Saturday, January 23, 2016

ರೋಹಿತ್ ವೇಮುಲು ಪ್ರಕರಣವನ್ನು ಸಿಬಿಐಗೆ ವಹಿಸಲು ದಲಿತ ವಿದ್ಯಾಥರ್ಿ ಒಕ್ಕೂಟದ ಒತ್ತಾಯ
ಚಿಕ್ಕನಾಯಕನಹಳ್ಳಿ,ಜ.23 : ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲುರವರ ಆತ್ಮಹತ್ಯೆ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸುವಂತೆ ಆಗ್ರಹಿಸಿ ತಾಲ್ಲೂಕು ದಲಿತ ವಿದ್ಯಾಥರ್ಿ ಒಕ್ಕೂಟದ ವಿದ್ಯಾಥರ್ಿಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಸ ಬಸ್ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನೆಹರು ಸರ್ಕಲ್ನಲ್ಲಿ ಮಾನವ ಸರಪಳಿ ನಿಮರ್ಿಸಲಾಯಿತು. ಪ್ರತಿಭಟನಾ ಮೆರವಣಿಗೆ ಶೆಟ್ಟಿಕೆರೆ ಗೇಟ್,ಜೋಗಿಹಳ್ಳಿ ಗೇಟ್ ಮೂಲಕ ಸಾಗಿ ತಾಲ್ಲೂಕು ಕಛೇರಿಯಲ್ಲಿ ಸಮಾವೇಶಗೊಂಡಿತು. ತಹಶೀಲ್ದಾರ್ ಗಂಗೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
   ಜಿಲ್ಲಾ ದಲಿತ ವಿದ್ಯಾಥರ್ಿ ಒಕ್ಕೂಟದ ಸಂಚಾಲಕ ಜಿ.ಸಿ.ರಂಗಧಾಮಯ್ಯ ಮಾತನಾಡಿ, ಸ್ವತಂತ್ರ್ಯ ಬಂದು 69 ವರ್ಷ ಕಳೆದರೂ ದೇಶದಲ್ಲಿ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಡೆಯುತ್ತಲೇ ಇರುವುದು ದುರದೃಷ್ಠಕರ. ಪ್ರಜಾಪ್ರಭುತ್ವ ಉಳ್ಳವರ ಪಾಲಾಗುತ್ತಿದೆ. ಹೈದರಾಬಾದಿನ ಕೇಂದ್ರೀಯ ವಿ.ವಿ.ಯಲ್ಲಿ ಜಾತಿ ವ್ಯವಸ್ಥೆ ವಿಜೃಂಭಿಸುತ್ತಿರುವುದು ಅಪಾಯದ ಸೂಚನೆ. ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ನ 5 ಅಮಾಯಕ ದಲಿತ ವಿದ್ಯಾಥರ್ಿಗಳನ್ನು ಉಚ್ಛಾಟಸಿದ್ದ ಕುಲಪತಿ ಪ್ರೊ.ಅಪ್ಪಾರಾವ್ ಅವರನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ರೋಹಿತ್ ವೇಮುಲು ಸಾವಿಗೆ ಕಾರಣರಾಗಿರುವ ಕೇಂದ್ರ ಸಚಿವರಾದ ಸಚಿವೆ ಸ್ಮೃತಿ ಇರಾನಿ ಮತ್ತು ಭಂಡಾರ ದತ್ತಾತ್ರೇಯ ಅವರನ್ನು  ಕೂಡಲೆ ಕೇಮದ್ರ ಸಂಪುಟದಿಂದ ಹೊರಗಿಡಬೇಕು  ಎಂದು ಒತ್ತಾಯಿಸಿದರು.
   ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಬಲಪಂತೀಯ ರಾಜಕೀಯ ಪ್ರೇರಿತ ಎಬಿವಿಪಿಯಂತಹ ಸಂಘಟನೆಯನ್ನು ಕಾಲೇಜು ಕ್ಯಾಂಪಸ್ಗಳಿಂದ ದೂರವಿಡಬೇಕು. ಹಾಗೂ ಮೃತ ರೋಹಿತ್ ಕುಟುಂಬಕ್ಕೆ ರೂ.50ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ಮುಖಂಡರಾದ ಲಿಂಗದೇವರು,ನಾರಾಯಣರಾಜು, ವಿದ್ಯಾಥರ್ಿಗಳಾದ ಮಣಿಕಂಠ, ವಿನಯ್ಕುಮಾರ್, ಮಂಜುನಾಥ್, ರೇಣುಕಪ್ರಸಾದ್, ಮಂಜುಳ, ಉಷಾ ಮತ್ತಿತರರು ಉಪಸ್ಥಿತರಿದ್ದರು.


