Monday, November 7, 2011


ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ನ.07 : ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ, ಸಮುದಾಯ ಭವನದ ಭೂಮಿಪೂಜೆ ಹಾಗೂ ಉಲ್ ಕಾಡರ್ಿಂಗ್ ಮಿಲ್  ಕಟ್ಟಡ ಉದ್ಘಾಟನಾ ಸಮಾರಂಭವನ್ನು ಇದೇ  10ರ ಗುರುವಾರ  ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಪಟ್ಟಣದ ಕನಕ ಭವನದಲ್ಲಿ ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ  ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದು  ಜವಳಿ ಸಚಿವ ವತರ್ೂರು ಪ್ರಕಾಶ್ ಭೂಮಿ ಪೂಜೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ಮತ್ತು  ಸಂಸದ ಜಿ.ಎಸ್.ಬಸವರಾಜು ಉಲ್ ಕಾಡರ್ಿಂಗ್ ಮಿಲ್ ಕಟ್ಟಡದ ಉದ್ಘಾಟನೆ ನೆರವೇರಿಸುವರು.  
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಮಗ್ಗಗಳ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ಸಹಾಯಧನ ಹಾಗೂ ಜಿಲ್ಲಾ ಡಿ.ಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಚೆಕ್ ವಿತರಣೆ ಮಾಡುವರು. 
ಜಿಲ್ಲಾ ಪಂಚಾಯತ್ ಅಧ್ಯಕ್ಷ ಡಾ.ರವಿ.ಬಿ.ನಾಗರಾಜಯ್ಯ ಕಂಬಳಿಗಳ ವಿತರಣೆ ಮಾಡಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಪ್ರಮಾಣ ಪತ್ರ ವಿತರಣೆ ಮಾಡುವರು. ಇದೇ ಸಂದರ್ಭದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಟ.ಆರ್.ಸುರೇಶ್ರವರಿಗೆ ಸನ್ಮಾನಿಸಲಾಗುವುದು.

ತಾಲ್ಲೂಕಿಗೆ ಹೆಚ್ಚಿನ ನಿವೇಶನದ ಅನುದಾನ ನೀಡಲು ವಿ.ಸೋಮಣ್ಣನವರಲ್ಲಿ ಮನವಿ 
ಚಿಕ್ಕನಾಯಕನಹಳ್ಳಿ,ನ.07 : ತಾಲ್ಲೂಕು ನಂಜುಂಡಪ್ಪನವರ ವರದಿಯಲ್ಲಿ ಹಿಂದುಳಿದ ತಾಲ್ಲೂಕು ಎಂದು ಉಲ್ಲೇಖವಾಗಿದೆ, ಈಗ ರಾಜ್ಯ ಸಕರ್ಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು ತಾಲ್ಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ರಹಿತರಿದ್ದು ಸಕರ್ಾರದ ವತಿಯಿಂದ ಅತಿ ಹೆಚ್ಚಿನ ವಸತಿ ಸೌಲಭ್ಯ ಒದಗಿಸಿಕೊಡಬೇಕೆಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರೀ ಶಿವಣ್ಣ ವಸತಿ ಸಚಿವ ವಿ.ಸೋಮಣ್ಣನವರಲ್ಲಿ ವಿನಂತಿಸಿಕೊಂಡರು.
ಹೊಸದುರ್ಗ ತಾಲ್ಲೂಕಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿಮಿತ್ತ ಮಾರ್ಗ ಮಧ್ಯದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಚಿವರಲ್ಲಿ ವಿನಂತಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಹ ವಸತಿ ಹೀನ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಂದರೆ ಸಹಕರಿಸುವದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಕಾರ್ಯದಶರ್ಿ ಕೆ.ಎನ್.ಶಂಕರಯ್ಯ, ಪುರಸಭಾ ನಾಮಿನಿ ಸದಸ್ಯ ಲಕ್ಷ್ಮಯ್ಯ, ಮಾಳಿಗೆಹಳ್ಳಿ ಪ್ರಸಾದ್, ರೋಜೆಗೌಡ, ಸಿ.ಬಿ.ಲಿಂಗಯ್ಯ, ಸುಂದರೇಶ್ , ಮಧು ನವಿಲೆ ಮುಂತಾದವರಿದ್ದರು.