Sunday, October 31, 2010


ಶಾಸಕರಿಲ್ಲದೆ ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ: ತಾ.ಬಿ.ಜೆ.ಪಿ.ಕಾರ್ಯದಶರ್ಿಯ ಆರೋಪ
ಚಿಕ್ಕನಾಯಕನಹಳ್ಳಿ,ಅ.31: ಆಪರೇಷನ್ ಕಮಲದಿಂದ ಜೆ.ಡಿ.ಎಸ್ ಪಕ್ಷವು ಮುಳುಗುವ ಸಂಭವವಿದೆಯೆಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಾಲೂಕಿನ ಶಾಸಕ ಸಿ.ಬಿ.ಸುರೇಶ್ಬಾಬುರವರನ್ನು ತಾಲೂಕಿನ ಜನತೆಗೆ ಸುಳಿವೂ ಸಿಗದಂತೆ ತಮ್ಮ ಜೊತೆಯಲ್ಲಿ ಇರಿಸಿಕೊಂಡಿರುವುದರಿಂದ ತಾಲೂಕಿನಾದ್ಯಂತ ಕಳ್ಳತನ, ಅಕ್ರಮ ಕಾಮಗಾರಿ ಮತ್ತು ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಆರೋಪಿಸಿದ್ದಾರೆ.ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ತಾಲೂಕಿನ ಶಾಸಕರು 45 ದಿನಗಳಿಂದ ಯಾವುದೇ ಸಭೆ ಸಮಾರಂಭಗಳಿಗೆ ಭಾಗವಹಿಸದೇ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಾರ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ, ಅಲ್ಲದೆ ತಾಲೂಕಿನಲ್ಲಿ ನಡೆಯುವ ಜನಸ್ಪಂದನ ಸಭೆಗೆ ಅಧಿಕಾರಿಗಳು ಮಾತ್ರ ಆಗಮಿಸಿ ಮನವಿ ಪತ್ರ ಪಡೆದು ಸುಮ್ಮನಾಗುತ್ತಿದ್ದಾರೆ ಇದನ್ನು ಕೇಳುವವರೆ ಇಲ್ಲದಂತಾಗಿದ್ದು ತಾಲೂಕಿನ ಅಭಿವೃದ್ದಿಗಾಗಿ ಬರುವ ಸಕರ್ಾರದ ಹಲವು ಯೋಜನೆ ಅನುಷ್ಟಾನಗಳನ್ನು ನೆರವೇರಿಸಲು ಹಿಂದೆ ಬಿದ್ದಿರುವುದರಿಂದ ತಾಲೂಕಿಗೆ ಬರುವ ಯೋಜನೆಗಳೆಲ್ಲ ಮರೀಚಿಕೆಯಾಗುತ್ತಿವೆ. ಪುರಸಭೆಯಲ್ಲಿ ಶಾಸಕರ ಮಾತೇ ವೇದ ವಾಕ್ಯವಾಗಿದ್ದು ಆಡಳಿತ ಪಕ್ಷದಲ್ಲಿ ಬಹುಮತವಿರುವುದರಿಂದ ಕೆಲವೇ ಜನರ ತೃಪ್ತಿಗಾಗಿ 6ತಿಂಗಳಿಗೊಮ್ಮೆ ಪುರಸಭಾಧ್ಯಕ್ಷರನ್ನು ಬದಲಾಯಿಸುತ್ತಿರುವುದರಿಂದ ಅಧ್ಯಕ್ಷಗಿರಿ ಪಡೆಯುತ್ತಿರುವವರಿಗೆ ಆಡಳಿತದ ಅನುಭವವಾಗದೇ ಪುರಸಭಾ ವ್ಯಾಪ್ತಿಯ ಕಾರ್ಯಗಳೆಲ್ಲ ಮೂಲೆ ಗುಂಪಾಗಿದೆ ಎಂದು ಆರೋಪಿಸಿದ್ದಾರಲ್ಲದೆ, ಪುರಸಭೆಗೆ ಕಳೆದ ಸಾಲಿನಲ್ಲಿ ಒಂದು ಕೋಟಿ ಐವತ್ತು ಲಕ್ಷರೂಗಳು ಸಕರ್ಾರದಿಂದ ಅನುದಾನ ಬಿಡುಗಡೆಯಾದರೂ ನಿರ್ವಹಿಸಿರುವ ಎಲ್ಲಾ ಕಾರ್ಯಗಳು ಕಳಪೆಯಿಂದ ಕೂಡಿದ್ದು ಇವನ್ನೆಲ್ಲ ಗಮನಿಸಲು ಶಾಸಕರೇ ತಾಲೂಕಿನಲ್ಲಿ ಕಾಣಸಿಗುತ್ತಿಲ್ಲ ಕೂಡಲೇ ಪುರಸಭಾ ವ್ಯಾಪ್ತಿಯಲ್ಲಿನ ಕಾಮಗಾರಿಗಳು ತನೆಖೆಯಾಗಬೇಕು ಎಂದ ಅವರು ತಾಲೂಕಿನಾದ್ಯಂತ ಈ ರೀತಿಯ ಅವ್ಯವಹಾರಗಳು ನಡೆದರು ಬಾರದ ಶಾಸಕರಿಗಾಗಿ ನಾವು ಹೋರಾಟ ಮಾಡಬೇಕ ಎಂದು ಪ್ರಶ್ನಿಸಿದ್ದಾರೆ ಕೂಡಲೇ ಸಕರ್ಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಅಜಾಗರೂಕತೆ, ಸಭೆ ಸಮಾರಂಭಗಳಿಗೆ ಭಾಗವಹಿಸದೇ ನಿರ್ಲಕ್ಷತೆ ತೋರುತ್ತಿರುವುದು, ಅಭಿವೃದ್ದಿ ಕಾಮಗಾರಿಗಳಾಗದೆ ನಿಂತುಹೋಗಿರುವುದು ಸರಿಯಾಗದಿದ್ದರೆ ಬೇರೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಗೋಷ್ಟಿಯಲ್ಲಿ ಬಿ.ಜೆ.ಪಿ ಜಿಲ್ಲಾ ಯುವ ಮೋಚರ್ಾ ಕಾರ್ಯದಶರ್ಿ ಪ್ರವೀಣ್, ನಗರಾಧ್ಯಕ್ಷ ಚೇತನ್ಕುಮಾರ್, ಪುರಸಭಾ ನಾಮಿನಿ ಸದಸ್ಯ ರವಿಕುಮಾರ್ ಸುಂದರ್ರಾಜ್, ಮರುಳಯ್ಯ, ಉಪಸ್ಥಿತರಿದ್ದರು.