Thursday, January 7, 2016


ಪೌರಕಾಮರ್ಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ 
ಚಿಕ್ಕನಾಯಕನಹಳ್ಳಿ,: ಪೌರ ಕಾಮರ್ಿಕರಿಗೆ ಬೆಳಗಿನ ಉಪಹಾರ ನೀಡುವ ಯೋಜನೆಯನ್ನು ಪೌರಕಾಮರ್ಿಕರು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕರ್ತವ್ಯದ ಜೊತೆಗೆ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಬೇಕೆಂದು  ತಹಶೀಲ್ದಾರ್ ಆರ್.ಗಂಗೇಶ್ ಸಲಹೆ ನೀಡಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ಪೌರಕಾಮರ್ಿಕರಿಗೆ ನೀಡುವ ಬೆಳಗಿನ ಉಪಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, ಈಗಾಗಲೇ ಶೇ.24.10%ರ ಅನುದಾನದ ಹಣದಲ್ಲಿ ಪೌರಕಾಮರ್ಿಕರಿಗೆ ಉಪಹಾರ ನೀಡಲು 5ಲಕ್ಷ ರೂ ಅನುದಾನವನ್ನು ಮೀಸಲಿಟ್ಟಿದ್ದು ಪೌರಕಾಮರ್ಿಕರು ತಮಗೆ ನೀಡಿರುವ ಪರಿಕರಗಳಾದ ಶೂ, ಹ್ಯಾಂಡ್ಗ್ಲೌಸ್, ಮಾಸ್ಕ್ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಮಲ್ಲೇಶಯ್ಯ ಮಾತನಾಡಿ, ಬೆಳಗಿನ ಜಾವ ಪಟ್ಟಣದ ಸ್ವಚ್ಛತೆಗೆ ಪೌರಕಾಮರ್ಿಕರು ಬರುತ್ತಾರೆ,  ಈ ಸಮಯದಲ್ಲಿ ಹಸಿವಿನಿಂದ ಬಳಲುತ್ತಾರೆ ಎಂಬ ಕಾರಣದಿಂದ ಪುರಸಭೆ ವತಿಯಿಂದ ಬೆಳಗಿನ ಉಪಹಾರ ನೀಡುವಂತೆ ಎರಡು ವರ್ಷಗಳಿಂದ ಸಾಮಾನ್ಯ ಸಭೆಗಳಲ್ಲಿ ಚಚರ್ೆ ನಡೆದಿದ್ದರೂ ಜಾರಿಗೆ ತಂದಿರಲಿಲ್ಲ,  ಈಗ ಬೆಳಗಿನ ಉಪಹಾರ ವ್ಯವಸ್ಥೆ ಜಾರಿಗೆ ತರಲಾಗಿದ್ದು,  ಈ ಕಾರ್ಯಕ್ರಮವನ್ನು ಉಪಯೋಗಿಸಿಕೊಳ್ಳುವ ಪೌರಕಾಮರ್ಿಕರು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕರಿಸಿ ಎಂದರು.  ಟೆಂಡರ್ದಾರರು ಪೌರಕಾಮರ್ಿಕರಿಗೆ ನೀಡುವ ಆಹಾರದಲ್ಲಿ ವ್ಯತ್ಯಾಸವಾಗದಂತೆ ಉತ್ತಮ ಗುಣಮಟ್ಟದ ಆಹಾರ ಸರಬರಾಜು ಮಾಡುವಂತೆ ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಪೌರಕಾಮರ್ಿಕರು ರಕ್ಷ ಕವಚ, ಪೂರ್ಣ ಮಾಸ್ಕ್, ಹ್ಯಾಂಡ್ಗ್ಲೌಸ್, ಶೂಗಳನ್ನು ಹಾಕಿಕೊಂಡು ಸ್ವಚ್ಛತಾ ಕೆಲಸ ಮಾಡುವಂತೆ ಸಲಹೆ ನೀಡಿದ ಅವರು ಪ್ರತಿ ತಿಂಗಳು ಪೌರಕಾಮರ್ಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಬರುವ ಪೌರಕಾಮರ್ಿಕರಿಗೆ ಕುಟುಂಬದ ಸದಸ್ಯರು ಬೆಳಗ್ಗೆ ಎದ್ದು ಉಪಹಾರ ಮಾಡಲು ಸಾಧ್ಯವಿಲ್ಲ ಆದ್ದರಿಂದ ಸಕರ್ಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರೇಣುಕಮ್ಮ, ರೂಪ, ಪುಷ್ಪ.ಟಿ.ರಾಮಯ್ಯ, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ ಅಧಿಕಾರಿಗಳಾದ ಯೋಗಾನಂದಬಾಬು, ಚಂದ್ರಶೇಖರ್, ಜಯರಾಂ ಉಪಸ್ಥಿತರಿದ್ದರು.


