Tuesday, March 22, 2016ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಚಿಕ್ಕನಾಯಕನಹಳ್ಳಿ,ಮಾ.22 : ದೇವರಿಗೆ ಬಲಿ ಬದಲು ಬಂಢಾರ ಅಪರ್ಿಸಿ, ಕುಲ ಕಸುಬು, ಸಂಪ್ರದಾಯಿಗಳನ್ನು ಮೈಗೂಡಿಸಿಕೊಳ್ಳಿ ಎಂದು ದೇವದುರ್ಗ ಶಾಖಾ ಮಠದ ತಿಂಥಣಿ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ, ಮಾಕುವಳ್ಳಿ ಪಾಳ್ಯದ ಗೊಲ್ಲರಹಟ್ಟಿಯ ಏಳು ಬೆಡಗಿನ ಒಡೆಯ ಕುರುಬರ ಕುಲದೈವ ಶ್ರೀಗುರು ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಾಲು ಮತ ಸಮಾಜ ಹಾಲಿನಷ್ಟೇ ಪವಿತ್ರ. ಬೀರಪ್ಪನ ಸೇವೆಯ ಭಂಡಾರ, ಕಬ್ಬಿಣದ ಹಲಗಿನ ಸೇವೆ, ಗುಂಡಿನ ಸೇವೆ, ತಲೆಯ ಮೇಲೆ ಕಾಯಿ ಹೊಡೆಯುವ ಸೇವೆಯ ಮಹತ್ವವನ್ನು  ಮೊದಲು ಅರಿಯಿರಿ ಎಂದರು.
  ಕನಕಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜಕ್ಕೆ 5ಸಾವಿರ ವರ್ಷಗಳ ಇತಿಹಾಸವಿದೆ. ಹಾಲುಮತಸ್ಥರು ಜಾನಪದ ಶೈಲಿಯಾದ ಡೊಳ್ಳು ಸಂಪ್ರದಾಯ ಹಾಗೂ ಕಂಬಳಿ ನೇಯ್ಗೆಯನ್ನು ಕುಲ ಸಂಸ್ಕೃತಿಯ ಉಳಿವಿನ ಭಾಗವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಕುಲಧೈವ ಬೀರಲಿಂಗೇಶ್ವ ನಮ್ಮಲ್ಲಿರುವ ದ್ವೇಷ, ಅಸೂಯೆ, ಸೇಡಿನ ಮನೋಭಾವಗಳನ್ನು ಬಲಿಯಾಗಿ ಅಪರ್ಿಸಿ, ಭಕ್ತಿಯ ಮೂಲಕ ಪರೋಪಕಾರದ ಮೌಲ್ಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಅದ್ದೂರಿ ಹಬ್ಬ ಆಚರಿಸುವ ಬದಲು ಊರಿನಲ್ಲಿ ಸೋರುವ ಶಾಲೆಯ ಸೂರುಗಳನ್ನು ಸರಿಪಡಿಸಲು ಹಣ ವ್ದಯ ಮಾಡಿ ಎಂದರು. ಬಡ ಕುಟುಂಬಗಳ ಹಾಗೂ ಶಿಕ್ಷಣದ ಅಭಿವೃದ್ಧಿಗೆ ಶಾಲೆ ಹಾಗೂ ವಸತಿಗಳನ್ನು ಸ್ಥಾಪಿಸಿ ಶಿಕ್ಷಣದ ಪ್ರಗತಿಗೆ ಒತ್ತು ನೀಡಿದರೆ ಸಮಾಜ ಮೇಲೆ ಬರುತ್ತದೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಕುರುಬ ಸಮಾಜವು ಹಿಂದುಳಿದ ವರ್ಗಗಳನ್ನು ಒಟ್ಟಿಗೆ ಕರೆದೊಯ್ಯುವ ದೊಡ್ಡ ಸಮಾಜವಾಗಿದ್ದು ನಮ್ಮ ಆಚಾರ ವಿಚಾರಗಳನ್ನು ನಾವೂ ಎಂದು ಬಿಡಬಾರದು ಎಂದರು.
