Monday, July 4, 2011ವಿಕಲನ ಚೇತನರಿಗೆ ಆತ್ಮ ಸ್ಥೈರ್ಯ ವಜ್ರಾಯುಧವಿದ್ದಂತೆ
ಚಿಕ್ಕನಾಯಕನಹಳ್ಳಿ,ಜು.04 : ವಿಕಚೇತನರು ಸಕರ್ಾರ ಕೊಡುವೆ ಸವಲತ್ತುಗಳನ್ನು ಪಡೆದು ಆತ್ಮ ಸ್ಥೈರ್ಯದಿಂದ ಜೀವನ ನಡೆಸುವಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ನಡೆದ ವಿಕಲ ಚೇತನರಿಗೆ ಪುರಸಭೆಯಲ್ಲಿ ಶೇ 3% ರ ಅನುದಾನದಲ್ಲಿ ಸಹಾಯದ ಚಕ್ ವಿತರಿಸಿ ಮಾತನಾಡಿದರು, ವಿಕಲ ಚೇತನರು ತಮ್ಮ ಹಿಂಜರಿತವನ್ನು ಬೆಳಸಿಕೊಳ್ಳದೆ ಆತ್ಮ ಸ್ಥೈರ್ಯದಿಂದ ಮುನ್ನಗಿದರೆ ಅದೇ ಅವರಿಗೆ ಪ್ರಮುಖ ಆಯುಧವಿದಂತೆ
ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಮಾತನಾಡಿ, ವಿಕಲ ಚೇತನರನ್ನು ಪೋಷಕರು ತಾರತಮ್ಯ ಮಾಡದೇ ಆತ್ಮ ಸ್ಥೈರ್ಯ ತುಂಬಬೇಕಾಗಿದೆ ಎಂದರು.
ಪುರಸಭೆ ಶೇ3% ರ ನಿಧಿಯಲ್ಲಿ 67 ಜನ ವಿಕಲ ಚೇತನರಿಗೆ 750 ರೂ ನಂತೆ ಚಕ್ ವಿತರಿಸಿ ಮಾತನಾಡಿ, ವಿಕಲ ಚೇತನರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸಕರ್ಾರ ಪುರಸಭೆಗೆ ಬಿಡುಗಡೆ ಮಾಡುವ ಶೇ 3% ರ ಅನುದಾನವನ್ನು ಶೇ 6%ರನ್ನು ಹಟಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದ ಉಪಾಧ್ಯಕ್ಷ ಮೈನ್ಸ್ ರವಿ, ಕಾಂಗ್ರೆಸ್ ಪಕ್ಷದ ನಾಯಕಿ ರೇಣುಕಾ ಗುರುಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಅಂಗವಿಕಲರ ಸಂಘದ ಸಂಚಾಲಕಿ ಶಾಂತಮ್ಮ ಮುಂತಾದವರು ಉಪಸ್ಮಿತರಿದ್ದರು.
ಮೂಲಭೂತ ಸೌಕರ್ಯಗಳಿಲ್ಲದೆ ಕಾಲೇಜ್ನ ಅಭಿವೃದ್ದಿಗೆ ಸಕರ್ಾರ ಗಮನ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಚಿಕ್ಕನಾಯಕನಹಳ್ಳಿ,ಜು.04 : ತಾಲ್ಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕರ ಕೊರತೆ, ವಿಜ್ಞಾನ ಪದವಿ ಪ್ರಾರಂಭಿಸುವುದು, ಸುಸಜ್ಜಿತ ಗ್ರಂಥಾಲಯ ನಿಮರ್ಾಣ ಮಾಡುವುದು ಮತ್ತು ಕಾಲೇಜಿನ ಕಾಂಪೌಂಡ್ ನಿಮರ್ಾಣ ಕಾರ್ಯವನ್ನು ಶೀಘ್ರವಾಗಿ ಆದ್ಯತೆ ಮೇರೆಗೆ ಈಡೇರಿಸಬೇಕೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಒತ್ತಾಯಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲೇಜಿನ ನ್ಯೂನತೆಗಳಿಂದ ಕಾಲೇಜಿನ 650 ವಿದ್ಯಾಥರ್ಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯಲಾಗುತ್ತಿಲ್ಲ. ಕಾಲೇಜಿನಲ್ಲಿೆ ಕೇವಲ 6 ಮಂದಿ ಖಾಯಂ ಉಪನ್ಯಾಸಕರಿದ್ದು, ಗ್ರಂಥಪಾಲಕರು, ದೈಹಿಕ ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ದಜರ್ೆ ಸಹಾಯಕರು ಒಬ್ಬರೂ ಇರದೇ ಅನೇಕ ವರ್ಷಗಳಿಂದ ಎಲ್ಲಾ ಹುದ್ದೆಗಳು ಖಾಲಿ ಇದೆ, ಕಾಲೇಜಿಗೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ 8 ಹುದ್ದೆ, ರಾಜ್ಯ ಶಾಸ್ತ್ರ ಉಪನ್ಯಾಸಕರ 2 ಹುದ್ದೆ, ಸಮಾಜಶಾಸ್ರ್ರ 1, ಕಂಪ್ಯೂಟರ್ ಉಪನ್ಯಾಸಕರ 1, ದೈಹಿಕ ನಿದರ್ೇಶಕರ 1, ಗ್ರಂಥಪಾಲಕರು 1, ಸಮಾಜಕಾರ್ಯ ಉಪನ್ಯಾಸಕರ 4, ಪ್ರಥಮ ದಜರ್ೆ ಸಹಾಯಕರ 1, ದ್ವಿತೀಯ ದಜರ್ೆ ಸಹಾಯಕರ 4, ಡಿ ದಜರ್ೆ ನೌಕರರ 3 ಹುದ್ದೆಗಳು ಖಾಲಿ ಇದೆ ಅಲ್ಲದೆ ಬಿ.ಎ, ಬಿ.ಕಾಂ, ಬಿ.ಬಿ.ಎಂ. ಬಿ.ಎಸ್.ಡಬ್ಲ್ಯೂ ಪದವಿಗಳ ತರಗತಿಗಳಿಗೆ 18 ಸೆಕ್ಷನ್ಗಳಿಗೆ 8 ಕೊಠಡಿಗಳಿದ್ದು 10 ಕೊಠಡಿಗಳ ಕೊರತೆಯಿದೆ ಎಂದ ಅವರು ವಿಜ್ಞಾನ ವಿಭಾಗ ತೆರೆಯಲು ಅಗತ್ಯ ಪರಿಕರ ಸೌಲಭ್ಯಗಳೊಂದಿಗೆ ಮಂಜೂರಾತಿ ಮತ್ತು ಕಾಲೇಜಿನ 5 ಎಕರೆ ವಿಶಾಲವಾದ ಭೂಮಿಗೆ 500 ಗಿಡಗಳನ್ನು ಬೆಟ್ಟು ಬೆಳೆಸುತ್ತಿದ್ದು ಇದರ ರಕ್ಷಣೆಗೆ ಕಾಂಪೌಂಡ್ ನಿಮರ್ಾಣ ಹಾಗೂ ಗ್ರಾಮಾಂತರ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ ಸೌಲಭ್ಯದೊಂದಿಗೆ ಸುಸಜ್ಜಿತವಾದ ಗ್ರಂಥಾಲಯ ನಿಮರ್ಾಣ ಮಾಡಬೇಕಾಗಿದೆ, ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ಉನ್ನತ ಶಿಕ್ಷಣ ಸಚಿವರ ಮನೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಎಚ್.ಬಿ.ಎಸ್. ನಾರಾಯಣಗೌಡ ಮಾತನಾಡಿ ರಾಜ್ಯ ಸಕರ್ಾರ, ಸಕರ್ಾರಿ ಕಾಲೇಜಿನ ಬಗ್ಗೆ ಬೇಜಾವಬ್ದಾರಿ ರೀತಿಯ ಧೋರಣೆ ತೋರಿರುವುದರಿಂದಲೇ ವಿದ್ಯಾಥರ್ಿಗಳು ಖಾಸಗಿ ಕಾಲೇಜಿನತ್ತ ಮುಂದಾಗುತ್ತಿದೆ, ಕಾಲೇಜಿಗೆ ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಶೀಘ್ರವೇ ಬಗೆಹರಿಸಿದರೆ ಉತ್ತಮ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯದ ಕೊರತೆಯಿಂದ ಬೇರೆ ಬೇರೆ ತಾಲ್ಲೂಕಿನ ಕಾಲೇಜಿಗೆ ಹೋಗುತ್ತಿದ್ದಾರೆ, ಹಳ್ಳಿ ಕಡೆಯಿಂದ ಬರುವ ಮಕ್ಕಳಿಗೆ ಸರಿಯಾಗಿ ಸಂಚಾರದ ವ್ಯವಸ್ಥೆಯೂ ಸರಿಯಾಗಿ ಇರದೆ ಪರದಾಡುತ್ತಿದ್ದಾರೆ ಇದನ್ನು ತಪ್ಪಿಸಲು ತಾಲ್ಲೂಕನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಕರ್ಾರ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಮುರುಡಯ್ಯ, ಕಾರ್ಯದಶರ್ಿ ನಾಗೇಶಯ್ಯ, ಕರವೇ(ಪ್ರವೀಣ್ಬಣ) ಅಧ್ಯಕ್ಷ ನಿಂಗರಾಜು, ವಾಸು, ಗುರುಸಿದ್ದಯ್ಯ, ಕರಡಿಶಿವಣ್ಣ, ರಾಮಕೃಷ್ಣಯ್ಯ, ಮಹಮದ್ ಸರೋಜುದ್ದೀನ್ ಉಪಸ್ಥಿತರಿದ್ದರು.