Friday, December 23, 2011




ಅಪರೂಪದ 10 ಗ್ರಾಂ ತೂಕದ ಮೊಟ್ಟೆ ರೇವಮ್ಮಜ್ಜಿ ಮನೆಯಲ್ಲಿ
ಚಿಕ್ಕನಾಯಕನಹಳ್ಳಿ,ಡಿ.23 : ನಾಟಿಕೋಳಿಯೊಂದು ಇಟ್ಟಿರುವ  ಮೊಟ್ಟೆಯು ಕೇವಲ 10 ಗ್ರಾಂ.ನಷ್ಟಿದ್ದು ಈ ಮೊಟ್ಟೆ ಅಪರೂಪವಾಗಿದೆ ಎಂದು ಪಶು ಇಲಾಖೆಯ ವೈದ್ಯಾಧಿಕಾರಿ ಲತಾಮಣಿ ತಿಳಿಸಿದ್ದಾರೆ.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯ ರೇವಮ್ಮಜ್ಜಿಯು ಸಾಕಿರುವ ಕೋಳಿಯು ಈ ಮೊಟ್ಟೆ ಇಟ್ಟಿದೆ, ಸಾಧಾರಣ  ಫಾರಂ ಕೋಳಿ ಮೊಟ್ಟೆಯ ತೂಕ 55 ರಿಂದ 60 ಗ್ರಾಂ ಇರುತ್ತದೆ, ನಾಟಿ ಕೋಳಿ  ಮೊಟ್ಟೆ ತೂಕ 45 ರಿಂದ 50 ಗ್ರಾಂ ಇರುತ್ತದೆ ಎಂದು ತಿಳಿಸುವ  ಪಶುವೈದ್ಯಾಧಿಕಾರಿ,  50 ಗ್ರಾಂಗಿಂತ ಹೆಚ್ಚು ತೂಕವಿರುವ  ಮೊಟ್ಟೆಯನ್ನು ಜಂಬೋ ಎಗ್ಸ್ ಎಂತಲೂ, ಕಡಿಮೆ ತೂಕವಿರುವ ಮೊಟ್ಟೆಯನ್ನು ಪಿ.ವಿ.ಎಗ್ಸ್ ಎಂತಲೂ ವೈದ್ಯಕೀಯ ಭಾಷೆಯಲ್ಲಿ ಕರೆಯುವುದುಂಟು, ಆದರೆ ಕೇವಲ 10 ಗ್ರಾಂ ಇರುವ ಮೊಟ್ಟೆಯನ್ನು ನಾವು ನೋಡುತ್ತಿರುವುದು ಇದೇ ಪ್ರಥಮವಾಗಿದೆ  ಎಂದಿದ್ದಾರೆ. 
ಪಶು ವೈದ್ಯಶಾಸ್ತ್ರದಲ್ಲೂ ಇಷ್ಟು ಕಡಿಮೆ ತೂಕವಿರುವ ಆರೋಗ್ಯವಂತ ಮೊಟ್ಟೆಯನ್ನು ಕಂಡಿಲ್ಲವೆನ್ನುವ ವೈದ್ಯರಿದ್ದಾರೆ. ಇಂಟರ್ನೆಟ್ನಲ್ಲೂ ಈ ಬಗ್ಗೆ ತಡಕಾಡಿದಾಗ 15 ಗ್ರಾಂ ತೂಕವಿರುವ ಮೊಟ್ಟೆ ಜಪಾನಿನಲ್ಲಿ ದೊರೆತಿದೆಯೇ ಹೊರತು, 10 ಗ್ರಾಂ ನಷ್ಟು ಕಡಿಮೆ ತೂಕವಿರುವ ಮೊಟ್ಟೆ ಇಲ್ಲವೆಂಬುದು ದೃಡಪಟ್ಟಿದೆ.
ಸುಮಾರು 50 ವರ್ಷಗಳಿಂದಲೂ ಕೋಳಿ ಸಾಕುವುದನ್ನು ತನ್ನ ಹವ್ಯಾಸವನ್ನು ಮಾಡಿಕೊಂಡಿರುವ ರೇವಮ್ಮಜ್ಜಿ, ಎಂದೂ ಕೋಳಿಯನ್ನು ದುಡ್ಡಿಗೆ ಮಾರುವುದಿಲ್ಲ, ತನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳು ತಿನ್ನಲಿ ಎನ್ನುವ ಮಾತೃ ಹೃದಯದ ಈ ಅಜ್ಜಿ, ಮೊಟ್ಟೆಯನ್ನೂ ಎಂದೂ ಮಾರುವುದಿಲ್ಲ ಎಂದು ಅವರ ಮಗ ದೃಢಪಡಿಸಿದ್ದಾರೆ.
