Friday, August 8, 2014ಮಗುವಿಗೆ ತಾಯಿಯ ಹಾಲು ಮುಖ್ಯ
ಚಿಕ್ಕನಾಯಕನಹಳ್ಳಿ,: ಮಗುವಿಗೆ ತಾಯಿಯ ಹಾಲು ಹೆಚ್ಚಾಗಿ ಕುಡಿಸಿದಷ್ಟು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು, ಕ್ಷಯ, ಟಿ.ಬಿ. ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಬರುವುದಿಲ್ಲ ಎಂದು ಡಾ.ಚಂದನ ಹೇಳಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖಾ, ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ, ಶಿಶು ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಗಸ್ಟ್ ಮೊದಲ ವಾರದಲ್ಲಿ ವಿಶ್ವ ಸ್ತನ್ಯಪಾನ ದಿನಾಚಾರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ, ತಾಯಿಯ ಹಾಲು ಅಮೃತವಿದ್ದಂತೆ ಇದು ದೇವರ ಕೊಡುಗೆ  ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾದ ಪೋಷ್ಠಿಕಾಂಶವಿದ್ದು ಮಗು ತಾಯಿಯ ಹಾಲು ಕುಡಿದಷ್ಟು ಆರೋಗ್ಯವಾಗಿರುತ್ತದೆ, ಈ ಹಾಲಿನಲ್ಲಿ ಮಗು ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಕಡಿಮೆಯಾಗುವುದು ಎಂಬ ಕಲ್ಪನೆ ನಮ್ಮ ನಗರ ಪ್ರದೇಶದ ತಾಯಂದಿರಲ್ಲಿದೆ, ಇದು ತಪ್ಪು ಕಲ್ಪನೆಯಾಗಿದೆ ಎಂದ ಅವರು ಮಗು ತಾಯಿಯ ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಹೆಚ್ಚಾಗುತ್ತದೆ ಇದರಿಂದ ಗಭರ್ಿಣಿ ಸ್ತ್ರೀಯರು ಹೆಚ್ಚು ಹೆಚ್ಚಾಗಿ ಹಾಲು ಪಡೆಯಲು ದ್ವಿದಳ ಧಾನ್ಯಗಳು, ಗೋಧಿ ಪಾಯಸ, ಸೊಪ್ಪು, ಸಬಾಕ್ಸಿ ಸೊಪ್ಪು ಕಡಲೆ ಕಾಯಿ, ನುಗ್ಗೆಕಾಯಿ ಮುಂತಾದ ಆಹಾರ ಸೇವಿಸುವಂತೆ ಸಲೆಹ ನೀಡಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ತಾಯಿಯ ಎದೆ ಹಾಲು ಮಗುವಿಗೆ ದಿವ್ಯ ಔಷಧಿ, ಮಗುವಿನ ದೈಹಿಕ ಮಾನಸಿಕ ಸದೃಢವಾಗಲು ಮಗುವಿಗೆ ತಾಯಿಯ ಹಾಲು ನೀಡಿದರೆ ಮಗು ಅನಾರೋಗ್ಯಕ್ಕೆ ತುತ್ತಾಗದೆ ಆರೋಗ್ಯವಂತವಾಗಿರುತ್ತದೆ, ಇಂದಿನ ವಿದ್ಯಾವಂತ ಹೆಣ್ಣು ಮಕ್ಕಳು ಮಗುವಿಗೆ ಹಾಲುನ್ನು ಕುಡಿಸಲು ಮೀನಾಮೇಶ ಎಣಿಸುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ ಇದನ್ನು ಕಾರ್ಯಕ್ರಮದಲ್ಲಿ ಅರಿತವರು ತಮ್ಮ ಅಕ್ಕಪಕ್ಕದ ಮನೆಯವರಿಗೆ ತಿಳಿ ಹೇಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಅನೀಸ್ಖೈಸರ್, ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಉಪಾಧ್ಯಕ್ಷ ವಸಂತಯ್ಯ, ಎಸಿಡಿಪಿಓ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಜಾನುವಾರು ತಪಾಸಣಾ ಶಿಬಿರ 
ಚಿಕ್ಕನಾಯಕನಹಳ್ಳಿ,: ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ ಉಚಿತ ಜಾನುವಾರು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಏಪಡರ್ಿಸಲಾಗಿತ್ತು.
ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಏರ್ಪಡಿಸಿದ್ದ  ಈ ಶಿಬಿರದಲ್ಲಿ  ಅರಳಿಕೆರೆ ಗ್ರಾಮದ ರ್ಯತರಿಗೆ ಜಾನುವಾರುಗಳಿಗೆ ಬರುವ ವಿವಿಧ ರೋಗಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ಶಿಬಿರದಲ್ಲಿ 142 ಜಾನುವಾರುಗಳಿಗೆ ಲಸಿಕೆ ಹಾಕಿ, 450 ಕುರಿ, ಮೇಕೆ ಮತ್ತು ಕರುಗಳಿಗೆ  ಜಂತು ನಿವಾರಕ ಔಷದಿ ಕುಡಿಸಲಾಯಿತು ಮತ್ತು 8 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಶಿಬಿರದಲ್ಲಿ ಪಶು ವೈದ್ಯರಾದ ಡಾ. ಅಜಿತ್ ಮತ್ತು ಪಶು ಪರೀಕ್ಷಕರಾದ ಶಾಂತಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ಹೇಮಾವತಿ ನಾಲೆ ಒಡೆದ ದುಷ್ಕಮರ್ಿಗಳ ವಿರುದ್ದ ಸಿಐಡಿ ತನಿಖೆಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,: ಹೇಮಾವತಿ ನಾಲೆಯನ್ನು ಒಡೆದ ದುಷ್ಕಮರ್ಿಗಳ ವಿರುದ್ದ ಸಿ.ಐ.ಡಿ. ತನಿಖೆಗೆ ಒತ್ತಾಯಿಸಿ ಇದೇ 9ರಂದು(ಇಂದು) ಕೆ.ಬಿ.ಕ್ರಾಸ್ನಲ್ಲಿ ಭಾರಿ ಬಹಿರಂಗ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ತಾಲೂಕಿನ ಎಲ್ಲಾ ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಮನವಿ ಮಾಡಿದ್ದಾರೆ.
ಶನಿವಾರದಂದು ಹಮ್ಮಿಕೊಂಡಿರುವ ಭಾರಿ ಪ್ರತಿಭಟನೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಮುಖರುಗಳು ಭಾಗವಹಿಸಲಿದ್ದು, ಈ ಸಂಧರ್ಭದಲ್ಲಿ ನಾಲೆ ಒಡೆಯುವಂತಹ ದುಷ್ಕೃತ್ಯದಲ್ಲಿ ಹಾಸನ ಜಿಲ್ಲೆಯ ಚೀಫ್ ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಸಹ ಶಾಮೀಲ್ ಆಗಿರುವುದು ಹೊರನೋಟಕ್ಕೆ ಕಂಡು ಬರುತ್ತದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ನಮ್ಮ ಜಿಲ್ಲೆಯ ಜನರ ನೀರಿನ ಭವಣೆ ತಿರಲು ಅನುಕೂಲ ಮಾಡಿಕೊಡಬೇಕು ಹಾಗೂ  ನಾವು ಇಂತಹ ಸಮಯದಲ್ಲಿ  ಸಹನೆಯಿಂದಿದ್ದರೆ ಅದನ್ನು ನಮ್ಮ ಅಸಹಾಯಕತೆ ಎಂದು ತಿಳಿಯುವ ದುಷ್ಕಮರ್ಿಗಳು ತಮ್ಮ ಉಪಠಳವನ್ನು ಅಧಿಕಗೊಳಿಸುವುದರಿಂದ ನಾವು ನಮ್ಮ ಇಚ್ಚಾ ಶಕ್ತಿಯನ್ನು ತೋರ್ಪಡಿಸಲೋಸ್ಕರ ಈ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ ಆದ್ದರಿಂದ ಆಸಕ್ತರೆಲ್ಲರೂ ಭಾಗವಹಿಸಬೇಕೆಂದು ಸಿಂಗದಹಳ್ಳಿ ರಾಜ್ಕುಮಾರ್ ಕೋರಿದ್ದಾರೆ.

ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಧಮೋತ್ಧಾನ ಸಂಸ್ಥೆ
ಚಿಕ್ಕನಾಯಕನಹಳ್ಳಿ,: ಪುರಾತನ ಕಾಲದ ದೇವಸ್ಥಾನ ಹಾಗೂ ಜೀಣೋಧ್ದಾರ ಆಗಬೇಕಿರುವ ದೇವಸ್ಥಾನಗಳಿಗೆ ಸಹಾಯ ಮಾಡುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಧಮರ್ೋತ್ಧಾನ ಟ್ರಸ್ಟ್ ಸ್ಥಾಪಿಸಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಜಿಲ್ಲಾ ಯೋಜನಾಧಿಕಾರಿ ಪಿ.ಕೆ.ಪುರುಷೋತ್ತಮ್ ತಿಳಿಸಿದರು.
ಪಟ್ಟಣದ ಕುರುಬರಹಳ್ಳಿಯಲ್ಲಿ ಅರಿವಿಲಕ್ಕಮ್ಮ ದೇವಾಲಯದ ಜೀಣೋಧ್ದಾರಕ್ಕಾಗಿ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಸಂಸ್ಥೆ ವತಿಯಿಂದ ಎರಡು ಲಕ್ಷ ರೂ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಧಮರ್ೋತ್ಥಾನ ಟ್ರಸ್ಟ್ ವತಿಯಿಂದ ಪ್ರಸಾದದ ರೂಪದಲ್ಲಿ ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಹಣ ನೀಡಲಾಗುತ್ತಿದೆ, ಧಮರ್ೋತ್ಥಾನ ಟ್ರಸ್ಟ್ ದೇವಾಲಯಗಳ ಅಭಿವೃದ್ದಿಗಾಗಿಯೇ ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ್ದಾರೆ. ಸಂಸ್ಥೆ ವತಿಯಿಂದ ಹಣ ನೀಡಿದ ಮೇಲೆ ಅರ್ಧಕ್ಕೆ ನಿಂತಿದ್ದ ದೇವಾಲಯಗಳು ಪೂರ್ಣವಾಗುತ್ತಿರುವ ಬಗ್ಗೆ ತಿಳಿಸಿದರಲ್ಲದೆ ಧರ್ಮಸ್ಥಳ ಸಂಸ್ಥೆ ಆರಂಭವಾಗಿ 32ವರ್ಷವಾಗಿದೆ, ತುಮಕೂರು ಜಿಲ್ಲೆಯಲ್ಲಿ ಆರಂಭವಾಗಿ ಮೂರುವರೆ ವರ್ಷವಾಗಿದ್ದು ಜಿಲ್ಲೆಯಲ್ಲಿ ಸಂಸ್ಥೆ ಅಡಿಯಲ್ಲಿ ಆರಂಭವಾಗಿರುವ ಸಂಘ-ಸಂಸ್ಥೆಗಳಿಗೆ ಒಟ್ಟು 250ಕೋಟಿ ರೂನಷ್ಟು ಸಾಲ ನೀಡಲಾಗಿದೆ ಎಂದರು.
ಧ.ಗ್ರಾ.ಸಂ.ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ ಊರಿನ ದೇವಾಲಯಗಳು ಜೀಣರ್ೋದ್ದಾರವಾದರೆ ಅಲ್ಲಿನ ಜನರು ಆಧ್ಯಾತ್ಮಿಕ ನೆಮ್ಮದಿಯ ಜೊತೆಗೆ ವಿವಿಧ ರೀತಿಯಲ್ಲಿ ಅಭಿವೃದ್ದಿಯಾಗುತ್ತಾರೆ ಎಂಬುದಾಗಿ ತಿಳಿಸಿದರು.