ವೆಟ್ಲಿಪ್ಟಿಂಗ್ ಸ್ಪಧರ್ೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.07 :   ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಅಂತರಕಾಲೇಜು ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಫಧರ್ೆ ಹಾಗೂ ಕುಸ್ತಿ ಸ್ಪಧರ್ೆಯಲ್ಲಿ  ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು ಭಾಗವಹಿಸಿ 8 ಚಿನ್ನದಪದಕ,   7 ಬೆಳ್ಳಿಪದಕ,  3ಕಂಚಿನಪದಕ ಸೇರಿದಂತೆ ಒಟ್ಟು 18   ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿನ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕರಾದ ಶೈಲೇಂದ್ರಕುಮಾರ್.ಎಸ್.ಜೆ. ಇವರ ತರಬೇತಿಯಲ್ಲಿ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಸತತವಾಗಿ 3ನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಹಾಗೂ ಪುರುಷರ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ತಂಡ ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
    ಭಾರ ಎತ್ತುವ ಸ್ಪಧರ್ೆಗೆ ಆಯ್ಕೆ : 
ಕಾಲೇಜಿನ ದ್ವಿತೀಯ ಪದವಿ ವಿದ್ಯಾಥರ್ಿನಿ ರಮ್ಯಶ್ರೀ.ಎಸ್. ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಪಡೆದು ವೈಯಕ್ತಿಕ ಸಾಧನೆ ಮಾಡಿದ್ದಾರೆ ಹಾಗೂ ಆಂದ್ರ ಪ್ರದೇಶದ ಆಚಾರ್ಯ ನಾಗಾಜರ್ುನ ವಿಶ್ವವಿದ್ಯಾಲಯದಲ್ಲಿ  ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಭಾರ ಎತ್ತುವ ಸ್ಪಧರ್ೆಗೆ 1) ರಮ್ಯಶ್ರೀ.ಎಸ್. 2) ಕಾವ್ಯ ಕೆ.ಬಿ. 3) ತೇಜಸ್ವಿನಿ.ಸಿ.ಆರ್, 4) ಕರಿಷ್ಮಾ 5) ನವೀನ್ಕುಮಾರ್.ಸಿ.ಆರ್. 6) ದರ್ಶನ್ ಬಿ.ಯು. ಆಯ್ಕೆಯಾಗಿದ್ದಾರೆ.
    ಕುಸ್ತಿ ಸ್ಪಧರ್ೆಗೆ ಆಯ್ಕೆ : 
ತುಮಕೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಸ್ಪಧರ್ೆಯಲ್ಲಿ ಶ್ರೀನಿವಾಸ್.ವಿ. ಚಿನ್ನದ ಪದಕ, ರವಿ.ಎಂ. ಕಂಚಿನ ಪದಕ ಹಾಗೂ ಬರ್ಕತ್ಉಲ್ಲಾ ಕಂಚಿನ ಪದಕ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕುಸ್ತಿ ಸ್ಪಧರ್ೆಗೆ ಶ್ರೀನಿವಾಸ್.ವಿ. ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾಥರ್ಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರಾದ ಸಿ.ಜಿ.ಸುರೇಶ್ ಹಾಗೂ ಬೋಧಕ, ಬೋಧಕೇತರ ವೃಂದ, ವಿದ್ಯಾಥರ್ಿ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
   ಪದಕ ಪಡೆದ ವಿದ್ಯಾಥರ್ಿಗಳು : 
ಚಿನ್ನದ ಪದಕ:1) ಕಾವ್ಯ ಕೆ.ಬಿ. 2) ತೇಜಸ್ವಿನಿ.ಸಿ.ಆರ್. 3) ಸೌಂದರ್ಯ.ಆರ್.ಎನ್.4) ವಿದ್ಯ, 5) ಕರಿಷ್ಮಾ 6) ರಮ್ಯಶ್ರೀ.ಎಸ್. 7) ನವೀನ್ಕುಮಾರ್.ಸಿ.ಆರ್. 8) ದರ್ಶನ್ ಬಿ.ಯು. 
