Tuesday, July 9, 2013

ತಾಲೂಕಿನಲ್ಲಿ 35845 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜು.09 : ರಾಜ್ಯ ಸಕರ್ಾರದ ಅನ್ನಭಾಗ್ಯ ಮಹತ್ವದ ಯೋಜನೆಗೆ ಈ ತಿಂಗಳ 10ರಂದ ಜಿಲ್ಲೆಯಲ್ಲಿ ಚಾಲನೆಯಾಗಲಿದ್ದು ತಾಲ್ಲೂಕಿನಲ್ಲಿಯೂ ಈ ಯೋಜನೆ  ಅಂದೇ ಪ್ರಾರಂಭವಾಗಲಿದೆ, ತಾಲೂಕಿನಲ್ಲಿ ಈ ಯೋಜನೆಯ ಲಾಭವನ್ನು 35845 ಫಲಾನುಭವಿಗಳು ಪಡೆಯಲಿದ್ದಾರೆ  ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಯಾವುದೇ ಕಡು ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಸಕರ್ಾರಿ ಅನ್ನಭಾಗ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಈ ಯೋಜನೆಯಡಿ ಬರುವ ತಾಲ್ಲೂಕಿನ ಎಲ್ಲಾ ಚಾಲ್ತಿಯಿರುವ ಬಿಪಿಎಲ್ ಪಡಿತರದಾರರಿಗೂ 1ರೂ ದರದಲ್ಲಿ 10ಕೆ.ಜಿ. ಪಡೆಯುವವರು 1568 ಪಡಿತರದಾರರು, 20ಕೆ.ಜಿಯಂತೆ 3596, 30ಕೆಜಿಯಂತೆ 30681 ಪಡಿತರದಾರರು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ.
  ಕನಿಷ್ಟ 10ಕೆ.ಜಿ, ಗರಿಷ್ಠ 30.ಕೆ.ಜಿ ಅಂದರೆ ಪಡಿತರ ಚೀಟಿಯಲ್ಲಿ ಒಬ್ಬ ಸದಸ್ಯರಿದ್ದರೆ 10ಕೆ.ಜಿ, ಇಬ್ಬರು ಸದಸ್ಯರಿದ್ದರೆ 20ಕೆ.ಜಿ, ಹಾಗೂ ಮೂರು ಮತ್ತು ಅದರ ಮೇಲ್ಪಟ್ಟ ಸದಸ್ಯರಿದ್ದರೆ 30ಕೆಜಿ ಅಕ್ಕಿಯಂತೆ ನ್ಯಾಯಬೆಲೆ ಅಂಗಡಿಗಳ ಮುಖಾಂತರ ನೀಡಲಾಗುವುದು, ಅಂತ್ಯೋದಯ ಪಡಿತರ ಚೀಟಿಗಳಿಗೆ 1ರೂ ದರದಲ್ಲಿ 29ಕೆ.ಜಿ ಅಕ್ಕಿ, 2ರೂ ದರದಲ್ಲಿ 6ಕೆ.ಜಿ.ಗೋದಿಯನ್ನು ನೀಡಲಾಗುವುದು ಹಾಗೂ  ಜುಲೈ ತಿಂಗಳಲ್ಲಿ ಗೋದಿಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿರುವ ಅವರು  ಎಪಿಎಲ್ ಪಡಿತರ ಚೀಟಿದಾರರಿಗೆ ಯಾವುದೇ ಆಹಾರ ದಾನ್ಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. 