ನಿವೃತ್ತ ಉಪನ್ಯಾಸಕ ದೊಡ್ಡಯ್ಯ ಮಾತನಾಡಿ ಧರ್ಮಸ್ಥಳ ಸಂಸ್ಥೆಯಿಂದ ಹಲವಾರು ಸಂಘ-ಸಂಸ್ಥೆಗಳಿಗೆ, ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯ ದೊರೆಯುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಸ್ಪಂದನ ಪ್ರಗತಿಪರ ಜನಸೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್, ಊರಿನ ಪ್ರಮುಖರಾದ ಸಿದ್ದಯ್ಯ, ಕೆ.ಬಿ.ಲಕ್ಕಣ್ನ ಮುಂತಾದವರು ಉಪಸ್ಥಿತರಿದ್ದರು.ಡಿ.ದೇವರಾಜು ಅರಸು ರವರ ಜನ್ಮದಿನಾಚಾರಣೆಯನ್ನು 
ವಿಜೃಂಭಣೆಯಾಗಿ ಆಚರಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ: ಕನಕದಾಸರ ಜಯಂತಿ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ ರೀತಿಯಲ್ಲೇ ಡಿ.ದೇವರಾಜು ಅರಸು ರವರ 99ನೇ ಜನ್ಮದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯ ಸಭೆ ತೀಮರ್ಾನಿಸಿತು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಡಿ.ದೇವರಾಜು ಅರಸುರವರ ಜನ್ಮದಿನಾಚಾರಣೆ ಆಚರಿಸುವ ಬಗ್ಗೆ ಜನಪ್ರತಿನಿಧಿಗಳ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಅರಸು ಜನಾಂಗದ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ಆಗಸ್ಟ್ 20ರಂದು ಬೆಳಗ್ಗೆ 10.30ಕ್ಕೆ ತಾಲ್ಲೂಕು ಕಛೇರಿಯಿಂದ ಹೊರಟ ವಿವಿಧ ಕಲಾ ತಂಡಗಳ ಮೆರವಣಿಗೆ ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸುವುದು ನಂತರ ಉಪನ್ಯಾಸ, ಸ್ಪಧರ್ೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಪುರಸ್ಕಾರ, ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ಚೆಕ್ಗಳನ್ನು ಫಲಾನುಭವಿಗಳಿಗೆ ನೀಡುವುದು, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಶೇ.91ರಷ್ಟು ಅಂಕ ಪಡೆದ ಹಾಸ್ಟೆಲ್ಗಳಲ್ಲಿ ಓದಿದ ವಿದ್ಯಾಥರ್ಿ, ಹಾಗೂ ದೇವರಾಜ್ ಅರಸ್ರವರಿಗೆ ಬಾಡಿಗಾಡರ್್ ಆಗಿದ್ದ ಮಹಮದ್ಗೌಸ್(ಬೋರ್ವೆಲ್ ಬಾಬು), ಅರಸು ಜನಾಂಗ ರಾಜಯ್ಯನಪಾಳ್ಯದ ನಿವೃತ್ತ ಪ್ರಾಂಶುಪಾಲ ಚಂದ್ರರಾಜಅರಸ್ ಮೂವರಿಗೆ ಸನ್ಮಾನಿಸುವ ಬಗ್ಗೆ ಚಚರ್ಿಸಲಾಯಿತು.
ಕಾರ್ಯಕ್ರಮದ ಉಪನ್ಯಾಸಕ್ಕಾಗಿ ಮೈಸೂರಿನ ಪಿ.ವಿ.ನಾಗರಾಜುಅರಸ್ರವರನ್ನು ಆಹ್ವಾನಿಸುವ ಬಗ್ಗೆ ಅರಸು ಜನಾಂಗದ ಮುಖಂಡ ಗೋಪಾಲರಾಜ್ಅರಸ್ ಸಭೆಗೆ ತಿಳಿಸಿದರು. 
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ.ಕೃಷ್ಣನಾಯ್ಕ್, ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಮಲ್ಲೇಶಪ್ಪ, ಬಿ.ಇಂದಿರಾ, ರೇಣುಕಮ್ಮ, ಬಿ.ಇ.ಓ ಸಾ.ಚಿ.ನಾಗೇಶ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಅರಸು ಜನಾಂಗದ ಅಧ್ಯಕ್ಷ ನಾಗರಾಜ್ಅರಸ್, ಗೋಪಾಲರಾಜ್ಅರಸ್, ದಲಿತ ಮುಖಂಡ ಲಿಂಗದೇವರು, ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.