ಬೆಳ್ಳಿಪದಕ:  1) ದಾಕ್ಷಾಯಿಣಿ 2) ಮೇಘನ ಎಂ.ಬಿ. 3) ಸಂಗೀತ.ಎಂ 4) ಪೂಣರ್ಿಮ 5) ಭಾಮಿನಿ.ಎ.ಸಿ. 6) ನಿರಂಜನ್  7) ಬರ್ಕತ್ಉಲ್ಲಾ
ಕಂಚಿನ ಪದಕ: 1) ಕುಂಜುರಾಣಿ   2) ರಜನೀಕಾಂತ್   3) ಗುರುಪ್ರಸಾದ್ ಪಡೆದಿದ್ದಾರೆ.


ಗೋಡೆಕೆರೆ ಗ್ರಾಮಸ್ಥರು ವಿದ್ಯುತ್ಗಾಗಿ ಬೆಸ್ಕಾಂ ಇಲಾಖೆಗೆ ಮುತ್ತಿಗೆ
ಚಿಕ್ಕನಾಯಕನಹಳ್ಳಿ,ಜ.07 : ಗೋಡೆಕೆರೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆಗ್ರಹಿಸಿ ಗೋಡೆಕೆರೆ ಗ್ರಾಮಸ್ಥರು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಹಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗೋಡೆಕೆರೆ ಗ್ರಾಮಸ್ಥರು ಕಛೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ  ಮಾತನಾಡಿದ ರೇಣುಕಪ್ಪ,  ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿದ್ಯುತ್ ನೀಡುತ್ತಾರೆ ಈ ಅವಧಿಯಲ್ಲಿಯೂ ನಾಲ್ಕರಿಂದ ಐದು ಬಾರಿ ವಿದ್ಯುತ್ ತೆಗೆಯುತ್ತಾರೆ, ಗೋಡೆಕೆರೆ ಸುತ್ತಮುತ್ತಲಿನಲ್ಲಿ ವಿದ್ಯುತ್ ಸರಿಯಾಗಿ ಸರಬರಾಜು ಆಗದೇ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ ಇದರ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪಕರ್ಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಗೋಡೆಕೆರ ಗೇಟ್ ಹಾಗೂ ಜೆ.ಸಿ.ಪುರದಲ್ಲಿ 24ಗಂಟೆಯೂ ವಿದ್ಯುತ್ ಇರುತ್ತದೆ ನಮಗೇಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ನಮಗೇಕೆ ಈ ತಾರತಮ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಅಲ್ಲದೆ ಲೈನ್ ಎಳೆಯಲು ವಿದ್ಯುತ್ ಪರಿವರ್ತಕ ನೀಡಲು ಹಣ ಕೇಳುತ್ತಾರೆ ಈಗಾದರೆ ರೈತರು ಬದುಕಲು ಸಾಧ್ಯವೇ ಎಂದರು.