 ತಾಲ್ಲೂಕಿನ 22 ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಸದನದಲ್ಲಿ ಚಚರ್ೆಯಾಗಿದ್ದು ಈ ವರ್ಷವೇ ನೀರು ಹರಿಸುವ ಇಂಗಿತವನ್ನು ಸಕರ್ಾರ ಒಪ್ಪಿಕೊಂಡಿದ್ದು 94 ಕೋಟಿ ವೆಚ್ಚದ ಗುರುತ್ವಾಕರ್ಷಣೆ ನಾಲಾ ಕಾಲುವೆ ಮೂಲಕ ಬೋರನ ಕಣಿವೆ ಭಾಗಕ್ಕೂ ನದಿ ನೀರು ಹರಿಸುವ ಹೇಮಾವತಿ ನಾಲಾ ಕಾಮಗಾರಿ ವಿಚಾರ ಸೋಮವಾರ  ಸದನದಲ್ಲಿ ಚಚರ್ೆಯಾಗಿದೆ ಎಂದರು.
 ಶೆಟ್ಟಿಕೆರೆ ಮೂಲಕ ಹಾದು ಹೋಗಿರುವ ತಿಪಟೂರು-ಚಿಕ್ಕನಾಯಕನಹಳ್ಳಿ ರಸ್ತೆಗೆ ರೂ.34 ಕೋಟಿ ಹಣ ಬಿಡುಗಡೆಯಾಗಿದೆ. 5 ಮೀಟರ್ ರಸ್ತೆಯನ್ನು 7 ಮೀಟರ್ಗೆ ವಿಸ್ತರಿಸುವ ತೀಮರ್ಾನ ಕೈಗೊಳ್ಳಲಾಗಿದೆ, ಇದೇ ತಿಂಗಳ 28ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಏಪ್ರಿಲ್ನಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು. 
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಜಾತ್ರೆಗಳ ಮೂಲಕ ಸಮಾಜದ ಎಲ್ಲರೂ ಒಗ್ಗೂಡಲು ಸಾಧ್ಯ ಎಂದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯರುಗಳಾದ ಕಲ್ಲೇಶ್, ಮೈಲಾರಪ್ಪ, ಜಿ.ನಾರಾಯಣ್, ತಾ.ಪಂ. ಸದಸ್ಯರಾದ ಜಯಮ್ಮ, ಗ್ರಾ.ಪಂ. ಅಧ್ಯಕ್ಷೆ ನಾಗಮಣಿ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಜಗದೀಶ್ ಒಡೆಯರ್, ಸೀಮೆಎಣ್ಣೆ ಕೃಷ್ಣಯ್ಯ, ಶರಣಪ್ಪಸ್ವಾಮೀಜಿ, ಜಯರಾಮಯ್ಯ, ಬೀರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ನಿಂಗರಾಜು, ಬಾನು ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು. 
ಸಮಾರಂಭದಲ್ಲಿ ಹಾಲು ಮತ ಸಮಾಜದ ಇತಿಹಾಸ ಪುರುಷರ ಕಥೆಯನ್ನು ತಲ್ಲೂರು ಗದಗದ ಹರಿಕಥಾ ವಿದ್ವಾಂಸ ಬಸವರಾಜು ಜೆ. ಬಂಟನೂರು ಇವರಿಂದ ಸುಗಮ ಸಂಗೀತ, ಗೊರಪ್ಪನವರಿಂದ ಬೀರಲಿಂಗೇಶ್ವರ ಬಹುಪರಾಕ್ ಉಗೇ ಉಗೇ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು. 


ಸಾಶಿಮ ನೆನಪು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮಾ.22 : ಕನ್ನಡ ಸಾಹಿತ್ಯದ ವಿಶಿಷ್ಟ ಪ್ರತಿಭೆ ಸಾ.ಶಿ.ಮರುಳಯ್ಯ ಅವರನ್ನು ತಾಲ್ಲೂಕಿನ ಸಾಹಿತ್ಯ ಲೋಕ ಸರಿಯಾಗಿ ನಡೆಸಿಕೊಳ್ಳದಿರುವುದು ವಿಷಾದದ ಸಂಗತಿ ಎಂದು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. 
 ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ವಿಭಾಗ, ನವೋದಯ ಹಿರಿಯ ವಿದ್ಯಾಥರ್ಿ ಸಂಘ ಹಾಗೂ ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದ ವತಿಯಿಂದ ಮಂಗಳವಾರ ನಡೆದ ಸಾ.ಶಿ.ಮ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಭಾಷೆ, ನೆಲದ ಮೌಲ್ಯಗಳು ಕುಸಿಯುತ್ತಿವೆ. ನಾಡು ನುಡಿಯ ಬಗ್ಗೆ ಯುವಸಮುದಾಯ ಜಾಗೃತವಾಗಬೇಕಿದೆ ಎಂದ ಅವರು ಸಾ.ಶಿ.ಮ ಅವರಲ್ಲಿ ಅದ್ಭುತವಾದ ಭಾಷಾ ಸಂಪತ್ತು ಅಡಕವಾಗಿದ್ದ ಕಾರಣಕ್ಕಾಗಿಯೇ ಈ ನೆಲದಲ್ಲಿ ಭಾಷೆಗೆ ಸಂಬಂಧಿಸಿದ ಅಪಾರವಾದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಯಿತು. ತಮ್ಮ ಕೊನಯುಸಿರೆಳೆಯುವ ಸಂದರ್ಭದ ತನಕವೂ ಅವರು ನಿರಂತರ ಅಧ್ಯಯನಶೀಲರಾಗಿ ಉಳಿದಿದ್ದರು.  ಅಂತಹವರ ವ್ಯಕ್ತಿತ್ವ ನಮಗೆ ದಾರಿದೀಪವಾಗಬೇಕು ಎಂದರು.
     ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿದರ್ೇಶಕರಾದ ಬಿ.ಎಸ್.ಲಿಂಗದೇವರು ಮಾತನಾಡಿ, ಸಾ.ಶಿ.ಮ ಬದುಕು ನಮ್ಮಂತವರಿಗೆ  ಆದರ್ಶ.  ಇಂದು ವಿದ್ಯಾಥರ್ಿಗಳಲ್ಲಿ ಬೌದ್ಧಿಕತೆಗಿಂತ ಯಾತ್ರಿಕತೆಯೇ ಹೆಚ್ಚಾಗಿದೆ, ಪದವಿ ಕೇವಲ ಉದ್ಯೋಗಕ್ಕೆ ಮೀಸಲಾಗಬಾರದು ಎಂದರು.
   ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮಾತನಾಡಿ, ತಾಲ್ಲೂಕಿನ ಶ್ರೇಷ್ಠ ಸಾಹಿತಿಗಳಾದ ತೀ.ನಂ.ಶ್ರೀ ಹಾಗೂ ಸಾಶಿಮ ಅವರನ್ನು  ಪ್ರತಿಮೆಗಳನ್ನಾಗಿಸದೇ ಅವರ ಸಾಹಿತ್ಯದ ಗಂಭೀರ ಅಧ್ಯಯನ ಆಗಬೇಕಿದೆ ಎಂದರು.
      ಸಮಾರಂಭದಲ್ಲಿ ಸಾ.ಶಿ.ಮ ಕುರಿತು ಗೋವಿಂದರಾಜು ಮಾತನಾಡಿದರು. ಪ್ರಿನ್ಸಿಪಾಲ್ ಪ್ರೊ.ಎಸ್.ಎಲ್. ಶಿವಕುಮಾರಸ್ವಾಮಿ ಹಾಜರಿದ್ದರು. ವಿದ್ಯಾಥರ್ಿನಿ ರೋಜಾ ನಿರೂಪಿಸಿ, ಬಸವರಾಜು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ರವಿಕುಮಾರ್ ವಂದಿಸಿದರು.

ವಿದ್ಯಾಥರ್ಿ ಸಂಗಾತಿ ಪುಸ್ತಕ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮಾ.22 : ಪುಸ್ತಕಗಳು ಚರಿತ್ರೆ ಹಾಗೂ ಸರ್ವಕಾಲೀನ ಸತ್ಯವನ್ನು ಕಟ್ಟಿಕೊಡುವಲ್ಲಿ ಮಹತ್ತರವಾದ ಪಾತ್ರ ವಯಿಸುತ್ತವೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಸವಲಿಂಗಪ್ಪ ತಿಳಿಸಿದರು.
 ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಕನ್ನಡ ಪುಸ್ತಕ ಪ್ರಾಧಿಕಾರದ   ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದ ವತಿಯಿಂದ ಏಪರ್ಾಡಾಗಿದ್ದ ವಿದ್ಯಾಥರ್ಿ ಸಂಗಾತಿ ಪುಸ್ತಕ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ,  ಯುವಜನತೆ ಚಂಚಲ ಮನಸ್ಥಿತಿಯಿಂದ ಹೊರಬಂದು ಸಮಚಿತ್ತ ರೂಡಿಸಿಕೊಳ್ಳು ಪುಸ್ತಕಗಳು ನೆರವಾಗುತ್ತವೆ ಎಂದರು. 
ಪ್ರೋ ಶ್ರೀನಿವಾಸಪ್ಪ ಮಾತನಾಡಿ, ಓದಿನ ಅಭಿರುಚಿ ಜ್ಞಾನ, ವ್ಯಕ್ತಿತ್ವ ವಿಕಾಸನ ಹಾಗೂ ಸಾಮರಸ್ಯದ ಬದುಕಿಗೆ ಸಹಕಾರಿಯಾಗುತ್ತದೆ, ಮೌಲ್ಯಯುತ ಓದು ಜಗತ್ತಿನ ದಿವ್ಯ ದರ್ಶನ ಮಾಡಿಸುತ್ತದೆ ಎಂದರು.
