Monday, October 4, 2010


ರಿಯಲ್ ಎಸ್ಟೇಟ್ ಏಜಂಟರಾಗಿರುವ ಶಿಕ್ಷಕರ ಸಂಘ

ಪದಾಧಿಕಾರಿಗಳು

ಚಿಕ್ಕನಾಯಕನಹಳ್ಳಿ,ಅ.04: ರಾಜ್ಯ ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದು, ಸಂಘದ ಪದಾಧಿಕಾರಿಗಳು ಏಜೆಂಟರ್ಂತೆ ವತರ್ಿಸುತ್ತಿದ್ದಾರೆ ಎಂದು ರಾಜ್ಯ ಸ.ಪ್ರಾ.ಶಾ.ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಆರೋಪಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸ್ವಾಥರ್ಿಗಳು, ಸಂಘಟನೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಎಂದರಲ್ಲದೆ, ತಮ್ಮ ಲಾಭಕ್ಕಾಗಿ ಅಮಾಯಕ ಶಿಕ್ಷಕರ ಗುಂಪುಗಳನ್ನು ಕಟ್ಟಿಕೊಂಡು ಹಲವು ವಿಧದ ಆಮಿಷಗಳನ್ನು ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.

ಸಂಘಟನೆಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹೊರತು ಸಾಮೂಹಿಕವಾಗಿ ಶಿಕ್ಷಕರಿಗೆ ಆಗುವ ಅನುಕೂಲಗಳ ಕಡೆ ಗಮನಕೊಡುತ್ತಿಲ್ಲ, ನಮ್ಮ ರಾಜ್ಯದ ಶಿಕ್ಷಕರಿಗೂ ಪಕ್ಕದ ಆಂಧ್ರ, ತಮಿಳು ನಾಡು ಶಿಕ್ಷಕರುಗಳಿಗೂ ಮೂಲ ವೇತನದಲ್ಲಿ ಭಾರಿ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕರ್ಾರದಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವ ಸಂಘ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರ ಸಂಘದ ಸದಸ್ಯತ್ವಕ್ಕಾಗಿ ನೀಡುವ ಹಣವನ್ನು 20ರೂ ನಿಂದ 50ರೂಗೆ ಏರಿಸಿರುವುದರಿಂದ ಸಂಗ್ರಹವಾಗುವ ಹಣವನ್ನು ರಾಜ್ಯ ಪದಾಧಿಕಾರಿಗಳು ತಮ್ಮ ಖಾಸಗಿ ವಿಲಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಅವರ ದುರ್ಬಲತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಒಂದು ಸಂಘವು ಎಡವಿದರೆ, ಆ ತಪ್ಪನ್ನು ತಿದ್ದಲು ಇನ್ನೊಂದು ಸಂಘದ ಅವಶ್ಯಕತೆ ಇದೆ ಎಂದರು.

ರಾಜ್ಯ ಸ.ಪ್ರಾ.ಶಾ.ಶಿ.ಶಿ ಸಂಘದ ಕಾರ್ಯದಶರ್ಿ ಶಂಕರಮೂತರ್ಿ ಮಾತನಾಡಿ ಗ್ರಾಮ, ಪಟ್ಟಣಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ, ಈ ವಿಷಯವನ್ನು 10 ವರ್ಷಗಳಿಂದಲೂ ಸಕರ್ಾರಕ್ಕೆ ಹೇಳಿದರೂ ಯಾವ ಪ್ರಯೋಜನವು ಆಗುತ್ತಿಲ್ಲ, ಶಿಕ್ಷಕರು ನಿಮಗೆ ನೀವೆ ನಾಯಕರಾಗಿ ನಮ್ಮ ಸಂಘದ ಜೊತೆ ಕೈಜೋಡಿಸಿದರೆ ನಾವು ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತುತ್ತೇವೆ ಎಂದರಲ್ಲದೆ, ನಮ್ಮ ಸಂಘವು ನಿಸ್ವಾರ್ಥ ಸೇವೆ ಮೂಲಕ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಸಮಾರಂಭದಲ್ಲಿ ಜಿ,ಮು,ಶಿ,ಸಂಘದ ಅಧ್ಯಕ್ಷ ಹೆಚ್.ಎನ್ ಗೋಪಿನಾಥ್, ತಾ,ಸ,ಪ್ರಾ,ಶಾ,ಶಿ,ಶಿ, ಸಂಘದ ಅಧ್ಯಕ್ಷ ಬಿ.ಎಲ್.ಬಸವರಾಜು, ಮುಖ್ಯ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷ ಕೆ.ರಾಜಯ್ಯ, ತಾ,ಸ,ಪ್ರಾ,ಶಾ,ಶಿ,ಶಿ ಸಂಘದ ಗೌರವಾಧ್ಯಕ್ಷ ಎಂ ಗಂಗಾಧರಯ್ಯ, ಉಪಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದಶರ್ಿ ಬೆಳಗುಲಿ ವೆಂಕಟೇಶ್, ಎನ್.ಪಿ ಕುಮಾರಸ್ವಾಮಿ, ರುಕ್ಮಾಂಗದ, ಜಿ.ತಿಮ್ಮಯ್ಯ, ಜಿ.ರಂಗಯ್ಯ, ಶಿವಕುಮಾರ್, ಕೆಂಬಾಳ್ರಮೇಶ್, ಸಿ.ಜಿ.ಶಂಕರ್, ಚಿಕ್ಕಣ್ಣ ಉಪಸ್ಥಿತರಿದ್ದರು.

ಅ.5ಮತ್ತು 6ರಂದು ಸಮುದಾಯದತ್ತ ಶಾಲೆ

ಚಿಕ್ಕನಾಯಕನಹಳ್ಳಿ,ಅ.04: ತಾಲೂಕು ಸಕರ್ಾರಿ ಶಾಲೆಗಳ ಮೊದಲನೇ ಸುತ್ತಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇದೇ 5 ಮತ್ತು 6ರಂದು ನಡೆಯಲಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ಪ್ರೌಡಶಾಲೆ ಶಿಕ್ಷಕರು, ಹಾಗೂ ಪ್ರೌಡಶಾಲೆ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೇಲ್ವಿಚಾರಕರಾಗಿ ಭಾಗವಹಿಸಲಿದ್ದು ಅಂದು ನಿಯಮಾನುಸಾರ ವೇಳಾ ಪಟ್ಟಿಗನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.