Thursday, June 28, 2012ಜಾತ್ರೆಯ ಪ್ರಯುಕ್ತ ಫ್ಲಕ್ಸ್ಗಳ ಹಾವಳಿ: ಕಿರಿಕಿರಿ ಅನುಭವಿಸುತ್ತಿರುವ ಸಾರ್ವಜನಿಕರು

                                 ಚಿಕ್ಕನಾಯಕನಹಳ್ಳಿ,ಜೂ.28 : ಪ್ರತಿ ಬಾರಿ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಹಾಕಲಾಗುತ್ತಿದ್ದ ಪ್ಲೆಕ್ಸ್ಗಳಿಗಿಂತ ಈ ಬಾರಿ 50ಕ್ಕೂ ಹೆಚ್ಚು ಪ್ಲೆಕ್ಸ್ಗಳು ಪಟ್ಟಣದ ನೆಹರು ಸರ್ಕಲ್ ಬಳಿ ರಾರಾಜಿಸುತ್ತಿವೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ  ರಾಜಕೀಯ ಮುಖಂಡರ ಅಭಿಮಾನಿಗಳ ಹೆಸರಿನಲ್ಲಿ, ಕೆಲವು ಸಂಘಗಳ ಹೆಸರಿನಲ್ಲಿ ಶುಭಕೋರುವ ಪ್ಲೆಕ್ಸ್ಗಳು ಇವೆ, ಜೆ.ಡಿ.ಎಸ್ ಶಾಸಕ ಸಿ.ಬಿ.ಸುರೇಶ್ಬಾಬು ಅಭಿಮಾನಿಗಳ ಬಳಗ, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಬಳಗ, ಬಿಜೆಪಿಯ ಮುಖಂಡರು ಹಾಗೂ ಕಾಂಗ್ರೆಸ್ನ ಮುಖಂಡರುಗಳ ಪ್ಲೆಕ್ಸ್ಗಳು ಬಿಎಸ್ಆರ್ ಪಕ್ಷದ ಶ್ರೀರಾಮುಲು ಅಭಿಮಾನಿ ಬಳಗ, ಜಾತ್ರೆಯ ಪ್ರಯುಕ್ತವೆಂಬುದು ನೆಪ ಮಾತ್ರ ಆದರೆ ಇದು ಮುಂಬರುವ ಎಂ.ಎಲ್.ಎ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಈಗಿನಿಂದಲೇ ಹವಾ ಸೃಷ್ಟಿಸುತ್ತಿದ್ದಾರೆ. ಇದು ಒಂದು ರೀತಿಯ ಪ್ರತಿಷ್ಠೆಯ ಪ್ರಶ್ನೆಯಾಗು ಕಾಡುತ್ತಿರುವ ಈ ಸಂದರ್ಭದಲ್ಲಿ ಸಂಕಟ ಅನುಭವಿಸುತ್ತಿರುವವರು ಮಾತ್ರ ನಗರದ ಹೃದಯ ಭಾಗದಲ್ಲಿರುವ ಅಂಗಡಿ ಮುಂಗ್ಗಟ್ಟುಗಳ ಮಾಲೀಕರು.
ಪ್ಲೆಕ್ಸ್ಗಳಿಂದ ಅಂಗಡಿಯವರಿಗೆ ಕಿರಿಕಿರಿಯುಂಟಾಗಿದ್ದು, ಸರ್ಕಲ್ನಲ್ಲಿರುವ ಅಂಗಡಿಗಳು ಪ್ಲೆಕ್ಸ್ಗಳ ಹಾವಳಿಯಿಂದ ಮುಚ್ಚಿದಂತೆ ಕಾಣುತ್ತಿದ್ದು ನೆಹರು ಸರ್ಕಲ್ನ ಅಂಗಡಿಯವರು ಪ್ಲೆಕ್ಸ್ ಹಾಕಿರುವವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. 
ಈ ಹಿಂದೆ ನಡದಿದ್ದ  ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ಲೆಕ್ಸ್ ಕಟ್ಟಲು ಇಂತಿಷ್ಟು ಹಣ ಎಂದು ನಿಗಧಿ ಪಡಿಸಿ, ಅನುಮತಿ ಪಡೆಯಬೇಕೆಂಬ ನಿಯಮವನ್ನು ಮಾಡಲಾಗಿತ್ತು. ಆದರೆ ಈಗ ಹಾಕಲಾಗಿರುವ ಪ್ಲೆಕ್ಸ್ಗಳಲ್ಲಿ 17 ಪ್ಲೆಕ್ಸ್ಗಳಿಗೆ ಮಾತ್ರ ಅನುಮತಿ ಪಡೆಯಲಾಗಿದೆ ಉಳಿದ 35ಕ್ಕೂ ಹೆಚ್ಚಿನ ಫ್ಲಕ್ಸ್ಗಳು ಅನಧಿಕೃತ  ಎಂದು ತಿಳಿದು ಬಂದಿದೆ.

ಜಾತ್ರೆಯ ಪ್ರಯುಕ್ತ ಎರಡು ಪೌರಾಣಿಕ ನಾಟಕಗಳು
ಚಿಕ್ಕನಾಯಕನಹಳ್ಳಿ,ಜೂ.28 : ದುಶ್ಯಾಸನ ಕಥೆ ಅಥವಾ ದ್ರೌಪತಿ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಶ್ರೀ ಹಳೆಯೂರು ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಇದೇ 30ರ ಶನಿವಾರ ರಾತ್ರಿ 7.30ಕ್ಕೆ ಏರ್ಪಡಿಸಲಾಗಿದೆ.
ನಾಟಕವನ್ನು ಚಿಕ್ಕಮ್ಮದೇವಿ ಕಲಾ ಸಂಘದ ವತಿಯಿಂದ ಡಾ.ಅಂಬೇಡ್ಕರ್ ನಗರ ಶ್ರೀ ರಾಮಮಂದಿರದ ಮುಂಭಾಗ ಏರ್ಪಡಿಸಲಾಗಿದೆ.
ಕುರುಕ್ಷೇತ್ರ: ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಶ್ರೀ ಹಳೆಯೂರು ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಇದೇ ಜುಲೈ1ರ ಭಾನುವಾರ ರಾತ್ರಿ 8.30ಕ್ಕೆ ಏರ್ಪಡಿಸಲಾಗಿದೆ. 
ನಾಟಕವನ್ನು ಶ್ರೀ ರೇಣುಕ ಯಲ್ಲಮ್ಮ ಕೃಪಾಪೋಷಿತ ಕಲಾ ಸಂಘದ ವತಿಯಿಂದ ಶ್ರೀ  ಯಲ್ಲಮ್ಮದೇವಿ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.