Friday, May 28, 2010

ಡಿ.ಸಿ.ಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ಸೌಲಭ್ಯ

ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ಗಳಲ್ಲಿ ವಾಹನ ಸಾಲ, ಚಿನ್ನಾಭರಣಗಳ ಹಾಗೂ ಗೊಬ್ಬರ ಕೊಳ್ಳಲು ಸಾಲವನ್ನು ಒದಗಿಸುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಯೋಜನೆಯಾಗಿ ಜಂಟಿ ಭಾಧ್ಯತಾ ಗುಂಪುಗಳ ಪ್ರವರ್ಧನಾ ಯೋಜನೆಯಡಿ(ಜೆ.ಎಲ್.ಜಿ.) 5ಜನರ ಗುಂಪು ರಚಿಸಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೂಲಿ ಕಾಮರ್ಿಕರಿಗೆ ಸಾಲ ಸೌಲಭ್ಯ ಒದಗಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಮಟ್ಟ ಸುಧಾರಿಸಲು ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವುದಾಗಿ ಹಾಗೂ ಹೊಸ ರೈತರಿಗೆ ಕೆ.ಸಿ.ಸಿ ಸಾಲ ನೀಡುವುದಾಗಿ ತಿಳಿಸಿದ ಅವರು ಜೂನ್ 10ರಂದು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರು ತಾಲೂಕಿನ ಪ್ರಾಥಮಿಕ ಕೃಷಿ ಬ್ಯಾಂಕ್ಗಳಿಗೆ ಭೇಟಿ ನೀಡಲಿದ್ದು, ವಿವಿಧ ಯೋಜನೆಯಡಿ ರೈತರಿಗೆ ಎಲ್ಲಾ ಸಹಕಾರ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡಲು ಪರಿಶೀಲಿಸಲಿದ್ದಾರೆ ಎಂದರು.
ಸಭೆಯಲ್ಲಿ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಬಿ.ಕೆ.ಮುಕುಂದಯ್ಯ, ಡಿ.ಸಿ.ಸಿ.ಬ್ಯಾಂಕ್ ಸೂಪರ್ ವೈಸರ್ ಜಯರಾಮಯ್ಯ ಉಪಸ್ಥಿತರಿದ್ದರು.