Saturday, November 26, 2011ತಾಲ್ಲೂಕಿನ ಸಾಹಿತಿಗಳ ನೇತೃತ್ವದಲ್ಲಿ ಬಾಳಠಾಕ್ರೆರ ಅವಹೇಳನಕಾರಿ ಹೇಳಿಕೆಯ ವಿರುದ್ದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.26 : ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರಕಂಬಾರರ ವಿರುದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ಬಾಳಠಾಕ್ರೆ ನೀಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ದ ಹಾಗೂ ಬೆಳಗಾವಿ ಮಹಾನಗರಪಾಲಿಕೆಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಕನ್ನಡಭಿಮಾನಿಗಳಿಂದ ಸೋಮವಾರ 28ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯು ಕನ್ನಡ ಸಂಘ ವೇದಿಕೆಯಿಂದ ಮದ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಆರ್.ಬಸವರಾಜು, ಕನರ್ಾಟಕ ರಕ್ಷಣಾ ವೇದಿಕೆ, ಕನ್ನಡ ಸಂಘ, ವಿದ್ಯಾಥರ್ಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನವಂಬರ್ ಒಂದರಂದು ಕನ್ನಡ ನಾಡಿನ ಆರುಕೋಟಿ ಕನ್ನಡಿಗರು ಅತ್ಯಂತ ವೈಭವಯುತವಾಗಿ ಕನರ್ಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದರೆ ನಮ್ಮ ನಾಡಿನ ಭಾಗವೇ ಆದ ಬೆಳಗಾವಿ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ರವರು ಕರಾಳದಿನವನ್ನು ಆಚರಿಸಿ ಕನ್ನಡಾಂಬೆಗೆ ದ್ರೋಹವೆಸಗಿದ್ದು ಇವುಗಳನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಗಣನೀಯವಾದುದು 
ಚಿಕ್ಕನಾಯಕನಹಳ್ಳಿ,ನ.26 : .ಹಿಂದಿನ ಕಾಲದಿಂದಲೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಗೌರವಿಸಲಾಗುತ್ತಿದೆ. ಮಹಿಳೆಯರು, ಮಾತೆಯರು ಜನನಿಯಿದ್ದಂತೆ, ಕುಟುಂಬದ ನಿರ್ವಹಣೆಯಲ್ಲಿ ಅವರ ಪಾತ್ರ  ಗಣನೀಯವಾದುದು ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ಹೇಳಿದರು.
ಪಟ್ಟಣದ ಸಮಗ್ರ ಶಿಶು ಅಭಿವೃದ್ದಿ ಯೋಜನಾ ಕಛೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು ಮಹಿಳಾ ದಿನವನ್ನು ಪ್ರತಿ ವರ್ಷ ನವಂಬರ್ 19ರಿಂದ 25ರವರಗೆ ಆಚರಿಸಲಾಗುತ್ತಿದೆ.  ಮಹಿಳೆಯರು  ಎಲ್ಲಾ ರಂಗಗಳಲ್ಲಿ ಮುಂದೆ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಒಬ್ಬ ಪುರುಷನಿಗೆ ಒಬ್ಬ ಮಹಿಳೆಯು ಹೃದಯವಿದ್ದಂತೆ ಹೆಣ್ಣು ಮಕ್ಕಳು ಮೃದು ಸ್ವಭಾವ ಹೊಂದಿದ್ದು. ಕುಟುಂಬ ನಿರ್ವಹಣೆಯಲ್ಲಿ ಅತಿ ಪ್ರಾಮುಖ್ಯತೆ ಹೊಂದಿರುತ್ತಾರೆ. ಲಂಡನ್ನಿನ ಒಬ್ಬ ಮಹಿಳೆಯ ಮೇಲೆ ಜನರು ಕಲ್ಲು ಎಸೆದ ದಿನದಂದು ಮಹಿಳೆಯರು ಹೋರಾಟ ಮಾಡಿದ ದಿನ ಮಾಚರ್್ 08.ಅಂದಿನ ಹೋರಾಟದ ಫಲವಾಗಿ ಮಾಚರ್್08 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಕಷ್ಟ ಕಾರ್ಪಣ್ಯಗಳನ್ನು ಅರಿತು ಅವರ ನೋವುಗಳನ್ನು ನಿವಾರಣೆ ಮಾಡಿ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುದೇ ಮಹಿಳಾ ದಿನವನ್ನಾಗಿ ಆಚರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಸಮಾಜದಲ್ಲಿ ಮಹಿಳೆ ಮತ್ತು ಪುರುಷರು ಎಂಬ ಕೀಳರಿಮೆ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿ ದುಡಿದು ನೆಮ್ಮದಿಯಿಂದ ಸುಖ ಬಾಳ್ವೆ ನಡೆಸುವಂತೆ ಕರೆ ನೀಡಿದರು. 
ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ತ್ರೀಶಕ್ತಿ ಮಹಿಳಾ ಸಂಘಗಳು ಉತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು ಬ್ಯಾಂಕಿನಿಂದ ಸಾಲಸೌಲಭ್ಯಗಳನ್ನು ಪಡೆದು ಆದಾಯೋತ್ಪನ್ನ ಚಟುಚಟಿಕೆಯಿಂದ ಆಥರ್ಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಸಂತೋಷವೆನಿಸುತ್ತಿದೆ. ಸಮಾಜ ನಿಮರ್ಾಣ ಮಾಡುವುದರಲ್ಲಿ ಮಹಿಳೆಯರ ಪಾತ್ರ ಮಹತ್ವವಾದುದು. 