ಅಲ್ಲದೆ ಗೋಡೆಕೆರೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವವರಿಗೆ   ವಿದ್ಯುತ್ ಇಲ್ಲದೆ ತೀವ್ರ ತೊಂದರೆಯಾಗಿದೆ, ವಿದ್ಯುತ್ ಇಲ್ಲದೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿ ವಿಷ ಜಂತುಗಳು ಸಹ ಮನೆಗಳಿಗೆ ಬರುವುದರಿಂದ ಜಮೀನುಗಳಲ್ಲಿರುವ ರೈತರಿಗೆ ಆತಂಕ ಹೆಚ್ಚಾಗಿದೆ ಎಂದರಲ್ಲದೆ, ಇಂಧನ ಸಚಿವರು ಗ್ರಾಮೀಣ ಭಾಗಗಳಿಗೆ 7ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಇದರ ಬಗ್ಗೆ ಏನು ಹೇಳುತ್ತೀರ ಎಂದು ಗ್ರಾಮಸ್ಥರು ಎಇಇ ರಾಜಶೇಖರ್ರವರನ್ನು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಬೆಸ್ಕಾಂ ಎಇಇ ರಾಜಶೇಖರ್, ಇಂಧನ ಸಚಿವರು 7ಗಂಟೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದಾರೆ, ನಾನೂ ಸಹ ಪತ್ರಿಕೆಗಳಲ್ಲಿ ಓದಿದ್ದೇನೆ ಇದುವರೆವಿಗೂ ಸಕರ್ಾರದ ಆದೇಶ ಬಂದಿಲ್ಲ, ಈಗ ಎಂದಿನಂತೆ ವಿದ್ಯುತ್ ಸರಬರಾಜು ಆಗುತ್ತಿದೆ , ಸಕರ್ಾರದ ಆದೇಶ ಬಂದ ತಕ್ಷಣ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ ಅವರು ಲೈನ್ಮೇನ್ಗಳು ಲೈನ್ ಎಳೆಯಲು ಹಣ ಕೇಳುವುದರ ಬಗ್ಗೆ ದೂರು ನೀಡಿದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ರೇಣುಕಪ್ರಸಾದ್, ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ, ಅಡಿಕೆ ರೇಣುಕಯ್ಯ, ರವೀಶ, ಸಿದ್ದರಾಮಯ್ಯ, ಮರಿಯಣ್ಣ, ಆನಂದಯ್ಯ ಸೇರಿದಂತೆ ಗೋಡೆಕೆರೆ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ 
ಚಿಕ್ಕನಾಯಕನಹಳ್ಳಿ.ಜ.07: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀವಿಠ್ಠಲ ರುಖುಮಾಯಿಯವರ 6ನೇ ವರ್ಷದ ದಿಂಡಿ ಉತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಪಟ್ಟಣದಲ್ಲಿ ಏರ್ಪಡಿಸಲಾಗಿದೆ.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ 9 ಹಾಗೂ 10ನೇ ತಾರೀಕಿನಂದು ಭಾವಸಾರ ಕ್ಷತ್ರಿಯ ಸಮಾಜ ಹಾಗೂ ರುಕ್ಮೀಣಿ ಮಹಿಳಾ ಸಮಾಜದವರು,  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಇದೇ 9ರಂದು ಸಂಜೆ 6-30ಕ್ಕೆ ಪೋತಿ ಸ್ಥಾಪನೆ ಹಾಗೂ ತುಕಾರಾಮ್ ರಾವ್, ಜಗದೀಶಬಾಬು ಇವರಿಂದ ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಇದೇ ಹತ್ತರ ಭಾನುವಾರ ಬೆಳಗ್ಗೆ 12ಗಂಟೆಗೆ ವಿಠ್ಠಲ ರುಖುಮಾಯಿಯವರ ದಿಂಡಿ ಉತ್ಸವ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ನಡೆಯಲಿದ್ದು ಅಂದು 1ಗಂಟೆಗೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಲಾಗಿದ್ದು ಶ್ರೀ ನಾಮದೇವಾನಂದಭಾರತಿ ಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸುವರು. ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ಬಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.


ನವೋದಯ ಶಾಲೆಯ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಕಯಕನಹಳ್ಳಿ07:-ಪಟ್ಟಣದ ನವೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾಷರ್ಿಕೋತ್ಸವ ಸಮಾರಂಭ ಇದೇ ತಿಂಗಳ 9 ಶನಿವಾರ ಸಂಜೆ 4-30ಕ್ಕೆ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ವಿಶೇಷಾಧಿಕಾರಿ ಪಾಲಾಕ್ಷಯ್ಯ ನೆರೆವೆರಿಸುವರು.
 ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಬಹುಮಾನ ವಿತರಿಸಲಿದ್ದು ಮುಖ್ಯ ಅತಿಥಿಗಳಾಗಿ ನವೋದಯ ಸಂಸ್ಥೆಯ ಉಪಾಧ್ಯಕ್ಷ ಎಂ,ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ನವೋದಯ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ, ನವೋದಯ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಮೋಹನ್ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.