ರೇವಮ್ಮಜ್ಜಿ ಹೇಳುವ ಪ್ರಕಾರ ನನ್ನ 75 ವರ್ಷಗಳ ಇತಿಹಾಸದಲ್ಲಿ  ಇಷ್ಟು ಸಣ್ಣ ಮೊಟ್ಟೆಯನ್ನು  ಕಂಡಿಲ್ಲ ಎನ್ನುತ್ತಾರೆ. ಈ ವಿಷಯ ತಿಳಿದಿರುವ ಪಟ್ಟಣದ ಕೆಲವು ಜನರು ಈ ಮೊಟ್ಟೆಯನ್ನು ನೋಡಿ ಆಕಷರ್ಿತರಾಗಿದ್ದಾರೆ.

ಮೋಟ್ರು, ವೈರು ಕದ್ದವರ ಸೆರೆ
ಚಿಕ್ಕನಾಯಕನಹಳ್ಳಿ,ಡಿ.23 : ಸುಮಾರು 39ಸಾವಿರ ರೂಗಳ ಕೇಬಲ್ವೈರು, ಅಲ್ಯೂಮಿನಿಯಂ ಮೈನ್ಸ್ ವೈರು, ಸ್ಟಾರ್ಟರ್, 2ಸಬ್ಮಸರ್ಿಬಲ್ ಮೋಟಾರು, 2 ಪಂಪ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಚಿ.ನಾ.ಹಳ್ಳಿ ಪಿ.ಎಸೈ. ಚಿದಾನಂದಮೂತರ್ಿ ನೇತೃತ್ವದ ತಂಡ  ಸೆರೆಹಿಡಿದಿದ್ದಾರೆ.
ತಾಲ್ಲೂಕಿನ ಅರಳೀಕೆರೆ ಬಳಿ ಆಗಸ್ಟ್ 30ರಂದು ರಾತ್ರಿ ಕಳ್ಳತನವಾಗಿದ್ದು ಕಲಂ 379, 411ರ ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಯಶಸ್ವಿಕಾರ್ಯಚರಣೆಯೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಅರಳೀಕೆರೆಯವರೇ ಆಗಿದ್ದು ಸಿ.ಎಸ್.ಅಶೋಕ್ಕುಮಾರ್(29), ಬಸವರಾಜು(35), ನರಸಿಂಹಯ್ಯ(40), ಉಮೇಶ(27) ಎಂದು ಗುರುತಿಸಲಾಗಿದೆ. ಆನಂದ್ ಹಾಗೂ ಲಕ್ಷ್ಮಯ್ಯ ಎಂಬುವವರು ತಲೆ ಮರೆಸಿಕೊಂಡಿರುತ್ತಾರೆ.
 ಚಿ.ನಾ.ಹಳ್ಳಿ ಪೋಲಿಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಚಿ.ನಾ.ಹಳ್ಳಿಯಲ್ಲಿ ಚಿಲ್ಲರೆ ವ್ಯಾಪರದ ಬಗ್ಗೆ ಉಪನ್ಯಾಸ
ಚಿಕ್ಕನಾಯಕನಹಳ್ಳಿ.ಡಿ.23: ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಬೃಹತ್ ಕಂಪನಿಗಳ ಪ್ರವೇಶದಿಂದಾಗುವ ಅಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಇದೇ 24ರ ಶನಿವಾರ ಸಂಜೆ6.30ಕ್ಕೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ನ ತಾ.ಸಂಚಾಲಕ ಶ್ರೀನಿವಾಸಮೂತರ್ಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ನ ರಾಜ್ಯ ಸಂಘಟನಾ ಕಾರ್ಯದಶರ್ಿ ಕೆ.ಜಗದೀಶ್ ಮುಖ್ಯ ಭಾಷಣಮಾಡಲಿದ್ದಾರೆ.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷರಾದ ಕೆ.ಆರ್.ಇಂದ್ರಕುಮಾರ್ ವಹಿಸುವರು. ವರ್ತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.