ಗುಡಿ ಕೈಗಾರಿಕೆಗಳಂತಹ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸಿಕೊಂಡು ನಿಮರ್ಾಣ ಆಗಿರುವ ಸ್ತ್ರೀಶಕ್ತಿ ಭವನದಲ್ಲಿ ಇಟ್ಟು ಮಾರಾಟ ಮಾಡಿಲಾಭ ಗಳಿಸುವಂತೆ ತಿಳಿಸಿದ ಅವರು ಹೆಣ್ಣು ಬ್ರೂಣಹತ್ಯೆಯಿಂದ ಇಂದಿನ ಸಮಾಜದಲ್ಲಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದು ಇದನ್ನು ತಪ್ಪಿಸಲು ಹೆಣ್ಣು ಬ್ರೂಣಹತ್ಯೆ ತಡೆಗಟ್ಟುವಂತೆ ತಿಳಿಸಿದರು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಬಹುದಾಗಿದೆ. ಗಂಡು-ಹೆಣ್ಣು ಎಂಬ ಬೇದಭಾವ ಇಲ್ಲದೇ ನಾವೆಲ್ಲರೂ ಸರಿ ಸಮಾನರು ಅನ್ಯೂನ್ಯತೆಯಿಂದ ಸಹಬಾಳ್ವೆ ನಡೆಸುವಂತೆ ಕರೆ ನೀಡಿದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಮಹಿಳೆಯರು ಎಲ್ಲಾ ಕ್ರೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಕುಟುಂಬದ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾವಂತರಾಗಿ ನಗರ ಪ್ರದೇಶಗಳಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಇಂದು ಸಕರ್ಾರವು ನಿಗಧಿಪಡಿಸಿರುವ ಮೀಸಲಾತಿಯ ಸೌಲಭ್ಯವನ್ನು ಪಡೆದು ಮಹಿಳೆಯರು ಮುಂದೆ ಬಂದು ಕ್ರಿಯಾಶೀಲರಾಗಿ ಬಾಳುವಂತೆ ಕರೆ ನೀಡಿದರು.
ತಾ.ಪಂ.ಸದಸ್ಯ ಜಿ.ಆರ್. ಸೀತಾರಾಮಯ್ಯನವರು ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ, ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸೌಲಭ್ಯವನ್ನು ಪಡೆದು ಮಹಿಳೆಯರು ಪ್ರಗತಿ ಪಥದಲ್ಲಿ ನಡೆಯುವಂತೆ ಕರೆ ನೀಡಿದರು.
ಸಮಾರಂಭದಲ್ಲಿ 60 ವರ್ಷ ತುಂಬಿದ ಅಂಗನವಾಡಿ ಸಹಾಯಕಿಯರು ಗೌರವ ಸೇವೆಯಿಂದ ನಿವೃತ್ತಿ ಹೊಂದಿದ್ದು, ಸಕರ್ಾರದಿಂದ ನೀಡಿರುವ  ತಲಾ ರೂ.30 ಸಾವಿರ ರೂಗಳ ಹಿಡಿಗಂಟು ಮೊತ್ತದ ಚೆಕ್ಕುಗಳನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ವಿತರಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಿ, ಮಂಜುಳ  ತಾ.ಪಂ.ಸದಸ್ಯ ರಮೇಶ್ಕುಮಾರ್ ಮುಂತಾದವರಿದ್ದರು.
ಸಮಾರಂಭದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ವಂದಿಸಿದರು.
ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
ಚಿಕ್ಕನಾಯಕನಹಳ್ಳಿ,ನ.26 : ಪ್ರೌಡಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪಧರ್ೆಯ ಸಮಾರಂಭವನ್ನು ಇದೇ 30ರ ಬುಧವಾರ ಹಾಗೂ ನವಂಬರ್ 1ರಂದು ಏರ್ಪಡಿಸಲಾಗಿದೆ.
30ರಂದು ನಡೆಯುವ ಉದ್ಘಾಟನಾ  ಸಮಾರಂಭವನ್ನು ದೇಶೀಯ ವಿದ್ಯಾಪೀಠ ಬಾಲಕರ ಮತ್ತು ಬಾಲಕಿಯರ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾ ವಸ್ತುವಾರಿ ಸಚಿವ ಆರ್.ಮುರುಗೇಶ್ನಿರಾಣಿ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ವಿಶ್ವವಿಕಲ ಚೇತನರ(ಅಂಗವಿಕಲರ) ದಿನಾಚರಣೆ
ಚಿಕ್ಕನಾಯಕನಹಳ್ಳಿ,ನ.26 : ವಿಶ್ವವಿಕಲ ಚೇತನರ(ಅಂಗವಿಕಲರ) ದಿನಾಚರಣೆ ಮತ್ತು ತಾಲ್ಲೂಕು ವಿಕಲಚೇತನರ ಸಮಾವೇಶವನ್ನು ಇದೇ ಡಿಸಂಬರ್ 3ರ ಶನಿವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು.