Wednesday, August 4, 2010


ವ್ಯಕ್ತಿತ್ವ ರೂಪಿಸುವಲ್ಲಿ ವಿಶ್ವಕ್ಕೆ ಆದರ್ಶ ವಿವೇಕನಂದ
ಚಿಕ್ಕನಾಯಕನಹಳ್ಳಿ,ಆ.04: ಗುರುವೃಂದಕ್ಕೆ ಆದರ್ಶವಾಗಿ ಲೋಕದ ಗುರು ಶಿಷ್ಯ ಸಂಬಂಧಕ್ಕೆ ಮಾದರಿ ಎನ್ನುವಂತೆ ದಾರಿ ತೋರಿದ ಮಹಾನ್ ಚೇತನ, ಸಂತ, ಖುಷಿ, ಯೋಗಿ ಭಾರತದ ಭವಿಷ್ಯವನ್ನು ಬೆಳಗಿಸಿದ ಮಹಾನ್ ಗುರು, ಸ್ವಾಮಿ ವಿವೇಕಾನಂದ ಎಂದು ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ 'ಗುರುಚಿಂತನ' ಪರಿಪೂರ್ಣ ಶಿಕ್ಷಣಕ್ಕಾಗಿ ಶಿಕ್ಷಕರ ಸಮ್ಮೇಳನ-40, ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಬ್ರಹ್ಮ, ವಿಷ್ಣು, ಮಹೇಶ್ವರರು ಭಕ್ತರನ್ನು ಹೊಂದಿದ್ದರೆ, ಸ್ವಾಮಿ ವಿವೇಕಾನಂದರು ಪ್ರಪಂಚದಲ್ಲೆಲ್ಲ ತನ್ನ ಶಿಷ್ಯರನ್ನು ಹೊಂದಿದ ಮಹಾನ್ ಸಂತ, ತನ್ನ ಶಿಷ್ಯರನ್ನು ಸಮಾನ ರೀತಿಯಲ್ಲಿ ಕಾಣುತ್ತಾ ಅವರ ಏಳಿಗೆಯನ್ನು ತನ್ನ ಏಳಿಗೆ ಎಂದು ಭಾವಿಸಿದ ವ್ಯಕ್ತಿತ್ವ ಅವರು, ಸ್ವಾಮಿಗಳ ಆದರ್ಶದಿಂದಲೇ ಅವರ ಅನುಯಾಯಿಗಳಾಗಿರುವುದು ಎಂದರು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲಿಸಿ ವಿದ್ಯಾಥರ್ಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದಾಗ, ಶಿಕ್ಷಕರ ಆದರ್ಶ ಶಿಷ್ಯರಲ್ಲೂ ಪ್ರಭಾವ ಬೀರಿ ವಿದ್ಯೆ ಕಲಿಸಿದ ಗುರುಗಳಿಗೆ ತಮ್ಮ ಮನಸ್ಸಿನಲ್ಲಿ ಉನ್ನತಮಟ್ಟದ ಸ್ಥಾನಕೊಡುತ್ತಾರೆ, ಮುಂದಿನ ಪೀಳಿಗೆಯವರಿಗೆ ಅವರೂ ಸಹ ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವವನ್ನು ಹೊಂದಿದವರಾಗುತ್ತಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಮಾನವ ಸೇವೆ ಅಮೂಲ್ಯವಾದದ್ದು, ಸೇವೆ ಅಗತ್ಯ ಇದ್ದವರಿಗೆ ಇಲ್ಲದವರು ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಿದರೆ ಸಮಾಜದ ಋಣವನ್ನು ಕಿಂಚಿತ್ತಾದರೂ ತೀರಿಸಿದಂತಾಗುತ್ತದೆ ಎಂದ ಅವರು, ವಿಶ್ವದ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿದೆ ಅದು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಹೇಗೆ ಬೆಳಸಿಕೊಳ್ಳಬೇಕೆಂದು ಹೇಳಿಕೊಟ್ಟ ಗುರು, ಶಿಕ್ಷಕರು ವಿವೇಕಾನಂದರಂತೆ ವಿದ್ಯಾಥರ್ಿಗಳಲ್ಲಿ ಉತ್ತಮ ಆದರ್ಶ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ಶಿಕ್ಷಕ ವೃತ್ತಿಗೆ ಅಮೋಘವಾದ ಸೇವೆ ಮಾಡಬೇಕು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಮಕ್ಕಳಿಗೆ ಜ್ಞಾನದ ಹಸಿವನ್ನು ಶಿಕ್ಷಕರು ಹೋಗಲಾಡಿಸಬೇಕು ಮತ್ತು ಸಮಾಜದಲ್ಲಿ ನಾನು ಎಂಬ ಗರ್ವ ಹೋಗಿ ಎಲ್ಲರಿಗಾಗಿ ನಾವು ಎಂದು ಭಾವಿಸಿ ಆಧ್ಯಾತ್ಮಿಕತೆಯನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮಾತೆ ಚೈತನ್ಯಮಯೀ, ಹಂಪಿ ವಿಶ್ವವಿದ್ಯಾಲಯ ವಿಜ್ಞಾನ ಸಂಗಾತಿ ಸಂಪಾದಕ ಸುರೇಶ್ಕುಲಕಣರ್ಿ, ರಮೇಶ್ಉಮಾರಾಣಿ, ಚಿಕ್ಕನಾಯಕನಹಳ್ಳಿ ಮೂಲದ ಗೆಳೆಯರ ಒಕ್ಕೂಟ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಸಪ್ತಮಿ ಟ್ರಸ್ಟ್ ಅಧ್ಯಕ್ಷ ಆನಂದ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸರ್ವಮಂಗಳ ಪ್ರಾಥರ್ಿಸಿದರು. ಸಿ.ಎಂ.ಹೊಸೂರಪ್ಪ ಸ್ವಾಗತಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ, ಷಡಾಕ್ಷರಿ ತರಬೇನಹಳ್ಳಿ ವಂದಿಸಿದರು.