Tuesday, May 5, 2015


ಕಟ್ಟಡ ಕಾಮರ್ಿಕರ ನೂತನ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ : ಕಟ್ಟಡ ಕಾಮರ್ಿಕರ ಬಗ್ಗೆ ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ, ಜಿ.ಪಂ.ಸಭೆಯಲ್ಲಾಗಲಿ, ಯಾರು ಪ್ರಸ್ತಾಪಿಸದೇ ಇರುವುದು ದುರದೃಷ್ಠಕರ ಎಂದು ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ತುಮಕೂರು ಜಿಲ್ಲಾ ಖಜಾಂಚಿ ಅಶ್ವತ್ಥ್ನಾರಾಯಣ್ ವಿಷಾಧಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದ ಬಳಿ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ನೂತನ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಧಾನಸಭಾ ಸದಸ್ಯರು ತಮ್ಮ ಸಂಬಳ ಸಾರಿಗೆ ವ್ಯವಸ್ಥೆಗೆ 8 ನಿಮಿಷಗಳಲ್ಲಿ ಹೆಚ್ಚಿಸಿಕೊಂಡರು. ಆದರೆ ಅಸಂಘಟಿತ ಕಾಮರ್ಿಕರ ಬಗ್ಗೆ ಗಮನ ಹರಿಸಲಿಲ್ಲ ಎಂದು ವಿಷಾಧಿಸಿದ ಅವರು ಸಕರ್ಾರ ಪ್ರತಿ ಕಟ್ಟಡ ಕಟ್ಟುವವ ಶೇ.1ರಷ್ಟು ಸೆಸ್ ವಸೂಲಿ ಮಾಡುತ್ತಿದ್ದು, ಈ ಹಣ 3280 ಕೋಟಿ ರೂಪಾಯಿಗಳಾಷ್ಟಾಗಿದೆ ಆದರೆ ಕಾಮರ್ಿಕರಿಗೆ ಮಾತ್ರ ಸರಿಯಾದ ಸವಲತ್ತುಗಳು ನೀಡುತ್ತಿಲ್ಲ ಎಂದ ಅವರು ಕೇಂದ್ರ ಸಕರ್ಾರ ಬಂಡವಾಳ ಶಾಹಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆಯನ್ನು ಮನ್ನ ಮಾಡುತ್ತಿದ್ದಾರೆ, ಈಗಿನ ಕೇಂದ್ರ ಸಕರ್ಾರ ಅಭಿವೃದ್ದಿಯ ಹೆಸರಿನಲ್ಲಿ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆಂದು ಹೇಳಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್ ಮಾತನಾಡಿ, ದೇಶದ ಕಟ್ಟಡದ ಕಾಮರ್ಿಕರು  5ಕೋಟಿ ಜನರಿದ್ದು ರಾಜ್ಯದಲ್ಲಿ 25ಲಕ್ಷ ಕಾಮರ್ಿಕರಿದ್ದಾರೆ, ಸಂಸತ್ತಿನ ಪಾಲರ್ಿಮೆಂಟ್, ವಿಧಾನಸೌದ ಸಕರ್ಾರಿ ಕಛೇರಿಗಳು ಸೇರಿದ್ದು ನಾನಾ ಕಟ್ಟಡಗಳು ಕಾಮರ್ಿಕರೇ ಕಟ್ಟಿದ್ದಾರೆ ಆದರೆ ಅವರಿಗೆ ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ನೌಕರರಿಗೆ ಕಂಪನಿಗಳ ಕಾಮರ್ಿಕರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು ಅಸಂಘಟಿತ ಕಾಮರ್ಿಕರಿಗೆ ಸವಲತ್ತು ನೀಡುತ್ತಿಲ್ಲ ಎಂದ ಅವರು ರಾಜ್ಯದಲ್ಲಿ 7.45ಲಕ್ಷ ಕಾಮರ್ಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಕಾಮರ್ಿಕರೂ ಕಾಮರ್ಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಸಕರ್ಾರದ ನಾನಾ ಸವಲತ್ತುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಮರ್ಿಕರು ಮೋಟಾರ್ ಬೈಕ್ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.





ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡು ನೂರವಸಂತಗಳು 
ಚಿಕ್ಕನಾಯಕನಹಳ್ಳಿ : ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೆ ನೂರು ವಸಂತಗಳು ತುಂಬುತ್ತಿರುವುದರಲ್ಲಿ ಹಲವರ ಶ್ರಮವಿದೆ ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ನೂರು ವಸಂತಗಳು ತುಂಬಿದ ಹಿನ್ನಲೆಯಲ್ಲಿ ಪಟ್ಟಣದ ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಆರಂಭವಾಯಿತು ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕನ್ನಡ ಮನಸ್ಸುಗಳನ್ನು ಕಟ್ಟುತ್ತಿದೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ಕನ್ನಡ ಮನಸ್ಸುಗಳು ಹಾಗೂ ಪಟ್ಟಣದ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ನ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ  ಕಾರ್ಯಕ್ರಮ ಹಮ್ಮಿಕೊಂಡಿರುವುದು ಕನ್ನಡದ ಬಗ್ಗೆ ಇರುವ ಅಭಿಮಾನವಾಗಿದೆ, ಕೇಂದ್ರ ಸಕರ್ಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರಲ್ಲದೆ ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಹಾಗೂ ಕನ್ನಡ ಕಾರ್ಯಕ್ಕೆ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಜಯಲಕ್ಷ್ಮಮ್ಮ, ಸಿದ್ದಲಿಂಗಮ್ಮ, ಜಯರಾಮ್, ಸಿ.ಡಿ.ಚಂದ್ರಶೇಖರ್, ಪಾರ್ಥಸಾರಥಿರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ದಲಿತ ಸಂಘರ್ಷ ಸಮಿತಿ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಯಕನರ್ಾಟಕ ವೇದಿಕೆ, ಭೋದಿವೃಕ್ಷ, ಚಿಕ್ಕನಾಯಕ ಯೂತ್ ಕ್ಲಬ್, ಸ್ನೇಹಕೂಟ, ನಡೆನುಡಿ, ಕುಂಚಾಂಕುರ ಕಲಾಸಂಘ, ಭುವನೇಶ್ವರಿ ಸಂಘ, ಆಟೋಚಾಲಕರ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಕನ್ನಡ ಬಾವುಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಿದ್ದುಜಿ.ಕೆರೆ, ನಿರೂಪ್ರಾವತ್, ಮಂಜುನಾಥ್, ರವಿಕುಮಾರ್, ಜಯಮ್ಮ, ಗೋವಿಂದರಾಜು, ಲಿಂಗದೇವರು, ಬಸವರಾಜು, ನಂಜುಂಡಪ್ಪ, ಸುಪ್ರಿಂಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.




ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ  ಎಂಟು ಜನ ಅವಿರೋಧವಾಗಿ ಆಯ್ಕೆ ಇನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಮೇ.5: ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ 10 ಜನ ಚುನಾಯಿತ ನಿದರ್ೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದು ಇದರಲ್ಲಿ ಎಂಟು ಜನ ಅವಿರೋಧವಾಗಿ ಆಯ್ಕೆಯಾದರೆ ಎನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿದ್ದಾರೆ.
ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್)ಕ್ಕೆ ಎ ವರ್ಗದಿಂದ ಅವಿರೋಧವಾಗಿ ಆಯ್ಕೆಯಾದವರೆಂದರೆ, ಷಡಾಕ್ಷರಿ ಮಾಳಿಗೆಹಳ್ಳಿ, ಜಯದೇವಮೂತರ್ಿ ತೀರ್ಥಪುರ, ಲಿಂಗದರಾಜು ಹಂದನಕೆರೆ, ಜಯದೇವಪ್ಪ ಗಾಣಧಾಳು, ವಕೀಲ ಎನ್.ಎನ್.ಶ್ರೀಧರ್ ವಿವಿಧ ವಿ.ಎಸ್.ಎಸ್.ಎನ್.ಸೊಸೈಟಿಗಳನ್ನು ಪ್ರತಿನಿಧಿಸಿದ್ದಾರೆ, ಮೀಸಲು ಕ್ಷೇತ್ರದಿಂದ ಶಶಿಶೇಖರ್, ಮಹಿಳಾ ಕ್ಷೇತ್ರದಿಂದ ಮಂಜುಳ ನಾಗರಾಜ್ ಗೋಪಾಲನಹಳ್ಳಿ, ಕಲ್ಪನಾ ರಾಮಲಿಂಗಯ್ಯ ಮಾರಸಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ.ಸಿ.ಎಂ.ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಎರಡು ಸ್ಥಾನಕ್ಕೆ ಎರಡು ಸಾವಿರ ಷೇರುದಾರರು ಮತಚಲಾಯಿಸಬೇಕಿದೆ.
ಟಿ.ಎ.ಪಿ.ಸಿ.ಎಂ.ಎಸ್.ಗೆ ಒಟ್ಟು 13 ಜನ ನಿದರ್ೇಶಕರಿದ್ದು, ಇದರಲ್ಲಿ 10 ಜನ ಚುನಾವಣೆ ಮೂಲಕ ಆಯ್ಕೆಯಾದರೆ ಇಬ್ಬರು ಅಧಿಕಾರಿ ವರ್ಗದಿಂದ ನಿದರ್ೇಶಕರಾಗಿ ನಿಯೋಜನೆಗೊಳ್ಳುವರು, ಒಬ್ಬರು ಸಕರ್ಾರದಿಂದ ನೇಮಕಗೊಳ್ಳುವರು.




ಚಿಕ್ಕನಾಯಕನಹಳ್ಳಿ ಬಿಜೆಪಿ ಪಕ್ಷದ ವತಿಯಿಂದ ನೇಪಾಳ ಸಂತ್ರಸ್ಥರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.