತಿ ಮಾಡುವ ಆಲೋಚನೆ ಇದೆ ಇದಕ್ಕೆ ಗುರುಗಳು ಅವಕಾಶ ನೀಡಿದರೆ ಎಲ್ಲಾ ಸಮಾಜದವರ ಒಡಗೂಡಿ ರೇಣುಕಜಯಂತಿಯನ್ನು ಮಾಡೋಣ ಎಂದು ಸಲಹೆ ನೀಡಿದರು.
ಮಾದಿಹಳ್ಳಿಯ ಹಿರೇಮಠದ ಪೀಠಾಧ್ಯಕ್ಷ ಚನ್ನಮಲ್ಲಿಕಾಜರ್ುನಶಿವಾಚಾರ್ಯಸ್ವಾಮೀಜಿ ಮಾತನಾಡಿ, 22ವರ್ಷಗಳ ಹಿಂದೆ ಮಾದಿಹಳ್ಳಿ ಮಠ ಅಭಿವೃದ್ದಿಯಿಂದ ದೂರ ಉಳಿದಿತ್ತು,  ಇತ್ತೀಚೆಗೆ ಭಕ್ತರು ಹೆಚ್ಚಿದ ಹಾಗೂ ಶಾಸಕರ ಬೆಂಬಲದಿಂದ ಮಠವು ಅಭಿವೃದ್ದಿಯತ್ತ ಸಾಗುತ್ತಿದೆ, ಮಠದ ಬೆಳವಣಿಗೆಗೆ ಭಕ್ತರ ಮಾರ್ಗದರ್ಶನವೂ ಅಗತ್ಯ ಎಂದ ಅವರು,  ನಾವು ಮಠಕ್ಕೆ ಪಟ್ಟಾಧಿಕಾರ ಹೊಂದಿ 22ವರ್ಷಗಳಾಗಿದೆ, ನಂತರದ 3ವರ್ಷಗಳಲ್ಲಿ 25ನೇ ವರ್ಷದ ಪಟ್ಟಾಧಿಕಾರ ನಡೆಯಲಿದ್ದು ಆ ಸಮಯದಲ್ಲಿ ಶ್ರೀಮಠದಲ್ಲಿ ಕಟ್ಟಲಾಗುತ್ತಿರುವ ಯಾತ್ರಾನಿವಾಸ ಪೂರ್ಣಗೊಳ್ಳಲಿದೆ ಅದನ್ನು ಶಾಸಕರ ಹಾಗೂ ಬಾಳೆಹೊನ್ನೂರು ಮಠದ ಪ್ರಸನ್ನರೇಣುಕಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಉದ್ಘಾಟನೆ ನೆರವೇರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ ಸೇವಕ ಕೆ.ವಿ.ನಿವರ್ಾಣಸ್ವಾಮಿ ಮಾತನಾಡಿ, ಗುರುಗಳ ಆಶೀವರ್ಾದವೇ ಭಕ್ತರ ಅಭಿವೃದ್ದಿ, ದಾನ ಕೊಡುವುದು ಎಷ್ಟು ಮುಖ್ಯವೋ ಕೊಟ್ಟಂತಹ ದಾನಗಳನ್ನು ಸಮಾಜದ ಅಭಿವೃದ್ದಿಗೆ ಸದ್ವಿನಿಯೋಗ ಪಡಿಸಿಕೊಳ್ಳುವುದು ಉತ್ತಮ, ಗುರುಗಳ ಮೇಲೆ ನಂಬಿಕೆ ಇಟ್ಟಂತಹವರು ಅಭಿವೃದ್ದಿ ಪಥದತ್ತ ಸಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಿವಾನಂದಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶಶಿವಾಚಾರ್ಯಸ್ವಾಮೀಜಿ, ಸಿದ್ದರಬೆಟ್ಟ, ಬೆಳ್ಳಾವಿಮಠ, ಹುಲ್ಲಿಕೆರೆ ಮಠದ ಪೀಠಾಧ್ಯಕ್ಷರುಗಳು  ಸೇರಿದಂತೆ ಹರಗುರುಚರಮೂತರ್ಿಗಳು ಹಾಗೂ ತಾ.ಪಂ.ಸದಸ್ಯರುಗಳಾದ ಜಯಮ್ಮ, ಸಚ್ಚಿನ್, ಆಲದಕಟ್ಟೆತಿಮ್ಮಣ್ಣ ಸೇರಿದಂತೆ  ಇಂದ್ರಮ್ಮ, ಗಂಗಾಧರಯ್ಯ, ರುದ್ರಸ್ವಾಮಿ ಮತ್ತಿತರರು  ಉಪಸ್ಥಿತರಿದ್ದರು.