67ನೇ ಭಾರತ ಗಣರಾಜ್ಯೋತ್ಸವ ದಿನಾಚಾರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜ.23 : 67ನೇ ಭಾರತ ಗಣರಾಜ್ಯೋತ್ಸವ ದಿನಾಚಾರಣೆಯು ಪಟ್ಟಣದಲ್ಲಿ ಜನವರಿ 26ರಂದು ಬೆಳಗ್ಗೆ 9ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಗಂಗೇಶ್ ಧ್ವಜಾರೋಹಣ ನೆರವೇರಿಸುವರು.
ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಸ್ವಾಮಿ, ಚಿರಂಜೀವಿ, ಸ್ವಾತಿ.ಹೆಚ್.ಆರ್, ಬಿ.ವಿದ್ಯಾ, ರಾಕೇಶ್, ಗೃಹ ರಕ್ಷಕ ದಳದ ಘಟಕಾಧಿಕಾರಿ ಮಂಜುನಾಥ್ರಾಜ್ಅರಸ್, ಕಲಾವಿದ ಖಲಂದರ್ರವರಿಗೆ ಸನ್ಮಾನಿಸಲಾಗುವುದು.

ಬಿಜೆಪಿ ಪಕ್ಷದಲ್ಲಿ ತಾ.ಪಂ, ಜಿ.ಪಂ ಚುನಾವಣೆಗೆ ಅಭ್ಯಥರ್ಿಗಳ ಆಯ್ಕೆಗೆ ಗೊಂದಲ
ಚಿಕ್ಕನಾಯಕನಹಳ್ಳಿ, : ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಾಣೆಯ ಅಭ್ಯಥರ್ಿಗಳ ಆಯ್ಕೆ ವಿಚಾರದಲ್ಲಿ ತಾಲ್ಲೂಕು ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದೆ, ಪಕ್ಷದ ಕಛೇರಿಯಲ್ಲಿ ಶನಿವಾರ ಸಂಜೆ ಕರೆಯಲಾಗಿದ್ದ ಕೋರ್ ಕಮಿಟಿ ಸಭೆಯೂ ಗೊಂದಲಕ್ಕೆ ತೆರೆ ಎಳೆಯುವಲ್ಲಿ ವಿಫಲವಾಗಿದೆ.
   ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ, ಗೊಂದಲ ನಿವಾರಣೆ ಉದ್ದೇಶದಿಂದ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎನ್.ಬಿ.ನಂದೀಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಹಾಗೂ ಸ್ಥಳೀಯ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಒಮ್ಮತ ಮೂಡದ ಕಾರಣ  ಭಾನುವಾರ ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಯಿತು ಎಂದು ಹೇಳಿದರು.
  ಸಭೆಗೂ ಮುನ್ನ ತುಮಕೂರಿನಿಂದ ಬಂದಿದ್ದ ನಾಯಕರುಗಳು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಮನೆಗೆ ತೆರಳಿ ಮನ ಒಲಿಸಲು ಪ್ರಯತ್ನಿಸಿದರು ಆದರೂ ಜೆಸಿಎಂ ಸಭೆಗೆ ಹಾಜರಾಗಲಿಲ್ಲ ಎಂದು ತಿಳಿದು ಬಂದಿದೆ.
   ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ ಇಬ್ಬರೂ ತಮ್ಮ ಬೆಂಬಲಿತ ಅಭ್ಯಥರ್ಿಗಳಿಗೆ ಟಿಕೆಟ್ ಕೊಡಿಸಬೇಕು ಎಂದು ಜಿದ್ದಿಗೆ ಬಿದ್ದಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಹೆಸರು ಹೇಳಲು ಇಚ್ಚಿಸದ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.