ಈಗಾಗಲೇ ಶೇ.40ರಷ್ಟು ಅಕ್ಕಿ ದಾಸ್ತಾನು ನಮ್ಮ ಗೋಡೋನ್ಗೆ ಬಂದಿದ್ದು 10ಕೆಜಿಯಂತೆ 156.80 ಕ್ವಿಂಟಾಲ್, 20ಕೆ.ಜಿಯಂತೆ 719.20ಕ್ವಿಂಟಾಲ್, 30ಕೆ.ಜಿಯಂತೆ 9204.30ಕ್ವಿಂಟಾಲ್ ಅಕ್ಕಿ ವಿತರಿಸಲಾಗುವುದು, ತಾಲ್ಲೂಕಿನಲ್ಲಿ 35800 ಬಿಪಿಎಲ್ ಪಡಿತರ ಚೀಟಿ, 10779 ಎಪಿಎಲ್ ಪಡಿತರ ಚೀಟಿ, 4152 ಅಂತ್ಯೋದಯ ಪಡಿತರ ಚೀಟಿ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಆಹಾರ ಶಿರಸ್ತೆದಾರ್ ಮಂಜುನಾಥ್, ಆಹಾರ ನಿರೀಕ್ಷಕರಾದ ಪ್ರೇಮ ಉಪಸ್ಥಿತರಿದ್ದರು.

ಜು.22ರಂದು ಸಕರ್ಾರಿ ನೌಕರರ ಸಂಘದ ಚುನಾವಣೆ
ಚಿಕ್ಕನಾಯಕನಹಳ್ಳಿ,ಜು.09 : 2013-18ನೇ ಸಾಲಿನ ಅವಧಿಗೆ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ತಾಲೂಕು  ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣೆಯು ಇದೇ ಜುಲೈ ತಿಂಗಳ 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ  ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಜುಲೈ 11 ಗುರುವಾರದಿಂದ 15ರ ಸೋಮವಾರ ಸಂಜೆ 4 ಗಂಟೆಯವರೆಗೆ ನಾಮಪತ್ರಗಳನ್ನು ವಿತರಣೆ ಮಾಡಲಿದ್ದು 15ರ ಸಂಜೆ 5ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 15ರ ಸಂಜೆ 5.30ರ ನಂತರ ನಾಮಪತ್ರ ಪರಿಶೀಲಿಸಲಿದ್ದು ಪರಿಶೀಲನೆ ನಂತರ ಅರ್ಹ ಅಭ್ಯಥರ್ಿಗಳ ಹೆಸರು ಪ್ರಕಟಣೆ ಮಾಡಲಾಗುವುದು. 16ರ ಮಂಗಳವಾರ ಸಂಜೆ 4ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಅಂದು ಸಂಜೆ 5ಗಂಟೆಯ ನಂತರ ನಾಮಪತ್ರಗಳನ್ನು ವಾಪಸ್ ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯಥರ್ಿಗಳ ಹೆಸರು ಪ್ರಕಟಿಸಲಾಗುವುದು. 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ಚುನಾವಣೆ ನಡೆಯಲಿದ್ದು 22ರ ಸೋಮವಾರ ಮಧ್ಯಾಹ್ನ 4.30ರ ನಂತರ ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ನಂತರ ಅಂದೇ ಫಲಿತಾಂಶ ಪ್ರಕಟಿಸಲಾಗುವುದು.
ನಾಮಪತ್ರಗಳನ್ನು ತಾಲ್ಲೂಕು/ಯೋಜನಾ ಸಂಘದ ಕಛೇರಿಯಲ್ಲಿ ನಾಮಪತ್ರಗಳ ವಿತರಣೆ ದಿನಾಂಕದಿಂದ ನಾಪತ್ರಗಳ ವಿತರಣೆಯ ಕೊನೆಯ ದಿನಾಂಕದವರೆಗೆ ಬೆಳಗ್ಗೆ 11ರಿಂದ ಸಂಜೆ 5ಗಂಟೆಯವರೆಗೆ ಪಡೆಯಬಹುದಾಗಿದ್ದು, ಚುನಾವಣಾ ಪ್ರಕ್ರಿಯೆ ಪ್ರಕಾರ ಸಂಘದ ಕಛೇರಿಯು ರಜಾ ದಿನಗಳಂದು ಸಹ ತೆರೆದಿರುತ್ತದೆ