  ಪ್ರಿನ್ಸಿಪಾಲ್ ಪ್ರೊ.ಸಿ.ಜಿ.ಸುರೇಶ್ ಮಾತನಾಡಿ, ಪುಸ್ತಕ ಪ್ರೇಮಿ ವಿದ್ಯಾಥರ್ಿ ಬಳಗದಡಿಯಲ್ಲಿ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳು ಹೆಚ್ಚು ಭಾಗವಯಿಸುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. 
 ಉಪನ್ಯಾಸಕರುಗಳಾದ ಚಂದ್ರಶೇಖರ್, ಪ್ರಸನ್ನಕುಮಾರ್, ಶಿವರಾಮಯ್ಯ, ಶೈಲೇದ್ರ ಕುಮಾರ್, ದರ್ಶನ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಆರ್. ಶೇಖರ್,ಪ್ರಾದ್ಯಾಪಕರಾದ ಕೃಷ್ಣಮೂತರ್ಿ. ಎನ್., ಕೃಷ್ಣನಾಯಕ್, ಗೋವಿಂದ ನಾಯ್ಕ, ಮಹದೇವಯ್ಯರವರು ಹಾಜರಿದ್ದರು.

ಆಟೋಗೆ ಲಾರಿ ಡಿಕ್ಕಿ : ಪ್ರಾಣಾಪಾಯವಿಲ್ಲ
ಚಿಕ್ಕನಾಯಕಹಳ್ಳಿ.ಮಾ.22 : ವೇಗವಾಗಿ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಎದುರು ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಬರುತ್ತಿದ್ದ ಆಟೋ, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ, ಆಟೋ, ಕಾರು ಮೂರು ವಾಹನಗಳು ಜಖಂ ಗೊಂಡಿದ್ದು ಯಾವುದೇ ಪ್ರಾಣಪಾಯವಾಗಿರದ ಘಟನೆ ಚಿ.ನಾ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.,
ಪಟ್ಟಣದ ಹೊರವಲಯದ ಕಾಡೇನಹಳ್ಳಿ ತಿರುವಿನಲ್ಲಿ ಮಂಗಳವಾರ ಮದ್ಯಾಹ್ನ 2ಗಂಟೆ ಸುಮಾರಿನಲ್ಲಿ ಕಿಬ್ಬನಹಳ್ಳಿ ಕ್ರಾಸ್ ಕಡೆಯಿಂದ ಚಿ.ನಾ.ಹಳ್ಳಿ ಮಾರ್ಗವಾಗಿ ಬರುತ್ತಿದ್ದ ಕ್ಯಾಂಟರ್ಗೆ ಕಾರೊಂದು ಡಿಕ್ಕಿ ಹೊಡೆದಿದ್ದು ಲಾರಿಯ ಹಿಂಬದಿ ಬರುತ್ತಿದ್ದ ಆಟೋ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ, ಆಟೋ ಹಳ್ಳಕ್ಕೆ ಬಿದ್ದಿದ್ದು ಯಾವುದೇ ಪ್ರಾಣಪಾಯ ಸಂಬವಿಸಿಲ್ಲ.
ಕಾಡೇನಹಳ್ಳಿ ಬಳಿಯ ತಿರುವಿನಲ್ಲಿ ಯಾವಾಗಲೂ ಅಪಘಾತಗಳು ಸಂಬವಿಸುತ್ತಲೇ ಇದ್ದು ಅನೇಕ ಬಾರಿ ಅಪಘಾತಗಳು ನಡೆದಾಗ ಸಾವುಗಳು ಸಂಬವಿಸುತ್ತಿವೆ, ಈ ಭಾಗದಲ್ಲಿ ತಿರುವಿನ ಸೂಚನ ಫಲಕ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿರಾಜ್ಕುಮಾರ್ರವರು ತೀರ್ಥಪುರ ತಾ.ಪಂ.ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ತೀರ್ಥಪುರ ಕೃಷಿ ಸಹಕಾರ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು. ಸ್ಥಳೀಯ ಬ್ಯಾಂಕ್ನ ಅಧ್ಯಕ್ಷ ರುದ್ರಮುನಿ ಮತ್ತು ನಿದರ್ೇಶಕರು ಉಪಸ್ಥಿತರಿದ್ದರು.